ಮಿತ್ರರೇ,

ತಮ್ಮ ಭಾನುವಾರದ ಸಂಚಿಕೆಗಳಲ್ಲಿ, ‘ಧಾರಾವಾಹಿ’ಯಾಗಿ ಬಂದ ‘ಕಾಳಿಂಗರಾವ್ ನೆನಪು’ ಮಾಲಿಕೆ, ನನಗೆ ತುಂಬಾ ಸಂತೋಷವನ್ನು ತಂದುಕೊಟ್ಟಿತು. ಲೇಖಕರಾದ ಬಿ.ಎಸ್. ಕೇಶವರಾವ್‌ ಅವರ ಸರಳವೂ ನಿರ್ದುಷ್ಟವೂ ಆದ ಕನ್ನಡ ಕಾಳಿಂಗರಾಯರ ಸಾಂಸ್ಕೃತಿಕ ಬದುಕನ್ನು ತೆರೆದು ತೋರಿಸುವಲ್ಲಿ ಸಫಲವಾಗಿದೆ.

ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಬೆಸುಗೆಯಾಗಿದ್ದ ಕಾಳಿಂಗರಾಯರ ಬದುಕು, ನಾಲ್ಕು ದಶಕಗಳ ನಿರಂತರ ಜೀವನೋತ್ಸಾಹದ ನೆನಪನ್ನು ಮೂಡಿಸುವಲ್ಲಿ ಲೇಖನಗಳು ಸಫಲವಾಗಿವೆ. ಪ್ರತಿ ವಾರವೂ ಕಾಯುವಂತೆ ಮಾಡಿವೆ. ಆ ಲೇಖನಗಳೆಲ್ಲ ಪುಸ್ತಕ ರೂಪದಲ್ಲಿ ಬಂದರೆ ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಅನುಕೂಲವಾಗುತ್ತದೆ.

ಲೇಖಕ ಬಿ.ಎಸ್. ಕೇಶವರಾವ್ ಅವರಿಗೆ ಅಭಿನಂದನೆಗಳು.

ಮಲ್ಲೇಪುರಂ ಜಿ. ವೆಂಕಟೇಶ್
ಹಂಪಿ

* * *