ನಮ್ಮಲ್ಲಿ ಒದಗಿರುವ ತಾಂತ್ರಿಕ ಮತ್ತು ಕಾಲ್ಪನಿಕ ಯೋಜನೆ ಮತ್ತು ಸಮರ್ಪಕವಾದ ಕೃಷಿ ಅಭಿವೃದ್ಧಿಯ ನೀತಿಯ ಕೊರತೆಯಿಂದಾಗಿ ಒಟ್ಟು ಭಾರತದಲ್ಲಿ ಪ್ರಸ್ತುತ ಕೃಷಿ ಬೆಳೆಯ ಇಳುವರಿಯು ಮೂರನೇ ಒಂದರಿಂದ ಎರಡನೇ ಒಂದರಷ್ಟಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವೊಂದು ಮುಖ್ಯವಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ  ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಬೆಳೆಯ ಮಾದರಿ, ಉತ್ಪಾದನೆ, ಇಳುವರಿಯಲ್ಲಿ ಉಂಟಾಗುವ ಅಂತರ ಹಾಗೂ ಬದಲಾವಣೆಗಳನ್ನು ಮಾತ್ರ ಈ ಅಧ್ಯಯನದ ವ್ಯಾಪ್ತಿಗೆ ಒಳಪಡಿಸಲಾಗಿದೆ. ಬಹು ವಿಧವಾದ ಬೆಳೆಯು ರಾಜ್ಯದ ಲಕ್ಷಣವಾಗಿದೆ. ಬೆಳೆಯ ಮಾದರಿ ಬಹುರೂಪ ಮತ್ತು ಪ್ರಾದೇಶಿಕ ವ್ಯತ್ಯಾಸಗಳು ಕೃಷಿ ರಂಗದಲ್ಲಿ ಉಂಟಾಗುವ ವ್ಯತ್ಯಾಸಕ್ಕೆ ಸೂಚ್ಯವಾಗಿರಬಹುದು. ರಾಜ್ಯದಲ್ಲಿ ಕೃಷಿ ಬದಲಾವಣೆಯು ಯಾವ ದಿಶೆಯನ್ನು ಅನುಸರಿಸುತ್ತದೆ ಹಾಗೂ ಕೃಷಿಯಲ್ಲಿ  ಅನುಷ್ಟಾನಗೊಳಿಸಬೇಕಾದ ನೀತಿಯ ಆಯ್ಕೆ ಕುರಿತಂತೆ ಪ್ರಯತ್ನಿಸುವಲ್ಲಿ ಈ ಲೇಖನವು ಸಫಲವಾಗಬಹುದು.

ಆರ್ಥಿಕತೆಯಲ್ಲಿ ಕೃಷಿಯ ಪ್ರಾಮುಖ್ಯತೆ

ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿಯು ಮೊದಲ ಸ್ಥಾನವನ್ನು ಆಕ್ರಮಿಸಿದೆ. ಇದರಿಂದ ರಾಜ್ಯಗಳು ಹೊರತಾಗಿಲ್ಲ. ೧೯೬೦-೬೧ರಲ್ಲಿ ದೇಶದ ಒಟ್ಟು ಉತ್ಪಾದನೆಯಲ್ಲಿ ಕೃಷಿ ಕ್ಷೇತ್ರದ ಕೊಡುಗೆ ಪ್ರಚಲಿತ ಬೆಲೆ ಪ್ರಕಾರ ೫೧.೪ ಶೇಕಡಾ ಆಗಿತ್ತು. ೧೯೮೦-೮೧ರಲ್ಲಿ ಶೇಕಡಾ ೪೦ಕ್ಕೆ ಇಳಿದಿತ್ತು ಮತ್ತು ೧೯೯೦-೯೧ರಲ್ಲಿ ೩೪.೪ ಶೇಕಡಾಕ್ಕೆ ಬಂತು. ೧೯೬೦-೬೧ರಲ್ಲಿ ಒಟ್ಟು ೬೫.೫ ಶೇಕಡಾ ಕಾರ್ಮಿಕರು ಕೃಷಿಯನ್ನು ಅವಲಂಬಿಸಿದ್ದರು. ೧೯೯೦-೯೧ನೇ ಸಾಲಿಗೆ ಶೇಕಡಾ ೬೪.೮ ಮಟ್ಟಕ್ಕೆ ತಲುಪಿತು. ೧೯೬೦-೬೧ನೇ ವರ್ಷದಲ್ಲಿ ರಾಜ್ಯದಲ್ಲಿ ೬೦.೭ ಶೇಕಡಾ ದೇಶ ಮಟ್ಟಕ್ಕೆ ಹೋಲಿಸಿದಾಗ ಹೆಚ್ಚಾಗಿತ್ತು. ೧೯೮೦-೮೧ರಲ್ಲಿ ಶೇಕಡಾ ೪೫.೮ ಹಾಗೂ ೧೯೯೦-೯೧ ಶೇಕಡಾ ೬೪.೮ಕ್ಕೆ ಇಳಿದಿತ್ತು. ರಾಜ್ಯದ ಒಟ್ಟು ಉತ್ಪಾದನೆಯಲ್ಲಿ ಕೃಷಿ ಕ್ಷೇತ್ರದ ಕೊಡುಗೆಯು ೬೦.೭ ಶೇಕಡಾ. ಇದು ದೇಶ ಮಟ್ಟಕ್ಕೆ ೧೯೮೦-೮೧ರಲ್ಲಿ ೪೫.೮ ಶೇಕಡಾ ಮತ್ತು ೧೯೯೦-೯೧ನೇ ಸಾಲಿನಲ್ಲಿ ಶೇಕಡಾ ೩೬.೪ರಷ್ಟಿತ್ತು ಕೃಷಿಯನ್ನೇ ಅವಲಂಬಿಸಿಕೊಂಡಿದ್ದ ಕಾರ್ಮಿಕರ  ಕೊಡುಗೆ ಕಾರ್ಮಿಕ ಬಲ ೭೦.೬ರಿಂದ ೧೯೭೦-೭೧ಕ್ಕೆ ಶೇಕಡಾ ೬೫ಕ್ಕೆ ಕಡಿತಗೊಂಡಿತ್ತು. ೧೦೯೦-೯೧ರ ಸಾಲಿನಲ್ಲಿ ಇದರ ಮಟ್ಟ ೬೩.೧ಕ್ಕೆ ಇಳಿಯಿತು. ಈ ಶೇಕಡಾವಾರು ಅಂಕಿ-ಅಂಶಗಳು ಕೃಷಿ ಕ್ಷೇತ್ರದ ಕೊಡುಗೆಯು ಪರಿಣಾಮಕಾರಿಯಾಗಿ ಕೆಳಕ್ಕೆ ಬಂದಿರುವುದನ್ನು ತೋರಿಸುತ್ತದೆ. ಕೃಷಿಯನ್ನು ಅಲವಂಬಿಸಿಕೊಂಡಿದ್ದ ಕಾರ್ಮಿಕರ ಪ್ರಮಾಣವು ಸಮಪ್ರಮಾಣದಲ್ಲಿ ಕ್ಷೀಣಿಸಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಕೃಷಿ ಕೆಲಸಗಾರರ ಆದಾಯದ ಪ್ರಮಾಣವನ್ನು ಕೃಷಿಯೇತರ ಕೆಲಸಗಾರರಿಗೆ ಹೋಲಿಸಿದಾಗ ಕಡಿಮೆಯಾಗಿದೆ ಮತ್ತು ಕೈ ಕೂಲಿಗಾರರ ನಡುವೆ ಆದಾಯದಲ್ಲಿ ಅಸಮಾನತೆ ಇತ್ತು, ಕೃಷಿಯೇತರ ಸಂಖ್ಯೆ ಈ ವರ್ಷಗಳಲ್ಲಿ ಹೆಚ್ಚುತ್ತಾ ಬಂತು. ಜೀವನ ಮಟ್ಟದ ಸುಧಾರಣೆಯಲ್ಲಿ ಶೇಕಡಾ ೬೦ರಷ್ಟು ಕೆಲಸ ಕೃಷಿ ಅಭಿವೃದ್ಧಿಯನ್ನು ಅವಲಂಬಿಸಿದೆ. ಇದರೊಂದಿಗೆ ಆರ್ಥಿಕತೆಯ ಇತರ ಮುಖಗಳೊಂದಿಗೆ ಕೃಷಿ ಕ್ಷೇತ್ರವು ಸರಪಣಿ ಹೊಂದಿದೆ. ಇತರ ಕ್ಷೇತ್ರಗಳ ಉನ್ನತಿಯು ಕೂಡ ಕೃಷಿ ಕ್ಷೇತ್ರದ ಕಾರ್ಯ ಸಾಧನೆಯನ್ನು ಅವಲಂಬಿಸಿದೆ.

ಬೆಳೆಯ ವಿಧಾನ

ಮೂರು ದಶಕಗಳಿಂದ ಭಾರತದ ಕೃಷಿ ಕ್ಷೇತ್ರದಲ್ಲಿ ಮುಖ್ಯವಾಗಿ ಬೆಳೆಯ ವಿಧಾನ, ಬೆಳೆಯ ಉತ್ಪಾದನೆಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ಆಹಾರ ಧಾನ್ಯಗಳಲ್ಲಿ ಸ್ವಾವಲಂಬನೆ ಹಾಗೂ ಮಾರುಕಟ್ಟೆ ದರಗಳನ್ನು ಸ್ಥಿರ ಇರುವಂತೆ, ಜೊತೆಗೆ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಆಹಾರ ಧಾನ್ಯಗಳ ಕೊರತೆಯನ್ನು ಎದುರಿಸಲು ಹೆಚ್ಚುವರಿ ಆಹಾರ ಸಂಗ್ರಹಣೆಯನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ನೀರಾವರಿಯ ಸಾಮರ್ಥ್ಯ, ನೀರಾವರಿಯನ್ನು ಅವಲಂಬಿಸಿಕೊಂಡು ಕೃಷಿಕ್ಷೇತ್ರದಲ್ಲಿ ಹೊಸ ತಾಂತ್ರಿಕತೆಯಿಂದಾಗಿ, ಗೊಬ್ಬರ ಮತ್ತು ಬೀಜ ತಳಿಗಳು ಮುಂತಾದ ವಿಶೇಷ ಲಕ್ಷಣಗಳಿಂದಾಗಿ ಈ ಮೇಲಿನ ಬದಲಾವಣೆಯು ಸಾಧ್ಯವಾಯಿತು. ಹೀಗಿದ್ದರೂ ಪ್ರಾಕೃತಿಕ ಸಂಪನ್ಮೂಲಗಳಲ್ಲಿ ಇರುವ ವ್ಯತ್ಯಾಸ, ನೀರಾವರಿ ಮತ್ತು ಹೊಸ ತಾಂತ್ರಿಕತೆಯ ಅಭಿವೃದ್ಧಿಯು ಮುಖ್ಯವಾಗಿ ರಾ‌ಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುವುದರಿಂದ ಕೃಷಿ ಅಭಿವೃದ್ಧಿಯು ಪ್ರಾದೇಶಿಕವಾಗಿ ದೇಶದ ಎಲ್ಲಾ ಕಡೆಯಲ್ಲಿಯೂ ಏಕರೂಪವಾಗಿಲ್ಲ.

ಕಳೆದ ಮೂರು ದಶಕಗಳಿಂದ ಕರ್ನಾಟಕದಲ್ಲಿ ಕೃಷಿ ವಿಧಾನದಲ್ಲಿ ಆದ ವ್ಯತ್ಯಾಸಗಳನ್ನು ಗುರುತಿಸಿ, ದೇಶ ಮಟ್ಟಕ್ಕೆ ಹೋಲಿಸುವ ಪ್ರಯತ್ನ ಇಲ್ಲಿ ಕೈಗೊಳ್ಳಲಾಗಿದೆ. ಸಜ್ಜೆ, ಜೋಳ, ರಾಗಿ, ಮೆಕ್ಕೆ ಜೋಳ, ಅಕ್ಕಿ, ಗೋಧಿ, ನವಣೆ, ಸಾವೆ (save), ಹರಕ, ಬಡ್ಲಿದರಿ, ಬರಗು, ಇತರ ಕಾಳುಗಳು, ಕಡಲೆ, ತೊಗರಿ, ಹುರಳಿ, ಉದ್ದು, ಹೆಸರು, ಇತರ ದ್ವಿದಳ ಧಾನ್ಯಗಳು , ಶೇಂಗಾ, ಸಾಸಿವೆ, ಹರಳೆಣ್ಣೆ ಬೀಜ, ಅಗಸೆ, ಸೂರ್ಯಕಾಂತಿ, ಹತ್ತಿ, ಕಬ್ಬು, ತೆಂಗು ಮತ್ತು ಅಡಿಕೆ ಮುಂತಾದ ಮೂವತ್ತೆರಡು ಬೆಳೆಗಳನ್ನು ಕರ್ನಾಟಕ ರಾಜ್ಯದಲ್ಲಿ ಶೇಡಕಾ ೯೪ರಷ್ಟು ಹಾಗೂ ದೇಶ ಮಟ್ಟದಲ್ಲಿ ಶೇಕಡಾ ೯೧.೫ರಷ್ಟು ೧೯೫೦-೬೦, ೧೯೬೯-೭೦, ೧೯೭೯-೮೦, ೧೯೮೮-೮೦  ಮತ್ತು ೧೯೮೯-೯೦ನೇ ವರ್ಷಗಳಲ್ಲಿ ಸಂಬಂಧಪಟ್ಟಂತೆ ವಾರ್ಷಿಕ ಏರಿಳಿಕೆಯನ್ನು ಸಮನಾಗಿಸಲು ಅಂಕಿ-ಸಂಖ್ಯೆಗಳನ್ನು ತ್ರಿವರ್ಷಗಳ ಸರಾಸರಿಯಲ್ಲಿ ಮಂಡಿಸಲಾಗಿದೆ. ದೇಶಾದಾದ್ಯಂತ ಸುಮಾರು ೧೫೨೪ ಲಕ್ಷ ಹೆಕ್ಟೇರಿನಿಂದ ೧೭೬೧ ಲಕ್ಷ ಹೆಕ್ಟೇರಿನಷ್ಟು ಬೆಳೆಯನ್ನು ಬೆಳೆಸುವ ಪ್ರದೇಶದಲ್ಲಿ ಸ್ಥಿರವಾಗಿ ಹೆಚ್ಚಳವಾಗಿದೆ. ೧೯೫೯-೬೦ ರಿಂದ ೧೯೮೮-೮೯ರವರೆಗೆ ಶೇಕಡಾ ೧೫.೬ರಷ್ಟು ಹೆಚ್ಚುವರಿಯಾಗಿದೆ. ೧೯೫೯-೬೦ರಲ್ಲಿ ಕಾಳುಗಳನ್ನು ಶೇಕಡಾ ೫೯.೮ ಪ್ರದೇಶದಲ್ಲಿ ಬೆಳೆಯಲಾಗಿದೆ ಮತ್ತು ೧೯೬೯-೭೦ರಲ್ಲಿ ಹೊಸ ಬಗೆಯ ಕಾಳುಗಳ ಬೆಳೆಯನ್ನು ಆರಂಭಿಸಿರುವುದರಿಂದ ಶೇಕಡಾ ೬೨ರ ಮಟ್ಟವನ್ನು ತಲುಪಿತು. ಆದರೆ  ಮುಂದಿನ ದಶಕಗಳಲ್ಲಿ ಕಾಳುಗಳನ್ನು ಬೆಳೆಸುವ ಪ್ರದೇಶಗಳಲ್ಲಿ ಇಳಿತವಾಗಿವೆ. ೧೯೮೮-೮೯ರಲ್ಲಿ ಶೇಕಡಾ ೫೮ಕ್ಕೆ ನಿಂತಿತು. ಧಾನ್ಯಗಳಲ್ಲಿ ಮುಖ್ಯವಾಗಿ ಗೋಧಿ ಲಾಭದಾಯಕ ಬೆಳೆಯಲಾಗಿದೆ. ಇದರ ಪ್ರಮಾಣವು  ೧೯೫೯-೬೦ ರಲ್ಲಿ ಶೇಕಡಾ ೮.೫ರಿಂದ ೧೯೮೮-೮೯ ವರ್ಷಕ್ಕೆ ಶೇಕಡಾ ೧೩.೪ಕ್ಕೆ ಏರಿತು. ಪ್ರಥಮ ದಶಕಗಳಲ್ಲಿ ಅಕ್ಕಿ ಬೆಳೆಯು ಪ್ರದೇಶವು ಶೇಕಡಾ ೧ ರಿಂದ ಸುಮಾರು ೨೨ ಶೇಕಡಾಕ್ಕೆ ಏರಿತು. ಮುಂದಿನ ದಶಕಗಳಲ್ಲಿ ಇದರ ಅಂಶವು, ಶೇಕಡಾ ೨೩ಕ್ಕೆ ಮುಂದುವರಿಯಿತು. ಮೆಕ್ಕೆ ಧಾನ್ಯವನ್ನು ಹೊರತು ಪಡಿಸಿ ಕೆಳ ದರ್ಜೆಯ ಧಾನ್ಯಗಳು ಪ್ರದೇಶಗಳಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡಿತು. ಇದರೊಂದಿಗೆ ಸಜ್ಜೆಯ ಅಂಶವು ಕೂಡ ಶೇಕಡಾ ೭.೩ರಿಂದ ಶೇಕಡಾ ೬ಕ್ಕೆ ಕಡಿತಗೊಂಡಿತು. ಜೋಳ ೧೧.೮ ರಿಂದ ೮.೬ಕ್ಕೆ ಮತ್ತು ರಾಗಿ ೧.೭ ಶೇಕಡಾದಿಂದ ೧.೩ ಶೇಕಡಾಕ್ಕೆ ಇಳಿತಗೊಂಡಿತು. ಆದರೆ, ಮೆಕ್ಕೆ ಧಾನ್ಯದ ಭಾಗವು ಶೇಕಡಾ ೨.೮ರಿಂದ ೩.೩ಕ್ಕೆ ಹೆಚ್ಚುವರಿಯಾಯಿತು. ದ್ವಿದಳ ಧಾನ್ಯಗಳು ಕೂಡ ಪ್ರದೇಶಗಳಲ್ಲಿ ತನ್ನ ಅಂಶಗಳನ್ನು ಕಳೆದುಕೊಂಡ ವರ್ಗಕ್ಕೆ ಸೇರಲಾಯಿತು. ಇದರ ಅಂಕಿ-ಅಂಶವು ೧೯೮೯-೬೦ರಿಂದ ಶೇಕಡಾ ೧೫.೯ರಿಂದ ೧೯೮೮-೮೯ಕ್ಕೆ ಶೇಕಡಾ ೧೨.೮ಕ್ಕೆ ಕುಂಠಿತಗೊಂಡಿತು. ವಾಣಿಜ್ಯ ಬೆಳೆಗಳಾದ ಎಣ್ಣೆಬೀಜಗಳು ೧೩೫.೭ ಲಕ್ಷ ಹೆಕ್ಟೇರಿನಿಂದ ೨೧೬.೭  ಲಕ್ಷ ಹೆಕ್ಟೇರ ವ್ಯಾಪ್ತಿಯನ್ನು ಹೊಂದಿದೆ. ಮೂರು ದಶಕಗಳಲ್ಲಿ ಶೇಕಡಾ ೫೯.೭ರಷ್ಟು ಭಾಗವನ್ನು ಪಡೆಯಿತು ಮತ್ತು ಇದೇ ದಶಕದಲ್ಲಿ ಇದರ ಪಾಲು ಸುಮಾರು ಶೇಕಡಾ ೮.೯ರಿಂದ ಶೇಕಡಾ ೧೩.೩ಕ್ಕೆ ಉನ್ನತಿಯನ್ನು ಸಾಧಿಸಿತು ಇದು ದ್ವಿದಳ ಧಾನ್ಯದ ಸರಾಸರಿಯ ಮಟ್ಟಕ್ಕೆ ಬಂದಿದೆ. ೧೯೫೯-೬೦ರಲ್ಲಿ ಹತ್ತಿ ಬೆಳೆಯ ಭಾಗವು ಶೇಕಡಾ ೫ ರಷ್ಟಿದ್ದೂ, ಮುಂದಿನ ಮೂರು ದಶಕಗಳಲ್ಲಿ ಶೇಕಡಾ ಒಂದಕ್ಕೆ ಇಳಿಯಿತು. ಇತರ ವಾಣಿಜ್ಯ ಬೆಳೆಗಳಾದ ಕಬ್ಬು, ತೆಂಗು ಮತ್ತು ಅಡಿಕೆಯ ಸರಾಸರಿ ಭಾಗ ಕಡಿಮೆಯಾಗಿದ್ದೂ ಈ ಬೆಳೆಗಳ ಭಾಗವು ೧೯೮೮-೮೯ನೇ ಸಾಲಿನಲ್ಲಿ ಕ್ರಮವಾಗಿ ಶೇಕಡಾ ೧.೯, ೧.೮ ಮತ್ತು ೧.೧ ರಷ್ಟಿತ್ತು ಸಂಕ್ಷಿಪ್ತವಾಗಿ ಹೇಳುವುದಾದರೆ ಧಾನ್ಯಗಳು ಮುಖ್ಯವಾಗಿ (ಅಕ್ಕಿ ಮತ್ತು ಗೋಧಿ), ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳು ಭಾರತದಲ್ಲಿ ಬೆಳೆಯ ವಿಧಗಳಲ್ಲಿ ಪ್ರಮುಖವಾಗಿದೆ.

ಕರ್ನಾಟಕದಲ್ಲಿ ಸುಮಾರು ೧೯೫೯-೬೦ರಿಂದ ೧೯೭೯-೮೦ರವರೆಗೆ ಶೇಕಡಾ ೩.೭ರಷ್ಟು ಬೆಳೆ ಬೆಳೆಸಲ್ಪಟ್ಟ ಪ್ರದೇಶದಲ್ಲಿ ಅಧಿಕವಾಗಿದೆ. ಕಳೆದ ದಶಕಗಳಲ್ಲಿ (೧೯೭೯-೮೦ ರಿಂದ ೧೯೮೯-೯೦) ಅವಧಿಯಲ್ಲಿ ಶೇಕಡಾ ೧೦ರಷ್ಟು ಹೆಚ್ಚುವರಿಯಾಯಿತು. ೧೯೫೯-೬೦ರಲ್ಲಿ ಕಾಳುಗಳನ್ನು ಬೆಳೆಯಲ್ಪಟ್ಟ ಪ್ರದೇಶವು ಶೇಕಡಾ ೫೮ರಷ್ಟಿದ್ದು, ೧೯೬೯-೭೦ ವರ್ಷಗಳಲ್ಲಿ ಶೇಕಡಾ ೫೫.೮ ಮಟ್ಟಕ್ಕೆ ಇಳಿಯಿತು, ೧೯೭೯-೮೦ರ ಸಾಲಿಗೆ ಇದರ ಭಾಗವು ಕ್ಷೀಣಗೊಂಡು, ೧೯೮೯-೯೦ರ ಅವಧಿಯಲ್ಲಿ ಶೇಕಡಾ ೪೭.೬ಕ್ಕೆ ದುರ್ಬಲಗೊಂಡಿತು. ಧಾನ್ಯಗಳಲ್ಲಿ ಮೆಕ್ಕೆ, ರಾಗಿ ಮತ್ತು ಅಕ್ಕಿಯನ್ನು ಹೊರತುಪಡಿಸಿ ಉಳಿದೆಲ್ಲಾ ಧಾನ್ಯಗಳಲ್ಲಿ ೧೯೫೯-೬೦ರಿಂದ ೧೯೮೯-೯೦ಕ್ಕೆ ಬೆಳೆಯಲ್ಪಟ್ಟ ಪ್ರದೇಶಗಳಲ್ಲಿ ತಮ್ಮ ಭಾಗವನ್ನು ಕಳೆದುಕೊಂಡಿತು. ಅದಾಗ್ಯೂ ಮೂರು ದಶಕಗಳಿಂದ ಜೋಳ ಬೆಳೆಯ ಭಾಗವು ಶೇಕಡಾ ೨೭.೨ರಿಂದ ಶೇಕಡಾ ೧೮.೫ಕ್ಕೆ ಕಡಿತಗೊಂಡರೂ ಕೂಡ ಇವತ್ತು ರಾಜ್ಯದ ಮುಖ್ಯ ಬೆಳೆಯಾಗಿ ಪರಿಗಣಿಸಲಾಗಿದೆ. ಜೋಳ ನಂತರ ರಾಗಿ ಮತ್ತು ಅಕ್ಕಿಯ ಭಾಗವು ಬೆಳೆ ಪ್ರದೇಶದಲ್ಲಿ ಪ್ರಮುಖವಾಗಿದೆ. ಈ ಎರಡು ಬೆಳೆಗಳಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದು ಸರಾಸರಿ ೧೦ರಷ್ಟು ಭಾಗದಲ್ಲಿ ಕ್ರಮವಾಗಿ ಬೆಳೆಯಲ್ಪಟ್ಟಿವೆ. ಮೆಕ್ಕೆ ಧಾನ್ಯವು ಹೊಸ ಬೆಳೆಯಾಗಿದ್ದರೂ ೧೯೫೯-೬೦ರಲ್ಲಿ ಶೇಕಡಾ ೦.೧ ಭಾಗ ಹಾಗೂ ಇದರ ಪ್ರಮಾಣವು ೧೯೮೯-೯೦ರಲ್ಲಿ ಶೇಕಡಾ ೨ಕ್ಕೆ ಅಧಿಕಗೊಂಡಿತು. ದೇಶ ಮಟ್ಟದಲ್ಲಿ ಗೋಧಿ ಪಡೆದುಕೊಂಡ ಸ್ಥಾನ ರಾಜ್ಯ ಮಟ್ಟದಲ್ಲಿ ಗಳಿಸಲಿಲ್ಲ. ಮೂರು ದಶಕಗಳಲ್ಲಿ ಗೋಧಿ ಬೆಳೆಯಲ್ಪಟ್ಟ ಭಾಗಾಂಶವು ಸರಾಸರಿ ೨.೯ ರಿಂದ ಸರಾಸರಿ ೧.೯ಕ್ಕೆ ಬಂದಿಳಿಯಿತು. ಎರಡು ದಶಕಗಳಲ್ಲಿ ದೇಶ ಮಟ್ಟಕ್ಕೆ ತಲುಪದಿದ್ದರೂ ದ್ವಿದಳ ಧಾನ್ಯದ ಭಾಗದಲ್ಲಿ ಸರಾಸರಿ ೧೨.೪ರಿಂದ ೧೩.೯ಕ್ಕೆ ಏರಿಕೆಯಾಯಿತು. ೧೯೮೦-೯೦ರಲ್ಲಿ ಇದು ಸರಾಸರಿ ೧೩.೫ರಷ್ಟಿತ್ತು ೧೯೫೯-೬೦, ೧೯೬೯-೭೦, ೧೯೭೯-೮೦. ಎಣ್ಣೆ ಬೀಜದ ಪಾಲು ಶೇಕಡಾ ೧೯೮೯-೯೦ಕ್ಕೆ ಶೇಕಡಾ ೧೯.೬ಕ್ಕೆ ಅಧಿಕಗೊಂಡಿತು.

ಕೋಷ್ಟಕ – ೧
ಬೆಳೆಯ ಮಾದರಿ – ಭಾರತದಲ್ಲಿ
(ಮೂರು ವರ್ಷಗಳ ಚಲಾವಣೆಯ ಸರಾಸರಿ ಆಧಾರದಲ್ಲಿ)

(ಪ್ರದೇಶ – ೧೦೦೦ ಹೆಕ್ಟೇರಿಗೆ)

ಬೆಳೆ ವರ್ಷ ೧೯೫೯-೬೦ ಸರಾಸರಿ ಭಾಗ ವರ್ಷ ೧೯೬೯-೭೦ ಸರಾಸರಿ ಭಾಗ ವರ್ಷ ೧೯೭೯-೮೦ ಸರಾಸರಿ ಭಾಗ ೧೯೮೮-೮೯ ಶೇಕಡಾ
ಸಜ್ಜೆ ೧೧೧೯೭ ೭.೩೫ ೧೨೪೮೬ ೭.೬೮ ೧೧೨೧೦ ೬.೫೦ ೧೦೫೫೦ ೫.೯೯
ಜೋಳ ೧೮೦೨೬ ೧೧.೮೩ ೧೮೨೩೭ ೧೧.೨೨ ೧೬೨೧೦ ೯.೪೧ ೧೫೧೮೨ ೮.೬೨
ರಾಗಿ ೨೫.೨೪ ೧.೬೬ ೨೪೯೮ ೧.೫೪ ೨೬೧೫ ೧.೫೨ ೨೩೧೫ ೧.೩೧
ಮೆಕ್ಕೆ ೪೩೩೯ ೨.೮೫ ೫೮೧೦ ೩.೫೭ ೫೮೨೮ ೩.೩೮ ೫೭೭೨ ೩.೨೮
ಅಕ್ಕಿ ೩೩೭೦೭ ೨೨.೧೨ ೩೭೪೧೩ ೨೩.೦೨ ೪೦೦೧೬ ೨೩.೨೨ ೪೦೯೦೬ ೨೩.೨೩
ಗೋಧಿ ೧೨೯೭೫ ೮.೫೧ ೧೬೯೪೨ ೧೦.೪೨ ೨೨೩೬೪ ೧೨.೯೮ ೨೩.೫೪೩ ೧೩.೩೭
ಒಟ್ಟು ಧಾನ್ಯಗಳು ೯೧೧೫೪ ೫೯.೮೧ ೧೦೦೮೩೨ ೬೨.೦೪ ೧೦೪೧೭೦ ೬೦.೪೪ ೧೦೨೦೭೮ ೫೭.೯೬
ದ್ವಿದಳ ಧಾನ್ಯಗಳು ೨೪೨೩೬ ೧೫.೯೦ ೨೧೯೪೦ ೧೩.೫೦ ೨೨೭೯೧ ೧೩.೨೨ ೨೨೫೪೭ ೧೨.೮೦
ಎಣ್ಣೆ ಬೀಜಗಳು ೧೩೫೭೫ ೮.೯೧ ೧೫೩.೦೯ ೯.೪೨ ೧೭೪೧೭ ೧೦.೧೧ ೨೧೬೬೮ ೧೨.೩೦
ಹತ್ತಿ ೭೬೨೩ ೫.೦೦ ೭೬೪೪ ೪.೭೦ ೮೦೨೩ ೪.೬೬ ೭೦೪೪ ೪.೦೦
ಕಬ್ಬು ೨೧೬೭ ೧.೪೨ ೨೬೩೨ ೧.೬೨ ೨೭೮೮ ೧.೬೨ ೩೩೩೮ ೧.೯೦
ತೆಂಗು ೭೦೭ ೦.೪೬ ೧೦೨೨ ೧೦೭೧ ೦.೬೨ ೧೪೨೭ ೦.೮೧  
ಅಡಿಕೆ ೦.೦೦ ೧೬೨ ೦.೧೦ ೧೮೨ ೦.೧೧ ೨೦೫ ೦.೧೨
ಒಟ್ಟು ಮೊತ್ತ ೧೩೯೪೬೧ ೯೧.೫೦ ೧೪೯೫೪೧ ೯೨.೭೭ ೧೫೬೪೪೩ ೯೦.೭೭ ೧೫೮೩೦೭ ೮೯.೮೮
ಬೆಳೆಯಲ್ಪಟ್ಟ ಪ್ರದೇಶ ೧೫೨೪೦೭ ೧೦೦.೦೦ ೧೬೨೫೨೭ ೧೦೦.೦೦ ೧೭೨೩೪೩ ೧೦೦.೦೦ ೧೭೬೧೨೩ ೧೦೦.೦೦

 

ಕೋಷ್ಟಕ – ೨
ಬೆಳೆಯ ಮಾದರಿ – ಕರ್ನಾಟಕದಲ್ಲಿ
(ಮೂರು ವರ್ಷಗಳ ಚಲಾವಣೆಯ ಸರಾಸರಿ ಆಧಾರದಲ್ಲಿ)

(ಪ್ರದೇಶ – ೧೦೦೦ ಹೆಕ್ಟೇರಿಗೆ)

ಬೆಳೆ ವರ್ಷ ೧೯೫೯-೬೦ ಸರಾಸರಿ ಭಾಗ ವರ್ಷ ೧೯೬೯-೭೦ ಸರಾಸರಿ ಭಾಗ ವರ್ಷ ೧೯೭೯-೮೦ ಸರಾಸರಿ ಭಾಗ ೧೯೮೮-೮೯ ಶೇಕಡಾ
ಸಜ್ಜೆ ೩೦೦೬೯೨ ೪.೭೩ ೫೬೧೭೪೭ ೫.೨೩ ೬೪೭೦೭೧ ೫.೯೦ ೪೬೭೮೫೫ ೩.೯೩
ಜೋಳ ೨೮೮೧೨೨೧ ೨೭.೨೪ ೨೩೫೧೩೮೭ ೨೧.೮೮ ೧೯೬೯೨೬೮ ೧೭.೯೪ ೨೨೦೦೦೮೩ ೧೮.೪೯
ರಾಗಿ ೯೮೭೧೫೬ ೯.೩೩ ೧೦೩೪೯೭೧ ೯.೬೩ ೧೧೩೧೦೪೫ ೧೦.೩೧ ೧೧೨೪೩೨೨ ೯.೪೫
ಮೆಕ್ಕೆ ೧೧೧೩೭ ೦.೧೧ ೫೭೦೩೨ ೦.೫೩ ೧೫೨೩೧೦ ೧.೩೯ ೨೫೧೭೭೪ ೨.೧೨
ಅಕ್ಕಿ ೧೦೦೨೦೮೩ ೯.೪೭ ೧೧೫೦೨೨೭ ೧೦.೭೦ ೧೧೧೯೧೭೦ ೧೦.೨೦ ೧೧೯೮೦೭೮ ೧೦.೦೭
ಗೋಧಿ ೮೦೯೪೮೭ ೨.೯೩ ೩೩೬೯೭೪ ೩.೧೪ ೩೬೩೨೨೬ ೩.೩೧ ೨೨೭೮೪೪ ೧.೯೨
ಒಟ್ಟು ಧಾನ್ಯಗಳು ೬೧೬೦೨೩೫ ೫೮.೩೪ ೫೯೯೯೮೪೩ ೫೫.೮೪ ೫೮೧೧೮೭೫ ೫೨.೯೬ ೫೬೬೪೧೬೩ ೪೭.೬೧
ದ್ವಿದಳ ಧಾನ್ಯಗಳು ೧೩೦೮೯೯೫ ೧೨.೩೮ ೧೪೧೪೮೩೪ ೧೩.೧೭ ೧೫೨೮೮೩೧ ೧೩.೯೩ ೧೬೩೧೧೪೮ ೧೩.೭೧
ಎಣ್ಣೆ ಬೀಜಗಳು ೧೨೭೬೬೨೫ ೧೨.೦೭ ೧೩೨೨೫೧೧ ೧೨.೩೧ ೧೨೯೭೧೧೭ ೧೧.೮೨ ೨೩೭೩೫೧೩ ೧೯.೯೫
ಹತ್ತಿ ೧೦೩೦೬೬೨ ೯.೭೫ ೧೦೫೩೬೩೪ ೯.೮೧ ೧೦೬೧೬೨೪ ೯.೬೭ ೬೪೯೨೩೨ ೫.೪೬
ಕಬ್ಬು ೬೪೮೪೬ ೦.೬೧ ೧೦೬೯೮೭ ೧.೦೦ ೧೪೭೮೯೪ ೧.೩೫ ೨೫೮೭೩೩ ೨.೧೭
ತೆಂಗು ೧೦೨೭೬೨ ೦.೯೭ ೧೩೦೭೦೯ ೧.೨೨ ೧೬೭೭೮೧ ೧.೫೩ ೨೨೬೧೫೩ ೧.೯೦
ಅಡಿಕೆ ೩೧೮೬೫ ೦.೩೦ ೪೦೯೬೦ ೦.೩೮ ೫೩೨೫೮ ೦.೪೯ ೬೨೫೦೮ ೦.೫೩
ಒಟ್ಟು ೯೯೯೫೯೮೯ ೯೪.೪೨ ೧೦೦೬೯೪೮೪ ೯೩.೭೧ ೧೦೦೬೮೩೮೦ ೯೧.೭೫ ೧೦೮೬೫೬೪೦ ೯೧.೩೨
ಬೆಳೆಯಲ್ಪಟ್ಟ ಪ್ರದೇಶ ೧೦೫೭೬೨೪೮ ೧೦೦.೦೦ ೧೦೭೪೫೨೨೮ ೧೦೦.೦೦ ೧೦೯೭೪೨೧೨ ೧೦೦.೦೦ ೧೧೮೯೭೬೬೫ ೧೦೦.೦೦

ಕಡೆ ಮೊದಲ ಮೂರು ವರ್ಷಗಳಲ್ಲಿ ಹತ್ತಿ ಬೆಳೆಯ ಭಾಗವು ಶೇಕಡಾ ೧೦ ರಷ್ಟಿದ್ದು, ೧೯೮೯-೯೦ರ ಸಾಲಿನಲ್ಲಿ ಶೇಕಡವಾರು ೫ಕ್ಕೆ ಕಡಿತಗೊಂಡಿತು. ಕಬ್ಬು ಬೆಳೆಯ ಭಾಗವು ೧೯೫೯-೬೦ರ ಸಾಲಿಗೆ ಶೇಕಡಾ ೦.೬ರಷ್ಟಿದ್ದು, ದೇಶ ಮಟ್ಟಕ್ಕೆ ಹೋಲಿಕೆಯಾಗದಿದ್ದರೂ, ೧೯೮೯-೯೦ರ ಅವಧಿಗೆ ಸರಾಸರಿ ೨.೨ಕ್ಕೆ ತಲುಪಿದ್ದು ದೇಶ ಮಟ್ಟಕ್ಕಿಂತ ಹೆಚ್ಚುವರಿಯಾಗಿದೆ. ರಾಜ್ಯದಲ್ಲಿ ಕ್ರಮವಾಗಿ ತೆಂಗು ಮತ್ತು ಅಡಿಕೆ ಬೆಳೆಯ ಪ್ರಮಾಣ ಸರಾಸರಿ ೧.೯ ಮತ್ತು ೦.೫ ಕಡಿಮೆಯಿದ್ದರೂ ದೇಶದ ಮಟ್ಟಕ್ಕೆ ನೋಡಿದಾಗ ಹೆಚ್ಚು ಅಧಿಕದಲ್ಲಿದೆ. ಈ ಮೇಲಿನ ಅಂಕಿ-ಅಂಶಗಳಾದ ಮೇಲ್ದರ್ಜೆಯ ಧಾನ್ಯಗಳಾದ ಅಕ್ಕಿ, ಗೋಧಿಯು ದೇಶ ಮಟ್ಟದಲ್ಲಿ ಪ್ರಮುಖ ಬೆಳೆಗಳಾಗಿದ್ದರೂ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಡಲಿಲ್ಲ. ಈ ಎಲ್ಲಾ ವರ್ಷಗಳಲ್ಲಿ ರಾಜ್ಯದಲ್ಲಿ ಬೆಳೆಯ ಮಾದರಿಯಲ್ಲಿ ವಿಶೇಷ ಬದಲಾವಣೆಯನ್ನು ತೋರಿಸುತ್ತದೆ ಮತ್ತು ವಾಣಿಜ್ಯ ಬೆಳೆಗಳ ಅಂಶವು ಕೂಡ ವಿಧವಿಧವಾಗಿದ್ದವು. ೧೯೮೦ರಲ್ಲಿ ವಾಣಿಜ್ಯ ಬೆಳೆಗಳಲ್ಲಿ ಹೆಚ್ಚಿನ ವೈವಿಧ್ಯತೆ ಕಂಡು ಬಂದಿದೆ.

ಬೆಳೆಯ ವಿಧಗಳಲ್ಲಿ ಪ್ರಾದೇಶಿಕ ವಿಭಿನ್ನತೆ :

ಭೌಗೋಳಿಕ ಲಕ್ಷಣಗಳಾದ ಮಣ್ಣಿನ ವಿಧ, ಮಳೆ ಬೀಳುವ ಮಾದರಿ ಮತ್ತು ಬೆಳೆಯ ಮಾದರಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯವನ್ನು ಮುಖ್ಯವಾಗಿ ನಾಲ್ಕು ಭೌಗೋಳಿಕ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಈ ಕೆಳಗೆ ಪ್ರಾದೇಶಿಕ ಸನ್ನಿವೇಶಕ್ಕೆ ಹೊಂದಿಕೊಂಡು ಜಿಲ್ಲೆಯ ಪಟ್ಟಿಯನ್ನು ಕೊಡಲಾಗಿದೆ.

೧. ಬೆಳಗಾಂ, ಬಳ್ಳಾರಿ, ಬಿಜಾಪುರ, ಬೀದರ್, ಧಾರವಾಡ, ಗುಲ್ಬರ್ಗ ಮತ್ತು ರಾಯಚೂರು

೨. ಬೆಂಗಳೂರು, ಚಿತ್ರದುರ್ಗ, ಕೋಲಾರ ಮತ್ತು ತುಮಕೂರು

೩. ಮಂಡ್ಯ, ಮೈಸೂರು ಮತ್ತು ಹಾಸನ

೪. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಮತ್ತು ಉತ್ತರ ಕನ್ನಡ

ಕೋಷ್ಟಕ – ೩
೧೯೫೯-೬೦ ಮತ್ತು ೧೯೮೯-೯೦ರ ಸಾಲಿನಲ್ಲಿ ಪ್ರಾದೇಶಿಕತೆಗೆ ಅನುಗುಣವಾಗಿ ಸರಾಸರಿ ಬೆಳೆಯ ಮಾದರಿ
(ಮೂರು ವರ್ಷಗಳ ಸರಾಸರಿ ಆಧಾರದಲ್ಲಿ)

(ಹೆಕ್ಟೇರ್‌ಗಳಲ್ಲಿ)

ಬೆಳೆ ಪ್ರದೇಶ-೧ ಪ್ರದೇಶ -೨
ಪ್ರದೇಶ ಶೇ.ಪ್ರಮಾಣ ಪ್ರದೇಶ ಶೇ.ಪ್ರಮಾಣ ಪ್ರದೇಶ ಶೇ.ಪ್ರಮಾಣ ಪ್ರದೇಶ ಶೇ.ಪ್ರಮಾಣ
ಸಜ್ಜೆ ೪೫೧೫೪೩ ೬.೫೬ ೪೪೦೨೯೧ ೬.೧೪ ೪೪೯೮೩ ೨.೬೪ ೨೫೩೧೨ ೧.೧೮
ಜೋಳ ೨೫೭೨೩೧೮ ೩೭.೩೭ ೧೯೭೫೬೦೬ ೨೭.೫೫ ೧೬೫೦೯೫ ೯.೬೮ ೯೧೦೦೦ ೪.೨೫
ರಾಗಿ ೪೦೦೬೩ ೦.೫೮ ೫೪೨೪೨ ೦.೭೬ ೬೦೦೧೧೯ ೩೫.೧೭ ೬೨೬೧೨೮ ೨೯.೨೫
ಮೆಕ್ಕೆ ೧೧೦೧೯ ೦.೧೬ ೧೭೫೯೫೮ ೨.೪೫ ೧೧೩ ೪೬೫೮೦ ೨.೧೮  
ಅಕ್ಕಿ ೨೩೧೬೪೦ ೩.೩೭ ೩೨೧೨೬೭ ೪.೪೮ ೧೨೦೬೨೨ ೭.೦೭ ೧೬೭೬೧೯ ೭.೮೩
ಗೋಧಿ ೩೦೮೩೩೨ ೪.೪೮ ೨೨೬೮೪೧ ೩.೧೬ ೭೯೬ ೦.೦೫ ೭೧೩ ೦.೦೩
ಒಟ್ಟು ಧಾನ್ಯಗಳು ೩೮೬೭೧೦೧ ೫೬.೧೮ ೩೩೩೫೦೭೬ ೧೧೧೭೫೧೨ ೬೫.೪೯ ೧೦೦೬೮೫೪ ೪೭.೦೪  
ದ್ವಿದಳ ಧಾನ್ಯಗಳು ೭೫೭೫೧೬ ೧೧.೦೧ ೧೧೨೮೨೬೨ ೧೫.೭೩ ೨೬೮೩೦೬ ೧೫.೭೨ ೨೧೬೮೮೯ ೧೦.೧೩
ಎಣ್ಣೆ ಬೀಜ ೧೦೩೫೩೨೧ ೧೫.೦೪ ೧೬೬೮೦೪೬ ೨೩.೨೬ ೧೫೨೯೬೫ ೮.೯೬ ೫೧೭೭೯೦ ೨೪.೧೯
ಹತ್ತಿ ೯೬೯೬೯೮ ೧೪.೦೯ ೫೨೭೨೯೦ ೭.೩೫ ೪೪೧೧೧ ೨.೫೯ ೩೯೭೯೯ ೧.೮೬
ಕಬ್ಬು ೩೨೬೭೦ ೦.೪೭ ೧೭೦೪೪೩ ೨.೩೮ ೯೪೨೪ ೦.೫೫ ೧೫೬೬೯ ೦.೭೩
ತೆಂಗು ೬೫೬ ೦.೦೧ ೨೯೨೬ ೦.೦೪ ೪೨೮೫೩ ೨.೫೧ ೯೮೭೯೪ ೪.೬೨
ಅಡಿಕೆ ೨೧೦ ೦.೦೦ ೨೨೭ ೦.೦೦ ೫.೬೬ ೦.೩೦ ೯೩೭೦ ೦.೪೪
ಒಟ್ಟು ೬೬೬೩೧೭೧ ೯೬.೮೦ ೬೮೩೨೨೭೧ ೯೫.೨೮ ೧೬೪೦೨೩೮ ೯೬.೧೨ ೧೯೦೫೧೬೪ ೮೯.೦೧
ಒಟ್ಟು ಮೊತ್ತ ೬೮೮೩೩೧೧ ೧೦೦.೦೦ ೭೧೭೦೭೦೨ ೧೦೦.೦೦ ೧೭೦೬೩೬೩ ೧೦೦.೦೦ ೨೧೪೦೪೩೨ ೧೦೦.೦೦

 

ಬೆಳೆ ಪ್ರದೇಶ – ೩ ಪ್ರದೇಶ – ೪
ಪ್ರದೇಶ ಶೇ.ಪ್ರಮಾಣ ಪ್ರದೇಶ ಶೇ.ಪ್ರಮಾಣ ಪ್ರದೇಶ ಶೇ.ಪ್ರಮಾಣ ಪ್ರದೇಶ ಶೇ.ಪ್ರಮಾಣ
ಸಜ್ಜೆ ೩೮೦೪ ೦.೩೮ ೨೨೩೮ ೦.೧೭ ೩೬೨ ೦.೦೪ ೧೪ ೦.೦೦
ಜೋಳ ೯೬೮೦೭ ೯.೬೨ ೮೯೦೦೫ ೬.೭೮ ೪೭೦೦೧ ೪.೭೯ ೪೪೪೭೧ ೩.೪೯
ರಾಗಿ ೨೭೮೬೪೮ ೨೭.೭೦ ೩೪೭೩೬೫ ೨೬.೪೬ ೬೮೩೨೬ ೬.೯೭ ೯೬೫೮೭ ೭.೫೮
ಮೆಕ್ಕೆ ೦.೦೦ ೧೯೮೦೬ ೧.೫೧ ೦.೦೦ ೯೪೩೦ ೦.೭೪
ಅಕ್ಕಿ ೧೫೬೯೧೪ ೧೫.೬೦ ೨೦೧೫೨೩ ೧೫.೩೫ ೪೯೨೯೦೭ ೫೦.೨೭ ೫೦೭೬೬೯ ೩೯.೮೫
ಗೋಧಿ ೨೨ ೦.೦೦ ೪೭ ೦.೦೦ ೩೩೬ ೦.೦೩ ೨೪೪ ೦.೦೨
ಒಟ್ಟು ಧಾನ್ಯಗಳು ೫೬೬೦೭೭ ೫೬.೨೬ ೬೬೨೧೨೯ ೫೦.೪೪ ೬೧೯೫೪೫ ೬೩.೧೯ ೬೬೦೧೦೪ ೫೧.೮೨
ದ್ವಿದಳ ಧಾನ್ಯಗಳು ೨೧೨೨೭೦ ೨೧.೧೦ ೨೧೦೨೪೯ ೧೬.೦೨ ೭೦೯೦೨ ೭.೨೩ ೭೫೭೪೮ ೫.೯೫
ಎಣ್ಣೆ ಬೀಜ ೬೪೨೦೫ ೬.೩೮ ೧೧೭೯೭೨ ೮.೯೯ ೨೪೧೩೪ ೨.೪೬ ೬೯೭೦೫ ೫.೪೭
ಹತ್ತಿ ೯೭೧೧ ೦.೯೭ ೩೬೬೯೩ ೨.೮೦ ೭೧೪೧ ೦.೭೩ ೪೫೪೫೦ ೩.೫೭
ಕಬ್ಬು ೧೩೬೨೩ ೧.೩೫ ೪೬೫೦೭ ೩.೫೪ ೯೧೨೯ ೦.೯೩ ೨೬೧೦೪ ೨.೦೫
ತೆಂಗು ೩೧೯೨೫ ೩.೧೭ ೯೭೮೧೭ ೫.೧೭ ೨೭೩೨೮ ೨.೭೯ ೫೬೬೨೭ ೪.೪೪
ಅಡಿಕೆ ೨೨೬೭ ೦.೨೩ ೨೮೫೨ ೦.೨೨ ೨೪೩೨೧ ೨.೪೮ ೫೦೦೫೯ ೩.೯೩
ಒಟ್ಟು ೯೦೦೦೭೮.೬ ೮೯.೪೬ ೧೧೪೪೨೧೮ ೮೭.೧೭ ೭೮೨೫೦೧ ೭೯.೮೧ ೯೮೩೭೯೬ ೭೭.೨೨
ಒಟ್ಟು ಮೊತ್ತ ೧೦೦೬೧೧೦ ೧೦೦.೦೦ ೧೩೧೨೫೮೪ ೧೦೦.೦೦ ೯೮೦೪೩೪ ೧೦೦.೦೦ ೧೨೭೩೯೪೬ ೧೦೦.೦೦

೨ ಮತ್ತು ೩ರಲ್ಲಿ ಕ್ರಮವಾಗಿ ಜೋಳ, ರಾಗಿ ಹಾಗೂ ಪ್ರದೇಶ ೧ ಮತ್ತು ೪ ರಲ್ಲಿ ಅಕ್ಕಿ ಪ್ರಮುಖ ಬೆಳೆಗಳಾಗಿವೆ. ಹಾಗಿದ್ದರೂ ಈ ಎಲ್ಲಾ ಜಿಲ್ಲೆಗಳ ಸರಾಸರಿ ಪ್ರಮಾಣ ಎಲ್ಲಾ ವರ್ಷಗಳಲ್ಲಿ ಕ್ರಮವಾಗಿ ಕಡಿಮೆಯಾಗಿದೆ. ಪ್ರದೇಶ – ೧ರಲ್ಲಿ ಜೋಳವನ್ನು ಹೊರತುಪಡಿಸಿ ಇನ್ನಾವ ಪ್ರದೇಶದಲ್ಲಿ ಇತರ ಬೆಳೆಗಳು ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಮುಖ್ಯವಾದ ಬೆಳೆಗಳು ಹೆಚ್ಚುವರಿ ಕೃಷಿ ಪ್ರದೇಶಕ್ಕಿಂತ ಪ್ರಮಾಣದಲ್ಲಿ ಅಧಿಕವಾಗಿಲ್ಲ. ರಾಜ್ಯದಲ್ಲಿ ಪ್ರದೇಶ-೧ ಹತ್ತಿ ಬೆಳೆಗೆ ಕೇಂದ್ರವಾಗಿದೆ ಮತ್ತು ಇದು ಹತ್ತಿ ಜೊತೆಗೆ ಜೋಳದಲ್ಲಿ ನಷ್ಟ ಹೊಂದಿತ್ತು. ಸಜ್ಜೆ ಮತ್ತು ಗೋಧಿ ಬೆಳೆಯು ಸ್ಥಾನವನ್ನು ಕಳೆದುಕೊಂಡಿತು. ದ್ವಿದಳ ಧಾನ್ಯ, ಎಣ್ಣೆ ಬೀಜಗಳು, ಮೆಕ್ಕೆ ಮತ್ತು ಕಬ್ಬು ಬೆಳೆಯು ಈ ಪ್ರದೇಶದಲ್ಲಿದೆ. ಮೆಕ್ಕೆ ಧಾನ್ಯವು ಸುಮಾರು ಶೇಕಡಾ ಹದಿನಾರು ಹೆಚ್ಚುವರಿಯಾಗಿದೆ. ಸುಮಾರು ಮೂವತ್ತು ವರ್ಷಗಳ ಅವಧಿಯಲ್ಲಿ ಕಬ್ಬು ಬೆಳೆಯು ಸುಮಾರು ಶೇಕಡಾ ೫.೨ರಷ್ಟು ಅಧಿಕಗೊಂಡಿವೆ.

ಸಜ್ಜೆ, ಜೋಳ, ದ್ವಿದಳ ಧಾನ್ಯ ಮತ್ತು ಹತ್ತಿ ಬೆಳೆಯುವ ಪ್ರದೇಶ-೨ರಲ್ಲಿ ಕಡಿಮೆಯಾಗಿವೆ. ಮೆಕ್ಕೆ, ಧಾನ್ಯವು ಈ ಪ್ರದೇಶದಲ್ಲಿ ಸುಮಾರು ಪಟ್ಟು ಮತ್ತು ಎಣ್ಣೆ ಬೀಜವು ಶೇಕಡಾ ೩.೪ರಷ್ಟು ಪಟ್ಟು ಲಾಭದಾಯಕವಾಗಿದೆ. ಈ ಪ್ರದೇಶದಲ್ಲಿ ಅಕ್ಕಿ ಮತ್ತು ಕಬ್ಬು ನೀರಾವರಿ ಬೆಳೆಯಾಗಿದ್ದರೂ, ತೆಂಗು ಮತ್ತು ಅಡಿಕೆ ತೋಟಗಾರಿಕಾ ಬೆಳೆಯಾಗಿದೆ. ಪ್ರದೇಶ- ೩ರಲ್ಲಿ ಮೆಕ್ಕೆ, ಜೋಳ, ಎಣ್ಣೆ ಬೀಜ, ಹತ್ತಿ ಬೆಳೆಯು ಅನುಕೂಲಕರವಾಗಿದೆ. ಹಾಗೂ ಮೆಕ್ಕೆ ಜೋಳವು ಈ ಪ್ರದೇಶಕ್ಕೆ ಹೊಸ ಬೆಳೆಯಾಗಿದೆ. ಸಜ್ಜೆ, ಜೋಳ ಮತ್ತು ಗೋಧಿ ಬೆಳೆಯನ್ನು ಹೊರತುಪಡಿಸಿ ಉಳಿದೆಲ್ಲಾ ಬೆಳೆಗಳು ಪ್ರದೇಶ – ೪ ರಲ್ಲಿ ಇವೆ. ಹತ್ತಿ, ಎಣ್ಣೆ ಬೀಜ ಹಾಗೂ ಕಬ್ಬು ಬೆಳೆಗಳು ಕ್ರಮವಾಗಿ ೬.೪, ೨.೯ ಮತ್ತು ೨.೮೫ ಪಟ್ಟಿನಷ್ಟು ಅಧಿಕ ಹೊಂದಿದೆ. ತೆಂಗು ಮತ್ತು ಅಡಿಕೆ ಬೆಳೆಯು ಎರಡು ಪಟ್ಟವಷ್ಟು ಈ ಪ್ರದೇಶದಲ್ಲಿದೆ.

ಮೇಲಿನ ಕೋಷ್ಟಕದಲ್ಲಿ ಪ್ರದೇಶ-೧ ಮತ್ತು ೨ರಲ್ಲಿ ಹತ್ತಿ ಬೆಳೆಯು ಅದರ ಪ್ರಮಾಣವನ್ನು ಕಳೆದು ಕೊಂಡಿದ್ದರೆ, ಪ್ರದೇಶ ೩ ಮತ್ತು ೪ ಹತ್ತಿ ಬೆಳೆಯನ್ನು ಪಡೆದುಕೊಂಡಿದೆ. ಪ್ರದೇಶ ೨, ೩ ಮತ್ತು ೪ರಲ್ಲಿ ಮೆಕ್ಕೆ ಜೋಳವು ಹೊಸ ಬೆಳೆಯಾಗಿದೆ. ಪ್ರದೇಶ ೧ರ‍ಲ್ಲಿ ದ್ವಿದಳ ಧಾನ್ಯ ಬೆಳೆಯು ಹೆಚ್ಚುವರಿಯಾಗಿದೆ. ಎಣ್ಣೆ ಬೀಜಗಳು, ಕಬ್ಬು ಮತ್ತು ತೆಂಗು ಬೆಳೆಯು ಎಲ್ಲಾ ಪ್ರದೇಶಗಳಲ್ಲಿ ಅಧಿಕಗೊಂಡಿವೆ. ಪ್ರದೇಶ ೨ ಮತ್ತು ೪ ಅಡಿಕೆ ಬೆಳೆಯ ಪ್ರಮಾಣದಲ್ಲಿ ಅಭಿವೃದ್ಧಿಗೊಂಡಿದೆ. ಹೀಗೆ ರಾಜ್ಯ ಮಟ್ಟದಲ್ಲಿ ಕೃಷಿ ಮಾದರಿಯಲ್ಲಿ ಮತ್ತು ಬೆಳೆಯ ಬದಲಾವಣೆಯು ಆಯಾ ಪ್ರದೇಶಕ್ಕನುಗುಣವಾಗಿದೆ.

ಉತ್ಪಾದನೆಯಲ್ಲಿ ಅಭಿವೃದ್ಧಿ

ಕೋಷ್ಟಕ ನಾಲ್ಕು ಮತ್ತು ಐದರಲ್ಲಿ ದೇಶ ಮತ್ತು ರಾಜ್ಯ ಮಟ್ಟದಲ್ಲಿ ಬೆಳೆಯ ಉತ್ಪಾದನೆಯ ಅಂಕಿ-ಅಂಶಗಳನ್ನು ಮಂಡಿಸಲಾಗಿದೆ. ಪ್ರಥಮ ದಶಕದಲ್ಲಿ ಜೋಳ, ಮೆಕ್ಕೆ ಜೋಳ, ಅಕ್ಕಿ, ದ್ವಿದಳ ಧಾನ್ಯ, ಎಣ್ಣೆ ಬೀಜಗಳು ಮತ್ತು ಅಡಿಕೆ ಬೆಳೆಯ ಉತ್ಪಾದನೆಯು ದೇಶ ಮಟ್ಟಕ್ಕಿಂತ ರಾಜ್ಯ ಮಟ್ಟದಲ್ಲಿ ಹೆಚ್ಚುವರಿಯಾಗಿರುವುದನ್ನು ಗಮನಿಸಬಹುದು. ಎರಡನೆಯ ದಶಕದಲ್ಲಿ ಸಜ್ಜೆ, ರಾಗಿ, ಗೋಧಿ, ದ್ವಿದಳ ಧಾನ್ಯ, ಹತ್ತಿ, ತೆಂಗು ಮತ್ತು ಅಡಿಕೆ ಬೆಳೆಯ ಉತ್ಪಾದನೆಯು ರಾಜ್ಯ ಮಟ್ಟದಲ್ಲಿ ಅಧಿಕಗೊಂಡಿದೆ. ಮೂರನೇ ದಶಕದಲ್ಲಿ ದೇಶ ಮಟ್ಟಕ್ಕೆ ಹೋಲಿಸಿದಾಗ ಹತ್ತಿ ಬೆಳೆಯ ಇಳುವರಿಯು ಹೆಚ್ಚಾಗಿದ್ದು, ಉಳಿದೆಲ್ಲಾ ಬೆಳೆಯ ಉತ್ಪಾದನೆಯು ಸ್ಥಗಿತಗೊಂಡಿದೆ. ಮೊದಲನೆ ದಶಕದಲ್ಲಿ ಇದ್ದ ಉತ್ಪಾದನೆಯ ಪ್ರಮಾಣವನ್ನು ಮುಂದಿನ ದಶಕಗಳಲ್ಲಿ ರಾಜ್ಯದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೂರನೇ ದಶಕದಲ್ಲಿ ರಾಜ್ಯದಲ್ಲಿ ಉತ್ಪಾದನಾ ಪ್ರಮಾಣವು ಕಡಿಮೆ ಪ್ರಮಾಣದಲ್ಲಿತ್ತು.

ದೇಶ ಮಟ್ಟದಲ್ಲಿ ಮುಖ್ಯವಾಗಿ ಗೋಧಿ ಮತ್ತು ಅಕ್ಕಿ ಬೆಳೆಯಲ್ಲಿ ಹಸಿರು ಕ್ರಾಂತಿಯಾಗಿದೆ. ಆದರೂ ಗೋಧಿ ಬೆಳೆಯು ರಾಜ್ಯದಲ್ಲಿ ಪ್ರಮುಖವಾಗಿಲ್ಲ. ಅಕ್ಕಿ ಬೆಳೆಯು ಸರಾಸರಿ ೧೦ ಪ್ರಮಾಣದಲ್ಲಿ ಬೆಳೆ ಪ್ರದೇಶದಲ್ಲಿ ಮುಂದುವರಿದಿತ್ತು ಹಸಿರು ಕ್ರಾಂತಿಯು ರಾಜ್ಯದ ಆಹಾರ ಉತ್ಪಾದನೆಯಲ್ಲಿ ಸಾಕಷ್ಟು ಪರಿಣಾಮ ಬೀರಲಿಲ್ಲ. ೧೯೮೮-೮೯ರ ಅವಧಿಗೆ ದೇಶ ಮಟ್ಟಕ್ಕೆ ಹೋಲಿಸಿದಾಗ ಸಜ್ಜೆ, ಜೋಳ, ರಾಗಿ, ಗೋಧಿ, ದ್ವಿದಳ ಧಾನ್ಯ, ಎಣ್ಣೆ ಬೀಜಗಳು ಮತ್ತು ತೆಂಗು ಬೆಳೆಯ ಉತ್ಪಾದನೆಯು ರಾಜ್ಯ ಮಟ್ಟದಲ್ಲಿ ಕಡಿಮೆಯಾಗಿದೆ. ಹೀಗಿದ್ದರೂ ಅಕ್ಕಿ, ಮೆಕ್ಕೆ, ಜೋಳ, ಕಬ್ಬು ಮತ್ತು ಅಡಿಕೆ ಬೆಳೆಯ ಇಳುವರಿಯು ರಾಜ್ಯದಲ್ಲಿ ಹೆಚ್ಚುವರಿಯಾಗಿವೆ. ಈ ಬೆಳೆಗಳು ಕೇವಲ ಶೇಕಡಾ ೧೪.೯ರಷ್ಟು ಪ್ರದೇಶದಲ್ಲಿ ಮಾತ್ರ ಬೆಳೆಯಲ್ಪಟ್ಟಿವೆ. ಆದುದರಿಂದ ರಾಜ್ಯವು ಕೃಷಿ ಉತ್ಪಾದನೆಯಲ್ಲಿ ಪ್ರಮುಖ ಕೊಡುಗೆಯನ್ನು ನೀಡಿಲ್ಲ.