ಆದರೆ ಆಕೆಗೆ ನಮ್ಮ ಹಳ್ಳಿ ಅಡುಗೆ ಮನೆ ಅಂದ್ರೆ ಅಷ್ಟು ಆಸಕ್ತಿ ಇರಲಿಲ್ಲ. ಹಳ್ಳಿಗೆ ಬಂದ್ರೆ ಆಕಡೆ ತಲೆ ಹಾಕ್ತಿರಲಿಲ್ಲ. ಗೌರಕ್ಕ ಗಾಂಧಿ ಎದುರು ಸತ್ಯಾಗ್ರಹ ಮಾಡಿದ ಸುದ್ದಿ ಹಾಗೂ ಆಕೆ ಮಾಂಗಲ್ಯ ಬಿಟ್ಟು ಉಳಿದೆಲ್ಲ ಚಿನ್ನದ ಒಡವೆಗಳನ್ನು ಗಾಂಧಿಯವರ ನಿಧಿಗೆ ದಾನ ಮಾಡಿದ ಕಥೆ ಕೇಳಿದ ಮೇಲೆ ನಮಗೆ ಆಕೆ ಅಂದ್ರೆ ಇನ್ನಷ್ಟು ಗೌರವ, ಹೆಮ್ಮೆ, ಪ್ರೀತಿ ಗೌರಕ್ಕ ಖಾದಿ ಶೀರೆನೆ ಉಡೋಳು. ಆಕೆಯ ಕಾರಣದಿಂದಲೇ ನಾನು ತಕಲಿಯಲ್ಲಿ ಎಷ್ಟೋ ಕಾಲ ನೂಲು ತೆಗೆದು ಅದನ್ನು ಗಾಂಧೀಜಿಗೂ ಕಳಿಸಿದ್ದೆ. ಗೌರಕ್ಕ ಎಷ್ಟೋ….. ಒಳ್ಳೆ ಕಥೆ ಬರೆಯೋಳು! ಬೇಂದ್ರೆ, ಕಾರಂತ, ಮಾಸ್ತಿ ಮುಂತಾದ ದೊಡ್ಡ ಸಾಹಿತಿಗಳೆಲ್ಲ ಗುಂಡುಕುಟ್ಟಿಗೆ ಬಂದಾಗಲೆಲ್ಲಾ ಗೌರಕ್ಕನಿಗೆ ಸಾಹಿತ್ಯದ ಬಗ್ಗೆ ಹೇಳೋರಂತೆ… ಬರೆಯುವ ಬಗ್ಗೆ ಮಾರ್ಗದರ್ಶನ ನೀಡೋರಂತೆ. ಗೌರಕ್ಕ ಒಳ್ಳೆ ಒಳ್ಳೆಯ ಕಥೆ ಬರೆದಿದ್ದಾರೆ, ಬರೆಯುತ್ತಾರೆ ಅಂತ ನಮಗೆ ಗೊತೇ ನಿನಹ…. ಅದನ್ನು ಆಗ ನಮಗೆ ಓದುವುದು ಗೊತ್ತಿರಲಿಲ್ಲ! ನಾವು ಓದೋ ಹೊತ್ತಿಗೆ ಗೌರಕ್ಕ ಇಲ್ಲವಾದ್ಳು…..,ಈಜು ಬರುತ್ತಿದ್ದ ಗೌರಕ್ಕ ಆ ಹೊಳೆಯ, ಮಡುವಲ್ಲಿ ಮುಳುಗಿ ಸತ್ತಳು ಅಂದ್ರೆ ನಮಗೆ ನಂಬ್ಲಿಕೆ ಆಗಿಲ್ಲ…. ಕೆಲವು ಕ್ಷಣ….’

ತಾಯಿ ಗೌರಮ್ಮನವರು ಅಕಾಲಿಕ ಸಾವಿನಿಂದ ತಬ್ಬಲಿಯಾದ ಅವರ ಎಂಟರ ಹರೆಯದ ಮಗ ವಸಂತ, ತನ್ನ ತಂದೆ ಹಾಗೂ ಸೋದರಮಾವನ ಆಸರೆಯಲ್ಲಿಬೆಳೆದು, ಇಂದು ಬದುಕಿನ ಇಳಿಸಂಜೆಯಲ್ಲಿ ನಿಂತು ಬಾಲ್ಯದ ‘ಕಣ್ಣು’ ಗಳಿಂದಲೇ ತನ್ನ ತಾಯಿಯನ್ನು ನೆನೆಪಿಸಿಕೊಳ್ಳುವುದು ಹೀಗೆ:

`ನಾನು ಅಮ್ಮನನ್ನು ನೆನಪಿಸಿಕೊಂಡಾಗಲೆಲ್ಲ ನನ್ನ ಕಣ್ಣಿಗೆ ಮೊದಲು ಕಟ್ಟಿ ಬರುವುದು ಆಕೆಯ ಮಡಿಲು, ಅಮ್ಮನ ಕಿವಿಯೋಲೆ ಅದು ಏಳುಕಲ್ಲಿನ ಕೆಂಪು ಹರಳಿನ ಮುದ್ದಾದ ಕಿವಿಯೋಲೆ ಮತ್ತು ಕೋಲು.’ ‘ ಕೋಲುಅಂದರೆ ಅಮ್ಮ ನನ್ನ ಪೋಕರಿತುಂಟಾಟ ಸಹಿಸಿಕೊಳ್ಳಲಾರದೆ ಬೆನ್ನಿಗೆರಡುಕೊಡಲುತರುತ್ತಿದ್ದ ಗಿಡದ ರೆಂಬೆ ಕೋಲಲ್ಲ, ಅದು ಗಾಂಧಿತಾತನ ಕೈಯೊಳಗಿದ್ದಕೋಲುನಾಳೆ ಗಾಂಧೀಜಿ ನಮ್ಮ ಮನೆಗೆ ಬರಲಿದ್ದಾರೆಎಂಬ ಸುದ್ದಿಯನ್ನು ಅಮ್ಮ ನನಗೂ ಹೇಳಿದ್ದರು. ನನಗಾಗ ಮೂರು ವರ್ಷ. ಗಾಂಧಿ ಎಂದರೆ ಯಾರು? ಎಂದು ಕೇಳುವ ವಯಸ್ಸೂ ನನ್ನದಲ್ಲ. ಆದರೂ ಅಮ್ಮ ಗಾಂಧಿ ನಮಗಿಂತ ಎಷ್ಟುದೊಡ್ಡವ ರೆಂದು ನನ್ನಭಾಷೆಯಲ್ಲಿನನಗೆ ಹೇಳಿದ್ದರೂಆಗ ಗಾಂಧೀಜಿಯವರಎತ್ತರವನ್ನು ನೋಡಲು ನನ್ನ ಎತ್ತರ ಸಾಲದಿರಬೇಕು! ನನಗೆ ಗಾಂಧೀಜಿ ಆಗಮನ ಅಂದು ಯಾವ ಸಂಭ್ರಮವನ್ನು ತಂದಿರಲಿಲ್ಲ. ಅಮ್ಮನಿಗೆ ಮಾತ್ರ ತುಂಬಾ ಸಂಭ್ರಮ. ಗಾಂಧಿಯವರದ್ದೇ ಮಾತು. ಇಂದು ಹೋಗಿ ನಾಳೆಯೂ ಬಂತು. ಅಮ್ಮ ಆವತ್ತು ಸಂಭ್ರಮದಿಂದ ಗಾಂಧೀಜಿಯವರ ಆಗಮನವನ್ನು ನಿರೀಕ್ಷಿಸುತ್ತಿದ್ದರು. ನಮ್ಮ ಅಂಗಳದಲ್ಲಿ ಗಾಂಧೀಜಿಯವರನ್ನು ನೋಡುವ ಕುತೂಹಲದಿಂದ ನಮ್ಮ ಹಾಗೂ ಅಕ್ಕಪಕ್ಕದ ತೋಟಗಳ ಮೇಸ್ತ್ರಿಕೂಲಿಯಾಳುಗಳೆಲ್ಲ ಸೇರಿದ್ದರು. ನಾನೂ ಅಮ್ಮನ ಕೈಬಿಟ್ಟು ಎಲ್ಲರೊಂದಿಗೆ ಅಂಗಳದಲ್ಲಿದ್ದೆ. ಅಷ್ಟರಲ್ಲಿಬಂದ್ರು ಬಂದ್ರುಗಾಂಧೀಜಿ ಬಂದ್ರು….ಎಂದು ಜನ ಸಂಭ್ರಮಪಟ್ಟು ಕೊಳ್ಳುವಷ್ಟರಲ್ಲಿ... ದೊಡ್ಡ ಕೋಲು ಹಿಡಿದು ಅಜ್ಜ ಒಬ್ರು ತಮ್ಮ ಪರಿವಾರದೊಂದಿಗೆ ದಾಪುಗಾಲಲ್ಲಿ ನಮ್ಮ ಮನೆಯತ್ತ ನಡೆದು ಬರುತ್ತಿದ್ದಾರೆ! ಕೋಲುಅಷ್ಟೊಂದು ಜನಅವರು ನಡೆಯುವ ರಭಸಇವೆಲ್ಲವೂ ನನ್ನೊಳಗೆ ಭಯ ಮತ್ತು ಅಳುವನ್ನು ಒತ್ತರಿಸಿ ತಂದು... ನಾನು ಕಿಟಾರನೆ ಕಿರಿಚುತ್ತ ಅವರೆಲ್ಲರಿಗಿಂತಲೂ ವೇಗವಾಗಿ ಮನಯತ್ತ ಓಡಿಅಮ್ಮಾಅವ್ರು ದೊಡ್ಡ ಕೋಲು ತರುತ್ತಿದ್ದಾರೆನನ್ನ ಹೊಡೆಯಕ್ಕೆ.….ಎಂದು ಅಳುತ್ತ ಅಮ್ಮನ ಮಡಿಲನ್ನು ತಬ್ಬಿಕೊಂಡಿದ್ದೆ! ಅಮ್ಮ ನನ್ನನ್ನು ಸಮಾಧಾನಿಸುತ್ತಿರುವಾಗ ಅಪ್ಪ ಬಂದು ನನ್ನನ್ನು ಎತ್ತಿ ಕೊಂಡಿದ್ರುಆವತ್ತಿನ ಕೋಲುಈಗಲೂ ನನ್ನ ಮನದೊಳಗೆ ಅಚ್ಚೊತ್ತಿನಿಂತಿದೆ.

ನನ್ನ ಅಮ್ಮ ಬರೆದ ಕಥೆಗಳನ್ನು ನಾನು ಓದಿದ್ದು ದೊಡ್ಡವನಾದ ಮೇಲೆ. ಆತ್ಮಕಥನದ ಶೈಲಿಯಲ್ಲಿರುವ ಅವರ ಕೆಲವು ಕಥೆಗಳನ್ನು ಓದುವಾಗಲೆಲ್ಲ ನನಗೆ ನನ್ನ ಬಾಲ್ಯದಂಗಳವೇ ಎದ್ದು ಬಂದಂತಾಗುತ್ತಿತ್ತು. ಅವರು ತನ್ನಬದುಕಿನ ಅಂಗಳ, ತನ್ನ ಅನುಭವದ, ತಾನು ಕೇಳಿಸಿಕೊಂಡ ಕಥೆಗಳನ್ನೇ ಬರೆದಿದ್ದಾರೆ ಎಂದನಿಸುತ್ತೆ. ಬಡತನದ ಬಗ್ಗೆ, ಹೆಣ್ಣಿನ ಬದುಕಿನ ಸುಖದುಃಖ, ನೋವು ನಲಿವುಗಳುಅಮ್ಮನ ಕಥೆಗಳಲ್ಲಿ ತುಂಬಾ ಸಹಜವಾಗಿ ಬರಲು ಕರಣದುಡಿಮೆಗಾಗಿ ನಮ್ಮ ಅಂಗಳಕ್ಕೆ ಬರುತ್ತಿದ್ದ ದುಡಿಯುವ ವರ್ಗದವರ, ಸುಖಕಷ್ಟಗಳನ್ನು ಅಮ್ಮ ಕೇಳಿಸಿಕೊಳ್ಳತ್ತಅವರ ಕಷ್ಟಗಳಿಗಾಗಿ ಮರುಗುತ್ತ, ಅವರನ್ನು ಸಮಾಧಾನಿಸುತ್ತಿದ್ದುದು. ಅಮ್ಮ ಅವರರಿಗೆಲ್ಲ ತನ್ನ ಕೈಲಾದಷ್ಟು ಸಹಾಯವನ್ನು ಮಾಡುವುದಿತ್ತು. ನಮ್ಮ ತೋಟಕ್ಕೆ ಬರುತ್ತಿದ್ದ ಕೂಲಿಕಾರ್ಮಿಕರಲ್ಲಿ ಹೆಚ್ಚಿನವರು ಅಮ್ಮನ ಸಂತಾನದ ಬೇರಿರುವ ತಳುನಾಡಿನವರೇ ಆಗಿದ್ದ ಕಾರಣ ಅಮ್ಮ ಅವರೊಂದಿಗೆ ತಳುವಿನಲ್ಲೇ ಮಾತನಾಡುತ್ತಅವರಿಗೆ ವಿಶೇಷವಾಗಿ ಕಾಫಿ, ಮಜ್ಜಿಗೆ ನೀರು,ಹಣ್ಣು ತಿಂಡಿಗಳನ್ನು ಕೊಟ್ಟು ಆದರಿಸುವುದಿತ್ತು. ಅಮ್ಮನ ಕಥೆಗಳಲ್ಲಿಬರುವ ಹೆಚ್ಚಿನ ಪತ್ರಗಳು ಕೂಡಾ ನನ್ನ ಬಾಲ್ಯದಲ್ಲಿ ನಾನು ಅಲ್ಲಿ ಇಲ್ಲಿ ಕಂಡ ಪಾತ್ರಗಳೇ. ನಮ್ಮ ಸಂಬಂಧಿಕರುಜಾತಿಬಾಂಧವರು ಕೂಡ ಅವರ ಕಥೆಗಳಲ್ಲಿ ಪಾತ್ರವಾಗಿದ್ದಾರೆ. ಅಮ್ಮ ತನ್ನ ಸಾವಿನ ಹಿಂದಿನ ದಿನ ಬರೆದ ಕೊನೆಯ ಕಥೆಮುನ್ನಾದಿನ ಪಾತ್ರಗಳಾದ ಜೋಸೆಫ್ ಕಾಡ ಮತ್ತು ಹುಸೇನಬಿ ಇಬ್ಬರೂ ನಮ್ಮ ತೋಟದಲ್ಲಿ ದುಡಿಯುತ್ತಾಅಮ್ಮನ ವಿಶ್ವಾಸವನ್ನು ಗಳಿಸಿದವರೆ. ಅಮ್ಮನ ಕಥೆಪಾಪನ ಮದುವೆನನ್ನ ಅಮ್ಮನ ಅಕ್ಕ ತಂಗಮ್ಮನವರ ಮಗ ನಾರಾಯಣಮೂರ್ತಿಯದ್ದೇ ಕಥೆ. ಆತನ ಮನೆ ಹೆಸರು ಪಾಪ. ಅಮ್ಮನಿಗೆ ತಂಬ ಇಷ್ಟದಾತ. ಆತನ ಜತೆಗೆ ಅಮ್ಮ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಖ್ಯ ಅರ್ಚಕ ಸುಬ್ಬಾಜೋಯಿಸರ ಮಗಳು ಅನ್ನಪೂರ್ಣೇಶ್ವರಿಯನ್ನುನೋಡಲು’ ( ವಧುಪರೀಕ್ಷೆಗೆ) ಹೋದ ಕಥೆಯೇ ಪಾಪನ ಮದುವೆ,’ ನೋಡಿ ನನ್ನಮ್ಮ ತನ್ನ ಬಾಲ್ಯವನ್ನು ನೆನಪಿಸಿಕೊಳ್ಳುತ್ತಲೇ... ತನ್ನಿಷ್ಟದ ಪಾಪನ ವಧುಪರೀಕ್ಷೆಯ ದಿನದ ಆವಾಂತರಗಳನ್ನು ಹಾಗೂ ಹೆಣ್ಣು ಹೆತ್ತವರ ಕಷ್ಟಗಳನ್ನು ಕಥೆಯಲ್ಲಿ ಎಷ್ಟು ಹಾಸ್ಯಮಯವಾಗಿ ಚಿತ್ರಿಸಿದ್ದಾರೆ ನೋಡಿ

ನನ್ನ ಅಮ್ಮ ಕಥೆ ಮಾತ್ರ ಬರೆಯುತ್ತಿದುದಲ್ಲಅವ್ರು ತುಂಬಾ ಓದುತಿದ್ರು; ಕನ್ನಡದ ಪುಸ್ತಕಗಳ ಜತೆ ಇಂಗ್ಲಿಷ್ ಪುಸ್ತಕಗಳನ್ನು ತುಂಬಾ ಓದೋರು; ಇಂಗ್ಲಿಸ್ ಚೆನ್ನಾಗಿ ಮಾತನಾಡೋದ ಮಾತ್ರಲ್ಲ ಚೆನ್ನಾಗಿ ಬರಿತಿದ್ರು ಕೂಡಾ. ಅಮ್ಮನಿಗೆ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ ತುಂಬಾ ಇಷ್ಟ. ಅಂತಹ ಕಾರ್ಯಕ್ರಮಗಳನ್ನುಅವರು ಎಂದೂ ತಪ್ಪಿಸುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಮಳೆಗಾಲದಲ್ಲಿ ಯಾವತ್ತೂ ತಾಳಮದ್ದಲೆ ನಡೆಯೋದು. ಅಮ್ಮನಿಗೆ ತಾಳಮದ್ದಲೆಯಲ್ಲಿ ಭಾಗವಹಿಸುವುದೆಂದರೆ ತುಂಬಾ ಇಷ್ಟ ತಾಳಮದ್ದಲೆ ನಡೆಯುವಂದು ಅಮ್ಮ ಅಡುಗೆ ಮನೆಯಲ್ಲೂ ತುಂಬ ಬ್ಯುಸಿ. ತಾಳಮದ್ದಲೆಗೆ ಬಂದವರಿಗೆ ಕಾಫಿ, ತಿಂಡಿ, ಹಣ್ಣು, ಊಟದ ಏರ್ಪಾಡು ಎಲ್ಲ ಅವರದ್ದೇ. ಅಮ್ಮನಿಗೆ ಯಕ್ಷಗಾನ ಬಯಲಾಟ ಅಂದ್ರೂ ತುಂಬ ಇಷ್ಟ ನಮ್ಮೂರಲ್ಲಿ ಯಕ್ಷಗಾನ ನಡೆದರೆ ನನ್ನನ್ನೂ ಕರೆದುಕೊಂಡು ಹೋಗೋರು. ಅಮ್ಮ ಚೆನ್ನಾಗಿ ಹಾಡುತಿದ್ರು ಕೂಡಾ. ಇಷ್ಟೇ ಅಲ್ಲ,ಅಮ್ಮ ಕೂಡಾ ಚೆನ್ನಾಗಿ ಆಡ್ತಿದ್ರು ಟೆನಿಸ್ ಕೋರ್ಟು ನಮ್ಮ ಮನೆ ಮುಂದೆಯೇ ಇತ್ತು. ಬೆಳಿಗ್ಗೆಸಂಜೆ ಅಮ್ಮ ತನ್ನ ಒಡನಾಡಿಗಳೊಂದಿಗೆ ಟೆನ್ನಿಸ್ ಆಡೋರು.

ಅಮ್ಮ ಅಂದಿನ ಸಾಹಿತ್ಯದ ಬಗ್ಗೆ ಮಾತ್ರವಲ್ಲ ರಾಜಕೀಯದ ಬಗ್ಗೆಯೂ ಸಮಾನ ಮನಸ್ಕ ಒಡನಾಡಿಗಳಲ್ಲಿ ತುಂಬ ಚೆನ್ನಗಿ ಚರ್ಚಿಸುತ್ತಿದ್ರು. ದೇಶದ ಸ್ವಾತಂತ್ರ ಹೋರಾಟಕ್ಕೆ ಸಂಬಂಧಿಸಿದ ರಾಜಕೀಯದ ಬಗ್ಗೆ ನಮ್ಮ ಕುಟುಂಬದ ಆಪ್ತೇಷ್ಟರಲ್ಲಿಬಂಧುಗಳ ಜತೆ ಉತ್ಸಾಹದಿಂದ ವಾದಿಸುತ್ತಿದ್ದರು.

ಅಮ್ಮನಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ವ್ಯಕ್ತಿತ್ವಗಳನ್ನು ಪರಿಚಯಿಸಿಕೊಳ್ಳುವ ಗೌರವಿಸುವ ಗುಣ ಅಪಾರವಾಗಿತ್ತು. ಅಮ್ಮನ ಗುಣದಿಂದಾಗಿ, ಮನೆಯ ಪಕ್ಕದಲ್ಲಿದ್ದ ಗುಂಡುಕಟ್ಟಿ ಎಸ್ಟೇಟ್ ಬಂಗಲೆಗೆ ಬರುತ್ತಿದ್ದ ಬೇಂದ್ರೆ, ಮಾಸ್ತಿ, ಕಾರಂತ, ಮುಳಿಯ ತಮ್ಮಪ್ಪಯ್ಯ ಮುಂತಾದ ಸಾಹಿತ್ಯ ದಿಗ್ಗಜರು ನಮ್ಮ ಮನೆಗೂ ಬಂದು ಅಮ್ಮನ ಸಾಹಿತ್ಯಕ ಬೆಳವಣಿಗೆಗೆ ಸಲಹೆಮಾರ್ಗದರ್ಶನ ನೀಡುತ್ತಿದ್ದುದು ನನಗೆ ಈಗಲೂ ನೆನಪಿದೆ. ಅಮ್ಮ ತಾವು ಬರೆದ ಕಥೆಗಳ ಬಗ್ಗೆ ಅವರಲ್ಲಿ ಚರ್ಚಿಸುತ್ತಿದ್ದುದುಂಟು.

ಅಮ್ಮ ೧೯೨೬ ರಲ್ಲಿ ಹಿಂದಿವಿಶಾರದಪರೀಕ್ಷೆಯಲ್ಲಿ ತೇರ್ಗಡೆಯಾದಾಗ ಮೈಸೂರಲ್ಲಿ ಅವರಿಗೆ ಖದ್ದರ್ ಶಾಲು (ಬಿಳಿ ಶಾಲಿಗೆ ನೇರಳೆ ಬಾರ್ಡರ್) ಹೊದಿಸಿ ಸರ್ಟಿಫಿಕೇಟ್ ನೀಡಿ ಸನ್ಮಾನ ಮಾಡುತ್ತಾರೆ. ಫಂಕ್ಷನ್ ಆರ್. ಕಲ್ಯಾಣಮ್ಮ ಬಂದಿದ್ದಾಗ... ಅಮ್ಮನಿಗೆ ಅಲ್ಲಿ ಅವರ ಪರಿಚಯವಾಗಿ ನಂತರ ಕಲ್ಯಾಣಮ್ಮನವರ ಜತೆ ಅಮ್ಮ ಸಾಹಿತ್ಯದ ವಿಚಾರವಾಗಿ ಹಲವು ಬಾರಿ ಪತ್ರವ್ಯವಹರ ನಡೆಸಿದ್ದಿದೆ.

‘ನನ್ನ ಅಮ್ಮ ಹೊರಗೆ ಹೊರಟಾಗಲೆಲ್ಲ ಒಂದು ಚಂದದ ಪರ್ಸು ಹೀಡೀತಿದ್ರುಅಮ್ಮನ ಕನ್ನಡಕನೂ ಚಂದ... ಅವರು ಬರೆಯುತ್ತಿದ್ದ ಇಂಕು ಪೆನ್ನೂ ಚಂದದ್ದುಅವರು ನೀಟಾಗಿ ಖಾದಿ ಸೀರೆಗಳನ್ನು ಉಡುತ್ತಿದ್ರುಕೆಲವೊಮ್ಮೆ ಸೀರೆ ಮೇಲೆ ಖಾದಿಯ ಔತಜೆಡಿ ಛಠಚಿಣನ್ನು ಧರಿಸುತ್ತಿದ್ರು... ; ಅಮ್ಮ ನಮ್ಮಲ್ಲಿಗೆ ಗಾಂಧಿ ಬಂದು ಹೋದ ಮೇಲೆ ಮೈಸೂರು ಸಿಲ್ಕ್ ಸೀರೆ ಉಡೋದನ್ನ ಬಿಟ್ಟು ಬಿಟ್ರಂತೆಖಾದಿ ಸೀರೆನೇ ಉಡುತಿದ್ರು

ಸದಾ ಖಾದಿ ಸೀರೆ ಧರಿಸುತ್ತ ಸ್ವಾತಂತ್ರ ಹೋರಾಟ ಮಾತ್ರವಲ್ಲ… ಕೊಡಗಿನ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಕಾಣಿಸಿಕೊಳ್ಳುತ್ತದ್ದ ಗೌರಮ್ಮನವರನ್ನು ಬಾಲ್ಯದಿಂದಲೇ ಆರಾಧನಾ ದೃಷ್ಟಿಯಿಂದ ನೋಡುತ್ತಿದ್ದ ಕಾವೇರಮ್ಮನವರು (ಇವರು ಭಾರತೀಸುತರ ಸೊಸೆ, ಮೈಸೂರಿನ ಸರಕಾರಿ ಬಿಎಡ್ ಕಾಲೇಜಿನ ಪ್ರಾಂಶುಪಾಲೆಯಾಗಿ ನಿವೃತ್ತರಾದರು)… ಇದೀಗ ತಮ್ಮ ೮೭ ರ ಇಳಿವಯಸ್ಸಿನಲ್ಲಿ ಗೌರಮ್ಮನವರ ವ್ಯಕ್ತಿತ್ವವನ್ನು ತಮ್ಮ ನೆನಪಿನಿಂದಿಳಿಸಿ, ಅದನ್ನು ಕಟ್ಟಿಕೊಡುವುದು ಹೀಗೆ:

ಗೌರಮ್ಮನವರ ತಂದೆ ವಕೀಲರು, ಅಣ್ಣ ಸೆಶ್ಯನ್ ಜಡ್ಜ್Well educated family. ತಾಯಿಯಿಲ್ಲದ ತಬ್ಬಲಿಯೆಂದು ತಂದೆ ಆಕೆಯನ್ನು ಕಣ್ಣಬಿಂಬದ ಹಗೆ ಸಾಕ್ತಾರೆ. Convent education ಕೊಡಿಸ್ತಾರೆ. ಆಗಲೇ ಆಕೆ ಕನ್ನಡದ ಕೃತಿಗಳನ್ನು ಮಾತ್ರವಲ್ಲ ಪಾಶ್ಚಾತ್ಯ ಕಾವ್ಯನಾವಲ್ ಗಳನ್ನು ಓದಿಕೊಂಡಾಕೆ. ಟೆನಿಸ್ಈಜಿನಲ್ಲೂ ಮುಂದು. ಹೈಸ್ಕೂಲ್ ನಲ್ಲಿರುವಾಗಲೇ ಮದುವೆ ಆದರೂ ಮದುವೆ ಆಯಿತೆಂದುಆಗಿನ ಹೆಣ್ಮಕ್ಕಳಂತೆ ಮನೆಯಲ್ಲಿ ಕೂತವರಲ್ಲ. ಆಕೆಯ ರೀತಿಯ ಬೆಳವಣಿಗೆಗೆ ಗಂಡನದ್ದೂ ಪ್ರೋತ್ಸಾಹವಿತ್ತು. ನಮ್ಮ

ತಾಯಿ ಕಸಿನ್ ಗೆ ಆಕೆ ಚಿಕ್ಕಮ್ಮನಾಗಬೇಕು. ಆಕೆ ಒಳ್ಳೆಯ ಕಥೆ ಬರೀತಿದ್ರುಅಮ್ಮನಿಗೆ ಆಕೆಯ ಕಥೆಗಳು ತಂಬಾ ಇಷ್ಟ. ಆಕೆಯ ಕೆಲವು ಕಥೆಗಳನ್ನು ಅಮ್ಮ ನಮಗೆ ಓದಿ ಹೇಳ್ತಿದ್ರು So ನಮಗೆಲ್ಲ ಆಕೆಯನ್ನು ಕಾಣುವಾಗಲೆಲ್ಲಕಥೆ ಬರೆವಾಕೆಎಂದು ಅಭಿಮಾನವಾಗುತ್ತಿತ್ತು.

ಆಕೆ Patriotic symbol ಆಗಿ ಸದಾ ಖಾದಿ ಸೀರೆ ಉಡುತ್ತಿದ್ರು. ಆಕೆ ಒಮ್ಮೆ ಗಾಂಧಿಯವರ ಮುಂದೆ ಸತ್ಯಾಗ್ರಹ ಕೂತು ಅವರನ್ನುಬೇಸ್ತು ಬೀಳಿಸಿದ ಕಥೆ ನಿಮ್ಗೆ ಮತ್ತೆ ಹೇಳ್ತಿನಿ. ಗಾಂಧೀಜಿಯವರ ಆಶಯದಂತೆ ಇಡೀ ಭಾರತ ಭಾಷೆಯಲ್ಲಿ ಒಂದಾಗಬೇಕು ಎಂಬ ನಿಲುವು ಉಳ್ಳವರಾಗಿದ್ದ ಗೌರಮ್ಮನವರು, ಗಾಂಧಿ ಭೇಟಿಯ ನಂತರ ಹಿಂದಿ ಭಾಷೆಯಲ್ಲಿ ಕಲಿಯ ತೊಡಗಿ ವಿಶಾರದ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆಯಾಗುತ್ತಾರೆ. ತಾನು ಮಾತ್ರವಲ್ಲ ತನ್ನಸನಿಹದವರೂ ಹಿಂದಿ ಭಾಷೆಯನ್ನು ಕಲಿಯಬೇಕೆಂದು ಅವರು ಪ್ರೋತ್ಸಾಹಿಸಿದ್ದರಂತೆ. ರಾಜಕೀಯದಲ್ಲಿ ಆಕೆಗೆ ತುಂಬಾ ಆಸಕ್ತಿ. ದೇಶದ ಸ್ವಾತಂತ್ರ ಹೋರಾಟದಲ್ಲಿ ಅವರದ್ದೂ ಅಳಿಲು ಸೇವೆ ಇದ್ದೇ ಇದೆ. ಗೌರಮ್ಮನಿಗೂ ನನಗೂ ವಯಸ್ಸಲ್ಲಿ ಸುಮಾರು ೧೦೧೧ ವರುಷಗಳ ವ್ಯತ್ಯಾಸವಿದೆ. ನಾನು ಹೈಸ್ಕೂಲು ಮುಗಿಸುವಾಗ ಆಕೆಸಾಹಿತ್ಯದಲ್ಲಿ ಹೆಸರು ಮಾಡಿದಾಕೆ. ನಮ್ಮ ಮಾಸ್ತಿಬೇಂದ್ರೆಕಾರಂತರು ಮಡಿಕೇರಿಗೆ ಬಂದಾಗಲೆಲ್ಲ ಕಥೆಗಾರ್ತಿ ಗೌರಮ್ಮನವರನ್ನು ಕಂಡು ಆಕೆಯ ಬರಹದ ಬಗ್ಗೆ ಸಲಹೆಸೂಚನೆಗಳನ್ನು ನೀಡುತ್ತಿದ್ದರಂತೆ. ಗೌರಮ್ಮನವರನ್ನು ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡುವಷ್ಟು ಸ್ನಗ್ಧ ಸುಂದರಿ. ಎತ್ತರ ನಿಲುವಿನ ಆಕೆ fair looking, ಕೋಲುಮುಖ, ಮಿಂಚುವ ಕಣ್ಣು, ಹೊಳೆವ ಮೂಗುತಿ, ನೇರ ಬಕ್ತಲೆ totally ಆಕೆ ಅರಳ ಸುಂದರಿ

ಶ್ರೀಮಂತ ಬದುಕಿಗೆಂದೂ ಆಸೆ ಪಡದೆ, ಸರಳತೆಯಲ್ಲೇ ಸಂತೃಪ್ತಿ ಕಂಡುಕೊಳ್ಳುವಂತಹ ಅಸಾಧಾರಣ ವ್ಯಕ್ತಿತ್ವವುಳ್ಳವರಾಗಿದ್ದ ಗವರಮ್ಮನವರು ತಮ್ಮ ಮಿತವಾದ ಆದಾಯದಲ್ಲೇ ಸಂಸಾರವನ್ನು ತೂಗುತ್ತಾ, ನೆಂಟರಿಷ್ಟರಿಗೆ ಆತಿಥ್ಯವನ್ನು ತೋರುತ್ತಿದ್ದ ಗೃಹಿಣಿಯಾಗಿದ್ದರು.

“ತನ್ನ ಸಂಸಾರದ ಖರ್ಚು ವೆಚ್ಚಗಳನ್ನು ತೂಗುವ ವಿಚಾರದಲ್ಲಿ ನಿಮ್ಮಮ್ಮ ‘ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕೆನ್ನುವ’ ಎಚ್ಚರವನ್ನು ಕಾಯ್ದುಕೊಂಡಾಕೆ” ಎಂದು ತನ್ನಪ್ಪ, ಅಮ್ಮನ ಬುದ್ಧಿವಂತಿಕೆಯನ್ನು ಯಾವತ್ತೂ ಹೆಮ್ಮೆಯಿಂದ ಹೇಳುತ್ತಿದ್ದುದನ್ನು ಅವರ ಮಗ ವಸಂತ ನೆನೆಪಿಸಿಕೊಳ್ಳುತ್ತಾರೆ. ಗೌರಮ್ಮನವರು, ಅಪ್ಪನ ಕುಟುಂಬದಲ್ಲಿ ಕೊನೆಯವರಾದ ಕಾರಣ ಅಕ್ಕ – ಅಣ್ಣಂದಿರ ಮಕ್ಕಳೆಲ್ಲ ಇವರ ‘ ಉಸ್ತುವಾರಿ’ ಯಲ್ಲೇ ಅಥವಾ ಜತೆಯಲ್ಲೇ ಬಾಲ್ಯವನ್ನು ಕಳೆದುದ್ದರಿಂದ ಇವರಿಗೆ ಅಕ್ಕಂದಿರ ಮಕ್ಕಳೆಂದರೆ ವಿಪರೀತ ಸಲಿಗೆ ಮತ್ತು ಮಮತೆ. ಅಣ್ಣ – ಅಕ್ಕಂದಿರ ಜತೆಗಿಂತಲೂ ಅವರು ಮಕ್ಕಳ ಜತೆಗಿನ ಒಡನಾಟವೇ ಗೌರಮ್ಮನವರಿಗೆ ಪ್ರಿಯವಾದುದು. ಅವರೆಲ್ಲರ ಜತೆಗೆ ಗೌರಮ್ಮನವರು ಸದಾ ಪತ್ರ ಸಂಪರ್ಕವನ್ನಿಟ್ಟುಕೊಂಡು ಸಂಬಂಧ ಸಲಿಗೆ – ಪ್ರೀತಿಯನ್ನು ಕಾಪಾಡಿಕೊಳ್ಳುತ್ತಿದ್ದರು ಎಂಬುದಕ್ಕೆ ಒಂದು ನಿದರ್ಶನ:

ಗೌರಮ್ಮನವರು ತಮ್ಮ ಅಕ್ಕನ ಮಗನೊಬ್ಬನಿಗೆ ೧೯೩೪ ರ ಜೂನ್ ನಲ್ಲಿ ಬರೆದ ಈ ಪತ್ರ.

My darling… babe of the honey, I am very glad to send you a letter from your sweet heart at last. I got it just now, only a few minutes back. Hope you received my last letter. Why did you not repily? Please write as soon as you receive this and please try to come over here at least for a day Hoping to hear from you very soon

yours lovingly
Aunty

ಗೌರಮ್ಮನವರು ತಮ್ಮ ಮತ್ತೊಬ್ಬ ಅಕ್ಕ ತಂಗಮ್ಮನವರ ಮಗ ರಾಮಮೂರ್ತಿಗೆ ಅಣ್ಣ ಗೋಪಾಲಕೃಷ್ಣನವರ ಮದುವೆ ‘ವೈಭವ’ ದ ಬಗ್ಗೆ ೧೪ – ೮ – ೧೯೨೯ ರಂದುಮಡಿಕೇರಿಯಿಂದ ಬರೆದ ಪತ್ರವನ್ನು ಓದಿದ ಯಾರಿಗಾದರೂ ಅದು… ಅವರ ಮೊದಲ ಕಥೆಯೇನೋ ಎಂದು ಅನಿಸಿದರೆ ಆಶ್ಚರ್ಯವೇನಿಲ್ಲ. ಕಥಾ ಬರವಣಿಗೆಗೆ ಪತ್ರ ಮಾದರಿಯ ತಂತ್ರವನ್ನೇ ಅನುಸರಿಸುತ್ತಿದ್ದ ಗೌರಮ್ಮನವರು ಈ ಕಾಗದದ ಮೂಲಕ ಹೊಸ ಕಥೆಯೊಂದನ್ನು ಹೊಸೆದರೇನೋ ಎಂಬ ಭ್ರಮೆ ಹುಟ್ಟಿಸುಂತಿರುತ್ತಿತ್ತು. ಅಂತಹ ಒಂದು ಪತ್ರ ಇಲ್ಲಿದೆ.

ಗೌರಮ್ಮನವರು ಕಥೆಗಾರ್ತಿ ಎಂದು ಅನಿಸಿಕೊಳ್ಳುವುದಕ್ಕಿಂತ (ಬರೆದ ಮೊದಲಕಥೆ೧೯೩೧) ಮುಂಚೆಯೇ ಅಕ್ಕನ ಮಗ ರಾಮಮೂರ್ತಿಗೆ ಆತ್ಮೀಯತೆಯಿಂದ ಬರೆದ ಈ ಪತ್ರದ ಹಂದರದ ಚಂದ ಹೀಗಿದೆ.

Mercara
೧೪.೮.೧೯೨೯

ರಾಮಮೂರ್ತಿ

ಅದೇಕೆ? ನೀನು ಈಗ ನನಗೆ ಕಾಗದವನ್ನು ಬರೆಯುವುದಿಲ್ಲವೇಕೆ? ಬಹುಶಃ ಉದಾಸೀನವಾಗಿರಬಹುದಲ್ಲವೇ? ಚಿಂತೆಯಿಲ್ಲ. ನಾನು ಬರೆಯುವೆನು. ಆದರೆ ಬರೆಯಲೇನನ್ನು? ಗೋಪಾಲಣ್ಣಯ್ಯನ ವಿವಾಹ ವೃತ್ತಾಂತವನ್ನು ಬರೆಯಲೇ? ಇನ್ನೇನೂ ವಿಶೇಷವಿಲ್ಲದುದರಿಂದ ಬರೆಯುವೆನು ಅದನ್ನೇ.

ನಾಲ್ಕು ದೊಡ್ಡ ಬರೆಗಳ ಮಧ್ಯದಲ್ಲಿ ಒಂದು ಸಾಧಾರಣ ತರಹದ ಹಳೆಯ ನಮೂನೆಯ ಮಹಡಿಯ ಮನೆ.ಮನೆಯ ಇದಿರಿನಂಗಳಕ್ಕೆ ಮುಟ್ಟಿದಂತೆ ಒಂದು ತೋಡು, ಮನೆಯ ಬಲಭಾಗದಲ್ಲಿ ದನಗಳ ಕೊಟ್ಟಿಗೆ, ಎಡಗಡೆಯಲ್ಲಿ ಬಚ್ಚಲು.

ಬಚ್ಚಲಿನಲ್ಲಿಯೂ ತೋಡಿನಲ್ಲಿಯೂ ಆಗುತ್ತಿದ್ದ ಗಲಭೆಯು ವರ್ಣನಾತೀತವಾಗಿದ್ದಿತು. ಬಚ್ಚಲಿನ ಮೇಲೆಲ್ಲಾ ಹೊಗೆಕೆಳಗೆಲ್ಲಾ ನೀರು. ತೋಡಿನಲ್ಲಿ ಪಾತ್ರೆಗಳನ್ನು ಅಲ್ಲಲ್ಲಿ ಬೆಳಗುತ್ತಿರುವುದು,ಸೀರೆಗಳನ್ನು ಒಗೆಯುತ್ತಿರುವುದು, ಒಬ್ಬಿಬ್ಬರ ಜಾರುವಿಕೆ, ಬಾವಿಯಿಂದ ನೀರು ಸೇದುವ ಸೊಬಗು, ಬಟ್ಟೆಗಳನ್ನು ಹಿಂಡುವ ರೀತಿ, ಕಡ್ಡಾಯದ ಕೆಳಗೆ ಹಾಳೆಗಳಿಂದ ಬೆಂಕಿಯನ್ನು ಹೊತ್ತಿಸುವ ರೀತಿ... ಇವೆಲ್ಲವನ್ನು ನೋಡಿದರೆ ಮದುವೆಯ ಮನೆಯ ವಿಜೃಂಭಣೆಯು ವ್ಯಕ್ತವಾಗುತ್ತಿದ್ದಿತು.

ನಾಳೆ ದಿನ ಧಾರೆಯಾದುದರಿಂದ ಇಂದು ಬಹಳ ಕೆಲಸ ಒಂದು ಕಡೆಯಲ್ಲಿ ಗುಡಿಸುವಿಕೆ ಸಾರಿಸುವಿಕೆಯು ನಡೆಯುತ್ತಿದ್ದಿತು. ಆಗಲೇ ಅಡಿಗೆಯವನೊಬ್ಬನು ತಿರುಗಾಡುತ್ತಿದ್ದನು. ಅವನ ಸಹಾಯಕ್ಕೆ ಕೆಲವು ವಿಧವೆಯರು ತರಕಾರಿಯನ್ನು ಕೊಯ್ಯುತ್ತಾ, ಅಡಿಗೆಮನೆಯಿಂದ ಉಗ್ರಾಣಕ್ಕೂ, ಉಗ್ರಾಣದಿಂದ ಅಡಿಗೆ ಮನೆಗೂ ತಿರುಗಾಡುತ್ತಿದ್ದರು.` ತಿಮ್ಮಣ್ಣಾ ಬೇಗ ಅಡಿಗೆಯಾಗದಡೋ!ಎಂದೊಂದು ಕಡೆಯೂ, ‘ಎಂಥಾ ಬೊಜ್ಜಕ್ಕೆ ಕಾಪಿ,ಕುಡಿಯದು ನೀರು ಆಗುತ್ತಿಲ್ಲೆಯೋ?’ ಎಂದು ಒಂದು ಕಡೆಯಲ್ಲಯೂ ಕೂಗಾಡುತ್ತಿರುವುದನ್ನು ಕೇಳಿದವರಿಗೆ ಮನಸ್ಸಿಗೆ ಬಹಳ ಆನಂದವಾಗುತ್ತಿದ್ದಿತು.

೧೨ನೇ ಜೂನ್ ಬುಧವಾರ x x x x x x x x x x x x x x x x ಇಂದು ಧಾರೆಯಾದುದರಿಂದ ರಾ.ಶಿ.ಈಶ್ವರಭಟ್ಟರ ನೆಂಟರಿಷ್ಟರೆಲ್ಲರೂ ಬಂದಿರುವರು. ಚಪ್ಪರದ ಒಂದು ಕಡೆಯಲ್ಲಿ ಹೆಂಗಸರುಕೊಪ್ಪು ಬುಗಡಿಗಳಿಂದ ಅಲಂಕೃತರಾಗಿ ತಲೆಯನ್ನು ಬಿಗಿದುಕಟ್ಟಿ ಪಟ್ಟೆ ಸೀರೆಗಳನ್ನುಟ್ಟು ಕುಳಿತ್ತಿದ್ದರು.

ಇನ್ನೊಂದು ಕಡೆಯಲ್ಲಿ ಗಂಡಸರು ಐದುಮೊಳದ ಪಂಚೆಗಳನ್ನುಟ್ಟು ಹೆಗಲ ಮೇಲೆ ಕೆಂಪುವಸ್ತ್ರವನ್ನು ಹಾಕಿ ಹತ್ತಾರು ಜನರು ಒಂದೊಂದು ಕಡೆಯಲ್ಲಿ ಕುಳಿತು ಎಲೆಯಡಿಕೆ ಹೊಗೆಸೊಪ್ಪಿನಿಂದೊಡಗೂಡಿದ ತಟ್ಟೆಗಳನ್ನು ಮಧ್ಯದಲ್ಲಿಟ್ಟುಕೊಂಡು ಅವುಗಳನ್ನು ಜಗಿಯುತ್ತಾನಂಬ್ರಗಳ ವಿಷಯವನ್ನು, ಹೋಟೇಲುಗಳ ವಿಷಯವನ್ನೂ ಏಕಮನಸ್ಸಿನಿಂದ ಚರ್ಚಿಸುತ್ತಿದ್ದರು.

ಹೆಂಗಸರ ಗುಂಪಿನಲ್ಲಿ ಮದುಮಾಯನ ಸಿದ್ದಿ ಮಾತನಾಡುತ್ತಿದ್ದರು. ಮದುಮಾಯ ವಕಿಲನಡಅವನ ಅಪ್ಪನೂ ವಕೀಲನಡಅವಮ ಅಣ್ಣಂಗೆ ಕಚ್ಚೇರಿಲಿ ಕೆಲಸ ಇದ್ದಡಅಲ್ಲಿ ಕೂತದ್ದು ಅವನ ಅತ್ತಿಗೆಯಡಇದೇ ಹೆಂಗಸರ ಮಾತಿನ ಸಾರಾಂಶ.

ವರನು ತಲೆಯ ಮೇಲೆ ದೊಡ್ಡದಾದ ರುಮಾಲನ್ನಿಟ್ಟು (ನೀನು ಇಲ್ಲಿರುವಾಗ ನೋಡಿರಬಹುದು: ಬಳೆಸಣ್ಣಪ್ಪ ಶೆಟ್ರ ರುಮಾಲಿನ ತರದ್ದು) ಬಂದನು. ಆತ ದೂರದಲ್ಲಿ ಬರುವಾಗಲೇ ಕೌಪೀನಧಾರಿ ಯಾದ ಮಾವನು ಬಂದುಬಂದಿರೋಳಿಎಂದು ಕುಶಲ ಪ್ರಶ್ನೆಯನ್ನು ಮಾಡಿ ವರನನ್ನು ಧಾರಾಮಂಟಪಕ್ಕೆ ಕರೆತಂದು ಕುಳ್ಳಿರಿಸಿದನು.

ಮಹೂರ್ತಕ್ಕೆ ಸರಿಯಾಗಿ ವಧುವು ಬಂದಳು. ಎಡಗೈಯ್ಯಲ್ಲೊಂದು ವಾಲೆಕೊಡೆ, ಬಲಗೈಯ್ಯಲ್ಲಿ ದರ್ಭೆಕಟ್ಟು, ತಲೆಯಲ್ಲೊಂದು ಹೊರೆ ಹೂ: ಇನ್ನು ಒಡವೆಗಳ ವಿಜೃಂಭಣೆಯನ್ನು ಕೇಳಬೇಕೆ! ಆದರೆ ಅವುಗಳ ಹೆಸರುಗಳು ನನಗೆ ತಿಳಿಯದಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ಹೊರಲಾರದ ಹೊರೆಯನ್ನು ಹೊತ್ತು ನಡೆಯಲಾರದ ಎತ್ತು, ಕಡೆ ಕಡೆ ಬಾಗಿಕೊಂಡು ಬರುವಾಗ, ಗಂಟೆಗಳ ಗಿಣಿಗಿಣಿದವನ್ನು ನಾದವನ್ನು ಬಿತ್ತರಿಸುವಗಗ್ಗರಗಳ ಶಬ್ದವನ್ನು ಮಾಡುತ್ತಾ ಬರುವ ವಧುವನ್ನು ನೋಡಿ ಮದುಮಾಯನಿಗೆ ಸಂತೋಷವಾಯಿತೆಂದು ಬೇರೆ ಹೇಳಬೇಕೇನು? ಧಾರೆಯಾಯ್ತು. ಊಟಮುಗಿಯಿತು. ಮದುಮಾಯನೊಡನೆ ಮದುಮಾಳು ಗಟ್ಟ ಹತ್ತಬೇಕಾಯ್ತು.

ನಾವೆಲ್ಲರೂ ಆರೋಗ್ಯದಿಂದಿರುವೆವು ನೀನು ಸಹ ಹುಶಾರಾಗಿರಬಹುದೆಂದು ಭಾವಿಸುತ್ತೇನೆ. ನಿಮ್ಮ ಬಾಳೆತೋಟದ ನಾರಾಯಣೈಯ್ಯನವರ ಹೆಂಡತಿಸತ್ತು ಹೋದದ್ದು

 ನಿನಗೆ ಗೊತ್ತಿರಬಹುದು. ಕೃಷ್ಣದಾಸನು ಪ್ರೇಮಪೂರ್ವಕವಾದ ನಮಸ್ಕಾರಗಳನ್ನು ತಿಳಿಸಲು ನನ್ನಲ್ಲಿ ಹೇಳಿರುವನು. ನಿನಗೆ ಪರೀಕ್ಷೆ ಯಾವಾಗ? ಅಪ್ಪಯ್ಯ ಕರೆಯುತ್ತಿದ್ದಾರೆ. ಆದುದರಿಂದ ಕಾಗದವನ್ನು ಅಂತ್ಯಗೊಳಿಸುತ್ತೇನೆ.

ಇತಿ
ಗೌರಮ್ಮ

`ನಮ್ಮೂರಿಗೆ ಈಗ ಪಿ.ಮೇದಪ್ಪ ಹೈಕೋರ್ಟು ವಕೀಲರು ಸಬಾರ್ಡಿನೇಟ್ ಜಡ್ಜಿ. ನಿನಗಿದು ತಿಳಿದಿರಬಹುದು. ಈಗ ಕೋರ್ಟಿನಲ್ಲಿ ಹೆಚ್ಚೇನೂ ಕೆಲಸವಿಲ್ಲ. ನವಂಬರ್ ನಲ್ಲಿ ಇಲ್ಲಿಗೆ ವೈಸ್ರಾಯರು ಬರುತ್ತಾರಾದುದರಿಂದ ರಸ್ತೆಗಳ ಕೆಲಸವು ಅತಿ ಜಾತ್ರತೆಯಿಂದ ನಡೆಯುತ್ತಿದೆ. ಮಳೆ ಹೆಚ್ಚಿಲ್ಲ ನಮಗೆ ನೀರು ರಾತ್ರೆ ಬರುತ್ತದೆಷ್ಷೆ. ಈಗ ಇತರ ಊರುಗಳಂತೆ ಕೊಡಗೂ ಖೂನಿಗಳ ತೌರುಮನೆಯಾಗಿದೆ. ಮೂವರಿಗೆ ಪಾಶಿಯಾದರೂ ಈಗ ಒಂದು ತಿಂಗಳೊಳಗೆ ಏಳು ಖೂನಿಗಳಾದವು.

‘ಗಣಪಯ್ಯನಿಗೆ ಒಂದು ಮಗುವಾಗಿದೆ. ಅವನ ಹೆಂಡತಿಗೆ ಕಾಯಿಲೆಯಾಗಿತ್ತು. ಮೊನ್ನೆ ದಿನ ಸೋಮವಾರ ಪೇಟೆಯಿಂದ ಮಕ್ಕಿಗೆ ಹೋಗಿರುತ್ತಾನೆ. ಈಗ ದೇವಮ್ಮನಿಗೆ ಕಾಯಿಲೆ ಸ್ವಲ್ಪ ವಾಸಿ ವೆಂಕಪ್ಪಯ್ಯನು ಈಗ ಸೋಮುವಾರಪೇಟೆಯಲ್ಲಿಲ್ಲ. ಅವನು ಮೈಸೂರಿಗೆ ಓಡಿಹೋಗಿದ್ದಾನೆ.

ಗೌರಮ್ಮ

ಆಗಷ್ಟೇ ಮೆಟ್ರಿಕ್ ಪಾಸಾಗಿ, ಸ್ವಂತ ಸಂಸಾರವನ್ನು ನಿಭಾಯಿಸ ಹೊರಟಿದ ಹದಿನೇಳರ ಹರೆಯದ ಗೌರಮ್ಮನವರು ತಮ್ಮ ಈದು ಹಗೂ ಸಾಹಿತ್ಯಿಕ, ಸಾಂಸ್ಕೃತಿಕ, ಚಟುವಟಿಕೆಗಳ ನಡುವೆಯೂ ಆ ಕುಟುಂಬದ ಹತ್ತಿರದ ಬಳ್ಳಿಗಳ ಜತೆ ಮಾತ್ರವಲ್ಲ ದೂರದ ಸಂಬಂಧಿಗಳ ಜತೆಯೂ ಸೌಹಾರ್ದಯುತ ಸಂಬಂಧವನ್ನು ಜೋಪಾನವಾಗಿ ಕಾಪಾಡಿಕೊಳ್ಳುತ್ತಿದ್ದರು.

ಗೌರಮ್ಮನವರು ಹೈಸ್ಕೂಲ್ ಶಿಕ್ಷಣ ಮುಗಿಸಿದ ನಂತರದಲ್ಲಿ ಗೆಳತಿ ಮುತ್ತಮ್ಮನ ಜತೆ ಪತ್ರವ್ಯವಹಾರವನ್ನಿರಿಸಿಕೊಂಡವರು… ಮುಂದೆ ಆ ಮುತ್ತಮ್ಮ ಪಂಜಾಬಿನ ಗೆಳೆಯ ರಸ್ತೋಗಿಯನ್ನು ವರಿಸಿ ‘ಪದ್ಮಾವತಿ ರಸ್ತೋಗಿ’ ಯಾಗಿ ಬದಲಾದ ನಂತರವೂ ತಮ್ಮ ಪತ್ರಸ್ನೇಹವನ್ನು ಮುಂದುವರೆಸುತ್ತ… ಆಕೆಯಿಂದ ಸಕಾಲದಲ್ಲಿ ಸಾಹಿತ್ಯದ ಸಲಹೆ – ಸಹಕಾರವನ್ನು ಪಡೆದು ತಮ್ಮ ಪಾಶ್ಚಾತ್ಯ ಓದಿನ ದಾರಿಯನ್ನು ಸ್ಪಷ್ಟಪಡಿಸಿಕೊಂಡರು.

ಅಂತೆಯೇ ಸ್ನೇಹಜೀವಿ ಗೌರಮ್ಮನವರು ಬಲು ವಿಶ್ವಾಸದಿಂದ ದ. ಬಾ. ಕುಲಕರ್ಣಿ ಅವರಿಗೆ ಬರೆದ ಎರಡು ಪತ್ರಗಳ ತುಣುಕುಗಳು ಇಲ್ಲಿವೆ.

‘ನಿಮ್ಮ ಕಾಗದ ಬಂದಾಗ ನಾನು ಟೆನ್ನೀಸು ಆಡುತ್ತಿದ್ದೆ. ಟಪಾಲಿನವನು ಕಾಗದ ಕೊಟ್ಟೊಡನೆಯೆ ನೋಡಿದೆ – ಯಾರದ್ದೆಂದು; ನಿಮ್ಮದು ! ಇಷ್ಟರವರೆಗೆ ಗೆಲ್ಲುತ್ತ ಬಂದವಳು, ನಿಮ್ಮ ಕಾಗದ ಓದುವ ಆತುರತೆಯಲ್ಲಿ ಸೋತೇ ಹೋದೆ.ನನಗೆ ಇದಿರಾಗಿ ಆಡುತ್ತದ್ದವರು, ನಿಮ್ಮನ್ನು ಬಹಳ ಹೊಗಲಿದರು; ನಿಮ್ಮ ಕಾಗದದಿಂದಾಗಿಗೆಲುವು ಅವರದ್ದಾಯ್ತಲ್ಲಾ – ಎಂದು. ನಾನು ನಿಮ್ಮ ಕಾಗದ ಸ್ವಲ್ಪ ದೂರಿದೆನೆಂದರೆ ನಿಮಗೆ ಕೋಪ ಬರುವುದೇನೋ? ಅಂತೂ ನಾವಿಬ್ಬರೂ ಜೋತೆಯಾಗಿಯೇ ಓದಿದೆವು. ಓದಿ, ಸೋತ ಬೇಸರ ಮರೆಯಿತು; ಅಷ್ಟೊಂದು ಚೆನ್ನಾಗಿದೆ ನಿಮ್ಮ ‘ಕುಳಿತ ಕನ್ನೆ’ ‘ನನಗೆ ಎಲ್ಲ ಕಡೆಯಿಂದಲೂ ಪತ್ರ ಬರುತ್ತಿರಬೇಕು – ಎಂದರೆ ಬಹಳ ಇಷ್ಟ. ಆದರೆ ನಾನು ಸೋಮಾರಿ, ಸಮಯಕ್ಕೆ ಉತ್ತರ ಬರೆಯದೆ ಎಷ್ಟೋ ಜನರನ್ನು ಬೇಸರಪಡಿಸಿದ್ದೇನೆ’

(ಪತ್ರದ ಸಂದರ್ಭ: ದ. ಬಾ. ಕುಲಕರ್ಣಿ ಅವರು ಧಾರವಾಡದಿಂದ ತಮ್ಮ ಕಥೆಯೊಂದನ್ನು ಗೌರಮ್ಮನವರ ಅವಲೋಕನಕ್ಕಾಗಿ ಕಳುಹಿಸಿದಾಗ ಗೌರಮ್ಮನವರು ಆ ಪತ್ರಕ್ಕೇ ಪ್ರತಿಕ್ರಿಯಿಸಿದ್ದು)

“ಬಳ್ಳಾರಿ ಸಾಹಿತ್ಯ ಸಮ್ಮೇಳನವಾಗಿ ಒಂದು ವಾರ ಕಳೆದರೂ ನಿಮ್ಮ ಪತ್ರವೇ ಇಲ್ಲ. ನನಗಂತೂ ನಿಮ್ಮ ಪತ್ರದ ಹಾದಿ ನೋಡಿನೋಡಿ ಕಣ್ಣುನೋವು ಬಂದು ಹೋಗಿದೆ. ಸಾಹಿತ್ಯ ಸಮ್ಮೇಳನದ ವಿಷಯ ಪೇಪರುಗಳಲ್ಲಿ ಓದುವುದಕ್ಕಿಂತಲೂ ನಿಮ್ಮ ಪತ್ರದಲ್ಲಿ ಓದಿದರೆ ಹೆಚ್ಚು ಚೆಂದವೆಂದು ನನ್ನ ಭಾವನೆ. ಆದರೆ ನೀವು ಎಲ್ಲವನ್ನೂ – ಒಂದೂ ಬಿಡದೆ – ನನ್ನ ಗೆಳತಿ ಕುಮಾರಿ ಪದ್ಮಾವತಿಯ ವಿಷಯ ಸಹ – ಬರೆಯಬೇಕೆಂದು ಆಸೆ ನನಗೆ. ಪತ್ರಿಕೆಗಳಲ್ಲಿ ಕೇವಲ ಣ – ನ ದ ಜಗಳಗಳಲ್ಲದೆ ಬೇರೇನೂ ಇಲ್ಲ ಹೇಗೆ? ಬರೆಯುವುರೋ ಇಲ್ಲವೋ?” (ಪತ್ರದ ಸಂದರ್ಭ: ಬಳ್ಳಾರಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ದ.ಬಾ. ಕುಲಕರ್ಣಿ ಅವರು ಗೌರಮ್ಮನವರಿಗೆ ಕೊಟ್ಟ ಮಾತಿನಂತೆ ಸಮ್ಮೇಳನದ ಕುರಿತು ಪತ್ರ ಬರೆಯದೆ ಇದ್ದಾಗ ಗೌರಮ್ಮನವರು ಕಳುಹಿಸಿದ ‘ನೆನಪಿನ ಓಲೆ’)

ಕೆಲವೊಮ್ಮೆ ಅಂರ್ತಮುಖಿಯಾಗಿರುತ್ತದ್ದ ಗೌರಮ್ಮನವರು ಉತ್ತಮ ಮಾತುಗಾರ್ತಿ ಕೂಡಾ ಹೌದು. ಆದರೆ ಅವರು ವೇದಿಕೆ – ಸಮಾರಂಭ – ಸಭೆಗಳಲ್ಲಿ ಮಾತನಾಡಲು ಹಿಂಜರಿಯುತ್ತಿದ್ದರು. ಸಾಹಿತ್ಯದ ಸಭೆ – ಸಮಾರಂಭಗಳಲ್ಲಿ ಶ್ರೋತೃವಾಗಿ ಆಥವಾ ಸಾಹಿತ್ಯಿಕ ಪರಿಚಾರಿಕೆಯಾಗಿ ಪಾಲ್ಗೊಳ್ಳಲು ಸದಾ ಮುಂದಿರುತ್ತಿದ್ದ ಗೌರಮ್ಮನವರು… ಸಭೆಯಲ್ಲಿ ಸಾಹಿತ್ಯಿಕವಾಗಿ ಚರ್ಚಿಸಬೇಕಾದ ಸಂದರ್ಭದಲ್ಲಿ ತಕ್ಷಣವೇ ಮುಜುಗರದಿಂದ ಹಾಗು ಭಯದಿಂದ ಹಿಂಜರಿಯುತ್ತಿದ್ದರು – ಮಾತೇ ಆಡುತ್ತಿರಲಿಲ್ಲ.

ಗೌರಮ್ಮನವರ ಜೀವನಪ್ರೀತಿ, ಜೀವನದೃಷ್ಟಿ, ಸಾಮೂಹಿಕ ಬದುಕಿನಲ್ಲಿ ಅವರಿಗಿದ್ದ ಆಸ್ಥೆ, ಅವರೊಳಗಿದ್ದ ಆತ್ಮವಿಶ್ವಾಸ, ಲಿಂಗಭೇದವಿಲ್ಲದ ಸ್ನೇಹಶೀಲತೆ ಸರಳತೆ ಪ್ರಗತಿಶೀಲತೆ, ನಿರ್ಧಾರದೊಳಗಿನ ದೃಢತೆ, ನಾಡು – ನುಡಿಯ ಬಗೆಗೆ ಅವರಿಗಿದ್ದ ಸಾಮಾಜಿಕ ಅರಿವು, ಒಟ್ಟಿನಲ್ಲಿ ಅವರ ಮಾನವೀಯ ಅಂತಃಕರಣ, ಸುಸಂಸ್ಕೃತ ನಡವಲಿಕೆ, ಸನಾಜಮುಖಿ – ಜೀವನಾಭಿಮುಖಿ ಹಾಗೂ ಕ್ರಿಯಾಮುಖಿ ಸ್ವಭಾವದ ಪರಿಚಯವನ್ನು ಸಾಹಿತಿ ದ.ಬಾ. ಕುಲಕರ್ಣಿ ಅವರು ಗೌರಮ್ಮನವರ ಸಾವಿನ ಸಂದರ್ಭದಲ್ಲಿ ಬರೆದಿರುವ ‘ನಾನು ಕಂಡ ಗೌರಮ್ಮ’ ಎಂಬ ಲೇಖನದಲ್ಲಿ (೨೦-೦೪-೧೯೩೯) ಹೀಗೆ ಪ್ರತಿಬಿಂಬಿಸಿದ್ದಾರೆ (ಈ ಲೇಖನದಲ್ಲಿ ಅವರು ೧೯೩೯ ರ ಅಗಸ್ಟ್ ನಲ್ಲಿ ತಾವು ಪ್ರಕಟಿಸಿದ ‘ಕಂಬನಿ’ ಕಥಾಸಂಕಲನದ ಮೊದಲ ಆವೃತ್ತಿಯಲ್ಲಿ ಅಳವಡಿಸಿಕೊಂಡಿದ್ದಾರೆ). ಆ ಲೇಖನದಲ್ಲಿ ಭಾಗಶಃ ರೂಪ ಇಲ್ಲಿದೆ.

ಜಮಖಂಡಿಯ ಕನ್ನಡ ಸಾಹಿತ್ಯ ಸಮ್ಮೇಳನದ ಮಂಟಪದಲ್ಲಿ ಗೌರವರ್ಣದ, ಅಷ್ಟು ಎತ್ತರವಲ್ಲದ, ತೆಳ್ಳಗಿದ್ದರೂ ಹಾಗೆ ಕಾಣದ, ಒಬ್ಬ ಮಹಿಳೆ ಕುಳಿತಿದ್ದನ್ನು ನೋಡಿದೆ: ಉಟ್ಟದ್ದೊಂದು ಖಾದಿಯ ಬಟ್ಟೆ: ತೊಟ್ಟದ್ದೂ ಖಾದಿಯೇ. ಮೂಗಿಗೊಂದು ಹರಳಿನ ಮೂಗು ಬಟ್ಟು. ಉಳಿದ ಯಾವ ಆಭರಣವೂ ಇಲ್ಲ. ಕಣ್ಣುಗಳಲ್ಲಿ ಅದೊಂದು ಬಗೆಯ ಒಳನೋಟ. ಮುಖದಲ್ಲಿ ಅದೇನೋ ಒಂದು ಗಂಭೀರಭಾವ. ಆದರೂ ಯಾರಾದರೂ ಮಾತನಾಡಿಸಿದರೆ ಮೊದಲು ನಗೆ, ಆಮೇಲೆ ಮಾತು. ಒಮ್ಮೊಮ್ಮೆ ನಗುವಷ್ಟೆ ನುಸುಳಿ, ಮಾತುಬಾರದೆ ಉಳಿಯುತ್ತಿತ್ತು. ಒಮ್ಮೆ ನೋಡಿದರೆ ಸಾಕು: ಇವರ ಪರಿಚಯವಾಗಬೇಕು ಎನಿಸುವಂತಹ ವ್ಯಕ್ತಿತ್ವ.

ಅವರು ಕೊಡಗಿನವರೆಂದು ತಿಳಿದಾಗ ನನಗೆ ತುಂಬ ಕುತೂಹಲವಾಯಿತು. ಮತ್ತೆ ವಿಚಾರಿಸಿದಾಗ, ಅವರೇ ಶ್ರೀಮತಿ ಗೌರಮ್ಮಮೆಸೆಸ್ ಬಿ.ಟಿ.ಜಿ. ಕೃಷ್ಣಎಂದು ತೀಳಿದು ಸಂತೋಷವಾಯಿತು.

ಅದಕ್ಕೂ ಮೊದಲುರಂಗವಲ್ಲಿಕಥಾಸಂಗ್ರಹದ ಕಾರ್ಯದಲ್ಲಿ, ಪತ್ರವ್ಯವಹಾರದಿಂದ ಅವರ ಪರಿಚಯವಾಗಿತ್ತು.

`ರಂಗವಲ್ಲಿಯಗೌರಮ್ಮನವರಮನುವಿನ ರಾಣಿಎಂಬ ಕಥೆಯ ಬಗ್ಗೆ ನನಗೆ ಬಂದ ಕೆಲವು ಪ್ರಶಂಸೆಗಳನ್ನು ಅವರಿಗೆ ತಿಳಿಸಿದಾಗ, ಅವರು ತಮ್ಮ ಕತೆಯ ವಿಷಯಕ್ಕಿದ್ದ ಅತೃಪ್ತಿಯನ್ನು ತಾವೇ ಸೂಚಿಸಿದರು. ಆಗಲೇ ಅವರು ಹೊಗಳಿಕೆಗೆ ಹಿಗ್ಗುವವರಲ್ಲ ಎನಿಸಿತು

ತಮ್ಮ ಬರಹಗಳಿಗೆ ಶ್ರೀಮತಿ ಬಿ.ಟಿ.ಜಿ. ಕೃಷ್ಣ ಎಂದೇ ತಮ್ಮ ಹೆಸರನ್ನು ಬರೆದುಕೊಳ್ಳುತ್ತದ್ದ ಗವರಮ್ಮನವರನ್ನು – ಕೊಡಗಿನ ಹೊರಗಿರುವ ಓದುಗರು, ಸಾಹಿತ್ಯ ಪ್ರೇಮಿಗಳು,ಸಾಂಸ್ಕೃತಿಕ ಲೋಕದ ಸಂಗಾತಿಗಳೆಲ್ಲ ಬಲು ಅಕ್ಕರೆಯಿಂದ ‘ಕೊಡಗಿನ ಗೌರಮ್ಮ’ ಎಂದೇ ಕರೆದು ಗೌರಮ್ಮನವರ ಜತೆಗೆ ಕೊಡಗನ್ನೂ ಜನಪ್ರಿಯಗೊಳಿಸಿದರು.

೧೯೩೧ರಲ್ಲಿ ಗಂಡು ಮಗುವೊಂದರ ತಾಯಿಯಾದ ಗೌರಮ್ಮನವರು ಅದೇ ವರ್ಷ ಸ್ತ್ರೀ ವಿಮೋಚನೆ. ಬಂಡಾಯದ ಧ್ವನಿ ಇರುವ ತನ್ನ ಮೊದಲ ಕಥೆ ‘ಪುನರ್ ವಿವಾಹ’ವನ್ನು ಕನ್ನಡ ಸರಸ್ವತ ಲೋಕಕ್ಕೆ ನೀಡಿದರು. ಗವರಮ್ಮನವರ ಬದುಕಿನಲ್ಲಿ ಮಗ ‘ವಸಂತ’ ನಾಗಮನವಾದ ನಂತರ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಇನ್ನಷ್ಟು ಕ್ರಿಯಾಶೀಲರಾದರು. ಕುಮಾರವ್ಯಾಸ ಮತ್ತು ಉಮರ್ ಖಯಾಮ್ ಕಾವ್ಯದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದ ಗೌರಮ್ಮನವರು, ಜನಪದ ಗೀತೆಗಳನ್ನು ಸೊಗಸಾಗಿ ಹಾಡುತ್ತಿದ್ದರಲ್ಲದೆ ಜನಪದ ಗೀತೆಗಳ ಸಂಗ್ರಹಣೆ ಕೂಡ ಅವರದ್ದೊಂದು ಹವ್ಯಾಸವಾಗಿತ್ತು. ಅವರು ತುಳವ ದುಡಿಮೆಯಾಳುಗಳಲ್ಲಿ ಪಾಡ್ದನ ಗಳನ್ನೂ ಹಡಿಸಿಕೊಳ್ಳುತ್ತಿದ್ದರಂತೆ.

ತಮ್ಮ ಮೊದಲ ಕಥೆ ‘ಪುನರ್ ವಿವಾಹ’ ದ ನಂತರ… ಮತ್ತೆ ಅಳುಕಿನಿಂದ ಹಿಂತಿರುಗಿ ನೋಡದೆ, ಕಥೆ ಬರೆಯಲಾರಂಭಿಸಿದ ಗೌರಮ್ಮನವರು – ಅವರ ಜೀವನವನ್ನು ೧೯೩೯ ಎಪ್ರಿಲ್ ೧೨ ರಂದು, ಹರದೂರಿನ ಹಟ್ಟಿಹೊಳೆಯು ನುಂಗಿ ನೀರು ಕುಡಿಯುವವರೆಗೂ ಒಟ್ಟು ೨೧ ಕಥೆಗಳನ್ನು ಬರೆದರು.

ಅಂದಿನ ಸಮಾಜದಲ್ಲಿದ್ದ ಸಂಪ್ರದಾಯ, ಬದಲಾಗುತ್ತಿರುವ ಜೀವನಶೈಲಿ, ಹೆಣ್ಣು – ಗಂಡುಗಳ ಆಕರ್ಷಣೆ – ವಿಕರ್ಷಣೆ, ತಮ್ಮ ಮಹಿಳಾ ಲೋಕದಲ್ಲಿನ ಕನಸು – ಆದರ್ಶಗಳಚಿತ್ರಣವನ್ನು ಅವರು ತಮ್ಮ ಎಲ್ಲ ಕಥೆಗಳಲ್ಲಿ ಯಥಾವತ್ತಾಗಿ ಚಿತ್ರಿಸಲು ಪ್ರಯತ್ನಿಸಿದರು.

ಗೌರಮ್ಮನವರು ಬರೆದಿರುವ ಒಟ್ಟು ೨೧ ಕಥೆಗಳನ್ನು ಅವುಗಳಲ್ಲಿರುವ ಕಥಾವಸ್ತುಗಳ ಹಿನ್ನೆಲೆಯಲ್ಲಿ ಮುಖ್ಯ ಮೂರು ವರ್ಗಗಳಾಗಿ ವಿಭಾಗಿಸಬಹುದು.

೧. ಬಾಲ್ಯ ವಿವಾಹ, ವಿಧವಾ ಸಮಸ್ಯೆ ವಿಧವಾ ವಿವಾಹದ ಸುತ್ತ ಹೆಣೆದಿರುವ ಕಥೆಗಳು

೨. ಪ್ರೀತಿ ಪ್ರಣಯ ಕೇಂದ್ರಿತ ಸಂಭ್ರಮ ಮತ್ತು ವಿಷಾದದ ಕಥೆಗಳು

೩. ವರದಕ್ಷಿಣೆ ಸಮಸ್ಯೆ – ವಿದೇಶಿ ಶಿಕ್ಷಣ ವ್ಯಾಮೋಹಕ್ಕೆ ಸಂಬಂಧಿಸಿದ ಕಥೆಗಳು

ಇವರ ಈ ಎಲ್ಲ ಕಥೆಗಳು ಅಂದಿನ ಮೌಲಿಕ ಹಾಗೂ ಜನಪ್ರಿಯ ಪತ್ರಿಕೆಗಳಾದ ‘ಜಯಕರ್ನಾಟಕ’ ‘ರಾಷ್ಟ್ರಬಂಧು’ ‘ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದವು. ಅವರ ಒಟ್ಟು ೨೧ ಕಥೆಗಳಲ್ಲಿ ೧೨ ಕಥೆಗಳು ಅವರ ಮರಣಾನಂತರ ಪ್ರಕಟಗೊಂಡ ಪ್ರಥಮ ಕಥಾಸಂಕಲನ ‘ಕಂಬನಿಯಲ್ಲು ಇನ್ನುಳಿದ ೯ ಕಥೆಗಳು ಎರಡನೆಯ ‘ಚಿಗುರು ಕಥಾಸಂಕಲನದಲ್ಲೂ ಅಡಕಗೊಂಡಿವೆ.

೧೯೩೭ರಲ್ಲಿ ಜಮಖಂಡಿಯಲ್ಲಿ ಬೆಳ್ಳಾವೆ ವೆಂಕಟನಾರಾಯಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕೊಡಗಿನ ಪ್ರತಿನಿದಿಯಾಗಿ ಏಕಾಂಗಿಯಾಗಿ ಭಾಗವಹಿಸಿ ಬಂದ ದಿಟ್ಟೆ – ಉತ್ಸಾಹಿ ಈ ಗೌರಮ್ಮನವರು. ದಕ್ಷಿಣ ಕನ್ನಡದ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಯಾದ ಉಡುಪಿಯ ಗೆಳೆಯರ ಬಳಗವು ಇವರ ಕತೆಯೊಂದಕ್ಕೆ ಚಿನ್ನದ ಪದಕ ನೀಡಿ ಗೌರವಿಸಿದ್ದರಿಂದ ಅವರ ಕಥೆ ಬರೆಯುವ ಉತ್ಸಾಹಕ್ಕೆ ಮತ್ತಷ್ಟು ಚೈತನ್ಯ ಸಿಕ್ಕಂತಾಗಿತ್ತು.

ಗೌರಮ್ಮನವರು ಜೀವಿಸಿರುವಾಗಲೆ ಪ್ರಕಟಿಸಲು ಯೋಜಿಸಿದ್ದ (ನಿಧನರಾಗುವದಕ್ಕಿಂತ ೬ ತಿಂಗಳ ಮೊದಲೆ ಪ್ರಕಟಿಸಬೇಕಾಗಿದ್ದ) ಅವರ ಮೊದಲ ಕಥಾಸಂಗ್ರಹಕ್ಕೆ ‘ಚಿಗುರು’ ಎಂಬ ಹೆಸರಿಡಲಾಗಿತ್ತು. ಆದರೆ ಸಾಯುವುದಕ್ಕಿಂತ ಒಂದರೆಡು ದಿನಗಳ ಹಿಂದೆ ಆ ಸಂಕಲನದ ಹೆಸರನ್ನು ‘ಕಂಬನಿ’ ಎಂದು ಮಾರ್ಪಡಿಸಬೇಕೆಂದು ಪ್ರಕಾಶಕರಲ್ಲಿ ಗೌರಮ್ಮನವರು ಕೇಳಿಕೊಂಡಿದ್ದರು. ತಮ್ಮ ಸಾವಿನ ಬಗ್ಗೆ ಪೂರ್ವಸೂಚನೆ ಇತ್ತು ಎಂಬಂತೆ ತಮ್ಮ ಪ್ರಥಮ ಸಂಕಲನದ ಶೀರ್ಷಿಕೆಯನ್ನು ಬದಲಿಸಿ ಬಿಟ್ಟು, ತನ್ನ ಆ ಪ್ರಕಟಿತ ಪುಸ್ತಕವನ್ನು ನೋಡದೆಯೇ ಮತ್ತೆಂದೂ ಬರಲಾಗದ ಜಗತ್ತಿಗೆ ನಡೆದ ಗೌರಮ್ಮನವರ ಬಗ್ಗೆ, ಆ ಪುಸ್ತಕದ ಪ್ರಕಾಶಕರು ದುಃಖಿತರಾಗಿ ಹೀಗೆನ್ನುತ್ತಾರೆ.

ಮೊನ್ನೆ ಮೊನ್ನೆ ಗೌರಮ್ಮನವರು ‘ಚಿಗುರುಎಂಬ ತಮ್ಮ ಕಥಾ ಸಂಕಲನದ ಹೆಸರನ್ನು ‘ಕಂಬನಿ ಎಂದು ಮಾರ್ಪಡಿಸಿ, ತಾವು ಪುಸ್ತಕ ನೋಡದೆ ಕನ್ನಡಿಗರೆಲ್ಲ ಕಂಬನಿಗರೆಯುವಂತೆ ಮಾಡಿ, ನಮ್ಮನ್ನಗಲಿ ಹೋದರು. ಇವರ ಕಥೆಗಳಿಂದ ಚಿಗುರಿದ ಹೆಣ್ಣು ಮಕ್ಕಳ ಸಾಹಿತ್ಯ, ಕನ್ನಡ ಸಾಹಿತ್ಯದಲ್ಲಿ ಮಂಗಲಪ್ರದವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ, ಇವರ ಮರಣದಿಂದ ಕನ್ನಡ ನಾಡೇ ಮರುಗುವಂತಾಯಿತು.`ಓ’ ಗೆಡದ ನಾಡಿಗೆ ನಡೆದು ಬಿಟ್ಟರವರು. ಈ ಎಲ್ಲ ಸವಿ ನೆನಪುಗಳ ಹಿಂದೆ ಒಂದು ಕರಾಳ ಸತ್ಯವು ತಾಂಡವವಾಡಿ ಅವರ ಬಳಗವನ್ನೂ – ಕನ್ನಡ ನಾಡನ್ನೂ ಅಪಾರ ಶೋಕಕ್ಕೀಡು ಮಾಡಿದೆ – ಎಂದು.