೧. ಗ್ರಾಮೀಣಾಭಿವೃದ್ಧಿಯನ್ನು ಹಲವೊಮ್ಮೆ, ಸರ್ಕಾರ ಅಥವಾ ಇನ್ನಿತರ ಸಂಸ್ಥೆಗಳ ವತಿಯಿಂದ ಜಾರಿಗೊಳಿಸಿದ ಅಸಂಖ್ಯ ಅಭಿವೃದ್ಧಿ ಕಾರ್ಯಗಳ ಫಲಿತಾಂಶಗಳಿಗೆ ಹೋಲಿಸಲಾಗುತ್ತದೆ. ಬಹುಶಃ ಅಭಿವೃದ್ಧಿ ಕಾರ್ಯಕ್ರಮಗಳ ವಿವಿಧತೆಯ ಮತ್ತು ಅದರ ವ್ಯಾಪಕತೆಯ ಮಾಪನದಿಂದ, ಕರ್ನಾಟಕದ ಸಾಧನೆಯು ಇನ್ನಿತರ ಹಲವಾರು ರಾಜ್ಯಗಳಿಗಿಂತ ಬಹಳಷ್ಟು ಉತ್ತಮವಿದೆ ಎಂದು ತೀರ್ಮಾನಿಸಬಹುದು. ಯಾವನೇ ಓರ್ವ, ಕರ್ನಾಟಕದ ಹಳ್ಳಿಗಳಲ್ಲಿ ಪ್ರಯಾಣ ಮಾಡಿದಾಗ ಕಣ್ಣಿಗೆ ರಾಚುವುದು ಹೆಚ್ಚಿನ ಪ್ರದೇಶಗಳಲ್ಲಿ ಸರ್ವ ವ್ಯಾಪಿ ಜನತಾ ಮನೆಗಳ ಅಸ್ತಿತ್ವ, ಹೊಸ ಕುಡಿಯುವ ನೀರಿನ ಬಾವಿಗಳು, ಸಾಮಾಜಿಕ ಅರಣ್ಯೀಕರಣ ಮತ್ತು ಉದ್ಯೋಗ ಕಾರ್ಯಕ್ರಮಗಳು. ರೇಷ್ಮೆ ಮತ್ತು ತೋಟಗಾರಿಕೆಯಂತಹ ಚಟುವಟಿಕೆಗಳು ರಾಜ್ಯದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿವೆ ಎಂದು ನಂಬಲಾಗಿದೆ ಮತ್ತು ಹಲವಾರು ಬೆಳಕಿಗೆ ಬರುವ ಉದ್ದಿಮೆಗಳು ಸ್ಥಾಪನೆಯಾಗುವ ಪಥದಲ್ಲಿವೆ. ಪಂಚಾಯತ್ ರಾಜ್ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ಅವರಿಗೆ ಹಸ್ತಾಂತರಿಸುವಲ್ಲಿ ರಾಜ್ಯವು ಮುಂಚೂಣಿಯಲ್ಲಿರುವಂತೆ ಬಹಳಷ್ಟು ಜನ ನಿರೀಕ್ಷಿಸುತ್ತಾರೆ. ಇವುಗಳೆಲ್ಲವೂ ಗ್ರಾಮೀಣಾಭಿವೃದ್ಧಿಯನ್ನು ಮಾಪನ ಮಡುವ ಸರಿಯಾದ ಸೂಚಿಗಳಾಗಿದ್ದರೂ, ಓರ್ವ ಸಮಾಜ ವಿಜ್ಞಾನ ಸಂಶೋಧಕರು ಅಗಲ ಕೋನಗಖಳ ಈ ಕೆಳಗಿನವುಗಳನ್ನು ಒಳಗೊಂಡಿರುವ ಸೂಚಿಯನ್ನು ಅಳವಡಿಸಿಕೊಳ್ಳುತ್ತಾರೆ: ಅಭಿವೃದ್ಧಿ ಕಾರ್ಯಕ್ರಮಗಳ ಜತೆಗೆ ಗ್ರಾಮೀಣ ಸಮುದಾಯದ ವಿನ್ಯಾಸ ಹಾಗೂ ಸಂಬಂಧಗಳಲ್ಲಿ ಬದಲಾವಣೆ ತರುವ ಮಾರುಕಟ್ಟೆ ಪ್ರೇರೇಪಿಸಿದ ಆರ್ಥಿಕ ಪ್ರಕ್ರಿಯೆ ಮತ್ತು ಸಾಮಾಜಿಕ-ರಾಜಕೀಯ ಒತ್ತಡಗಳು ಇವುಗಳನ್ನೂ ಒಳಗೊಂಡಿರುವುದು. ಕರ್ನಾಟಕದ ಅನುಭವಗಳನ್ನು ಅಂತಹ ವಿಶಾಲವಾದ ದೃಷ್ಠಕೋನದಲ್ಲಿ ಗಣನೆಗೆ ತೆಗೆದುಕೊಳ್ಳುವುದು ಈ ಮಂಡನೆಯ ಉದ್ದೇಶವಾಗಿದೆ. ನಮ್ಮ ದೃಷ್ಟಿಕೋನವು ಒಂದು ಗ್ರಾಮ ಸಮುದಾಯವನ್ನು ವಿವಿಧ ಕೋನಗಳಿಂದ, ಆದರೆ ಅಸಮತೆಯ ವೇಗದಿಂದ, ಬದಲಾಗುತ್ತಿರುವ ಹಂತದಲ್ಲಿದೆ ಎಂದು ಪರಿಗಣಿಸುವುದು. ಇದರಿಂದ ಬೆಳವಣಿಗೆಯು ಬಿಗುವಾತಾವರಣ ಮತ್ತು ಘರ್ಷಣೆಯನ್ನುಂಟು ಮಾಡುತ್ತವೆ ಎಂಬ ಗಲಿಬಿಲಿಯುಕ್ತ ಚಿತ್ರಣವನ್ನು ತರುತ್ತದೆ, ಹಾಗೂ ಮುಂದಕ್ಕೆ, ಸಮುದಾಯವು ಊಹಿಸಲುಸಾಧ್ಯವಾದ ಹಾಗೂ ಹಿಂದಕ್ಕೆ ತಿರುಗಿ ಮರಳಲು ಅಸಾಧ್ಯವಾದ, ಹೊರಗಿನ ಪ್ರಭಾವಗಳ ಬದಲಾವಣೆ ದಿಕ್ಕಿನಲ್ಲಿ ಸಾಗುತ್ತವೆ ಎಂದು ಬಿಂಬಿಸುತ್ತದೆ. ಆದುದರಿಂದ ಗ್ರಾಮೀಣಾಭಿವೃದ್ಧಿಯನ್ನು ಒಂದು ಪ್ರಕ್ರಿಯೆಯೆಂದು ಇದರಲ್ಲಿ,  ಗ್ರಾಮ ಸಮುದಾಯವು ತನ್ನ ಸ್ಥಿರತೆ ಮತ್ತು ಸಮಸ್ಥಿತಿಯನ್ನು ಸ್ಥಾಪಿಸುವಲ್ಲಿ ಉದ್ಭವವಾಗುವ ಸಮಸ್ಯೆಗಳೊಂದಿಗೆ ಹೊಂದಾಣಿಕೆ ಮಾಡುವಲ್ಲಿ ಹೋರಾಟ ನಡೆಸುತ್ತದೆ ಎಂದು ಪರಿಗಣಿಸಬಹುದು.

೨. ಹಳ್ಳಿಯ ಆರ್ಥಿಕತೆಯು ಸಂಪ್ರದಾಯಸ್ಥ ತಾಂತ್ರಿಕತೆಗಳ ಹಾಗೂ ಮನೋಭಾವಗಳ ಮೇಲೆ ನೆಲೆ ನಿಂತಿದೆ ಹಾಗೂ ಇದು ಮುಚ್ಚಿದ ಮತ್ತು ಸ್ವನಿಗ್ರಹಿತ ವಿನ್ಯಾಸವನ್ನು ಹೊಂದಿರುತ್ತದೆ. ಮಾರುಕಟ್ಟೆ ಪ್ರೇರಿತ ಆರ್ಥಿಕ ಬಲಗಳು ಇಂತಹ ಬುನಾದಿಯನ್ನೇ ಕೊಚ್ಚಿಕೊಂಡು ಹೋಗುತ್ತವೆ. ಕರ್ನಾಟಕ ರಾಜ್ಯದಲ್ಲಿ ಬಹುತೇಕ ಗಮನಿಸಬಹುದಾದ ಇದರ ಪರಿಣಾಮಗಳೆಂದರೆ :

i) ವಿವಿಧ ತರದ ನಗರ ವಸ್ತುಗಳು ಹಳ್ಳಿಗಳಿಗೆ ಹರಿದು ಬರುತ್ತವೆ. ಇವು ಅತೀ ಹಿಂದುಳಿದ, ಸಮೀಪಿಸಲು ಕಷ್ಟವೆನಿಸುವ ಅತ್ಯಂತ ಬಡ ಗುಂಪುಗಳಿಗೂ ಮುಟ್ಟುತ್ತಿವೆ.

ii) ತಲತಲಾಂತರದಿಂದ ಜೀವನಾಧಾರವಾಗಿದ್ದು, ಗ್ರಾಮೀಣ ಜನತೆಯ ಆರ್ಥಿಕ ಪ್ರಗತಿಗೂ ಅವಕಾಶ ಒದಗಿಸಿದ್ದ ಉತ್ಪನ್ನಗಳ ಹಾಗೂ ಸೇವೆಗಳ ಅವನತಿಯಾಗುತ್ತಿದೆ. ನಗರ ಪ್ರದೇಶದೊಂದಿಗೆ ಉತ್ತಮ ಸಂಬಂಧಗಳನ್ನಿಟ್ಟುಕೊಂಡಿರುವ ಗ್ರಾಮೀಣ ಪ್ರದೇಶದ ಮೇಲ್ವರ್ಗದ ಜನರಿಗೆ ಇಂತಹ ಒಂದು ಬದಲಾವಣೆ ಬಹಳಷ್ಟು ಸರಳ ಮತ್ತು ಲಾಭದಾಯಕವೆನಿಸಿದೆ. ಅವರು ತಮ್ಮ ಹೂಡಿಕೆಯ ಸಂಪತ್ತಿಗೆ ಹೊಸದಾರಿಯನ್ನು ಕಂಡು ಹಿಡಿಯುತ್ತಾರೆ. ಹಾಗೂ ಬಾಡಿಗೆ ಪಡೆಯುವ ಚಟುವಟಿಕೆಯಿಂದ ಲಾಭ ಸಿಗುವ ಉದ್ದಿಮೆಯತ್ತ ಬದಲಾಯಿಸಿಕೊಳ್ಳಲು ಪ್ರೇರಣೆಗೊಳಗಾಗುತ್ತಾರೆ.ಕೇವಲ ಕೆಲವರು ಮಾತ್ರ ಈ ಬದಲಾಗುತ್ತಿರುವ ಪರಿಸ್ಥಿತಿಯನ್ನು ಹಾಗೂ ಗ್ರಾಮೀಣ ಮೇಲ್ವರ್ಗದ ಜನತೆಯ ಮೇಲಿನ ಅದರ ಪ್ರಭಾವವನ್ನು ಗಮನಿಸುತ್ತಾರೆ. ಈ ಮಾರುಕಟ್ಟೆ ಪ್ರೇರಿತ ಶಕ್ತಿಗಳ ಪ್ರಭಾವ ಮಧ್ಯಮಸ್ತರದ, ಅಂದರೆ ಬಡತನದ ರೇಖೆಗಿಂತ ಮೇಲಿರುವ ಆದರೆ, ಶ್ರೀಮಂತ ವರ್ಗದಲ್ಲದ ಜನರ ಮೇಲೆ  ಖಂಡಿತವಾಗಿಯೂ ಕಡಿಮೆ. ಇವರಲ್ಲಿ ಕೆಲವರು ನಿಧಾನವಾಗಿ ಯಾದಾರೂ, ಬೇಕಾದಷ್ಟು ಅಂದರೆ, ಮೇಲ್ವರ್ಗದವರೊಂದಿಗೆ ಸಲುಗೆ ಬೆಳೆಸುವಷ್ಟಾದರುಗಳಿಸ ಬಹುದು. ಇತರರ ಗಳಿಕೆ ಅಲ್ಪಸ್ವಲ್ಪವಿರಬಹುದು ಹಾಗೂ ಇನ್ನೂ ಹಲವಾರು ಕೆಳಗೆ ತಳ್ಳಲ್ಪಡಬಹುದು. ಬಡವರಿಗೆ ಸಂಬಂಧಿಸಿ, ಮಾರುಕಟ್ಟೆ ಪ್ರೇರಿತ ಶಕ್ತಿಗಳು ಅಲ್ಪ ಮಟ್ಟಿಗೆ ಕೆಲವರಿಗೆ ಮೇಲೆ ಬರಲು ಸಹಾಯ ಮಾಡಬಹುದು. ಆದರೆ ಹೆಚ್ಚಿನವರು, ಅವರನ್ನು ಮತ್ತಷ್ಟು ಕೆಳತಳ್ಳುವ ಅಥವಾ ಹೊರತಳ್ಳಲ್ಪಡುವ ಒತ್ತಡಕ್ಕೆ ಬಲಿಯಾಗುತ್ತಾರೆ. ಅನ್ವಥಾ, ಅವರಿಗೆ ಹೊರಗಿನ ಸಂಸ್ಥೆಗಳಿಂದ ಬೆಂಬಲ ದೊರೆಯದಿದ್ದಾಗ ಅವರು ಕುಸಿಯುತ್ತಾರೆ. ಮಾರುಕಟ್ಟೆ ಪ್ರೇರಿತ ಶಕ್ತಿಗಳ ಎರಡು ಪ್ರತಿಕೂಲ ಪರಿಣಾಮಗಳನ್ನು ಗಮನಿಸಬಹುದು : ೧)ಸ್ಥಳೀಯ ಜನತೆಗೆ ನೇರವಾಗಿ ಬಹಳಷ್ಟು ಕಡಿಮೆ ಲಾಭಗಳನ್ನು ನೀಡಿ, ಸ್ಥಳೀಯ ಸಂಪನ್ಮೂಲಗಳ ದುಬಾರಿ ಬಳಕೆ ಮಾಡುವುದು ಹಾಗೂ ೨) ಉತ್ತಮ ಬೆಳವಣಿಗೆಯ ಸಾಧ್ಯತೆಯಿರುವ ಆದರೆ ದೀರ್ಘಾವದಿ ಆರೈಕೆ ಮತ್ತು ದೊಡ್ಡ ಮೊತ್ತದ ಹೂಡಿಕೆಯ ಅಗತ್ಯವಿರುವ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುವುದು. ಮಾರುಕಟ್ಟೆ ಪ್ರೇರಿತ ಶಕ್ತಿಗಳು ತರುವ ಬದಲಾವಣೆಯ ಲಕ್ಷಣವೇನೆಂದರೆ, ಅದು ಹಳೇಸ್ಥಿತಿಯನ್ನು ಮತ್ತೆ ಬಾರದ ಪರಿಸ್ಥಿತಿಯಲ್ಲಿ ನಿರ್ನಾಮ ಮಾಡಿ ಹೊಸ ಸ್ಥಿತಿಯನ್ನು ಉದ್ಭವ ಮಾಡಿರುವುದು, ಈ ಸ್ಥಿತಿಯು ಎಲ್ಲಾ ಗ್ರಾಮೀಣ ಸ್ತರಗಳನ್ನು ಸಮಾನವಾಗಿ ಸಮೀಪಿಸಲು ಅಸಾಧ್ಯವಾಗಿರುವುದು. ಅದರಲ್ಲೂ ಬಹಳಷ್ಟು ಆಗಾಧ ಸಂಖ್ಯೆಯಲ್ಲಿರುವ ಭಾಗವೊಂದು ಅಪಾಯದ ಅಂಚಿನಲ್ಲಿ ನಿಂತಿರುವುದು.

೩. ಸರ್ಕಾರದ ನೀತಿ ಧೋರಣೆ ಮತ್ತು ಕಾರ್ಯಕ್ರಮಗಳು, ಗ್ರಾಮೀಣ ಪರಿಸರದಲ್ಲಿ ಬದಲಾವಣೆ ತರುವ ಎರಡನೆಯ ದೊಡ್ಡ ಶಕ್ತಿಯಾಗಿದೆ. ಈ ಕೆಳಗಿನಂತೆ ಗ್ರಾಮೀಣಾಭಿವೃದ್ಧಿಯನ್ನು ಸರ್ಕಾರದ ನೀತಿ ಧೋರಣೆಗಳು ಹಾಗೂ ಕಾರ್ಯಕ್ರಮಗಳು ಗ್ರಾಮೀಣ ಆರ್ಥಿಕತೆಯಲ್ಲಿ ಹಲವಾರು ಗಂಭೀರ ಮಧ್ಯಸ್ಥಿಕೆಯಿಂದ ತರಲು ಯತ್ನಿಸುವುದು: ಗ್ರಾಮೀಣ ಸೌಲಭ್ಯಗಳನ್ನು ಉನ್ನತಿಗೊಳಿಸುವುದು, ಹೊರಗಿನ ದೊಡ್ಡ ಜಗತ್ತಿನೊಂದಿಗೆ ಹಳ್ಳಿಗಳ ಸಂಬಂಧವನ್ನು ಬಲಪಡಿಸುವುದು, ನೆಲ ಮತ್ತು ಜಲ ಸಂಪನ್ಮೂಲಗಳ ಫಲಪ್ರದ ಬಳಕೆಗೆ ವಿನಿಯೋಗ, ಬಡವರಿಗೆ ಉದ್ಯೋಗ ಹಾಗೂ ಆದಾಯ ಬೆಂಬಲವನ್ನು ನೀಡುವುದು, ಕೃಷಿಗೆ ಸಂಶೋಧನೆ, ವಿಸ್ತರಣೆ, ಸಾಲ ಮತ್ತು ಸರಬರಾಜಿನ ಸಹಾಯ, ನಿಯಂತ್ರಿತ ಮಾರುಕಟ್ಟೆ, ಗ್ರಾಮೀಣ ಕೈಗಾರಿಕೆಗೆ ಉತ್ತೇಜನ, ಗ್ರಾಮೀನ ಸಂಬಂಧಗಳನ್ನು ಸುಧಾರಿಸುವುದು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯ ಬೆಳವಣಿಗೆಗೆ ಅಗತ್ಯವೆನಿಸುವ ಶಿಕ್ಷಣ, ಆರೋಗ್ಯ ಮತ್ತು ಪೌಷ್ಠಿಕತೆಯಂತಹ ವಸ್ತುಗಳನ್ನು ನೀಡುವುದು. ಸರ್ಕಾರದ ದಕ್ಷ ಮಧ್ಯಸ್ಥಿಕೆಯ ಬಗ್ಗೆ ಒಂದು ರೀತಿಯ ನಿರಾಶಾದಾಯಕ ಭಾವನೆಯಿದೆ ಯಾಕೆಂದರೆ ಅದರ ಸಾಧನೆಯಲ್ಲಿ ಅಸಮತೆಯಿದೆ ಮತ್ತು ಅದು ನಿರೀಕ್ಷಿಸಿದ ಮಟ್ಟದ ಬದಲಾವಣೆಯ ಪರಿಣಾಮ ನೀಡಲಾಗಿಲ್ಲ. ಸರ್ಕಾರದ ಆಜ್ಞೆಯ ಮುಖಾಂತರ ರಾತ್ರಿ ಬೆಳಗಾಗುವುದರೊಳಗೆ ಬದಲಾವಣೆ ತರಲು, ಗ್ರಾಮೀಣ ಸಮಾಜವು ಬಹಳಷ್ಟು ಜಟಿಲವಿದೆ ಎಂದು ನೆನಪಿಡಬೇಕು. ಹಾಗೆ, ಬಿಡಿ ಕಾರ್ಯಕ್ರಮಗಳನ್ನು ಯಶಸ್ವಿ ಅಥವಾ ವಿಫಲ ಎಂದು ನಿರ್ಣಯಿಸಲು ಒಂದು ಮುಖ್ಯ ಅಂಶವನ್ನೇಕಳೆದುಕೊಳ್ಳುತ್ತದೆ. ಆ ಅಂಶವೇನೆಂದರೆ, ಸರ್ಕಾರದ ಅಸ್ತಿತ್ವವು, ಇತರ ಪರಿವರ್ತನಾ ಮಧ್ಯವರ್ತಿಗಳು ಬಹಳ ಸಣ್ಣ ರೀತಿಯಲ್ಲಿ ಅತೀ ದೂರದ ಹಳ್ಳಿಗಳಲ್ಲಿ ಒಳ ಪ್ರವೇಶ ಪಡೆಯುವ ಸಂದರ್ಭದಲ್ಲಿ, ಅಭಿವೃದ್ಧಿ ಪ್ರಚೋದಕ ಹಾಗೂ ಇತರ ಪರಿವರ್ತನಾ ಮಧ್ಯವರ್ತಿಗಳ ಪ್ರವೇಶಕ್ಕೆ ಸ್ಥಳೀಯ ಸಮಾಜವನ್ನು ಮುಕ್ತವಾಗಿರಿಸುವಲ್ಲಿ ಅಸ್ತಿಭಾರ ಹಾಕಿದೆ. ಇಂದು, ಸರ್ಕಾರದ ಕೆಲವಾರು ಅಭಿವೃದ್ಧಿ ಕಾರ್ಯಗಳು, ಮಾರುಕಟ್ಟೆಗೆ, ಸರ್ಕಾರೇತರ ಸಂಸ್ಥೆಗಳಿಗೆ ಹಾಗೂ ಜನರ ತಮ್ಮದೇ ಆದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಸ್ತಾಂತರಗೊಳ್ಳುವಂತಹ ಬೆಳವಣಿಗೆಗೆ ಅವಕಾಶವಿದ್ದಲ್ಲಿ, ಅದರ ಹೆಗ್ಗಳಿಕೆಯು ಖಂಡಿತವಾಗಿಯೂ, ಇದನ್ನು ಸಾಕಾರಗೊಳಿಸಿದ ಸರ್ಕಾರದ ಮಧ್ಯಸ್ತಿಕೆಗೆ ಹೋಗುತ್ತದೆ. ಎರಡನೆಯದು, ಬಡತನ ವಿರೋಧಿ ಕಾರ್ಯಕ್ರಮಗಳನ್ನು ಗಣನೆಗೆ ತೆಗೆದುಕೊಂಡರೆ, ಅವು ಬಡವರಿಗೆ ಅಲ್ಪಮಟ್ಟಿನ ಪರಿಹಾರವನ್ನು ನೀಡುವ ವಿನಃ ಅದಕ್ಕಿಂತ ಮುಂದೆಹೋಗಿಯೇ  ಇಲ್ಲ. ಆರ್ಥಿಕ ತಜ್ಞರು ಈ ಕಾರ್ಯಕ್ರಮಗಳನ್ನು ತೂಗಿಸಿ  ನೋಡುವಲ್ಲಿ ತಿರಸ್ಕಾರ ಭಾವದಿಂದ ನೋಡುತ್ತಾರಾದರೆ, ಸಮಾಜ ಶಾಸ್ತ್ರಜ್ಞರು ಗ್ರಾಮೀಣ ಸಮಾಜದಲ್ಲಿನ ಬದಲಾಗುತ್ತಿರುವ ಬಡವ ಶ್ರೀಮಂತನ ಸಂಬಂಧಗಳು ಹಾಗೂ, ಬಡವರು ಪ್ರಸ್ತುತ ಸರ್ಕಾರದ ಮೇಲೆ ಹೇರಲು ಸಾಧ್ಯವಾದ ಹೆಚ್ಚುತ್ತಿರುವ ಒತ್ತಡಗಳಂತಹ ಗಂಭೀರ ಪರಿಣಾಮಗಳನ್ನು ಕಂಡು ಹಿಡಿಯದೇ ಹೋಗಲಾರರು. ದೀರ್ಘಾವಧಿಯಲ್ಲಿ, ಹಳೇ ರಚನೆಗಳ ಹಾಗೂ ಕಟ್ಟಳೆಗಳ ಶಿಥಿಲವಾಗುವಿಕೆಯೊಂದಿಗೆ ಸೂಚಿಸಲ್ಪಡುವ ಹೊಸ ಬದಲಾವಣೆಗಳು ಬಹು ಪ್ರಾಮುಖ್ಯವೆನಿಸುತ್ತವೆ. ಗ್ರಾಮೀಣ ಬಡಜನತೆಯ ಹೆಚ್ಚಿನ ಒಳ್ಳೆಯದಕ್ಕಾಗಿ ಸರ್ಕಾರವು ಮಾರುಕಟ್ಟೆಯ ರಕ್ಷಣೆ ಅಥವಾ ಬೆಳವಣಿಗೆಯನ್ನು ಬಡವರತ್ತ ಕೇಂದ್ರಿಕೃತಗೊಳಿಸಲು ಅಸಫಲವಾಗಿರುವುದುದಾದರೆ, ಇಲ್ಲಿ ಕರ್ನಾಟಕದ ಪರಿಸ್ಥಿತಿಯ ಬಗ್ಗೆ ನಮ್ಮ ಪರಿಕಲ್ಪನೆ ಏನೆಂದರೆ ಸರ್ಕಾರದ ಮಧ್ಯಸ್ತಿಕೆಯು, ಹೊಸದಾದ ಸಮಾನ ಬಲಗಳ ವಿಶಾಲ ಬುನಾದಿಯ ಬೆಳವಣಿಗೆಗೆ ಮತ್ತು ಆಧುನಿಕತೆಗೆ ಹಳೆಯ ಪರಿಸ್ಥಿತಿಗಿಂತ ಪ್ರತಿಕೂಲವೆನಿಸುವ ಪರಿಣಾಮವನ್ನು ಬೀರಿರಬಹುದು. ಅಸಂಖ್ಯ ಹೊಸ ಚಟುವಟಿಕೆಗಳು ಗ್ರಾಮೀಣ ಕರ್ನಾಟಕದಲ್ಲಿ ಈಗ ಉದಯವಾಗಿರುವುದು ಇಂತಹ ಪ್ರಕ್ರಿಯೆಯು ವೇಗವನ್ನು ಪಡೆಯುತ್ತಿರುವ ಬಗ್ಗೆ ಒಂದು ಸೂಚನೆಯಾಗಿದೆ.

೪. ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿಗೆ ಕೊಡುಗೆಯಾಗಿರುವ ಮೂರನೆಯ ರೀತಿಯ ಪ್ರಭಾವವು ರಾಜಕೀಯದ್ದಾಗಿದೆ. ಮಾರುಕಟ್ಟೆ ಶಕ್ತಿಗಳು ಮತ್ತು ಸರ್ಕಾರದ ಮಧ್ಯಸ್ತಿಕೆಯಿಂದಾಗಿ ಉಂಟಾದ ಬದಲಾವಣೆಗಳಿಗೆ ವಿವಿಧ ಗ್ರಾಮೀಣ ಸ್ತರಗಳ ರಾಜಕೀಯ ಪ್ರತಿಕ್ರಿಯೆ ಇದಾಗಿದೆ. ಶ್ರೀಮಂತ ವರ್ಗ, ಮೇಲಿನ ಸ್ತರದಲ್ಲಿಟ್ಟುಕೊಂಡು ಆರ್ಥಿಕವಾಗಿ ಸಾಕಷ್ಟು ಗಳಿಸಲು ಶಕ್ತವಾಗಿದ್ದು, ಅವರಿಗೆ ಗ್ರಾಮೀಣ ಪ್ರದೇಶದಲ್ಲಿ ಉದ್ಭವಿಸಿದ ಈ ಹೊಸ ಚಟುವಟಿಕೆಗಳ ಸಾಮರ್ಥ್ಯದ ಬಗ್ಗೆ ಅರಿವಿತ್ತು, ಏನೆಂದರೆ, ಇದು ರಾಜ್ಯ ಮಟ್ಟದ ಮತ್ತು ರಾಷ್ಟ್ರಮಟ್ಟದ ರಾಜಕೀಯ ಪ್ರಕ್ರಿಯೆಯಲ್ಲಿ ಪ್ರವೇಶಿಸಲು ಯತ್ನಿಸುವುದು ಎಂದು. ಇವು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೆಂಬಲದ ಅಡಿಪಾಯವನ್ನು ಗಟ್ಟಿಗೊಳಿಸುವುದಕ್ಕಾಗಿ ಬಹು ಗಂಭೀರ ಪ್ರಯತ್ನ ಮಾಡುವುದು ಹಾಗೂ ಇದು ಬಹಳಷ್ಟು ಮಧ್ಯಮ  ಮತ್ತು ಅತೀ ಕೆಳಗಿನ ಗ್ರಾಮೀಣ ಸ್ತರಗಳ ವಿಶ್ವಾಸ ಗಳಿಸಲು ಯತ್ನಿಸುವುದು. ಘಟನಾವಳಿಗಳು ತೋರಿಸಿರುವಂತೆ, ಇದು ಜನಪ್ರಿಯ ರಾಜಕೀಯದ ಒಂದು ಫಲವತ್ತಾದ ಮೂಲ, ಇಲ್ಲಿ ಶ್ರೀಮಂತ ಮತ್ತು ಮಧ್ಯಮ ವರ್ಗದಲ್ಲಿ ಬೆಳೆಯುತ್ತಿರುವ ಸಂಬಂಧ, ಅವರು ಕೆಲ ಹಂತದ ತನಕ ರಾಷ್ಟ್ರೀಯ ಮಟ್ಟದ ರಾಜಕೀಯದಲ್ಲಿ ಗ್ರಾಮೀಣ ಜನತೆಯು ತೂಕವನ್ನು ಹೆಚ್ಚಿಸಿಕೊಳ್ಳುವಲ್ಲಿ ಜತೆಯಾಗಿ ನಡೆಸುವ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ಮತ್ತು ಸಂಪನ್ಮೂಲಗಳನ್ನು ಪಡೆಯಲು ಸಾಧ್ಯವಾಗಿರುವುದು. ಗ್ರಾಮೀಣ ಮೇಲ್ವರ್ಗ ಮತ್ತು ಮಧ್ಯಮ ವರ್ಗ ಜಂಟಿಯಾಗಿ ಗ್ರಾಮೀಣ ಆರ್ಥಿಕತೆ ಮತ್ತು ರಾಜಕೀಯ ಹಾಗೂ ಅಂತಿಮವಾಗಿ ಗ್ರಾಮೀಣ ಆರ್ಥಿಕತೆ ಮತ್ತು ರಾಜಕೀಯ ಹಾಗೂ ಅಂತಿಮವಾಗಿ ಗ್ರಾಮೀಣ ಸಮಾಜದಲ್ಲಿ ಒಂದುಪ್ರಭಾವ ಪೂರ್ಣ ಪಾತ್ರಕ್ಕಾಗಿ ಕಾರ್ಯವೆಸಗುತ್ತದೆ. ಬಡವರು, ಆರ್ಥಿಕ ಅವಕಾಶಗಳಲ್ಲಿ ಹೆಚ್ಚಿನ ಆದ್ಯತೆ ಮತ್ತು ಸಂಪನ್ಮೂಲಗಳನ್ನು ಪಡೆಯಲು ಸಾಧ್ಯವಾಗಿರುವುದು. ಗ್ರಾಮೀಣ ಮೇಲ್ವರ್ಗ ಮತ್ತು ಮಧ್ಯಮ ವರ್ಗ ಜಂಟಿಯಾಗಿ ಗ್ರಾಮೀಣ ಆರ್ಥಿಕತೆ ಮತ್ತು ರಾಜಕೀಯ  ಹಾಗೂ ಅಂತಿಮವಾಗಿ ಗ್ರಾಮೀಣ ಸಮಾಜದಲ್ಲಿ ಒಂದು ಪ್ರಭಾವ ಪೂರ್ಣ ಪಾತ್ರಕ್ಕಾಗಿ ಕಾರ್ಯವೆಸಗುತ್ತದೆ. ಬಡವರು, ಆರ್ಥಿಕ ಅವಕಾಶಗಳಲ್ಲಿ ಹೆಚ್ಚಿನ ಪಾಲು ಪಡೆಯುವ ಹೋರಾಟದೊಂದಿಗೆ, ರಾಜಕೀಯವಾಗಿ ಪ್ರಾಂತೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನೀತಿ ರೂಪಣೆಯ ಮಟ್ಟದಲ್ಲಿ ತಮ್ಮ ಅಸ್ತಿತ್ವವನ್ನು  ತೋರಿಸಲಿಕ್ಕಾಗಿ ಒಟ್ಟಾಗುವುದು ಅಗತ್ಯ ಎಂಬ ವಿಷಯವನ್ನು ಕಂಡು ಹಿಡಿಯುತ್ತಾರೆ, ಹಾಗೂ ಇದರಿಂದ ಮೇಲ್ವರ್ಗ ಮತ್ತು ಮಧ್ಯಮ ವರ್ಗದ ಜಂಟಿಯನ್ನು ಪ್ರಭಾವ ಪೂರ್ಣವಾಗಿ ಎದುರಿಸಬಹುದು ಎಂದು ಅರಿಯುತ್ತಾರೆ. ಹೀಗೆ, ಗ್ರಾಮೀಣ ಸಮಾಜದಲ್ಲಿ ಒಂದು ಹೊಸ ಧ್ರುವೀಕರಣವು ಗೋಚರಿಸುತ್ತದೆ. ಇದು ನೀತಿ ನಿರೂಪಕರಿಗೆ, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿಗಾಗಿ ಕಾರ್ಯಾಚರಿಸುವ ಶಕ್ತಿಗಳ ಕಡೆಗೆ ಗಮನವೀಯಲು ಸಾಕಷ್ಟು ಸ್ಥಳಾವಕಾಶ ನೀಡುತ್ತದೆ. ಇದು ಘರ್ಷಣೆ, ಕಡಿದ ಸಂಬಂಧ ಮತ್ತು ಬೆಳವಣಿಗೆಯ ವೇಗವನ್ನು ಕುಂಠಿತಗೊಳಿಸುವುದಕ್ಕಿಂತ ದೂರವಿರುತ್ತದೆ.

೫. ಈ ಉದ್ದೇಶಕ್ಕಾಗಿರುವ ಸೂಕ್ತ ನೀತಿಗಳನ್ನು ಕೆಳಗಿನಂತೆ ಮೂರು ಶೀರ್ಷಿಕೆಗಳಲ್ಲಿ ನೀಡಬಹುದು.

೧. ಬೆಂಬಲ ನೀತಿಗಳು

೨. ಹೂಡಿಕೆಯ ನೀತಿಗಳು

೩. ನಿಯಂತ್ರಕ ನೀತಿಗಳು

೧) ಬೆಂಬಲ ನೀತಿಗಳು

ಈ ನೀತಿಗಳು, ಬಡವರು ಮೇಲ್ವರ್ಗದವರ ಮೇಲೆ ಅವಲಂಬಿತರಾಗುವುದನ್ನು ಕಡಿಮೆ ಗೊಳಿಸುವತ್ತ ಕೇಂದ್ರಿಕೃತವಾಗಬೇಕು, ಹಾಗೂ ಬಡವರು ಸ್ವಾವಲಂಬಿಗಳಾಗುವತ್ತ ಸಹಾಯ ಮಾಡಬೇಕು. ಸ್ವಂತ ಜಮೀನು, ಸಂಪನ್ಮೂಲ ಮತ್ತು ಕೌಶಲ್ಯಗಳು ಇಲ್ಲದಿರುವುದು, ಬಡವರನ್ನು ಕಡಿಮೆ ಸಂಬಳದ ಉದ್ಯೋಗದಲ್ಲಿ ತೊಡಗುವಂತೆ ಒತ್ತಾಯಿಸುತ್ತದೆ ಹಾಗೂ,  ಇದು ಅವರನ್ನು ಮೇಲ್ವರ್ಗದಲ್ಲಿ ಬೇರೆ ಬೇರೆ ರೀತಿಯ ಬಂಧನದಲ್ಲಿರುವಂತೆ ತಳ್ಳುವುದು. ಬಡವರಿಗೆ ಕಾನೂನಿನಂತೆ ನಿಗದಿಪಡಿಸಿದ ಕನಿಷ್ಠ ವೇತನದಷ್ಟಾದರೂ ಕೂಲಿ ಒದಗುವಂತಹ ಸಾಕಷ್ಟು ಉದ್ಯೋಗವಕಾಶಗಳನ್ನು ಒದಗಿಸುವುದು ಮೊದಲನೆಯ ಹೆಜ್ಜೆಯಾಗಿದೆ. ಪ್ರಸ್ತುತ ಉದ್ಯೋಗ ಕಾರ್ಯಕ್ರಮಗಳು ತಾತ್ಕಾಲಿಕ ಪರಿಹಾರ ನೀಡುವ ನೀತಿಯಲ್ಲಿ ಕಾರ್ಯಾಚರಿಸುತ್ತಿವೆ, ಆದುದರಿಂದ ಇದು ಬಡವರಿಗೆ ಬೆಂಬಲ ನೀಡುವಲ್ಲಿ ಪರಿಣಾಮಕಾರಿಯಾಗಿಲ್ಲ. ನೀಡಿದ ಉದ್ಯೋಗವು ದೀರ್ಘಕಾಲ ಉತ್ಪಾದಕ ಆಸ್ತಿಯಾಗುವುದೇ ಎಂದು ದೃಢಪಡಿಸುತ್ತ ಇದನ್ನು ವಿಸ್ತರಿಸಿದ ಮಟ್ಟದಲ್ಲಿ ತೆಗೆದುಕೊಳ್ಳಬೇಕು. ಎರಡನೇ ಹೆಜ್ಜೆಯು, ಬಡವರಿಗೆ ನಿರ್ದಿಷ್ಠವಾಗಿ, ಅವರಲ್ಲಿ ಉದ್ಯಮಶೀಲರಿರುವವರಿದ್ದರೆ ಒಳ್ಳೆಯ ಪ್ರತಿಫಲ ನೀಡುವ ಸ್ವ-ಉದ್ಯೋಗ ಚಟುವಟಿಕೆಯಲ್ಲಿ ತೊಡಗಲು ಸಹಾಯ ಮಾಡುವುದು. ಅಂತಹ ಚಟುವಟಿಕೆಗಳನ್ನು ಪ್ರವರ್ಧನಗೊಳಿಸುವಲ್ಲಿ ಸರ್ಕಾರದ ಕಾರ್ಯಕ್ರಮಗಳು, ಬಡವರಲ್ಲದವರತ್ತ ನಿರರ್ಥಕವಾಗಿ ಬಹಳಷ್ಟು ಸೋರಿಹೋಗುತ್ತದೆ ಎಂಬುದು, ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮದಂತಹ ಕಾರ್ಯಕ್ರಮದಲ್ಲಿ ಅನುಭವ ವೇದ್ಯವಾಗಿದೆ. ಈ ನ್ಯೂನತೆಗಳನ್ನು ಸರಿಪಡಿಸುವುದು ಬಹಳ ಅಗತ್ಯವಿದೆ, ಇದರಿಂದಾಗಿ ಅದರ ಪ್ರಯೋಜನಗಳು ಬಡವರಿಗೆ ದೊರೆಯುವಂತಾಗುವುದು ಹಾಗೂ ಪ್ರೋತ್ಸಾಹಿತ ಚಟುವಟಿಕೆಗಳು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕಾರ್ಯಚರಿಸಲು ಸಾಧ್ಯವಾಗುವುದು. ಮೂರನೆಯ ಹೆಜ್ಜೆಯೇನೆಂದರೆ, ಬಡವರಿಗೆ ಶಿಕ್ಷಣ, ಆರೋಗ್ಯ ಮತ್ತು ಪೌಷ್ಠಿಕತೆಯು ದೊರೆಯುವಂತೆ ಅದನ್ನು ಬಲಪಡಿಸುವುದು. ಬಡವರ ಆದಾಯ ಮಟ್ಟವು ಒಂದು ಧೃಡ ಹೊಸ್ತಿಲಿನ ಮಟ್ಟಕ್ಕೆ ತಲುಪಿದಾಗ ಅವರು ತಮ್ಮ ಶಿಕ್ಷಣ, ಆರೋಗ್ಯ ಇತ್ಯಾದಿಗಳನ್ನು ಉತ್ತಮಪಡಿಸುವ ಅವಕಾಶಗಳತ್ತ ನೋಡುತ್ತಾರೆ. ಶಿಕ್ಷಣ, ಆರೋಗ್ಯ ಇತ್ಯಾದಿಗಳನ್ನು ಉತ್ತಮಪಡಿಸುವ ಅವಕಾಶಗಳತ್ತ ನೋಡುತ್ತಾರೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಾರ್ವಜನಿಕ ಸೌಲಭ್ಯವು ಈಗಿರುವಂತೆ ಕಳಪೆಯಾಗಿರುವುದಾದರೆ, ಬಡವರು ಈ ದಿಕ್ಕಿನಲ್ಲಿ ಮಾಡುವ ಪ್ರಯತ್ನವು ಬಹಳಷ್ಟು ನಿರಾಶೆಗೊಳಪಡುವುದು.

೨) ಹೂಡಿಕೆಯ ನೀತಿಗಳು

ಕರ್ನಾಟಕದ ಹೆಚ್ಚಿನ ಭಾಗವು ಬರ ಪೀಡಿತವಾಗಿದೆ. ರಾಜ್ಯದ ನೆಲ ಮತ್ತು ಜಲ ಸಂಪನ್ಮೂಲದ ಸಂರಕ್ಷಣೆ, ಸಂವರ್ಧನೆ ಹಾಗೂ ನಿರಂತರ ಉಪಯೋಗಕ್ಕಾಗಿ ದೊಡ್ಡ ರೀತಿಯ ಹೂಡಿಕೆಯ ಅಗತ್ಯವಿದೆ. ಕಳೆದ ದಶಕದಿಂದೀಚೆಗೆ ಜಾರಿಗೊಳಿಸಿದ ಜಲಾನಯನ ಕಾರ್ಯಕ್ರಮದ ಹೊರತಾಗಿಯೂ ನೆಲ ಮತ್ತು ಜಲ ಸಂಪನ್ಮೂಲದ ಅಭಿವೃದ್ಧಿಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಆಗಿಲ್ಲ. ಇಕ್ರಿಸಾಟ್ (ICRISAT)ನಂತಹ ಸಂಸ್ಥೆಯು ಅಭಿವೃದ್ಧಿಗೊಳಿಸಿದ ಒಣಭೂಮಿ ಬೇಸಾಯದ ತಾಂತ್ರಿಕತೆಯು ಯಾವಾಗ ಅಳವಡಿಸಲ್ಪಡುತ್ತದೆ ಅಂದರೆ, ಜಲ ಮತ್ತು ನೆಲದಂತಹ ಬೇಸಾಯದ ಬುನಾದಿಯು ಇಂತಹ ತಾಂತ್ರಿಕತೆಯಿಂದ ಲಾಭ ತರುವ ಸಶಕ್ತತೆಯನ್ನು ಪಡೆದಾಗ, ಎಂದು ತಜ್ಞರು ನಂಬುತ್ತಾರೆ. ಕರ್ನಾಟಕದಲ್ಲಿ ೧೯೮೦ರ ದಶಕದಲ್ಲಿ ಬೇಸಾಯವು ಸ್ಥಗಿತ ಸ್ಥಿತಿಯಲ್ಲಿ ನಿಂತಿತ್ತು. ಹಾಗೂ, ಇದು ನೀತಿ ಧೋರಣೆಯನ್ನು ತಯಾರಿಸುವವರಿಗೆ ಬಹಳಷ್ಟು ಯೋಚಿಸಲು ಎಡೆ ಮಾಡಿತ್ತು ಎಂದು ಇಲ್ಲಿ ಉಲ್ಲೇಖಿಸುವ ಅಗತ್ಯವಿದೆ. ರಫ್ತು ಮಾರುಕಟ್ಟೆಗೆ ಮುಖ್ಯವಾಗಿ ದೇಣಿಗೆ ನೀಡುತ್ತಿರುವ ಹೊಸ ರಂಗಗಳಾದ ತೋಟಗಾರಿಕೆ, ಹೂಗಳ ಬೆಳೆ ಮತ್ತು ಮೀನುಗಾರಿಕೆಗೆ ಹೆಚ್ಚಿನ ರೀತಿಯ ವಿವಿಧ ಪರಿಕರ ಸೌಲಭ್ಯಗಳು ಬೇಕಾಗುತ್ತದೆ ಮತ್ತು ಇದಕ್ಕಾಗಿ ಬೃಹತ್ ಹೂಡಿಕೆಯ ಅಗತ್ಯವೂ ಇದೆ. ಈ ಹೂಡಿಕೆಯನ್ನು ಖಾಸಗಿ ಉದ್ಯಮಕ್ಕೆ ಬಿಟ್ಟುಕೊಟ್ಟರೆ, ಗ್ರಾಮೀಣ ಬೆಳವಣಿಗೆ ಮತ್ತು ವೈವಿಧ್ಯತೆಗೆ ಸಾಕಷ್ಟು ಸಾಧ್ಯತೆಯುಳ್ಳ ಈ ಉದಯಗೊಳ್ಳುತ್ತಿರುವ ರಂಗಗಳನ್ನು ಗಂಭೀರವಾಗಿ ಮುದುಡುವಂತೆ ಮಾಡಿದಂತಾಗುವುದು. ಈ ರಂಗಗಳ ಬೆಳವಣಿಗೆಗೆ ಅನುಕೂಲಕರವಾದ ವಾತಾವರಣ ನಿರ್ಮಿಸಲು ಮುಂಗಡ ಯೋಜನೆ ಮತ್ತು ತೀವ್ರತರವಾದ ಕಾರ್ಯಾಚರಣೆಯು ಸರ್ಕಾರದ ವತಿಯಿಂದ ಅಗತ್ಯವಾಗಿದೆ. ಮೂರನೆಯದಾಗಿ, ತುರ್ತಾಗಿ ಗಮನ ನೀಡಬೇಕಾದ ಭಾಗವೆಂದರೆ ಗ್ರಾಮೀಣ ಸೌಲಭ್ಯಗಳು, ಪರಿಕರಗಳು ಹಾಗೂ ನೆರೆಹೊರೆ ಭಾವೈಕ್ಯತೆಯ ಹೊಂದಾಣಿಕೆಯ ಸಂಸ್ಥೆ ಹಾಗೂ ಹೊರ ಜಗತ್ತಿನೊಂದಿಗೆ ಅವುಗಳ ಸಂಪರ್ಕ. ಈ ಕ್ಷೇತ್ರದಲ್ಲಿರತಕ್ಕಂತಹ ಕೊರತೆಗಳು, ಗ್ರಾಮೀಣ ಆರ್ಥಿಕ ಅವಕಾಶಗಳು ಬೆಳವಣಿಗೆಯ ಸರಳವಾದ ಮತ್ತು ಸುಲಲಿತವಾದ ಹೂಡಿಕೆಯ ಪ್ರೇರಣೆಯನ್ನು ಬಹಳ ಗಂಭಿರವಾಗಿ ದುರ್ಬಲಗೊಳಿಸುತ್ತದೆ.

೩) ನಿಯಂತ್ರಕ ನೀತಿಗಳು

ಗ್ರಾಮೀಣ ಕರ್ನಾಟಕದಲ್ಲಿ ಉದ್ಬವಿಸುತ್ತಿರುವ ಚಿತ್ರಣವನ್ನು ಮನಸ್ಸಲ್ಲಿಟ್ಟುಕೊಂಡರೆ, ನಿಯಂತ್ರಕ ಧೋರಣೆಗಳು ಅಗತ್ಯವೆನಿಸಿದ ಕೆಲವು ಸಂದಿಗ್ಧದ ಕೆಲಸಗಳನ್ನು ಗುರುತಿಸಿಕೊಳ್ಳಬಹುದು. ಅದರಲ್ಲಿ ಈ ಕೆಳಗಿನವು ತಕ್ಷಣವೇ ಮನಸ್ಸಿಗೆ ಬರುತ್ತವೆ: ಅತಿ ಶೀಘ್ರವಾಗಿ ಬೆಳೆಯುತ್ತಿರುವ ಮೌಲ್ಯ ತುಂಬಿದ ಪ್ರದೇಶದ ಚಟುವಟಿಕೆಗಳನ್ನು ಸಂಸ್ಥೆಗಳನ್ನಾಗಿಸುವುದು ಹೆಚ್ಚುತ್ತಿರುವುದು, ಖಾಸಗಿ ಹೂಡಿಕೆಗಳನ್ನು ಮತ್ತು ಹಂಚಿಕೆಗಳನ್ನು ವ್ಯತಿರಿಕ್ತವಾಗಿ ಬಾಧಿಸುವ ವ್ಯಯ ಮತ್ತು ಉತ್ಪನ್ನಗಳ ವಿಕಾರಗೊಳಿಸುವುದನ್ನು ತಪ್ಪಿಸುವುದು, ಸಾಕಷ್ಟು ಸ್ಪರ್ಧಾತ್ಮಕವಾಗಿರಲು ಮತ್ತು ಸುವ್ಯವಸ್ಥಿತವಾಗಿರಲು ಮಾರುಕಟ್ಟೆಗಳನ್ನು ನಿಯಂತ್ರಿಸುವುದು ಮತ್ತು ನಗರ ಗುಂಪು ಮತ್ತು ನಗರ ಉದ್ದಿಮೆಗಳ ವಿರುದ್ಧ ಗ್ರಾಮೀಣ ಹಿತಾಸಕ್ತಿಗಳನ್ನು ಸಂರಕ್ಷಿಸುವುದು. ವ್ಯತಿರಿಕ್ತವಲ್ಲದ್ದಿರೂ ನೀತಿ ಧೋರಣೆಗಳು ಈ ತನಕ ಗ್ರಾಮೀಣ ಜನತೆಯತ್ತ ಔದಾಸೀನ್ಯ ಭಾವವನ್ನೇ ತೋರಿದ್ದವು. ಗ್ರಾಮೀಣ ಜನತೆ ಒಗ್ಗಟ್ಟಾಗಿ, ಮುಖ್ಯವಾಗಿ ಮಧ್ಯಮ ಮತ್ತು ಕೆಳಸ್ತರದವರು ಅಗತ್ಯವಿರುವ ರಾಜಕೀಯ ಒತ್ತಡ ಹಾಗೂ ಬೆಂಬಲವನ್ನು ತರುವುದು ಅತೀ ಅಗತ್ಯ.