ಈ ಪ್ರಬಂಧದಲ್ಲಿ ಮೊದಲನೆಯದಾಗಿ ನಾವು ಬೆಳವಣಿಗೆಯ ದರಗಳ ರೀತಿಯನ್ನು ರೂಪಿಸುತ್ತೇವೆ. ಅದನ್ನು ನಾವು ವಿವಿಧ ವಲಯಗಳಿಗೆ ಅನ್ವಯವಾಗುವಂತೆ ಸ್ಥಿರ ದರದಲ್ಲಿನ ರಾಜ್ಯವ ಒಟ್ಟು ಆಂತರಿಕ ಉತ್ಪಾದನೆಯನ್ನು ಲೆಕ್ಕ ಹಾಕುತ್ತೇವೆ. ಆ ಬಳಿಕ ನಾವು ಬೆಳವಣಿಗೆಗೆ ವಿವಿಧ ವಲಯಗಳ ತತ್ಸಂಬಂಧಿ ಕೊಡುಗೆಗಳ ಬಗ್ಗೆ ವಿವರಿಸುತ್ತೇವೆ. ಸಾರ್ವಜನಿಕ ಹಣ ಕಾಸಿನ ರೀತಿಯ ಬಗ್ಗೆ, ಸರ್ಕಾರದ ಪಾತ್ರವನ್ನು ಪರೀಕ್ಷಿಸಲಾಗಿದೆ. ಮುಂಗಡ ಪತ್ರಗಳ ಆರ್ಥಿಕ ವಿಂಗಡನೆಗಳ ಫಲಿತಾಂಶಗಳನ್ನು ಗಣನೆಗೆ ತೆಗೆದುಕೊಂಡು, ನಾವು ಎರಡು ಮುಖ್ಯ ನಿರ್ಧಾರಗಳಿಗೆ ಬರುತ್ತೇವೆ. ಆದಾದ ಬಳಿಕ, ಕರ್ನಾಟಕದ ಭವಿಷ್ಯದ ಬೆಳವಣಿಗೆಗೆ ಬರಬಹುದಾದ ಅಡ್ಡಿಗಳ ಸ್ವಭಾವದ ಮೇಲೆ ನಡೆಸಿರುವ ನಮ್ಮ ಪ್ರಯೋಗಗಳ ಪ್ರಭಾವಗಳನ್ನು ಪರೀಕ್ಷಿಸುತ್ತೇವೆ. ನೀತಿ ಧೋರಣೆಗಳ ತಯಾರಕರಿಗೆ ಬರುವ ಪಂಥಾಹ್ವಾನಗಳು ಹಾಗೂ ಅಡ್ಡಿಗಳ ಸ್ವಭಾವಗಳನ್ನು ಸಹ ಇಲ್ಲಿ ಸೂಚಿಸಲಾಗಿದೆ. ಮೂಲ ಪಾಠಕ್ಕೆ ನಾಲ್ಕು ಹೇಳಿಕೆಗಳನ್ನು ಲಗತ್ತೀಕರಿಸಲಾಗಿದೆ.

ಕೃಷಿ:

೧೯೮೦-೮೧ ರಿಂದ ೧೯೯೩-೯೪ರ ಅವಧಿಯ ರಾಜ್ಯದ ಆಂತರಿಕ ಉತ್ಪಾದನೆ ಮತ್ತು ಅದರ ಇತರ ಅಂಶಗಳ ಬೆಳವಣಿಗೆಯ ರೀತಿಯ ದರದ ಲಘು ಗಣಕವನ್ನು ನಾವು ಪಡೆದುಕೊಂಡಿದ್ದೇವೆ. ಈ ಬೆಳವಣಿಗೆಯ ದರಗಳನ್ನು ಇಳಿತದ ಅಭ್ಯಾಸಗಳ ಮಾಧ್ಯಮ ಮುಖಾಂತರ ಪಡೆಯಲಾಗಿದೆ. ಈ ಅವಧಿಯಲ್ಲಿ ಕರ್ನಾಟಕದ ಜನಸಂಖ್ಯೆಯು ಶೇ. ೧.೮೭ರ ದರದಲ್ಲಿ ಬೆಳೆಯುತ್ತಿತ್ತು. ಒಟ್ಟು ಭಾರತದ ಜನಸಂಖ್ಯೆಯ ಬೆಳವಣಿಗೆಯ ದರಕ್ಕಿಂತ ಇದು ಸ್ವಲ್ಪ ಮಟ್ಟಿಗೆ ಕಡಿಮೆಯಿತ್ತು. ಸ್ಥಿರ ದರಗಳಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯ ದರವು ವಾರ್ಷಿಕ ಶೇ. ೫.೪೭ರಂತೆ ಹೆಚ್ಚುತ್ತಿತ್ತು. ವಾರ್ಷಿಕ ಬೆಳವಣಿಗೆಯ ದರದ ವ್ಯತ್ಯಾಸ ಪ್ರಮಾಣವು ಬಹಳ ಹೆಚ್ಚಿದ್ದು, ಈ ವ್ಯತ್ಯಾಸ ಸಹ ಸಶಕ್ತತೆಯು ೨೦% ಆಗಿರುತ್ತದೆ. ಇದು ವಾರ್ಷಿಕ ಬೆಳವಣಿಗೆಯ ದರದ ಅಸ್ಥಿರತೆಯನ್ನು ಸೂಚಿಸುತ್ತದೆ. ಸ್ಥಿರ ದರಗಳಲ್ಲಿನ ಆಂತರಿಕ ನಿವ್ವಳ ಉತ್ಪಾದನೆಯು ವಾರ್ಷಿಕ ೩.೫೩% ರಂತೆ ಹೆಚ್ಚುತ್ತಿದೆ.  ವ್ಯತ್ಯಾಸದ ಪ್ರಮಾಣವು ಜಾಸ್ತಿಯಿದೆ ಹಾಗೂ ವ್ಯತ್ಯಾಸದ ಸಹಶಕ್ತತೆಯ ೧೫% ಆಗಿರುತ್ತದೆ. ಕೃಷಿ, ಅರಣ್ಯ, ಮೀನುಗಾರಿಕೆ ಮತ್ತು ಗಣಿಯನ್ನು ಒಳಗೊಂಡಿರುವ ಪ್ರಾಥಮಿಕ ವಲಯದ ಬೆಳವಣಿಗೆಯ ದರವು ೩.೦೨%, ಕೃಷಿಯ ಬೆಳವಣಿಗೆಯ ದರವು ೩.೨೦%, ಕೃಷಿಯ ಬೆಳವಣಿಗೆಯ ದರವು ೩.೨೦% ಹಾಗೂ ಮೀನುಗಾರಿಕೆಯದು ೩.೪% ಆಗಿದೆ. ಅರಣ್ಯ ಹಾಗೂ ಗಣಿಯ ಬೆಳವಣಿಗೆಯ ದರವು ಋಣಾತ್ಮಕವಾಗಿದ್ದು, ಅನುಕ್ರಮವಾಗಿ -೧.೧೨% ಮತ್ತು -೨.೭೮% ಆಗಿದೆ. ಈ ಎಲ್ಲಾ ವಲಯಗಳು ವಾರ್ಷಿಕ ಬೆಳವಣಿಗೆಯ ದರದಲ್ಲಿ ಅಸ್ಥಿರತೆಯ ಲಕ್ಷಣವನ್ನು ಪಡೆದಿವೆ.

ದ್ವಿತೀಯ ವಲಯ

ದ್ವಿತೀಯ ವಲಯ ೭.೧೧% ದರದಲ್ಲಿ ಬೆಳೆಯುತ್ತಿದೆ. ತಯಾರಿಕೆಯ ಉತ್ಪಾದನೆಯಲ್ಲಿ ೮.೫೭% ದರದಲ್ಲಿ ಬೆಳೆಯುತ್ತಿದೆ. ಇದರಲ್ಲಿ ನೋಂದಾಯಿತ ತಯಾರಿಕೆಯು ೯.೩೪%ರ‍ಲ್ಲಿ ಹಾಗೂ ನೋಂದಣಿ ರಹಿತ ತಯಾರಿಕೆಯು ೭.೦೫%ರಲ್ಲಿ ಬೆಳೆಯುತ್ತಿದೆ. ನಿರ್ಮಾಣಗಳು ೩.೯೧% ದರದಲ್ಲಿ ಹಾಗೂ ವಿದ್ಯುತ್, ಅನಿಲ ಮತ್ತು ನೀರಿನಂತಹ ಸಾರ್ವಜನಿಕ ಉಪಯೋಗಿ ವಸ್ತುಗಳು ೨.೩೬% ದರದಲ್ಲಿ ಬೆಳೆಯುತ್ತಿವೆ. ತಯಾರಿಕ ಉತ್ಪಾದನೆಯು ೮.೫೭%ರಲ್ಲಿ ಬೆಳೆಯುತ್ತಿದ್ದು, ವಿದ್ಯುತ್, ಅನಿಲ ಮತ್ತು ನೀರು ೨.೩೦ರ ದರದಷ್ಟೇ ಯಾಕೆ ಬೆಳೆಯುತ್ತಿದೆ ಎಂಬುದು ಒಂದು ಒಗಟಾಗಿದೆ. ಇದಕ್ಕೆ ಉತ್ತರವನ್ನು ಸ್ವಉತ್ಪಾದಿತ ವಿದ್ಯುತ್ತಿನ ಹೆಚ್ಚಿನ ಉತ್ಪನ್ನ ಮತ್ತು ಬಳಕೆಯಲ್ಲಷ್ಟೇ ಕಾಣಬಹುದಾಗಿದೆ. ಸಾರ್ವಜನಿಕ ಉಪಯುಕ್ತತೆಗಿಂತ, ಬಂಧಿತ ತಯಾರಿಕೆಯ ಉತ್ಪಾದನಾ ಘಟಕ ಬೆಲೆಯು ಹೆಚ್ಚಿರುವುದು. ಆದರ ಪೂರೈಕೆಯು ಹೆಚ್ಚು ನಂಬಲರ್ಹವೆನಿಸುವುದು.

ತೃತೀಯ ವಲಯ

ಸಾರಿಗೆ ವ್ಯವಸ್ಥೆ, ಉದ್ದಿಮೆ, ಬ್ಯಾಕಿಂಗ್ ಮತ್ತು ವಿಮೆ, ಸಾರ್ವಜನಿಕ ಆಡಳಿತ ಮತ್ತು ಇತರ ಸೇವೆಗಳನ್ನು ಒಳಗೊಂಡಿರುವ ತೃತೀಯ ವಲಯ ಶೇಕಡಾ ೭.೨೪% ರಂತೆ ಬೆಳೆಯುತ್ತಿವೆ. ರೈಲ್ವೆಗಳು ಶೇಕಡಾ ೪.೫೮%ರಂತೆ ಹಾಗೂ ಇತರ ಸಾಗಣಿಕೆಯ ಸಾಧನಗಳು ಶೇಕಡಾ ೭.೦೮% ರಂತೆ ಬೆಳೆಯುತ್ತಿದೆ. ಸಂಪರ್ಕ ಸಾಧನವು ಶೇಕಡಾ ೭.೦೫% ರಂತೆ, ಬ್ಯಾಕಿಂಗ್ ಮತ್ತು ವಿಮೆಯನ್ನು ಒಳಗೊಂಡ ಆರ್ಥಿಕ ರಂಗವು ರಾಜ್ಯದಲ್ಲೆ ಅತ್ಯಧಿಕ ಬೆಳವಣಿಗೆಯ ದರ ೧೧.೫% ರಷ್ಟು ಬೆಳೆಯುತ್ತಿದೆ. ಭು ಲೇವಾದೇವಿಯು ಶೇಕಡಾ ೩.೯೧% ಹಾಗೂ ಸಾರ್ವಜನಿಕ ಆಡಳಿತವು ಶೇಕಡಾ ೭.೩೩% ರಂತೆ ಬೆಳೆಯುತ್ತಿದೆ. ಇತರ ಸೇವಾ ಸೌಲಭ್ಯಗಳು ಶೇಕಡಾ ೬.೪೫% ರಂತೆ ಬೆಳೆಯುತ್ತಿದೆ. ಅನುಕ್ರಮಣಿಕೆಯಲ್ಲಿ ಜೋಡಿಸಿದಾಗ ಬ್ಯಾಂಕಿಂಗ್ ಮತ್ತು ವಿಮೆ ಹಾಗೂ ನೋಂದಾಯಿತ ತಯಾರಿಕೆಗಳು ಉನ್ನತ ದರದಲ್ಲಿ ಬೆಳೆಯುತ್ತಿದೆ. ಕೃಷಿ ಮತ್ತು ಸಾರ್ವಜನಿಕ ಉಪಯುಕ್ತತೆಗಳು, ರಾಜ್ಯದ ನಿವ್ವಳ ಆಂತರಿಕ ಉತ್ಪಾದನಾ ಬೆಳವಣಿಗೆಯ ದರಕ್ಕಿಂತಲೂ ಕಡಿಮೆ ದರದಲ್ಲಿ ಬೆಳೆಯುತ್ತಿದೆ. ಅರಣ್ಯ-ನಿವ್ವಳ ಆಂತರಿಕ ಉತ್ಪಾದನಾ ಬೆಳವಣಿಗೆಯ ದರಕ್ಕಿಂತಲೂ ಕಡಿಮೆ ದರದಲ್ಲಿ ಬೆಳೆಯುತ್ತಿದೆ. ಅರಣ್ಯ ಮತ್ತು ಗಣಿಯಲ್ಲಿ ಈ ಹಿಂದೇನೇ ಗಮನಿಸಿರುವಂತೆ ಬೆಳವಣಿಗೆಯ ದರಗಳು ಋಣಾತ್ಮಕವಾಗಿವೆ. ಬ್ಯಾಂಕಿಂಗ್  ಮತ್ತು ವಿಮಾ ವಲಯ ಹಾಗೆಯೇ ಸಾರ್ವಜನಿಕ ಆಡಳಿತ ಹಾಗೂ ಇನ್ನಿತರ ಸೇವೆಗಳ ಬಗ್ಗೆ ಕರ್ನಾಟಕದಲ್ಲಿ ಹೆಚ್ಚಿನಂಶ ವೇತನ ಮತ್ತು ಕೂಲಿಗೆ ಸಂಬಂಧಿಸಿದ ಸ್ಫೋಟವೇ ಆಗಿದೆ. ಈ ಮೂರು ವಿಭಾಗಗಳಲ್ಲು ಬೆಳವಣಿಗೆಯ ದರವು ನೈಜ ವೇತನ ಹಾಗೂ ಕೂಲಿಗಳ ಏರಿಕೆಯ ಸ್ವಭಾವದ ಪ್ರತಿಫಲನವಾಗಿದೆ. ಕರ್ನಾಟಕವು ಉನ್ನತವಾಗಿ ನಗರೀಕೃತಗೊಂಡಿರುವ ರಾಜ್ಯವಾಗಿದೆ, ಹಾಗೂ ನೈಜ ಕೂಲಿ ಹಾಗೂ ಸಂಬಳದ ಏರಿಕೆಯ ಸ್ವಭಾವವು, ಕಾರ್ಮಿಕ ಸಂಘಗಳ ಒತ್ತಾಯ ಮತ್ತು ಬೇಕಾದ ವಿಧದ ಕಾರ್ಮಿಕ ವರ್ಗದ ಕೊರತೆಯ ಬಲವಾದ ಪ್ರಭಾವದಿಂದಾಗಿರುತ್ತದೆ.

ಹಣಕಾಸು

ನೋಂದಾಯಿತ ಹಾಗೂ ನೋಂದಾವಣಿರಹಿತ ತಯಾರಿಕೆಗಳು ಶೇಕಡಾ ೭%ಕ್ಕಿಂತಲು ಹೆಚ್ಚಿನ ದರದಲ್ಲಿ ಬೆಳೆಯುತ್ತಿದ್ದು, ಬೆಳವಣಿಗೆಯ ಉತ್ಪಾದನೆಯಲ್ಲಿ ಕರ್ನಾಟಕದ ಅವಲಂಬನೆಯು ಈ ವಲಯಗಳ ಮೇಲೆ ಖಂಡಿತವಾಗಿದೆ. ಹಣಕಾಸು ಮತ್ತು ಕೈಗಾರಿಕೆ ಕರ್ನಾಟಕದಲ್ಲಿ ಉನ್ನತವಾಗಿ ಬೆಳೆಯುತ್ತಿರುವ ವಲಯಗಳು. ಕೃಷಿಯನ್ನು ತೆಗೆದುಕೊಂಡಾಗ, ಬೆಳವಣಿಗೆ ದರವು ೦.೧೯% ಇದ್ದು ಇದು ನಗಣ್ಯವಾಗಿದೆ. ಉತ್ಪಾದನೆ ಬೆಳವಣಿಗೆ ದರವು ೨.೭೫% ಹಾಗೂ ಪ್ರತಿ ಹೆಕ್ಟೇರ್‌ನ ಇಳುವರಿ ಬೆಳವಣಿಗೆ ದರವು ೦.೬೬% ಇರುವುದೂ ನಗಣ್ಯವಾಗಿದೆ. ಕ್ಷೇತ್ರ ಬೆಳವಣಿಗೆ ದರ ಹಾಗೂ ಇಳುವರಿ ಬೆಳವಣಿಗೆ ದರಗಳಲ್ಲಿ ಉನ್ನತ ಮಟ್ಟದ ಅಸ್ಥಿರತೆಯಿರುವುದು. ಭಾರತೀಯ ಆರ್ಥಿಕತೆಯಲ್ಲಿರುವುದಕ್ಕಿಂತ ಭಿನ್ನವಾಗಿ ಕರ್ನಾಟಕದ ಇಳುವರಿ ಸೂಚಿಯು ಗಮನಾರ್ಹವಾಗಿ ಕೆಳಮಟ್ಟದ ದರದಲ್ಲಿ ಬೆಳೆಯುತ್ತಿದೆ.

ಬೆಳವಣಿಗೆಯ ದೇಣಿಗೆ ಬಗ್ಗೆ ವಿವರಣೆ

ಹಿಂಚಲನೆಯ ಕಾರ್ಯಾಭ್ಯಸದಂತೆ, ಸ್ಥಿರಬೆಲೆಗಳಲ್ಲಿ ರಾಜ್ಯದ ನಿವ್ವಳ ಆಂತರಿಕ ಉತ್ಪಾದನಾ ಬೆಳವಣಿಗೆಯು ನೈಜವಾಗಿ ಈ ರೀತಿ ವಿವರಿಸಲಾಗಿದೆ. ನೋಂದಾಯಿತ ತಯಾರಿಕೆಗಳು ಮತ್ತು ಕೃಷಿ, ಸಾರಿಗೆ, ವಿದ್ಯುತ್, ನೋಂದಾವಣಿರಹಿತ ತಯಾರಿಕೆಗಳ ದೇಣಿಗೆಗಳು ಅಷ್ಟೇನೂ ಗಂಭೀರವಲ್ಲ. ರಾಜ್ಯದ ಆಂತರಿಕ ನಿವ್ವಳ ಉತ್ಪಾದನೆಯ ಬೆಳವಣಿಗೆಯನ್ನು ನೋಂದಾಯಿತ ತಯಾರಿಕೆಯ ಪ್ರಭಾವವು ಹೆಚ್ಚು ಮಹತ್ವದ್ದು ಎಂಬ ಅಂಶ ಕುತೂಹಲಕಾರಿಯಾದುದು. ಆದರ ಕೃಷಿಯ ೭೫% ಬೆಳವಣಿಗೆಯನ್ನು ತಾನಾಗಿ ಬಣ್ಣಿಸುವುದು. ನಾವು ಕೃಷಿ, ನೋಂದಾಯಿತ ತಯಾರಿಕೆ, ನೋಂದಾವಣಿರಹಿತ ತಯಾರಿಕೆಗಳು, ವಿದ್ಯುತ್ ಮತ್ತು ಸಾರಿಗೆಯನ್ನು ತೆಗೆದುಕೊಂಡಾಗ, ನೋಂದಾಯಿತ ತಯಾರಿಕೆಯ ಸ್ಥಿತಿ ಸ್ಥಾಪಕತೆಯು ೦.೫೩% ಹಾಗೂ ಕೃಷಿಯದ್ದು ೦.೩೦% ಆಗಿರುವುದು, ಅರ್ಥಾತ್, ಒಂದು ಶೇಕಡಾ ನೋಂದಾಯಿತ ತಯಾರಿಕೆಯ ಬೆಳವಣಿಗೆಯ ನಿವ್ವಳ ರಾಜ್ಯ ಆಂತರಿಕ ಉತ್ಪಾದನೆಯ ೦.೫೪ ಶೇಕಡಾ ಒಂದು ಬೆಳವಣಿಗೆಯ ದರಕ್ಕೆ ಹಾಗೂ ಶೇಕಡಾ ಬೆಳವಣಿಗೆಯ ದರವು ನಿವ್ವಳ ರಾಜ್ಯ ಆಂತರಿಕ ಉತ್ಪಾದನೆಯ ೦.೩ ಶೇಕಡಾ ಬೆಳವಣಿಗೆಯಿಂದೆನಿಸುವುದು.

ಬೆಳೆಗಳು

ಬೆಳೆಗಳ ಬೆಳವಣಿಗೆಯ ದರವನ್ನು ವೀಕ್ಷಿಸಿದರೆ, ಮೊದಲು ಬರುವುದು ೭.೧೬% ಶೇಕಡಾದೊಂದಿಗೆ ಎಣ್ಣೆ ಬೀಜಗಳು, ಆ ಬಳಿಕ ಬರುವುದು ೫.೯೬%ದೊಂದಿಗೆ ಕಬ್ಬ. ಹತ್ತಿ, ತೆಂಗು ಮತ್ತು ಅಡಿಕೆಯ ಬೆಳವಣಿಗೆಯ ದರವು ಅನುಕ್ರಮವಾಗಿ ೨.೨೦%, ೩.೦೨% ಹಾಗೂ ೨.೧೬% ಆಗಿರುತ್ತದೆ. ತಂಬಾಕು ೩.೦೯% ದರದಲ್ಲಿ ಹಾಗೂ ಕಾಫಿ ೨.೦೯% ದರದಲ್ಲಿ ಬೆಳೆಯುತ್ತಿದೆ. ಆಹಾರ ಧಾನ್ಯಗಳ ಉತ್ಪಾದನೆಯು  ೧.೨೫% ರಲ್ಲಿ ಬೆಳೆಯುತ್ತಿದೆ. ಇದರಲ್ಲಿ ಏಕದಳ ಧಾನ್ಯಗಳು ೧.೩೩% ರಲ್ಲಿ ಹಾಗೂ ದ್ವಿದಳ ಧಾನ್ಯಗಳು ೦.೨೦% ದಲ್ಲಿ ಬೆಳೆಯುತ್ತಿದೆ. ಕಾಳು, ಮೆಣಸು ಮತ್ತು ಏಲಕ್ಕಿಯ ಬೆಳವಣಿಗೆಯು ಜನಸಂಖ್ಯೆಯ ಬೆಳವಣಿಗೆಗಿಂತ ಕಡಿಮೆಯಾಗಿದೆ ಮಾತ್ರವಲ್ಲ ಈ ಉತ್ಪಾದನೆಯು ಅಸ್ಥಿರ ಲಕ್ಷಣವನ್ನು ಹೊಂದಿದೆ. ಈ ಅಸ್ಥಿರತೆಯು ದ್ವಿದಳ ಧಾನ್ಯ, ಹತ್ತಿ, ಮೆಣಸು ಹಾಗೂ ಸಾಂಬಾರ ಪದಾರ್ಥಗಳ ಬಗ್ಗೆ ಜಾಸ್ತಿಯಾಗಿದೆ.

ಕೈಗಾರಿಕಾ ಉತ್ಪಾದನಾ ಸೂಚಿಯು ೬.೫೮% ರಲ್ಲಿ ಬೆಳೆಯುತ್ತಿದೆ. ಶಕ್ತಿಯ ಉತ್ಪಾದನೆಯು ೭.೮೭% ರಲ್ಲಿ ಬೆಳೆಯುತ್ತಿದೆ. ಇವುಗಳನ್ನು ನೋಡಿದಾಗ, ಕೆಲವೇ ಕೆಲವು ಬೆಳೆಗಳನ್ನು ಹೊರತುಪಡಿಸಿದರೆ ಜನಸಂಖ್ಯೆಗಿಂತ ಕೃಷಿ ಉತ್ಪಾದನೆಯ ಬೆಳವಣಿಗೆಯ ದರವು ಕಡಿಮೆಯಿದ್ದು, ಕರ್ನಾಟಕವು ಧಾನ್ಯಗಳನ್ನು ಆಮದುಗೊಳಿಸುತ್ತಿರುವುದು ಹೆಚ್ಚಾಗುತ್ತಿದೆ.

ಕೃಷಿಯ ಸಮಸ್ಯೆಗಳು

ಹಿಂಚಲನೆಯ ಕಾರ್ಯಾಭ್ಯಾಸದಲ್ಲಿ ಕಂಡುಕೊಂಡ ಒಂದು ಕುತೂಹಲಕಾರಿ ಅಂಶವೆಂದರೆ ಕೃಷಿ ಉತ್ಪನ್ನವು ನೀರಾವರಿ, ಗೊಬ್ಬರದ ಬಳಕೆ ಅಥವಾ ಇಳುವರಿ ತಳಿಯ ಆಧಾರದಿಂದ ವಿವರಿಸಲ್ಪಟ್ಟಿಲ್ಲ.

ಅದರಂತೆ ಕರ್ನಾಟಕದಲ್ಲಿ ಕೃಷಿಯಲ್ಲಿ, ಮುನ್ನಡೆ ಅಥವಾ ಅದರಲ್ಲಿರುವ ಕೊರತೆಗಳು ಒಂದು ಒಗಟಾಗಿ ನಿಂತಿದೆ. ನೀರಾವರಿ ಒದಗಿಸುವುದು, ಗೊಬ್ಬರದ ಬಳಕೆ ಮತ್ತು ಹೆಚ್ಚು ಇಳುವರಿ ತಳಿಯ ಬಳಕೆಯು ಹೆಚ್ಚುವ ರೀತಿಯನ್ನು ಗಮನಿಸಲಾಗಿದೆ. ನಿರ್ದಿಷ್ಟವಾಗಿ ಹೆಚ್ಚುವರಿ ದೃಷ್ಟಿಕೋನದಿಂದ ನೋಡಿದಾಗ ಹೆಚ್ಚಿನ ಬೆಳೆಗಳಿಗೆ ಸಂಬಂಧಿಸಿ ಕೃಷಿಗೆ ಹಾಕಲ್ಪಡುವ ಎಲ್ಲಾ ವಸ್ತುಗಳು ಹಾಗೂ ಅದರಿಂದ ಬರುವ ಉತ್ಪನ್ನಗಳ ವಿವರಣೆಯು ಕರ್ನಾಟಕದಲ್ಲಿ ವಿಫಲವಾಗುತ್ತಿದೆ.

ಕರ್ನಾಟಕದಲ್ಲಿ ಕ್ಷೇತ್ರವ್ಯಾಪ್ತಿಯನ್ನು ಹೆಚ್ಚಿಸಲು ಹೆಚ್ಚೇನೂ ಅವಕಾಶವಿಲ್ಲ. ಬೆಳವಣಿಗೆಯ ಅಂಕಿಯನ್ನು ಗಮನಿಸಿದಾಗ ತುಲನಾತ್ಮಕವಾಗಿ ಎಣ್ಣೆ ಬೀಜ ಮತ್ತು ಕಬ್ಬು ಹೆಚ್ಚು ಲಾಭಕಾರಿಯಾಗಿದೆ, ಆಹಾರ ಧಾನ್ಯಗಳಿಗೆ ಹೋಲಿಸಿದಲ್ಲಿ ಹತ್ತಿ ಮತ್ತು ತಂಬಾಕುಗಳಿಗೆ ಹೆಚ್ಚಿನ ಭರವಸೆಯಿರುವಂತೆ ಕಾಣುತ್ತದೆ. ಬಹುಶಃ ಕಾಫಿ ಮತ್ತು ಮೆಣಸಿಗೆ ಉತ್ತಮ ಭವಿಷ್ಯವಿದೆ. ಹಿಂದಿನ ಅಂಕಿ ಸಂಖ್ಯೆಗಳನ್ನು ಗಮನಿಸಿದಾಗ, ಹೆಚ್ಚಿಸಿದ ಒಳವಸ್ತುಗಳ ಹೊರತಾಗಿಯೂ ಏಕದಳ ಹಾಗೂ ದ್ವಿದಳ ಧಾನ್ಯಗಳು ಹೆಚ್ಚಿದ ಪ್ರತ್ಯುತ್ತರ ನೀಡಲಾಗಲಿಲ್ಲ. ಜನಸಂಖ್ಯೆಯ ಬಹುಭಾಗ ಕೃಷಿಯನ್ನೇ ಅವಲಂಬಿಸಿದ್ದು ಕೃಷಿಕರಲ್ಲಿ ಬಹುಭಾಗ ಜೀವನಕ್ಕೆ ತಕ್ಕಷ್ಟೇ ಕೃಷಿಯಲ್ಲಿ ಅವಲಂಬಿತವಾಗಿರುವುದರಿಂದ, ಏಕದಳ ಹಾಗೂ ದ್ವಿದಳ ಧಾನ್ಯ ಎರಡರಲ್ಲು ಆಹಾರಧಾನ್ಯದ ಹೆಚ್ಚಿನ ಇಳುವರಿಯ ಬಗ್ಗೆ ನಾವು ಗಮನ ಕೊಡಬೇಕು. ದ್ವಿದಳ ಧಾನ್ಯಗಳ ಸ್ಥಿತಿಯು ಬಹಳ ಕೆಟ್ಟದಾಗಿದೆ. ತೊಗರಿಯ ಬೆಳವಣಿಗೆಯ ದರವು ಋಣಾತ್ಮಕವಾಗಿದೆ. ಕೃಷಿಯಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಕರ್ನಾಟಕವು ಆಹಾರ ಧಾನ್ಯಗಳ ಆಮದಿನ ಮೇಲೆ ಹೆಚ್ಚು ಅವಲಂಬಿಸಬೇಕಾಗುತ್ತದೆ. ಹಿಂದಿನ ವರ್ಷಗಳಲ್ಲಿ ಸಾಮಾನ್ಯ ಎರಡು ದಶಕಗಳ ಹಿಂದೆ, ಕರ್ನಾಟಕವು ಆಹಾರಧಾನ್ಯಗಳಲ್ಲಿ ಸ್ವಾವಲಂಬಿಯಾಗಿತ್ತು. ಆದರೆ ಈಗ ಅದರ ತದ್ವಿರುದ್ಧ ಸ್ಥಿತಿಯಾಗಿದೆ. ವಿವಿಧ ಬೆಳೆಗಳ ಮೂಲಕ ಕೃಷಿಯ ನೈಜ ಆದಾಯವನ್ನು ಬಹುಶಃ ಇನ್ನೂ ಉತ್ತಮಗೊಳಿಸಲು ಸಾಧ್ಯವಿದೆ. ಆದರೆ ದೊಡ್ಡ ಪ್ರಮಾಣದ ತೋಟಗಾರಿಕೆಯ ರೀತಿಯ ಅಭಿವೃದ್ಧಿಯು ಹೆಚ್ಚಿನ ಗ್ರಾಮೀಣ ಜನತೆಗೆ ಸಹಾಯಕವಾಗಲಾರದು, ವಿಶೇಷತಃ ಕೃಷಿ ಕೂಲಿಕಾರ್ಮಿಕರಿಗೆ. ಕರ್ನಾಟಕದ ನಿರಾಶಾದಾಯಕ ಸಾಧನೆಯನ್ನು ಕ್ಷಾಮ ಪರಿಸ್ಥಿತಿಯ ಮೇಲೆ ದೂರುವುದು ಸರಿಯಲ್ಲ. ನಾವು ಸಾಕಷ್ಟು ಅವಧಿಯನ್ನು ತೆಗೊಂಡುಕೊಂಡಿದ್ದೇವೆ. ಒಳ್ಳೆಯ ವರ್ಷಗಳು ಮತ್ತು ಕೆಟ್ಟ ವರ್ಷಗಳು ಒಂದಕ್ಕೊಂದು ಪರಿಹಾರ ನೀಡುವುವು.

ಆಹಾರಧಾನ್ಯಗಳ ಆಮದು

ಕರ್ನಾಟಕವು ಒಂದು ವೇಳೆ ಆಹಾರ ಧಾನ್ಯಗಳ ಆಮದಿನ ಮೇಲೆ ಹೆಚ್ಚೆಚ್ಚು ಅವಲಂಬಿತವಾಗಿರಬೇಕಾದರೆ, ಆಗ ಅಂತರ್‌ಪ್ರಾದೇಶಿಕ ವಾಣಿಜ್ಯ ರಫ್ತಿನ ಅಭಿವೃದ್ಧಿಯೇ ಒಂದು ಸಮಸ್ಯೆಯೆನಿಸುವುದು.

ಕಾಲಾವಧಿಯಲ್ಲಿ ಕಬ್ಬಿನ ಉತ್ಪಾದನೆಯ ಬೆಳವಣಿಗೆಯ ದರವು ಕುಂಠಿತಗೊಳ್ಳುವುದು ಎಂಬುದನ್ನು ನಾವು ನೆನಪಿಡಬೇಕು. ಮಣ್ಣಿನ ಫಲವತ್ತತೆಯು ಹೆಚ್ಚಿನ ರೀತಿಯಲ್ಲಿ ತೊಂದರೆಗೊಳಗಾಗುವುದು, ಮಹಾರಾಷ್ಟ್ರದಲ್ಲಿ ಕಂಡು ಬರುವಂತೆ ಕಬ್ಬಿನ ಬೆಳೆಯಲ್ಲಿ ಹೆಚ್ಚಾದ ನೀರನ್ನು ಉಪಯೋಗಿಸುವರೇ ಎಂಬುದು ಸ್ಪಷ್ಟವಾಗಿಲ್ಲ.

ಬೆಳವಣಿಗೆಯ ದೃಷ್ಟಿಕೋನದಲ್ಲಿ ತಯಾರಿಕೆಯು ಆಶಾದಾಯಕ ಸ್ಥಿತಿಯಲ್ಲಿರುವಂತೆ ಕಾಣುತ್ತದೆ. ಅದರಂತೆ, ಆರ್ಥಿಕ ಸೇವೆಗಳು ಮತ್ತು ಇತರ ಸೇವೆಗಳಿಗೂ ಸಹ ಖಂಡಿತವಾದ ಭರವಸೆಯಿದೆ. ಸ್ಥಿತಿಯಾಧಾರದಲ್ಲಿ ಒಟ್ಟಾರೆ ಶಕ್ತಿಯ ಉತ್ಪಾದನೆಯು ಶೇಕಡಾ ೮ ರಂತೆ ಬೆಳೆಯುತ್ತಿದೆ. ಆದರೆ ಈ ಹಿಂದೆ ತಿಳಿಸಿರುವಂತೆ ಬಂಧಿತ ಉತ್ಪಾದನೆಯಲ್ಲಿ ಹೆಚ್ಚಳದ ಪರಿಸ್ಥಿತಿಯನ್ನು ಕಾಣುತ್ತೇವೆ. ನೈಜ ಬೆಲೆಯನ್ನು ಸೇರಿಸಿ ವಿದ್ಯುತ್ತನ್ನು ಒಂದು ಸ್ವತಂತ್ರ ಉದ್ದಿಮೆಯಾಗಿ ಪರಿಗಣಿಸಿದಾಗ, ಅದು ಇಚ್ಛಿಸಿದ ದರದಲ್ಲಿ ಬೆಳೆಯುತ್ತಿಲ್ಲ ಎನ್ನುವುದು ಸ್ಪಷ್ಟ. ಬಹುಶಃ ವಿದ್ಯುತ್ ದರಗಳಲ್ಲಿನ ನಿಶ್ಚಲತೆ ಇದಕ್ಕೆ ಒಂದು ವಿವರಣೆ ನೀಡಬಹುದು. ಪ್ರಸ್ತುತ ಈ ಆಧಾರದಲ್ಲೇ ಶಕ್ತಿಯ ಬಂಧಿತ ಉತ್ಪಾದನೆಯನ್ನು ಅವಲಂಬಿಸಿ ಕರ್ನಾಟಕವು ಕೈಗಾರಿಕಾ ರಂಗದ ವಿಸ್ತರಣೆ ಮಾಡಬಹುದಾಗಿ ನಾವು ನಿರೀಕ್ಷಿಸಬಹುದು. ಕೈಗಾರಿಕೆಗಳು ಹೆಚ್ಚು ಸ್ಪರ್ಧಾತ್ಮಕವಾಗಬೇಕಾದರೆ ಸಾರ್ವಜನಿಕ ವಿದ್ಯುತ್ ವಿತರಣೆಯು ಬೆಳೆಯಬೇಕು. ಕರ್ನಾಟಕ ಆಗಾಗ್ಗೆ ವಿದ್ಯುತ್ ಕಡಿತಕ್ಕೆ ಒಳಗಾಗಿದೆ. ನಮ್ಮ ಹೆಚ್ಚಿನ ವಿದ್ಯುತ್ ಉತ್ಪಾದನೆಯ ಜಲಮೂಲದಿಂದಾಗಿದ್ದು, ಬರ ಪರಿಸ್ಥಿತಿಯಿಂದಾಗಿ ಇದು ಅನಿಶ್ಚಿತತೆಯಿಂದ ಕೂಡಿದೆ. ಕರ್ನಾಟಕಕ್ಕೆ ಬದಲಿ ಮೂಲಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ಬೃಹತ್ ಬಂಡವಾಳ ಹೂಡಿಕೆಯು ಅಗತ್ಯವಿದೆ ಮತ್ತು ಇತರ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವಂತೆ, ಸ್ಪರ್ಧಾತ್ಮಕ ದರಗಳಲ್ಲಿ ಉದ್ದಿಮೆಗಳಿಗೆ ವಿದ್ಯುತ್ ಒದಗಿಸುವ ಅಗತ್ಯವಿದೆ.

ರಾಜ್ಯ ಸರ್ಕಾರದ ಪಾತ್ರ

ರಾಜ್ಯದ ಆರ್ಥಿಕತೆಯ ಯೋಜಿತ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಂತಹ ಅಭಿವೃದ್ಧಿಯನ್ನು ಪ್ರಭಾವಪೂರ್ಣ ಕಾನೂನು, ಶಾಂತಿ ಮತ್ತು ನ್ಯಾಯ ಪಾಲನೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸೌಲಭ್ಯ ಒದಗಣೆ ಮೇಲಿನ ಖರ್ಚುಗಳಿಂದ ಸಾಧಿಸಬಹುದು. ಸಾಮಾಜಿಕ ಸೌಲಭ್ಯದ ಮೇಲಿನ ಖರ್ಚುಗಳು, ಶಿಕ್ಷಣ, ವೈದ್ಯಕೀಯ ಮತ್ತು ಆರೋಗ್ಯ ರಕ್ಷಣೆ, ಹೆಚ್ಚಿಸುವುದು ಹಾಗೂ ನಿರ್ವಹಣೆ, ಹೆದ್ದಾರಿಗಳು ಮತ್ತು ಸೇತುವೆಗಳು, ಕುಟುಂಬ ಯೋಜನಾ ಸೌಲಭ್ಯಗಳನ್ನು ಪೂರೈಸುವುದು, ಮಕ್ಕಳು ಮತ್ತು ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳು ಇತ್ಯಾದಿಗಳ ಮೇಲಿನ ಖರ್ಚುಗಳನ್ನು ಒಳಗೊಂಡಿರುತ್ತದೆ. ಆರ್ಥಿಕ ಸೌಲಭ್ಯಗಳ ಖರ್ಚುಗಳು ಸಾರ್ವಜನಿಕ ಉಪಯುಕ್ತ ಸೇವೆಗಳು ಅಂದರೆ, ವಿದ್ಯುತ್, ಅನಿಲ ಮತ್ತು ಸಾರ್ವಜನಿಕ ನೀರು ಸರಬರಾಜು, ಸಾರಿಗೆ, ಸಂಪರ್ಕ ಮತ್ತು ಸಂಗ್ರಹಣೆ ಸೌಲಭ್ಯಗಳು-ನೀರಾವರಿ ಕೆಲಸಗಳ ಹೆಚ್ಚಳ, ನದಿಕೊಳ್ಳಗಳ ಯೋಜನೆ, ಅರಣ್ಯೀಕರಣ ಯೋಜನೆಗಳು ಇತ್ಯಾದಿಗಳ ಮೇಲಿನ ಖರ್ಚುಗಳು. ಈ ಎಲ್ಲಾ ಖರ್ಚುಗಳು ವೇತನ, ಕೂಲಿಗಳು ಮತ್ತು ವಸ್ತುಗಳ ಮೇಲಿನ ಖರ್ಚುಗಳನ್ನು ಒಳಗೊಂಡಿರುತ್ತದೆ. ಇಲ್ಲಿ ಸಾಕಷ್ಟು ಸೋರಿಕೆಯು ಸಹಾ ಇರುವುದು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ವಸ್ತುಗಳ ಮಾರಾಟವನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯೊಂದಿಗೆ ಮಾಡುತ್ತಾ ಸಹಾಯಧನ ನೀಡುತ್ತಿದೆ ಹಾಗೂ ಬರ  ಮತ್ತು ಪ್ರವಾಹಕ್ಕೆ ಪರಿಹಾರ ಮತ್ತು ಉದ್ಯೋಗ ಭರವಸೆ ಕಾರ್ಯಕ್ರಮಗಳ ಮೇಲೂ ಖರ್ಚು ಮಾಡುತ್ತಿದೆ. ಕೆಲವೊಮ್ಮೆ ಸೀರೆಗಳನ್ನು ಮತ್ತು ದೋತಿಗಳನ್ನು ಹಂಚುವ, ಶಾಲೆಗಳ ಮಕ್ಕಳಿಗೆ  ಮಧ್ಯಾಹ್ನದ ಊಟ ಇತ್ಯಾದಿಗಳು ಸಹ ಈ  ಕಾರ್ಯಕ್ರಮಗಳಲ್ಲಿವೆ. ರಾಜ್ಯ ಮಟ್ಟದ ಸರ್ಕಾರಿ ವೆಚ್ಚಗಳಲ್ಲಿ ಒಂದು ಮುಖ್ಯ ಸಂಘರ್ಷವಿದೆ. ಅದು ಸರ್ಕಾರಿ ಆದಾಯ ಮತ್ತು ಪ್ರಮುಖ ವೆಚ್ಚ ಮತ್ತು ಅಭಿವೃದ್ಧಿ ಹಾಗೂ ಅಭಿವೃದ್ಧಿಯೇತರ ಖರ್ಚುಗಳ ನಡುವೆಯಾಗಿರುತ್ತದೆ. ಅಭಿವೃದ್ಧಿ ಖರ್ಚುಗಳಲ್ಲಿ  ಆಟದ  ನಿರ್ವಹಣೆ ಖರ್ಚುಗಳೂ ಸಹಾ ಸೇರುತ್ತದೆ. ರಾಜ್ಯದ ಖರ್ಚುಗಳು ಭಾಗಶಃ ರಾಜ್ಯದ ಸ್ವಂತ ತೆರಿಗೆ ಸಂಪನ್ಮೂಲಗಳಿಂದಲೂ ಉಳಿದ ಅರ್ಧ ಭಾಗವು ಕೇಂದ್ರದ ತೆರಿಗೆಯ ಪಾಲು ಹಾಗೂ ಸಹಾಯಧನ ಪಾವತಿಯಿಂದಲೂ ಆಗಿರುತ್ತದೆ. ತೆರಿಗೆಯೇತರ ಆದಾಯವೂ ಸಹ ರಾಜ್ಯ ಮಟ್ಟದ ವೆಚ್ಚಗಳಿಗೆ ಕೊಡುಗೆಯಾಗುತ್ತದೆ.

ಆದಾಯ ಮತ್ತು ವೆಚ್ಚಗಳು

ಆದಾಯ ಮತ್ತು ವೆಚ್ಚಗಳು ಲಘು ಗಣಕ ಬೆಳವಣಿಗೆ ದರ ರೀತಿಯಲ್ಲಿ ಪಡೆದ ಹಿಂಚಲನೆಯನ್ನು ಈ ಕೆಳಗೆ ನೀಡಲಾಗಿದೆ. ರಾಜ್ಯದ ಸ್ವತಃ ತೆರಿಗೆ ಆದಾಯ ದರದ ಬೆಳವಣಿಗೆಯ ೭.೨೩% ಆಗಿದೆ. ಕೇಂದ್ರದ ತೆರಿಗೆಗಳ ಪಾಲು ೩.೯೯% ರಂತೆ ಬೆಳೆಯುತ್ತಿದೆ. ಒಟ್ಟು ತೆರಿಗೆ ರಸೀತಿಯು ೬.೫೮%ರಲ್ಲಿ ಬೆಳೆಯುತ್ತಿದೆ. ತೆರಿಗೆಯೇತರ ಸ್ವೀಕಾರ ೩.೪೯%ರಲ್ಲಿ ಬೆಳೆಯುತ್ತಿದೆ. ಒಟ್ಟು ಆದಾಯ ಸ್ವೀಕಾರ ೫.೭೪%ರಂತೆ ಏರುತ್ತಿದೆ ಹಾಗೂ ಬಂಡವಾಳ ಸ್ವೀಕಾರ ೫.೦೩%ರಂತೆ ಏರುತ್ತಿದೆ. ರಾಜ್ಯ ಸರ್ಕಾರದ ಒಟ್ಟು ಕೂಡಿದ ಸ್ವೀಕಾರವು ೫.೩೫%ರಲ್ಲಿ ಏರುತ್ತಿದೆ. ಆದರೂ  ಒಟ್ಟು ಕೂಡಿದ ವೆಚ್ಚಗಳು ೫.೩೨%ರ‍ಲ್ಲಿ ಏರುತ್ತಿವೆ. ಅಭಿವೃದ್ಧಿಯ ಹಾಗೂ ಅಭಿವೃದ್ಧಿಯೇತರ ವೆಚ್ಚಗಳು ಅನುಕ್ರಮವಾಗಿ ೫.೬೩% ಮತ್ತು ೪.೬೩%ರಲ್ಲಿ ಏರುತ್ತಿದೆ.

ರಾಜ್ಯ ಸ್ವಂತ ತೆರಿಗೆಯ ಆದಾಯವು ಕೇಂದ್ರ ತೆರಿಗೆಯ ಪಾಲಿಗಿಂತ ಹೆಚ್ಚಿನ ದರದಲ್ಲಿ ಏರುತ್ತಿದೆ ಎಂಬುದನ್ನು ಗಮನಿಸಬಹುದು. ಹಾಗೂ ಬಂಡವಾಳ ರಸೀದಿಗಳು ಆದಾಯ ರಸೀದಿಗಳಿಗಿಂತ ಕಡಿಮೆ ದರದಲ್ಲಿ ಏರುತ್ತಿವೆ. ತೆರಿಗೆಯೇತರ ರಸೀದಿಗಳು ನಿಧಾನ ದರದಲ್ಲಿ ಏರುತ್ತಿವೆ. ರಾಜ್ಯದ ಒಟ್ಟು ರಸೀದಿಗಳು ರಾಜ್ಯದ ನಿವ್ವಳ ಆಂತರಿಕ ಉತ್ಪಾದನೆಗಿಂತ ಸ್ವಲ್ಪ ಹೆಚ್ಚಿನ ದರದಲ್ಲಿ ಏರುತ್ತಿವೆ. ಆದರೆ ತೆರಿಗೆಯೇತರ ರಸೀದಿಗಳು ಮೇಲಿನದಕ್ಕಿಂತ ಕಡಿಮೆ ದರದಲ್ಲಿ ಏರುತ್ತಿವೆ.

ಅಭಿವೃದ್ಧಿಯ ವೆಚ್ಚಗಳು

ಅಭಿವೃದ್ಧಿಯ ವೆಚ್ಚಗಳು ನಿವ್ವಳ ರಾಜ್ಯ ಆಂತರಿಕ ಉತ್ಪಾದನೆಯ ದರಕ್ಕಿಂತ ಸ್ವಲ್ಪ ಮಟ್ಟಿನ ಹೆಚ್ಚಿನ ದರದಲ್ಲಿ ಏರುತ್ತಿದೆ. ತೆರಿಗೇತರ ಪಾವತಿಗೆ ಸಂಬಂಧಿಸಿದ ರಾಜ್ಯದ ನಿರ್ಬಲತೆಯು ಗಮನ ಸೆಳೆಯುವಂತಹುದು. ವಿದ್ಯುತ್, ನೀರು ಮತ್ತು ಸಾರಿಗೆ ಸೇವೆಗಳ ಮಾರಾಟದ ಮೇಲೆ ರಾಜ್ಯ ಸರ್ಕಾರವು ಸರಿಯಾದ ಹಾಗೂ ಪ್ರತಿಫಲ ಬರಬಹುದಾದ ಸುಂಕವನ್ನು ವಿಧಿಸಲಾಗಿಲ್ಲ. ರಾಜ್ಯವು ಕೈಗೊಂಡ ಹಲವಾರು ಉದ್ದಿಮೆಗಳು ನಷ್ಟದಲ್ಲಿ ನಡೆಯುತ್ತಿವೆ. ಉದ್ದಿಮೆಗಳ ಒಡೆತನ ಮತ್ತು ನಿರ್ವಹಣೆಯನ್ನು ಗಮನಾರ್ಹವಾಗಿ ಖಾಸಗಿಗೊಳಿಸಲು ಸಾಧ್ಯವಾಗಿಲ್ಲ.

ರಾಜ್ಯ ಮುಂಗಡ ಪತ್ರದ ಆರ್ಥಿಕ ವಿಂಗಡನೆಯಲ್ಲಿನ ರೀತಿಯ ಬಗ್ಗೆ ಕೈಗೊಂಡ ಅಧ್ಯಯನವು ಕೆಲವು ತೊಂದರೆ ಕೊಡುವ ಸ್ವಭಾವಗಳನ್ನು ತೋರಿಸಿದೆ. ವಾಸ್ತವವಾಗಿ ಬಳಕೆಯ ವೆಚ್ಚವು ೧.೩೩%ರಲ್ಲಿ ಏರುತ್ತಿದ್ದರೆ, ಒಟ್ಟಾಗಿ ಬಂಡವಾಳ ಸಂಚಯವು – ೦.೪೪%ರಲ್ಲಿ ಕುಸಿಯುತ್ತಿದೆ. ರಾಜ್ಯದ ಸ್ವತ್ತುಗಳ ಒಟ್ಟುಗೂಡಿಸುವಿಕೆಯು ಸಹಾ -೬.೧೪%ರಲ್ಲಿ ಕುಸಿಯುತ್ತಿದೆ. ಸರ್ಕಾರದ ಪರವಾಗಿ ಬಂಡವಾಳದ ಒಟ್ಟು ಸಂಚಯವು ೦.೭೦%ಕ್ಕಿಂತ ಕಡಿಮೆ ದರದಲ್ಲಿ ಏರುತ್ತಿದೆ. ಚಾಲ್ತಿ ವರ್ಗಾವಣೆಗಳು ಹೆದರಿಕೆ ಹುಟ್ಟಿಸುವ ೧೭.೩೭%ರ ಏರಿದ ದರದಲ್ಲಿ ಬೆಳೆಯುತ್ತಿದೆಯಾದರೆ ಬಂಡವಾಳ ವರ್ಗಾವಣೆಯು -೫.೦೩%ರಲ್ಲಿ ಕುಸಿಯುತ್ತಿದೆ. ಉಳಿದ ಆರ್ಥಿಕತೆಗೆ ಹಣಕಾಸಿನ ಸಹಾಯವು ೨.೯%ರಲ್ಲಿ ಏರುತ್ತಿದೆ. ಒಟ್ಟು ಬಂಡವಾಳ ಸಂಚಯವು -೦.೪೧%ರಲ್ಲಿ ಕುಸಿಯುತ್ತಿದೆ.

ಫಲಿತಾಂಶ

ಮುಂಗಡ ಪತ್ರದ ಗತಿಯ ಬಗ್ಗೆ ಕೆಲವೊಂದು ವಿಸ್ತಾರವಾದ ನಿರ್ಧಾರಗಳು ಸ್ಪಷ್ಟವಾಗುತ್ತವೆ.

೧. ನೈಜ ಬಂಡವಾಳ ಸಂಚಯವೂ ವಾಸ್ತವಿಕವಾಗಿ ಕುಸಿಯುತ್ತಿದೆ. ಆದರೆ ಆದಾಯ ಮತ್ತು ವರ್ಗಾವಣೆಯ ವೆಚ್ಚವು ಅಧಿಕ ದರದಲ್ಲಿ ಏರುತ್ತಿದೆ.

೨. ತೆರಿಗೆರಹಿತ ಆದಾಯದ ಬೆಳವಣಿಗೆಯ ದರವು ರಾಜ್ಯದ ಸ್ವಂತ ತೆರಿಗೆ ಆದಾಯ ಬೆಳವಣಿಗೆ ದರದ ಅರ್ಧಕ್ಕಿಂತಲೂ ಕಡಿಮೆಯಾಗಿರುತ್ತದೆ.

ಈ ಮೇಲಿನ ಅಂಶಗಳಿಂದ ತಿಳಿದುಬರುವುದೇನೆಂದರೆ ರಾಜ್ಯ ಸರ್ಕಾರದ ಮುಂಗಡ ಪತ್ರದ ಕೊಡುಗೆಯು ನಿಜವಾದ ಆಸ್ತಿಯ ಬೆಳವಣಿಗೆಗೆ ನಕಾರಾತ್ಮಕವಾಗಿರುತ್ತದೆ. ಆದರೆ ಪ್ರತ್ಯಕ್ಷ ಮತ್ತು ಪರೋಕ್ಷ ಉಪಯೋಗದ ವೆಚ್ಚವು ಕರ್ನಾಟಕ ಸರ್ಕಾರದ ವತಿಯಿಂದ ಬಡ್ತಿ ಪಡೆಯುತ್ತಿವೆ.

ಭವಿಷ್ಯದ ಬೆಳವಣಿಗೆಯಲ್ಲಿ ಅಡೆ-ತಡೆಗಳು

ಕರ್ನಾಟಕ ರಾಜ್ಯವು ತರಬೇತಿ ಹೊಂದಿದ ಮತ್ತು ಕುಶಲ ಮಾನವ ಸಂಪನ್ಮೂಲವನ್ನು ಸಾಪೇಕ್ಷವಾಗಿ ಆಗಾಧವಾಗಿ ತಯಾರು ಮಾಡುತ್ತದೆ. ಮುಖ್ಯವಾಗಿ ಇಂಜಿನಿಯರಿಂಗ್, ವೈದ್ಯಕೀಯ, ಕಲೆ ಮತ್ತು ಕಸುಬು ವೃತ್ತಿಗಳಲ್ಲಿ ರಾಜ್ಯದಲ್ಲಿ ಅಗತ್ಯವೆನಿಸುವ ಎಲ್ಲಾ ಪೂರೈಕೆಗಳ ಹರಿವಿನ ಗಮನವಹಿಸುವುದು ಅಸಾಧ್ಯ ಎಂದು ಊಹಿಸಲಾಗಿದೆ. ಸ್ವಾಭಾವಿಕವಾಗಿ ತರಬೇತಿ ಹೊಂದಿದ ಮತ್ತು ಕುಶಲ ಸಿಬ್ಬಂದಿ ರಾಜ್ಯದಿಂದ ನಿರಂತರ ಹೊರ ಹರಿಯುತ್ತಾ ಇರುವುದು. ಆದರೆ, ವಿದ್ಯಾಭ್ಯಾಸ ಮತ್ತು ತರಬೇತಿಯ ಗುಣಮಟ್ಟವು ಕೂಡ ನಿರಂತರವಾಗಿ ಕೆಳಮಟ್ಟಕ್ಕೆ ಇಳಿದುಬರುತ್ತದೆ ಎಂಬ ಭಾವನೆಯಿದೆ. ಆದರೂ ಕರ್ನಾಟಕದ ಅಭಿವೃದ್ಧಿ ಕೆಲಸಗಳಲ್ಲಿ ಅಗತ್ಯ ಬರುವ ಕುಶಲ ಮತ್ತು ತರಬೇತಿ ಹೊಂದಿರತಕ್ಕ ಮಾನವ ಸಂಪನ್ಮೂಳಗಳಿಗೆ ಕೊರತೆ ಇಲ್ಲ. ಹೀಗಿದ್ದರೂ ಬಂಡವಾಳ ಮತ್ತು ಪ್ರಾಯಶಃ ಅವಧಿ ಹಣಕಾಸಿನ ವಿಪರೀತವಾದ ಕೊರತೆ  ಇದೆ. ಈ ಹಿಂದೆ ಉಲ್ಲೇಖ ಮಾಡಿದಂತೆ ಎಲ್ಲಿಯವರೆಗೆ ಶಕ್ತಿಯ ಪೂರೈಕೆಯಲ್ಲಿ ಸುಧಾರಣೆ ಮತ್ತು ಬೇಕಾದಷ್ಟು ಹಾಗೂ ಅಗ್ಗದಲ್ಲಿ ಸಾರಿಗೆ ಸವಲತ್ತುಗಳು ದೊರಯಬಹುದೋ ಅಲ್ಲಿಯ ತನಕ ಭವಿಷ್ಯದ ಕೈಗಾರಿಕಾ ಬೆಳವಣಿಗೆಯು ಆಕಾಂಕ್ಷೆಯ ಮಟ್ಟಕ್ಕೆ ತಲುಪಬಾರದು. ಕೈಗಾರಿಕೆಯು ಉನ್ನತ ದರದಲ್ಲಿ ಬೆಳೆಯುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಆದರೆ ಇದು ಭವಿಷ್ಯದಲ್ಲಿ ಸ್ಥಿರವಾಗಿ ನಿಲ್ಲುವುದೇ ಎಂಬುದನ್ನು ನೋಡಬೇಕಾಗಿದೆ. ಕರ್ನಾಟಕವು ಹಣಕಾಸಿನ ಸೇವೆಗಳಲ್ಲಿ ಮುಖ್ಯವಾಗಿ ಬ್ಯಾಂಕಿಂಗ್ ವಿಷಯದಲ್ಲಿ ಅನ್ವೇಷಣಾಕಾರಿಯಾಗಿದೆ. ನೋಂದಾವಣಿರಹಿತ ತಯಾರಿಕೆಗಳ ಸಂಬಂಧವಾಗಿ ಹೆಚ್ಚಿನ ಬೆಳವಣಿಗೆಯ ದರವು ಸಣ್ಣ ಪ್ರಮಾಣದ ಉದ್ದಿಮೆಗಳು (ಮತ್ತು ಸೇವೆಗಳು) ಕರ್ನಾಟಕ ರಾಜ್ಯದತ್ತ ಆಕರ್ಷಿತಗೊಳ್ಳುತ್ತಿರುವ ಒಂದು ಸೂಚನೆಯಾಗಿದೆ. ಇತರ ಸೇವೆಗಳ ಅಧಿಕ ಬೆಳವಣಿಗೆಯ ದರವು ಮೃದು ಸಾಮಗ್ರಿಗಳ (Software) ಪೂರೈಕೆ ಸೇವೆಗಳ ಅಭಿವೃದ್ಧಿಯ ಸೂಚನೆಯಾಗಿದೆ. ಲಘು ಬಂಡವಾಳವುಳ್ಳ ಅಧಿಕ ಕೌಶಲ್ಯವುಳ್ಳ ಉದ್ದಿಮೆಗಳು ಹಾಗೂ ಸೇವೆಗಳು ಕರ್ನಾಟಕದತ್ತ ಬರುತ್ತಿವೆ. ಆದರೆ, ಈ ಹಿಂದಿನ ವರ್ಷಗಳಲ್ಲಿ ಕರ್ನಾಟಕವು ಅಧಿಕ ಬಂಡವಾಳದ ತಾಂತ್ರಿಕ ಮತ್ತು ಸಂಬಂಧಿತ ಸಾಲಿನಲ್ಲಿರುವ ಸಾರ್ವಜನಿಕ ಉದ್ದಿಮೆಗಳನ್ನು ಕೈಗೊಳ್ಳುವಲ್ಲಿ ಹೆಸರುವಾಸಿಯಾಗಿತ್ತು. ಲಘು ಬಂಡವಾಳದ ಹಾಗೂ ಅಧಿಕ ಕೌಶಲ್ಯಭರಿತ ಚಟುವಟಿಕೆಗಳು ವಿಶೇಷತಃ ವಿದ್ಯುತ್ ಉಪಕರಣ ಮತ್ತು ಸಂಬಂಧಿತ ಸಾಲಿನಲ್ಲಿ ಅಭಿವೃದ್ಧಿಯಾಗಲು ಇದು ಒಂದು ಚಾರಿತ್ರಿಕ ಅಡಿಪಾಯವನ್ನು ಒದಗಿಸಿತು. ಎರಡನೆಯ ಭಾಗದಲ್ಲಿ ತೋರಿಸಿರುವ ಉತ್ಪಾದನೆಗೆ ಜಾಗತಿಕ ಮಾರುಕಟ್ಟೆ ಇದೆ. ಬೆಂಗಳೂರು ಮತ್ತು ಅಲ್ಲಿನ ವಾತಾವರಣವು ಇಂತಹ ಚಟುವಟಿಕೆಗಳಿಗೆ ಆದರ್ಶ‌ಪ್ರಾಯ ಮತ್ತು ಯೋಗ್ಯವೆಂದು ಸಾದರಪಡಿಸುತ್ತಿದೆ. ಆದರೆ ಸಾರಿಗೆ ಪೂರೈಕೆಯು ಬೃಹತ್ ಆದ ರೀತಿಯಲ್ಲಿ ಸುಧಾರಣೆಗೊಳ್ಳದಿದ್ದರೆ ಮುಂದಿನ ಅಭಿವೃದ್ಧಿಯು ಕಷ್ಟವೆನಿಸುವುದು. ಈ ಕ್ಷೇತ್ರದಲ್ಲಿ ಸರ್ಕಾರಕ್ಕೆ ಸರ್ವವ್ಯಾಪ್ತಿ ಸಾರಿಗೆ ಅಭಿವೃದ್ಧಿಯ ಯೋಜನೆ ಇದೆ. ಇದು ಭವಿಷ್ಯದಲ್ಲಿ ಸಹಕಾರಿಯಾಗಬಹುದು. ಲಘು ಬಂಡವಾಳ ಉದ್ದಿಮೆಗಳು ವಿದ್ಯುಚ್ಛಕ್ತಿಯ ಬಹು ಬೇಡಿಕೆದಾರರಲ್ಲ. ಬಂಧಿತ ವಿದ್ಯುತ್ ಶಕ್ತಿ ಉತ್ಪಾದನೆಯು ಈ ಬೇಡಿಕೆಯನ್ನು ಪೂರೈಸಬಹುದು. ವಿಶೇಷತಃ ಬೆಂಗಳೂರಿನಲ್ಲಿ ಬಹಳಷ್ಟು ವಾಹನಗಳಿದ್ದು ಕಡಿಮೆ ರಸ್ತೆಗಳಿವೆ ಹಾಗೂ ಅಪಘಾತಗಳ ಸಂಖ್ಯೆ ಇಲ್ಲಿ ಅಧಿಕವಾಗಿದೆ. ಸರ್ವವ್ಯಾಪಿ ಸಾರಿಗೆ ಯೋಜನೆ ಆದಷ್ಟು ಬೇಗನೇ ಕೊನೆಗೊಳಿಸುವುದು ತುಂಬಾ ಅವಶ್ಯಕವಾಗಿದೆ. ಇದು ಅದ್ಯತೆಗಳಲ್ಲಿ ಮೊದಲ ಸ್ಥಾನವನ್ನು ಪಡೆಯತಕ್ಕದ್ದು.

ದೃಷ್ಟಿಕೋನವನ್ನು ಬದಲಾಯಿಸುವುದು

ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಲಘು ಬಂಡವಾಳ ಚಟುವಟಿಕೆಗಳು ಯಾವ ಮಟ್ಟದ ತನಕ ಕಾರ್ಮಿಕರಿಗಾಗಿ ಬೇಡಿಕೆ ತರುವುದೋ ಅಲ್ಲಿಯ ತನಕ ಸಾರಿಗೆ ಹಾಗೂ ವಸತಿಯ ಮೇಲಿನ ಒತ್ತಡ ಬೆಳೆಯುವುದು ಹಾಗೂ ನೀರಿನ ಪೂರೈಕೆ ಮತ್ತು  ಇತರ ಸಾರ್ವಜನಿಕ ಉಪಯುಕ್ತ ಸೇವೆಗಳಿಗೂ ಅಡ್ಡಿ ಉಂಟಾಗುವುದು. ಪ್ರಸಕ್ತ ಆಸ್ತಿಯ ಮೌಲ್ಯದ ದರವು ಕೂಡ ಬೊಂಬಾಯಿಗಿಂತಲೂ ಹೆಚ್ಚಿನ ದರದಲ್ಲಿ ಮೇಲೆರುತ್ತಿದೆ ಹಾಗೂ ಬೆಂಗಳೂರು ಹೆಚ್ಚುಹೆಚ್ಚು ಹೊರಕ್ಕೆ ವಿಸ್ತಾರವಾಗಲು ಒತ್ತಡವಿರುವುದು. ನೀರು ಮತ್ತು ಸಾರಿಗೆ ಅವಕಾಶಗಳನ್ನೊಳಗೊಂಡ ಸಾರ್ವಜನಿಕ ಉಪಯೋಗ ಪೂರೈಕೆಗಳ ಅಡ್ಡಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕವು ವಿಶೇಷತಃ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಬೆಂಗಳೂರಿನಂತಹ ಮಹಾನಗರಗಳನ್ನು ಅಭಿವೃದ್ಧಿಗೊಳಿಸಬೇಕು ಎಂದು ಸಲಹೆ ಮಾಡಲಾಗಿದೆ. ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕರ್ನಾಟಕ ರಾಜ್ಯದ ಪಶ್ಚಿಮ ಮತ್ತು ನೈರುತ್ಯ ಭಾಗಗಳಲ್ಲಿ ನೀರು ಪೂರೈಕೆಯಲ್ಲಿ ಅಡೆ-ತಡೆಗಳು ಇಲ್ಲ. ಈ ಭಾಗಗಳಲ್ಲಿ ಜಲ ವಿದ್ಯುತ್ ಸಹ ಅಗ್ಗದಲ್ಲಿ ದೊರೆಯುವುದು. ಎಲ್ಲಾ ರೈಲ್ವೇ ಪಟ್ಟಿಗಳನ್ನು ಬ್ರಾಡ್ ಗೇಜ್‌ಗಳಾಗಿ ಮಾರ್ಪಡಿಸುವುದರಿಂದ ಮತ್ತು ಬೊಂಬಾಯಿ ಮತ್ತು ಉತ್ತರದ ಕೇಂದ್ರಗಳಿಗೆ ರೈಲ್ವೇ ಹಾಗೂ ಇನ್ನಿತರ ಸಂಪರ್ಕ ಜೋಡಣೆಯ ಸಾಧ್ಯತೆಗಳೊಂದಿಗೆ ಪಶ್ಚಿಮ ಹಾಗೂ ನೈರುತ್ಯ ಪ್ರದೇಶಗಳ ಬೆಳವಣಿಗೆಗೆ ಅಪಾರವಾದ ಅವಕಾಶವಿದೆ. ಇಂತಹ ಅಭಿವೃದ್ಧಿಯು ನೈರುತ್ಯದ ಒಣಪ್ರದೇಶದ ಜನರಿಗೆ ಉದ್ಯೋಗ ಅವಕಾಶವನ್ನು ನೀಡಲು ಸಾಧ್ಯವಿದೆ. ಪಶ್ಚಿಮ ಕರಾವಳಿಯಲ್ಲಿ ಮಳೆಗಾಲದಿಂದ ಉಂಟಾಗುವ ಅನೇಕ ಜಲಪಾತಗಳಿಂದ ಕೆಲವು ತಿಂಗಳಿಗಾದರೂ ಶಕ್ತಿಯ ಉತ್ಪಾದನೆ ಸಾಧ್ಯವಿದೆ ಹಾಗೂ ಇತರ ಶಕ್ತಿಯ ಮೂಲಗಳಾದ ಇದ್ದಲಿನ ಮೂಲಕ ಪೂರಕ ಶಕ್ತಿಯನ್ನು ಒದಗಿಸಬಹುದು.

ಉಳಿತಾಯಗಳ ಅವಲಂಬನೆ

ಮುಂದಕ್ಕೆ, ಕರ್ನಾಟಕದಲ್ಲಿ ಉದ್ದಿಮೆ ಮತ್ತು ಅದರ ಪೂರಕ ಸೌಲಭ್ಯಗಳಿಗೆ ಬಂಡವಾಳದ ಬೃಹತ್ ಒಳ ಹರಿವಿನ ಅಗತ್ಯ ಇದೆ. ಕರ್ನಾಟಕದ ಉಳಿತಾಯ ಇದಕ್ಕೆ ಸಾಕಾಗಲಾರದು. ಮುಖ್ಯವಾಗಿ ರಾಜ್ಯ ಸರ್ಕಾರದ ಕೇಂದ್ರಗಳು ಮಿಗತೆ ಹಣ ಉತ್ಪಾದಿಸುತ್ತ ಹೊರಗಿನ ಬಂಡವಾಳ ಮೂಲಗಳು ಹಾಗೂ ಕೆಲವು ವಿಧದ ತರಬೇತಿ ಹೊಂದಿದ ಮತ್ತು ಕೌಶಲ್ಯವಿರುವ ಕಾರ್ಮಿಕರ ಅವಲಂಬನೆ ಇರುವುದು. ಅಂತಹ ಒಳ ಅರಿವುಗಳನ್ನು ತಾಳಿಕೊಳ್ಳುವ ಉದಾರ ವಾತಾವರಣದ ಅಗತ್ಯತೆಯು ಇಂತಹ ಅಭಿವೃದ್ಧಿಗೆ ಖಂಡಿತವಾಗಿಯೂ ಇದೆ.

ಕೃಷಿ ಕ್ಷೇತ್ರದಲ್ಲಿ ಅಡೆ ತಡೆಗಳು

ಮುಂದಿನ ಅಭಿವೃದ್ಧಿಗಳಿಗೆ ಕರ್ನಾಟಕವು ಪ್ರಾಥಮಿಕವಾಗಿ ಕೈಗಾರಿಕೆಗೆ ಮತ್ತು ತೃತೀಯ ವಲಯಗಳನ್ನು ಚಾಲನೆಯ ಬಂಡಿಯಾಗಿ ಅವಲಂಬಿಸುವುದು ಸರಿಯಲ್ಲ. ಕರ್ನಾಟಕದಲ್ಲಿ ತೃತೀಯ ಇಳುವರಿಯನ್ನು ಅಭಿವೃದ್ಧಿಗೊಳಿಸಲು ಹೆಚ್ಚಿನ ಗಮನವನ್ನು ನೀಡಬೇಕು. ನೀರಿನ ಪೂರೈಕೆಯಲ್ಲಿ ಅಡ್ಡಿಗಳನ್ನು ತೊಲಗಿಸುವುದು ಒಂದು ಹೆಜ್ಜೆಯಾಗಿದೆ. ಆದರೆ ಇನ್ನು ಹಲವಾರು ಮುಖ್ಯವಾದ ಪೂರಕ ಹೆಜ್ಜೆಗಳು ಅಗತ್ಯ ಇದೆ. ಮೊದಲೇ ಹೇಳಿದಂತೆ, ದೊಡ್ಡ ಪ್ರಮಾಣದ ತೋಟಗಳ ಮೇಲೆ ಅವಲಂಬಿತವಾಗಿರುವುದು ಸೂಕ್ತವಲ್ಲ. ಏಕೆಂದರೆ ಇದು ಸ್ಥಳೀಯ ಕಾರ್ಮಿಕರನ್ನು ಆಗಾಧ  ಪ್ರಮಾಣದಲ್ಲಿ ಸ್ಥಳಾಂತರಗೊಳಿಸುವುದು. ನೈಜವಾದ ಮತ್ತು ಫಲವತ್ತಾ ಕೃಷಿ ಭೂಮಿಯನ್ನು ಅತೀ ವೇಗವಾಗಿ ನಗರ  ನಿವೇಶನಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಪರಿವರ್ತನೆಗೊಳ್ಳುತ್ತಿರುವ ಕೃಷಿ ಯೋಗ್ಯ ಭೂಮಿಗಳು, ಈ ಸೌಲಭ್ಯ ಸ್ಥಳಾವಕಾಶವು ಒಂದು ಆರೋಗ್ಯಕರ ಪರಿಪಾಠವಲ್ಲ. ಮುಂದಕ್ಕೆ ಇದು ಸಣ್ಣ ರೈತರಲ್ಲಿ ಕೃಷಿ ಕೂಲಿ ಕಾರ್ಮಿಕರ ತತ್ಸಂಬಧಿ ಸ್ಥಾನವನ್ನು ಕುಗ್ಗಿಸುವುದು. ಒಂದು ಭಾವನೆಯೇನೆಂದರೆ ಕರ್ನಾಟಕವು ಕೃಷಿಯ ತೀವ್ರವಾದ ಅಭಿವೃದ್ಧಿಗೆ ತಾಂತ್ರಿಕ ಹಾಗೂ ಸಾಂಸ್ಥಿಕ ಅಡಿಪಾಯವನ್ನು ಗಂಭೀರವಾಗಿ ಇಲ್ಲಿಯತನಕ ಹಾಕಿಲ್ಲ. ಇದೊಂದು ಮಾರ್ಗದಿಂದ ಕೃಷಿ ಕ್ಷೇತ್ರದಲ್ಲಿ ಆದಾಯವನ್ನು ಹೆಚ್ಚಿಸಬಹುದು ಮತ್ತು ಮೂರು ಮೂಲಗಳಿಂದ ಉದ್ಯೋಗವನ್ನು ಒದಗಿಸಬಹುದು. ಕೈಗಾರಿಕೆ ಮತ್ತು ಇತರ ಸೇವೆಯನ್ನು ಕಡೆಗಾಣಿಸದೆ ನಿರ್ದಿಷ್ಟವಾದ ಆದ್ಯತೆಯ ಉದ್ದೇಶವನ್ನು ಇಟ್ಟುಕೊಂಡು ಕೃಷಿ ಅಭಿವೃದ್ಧಿಗೆ ಪೂರಕವಾಗಿ ದೀರ್ಘಾವಧಿ ಯೋಜನೆಯನ್ನು ನಿರೂಪಿಸುವ ಅವಶ್ಯಕತೆ ಇದೆ. ನನ್ನ ದೃಷ್ಟಿಯಲ್ಲಿ ಕೈಗಾರಿಕೆ ಮತ್ತು ಸೇವೆಗಳ ಅಭಿವೃದ್ಧಿಯು ಕೃಷಿಯ ಮೇಲೆ ಹಿಂದಕ್ಕೆ ಸೂಚಿಸುವ ಪ್ರಭಾವಗಳು ಹೆಚ್ಚೇನೂ ಇರಲಾರದು, ಬಹುಶಃ ಏನು ಇರಲಾರದು. ಇದರ ಅರ್ಥ ಕರ್ನಾಟಕವು ಸುಧಾರಣೆಯ ಕೃಷಿ, ವಾಣಿಜ್ಯ ಮತ್ತು  ಉದ್ದಿಮೆಗಳ ಅಭಿವೃದ್ಧಿಗೆ ಹಾಕಿಕೊಂಡಿರುವ ಯೋಜನೆಗಳಿಗೆ ಸಮಾನಾಂತರವಾಗಿ ಶೀಘ್ರ ಹಾಗೂ ಸ್ಥಿರ ಸುಧಾರಣೆಯ ಕೃಷಿ ಉತ್ಪಾದನೆ ಹಾಗೂ ಉತ್ಪಾದಕತೆಯ ಯೋಜನೆಯನ್ನು ಮಾಡಬೇಕು. ಇಲ್ಲಿ ಸರ್ಕಾರದ ಮುಖ್ಯವಾದ ಪಾತ್ರ ಇದೆ. ಆದರೆ ಈ ಪರಿಸ್ಥಿತಿಯು ಅದರ ಸಂಪೂರ್ಣ ಹಿಡಿತದೊಳಗೆ ಇನ್ನೂ ಬಂದಿಲ್ಲ.

ತಾತ್ಕಾಲಿಕ ಅವಲೋಕನ

ಕರ್ನಾಟಕದ ಬೆಳವಣಿಗೆಯ ಬಗ್ಗೆ ಒಂದು ವಿವರವಾದ ಮತ್ತು ಉತ್ತಮವಾದ ವಿಶ್ಲೇಷಣೆಯ ಅಗತ್ಯ  ಇದೆ. ನಾನು ಕೇವಲ ಅಂತಹ ಒಂದು ಅಧ್ಯಯನದ ಮಾರ್ಗದರ್ಶನವನ್ನು ಸೂಚಿಸಿದ್ದೇನೆ. ಕರ್ನಾಟಕದ ಆರ್ಥಿಕತೆಯ ಮೇಲೆ ಆಸಕ್ತಿ ಇರುವ ಕರ್ನಾಟಕದ ಆಡಳಿತಗಾರರು ಮತ್ತು ಚಿಂತನಶೀಲರಿಗೆ ಸಂಪೂರ್ಣವಾದ ಒಟ್ಟಾರೆ ಚೌಕಟ್ಟಿನ ಒಳಗೆ ವಿವರವಾದ ವಲಯಗಳಿಗೆ, ಆರ್ಥಿಕಮಾಪನ ಹಾಗೂ ಕಾಲ್ಪನಿಕ ದೃಷ್ಟಿಕೋನದ ಸಂಶೋಧಕರಿಗೆ ಇದು ಸೂಕ್ತ ಸಮಯವಾಗಿದೆ. ಆರ್ಥಿಕ ವಿಶ್ಲೇಷಣೆಯ ರೀತಿಯು ಬದಲಾಗಿದೆ. ಇದರಿಂದ ನಾವು ಲಾಭಗಳಿಸಬೇಕು. ಈ ಹಿಂದಿನ ಸಾಧನೆಯ ರೀತಿಯನ್ನು ನಾವು ಒಪ್ಪಿಗೆ ಎಂದು ತೆಗೆದುಕೊಳ್ಳಲಾರೆವು. ರಾಜ್ಯದ ಆರ್ಥಿಕತೆಗೆ ಹೋಲಿಸಿದಾಗ ಕೈಗಾರಿಕೆ ಮತ್ತು ಹಣಕಾಸಿನ ವಿಷಯದಲ್ಲಿ ಕರ್ನಾಟಕದ ಸಾಧನೆಯು ಉತ್ತಮವಿರುವಂತೆ ಕಾಣುತ್ತದೆ. ಆದರೆ ಕೃಷಿಗೆ ಸಂಬಂಧಿಸಿದಂತೆ ಕರ್ನಾಟಕದ ಸಾಧನೆಯು ಇನ್ನು ಸಾಕಷ್ಟು ಆಶಿಸುವ ಮಟ್ಟದಲ್ಲಿದೆ. ಈ ಹಿಂದಿನ ವಿಷಯಕ್ಕೆ ಸಂಬಂಧಿಸಿದಂತೆ ಮುಂದಕ್ಕೆ ಸಾಕಷ್ಟು ಸಮಸ್ಯೆಗಳಿವೆ. ಏಕೆಂದರೆ, ಈ ಹಿಂದೆಗಿಂತಲೂ ಬಹು ಗಂಭೀರವಾದ ಸ್ಪರ್ಧೆಯನ್ನು ಕರ್ನಾಟಕವು ಇತರ ರಾಜ್ಯಗಳಿಂದ ಎದುರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಕರ್ನಾಟಕವು ಹೊರಗಿನ ದೃಷ್ಟಿಕೋನವನ್ನು ಇಡತ್ಕಕದ್ದು, ಸಂಪೂರ್ಣ ಆಂತರಿಕ ದೃಷ್ಟಿಕೋನವು ಸಹಕಾರಿಯಾಗಲಾರದು. ರಾಜ್ಯದಲ್ಲಿ ಅತೀ ತುರ್ತು ರಾಜಕೀಯ ಒಮ್ಮತದ ಅಗತ್ಯತೆ ಇದೆ. ಇದು ಇಲ್ಲದೆ ಹೋದರೆ ರಾಜ್ಯವು ಅಸಂಖ್ಯ ಸಂಘರ್ಷಗಳನ್ನು ಎದುರಿಸಬೇಕಾಗಬಹುದು. ಪಶ್ಚಿಮ ಬಂಗಾಳ, ಮಹಾರಾಷ್ಟ ಮತ್ತು ಗುಜರಾತಿನ ಅನುಭವದಿಂದ ಅವಲೋಕಿಸಿರುವಂತೆ ಸಂಘಟನೆಯ ವಿಷಯಗಳಲ್ಲಿ ಕೊಡು ಮತ್ತು ಕೊಳ್ಳುವಿಕೆಯ ಒಂದು ಸಮದರ್ಶಿತ್ವ ದೃಷ್ಟಿಕೋನವು ಬಹಳ ಅಗತ್ಯ ಇದೆ. ಆದರೆ ಇದು ರಾಜಕೀಯವಾಗಿ ಪ್ರಸ್ತುತ ಕರ್ನಾಟಕದಲ್ಲಿ ಕಷ್ಟಕರವಾಗಿದೆ.

ಅನು: ಬಿ.ವಿಜಯಕುಮಾರ್
ಸಿ.ಕೆ.ಶ್ಯಾಮಲ