ಅಣ್ಣನ ಮನೆಯಾ ಬಣ್ಣದ ಜಗುಲಿ ಮೆನೆ
ತಂಗಿ ಸುಬದ್ರೀ ಕುಳತದೆ
ತಂಗಿ ಸುಬದ್ರೀ ಕುಳುವದ್ನು ಅಣದಿರು
ಮಾಳೂಗಿ ಹೆರುಗೆ ಬರೂವಾರೆ
“ಎಂದೂ ಬರ‍್ದಿದ್ ತಂಗೀ ಇಂದೆಕೆ ಬಂದೀಯೆ
ರಾಜ್ಯ ಬೇಕಾರೆ ಬರಕಣೆ”

“ನಾಆಳೂ ರಾಜ್ಯವ ನೀನೇ ಆಳಣ್ಣಯ್ಯಾ
ನ ಬಂದೆ ನಿನ್ನ ಮೊಗೋಳೀಗೆ”
“ಹೆಣ್ಣಾ ಕೇಳ್ವಳು ನನ್ನೇನಾ ಕೇಳೂತೆ
ಹೆಣ್ಣೀನಾ ತಾಯೀ ಒಳಗೂದೆ | ಸುಬದ್ರಿ
ಹೋಗದ್ರಾ ಮನಸಾ ತೆಳದ್ ಬಾರೆ”
ಅಟ್ಟಂಬಾ ಮಾತಾ ಕೇಳಾಳೆ ಸುಬದ್ರಿ
ಮಾಳೂಗಿ ಒಳಗೇ ನೆಡದಾಳೆ | ಸುಬದ್ರಿ
ಲಾಗೊಂದು ಮಾತಾ ನುಡದಾಳೆ

“ಮಾಳೂಗಿ ಒಳ್ಗೆ ರಾಜಕ್ಕಿ ತಳ್ಸು ಅತ್ತೀಗೆ
ರಾಜಕ್ಕೀಗೊಮ್ಮೆ ನೆರವಪ್ಪೆ| ಅತ್ತೀಗೆ
ನಿನ್ ಕೂಸೂ ಕೊಡ್ವೆಯಾ ಕೊಮರಾಗೆ ”
ರಾಜಕ್ಕಿ ತಳ್ಸೂಕೆ ದಾದಿಯರ್ ತನ್ಗುಂಟು
ನಿನ್ನಾಧಿರಾತನದಲ್ಲಿ ಮನಗೋಳು”

“ಮಾಳೂಗೀ ಒಳ್ಗೆ ಪುಟ್ಟಕ್ಕಿ ತಳ್ಸು ಅತ್ತಿಗೆ
ಪುಟ್ಟಕ್ಕಿಗೊಮ್ಮೆ ನೆರವಪ್ಪೆ| ಅತ್ತೀಗೆ
ನಿನ್ ಕೂಸು ಕೊಡ್ವೆಯಾ ಕೊಮರಾಗೆ”
ಪುಟ್ಟಕ್ಕಿ ತಳ್ಸೂಕೆ ದಾದಿಯರ್ ತನ್ಗುಂಟು
ನಿನ್ನ ಆಯ್ವರ್ತನದಲ್ಲಿ ಮನಗೋಗು”

ಅಟ್ಟೊಂದು ಮಾತಾ ಕೇಳಾಳೆ ಸುಬದ್ರಿ
ಸಿಟ್ಟೀನಿಂದ ಮನಗೇ ಬರೋವಾಳೆ | ಸುಬದ್ರಿ
ರಾಜಂಗ್ಳ ಮಟ್ಟಾ ಇಳೋವಾಳೆ | ಸುಬದ್ರಿ
ಸೋಡಿಗೆದ್ದಿ ಗಾಗೇ ನೆಡದಾಳೆ
“ಸೋಡಿಗೆದ್ದೀಲಿ ಸೋಡಿಡ್ಯಾಡು ಅಬ್ಮನ್ನು
ಕೇಳೀಬಾರೊಂದು ಹೊಸ್ ಸುದ್ಧಿ | ನಿನ್ಮಾವಾ
ದೀರಾತನ್ದಲ್ಲೀ ಇರೋವಾನೋ |

“ಹಾಣೀ ಗೆದ್ದೀಲಿ ಹಾಣ್ಯಾಡು ಅಬ್ಮನ್ನು
ಕೇಳೀ ಬಾರೊಂದು ಹೊಸಸುದ್ಧಿ | ನಿನ್ನತ್ತೇ
ಗರ್ವಾತನದಲ್ಲಿ ಇರೋವಾಳೋ. ”
“ಮಾವನ ಮನಸಾ ಈಗೋಗಿ ತೆಳಗೂವೆ
ಈಗವನ ಮಗಳಾ ತರಸೂವೆ
ಈಗವ್ನ ಮಗ್ಳಾ ತಾರದೆ ಇದ್ದಾರೆ
ಅಚ್ಚ ಪಾಂಡವರಾ ಮಗನಲ್ಲ
ಅತ್ತೆಯ ಮನಸಾ ಈಗೋಗಿ ತೆಳಗೂವೆ.

ಈಗವ್ನ ಮಗಳಾ ತರಸೂವೆ
ಈಗವ್ಳ ಮಗ್ಳಾ ತಾರದೆ ಇದ್ದಾರೆ
ಅಚ್ಚ ಪಾಂಡವ್ರಾ ಮಗನಲ್ಲ
ಬೀರಿದ್ದ ಚೆಂಡು ಹೆಕ್ಕಿವಂದನೆ ಮಾಡಿ
ದೂರಿದ್ದ ಚೆಂಡು ತಳನಲ್ಲ| ಆಗಲೆಂದು
ಬೋರೀನೇ ಆನೀ ನೆಗೆದಾನೆ.
ಬೋರೀನೆ ಅನೀನೆಗ್ದತ್ತಿ ಅಜ್ಮನ್ನು

ತನ್ನಾ ಅರಮನೆಗೇ ನೆಡದಾನೆ. | ಅಬ್ನನ್ನು
ಹೋಗಿ ಬಾಗಲ್ಲೇ ನಿಲೋವಾನೆ | ಅಬ್ನನ್ನು
ಬೋರೀನೇ ಅನೀ ಇಳದಾನೇ | ಅಬ್ನನ್ನು
ಮಾಳೂಗೀ ಒಳಗೇ ನೆಡದಾನೆ | ಅಬ್ನನ್ನು
ತೂಗು ಮಂಚಲ್ಲೇ ಕುಳತಾನೆ | ಅಬ್ನನ್ನು
ತನ್ನಾ ತಾಯವ್ವೀ ದೆನಿದೂರೇ
ತನ್ನಾ ತಾಯವ್ವಿ ದೆನಿದೂರ‍್ವದ್ನು ಸುಬದ್ರಿ

ಮಗ್ನಾ ಒಡ್ನೋಗೇ ನಿಲೋವಾಳೆ | ಸುಬದ್ರಿ
ಏನು ಕಾರಣಲೆ ಕರೆದಿಯೋ.
“ಕರ‍್ದಂಬ್ ಕಾರ್ಯವಿಲ್ಲ ಕಿರಿದುಂಬೆಸರವಿಲ್ಲ
ಹಾಲ್ಗಂಜಗಲೂಟಕೆ ಅನುಮಾಡು ”
ಅಟ್ಟಂಬ ಮಾತಾ ಕೇಳಾಳೆ ಸುಬದ್ರಿ
ಮಾಳೂಗಿ ಒಳಗೆ ನೆಡದಾಳೆ |

ಅಟ್ಟದ ಮೆನನಾ ಜೀರಗ್ ಸಣ್ಣಕ್ಕಿ
ಅನ್ನಾ ಮೆಗ್ರಕೆ ಅನುಮಾಡಿ.
ಅಟ್ಟದ ಮೆನನಾ ಜೀರಗ ಸಣ್ಣಕ್ಕಿ
ಹಾಲಾ ಪಾಯ್ಸಕೆ ಅನುಮಾಡಿ
ಬೇಲೀ ಮೆನನಾ ದಾರೀ ಹಿರೇಕಾಯಿ
ದಾರಿಯಾ ಹೆರದೇ ಮೆಣಸಿಕ್ಕಿ
ಹಿತ್ನಾ ಕಣ್ನಾ ಬಟ್ಟು ಕೆಂಬರಗೀಯಾ

ಬೊಟ್ಟೆಣ್ಣಿ ಕಿಟ್ಟೀ ಮೆಣಸಿಟ್ಟೆ
ಎಲಮರ ಒಂಬತ್ ಬಗೆ ಕಾಯ್ ಮರ್ ತೊಂಬತ್ ಬಗೆ
ನೂರೊಂದು ಬಗೆಯ ಅಡಗೀಯೇ
ನೂರೊಂದು ಬಗೆಯ ಅಡೀಗಿಯಾ ಕಜ್ಜಾಯಾ
ಅನುಮಾಡಿದಳೊಂದು ಗಳಿಗ್ಯಲೀ | ಸುಬದ್ರಿ
ಸರ್ಣಣ ಗಿಂಡ್ಯಲ ಉದಕವ | ತಡಕಂಡಿ

ಮಾಳಗ್ಗಿಂದೆರಗೆ ಬರೋವಾಳೇ ಸುಬದ್ರಿ
ಮಗನಾ ಒಡ್ನೋಗೀ ನಿಲೋವಾಳೆ | ಸುಬದ್ರಿ
ಮಗ್ಗೊಂದ್ ಚಂಬುದಕಾ ಕೊಡೋವಾಳೆ
ತಾಯ್ ಕೊಟ್ಟುದಕವಾ ತಟ್ಟಾನೆ ತಡ್ದಾನೆ
ಕಾಲಾ ಸಿರಿಮೊಕವಾ ತೊಳದಾನೆ | ಅಬ್ಮನ್ನು

ಮಾಳೂಗೀ ಒಳಗೆ ನೆಡದಾನೆ
ಮಾಳೂಗೀ ಒಳಗೆ ನೆಡ್ವದ್ನು ಸುಬದ್ರಿ
ಹೊನ್ನಾ ಮಣೆಯೊಂದಾ ಮಡಗಾಳೆ
ಕಿರಳಾ ಬಾಳೆಲಿಯಾ ತೊಳದಾಸಿ ಸುಬದ್ರಿ
ಅನ್ನಾ ಮೆಗ್ರವಾ ಬಡಸಾಳೆ | ಸುಬದ್ರಿ

ತುಪ್ಪಾ ಸಕ್ಕರೆಯಾ ಎರವಾಳೆ
ತುಪ್ಪಾ ಸಕ್ಕರೆಯಾ ಎರದಿ ತಿರ್ಗೊರೊಟ್ಗೆ
ಉಂಡೆದ್ದ ನೊಂದು ಗಳಗ್ಯಲ್ಲೇ | ಅಬ್ನನ್ನು
ಪನ್ನೀರಲಿ ಮೊಕವಾ ತೊಳದಾನೆ |

ತೂಗು ಮಂಚಲ್ಲೇ ಕುಳೋವಾನೆ
ತೂಗು ಮಂಚಲ್ಲೇ ಕಳುವುದ್ನು ತಾಯವ್ವಿ
ಎಂಜಲು ಮಯ್ಲಗಿಯಾ ತೊಳದಾಳೆ | ಸುಬದ್ರಿ
ಮಾಳೂಗಿ ಒಳಗೆ ನೆಡದಾಳೆ
ಆಯೊಳ್ಳಾ ಹಣ್ಣಡಕಿ ಸೋಯಿಸಿದ ಬೆಳಿ ಎಲೆ
ಹಾಲಲ್ಲಿ ಬೆಂದಾ ತೆನೆಸುಣ್ಣಾ | ತಡಕಂಡಿ

ಮಾಳಗ್ಗಿಂದೆರಗೇ ಬರೋವಾಳೆ | ಸುಬದ್ರಿ
ಮಗ್ನಾ ಒಡ್ನೋಗಿ ನಿಲೂವಾಳು | ಸುಬದ್ರಿ
ಮಗ್ಗೊಂದೀಳ್ಯವಾ ಕೊಡೋವಾಳು.
ತಾಯ್ ಕೊಟ್ಟೀಳ್ಯವಾ ತಟ್ಟಾನೆ ತಡದಾನೆ
ಆಯಾ ಕೊಂದೀಳ್ಯ ಮೆಲೋವಾನೆ.
ಎಲಿಯೊಂದ ತಿಂದಾನೆ ರಜವಲ್ಲೆ ಉಗಳಾನೆ.

ಮಾಳಗ್ಗಿಂದೆರಗೇ ಬರೋವಾನೆ. | ಅಬ್ನನ್ನು
ರಾಜಂಗ್ಳ ಮೆಟ್ಟಾ ಇಳದಾನೆ | ಅಬ್ನನ್ನು
ಆನೀ ಸಾಲೀಗೆ ನೆಡದಾನೆ | ಅಬ್ನನ್ನು
ಅಂದೋಳ್ಳೋಂದಾನಿ ಹೊಡಕಂಡಿ | ಅಬ್ನನ್ನು
ತಿಂಬೂ ಕಿಕ್ಕಾನಿಯೇ ಕಡಲೀಯ | ಅಬ್ನನ್ನು
ಆನೀಬಾಲಕ ಸುವರ್ನಾ ಗೆಯಸಾನೆ | ಅಬ್ನನ್ನು
ಆನೀ ಕಂಬ್ಗಾನೀ ಸೆಳದ್ ಕಟ್ಟಿ | ಅಬ್ನನ್ನು
ಮಾಳೂಗಿ ಒಳಗೆ ನೆಡದಾನೆ | ಅಬ್ನನ್ನು
ಅಟ್ಟತ್ತಿ ಪೆಟ್ಟಿಗೆಯ ತೆಗದಾನೆ | ಅಬ್ನನ್ನು
ಮೆಟ್ಟೆ ಪೆಟ್ಟಗಿಯ ತೆರದಾನೆ | ಅಬ್ನನ್ನು
ಮುಚ್ಚೀಲ ತಗದೇ ಕಡಗಿಟ್ಟಿ | ಅಬ್ನನ್ನು
ಪಟ್ಟೇ ಜೋತ್ರವಾ ನೆರದುಟ್ಟೇ | ಅಬ್ನನ್ನು
ಮುತ್ನ ಮುಂಡಸ್ನಾ ತಲಗ್ ಸುತ್ತೀ | ಅಬ್ನನ್ನು

ಪಟ್ಟೆ ಜೋತ್ರವಾ ಹೊಗಲೀಗೆ | ಹಾಯ್ಕಂಡೀ
ರನ್ನ ದಯ್ದೀಳ್ಯಾ ತಡದಾನೆ | ಅಬ್ನನ್ನು
ಚಿನ್ನ ದಯ್ದೀಳ್ಯಾ ತಡದಾನೆ | ಅಬ್ನನ್ನು
ಮುತ್ನ ಬಾಸಿಂಗಾ ತಡದಾನೆ | ಅಬ್ನನ್ನು
ಮುತ್ನ ತೊಂಡಲವಾ ತಡದಾನೆ | ಅಬ್ನನ್ನು
ಪೆಟ್ಟೀಗೇ ಬಾಯಲ್ಲಿ ಮಡಗಾನೆ | ಅಬ್ನನ್ನು
ಮಾಳಗ್ಗಿಂದೆರಗೇ ಬರೋವಾನೆ | ಅಬ್ನನ್ನು
ಬಂದೀ ಬಾಗಲ್ಲೇ ನಿಲೋವಾನೆ | ಅಬ್ನನ್ನು

ತಾಯೀ ಸಿರಿಪಾದಕೆ ಸರಣಂದಿ
“ಆಯಿಸವಂತನಾಗೋ ಆಯಿಸ್ ಬಲಿದವನಾಗೋ
ನೀ ಕಟ್ಟಿದ ಮುಂಡಸ್ನಾ ತಿರವಾಲಿ ” ಅಂಬುದ್ನು
ರಾಜಂಗ್ಳ ಮೆಟ್ಟಾ ಇಳದಾನೆ | ಅಬ್ನನ್ನು
ಆನೀ ಕಂಬ್ನಾನೀ ಸೆಳದ್ ಬಿಚ್ಚಿ | ಅಬ್ನನ್ನು
ಬೋರೀನೆ ಆನೀ ನೆಗದತ್ತೀ | ಅಬ್ನನ್ನು
ತನ್ನ ರಾಜ್ಯವ ಗಳದಾನೆ | ಅಬ್ನನ್ನು
ಮಾವನ ರಾಜ್ಯಕ್ಕೆ ನೆಡದಾನೆ | ಅಬ್ನನ್ನು

ಹೋಗಿ ಬಾಗಲ್ಲೇ ನಿಲೂವಾನೇ ಅಬ್ನನ್ನು
ಬೋರೀನೆ ಆನೀ  ಇಳೂವಾನೆ | ಅಬ್ನನ್ನು
ಮಾಳೂಗೀ ಒಳಗೆ ನೆಡದಾನೆ | ಅಬ್ನನ್ನು    
ತೂಗು ಮಂಚದಲೆ ಕುಳುತಾನೆ
ತೂಗು ಮಂಚದಲೆ ಕುಳುವುದ್ನು ಅವನಾರೋ
ಮಾವಾದೀರ್ ಹೆರೂಗೇ ಬರೂವಾರು
ಮಾವಾದೀರ ಹೆರುಗೆ ಬಂದೀ ಏನಂಬಾರು

ಬಂದಿಯೋ ಅಳಿಯಾ ಕುಳತೀಯೋ | ಅಂಬುದ್ನ
ಬಂದೀನೋ ಮಾವಾ ಕುಳತೀನೋ | ಅಂಬುದ್ನ
ಮಾವನ ಸಿರಿಪದಕೆ ಸರಣಂದಿ
ಆಯಿಸವಂತನಾಗೋ ಆಯಿಸ ಬಲಿದನಾಗೋ
ನೀ ಕಟ್ಟಿದ ಮುಂಡಸ್ನಾ ತಿರವಾಲಿ
ಕಟ್ಟಿದ ಮುಂಡಸ್ನಕೆ ಎಲ್ಲರೂ ಅ (ಹ) ರಸಾರೆ

ನಾ ಬಂದೆ ನಿಮ್ಮಾಮಗಳೀಗೆ
ಹಸೀಯನಾಲೆರದ್ದು ಸಿಸುವೊಂದಾ ಸಲ್ಲೀದೊ
ಸಿಸುವಾ ಸೋದರಕೆ ಕೊಡಲಾರು | ಅಂಬುದ್ನು
ಅತ್ತೇ ದೀರ್ಹೆಗೆ ಬರೋವಾರು
ಅತ್ತೆ ದೀರ್ಹೆಗೆ ಬಂದೀ ಏನಂಬಾರು

ಬಂದೀಯೋ ಅಳಿಯಾ ಕುಳತೀಯೋ | ಅಂಬುದ್ನು
ಬಂದೀನೇ ಅತ್ತಿ  ಕುಳತೀನೇ | ಅತ್ತೀಯ
ಸಿರಿಪದಕೆ ಸರಣಂದಿ
ಆಯೀಸವಂತನಾಗೋ ಆಯೀಸ ಬಲಿದವನಾಗೋ
ನೀ ಕಟ್ದ್ ಮುಂಡಾಸಾ ತಿರವಾಲಿ
ಕಟ್ಟಿದ ಮುಂಡಾಸ್ಕೆ ಎಲ್ಲವ್ರೂ ಹರಸಾರೆ ಅತ್ತೆ

ನಾ ಬಂದೇ ನಿನ್ನಾ ಮಗಳೀಗೆ
ಅಟ್ಟಂಬಾ ಮಾತಾ  ಕೇಳಾರೆ ಅತ್ತೇಯೋರು
ತಾವೆದ್ದಿ ಒಳಗೆ ನೆಡದಾರೆ
ತಾವೆದ್ದಿ ಒಳಗೇ ನೆಡ್ವದ್ನು ಒಳಗಿದ್ದಾ
ಬಾವಾದೀರೆರ್ಗೆ ಬರೋವಾರು
ಬಾವಾದೀರೆರ್ಗೆ ಬಂದೀ ಏನಂಬಾರೆ

ಬಂದಿಯೋ ಬಾವಾ ಕುಳತೀಯೋ | ಅಂಬುದ್ನು
ಬಂದೀನೋ ಭಾವಾ ಕುಳತೀನೋ | ಅಂದೇಳಿ
ಬಾವನ ಸಿರಿಪದಕೇ ಸರಣಂದೇ
ಆಯುಸವಂತನಾಗೋ ಅಯಿಸಬಲಿದವ ನಾಗೋ
ನೀ ಕಟ್ದ್ ಮುಂಡಸ್ನಾ ತಿರವಾಲಿ
ಕಬ್ದ ಮುಂಡಸ್ಕೆ ಎಲ್ಲಾರು ಹರಸಾರೆ  ಬಾವಾ

ನಾ ಬಂದೆ ನಿನ್ನಾ ಕಿರ‍್ದಂಗಿಗೆ
ಅಟಂಬಾ ಮಾತಾ ಕೇಳಾರೆ ಬಾವ್ದೀರು
ಮಾಳೂಗೀ ಒಳಗೆ ನೆಡದಾರೆ
ಅಪ್ಪನ ಮನೆಯಾ ಅಟ್ಟಕೆ ಎಣೀಚಾಚೀ
ಹತ್ತೀ ನೋಡಿದಳೋ ದುರಗವಾ | ತಂಗವ್ವಿ

ಊರ್ಗ್ ತನ್ನರಸು ಚಲೂವಾನೇ
ಚಲುವ ಚನ್ನಿಗನೆಂದು ಪಟ್ಟೀ ಉಟ್ಟಾಳೆ
ಒಲುಮೀಗೆ ಚಿನ್ನಾ ಇಡೋವಾಳೆ | ತಂಗವ್ವಿ
ಒಲುಮಿಗೆ ಬಣ್ಣಾ ಎಸೋದಾಳೆ | ತಂಗವ್ವಿ
ಹಸಿಯಾ ಹೆಮ್ಮರನಾ ಅಡಕೀಯೇ |ಯ| ಸಿಂಗರಿಸಿ
ಹೂಸಿ ಒಡ್ದೀ ನಾರೀ ಮುಡದಾಳೇ.

ಕಾವಣದಲ್ಲೂ ಸುಳ್ದಾಡು ಕನಕಾಂಗಿ
ಚಿನ್ನದ ಆಯ್ದೀಳ್ಯ ತಡಿಬಾರೇ
ಕಾವಣದಲ್ಲಿ ಸುಳ್ದಾಡು ಕನಕಾಂಗಿ
ರನ್ನದ ಆಯ್ದೀಳ್ಯ ತಡೀಬಾರೇ
ಚಿನ್ನದ ಆಯ್ದೀಳ್ಯಾ ಕೊಡ್ವಾನೆ ನಾರಿಯರ ಕಯ್ಲೆ

ಮುತ್ತನ ತೊಂಡಲವಾ ಕೊಡೋವಾನೇ
ಮುತ್ತನ ತೊಂಡಲವಾ ಕೊಡುವುದ್ನು ನಾರಿಯೊರು
ಮುತ್ತಿನ ತೊಂಡಲವಾ ಮುಡೀಸಾರೆ.
ಅಚೆ ಅಕ್ಕಾದೀರು ಈಚೆ ಬಾವಾದೀರ
ಜೋತ್ರದ ಸರಗಾ ಇಳೀಬಿಟ್ಟೇ | ಮದುವಣ್ಣ
ನಾರೀ ಸೇರಾನೆ ಒಡನಲ್ಲಿ

ಚಲ್ಕೇ ಚೊಳ್ಚಿ ಕದ್ರು ಕುಲ್ಕೇ ತುಂಬೀ ಹೊಂಗು
ಕೆಂದೀಯಾ ಕರ‍್ದೀ ನೋರಿಹಾಲು |ಲ| ಗಿಂಡೀ ತುಂಬೀ
ಹೆಣ್ಣೀನಪ್ಪ ಹೊತ್ತಾನೆ ಮುಡಿಮೆನೆ.
ಎಡದಾ ತೊಡಿಮೆನೆ ಅಳಿಯಾ ಬಲದಾ ತೊಡಿಮನೆಮಗಳು
ಸಿರಿಗಂಗೆ ಗೌರಿ ತೊಡಿಮೆನೆ | ಕುಳ್ಳು ಸಿಗಂಡಿ
ಎರ್ದಾನೆ ಸಾಸನದಾ ಕಯದಾರಿ.

ಆನಂದದಕೆರೆ ಇರಳೀ ಕಾಮನಬಯ್ಲು
ತೋರಿ ಉಂಬಳಿಯಾ ಕೊಡೋವಾನೆ
ಮಾಳುಗಿ ಒಳಗೆ ಅಡ್ಡಾಗೋಡಿಯ ಮೆನೆ
ಮುದ್ದಕ್ಕಿ ನಂಬಾ ಹರಿವಾಳ  ಕಂಚನ ಹುಟ್ಟು
ಹೋಗುವಾಗ ಬಳುವಳಿಯಾ ಕೊಡೋವಾನೇ

ಕೊಟ್ಟಾಗೀ ಒಳಗೀನಾ ಗಟ್ಟೂಮಣಿ ಕೆಮ್ಮಿಯೂ
ಬಾಲಕೆ ಸುವರ್ಣಾ ಗಳೀಸಾನೆ.
ಬಾಲಕೇ ಸುವರ್ಣಾ ಗಳಿಸಿದ ಎಮ್ಮಿಯ
ಮಗಳೀಗೆ ಬಳವಳಿಯೂ ಕೊಡೋವಾನೆ
ಕಂಬುಸದಂಕದಿಂದೆ ಸರ್ವಾವಾದೀದಿಂದೆ

ಕನಕಾಂಗೀ ದಿಬ್ಬಣ ಸವವಾನೆ.
ಕನಕಂಗೀ ದಿಬ್ಬಣ ಸವ್ನೇ ಸಿಂಗಾರಾಗಿ
ಒಟ್ಟಾಗಿ ಒಂದಾನೀ ನೆಗೆದತ್ತೀ ಕನಕಾಂಗಿ ಅಬ್ನನ್ನು
ತಮ್ಮ ಅರಮನೆಗೆ ನೆಡದಾರೆ.

* * *