ಕೋಷ್ಟಕ -೪
ಬೆಳೆಯ ಇಳುವರಿ ಮತ್ತು ಬೆಳವಣಿಗೆ – ದೇಶ ಮಟ್ಟದಲ್ಲಿ
(ಮೂರು ವರ್ಷಗಳ ಸರಾಸರಿ – ಆಧಾರದಲ್ಲಿ_

(೧ ಹೆಕ್ಟೇರಿಗೆ ೧ ಕೆಜಿ ಇಳುವರಿ)

ಬೆಳೆ ೧೯೫೯-೬೦ ೧೯೬೯-೭೦ ೧೯೭೯-೮೦ ೧೯೮೮-೮೯ ೧೯೫೯-೬೦ ರಿಂದ ೬೯-೭೦ ೧೯೬೯-೭೦ ರಿಂದ ೭೯-೮೦ ೧೯೭೯-೮೦ ರಿಂದ ೮೮-೮೯ ೧೯೫೯-೬೦ ರಿಂದ ೮೮-೮೯
ಸಜ್ಜೆ ೩೧೭ ೪೫೮ ೪೪೨ ೫೫೯ ೩.೭೫ ೦.೩೬ ೨.೩೮ ೧.೯೧
ಜೋಳ ೫೦೭ ೫೦೫ ೬೮೯ ೭೭೫ ೦.೦೪ ೩.೧೬ ೧.೧೮ ೧.೪೨
ರಾಗಿ ೭೬೨ ೭೯೦ ೧೦೬೩ ೧೦೮೧ ೦.೩೬ ೩.೦೧ ೦.೧೭ ೧.೧೭
ಮೆಕ್ಕೆ ೮೯೨ ೧೦೮೨ ೧೦೭೩ ೧೩೪೯ ೧.೯೫ ೦.೦೯ ೨.೩೨ ೧.೩೯
ಅಕ್ಕಿ ೯೬೦ ೧೦೯೧ ೧೨೪೭ ೧೬೪೧ ೧.೨೮ ೧.೩೫ ೨.೭೮ ೧.೮೦
ಗೋಧಿ ೮೦೪ ೧೨೩೧ ೧೫೪೫ ೨೧೨೩ ೪.೩೬ ೨.೩೦ ೩.೨೩ ೩.೨೯
ಒಟ್ಟು ಧಾನ್ಯಗಳು ೭೨೫ ೮೮೬ ೧೦೮೭ ೧೪೪೮ ೨.೦೩ ೨.೦೭ ೨.೯೧ ೨.೩೩
ದ್ವಿದಳ ಧಾನ್ಯಗಳು ೫೧೮ ೫೧೫ ೪೫೯ ೫೫೩ ೦.೦೫ ೧.೧೫ ೧.೮೯ ೦.೨೨
ಎಣ್ಣೆ ಬೀಜ ೫೧೨ ೫೨೭ ೫೨೦ ೭೩೦ ೦.೩೦ ೦.೨೪ ೩.೦೬ ೧.೧೯
ಹತ್ತಿ ೧೦೨ ೧೧೭ ೧೬೦ ೨೬೩ ೧.೪೦ ೩.೧೭ ೨.೯೪ ೨.೫೦
ಕಬ್ಬು ೪೦೧೮೧ ೪೮೮೯೪ ೫೧೯೭೧ ೬೨೧೫೯ ೧.೯೮ ೦.೬೧ ೧.೮೧ ೧.೪೬
ತೆಂಗು ೬೫೮೦ ೫೬೯೯ ೫೩೧೬ ೫೮೬೦ ೧.೪೩ ೦.೬೯ ೦.೯೮ ೦.೩೯
ಅಡಿಕೆ   ೮೬೪ ೧೦೩೮ ೧೨೦೨   ೧.೮೬ ೧.೪೭  

 

ಕೋಷ್ಟಕ – ೫
ಬೆಳೆಯ ಇಳುವರಿ ಮತ್ತು ಬೆಳವಣಿಗೆ
(ಮೂರು ವರ್ಷಗಳ ಸರಾಸರಿ ಆಧಾರದಲ್ಲಿ)

(೧ ಹೆಕ್ಟೇರಿಗೆ ೧ ಕೆಜಿ ಇಳುವರಿ)

ಬೆಳೆ ೧೯೫೯-೬೦ ೧೯೬೯-೭೦ ೧೯೭೯-೮೦ ೧೯೮೮-೮೯ ೧೯೮೯-೬೦ರಿಂದ ೬೯-೭೦ ೧೯೬೯-೭೦ರಿಂದ ೭೯-೮೦ ೧೯೭೯-೮೦ರಿಂದ ೮೮-೮೯ ೧೯೫೯-೬೦ರಿಂದ ೮೮-೮೯
ಸಜ್ಜೆ ೨೪೦ ೩೨೮ ೩೮೩ ೪೯೪ ೩.೧೫ ೧.೫೮ ೨.೫೬ ೨.೪೩
ಜೋಳ ೩೯೧ ೬೬೬ ೮೩೫ ೬೭೨ ೫.೪೮ ೨.೨೯ ೨.೧೪ ೧.೮೩
ರಾಗಿ ೮೦೧ ೬೮೭ ೧೧೬೩ ೧೦೦೬ ೧.೫೩ ೫.೪೧ ೧.೪೪ ೦.೭೬
ಮೆಕ್ಕೆ ೯೩೯ ೨೮೬೫ ೨೫೮೩ ೨೬೭೦ ೧೧.೮೦ ೧.೦೩ ೦.೩೩ ೩.೫೪
ಅಕ್ಕಿ ೧೩೫೩ ೧೭೬೦ ೧೯೯೪ ೨೦೩೮ ೨.೬೬ ೧.೨೬ ೦.೨೨ ೧.೩೭
ಗೋಧಿ ೨೨೫ ೪೨೮ ೬೦೧ ೫೬೦ ೬.೬೫ ೩.೪೫ ೦.೭೦ ೩.೦೯
ಒಟ್ಟು ಧಾನ್ಯಗಳು ೫೮೬ ೮೩೪ ೧೦೮೭ ೧೦೮೮ ೩.೫೮ ೨.೬೮ ೦.೦೧ ೨.೦೮
ದ್ವಿದಳ ಧಾನ್ಯಗಳು ೨೬೨ ೩೪೪ ೩೯೦ ೩೧೬ ೩.೭೪ ೧.೭೨ ೨.೦೮ ೦.೬೨
ಎಣ್ಣೆ ಬೀಜ ೪೬೬ ೫೮೭ ೫೬೬ ೫೭೫ ೨.೩೪ ೦.೩೬ ೦.೧೬ ೦.೭೦
ಹತ್ತಿ ೬೨ ೬೮ ೯೫ ೨೧೩ ೦.೮೪ ೩.೪೩ ೮.೪೮ ೪.೨೦
ಕಬ್ಬು ೬೮೯೬೧ ೮೧೫೯೮ ೭೩೧೯೬ ೭೭೯೭೩ ೧.೮೩ ೧.೦೮ ೦.೬೩ ೦.೪೫
ತೆಂಗು ೪೬೯೧ ೪೫೬೯ ೫೧೭೧ ೫೧೫೫ ೦.೨೬ ೧.೨೫ ೦.೦೩ ೦.೩೧
ಅಡಿಕೆ ೮೮೯ ೧೩೦೮ ೧೪೩೯ ೧೪೬೧ ೩.೬೩ ೦.೯೬ ೦.೧೫ ೦.೬೭

ಕೋಷ್ಟಕ ೬ ರಲ್ಲಿ ಮುಖ್ಯ ಬೆಳೆಗಳ ಇಳುವರಿಯು ಕರ್ನಾಟಕ ರಾಜ್ಯದಂತೆ ಒಣಭೂಮಿ ಕೃಷಿ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದೊಂದಿಗೆ ಹೋಲಿಸಲಾಗಿದೆ. ತದನಂತರ ಈ ಬೆಳೆಗಳ ಇಳುವರಿಯನ್ನು ರೈತರ ಜಮೀನುಗಳಲ್ಲಿ ಏರ್ಪರಿಸುವ ಪ್ರಾತ್ಯಕ್ಷತೆಗಳಲ್ಲಿ ಪಡೆಯಲಾದ ಇಳುವರಿಯೊಂದಿಗೆ ಹೋಲಿಸಲಾಗಿದೆ.

ಕೋಷ್ಟಕ ೬
೧೯೮೯-೯೦ನೇ ಕರ್ನಾಟಕ ಮತ್ತು ನೆರೆಹೊರೆಯ ರಾಜ್ಯಗಳಲ್ಲಿ ಪ್ರಮುಖ ಬೆಳೆಯ ಪ್ರಮಾಣ
(ಹೆಕ್ಟೇರಿಗೆ ಒಂದು ಕೆಜಿಯಂತೆ)

ಬೆಳೆ ಕರ್ನಾಟಕ ತಮಿಳುನಾಡು ಆಂಧ್ರಪ್ರದೇಶ ಮಹಾರಾಷ್ಟ್ರ ರೈತರ ಜಮೀನಿನಲ್ಲಿ ಪ್ರಾತ್ಯಕ್ಷತೆಯಲ್ಲಿ ಇಳುವರಿ
ಅಕ್ಕಿ ೨೦೦೯ ೩೦೯೨ ೨೪೧೭   ೬೨೪೦
ಜೋಳ ೬೯೩ ೧೦೭೨ ೫೮೭ ೧೦೩೨ ೩೨೦೦
ರಾಗಿ ೧೧೯೯ ೧೦೮೫ ೧೧೧೪ ೧೭೭೩ ೧೮೯೦
ಮೆಕ್ಕೆಜೋಳ ೨೭೭೨ ೧೪೮೮ ೧೮೨೧ ೧೧೨೯ ೨೮೬೦
ಸಜ್ಜೆ ೫೫೦ ೬೬೦ ೧೧೯೦ ೬೩೦ ೧೮೦೦
ತೊಗರಿ ೩೮೭ ೨೪೮ ೭೪೭ ೧೪೩೦  
ಕಡಲೆ ೫೦೦   ೩೩೪ ೫೩೩ ೧೦೧೦
ಶೇಂಗ ೭೯೩ ೧೧೫೩ ೯೦೫ ೧೧೪೬ ೨೪೫೦
ಹತ್ತಿ ೨೨೧ ೩೨೫ ೨೫೧ ೧೪೩ ೮೫೪

ಕರ್ನಾಟಕ ರಾಜ್ಯದಲ್ಲಿ ಮೆಕ್ಕೆ ಜೋಳದ ಇಳುವರಿಯ ಪ್ರಮಾಣವು ಇತರ ಮೂರು ನೆರೆಯ ರಾಜ್ಯಗಳೊಂದಿಗೆ ಹೆಚ್ಚುವರಿಯಾಗಿದೆ ಮತ್ತು ಅಕ್ಕಿ, ಸಜ್ಜೆ, ತೊಗರಿ ಮತ್ತು ಶೇಂಗಾದ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆಂಧ್ರಪ್ರದೇಶಕ್ಕೆ ಹೋಲಿಸಿದಾಗ ಜೋಳ ಮತ್ತು ಕಡಲೆ ಬೆಳೆಯಲ್ಲಿ ಮಹಾರಾಷ್ಟ್ರಕ್ಕೆ ಹೋಲಿಸಿದಾಗ ಹತ್ತಿ ಬೆಳೆಯಲ್ಲಿ ಅಧಿಕ ಇಳುವರಿ ಪ್ರಮಾಣ ರಾಜ್ಯದಲ್ಲಿ ಗಮನಿಸಲಾಗಿದೆ. ನೆರೆಹೊರೆಯ ರಾಜ್ಯಗಳ ಇಳುವರಿ ಪ್ರಮಾಣ ರಾಜ್ಯದಲ್ಲಿ ಗಮನಿಸಲಾಗಿದೆ. ನೆರೆಹೊರೆಯ ರಾಜ್ಯಗಳ ಬೆಳೆಯ ಉತ್ಪಾದನಾ ಪ್ರಮಾಣಕ್ಕಿಂತ ಕರ್ನಾಟಕದಲ್ಲಿ ಕಡಿಮೆಯಾಗಿದೆ. ಕೃಷಿ ವಿಶ್ವವಿದ್ಯಾನಿಲಯಗಳು ತಯಾರು ಮಾಡಿದ ತಾಂತ್ರಿಕತೆಯಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸರಾಸರಿ ೪೦ ಇಳುವರಿ ಪ್ರಮಾಣವನ್ನು ದೃಢೀಕರಿಸಲಾಗಿದೆ.

ಕೋಷ್ಟಕ ೭ ರಲ್ಲಿ ೧೯೮೮ರಲ್ಲಿ ಒಣ ಭೂಮಿ ಕೃಷಿಯಲ್ಲಿ ಕಬ್ಬಿನಾಲೆ ನೀರಾವರಿ ಯೋಜನೆಯಿಂದ ತಲುಪಿದ ಇಳುವರಿಯ ಮಟ್ಟವನ್ನು ತೋರಿಸಲಾಗಿದೆ.

ಕೋಷ್ಠಕ – ೭

  ವಿವರಗಳು ಇಳುವರಿ(ಹೆಕ್ಟೇರ್-೧ ಕೆಜಿಯಂತೆ )
ಧಾನ್ಯ ಒಣಹುಲ್ಲು
೧. ಸ್ಥಳೀಯ ವಿಧಗಳಲ್ಲಿ ಕೃಷಿಯ ಏರು ಮತ್ತು ಇಳಿತ 605 877
೨. ಸ್ಥಳೀಯ ವಿಧದಲ್ಲಿ ಬಹುದಿನ ಕೃಷಿ 690 1020
೩. ಹೆಚ್ಚು ಇಳುವರಿ ವಿಧಗಳಲ್ಲಿ ಕೃಷಿಯ ಏರು ಮತ್ತು ಇಳಿತ 793 951
೪. ಹೆಚ್ಚು ಇಳುವರಿಯು ವಿಧದಲ್ಲಿ ಕೃಷಿ ಬದು ಬೆಳೆ 928 1123
೫. ಹೆಚ್ಚು ಇಳುವರಿಯ ವಿಧದಲ್ಲಿ ಬಹು ಬೆಳೆಯು ಹಾಗೂ ಶಿಫಾರಸ್ಸು ಮಾಡಿದ ಶೇ. ೫೦ ಗೊಬ್ಬರ 1425 1890
೬. ಹೆಚ್ಚು ಇಳುವರಿಯ ವಿಧದಲ್ಲಿ ಬಹು ಬೆಳೆಯಲು ಹಾಗೂ ಶಿಫಾರಸ್ಸು ಮಾಡಿದ ಶೇ. ೧೦೦ ಗೊಬ್ಬರ 2125 2465
೭. ಸ್ಥಳೀಯ ಬೆಳೆಯ ಎಲ್ಲಾ ಸುಧಾರಿತ ರೂಢಿಯ ಆಚರಣೆ 1332 1972
೮. ಹೆಚ್ಚು ಇಳುವರಿ ವಿಧದ ಎಲ್ಲಾ ಸುಧಾರಿತ ರೂಢಿ 2375 2755

೧೯೮೯ರ ಕಬ್ಬಿನಾಲೆ ತಡೆ ನೀರಾವರಿ ಯೋಜನೆಯ ವಾರ್ಷಿಕ ವರದಿ.

ಹೆಕ್ಟೇರಿಗೆ ೨೩೭೫ ಕೆಜೆಯಂತೆ ಮೇಲೆ ದೃಢೀಕರಿಸಿದ ಕರ್ನಾಟಕ ರಾಜ್ಯದ ಇಳುವರಿಗಿಂತ ಸರಾಸರಿ ೧೦೦ರಷ್ಟು ಹೆಚ್ಚು ವರದಿಯಾಗಿದೆ. ಅರೆ ಶುಷ್ಕ ವಲಯದ ಅಂತರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ, ಹೈದರಾಬಾದ್ –  ಇದು ವಿಶ್ವದಲ್ಲಿ ಒಣಭೂಮಿ ಕೃಷಿಯ ಸಂಶೋಧನಾ ಕೇಂದ್ರವಾಗಿದೆ. ೧೯೭೬ರಿಂದ ೧೯೮೪ರವರೆಗೆ ಜಲಾನಯನ ಪ್ರದೇಶಗಳಲ್ಲಿ ಮುಂದುವರಿದ ಬೆಳೆಯ ವಿಧಾನದಿಂದ ಮೆಕ್ಕೆ ಮತ್ತು ಕಡಲೆ ಬೆಳೆಯ ಸರದಿಯಲ್ಲಿ ೧ ಹೆಕ್ಟೇರಿಗೆ ೪.೪ ಟನ್‌ನಷ್ಟು ಇಳುವರಿ ಹಾಗೂ ಮತ್ತು ತೊಗರಿ ಅಂತರ ಬೆಳೆಯಲ್ಲಿ ಹೆಕ್ಟೇರಿಗೆ ೩.೮೩ ಟನ್‌ನಷ್ಟು ಇಳುವರಿಯಾಗಿದೆ. ಇದಕ್ಕೆ ವಿರೋಧವಾಗಿ ಸಂಪ್ರಾದಾಯಿಕ ವಿಧಾನದಲ್ಲಿ ಬೆಳೆಯಲಾದ ಕಡಲೆ ಇಳುವರಿಯಲ್ಲಿ ಹೆಕ್ಟೇರಿಗೆ ೭೨೬ ಕೆಜಿಯಂತೆ ಮತ್ತು ಮುಂಗಾರು ಋತುಗಳಲ್ಲಿ ಒಂದು ಹೆಕ್ಟೇರಿಗೆ ೫೭೭೦ ಕೆಜಿಯಂತೆ ಇಳುವರಿಯಾಗಿದೆ. ಕೃಷಿ ಉತ್ಪನ್ನದಲ್ಲಿ ಕಂಡು ಬರುವ ಅಂತರಗಳು ಏನನ್ನು ಸೂಚಿಸುತ್ತವೆ ಅಂದರೆ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ದೊರತೆ ತಾಂತ್ರಿಕತೆಗೆ ಬೆಳೆ ಉತ್ಪಾದನೆಯನ್ನು ಬಹಳಷ್ಟು ಹೆಚ್ಚಿಸುವ ಶಕ್ತಿ ಇದೆ. ಆದರೆ, ಇರುವ ತಾಂತ್ರಿಕತೆಯ ವಿವರ, ಒಟ್ಟು ಪ್ರಾದೇಶಿಕ ಭೌಗೋಳಿಕ ಸನ್ನಿವೇಶಕ್ಕೆ ಅಳವಡಿಸಿಕೊಳ್ಳಲು ಸೂಕ್ತವಾಗಿವೆಯೇ, ಬೆಲೆ ಪರಿಣಾಮ, ಸಾಲ ವಿತರಣೆ ಹಾಗೂ ಇನ್ನಿತರ ಸೌಲಭ್ಯಗಳ ಅಡೆತಡೆಗಳನ್ನು ತೆಗೆದಾಗ ಎಂದು ತೋರಿಸುತ್ತವೆ.

 

ಒಂದು ಹೆಕ್ಟೇರ್ ಉತ್ಪಾದನೆಯ ಒಟ್ಟು ಬೆಲೆ

ಪ್ರಸ್ತುತ ಮತ್ತು ಸ್ಥಿರ ಬೆಲೆಗಳಲ್ಲಿ ಒಂದು ಹೆಕ್ಟೇರ್ ಮುಖ್ಯ ಬೆಲೆಯ ಉತ್ಪಾದನೆಯ ದರವನ್ನು ಕೋಷ್ಟಕ ೮ರಲ್ಲಿ ಮಂಡಿಸಲಾಗಿದೆ. ಹೆಕ್ಟೇರ್ ಉತ್ಪಾದನೆಯ ಒಟ್ಟು ದರದ ಆಧಾರದ ಮೇಲೆ ಮುಖ್ಯವಾಗಿ ಅಧಿಕ ಮತ್ತು ಕಡಿಮೆ ಬೆಳೆಗಳೆಂದು ವಿಂಗಡಿಸಲಾಗಿದೆ. ಒಂದು ಹೆಕ್ಟೇರಿಗೆ ಒಂದು ಬೆಳೆಯ ಒಟ್ಟು ಉತ್ಪಾದನಾ ದರ ಸರಾಸರಿ ಬೆಳೆಗಳ ಒಟ್ಟು ಉತ್ಪಾದನಾ ಮಟ್ಟಕ್ಕಿಂತ ಹೆಚ್ಚಾಗಿದ್ದರೆ ಆ ಬೆಳೆಯು ಅಧಿಕ ಬೆಲೆಯ ಬೆಳೆ ಎಂದೂ, ೧೯೫೯-೬೦ರ ಸಾಲಿಗೆ ಒಂದು ಹೆಕ್ಟೇರಿಗೆ ಉತ್ಪಾದನೆಯ ದರವು ರೂ. ೫೮೪೧, ತದನಂತರ ಕಬ್ಬು ಬೆಳೆಯ ದರ ರೂ. ೨೭೩೮ಕ್ಕೆ ನಿಂತಿದೆ. ತೆಂಗು, ಅಕ್ಕಿ, ರಾಗಿ ಮತ್ತು ಮೆಕ್ಕೆ ಜೋಳವು ಕ್ರಮವಾಗಿ ಅಧಿಕ ಬೆಲೆಯ ಬೆಳೆಗಳಾಗಿವೆ. ಎಣ್ಣೆ ಬೀಜಗಳು ಸರಾಸರಿ ಬೆಲೆ ರೂ. ೨೬೩ರ ಹತ್ತಿರ ಇದೆ. ೧೯೬೯-೭೦ರಲ್ಲಿ ರಾಗಿಯ ಬೆಳೆಯ ಗುಣಮಟ್ಟವನ್ನು  ಕಳೆದುಕೊಂಡಿತು ಮತ್ತು ಮುಂದೆ ಕಡಿಮೆ ದರದ ಬೆಳೆಯ ವರ್ಗಕ್ಕೆ ಸೇರಿಸಲಾಯಿತು ಮತ್ತು ಎಣ್ಣೆ ಬೀಜವು ಸರಾಸರಿ ಬೆಲೆ ರೂ. ೩೭೬ಕ್ಕಿಂತಲೂ ಕಡಿಮೆಯಾಗಿದೆ. ಮುಂದಿನ ಎರಡು ವರ್ಷಗಳವರೆಗೆ ೧೯೬೯-೭೦ರ ಮಾದರಿಯು ಮುಂದುವರಿಯಿತು. ೧೯೬೯-೭೦ರಲ್ಲಿ ಒಂದು ಹೆಕ್ಟೇರ್ ಉತ್ಪಾದನೆಯ ಒಟ್ಟು ದರವನ್ನು ಪ್ರಚಲಿತ ದರದಲ್ಲಿ ನೋಡಿದರೆ ಮೆಕ್ಕೆ ಅಧಿಕ ಬೆಲೆಯ ಬೆಳೆ ಗುಂಪಿಗೆ ಸೇರುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಬೆಳೆಗಳ ಸರಾಸರಿ ಉತ್ಪಾದನೆಯು ಒಟ್ಟು ದರಕ್ಕೆ ಹತ್ತಿರವಾಗಿದೆ. ೧೯೭೦ಮತ್ತು ೧೯೮೦ರಲ್ಲಿ ಹತ್ತಿ ಬೆಳೆಯಲ್ಲಿ ಹೆಚ್ಚು ಇಳುವರಿಯಾಗಿದ್ದರೂ, ಒಂದು ಹೆಕ್ಟೇರಿಗೆ ಇದರ ಉತ್ಪಾದನ ದರವು ಉಳಿದ ಬೆಳೆಗಿಂತ ಸ್ವಲ್ಪ ಕಡಿಮೆಯಾಗಿದೆ ಹಾಗೂ ಈ ಎಲ್ಲಾ ಅವಧಿಯಲ್ಲಿ ಸಂಬಂಧಿತ ದರವನ್ನು ಕೂಡ ಹತ್ತಿಯು ಪಡೆದುಕೊಂಡಿಲ್ಲ. ಇತರ ವಾಣಿಜ್ಯ ಬೆಳೆಗಳಾದ ಎಣ್ಣೆ ಬೀಜ, ಕಬ್ಬು, ತೆಂಗು ಮತ್ತು ಅಡಿಕೆಯು ಸಂಬಂಧಿಸಿದ ದರದಲ್ಲಿ ಲಾಭದಾಯಕವಾಗಿದೆ.

ಅಧಿಕ ಬೆಲೆಯ ಬೆಳೆಯು ಸಂಬಂಧಿಸಿದ ಅನುಕೂಲಕರವಾದ ಬೆಲೆಯೊಂದಿಗೆ ಒಂದು ಅವಧಿ ಯೊಳಗೆ ತುಲಾನಾತ್ಮಕವಾಗಿ ಅನುಕೂಲ ಪಡೆಯಿತು. ಅಧಿಕ ಇಳುವರಿಯಲ್ಲಿ ಹೆಚ್ಚಿನ ಬೆಳೆಯ ಮಟ್ಟವನ್ನು ಕಂಡರೂ ಕೆಲವೊಂದು ಕಡಿಮೆ ಬೆಲೆಯ ಬೆಳೆಗಳು ಪ್ರದೇಶವನ್ನು ಕಳೆದುಕೊಂಡಿತು. ಮೊದಲ ಮತ್ತು ಎರಡನೇ ವರ್ಷಗಳಲ್ಲಿ ಕ್ರಮವಾಗಿ ಜೋಳ ಬೆಳೆಯ ಇಳುವರಿಯ ಮಟ್ಟವು ೨.೨೭ ಶೇಕಡಾಕ್ಕೆ ತಲುಪಿತು. ಆದರೆ ಎರಡು ವರ್ಷಗಳಲ್ಲಿ ಅದೇ ಪ್ರದೇಶದಲ್ಲಿ -೨.೦೧ ಮತ್ತು -೧.೭೬ ಶೇಕಡಾದಷ್ಟಿದ್ದು ಇದು ನಕಾರಾತ್ಮಕ ಬೆಳೆವಣಿಗೆಯನ್ನು ತೋರಿಸುತ್ತದೆ. ಮೂರನೇ ದಶಕದಲ್ಲಿ ಸಜ್ಜೆ ಮತ್ತು ಹತ್ತಿ ಬೆಳೆಯ ಇಳುವರಿಯು ಕ್ರಮವಾಗಿ ಶೇಕಡಾ ೨.೫೬ ಮತ್ತು ೪.೪೮ರಷ್ಟಿತ್ತು. ಆಗ ಎರಡು ಬೆಳೆಯ ಪ್ರದೇಶದ ಬೆಳವಣಿಗೆಯ ದರ -೩.೧೯ ಮತ್ತು ೪.೮೦ ಮೊದಲ ದಶಕದಲ್ಲಿ ಬೆಲೆಯ ಬೆಳವಣಿಗೆಯ ದರ ಮತ್ತು ಬೆಳೆಯ ಇಳುವರಿ ಸಂಖ್ಯೆಯು ೦.೬೫೨೫ಯಾಗಿದ್ದು ಪರಸ್ಪರ ಸಂಬಂಧಿತವಾಗಿದ್ದು ಮತ್ತು ಇಳುವರಿಯ ಬೆಳವಣಿಗೆಯ ನಡುವೆ ಅನುಕೂಲ ಸಂಬಂಧವನ್ನು ತೋರ್ಪಡಿಸುತ್ತದೆ. ಎರಡನೇಯ ಮತ್ತು ಮೂರನೇ ದಶಕದಲ್ಲಿ ಬೆಳೆಯ ಬೆಲೆಯ ದರ ಮತ್ತು ಇಳುವರಿಯ ದರದ ಪರಸ್ಪರ ನಡುವಿನ ಸಂಬಂಧಿತ ಸಂಖ್ಯೆ – ೦.೫೩೧೭ ಮತ್ತು -೦.೪೧೦೦೩ ಆಗಿದ್ದು, ಇಳುವರಿ ಮತ್ತು ಪ್ರದೇಶದ ನಡುವೆ ವಿರೋಧಾಭಾಸವನ್ನು ಸೂಚಿಸುತ್ತದೆ. ಮೇಲಿನ ಹೇಳಿಕೆಯು ಬೆಳೆ ಪ್ರದೇಶದ ಬದಲಾವಣೆಯು ಕಡಿಮೆ ಉತ್ಪಾದನಾ ಬೆಳೆಗೆ ಪೂರಕವಾಗಿದ್ದು, ಇದು ಅಧಿಕ ಬೆಲೆಯ ಬೆಳೆಯಾಗಿದೆ, ಕಡಿಮೆ ಮೌಲ್ಯದ ಬೆಳೆಯಲ್ಲಿ ಅಧಿಕ ಉತ್ಪಾದನೆ ಪಡೆದಿದೆ. ಇದು ಬೆಳೆಗಳ ಮಾದರಿಯಲ್ಲಿ ಪರಸ್ಪರ ವೈರುದ್ಯತೆಯನ್ನು ತೋರಿಸುತ್ತವೆ. ಮಾರುಕಟ್ಟೆ ಬೆಲೆ ಮತ್ತು ರೈತರು ಬೆಳೆಯನ್ನು ಉತ್ಪಾದನೆಗಿಂತ ಬದಲಾಗಿ ನಿರೀಕ್ಷಿತ ಫಲದೊಂದಿಗೆ ಬದಲಾವಣೆ ಇರುವುದರಿಂದ ಬೆಳೆಯ ಮಾದರಿಯಲ್ಲಿ ವೈರುದ್ಯತೆ ಮತ್ತು ಉತ್ಪಾದನೆಯ ಮಟ್ಟ ಹೆಚ್ಚಾಗಲು ಕಾರಣವಾಯಿತು.

ಕೋಷ್ಟಕ – ೮
ಬೆಳೆಯ ಉತ್ಪಾದನೆಯ ಒಟ್ಟು ಮೌಲ್ಯ – ಕರ್ನಾಟಕ ರಾಜ್ಯದಲ್ಲಿ (ಮೌಲ್ಯ ರೂ.ಗಳಲ್ಲಿ)

  ಪ್ರಸ್ತುತ ದರದಲ್ಲಿ ೧೯೫೯-೬೦ ದರದಲ್ಲಿ
ಬೆಳೆ ೫೯-೬೦ ೬೯-೭೦ ೭೯-೮೦ ೮೯-೯೦ ೫೯-೬೦ ೬೯-೭೦ ೭೯-೮೦ ೮೯-೯೦
ಸಜ್ಜೆ ೮೨ ೧೯೮ ೩೫೦ ೯೨೨ ೮೨ ೧೪೧ ೧೩೦ ೧೬೮
ಜೋಳ ೧೩೯ ೧೮೨ ೯೭೪ ೧೫೦೫ ೧೩೯ ೨೩೭ ೨೩೯ ೨೩೯
ರಾಗಿ ೩೦೮ ೪೩೫ ೧೨೫೮ ೨೦೪೬ ೩೦೮ ೨೬೪ ೪೪೭ ೩೮೭
ಮೆಕ್ಕೆ ೨೯೩ ೧೫೭೯ ೨೫೫೭ ೫೦೯೫ ೨೯೩ ೮೯೪ ೮೦೨೬ ೬೩೩
ಅಕ್ಕಿ ೭೦೭ ೧೭೨೬ ೩೧೫೩ ೭೧೫೦ ೭೦೭ ೬೨೦ ೧೦೪೨ ೧೦೬೫
ಗೋಧಿ ೧೩೪ ೪೭೩ ೧೨೦೨ ೨೦೭೫ ೧೩೪ ೨೭೬ ೩೫೯೮ ೩೩೩
ಒಟ್ಟು ಧಾನ್ಯಗಳು ೨೫೧ ೬೮೫ ೧೪೦೧ ೨೯೦೯ ೨೫೧ ೩೬೦ ೧೬೨೨ ೪೬೪
ದ್ವಿದಳ ಧಾನ್ಯಗಳು ೧೧೯ ೩೨೪ ೧೧೦೨ ೨೨೩೨ ೧೧೯ ೧೫೬ ೧೭೭೨ ೧೪೪
ಎಣ್ಣೆ ಬೀಜ ೨೬೧ ೧೪೮ ೧೪೭೦ ೩೯೧೯ ೨೬೧ ೩೨೯೯ ೩೦೭೭ ೩೨೨
ಹತ್ತಿ ೯೪ ೨೪೦ ೫೯೮ ೨೪೩೩ ೯೪ ೧೧೦೨ ೧೪೮೩ ೩೨೨
ಕಬ್ಬು ೨೭೩೮ ೮೪೧೮ ೧೨೧೩೨   ೨೭೩೮ ೩೨೮೩ ೨೩೫೫ ೩೧೩೭
ತೆಂಗು ೧೨೩೩ ೨೬೨೫ ೬೩೭೦ ೧೩೬೫ ೧೨೩೩ ೧೨೦೧ ೧೩೬೦ ೧೩೫೫
ಅಡಿಕೆ ೫೮೪೧ ೮೫೮೯ ೧೭೧೪೪ ೫೧೨೮೪ ೫೮೪೧ ೮೫೮೯ ೯೪೫೩ ೯೫೯೮
ಎಲ್ಲಾ ಬೆಳೆಗಳು ೩೬೩ ೭೩೫ ೧೬೦೮ ೪೧೩೭ ೨೬೩ ೩೭೮ ೪೬೫ ೫೧೧

೧೯೮೦ರಲ್ಲಿ ಹಲವಾರು ಬೆಳೆಗಳ ಉತ್ಪಾದನೆಯಲ್ಲಿ ಇಳಿತವಾದರೂ ೧೯೮೦-೮೧ ರಲ್ಲಿ ಬೆಳೆಯ ಒಟ್ಟು ಉತ್ಪಾದನೆ ಮೌಲ್ಯ ಆ ವರ್ಷಗಳಲ್ಲಿ ವರ್ಷಕ್ಕೆ ಶೇಕಡಾ ೨.೬ನ್ನು ತೋರಿಸುತ್ತದೆ. ಬೆಳೆಯ ಉತ್ಪಾದನಾ ದರದಲ್ಲಿ ಆದ ಬೆಳವಣಿಗೆಯು ಮುಖ್ಯವಾಗಿ  ಅಧಿಕ ಬೆಳೆಯ ಅವಧಿಯಲ್ಲಿ ಅನುಕೂಲಕರವಾದ ಬದಲಾವಣೆಯತ್ತ ತಂದಿತ್ತು. ಕಾಳುಗಳು, ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳ ಉತ್ಪನ್ನಗಳಲ್ಲಿ ನಿಶ್ಚಲತೆಯ ಬಗ್ಗೆ ಕರ್ನಾಟಕ ಸರ್ಕಾರವು ಗಮನವಹಿಸಿತ್ತು ಹಾಗೂ ಸರ್ಕಾರವು ಕೃಷಿಯ ಉತ್ಪಾದನೆ ಇಳಿತಕ್ಕೆ ಕಾರಣ ಇತರ ಅಡೆತಡೆಗಳು, ಉತ್ಪಾದನೆಯ ಬೆಳವಣಿಗೆಗೆ ಅಡ್ಡಿ ಆತಂಕಗಳನ್ನು ಗುರುತಿಸಲು ಒಂದು ನುರಿತ ಸಮಿತಿಯನ್ನು ನೇಮಕ ಮಾಡಿತು. ಈ ಸಮಿತಿಯು ಕೃಷಿ ಉತ್ಪಾದನೆಯ ಹಲವಾರು ಮುಖ್ಯವಾದ ವಿಷಯಗಳನ್ನು ಒಳಗೊಂಡಂತೆ ವರದಿಯನ್ನು ೧೯೯೩ರಲ್ಲಿ ಮಂಡಿಸಲಾಯಿತು. ತಾಂತ್ರಿಕ ಅಡೆತಡೆಗಳಿಂದಾಗಿ ವ್ಯಕ್ತಿಗತ ಬೆಳೆಯ ಉತ್ಪಾದನೆಯ ಇಳುವರಿಯಲ್ಲಿ ಕುಂಠಿತವಾಗಿದೆ ಈ ಸಮಿತಿಯು ಗುರುತಿಸಿತು ಹಾಗೂ ರಾಜ್ಯದಲ್ಲಿ ಕೃಷಿ ವಿಜ್ಞಾನದಲ್ಲಿ ಅಧ್ಯಯನ ನಡೆಸುವಾಗ ಬೆಳೆ ಪ್ರಾದೇಶಿಕವಾಗಿ ಕಂಡು ಬರುವ ವಿಶೇಷ ಸಮಸ್ಯೆಗಳನ್ನು ಗಮನಿಸುವುದು ಸೂಕ್ತ ಎಂದು ಸಮಿತಿಯ ಶಿಫಾರಸ್ಸು ಮಾಡಿತು. ಈ ಸಮಿತಿಯು ಕೃಷಿ ವ್ಯಾಪ್ತಿಯ ಬಗ್ಗೆ ಹೆಚ್ಚು ಗಮನವನ್ನು ಕೇಂದ್ರಿಕರಿಸಲಾಯಿತು ಮತ್ತು ವಿಸ್ತರಣೆ ವ್ಯವಸ್ಥೆಯಡಿ ಹೊರ ನೋಟದ ದೃಷ್ಟಿಯಲ್ಲಿ ಬದಲಾವಣೆ ಮತ್ತು ಬೆಳೆಗಳ ಹೆಚ್ಚು ಉತ್ಪನ್ನದತ್ತ ಒತ್ತು ಕೊಡುವ ಕಾರ್ಯಕ್ರಮಕ್ಕೆ ಸಲಹೆ ನೀಡಿತು.

ಕೃಷಿ ಸಾಲ

೧೯೮೬-೮೭ರ ರಾಜ್ಯದ ಕೃಷಿ ಸಾಮಾಗ್ರಿಗಳ ನಿರೀಕ್ಷಣೆಯ ಪ್ರಕಾರ ಶೇಕಡಾ ೨೦.೩ರಷ್ಟು ರೈತರಿಗೆ ಮಾತ್ರ ಸಾಲ ವ್ಯವಸ್ಥೆ ಒದಗಿಸಲಾಯಿತು ಹಾಗೂ ೧೯೮೬-೮೭ರಲ್ಲಿ ಸಹಕಾರ ಸಂಸ್ಥೆಗಳಿಂದ ಶೇಕಡಾ ೧೩ರಷ್ಟು ಅತೀ ಸಣ್ಣ ರೈತರಿಗೆ ಮತ್ತು ೨೧ ಶೇಕಡಾ ಸಾಲ ಸೌಲಭ್ಯವನ್ನು ಒದಗಿಸಲಾಯಿತು. ಒಂದು ವರ್ಷಕ್ಕೆ  ಸುಮಾರು ರೂ. ೧೮೦೦ ಕೋಟಿ ಬೆಳೆಯ ಉತ್ಪಾದನೆಗೆ ಸಾಲ ಅಗತ್ಯತೆ ಇದ್ದರೂ (೭೫ ಶೇಕಡಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮತ್ತು ಶೇಕಡಾ ೪೦ ರಷ್ಟು ಇತರ ರೈತರಿಗೆ ರೂ. ೩೦೦೦ರಷ್ಟು ಒಂದು ಹೆಕ್ಟೇರ್ ಉತ್ಪಾದನೆಗೆ ಅಗತ್ಯವಿದೆ). ೧೯೯೧-೯೨ರಲ್ಲಿ ರೂ. ೩೦೦ ಕೋಟಿಯಷ್ಟು ಸಾಲ ಸೌಲಭ್ಯವನ್ನು ಒದಗಿಸಲಾಯಿತು. ಸಾಮಗ್ರಿಗಳ ಪಡಿಸಿವಿಕೆ ಹಾಗೂ ಉತ್ಪನ್ನಗಳ ಹೆಚ್ಚಳಕ್ಕೆ ವಾರ್ಷಿಕ, ಮಧ್ಯಮ ಮತ್ತು ದೀರ್ಘಾವಧಿ ಸಾಲಗಳ ಅಗತ್ಯತೆಯು ೮೦೦ ಕೋಟಿ ಆಗಿದ್ದರೆ ೧೯೯೧-೯೨ರಲ್ಲಿ ನಿಜವಾದ ಸಾಲ ೨೫೯ ಕೋಟಿ ರೂಪಾಯಿಗಳಾಗಿತ್ತು ಹೀಗೆ ರಾಜ್ಯದಲ್ಲಿ ಕೃಷಿ ಸಾಲದ ಅಗತ್ಯತೆ ಮತ್ತು ನಿಜವಾಗಿ ಒದಗಿಸಿದ ಸಾಲದ ನಡುವೆ ತುಂಬಾ ಅಂತರ ಕಂಡುಬರುತ್ತದೆ.

ಕರ್ನಾಟಕ ಸರ್ಕಾರದ ವತಿಯಿಂದ ಕೃಷಿ ಕ್ಷೇತ್ರದಲ್ಲಿ ಸರಿಪಡಿಸುವ ದಿಟ್ಟ ಹೆಜ್ಜೆಗಳು

೧೯೯೫ರಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಯೋಜನಾ ಮಂಡಳಿಯು ಕೃಷಿ ನೀತಿಯ ಒಂದು ಕರಡು ಠರಾವನ್ನು ತಂದಿತು. ಕೃಷಿ ಉತ್ಪಾದನೆಯ ಇಳಿತ ಮತ್ತು ಕೃಷಿ ಅಭಿವೃದ್ಧಿ ಹಾಗೂ ಕ್ಷೇತ್ರ ಬೆಳೆ, ತೋಟಗಾರಿಕೆ, ರೇಷ್ಮೆ ಬೆಳೆ, ಮೀನುಗಾರಿಕೆ ಹಾಗೂ ಪಶುಸಂಗೋಪನೆಯ ಕುರಿತಂತೆ ಒಂದು ಸಮಗ್ರ ಪದ್ಧತಿಯ ಹೊರರೇಖೆಯನ್ನು ಗುರುತಿಸಲಾಯಿತು. ಕೃಷಿ ಬೆಳವಣಿಗೆ ಮತ್ತು ಇದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುವ ಬಗ್ಗೆ ಖಾಸಗಿ ಸಂಸ್ಥೆಗಳ ಇತರ ಚಟುವಟಿಕೆಗಳ ಕುರಿತಂತೆ ಕರಡು ವರದಿ ಬಗ್ಗೆ ಚಿಂತಿಸಲಾಯಿತು. ಖಾಸಗಿಯವರಿಗೆ ಕೃಷಿ ಭೂಮಿಯನ್ನು ಕೊಳ್ಳಲು ಮತ್ತು ೫೬ ಎಕರೆಯವರೆಗೂ ಕೃಷಿ ಮಾಡಲು ಅನುಮತಿ ಕೊಡಲಾಯಿತು. ಜೊತೆಗೆ ಲಭ್ಯವಿರುವ ನೀರಿನ ದರದ ರಿಯಾಯಿತಿ ಮತ್ತು ಕೃಷಿ ಪಂಪು ಸೆಟ್ಟುಗಳಿಗೆ ೧೦ ಎಚ್.ಪಿ. ರಷ್ಟು ಉಚಿತ ವಿದ್ಯುತ್ ಶಕ್ತಿ ಕೊಡುಗೆ ಮತ್ತು ಕೃಷಿಕರಿಗೆ ನೀರು ಮತ್ತು ವಿದ್ಯುತ್ ಶಕ್ತಿಗೆ ಸಂಬಂಧಿಸಿದಂತೆ ಸಮರ್ಪಕವಾದ ದರವನ್ನು ಸಲಹೆ ನೀಡಲಾಯಿತು. ಕೃಷಿಯಲ್ಲಿ ತೊಡಗಿಸಿಕೊಂಡ ಹಣದ ಇಳಿತದ ಬಗ್ಗೆ ಈ ಕರಡು ನೀತಿಯು ಅರಿವನ್ನು ಮೂಡಿಸಿತು. ಬರುವ ಐದು ವರ್ಷಗಳಲ್ಲಿ ಒಂದು ವರ್ಷಕ್ಕೆ ರೂಪಾಯಿ ೧೦೦೦ ವ್ಯಯ ಮಾಡಲು ಸಲಹೆ ನೀಡಿತು ಮತ್ತ ಆ ಹಣವನ್ನು ಸರ್ಕಾರ ಮತ್ತು ಖಾಸಗಿಯವರು ಸಮಾನವಾಗಿ ಹಣವನ್ನು ಹಂಚಿಕೊಂಡು ವಾರ್ಷಿಕವಾಗಿ ಶೇಕಡಾ ೪.೫ರಷ್ಟು ಕೃಷಿಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಸಾಧಿಸಲು ತೀರ್ಮಾನಿಸಲಾಯಿತು.

ನೀತಿಯ ವಿಧಿ:

ತಾಂತ್ರಿಕತೆಯ ಮಟ್ಟದಲ್ಲಿ ನೋಡುವಾಗ ಅಲ್ಪ ಕಾಲಾವಧಿಯಲ್ಲಿ ಕೃಷಿ ಅಭಿವೃದ್ಧಿಯಲ್ಲಿ ಶೇಕಡಾ ೪.೫ರಷ್ಟು ವಾರ್ಷಿಕ ಬೆಳವಣಿಗೆಗೆ ತಲುಪುವುದು ಮಹತ್ವಾಂಕ್ಷೆಗೆ ಮೀರಿದಾಗಿದೆ ಎಂದು ಮನದಟ್ಟು ಮಾಡಲಾಯಿತು. ಹೀಗಿದ್ದರೂ ರಾಜ್ಯದ ಭೌಗೋಳಿಕ ಸನ್ನಿವೇಶಕ್ಕೆ ಅನುಗುಣವಾಗಿ ಹೆಚ್ಚು ಇಳುವರಿ ಕೊಡುವ ಬೀಜಗಳನ್ನು ಕೃಷಿ ವಿಶ್ವವಿದ್ಯಾನಿಲಯಗಳು ಮತ್ತು ಖಾಸಗಿ ಉದ್ಯಮಗಳ  ಮೂಲಕ ಪ್ರಯತ್ನ ಮಾಡುವುದು ಮತ್ತು ತಾಂತ್ರಿಕತೆಯ ಅಡೆ-ತಡೆಗಳು ಕಂಡು ಬಂದಲ್ಲಿ ತಾಂತ್ರಿಕತೆಯ ರವಾನೆಗೆ ವ್ಯವಸ್ಥೆ ಮಾಡಿಸಬೇಕು. ಕೃಷಿ ಅಧ್ಯಯನ ಕೇಂದ್ರದಿಂದ ರೈತರ ಜಮೀನಿಗೆ ತಾಂತ್ರಿಕತೆಯ ರವಾನೆಯನ್ನು, ಸ್ಫೂರ್ತಿ ಮತ್ತು ಅನುಭವವುಳ್ಳ ನುರಿತ ಕೃಷಿ ವಿಸ್ತರಾಣಾಧಿಕಾರಿಯ ಮೂಲಕ ತಿಳಿಸಬೇಕು. ಸೇವೆಯಲ್ಲಿರುವ ಕೃಷಿ ಸರ್ಕಾರಿ ಕೆಲಸಗಾರರ ಗುಂಪಿಗೆ ಪುನರ್ ತರಬೇತಿ ನೀಡುವುದೊಂದಿಗೆ ಜ್ಞಾನವನ್ನು ಹೆಚ್ಚುವುದರ ಮೂಲಕ ಪ್ರಸ್ತುತ ವಿಸ್ತರಣಾ ಕೆಲಸಗಾರರು ಹೆಚ್ಚು ಪರಿಣಾಮಕಾರಿಯಾಗಿ ತಮ್ಮ ಸೇವೆಯನ್ನು ಸಲ್ಲಿಸುವಂತೆ ಬಲಪಡಿಸುವುದು ಹಾಗೂ ಮಾಹಿತಿಯನ್ನು ರೈತನಿಗೆ ತಿಳಿಸಲು ಕೃಷಿ ವಿಸ್ತರಣಾಧಿಕಾರಿಯು ಸಮರ್ಥನಾಗುತ್ತಾನೆ. ಈ ಬಗ್ಗೆ ರಾಜ್ಯವು ನಿಗಾ ವಹಿಸಿದರೆ ಖಂಡಿತವಾಗಿಯೂ ಬೆಳವಣಿಗೆಯ ಮಟ್ಟವನ್ನು ಸಾಧಿಸಬಹುದು.

ವಸ್ತುಗಳ ಸಂಬಂಧಿತ ಬೆಲೆಯನ್ನು ಅನುಕೂಲತೆಗಳ ನಿಜವಾಗಿ ಬಹುಕಾಲ ದೃಢೀಕರಿಸಲಿಲ್ಲ. ಬೆಳೆಯ ಉತ್ಪಾದನೆಯಲ್ಲಿ ಮಂದಗತಿಯಿಂದಾಗಿ ಬಹುಕಾಲ ವಸ್ತುಗಳ ಸಂಬಂಧಿತ ಮೌಲ್ಯಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ, ಈ ಅಸ್ಥಿರ ಬೆಳೆಯ ಮಾದರಿಯು ಎಲ್ಲಾ ವರ್ಗದ ರೈತರಿಗೆ ಲಾಭದಾಯಕವಾಗಲಿಲ್ಲ. ಅಲ್ಪ ಕಾಲಾವಧಿಯ ಯಾವುದಾದರು ಒಂದು ನೀತಿಯ ಆಯ್ಕೆ ಮಾಡಿ ಬಲಪಡಿಸಲು ಪೂರಕ ವ್ಯವಸ್ಥೆಯನ್ನು ಒದಗಿಸಿ ಅದರಿಂದ ಉಂಟಾಗುವ ಬದಲಾವಣೆಯನ್ನು ಕ್ರೋಢೀಕರಣ ಮಾಡಬೇಕು. ದೀರ್ಘಾವದಿ ನೀತಿಯನ್ನು ಯಾವ ಬೆಳೆಗೆ ತುಲನಾತ್ಮಕ ಅನುಕೂಲ ಮತ್ತು ಸಂಪ್ರದಾಯಿಕವಲ್ಲದ ಇತರ ಹೆಚ್ಚುವರಿ ಉತ್ಪಾದನೆ ಮಟ್ಟವನ್ನು ಹೆಚ್ಚಿಸಲು ವಿಸ್ತರಣಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಸಜ್ಜುಗೊಳಿಸುವುದರ ಜೊತೆಗೆ ಅಧ್ಯಯನವನ್ನು ಗುರುತಿಸಬೇಕು. ಬೆಳೆಯ ಮಾದರಿಯಲ್ಲಿ ಆದ ಬದಲಾವಣೆಯು ವಾಣಿಜ್ಯ ಬೆಳೆಗೆ ಅನುಕೂಲಕರವಾಗಿದೆ. ಇದು ಕಾಳು ಬೆಳೆಯ ಉತ್ಪಾದನೆಯಲ್ಲಿ ರಾಜ್ಯದಲ್ಲಿ ತುಲಾನಾತ್ಮಕ ಅನುಕೂಲತೆ ಹೊಂದಿಲ್ಲ ಅನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಹೊಸ ಆರ್ಥಿಕ ನೀತಿಯಲ್ಲಿ (ಉದಾರೀಕರಣ ನೀತಿ)ವ್ಯಾಪಾರದ ಕಟ್ಟು ಪಾಡುಗಳು ಒಳಗೊಂಡಿರುವಾಗ, ರಾಜ್ಯದ ದಾನ್ಯಗಳ ಬೆಳೆಯಲ್ಲಿ ಸ್ವಾವಲಂಬನೆಯತ್ತ ಮತ್ತು ಕಡಿಮೆ ಮಟ್ಟದ ಉತ್ತಾದನೆಯನ್ನು ಮುಂದುವರಿಸುವ ವಿಶೇಷ ಪ್ರಯತ್ನ ಮಾಡಬೇಕಾಗಿಲ್ಲ ಬದಲಾಗಿ ಸಂಶೋಧನೆ ಮತ್ತು ಕೃಷಿ ವಿಸ್ತರಣ ಮೂಲಕ ಯಾವ ಬೆಳೆಯಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಕುರಿತಂತೆ ಪ್ರಯತ್ನಿಸಬೇಕು.

ಲಭ್ಯ ಇರುವ ಎಲ್ಲಾ ಜಲ ಸಂಪನ್ಮೂಲಗಳನ್ನು ಬಳಸಿಕೊಂಡರೂ ರಾಜ್ಯದ ಶೇಕಡಾ ೫೭ರಷ್ಟು ಕೃಷಿ ಪ್ರದೇಶವು ಕಡಿಮೆ ಮಳೆ ಆಧರಿತ ಪ್ರದೇಶವಾಗಿದೆ. ರಾಜ್ಯದ ಉತ್ಪಾದನಾ ಬೆಳವಣಿಗೆಯ ಮಟ್ಟವು ಹೆಚ್ಚಾಗಿ ಮಳೆಯಾಧಾರಿತ ಬೆಳೆಯ ಉತ್ಪನ್ನವನ್ನು ಆಧರಿಸಿಕೊಂಡಿದೆ. ಇದು ಹರಿದು ಹೋಗುತ್ತಿರುವ ನೀರನ್ನು ತಡೆ ನೀರಾವರಿ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳುವ ಅಗತ್ಯತೆಯನ್ನು ತಿಳಿಸುತ್ತವೆ.

ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಸಹಕಾರ ಸಂಸ್ಥೆಗಳಿಗೆ ರೂ. ೫೦೦ ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ರಿಯಾಯಿತಿ ವ್ಯವಸ್ಥೆಯು ಭ್ರಷ್ಟಚಾರ, ವಂಚನೆಗೆ ಆಸ್ಪದ ಕೊಡುವುದರ ಜೊತೆಗೆ ಗ್ರಾಮೀಣ ವ್ಯವಸ್ಥೆಯನ್ನು ನಾಶ ಪಡಿಸಿತು. ಸುಮಾರು ಎರಡು ವರ್ಷಗಳಿಂದ ವಿದ್ಯುತ್ ಶಕ್ತಿಯ ಗೊಬ್ಬರ ಮತ್ತು ಇನ್ನಿತರ ಪೂರಕ ರಿಯಾಯಿತಿ ಚಾಲ್ತಿಯಲ್ಲಿದೆ. ಉಳಿತಾಯದ ಹಣವನ್ನು, ವ್ಯವಸ್ಥೆಯನ್ನು ದಕ್ಷವಾಗಿ ನೋಡಿಕೊಳ್ಳಲು ಒದಗಿಸಬೇಕು ಮತ್ತು ಕೃಷಿ ಸಾಮಗ್ರಿಗಳಿಗೆ ಮತ್ತು ಉತ್ತಮ ಕೃಷಿ ವಿಸ್ತರಣಾ ವ್ಯವಸ್ಥೆಗೆ ಪೂರಕವಾಗಿ ಹಣದ ಪ್ರಮಾಣವನ್ನು ಒದಗಿಸಬೇಕು.

ಉತ್ಪಾದನಾ ಮಟ್ಟವನ್ನು ಹೆಚ್ಚಿಸುವ ಪ್ರಸ್ತುತ ಇರುವ ಮಾರುಕಟ್ಟೆಯನ್ನು ವಿಸ್ತರಣೆ ಮಾಡುವುದರ ಜೊತೆಗೆ ಕೃಷಿ ಮತ್ತು ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ತೆಗೆಯುವ ಅಗತ್ಯತೆ ಇದೆ.