ಕನ್ನಡದ ಕೋಗಿಲೆ ಕಾಳಿಂಗರಾಯರು’ – ಈ ನನ್ನ ಪುಸ್ತಕ ಪ್ರಕಟವಾದದ್ದು ಹತ್ತು ವರ್ಷಗಳ ಹಿಂದೆ, ಮೊದಲಿಗೆ ‘ಕನ್ನಡ ಪ್ರಭ’ದಲ್ಲಿ. ನಂತರ ಪುಸ್ತಕ ರೂಪದಲ್ಲಿ ಓದಿದವರು ಒಪ್ಪಕೊಂಡರು. ಬರೆದ ನನ್ನನ್ನು ಅಪ್ಪಿಕೊಂಡರು. ಮೆಚ್ಚಿ ಬರೆದ ಪತ್ರಗಳು ಹತ್ತು ಹಲವಾರು. ‘ಕರ್ಮ ವೀರ’ದ ವಿಮರ್ಶಾ ಅಂಕಣದಲ್ಲಿ ಡಾ|| ಹಾ. ಮಾ. ನಾ. ಅವರಿಂದ ಮೆಚ್ಚುಗೆಯ ಮಾತು. ಮತ್ತಿದಕ್ಕೆ ‘ಆರ್ಯಭಟ’ ಪ್ರಶಸ್ತಿಯೂ ಲಭ್ಯ.

ಮೊದಲ ಮುದ್ರಣದ ಆವೃತಿಗೆ ಸಹೃದಯ ಓದುಗರು ತೋರಿದ ಪ್ರೀತಿ, ನೀಡಿದ ಬೆಂಬಲ ಈ ಎರಡನೆಯ ಆವೃತಿಗೂ ಸಿಗುತ್ತದೆಂಬ ನಂಬಿಕೆ ನಮ್ಮದು. ನಿಮ್ಮ ಪ್ರೋತ್ಸಾಹವೇ ನಮಗೆ ಉತ್ಸಾಹ.

ಬಿ.ಎಸ್.ಕೇಶವರಾವ್
0೧-೧೦-೨೦೦೩
ಬೆಂಗಳೂರು

* * *