ಹಿಂದೂಸ್ಥಾನಿ ಸಂಗೀತದ ಗುರುಗಳಾದ ರಾಮಚಂದ್ರ ಬುವಾ ಮರೋಳ್‌ಕರ್‌ಹಾಗೂ ವೆಂಕಟರಾವ್‌ರಾಯದುರ್ಗ ಅವರು ನೀಡುತ್ತಿರುವ ಕಛೇರಿಯಲ್ಲಿ ತಂಬೂರಿ ಮೀಟುತ್ತಿರುವ ಕಾಳಿಂಗರಾಯರು.

ಐವತ್ತರ ದಶಕದ ಆರಂಭದಲ್ಲಿ ಚಿತ್ರಿತವಾದ ‘ಶ್ರೀ ರಾಮಪೂಜಾ’ ಚಿತ್ರದ ಸಂಗೀತವನ್ನು ವಿಜಯ ಭಾಸ್ಕರ್ ಜೊತೆಗೂಡಿ ನಿರ್ದೇಶಿಸಿದ ಕಾಳಿಂಗರಾಯರು. ಈ ಚಿತ್ರದಲ್ಲಿ ಗಾಯಕಿಯಾಗಿ ಮೋಹನ್‌ಕುಮಾರಿ ಅಪಾರ ಜನಪ್ರಿಯತೆಗಳಿಸಿದರು.

ನಾಟಕವೊಂದರಲ್ಲಿ ಸ್ತ್ರೀಪಾತ್ರ ಧರಿಸಿ ‘ಮಿಸ್ ಮಾಧುರಿ’ ಯಾಗಿ ಮೋಹಕ ಮುಖ ಹಾಗೂ ಮುದ್ದು ಅಭಿನಯದಿಂದ ಪ್ರೇಕ್ಷಕರೆಲ್ಲರ ಹೃನ್ಮನವನ್ನು ಸಾರಾಸಗಟಾಗಿ ಸೂರೆ ಹೊಡೆಯುತ್ತಿದ್ದ ಕಾಳಿಂಗರಾಯರು.

ಇವರೆಲ್ಲಾ ಹೀಗೆ ಸಂಭ್ರಮದಿಂದ ಹಾಡುತ್ತಿದ್ದ ಆ ದಿನಗಳು ಮತ್ತೆಲ್ಲಿ ಬಂದಾವು.

ಸಮಾರಂಭವೊಂದರಲ್ಲಿ ಸೋಹನ್‌, ಮೋಹನ್‌ಅವರೊಂದಿಗೆ ತನ್ಮಯರಾಗಿ ಹಾಡುತ್ತಿರುವ ಕಾಳಿಂಗರಾಯರು.

ಆಕ್ಸ್‌ಫರ್ಡ್‌ಪ್ರೊಫೆಸರ್ ಎಂಬಂತಿದ್ದ ಕಾಳಿಂಗರಾಯರು.

ಕೀರ್ತಿರಾಜ್‌ಎಂಬುವರು ತೆಗೆಯಬೇಕೆಂದಿದ್ದ ಕನ್ನಡ ಚಿತ್ರಕ್ಕೆ ಕಾಳಿಂಗರಾಯರು ಸಂಗೀತ ನಿರ್ದೇಶಕರಾಗಿದ್ದರು. ಆ ಚಿತ್ರದ ಮುಹೂರ್ತವನ್ನು ನೆರವೇರಿಸಲು ಆಗಮಿಸಿದ್ದ ರಾಜ್‌ಕಪೂರ್ ಅವರೊಡನೆ ಕಾಳಿಂಗರಾಯರು.

ಹೆಚ್.ಎಲ್‌.ಎನ್. ಸಿಂಹ ನಿರ್ದೇಶಿಸಿ ‘ಅಬ್ಬಾ ಆ ಹುಡುಗಿ’ ಚಿತ್ರದ ಸಂಗೀತವನ್ನು ಕಾಳಿಂಗರಾಯರು ನಿರ್ದೇಶಿಸುತ್ತಿರುವುದು.

ಕಾಳಿಂಗರಾಯರ ಕಟ್ಟಾ ಅಭಿಮಾನಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರೊಡನೆ ಕಲಾವಿದರು.

ಆತ್ಮೀಯ ಗೆಳೆಯ ತ.ರಾ.ಸು. ಅವರೊಂದಿಗೆ ವಿಶಿಷ್ಠ ಭಂಗಿಯಲ್ಲಿ ಮಂಡಿಸಿರುವ ಕಾಳಿಂಗರಾಯರು.

ಹೇಗಿದ್ದ ರಾಯರು ಹೇಗಾಗಿ ಹೋದರು!

ರಸಿಕರ ರಾಜನಂತಿದ್ದ ಕಾಳಿಂಗರಾಯರು ಕೊನೆಕಾಲಕ್ಕೆ ಕಂಡದ್ದು ಹೀಗೆ.

ಕಾಳಿಂಗರಾಯರು ಮಲ್ಲಿಕಾರ್ಜುನ ಮನ್ಸೂರ್‌ಅವರನ್ನು ಸನ್ಮಾನಿಸಿದ ಸಂದರ್ಭದಲ್ಲಿ.

ಚಿರನಿದ್ರೆಯಲ್ಲಿರುವ ಕನ್ನಡದ ಕೋಗಿಲೆ.

ಕಾಳಿಂಗರಾಯರ ಅಂತಿಮ ದರುಶನ ಪಡೆಯಲು ಆಗಮಿಸಿದ್ದ ಅಣ್ಣಾವ್ರು.

ಕಾಳಿಂಗರಾಯರ ಕೈಲಾಸಯಾತ್ರೆ.