ಹಿರಿಯರಾದ ಶ್ರೀ ಬಿ.ಎಸ್ಕೆ. ಅವರಲ್ಲಿ
ಪ್ರಣಾಮಗಳು,

ನಿಮ್ಮ ‘ಕನ್ನಡದ ಕೋಗಿಲೆ….’ ಇತ್ತೀಚೆಗೆ ಓದಿದೆ. ನನಗೆ ನಿಮ್ಮಲ್ಲಿ ಅಸೂಯೆ ಮೂಡಿದೆ. ಇದಕ್ಕೆರಡು ಕಾರಣಗಳು. ಪ್ರಥಮತಃ ನಿಮ್ಮ ಹಾಗೂ ರಾಯರ ಸುದೀರ್ಘ ಒಡನಾಟ, ಆ ಸಿರಿ ನನಗೆ ಲ್ಯವಾಗಲಿಲ್ಲವಲ್ಲಾ ಎಂಬ ನೋವು. ಎರಡನೆಯದಾಗಿ ನಿಮ್ಮ ಎಫರ್ಟಲೆಸ್ ನೆರೇಷನ್. ಅದೆಷ್ಟು ಸಲೀಸಾಗಿ, ಪದಗಳೊಡನೆ ಸರ್ಕಸ್ ಮಾಡದೆಯೇ ನಿಮ್ಮ, ರಾಯರ ಸುಮಧರ ಬಾಂಧವ್ಯವನ್ನು ಪಿಕ್ಚರೈಸ್ ಆಗಿ ನಮಗೆ ತಲುಪಿಸಿದ್ದೀರಲ್ಲ! ಸಿಂಗಲ್ ಸಿಟಿಂಗ್ ಡಿಮಾಂಡ್ ಮಾಡುವ ನಿಮ್ಮ ಪುಸ್ತಿಕೆ ಎಲ್ಲರೂ ಓದಲೆಂಬುದು ನನ್ನ ಆಶಯ.

ಕೊನೆ ಕೊನೆಗಂತೂ ಬರವಣಿಗೆ ಹೃದಯ ಕಲಕುತ್ತದೆ. ನಿಮಗೆ ರಾಯರೊಡನೆ ಇದ್ದ ಸಹೋದರತ್ವದ ಪರಿ ಒಂದು ಪೂರ್ಣಪ್ರಮಾಣದ ಸುಂದರ ಜೀವನ ಚರಿತ್ರೆಯಾಗಿಯೇ ಮೂಡಿಬರುವುದೇನೋ!

“All that lives must die, passing through nature to eternity”
-Shakespeare

And Mr Kalinga Rao can be of no exception.

 

ಭವದೀಯ
ಟಿ.ಜಿ.ಎನ್.ಮೂರ್ತಿ
ಸಂಪಾದಕ
ಕರ್ನಾಟಕ ಗೆಜೆಟಿಯರ್
ಬೆಂಗಳೂರು
೮-೧೧-೯೯

* * *