ಪಲ್ಲವಿ : ಕದ್ದ ಬೆಣ್ಣೆ ಮೈಗೆ ಒಳಿತಲ್ಲ
ನಂದನಂದನ ಗೋಪಬಾಲ
ಕಪಿಲಗೋವಿನ – ಮನೆಯ ಬೆಣ್ಣೆ
ಮನಕೆ ಚಂದವು ನಂದಬಾಲ

ಚರಣ :  ಬೇರೆ ಮನೆಯ – ಬೆರಕೆ ಬೆಣ್ಣೆ
ಮುಟ್ಟದೇ ಇರು – ಕಂದಾ
ಒಡೆದ ಮಡಕೆಯಲ್ಲಿಟ್ಟ ಬೆಣ್ಣೆ
ನಾಣ್ಯವಲ್ಲ ಮುದ್ದು ಕೃಷ್ಣಾ

ಇಂದ್ರದೇವನು ಕೊಟ್ಟ ಮಡಕೆಲಿ
ಕಡೆದ ಬೆಣ್ಣೆ ಎಲ್ಲಾ ನಿನಗೆ
ನಂದನಂದನ ಮನೆಯ ಬೆಣ್ಣೆಯು
ತಿಂದೆಯೆಂದರೆ ಜಯವು ನಿನ್ನದೆ