೧. ಪರಿಚಯ

ನಾಲ್ಕು ದಶಕಗಳ ಆರ್ಥಿಕ ಯೋಜನೆಗಳ ಹೊರತಾಗಿಯೂ, ಬಡವರ ಬವಣೆಗಳಲ್ಲಿ ಹೆಚ್ಚೇನು ಸುಧಾರಣೆಯಾಗಿಲ್ಲ ಹಾಗೂ ರಾಜ್ಯಗಳ ಒಳಗೆ ಹಾಗೂ ಅಂತರ ರಾಜ್ಯಗಳ ತಾರತಮ್ಯಗಳು ಆಶಿಸಿದ ಮಟ್ಟದಲ್ಲಿ ಕಿರಿದಾಗಿಲ್ಲ ಎಂಬುದು ವಿಶಾಲವಾಗಿ ಸ್ವೀಕರಿಸಲ್ಪಡುವ ಅಂಶವಾಗಿರುತ್ತದೆ. ಯೋಜನಾಕಾರರಿಗಾದ ಈ ಸತ್ಯಾಂಶದ ಅರಿವಿನಿಂದ, ಹೆಚ್ಚು ವ್ಯಾಪ್ತಿ ಹಾಗೂ ಅಗಲ ಬುನಾದಿಯ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯ ಬದಲಿ ತಂತ್ರಗಳ ಹಾಗೂ ನೀತಿಗಳ ಹುಡುಕುವಿಕೆಯ ಉಗಮವಾಯಿತು. ಉತ್ತಮ ಸಮಾನತೆಯ ಗುರಿಯಿರುವ ಅಂತಹ ಹೊಸ ಯೋಜನೆಗಳ ಅವಶ್ಯಕವಾಗಿ ಆರ್ಥಿಕ ಅಭಿವೃದ್ಧಿಯ ಲಾಭಗಳನ್ನು ವಿತರಿಸುವ ನಿಖರ ಮಾಪನಗಳ ಮೇಲೆ ಕಟ್ಟಬೇಕಾಗುತ್ತದೆ. ದೇಶಗಳ ನಡುವಿನ ಹೋಲಿಕೆಗಾಗಿ, ತಲಾ ಆದಾಯವು ವಿಶೇಷತಃ ಅಂತಹ ಒಂದು ಮಾಪನವಾಗಿರುತ್ತದೆ. ಆದರೆ ಒಂದು ದೇಶದ ಒಳಗಿನ ವಿಭಿನ್ನ ಗುಂಪು/ರಾಜ್ಯದ ಜೀವನ ಗುಣಮಟ್ಟದ ಸುಧಾರಣೆಯ ಪ್ರಶ್ನೆ ಬಂದಾಗ, ಒಂದು ವೇಳೆ ತಲಾ ಆದಾಯ ದೊರೆತರೂ, ಅದು ಸರಿಯಾದ ಮಾಪನವಾಗಲಾರದು. ತಲಾ ಆದಾಯ ಮಟ್ಟ ಹಾಗೂ ಕಲ್ಯಾಣ ಸೂಚಿಗಳಾದ ಶಿಶುಮರಣ ಸಂಖ್ಯೆ, ಸಾಕ್ಷರತೆ ಪ್ರಮಾಣ ಮತ್ತು ಜೀವನ ಸುದೀರ್ಘತೆ (ದೀರ್ಘಾಯುಷ್ಯ) ಇವುಗಳೊಳಗೆ ಒಂದು ಸಾಮಾನ್ಯ ಸಹ ಸಂಬಂಧವಿದೆ ಎಂಬುದು ಸತ್ಯ. ಆದರೆ, ವಿಭಿನ್ನ ದೇಶಗಳಿಗೆ ಹೋಲಿಸಿದಾಗ ಇದು ಯಾವಾಗಲೂ ಅದೇ ರೀತಿ ಅಲ್ಲ ಎಂಬುದಕ್ಕೆ ಸಾಕಷ್ಟು ರುಜುವಾತುಗಳಿವೆ, ಅಂದರೆ ಹೆಚ್ಚಿನ ತಲಾ ಆದಾಯವು ಎಂದೂ ಹೆಚ್ಚಿನ ಪ್ರಮಾಣದ ಸಾಕ್ಷರತೆ, ಸುದೀರ್ಘಜೀವನಾಯುಷ್ಯ ಹಾಗೂ ಕಡಿಮೆ ಶಿಶುಮರಣ ಸಂಖ್ಯೆಯೊಂದಿಗೆ ಸಾಗುತ್ತದೆ ಎಂದರೆ ಸರಿಯಲ್ಲ.

ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯ ಸೂಕ್ತವಾದ ಮಾಪನ ಕಂಡುಕೊಳ್ಳಲು ನಡೆಸುವ ಹುಡುಕಾಡುವಿಕೆಯಲ್ಲಿ ಭೌತಿಕ ಜೀವನ ಗುಣಮಟ್ಟ ಸೂಚಿಯನ್ನು ಪರೀಕ್ಷಿಸಲಾಗಿದೆ. ರಾಷ್ಟ್ರೀಯ ಒಟ್ಟು ಆದಾಯ ಸೂಚಿಯಂತಹ ಇತರ ಸಾಮಾನ್ಯ ಅಭಿವೃದ್ಧಿ ಸೂಚಿಗಿಂತ ಭೌತಿಕ ಜೀವನ ಗುಣಮಟ್ಟ ಸೂಚಿಗೆ ಕೆಲವು ಲಾಭಗಳಿವೆ. ಭೌತಿಕ ಜೀವನ ಗುಣಮಟ್ಟ ಸೂಚಿಯನ್ನು ಕಟ್ಟುವುದು ಬಹಳ ಸರಳವಾಗಿದ್ದು ಇದು ಸಮಾಜ ಕಲ್ಯಾಣಕ್ಕಿರುವ ಅಭಿವೃದ್ಧಿ ಕಾರ್ಯಕ್ರಮಗಳು ನಿರ್ದಿಷ್ಟವಾಗಿ ಶಿಶುಮರಣ ಸಂಖ್ಯೆ, ಸಾಕ್ಷರತೆ, ಜೀವನ ಸುದೀರ್ಘತೆಗಳ ನಿಖರವಾದ ಪ್ರಭಾವವನ್ನು ಮಾಪನ ಮಾಡುವುದು. ಹೀಗೆ, ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯು ಹೇಗೆ ಮತ್ತು ಯಾವ ಪ್ರಮಾಣದಲ್ಲಿ ಸಾಮಾನ್ಯ ಜನಜೀವನವನ್ನು ನಾಟುವುದು ಎಂದು ‘ರಾಷ್ಟ್ರೀಯ ಒಟ್ಟು ಆದಾಯ’ದಲ್ಲಿ ಪ್ರತಿಬಿಂಬಿಸಲಾಗದ ದೊಡ್ಡ ವೈಫಲ್ಯವನ್ನು ಇದು ಜಯಿಸುವುದು. ಅಂತಹ ಒಂದು ನಾಟುವಿಕೆಯ ವಿಶ್ಲೇಷಣೆಗೆ ರಾಷ್ಟ್ರೀಯ ಒಟ್ಟು ಆದಾಯದೊಂದಿಗೆ ಭೌತಿಕ ಜೀವನ ಗುಣಮಟ್ಟ ಸೂಚಿಯು ಪೂರಕವಾಗಿ ಕೆಲಸವೆಸಗಬಹುದು.

೨. ಭೌತಿಕ ಜೀವನ ಗುಣಮಟ್ಟ ಸೂಚಿ ಏನನ್ನು ಮಾಪನ ಮಾಡುವುದು?

ಜನರ ಮೂಲ ಅವಶ್ಯಕತೆಗಳನ್ನು ಅಭಿವೃದ್ಧಿ ಹೊಂದುವ ಆರ್ಥಿಕ ವ್ಯವಸ್ಥೆಯು ಎದುರಿಸುವ ಕಾರ್ಯರೀತಿಯನ್ನು ಮಾಪನ ಮಾಡಲು ಭೌತಿಕ ಜೀವನ ಗುಣಮಟ್ಟ ಸೂಚಿಯನ್ನು ಮೂಲತಃ ವಿನ್ಯಾಸಗೊಳಿಸಲಾಗಿದೆ. ಒಂದು ವರ್ಷಪ್ರಾಯದಲ್ಲಿನ ಜೀವನಾಯುಷ್ಯ ಮತ್ತು ಶಿಶುಮರಣ ಸಂಖ್ಯೆಯು ಒಟ್ಟಾರೆ ಸಾಮಾಜಿಕ ಗತಿಯ ಸೂಚಿಯಂತೆ ತೋರುವುದು, ಹಾಗೂ ಇದು ಪೌಷ್ಠಿಕತೆಯ ಮಟ್ಟ, ಸಾರ್ವಜನಿಕ ಆರೋಗ್ಯ ಮತ್ತು ಕೌಟುಂಬಿಕ ವಾತಾವರಣದ ಒಗ್ಗೂಡಿದ ಪ್ರತಿಬಿಂಬವಾಗಿರುತ್ತದೆ. ಸಾಕ್ಷರತೆಗೆ, ಸೂಚಿಯು ಅಭಿವೃದ್ಧಿಯ ರಕ್ಷಣೆ ಹಾಗೂ ಬಡ ಗುಂಪುಗಳು ಅಭಿವೃದ್ಧಿ ಕಾರ್ಯವನ್ನು ಹಂಚಿಕೊಳ್ಳುವ ಸಾಧ್ಯತೆಯ ಪರಿಮಾಣವನ್ನು ಮತ್ತು ಲಾಭಕ್ಷಮತೆಯ ಮಾಹಿತಿಯನ್ನು ನೀಡುವುದು.

ಭೌತಿಕ ಜೀವನ ಗುಣಮಟ್ಟ ಸೂಚಿಯು ಸಾಮಾಜಿಕ ಅಭಿವೃದ್ಧಿಯ ಈ ಕೆಳಗಿನ ಮೂರು ಸೂಚಿಕೆಗಳ ಒಂದು ಸರಳ ಸರಾಸರಿಯಾಗಿರುವುದು.

ಅ. ಒಂದು ವರ್ಷ ಪ್ರಾಯದಲ್ಲಿನ ಜೀವನಾಯುಷ್ಯ

ಆ. ಶಿಶುಮರಣ ಸಂಖ್ಯೆ

ಇ. ಸಾಕ್ಷರತೆಯ ದರ

ಈ. ಸೂಚಿಗಳು ಆಯ್ಕೆಯು ಕೆಳಗಿನ ವಿಚಾರಗಳಿಂದ ಪ್ರಭಾವಿತಗೊಂಡಿರುತ್ತದೆ.

ಅ. ಈ ಮೂರು ಮಾಪನಗಳು ದೇಶದಲ್ಲಿನ ಪ್ರಚಲಿತ ಆರ್ಥಿಕ ವ್ಯವಸ್ಥೆ ಹಾಗೂ ಸಂಸ್ಥೆಗಳಿಂದ ಸ್ವತಂತ್ರವಾಗಿದೆ.

ಆ. ಸುದೀರ್ಘ ಜೀವನಪಡೆಯುವ ಇಚ್ಛೆ, ಕಡಿಮೆ ಶಿಶುಮರಣ ಸಂಖ್ಯೆ ಹಾಗೂ ಹೆಚ್ಚಿನ ಸಾಕ್ಷರತೆಯನ್ನು ಪಡೆಯುವ ಆಶಯ ನಿರ್ವಿವಾದ.

ಇ. ಇವುಗಳೆಲ್ಲವು ಅಭಿವೃದ್ಧಿ ಯತ್ನಗಳ ಫಲಿತಾಂಶಗಳನ್ನು ಅಳತೆ ಮಾಡುವುದು.

ಈ. ಈ ಮೂರು ಸೂಚಿಗಳು ಬೆಳವಣಿಗೆಯ ವಿತರಣಾ ಸ್ವರೂಪಕ್ಕಾಗಿ ನಿಂತಿರುತ್ತದೆ. ಅಂದರೆ, ವಿಶೇಷವಾಗಿ ಶಿಶುಮರಣ ಸಂಖ್ಯಾದರ ಮತ್ತು ಸಾಕ್ಷರತಾ ದರ, ಇವುಗಳಲ್ಲಿ ಯಾವುದಾದರೊಂದರಲ್ಲಿ ಸುಧಾರಣೆ ಕಂಡರೂ ಅವುಗಳಿಂದ ಮಾಪನಗೊಂಡ ಪ್ರಯೋಜನ ಲಾಭವು ಹೆಚ್ಚು ಅಗಲವಾಗಿ ಹರಡಿದೆ ಮತ್ತು ಹೆಚ್ಚಿನ ಸಮಾಜ ಕಲ್ಯಾಣದ ಸಮಾನವಾದ ವಿತರಣೆ ಎಂದು ಅರ್ಥವಾಗುತ್ತದೆ.

೩. ರಚನೆಯ ವಿಧಾನ

ಭೌತಿಕ ಜೀವನ ಗುಣಮಟ್ಟ ಸೂಚಿಯಲ್ಲಿ ಬಳಸಿದ ಮೂರು ಸೂಚಿಗಳಿಗೆ ಯಾವುದೇ ಸಾಮಾನ್ಯ ಸಂಖ್ಯಾ ಸೂಚಕವಿಲ್ಲದಿರುವ ಕಾರಣ, ಒಂದು ಸರಳ ಸೂಚಿ ವ್ಯವಸ್ಥೆಯನ್ನು ಬಳಸಲಾಗಿದೆ. ಪ್ರತಿ ಸೂಚಿಗಳಿಗೆ ಸಂಬಂಧಿಸಿ ರಾಜ್ಯಗಳ ವೈಯಕ್ತಿಕ ಸಾಧನೆಗಳನ್ನು ೦ ಯಿಂದ ೧೦೦ ರ ತನಕ ಮಾಪನವುಳ್ಳ ಅಳತೆಗೋಲಿನಲ್ಲಿ ಮಾಪನ ಮಾಡುವುದು. ಇಲ್ಲಿ ೦ ಯು ವ್ಯಾಖ್ಯಾನಿಸಿದ ಅತ್ಯಂತ ಕೆಟ್ಟ ಸಾಧನೆಯನ್ನು, ಮತ್ತು ೧೦೦ ವ್ಯಾಖ್ಯಾನಿಸಿದ ಅತ್ಯುತ್ತಮ ಸಾಧನೆಯನ್ನು ಪ್ರತಿನಿಧಿಸುವುದು. ಪ್ರತೀ ಮೂರು ಸೂಚಿಗಳನ್ನು ಒಂದು ಸಾಮಾನ್ಯ ಮಾಪನಕ್ಕೆ ಅಳತೆ ಮಾಡಿದ ಬಳಿಕ ಮೂರು ಸೂಚಿಗಳಿಗೂ ಸಮಾನ ತೂಕ ನೀಡಿ ತೆಗೆದ ಸರಾಸರಿಯಿಂದ ಭೌತಿಕ ಜೀವನ ಗುಣಮಟ್ಟ ಸೂಚಿಯು ಬರುವುದು.

ಸಾಕ್ಷರತಾ ದರದ ಬಗೆಗಿನ ಸೂಚಿಯು ದರದ ತದ್ರೂಪವಾಗಿದ್ದು, ಅದು ಈಗಾಗಲೇ ೦ ಯಿಂದ ೧೦೦ ರ ಅಳತೆಯಲ್ಲಿದೆ (ಕೋಷ್ಟಕ-೧). ಪ್ರತಿ ರಾಜ್ಯದ ಶಿಶುಮರಣ ಸಂಖ್ಯಾ ದೂರದ ಸೂಚಿಯನ್ನು ಕೆಳಗಿನ ಸೂತ್ರ ಉಪಯೋಗಿಸಿ ಲೆಕ್ಕ ಹಾಕಲಾಗುವುದು:

ಅತೀ ಹೆಚ್ಚು ಶಿಶುಮರಣ ದರ – ನಿಜವಾದ ಶಿಶುಮರಣ ದರ x ೧೦೦
ಅತೀ ಹೆಚ್ಚು ಶಿಶುಮರಣ ದರ – ಅತೀ ಕಡಿಮೆ ಶಿಶುಮರಣ ದರ

ಇಲ್ಲಿ ‘ಅತೀ ಹೆಚ್ಚು’ ಎಂಬುದು, ರಾಜ್ಯಗಳಲ್ಲಿನ ಪ್ರತಿ ೧೦೦೦ ಜೀವಂತ ಜನನಕ್ಕೆ ಗರಿಷ್ಠ ಮರಣ ಸಂಖ್ಯೆಯನ್ನು ಪ್ರತಿನಿಧಿಕರಿಸುವುದು, ಇದು ೧೯೭೧ರಲ್ಲಿ ೧೬೭, ೧೯೮೧ರಲ್ಲಿ ೧೫೦ ಮತ್ತು ೧೯೯೧ರಲ್ಲಿ ೧೨೬ (ಉತ್ತರ ಪ್ರದೇಶ); ‘ಅತೀ ಕಡಿಮೆ’ ಎಂಬುದು ಪ್ರತೀ ೧೦೦೦ ಜೀವಂತ ಜನನಕ್ಕೆ ಕನಿಷ್ಟ ಸಂಖ್ಯೆಯ ಮರಣವನ್ನು ಪ್ರತಿನಿಧೀಕರಿಸುವುದು, ಅದು ೧೯೭೧ರಲ್ಲಿ ೫೮, ೧೯೮೧ರಲ್ಲಿ ೩೭ ಮತ್ತು ೧೯೯೧ರಲ್ಲಿ ೨೬ (ಎಲ್ಲವೂ ಕೇರಳಕ್ಕೆ ಸಂಬಂಧಸಿದೆ) ಸೂಚಿಯು ೦ ಯಿಂದ ೧೦೦ ವರೆಗಿನ ವ್ಯಾಪ್ತಿಯಲ್ಲಿದೆ (ಕೋಷ್ಟಕ ೧). ನಿರೀಕ್ಷಿತ ಜೀವನಾವಧಿಗೆ ಸಂಬಂಧಿಸಿದಂತೆ, ಮೊದಲಿಗೆ ಜನನ ಸಮಯದ ನಿರೀಕ್ಷಿತ ಜೀವನಾವಧಿಯ ನಿರೀಕ್ಷಿತ ಜೀವನಾವಧಿಯನ್ನಾಗಿ ಈ ಕೆಳಗಿನ ಸೂತ್ರವನ್ನು ಬಳಸಿ ಪರಿವರ್ತಿಸಬೇಕು.

L1= L0 – 1 + q * (1–K*)
1–q*

L1 =  ಒಂದು ವರ್ಷ ಪ್ರಾಯದಲ್ಲಿನ ನಿರೀಕ್ಷಿತ ಜೀವನಾವಧಿ

L0= ಜನನ ಸಮಯದ ಜೀವನಾವಧಿ

q* = ೧೦೦೦ ಜೀವಂತ ಜನನಕ್ಕೆ ಶಿಶುಮರಣ ಸಂಖ್ಯೆ (ಅಪೂರ್ಣಾಂಕ: ಬಿಂದುಗಳಲ್ಲಿ ಸೂಚಿಸುವುದು)

k* = ಮೊದಲ ವರ್ಷದಲ್ಲಿ ಬದುಕುಳಿದ ಸರಾಸರಿ (೦.೨ ವರ್ಷಗಳು ಎಂದು ರೂಪಿಸಲಾಗಿದೆ).

ಸೂಚಿಯನ್ನು ಲೆಕ್ಕಹಾಕಲು ಒಂದು ವರ್ಷದ ಜೀವನಾವಧಿಯು ದೊರಕಿದ ಬಳಿಕ, ಅತೀ ಕಡಿಮೆ ಜೀವನಾವಧಿ ಎಂದರೆ ೩೮ ವರ್ಷ (ವಿಯಟ್ನಾಮ್, ೧೯೫೦), ಇದನ್ನು ೦ ಎಂದು ತೆಗೆದುಕೊಳ್ಳಲಾಗುವುದು. ಗಂಡಸರು ಮತ್ತು ಹೆಂಗಸರಿಗೆ ಜಂಟಿಯಾಗಿ (೧೦೦) ಮೇಲ್ಮಿತಿಯಾಗಿ ೭೭ ವರ್ಷಗಳೆಂದು ಇಡಲಾಗಿದ್ದು, ಇದನ್ನು ವಿವಿಧ ವಿಶೇಷಜ್ಞರುಗಳು ೨೦೦೦ನೇ ವರ್ಷಕ್ಕೆ ಸಮ್ಮತವೆಂದು ತೀರ್ಮಾನಿಸಿದ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ಮುಂದೆ ತಿಳಿಸಿರುವ ಸೂತ್ರದೊಂದಿಗೆ ಈ ಸೂಚಿಯನ್ನು ರಚಿಸಿದೆ (ಕೋಷ್ಟಕ ೧).

ನಿಜವಾದ ಜೀವನಾವಧಿ ಒಂದು ವರ್ಷ ಪ್ರಾಯದ ಅವಧಿಯಲ್ಲಿ – ೩೮
೦.೩೯

ಸಾರಾಂಶದಲ್ಲಿ, ಸಾಕ್ಷರತೆ ಸೂಚಿಯು ೦ ಯಿಂದ ೧೦೦ರವರೆಗೆ, ಶಿಶುಮರಣ ಸಂಖ್ಯೆ ೦ ಯಿಂದ ೧೦೦ವರೆಗೆ ಹಾಗೂ ಒಂದು ವರ್ಷ ಪ್ರಾಯದ ನಿರೀಕ್ಷಿತ ಜೀವನಾವಧಿಯು ೩೮ ವರ್ಷಗಳಿಂದ ೭೭ರವರೆಗೆ ವ್ಯಾಪಿಸಿರುವುದು (ಸೂಕ್ತ ಮಟ್ಟಗಳಲ್ಲಿ ಅಂತಿಮ ಮೌಲ್ಯಗಳನ್ನು ಪುನರ್ ವ್ಯಾಖ್ಯಾನಿಸಿದ ಬಳಿಕ ಈ ಸೂಚಿ ಚಿಹ್ನೆಗಳ ಪುನರ್ ಲೆಕ್ಕಾಚಾರ ಮಾಡಬಹುದು).

೪. ಮಿತಿಗಳು

ಭೌತಿಕ ಜೀವನ ಗುಣಮಟ್ಟ ಸೂಚಿಯು ಅಭಿವೃದ್ಧಿಯನ್ನು ಅಳೆಯುವ ಪರಿಮಿತಿಯ ಮಾಪನವಾಗುತ್ತದೆ. ಅರ್ಥಾತ್ ರಕ್ಷಣೆ, ನ್ಯಾಯ, ಮಾನವೀಯ ಹಕ್ಕುಗಳಂತ ಭೌತಿಕ ಗುಣ ಲಕ್ಷಣಗಳಲ್ಲಿನ್ನ ಬದಲಾವಣೆಗಳನ್ನು ಇದು ಮಾಪನ ಮಾಡಲು ಯತ್ನಿಸುವುದಿಲ್ಲ. ಸಾಕ್ಷರತೆಯನ್ನು ಬಹುಶಃ ಮಾನವ ಜೀವನದ ಒಂದು ಭೌತಿಕ ಲಕ್ಷಣವೆಂದು ಹೇಳಲಾಗುವುದಿಲ್ಲ. ಒಟ್ಟಾರೆಯಾಗಿ ಭೌತಿಕ ಜೀವನ ಗುಣಮಟ್ಟ ಸೂಚಿಗೆ ಕಿರಿದಾದ ಪರಿಮಿತಿಯಿದೆಯೆನ್ನುವುದು ಸತ್ಯ.

೫. ಫಲಿತಾಂಶಗಳ ಮೇಲಿನ ಚರ್ಚೆ (ಕೋಷ್ಟಕ ೧ ಮತ್ತು ೨ನ್ನು ಉಲ್ಲೇಖಿಸಿ)

ಭಾರತದ ರಾಜ್ಯಗಳಿಗೆ ಸಂಬಂಧಿಸಿದಂತೆ ತಲಾ ಆದಾಯ ಹೆಚ್ಚಿರುವ ಪಂಜಾಬ್ ಮತ್ತು ಮಹಾರಾಷ್ಟ್ರಗಳಲ್ಲಿ ಮೇಲ್ಮಟ್ಟದ, ಅಂದರೆ ರಾಷ್ಟ್ರೀಯ ಸರಾಸರಿ ೪೯ಕ್ಕಿಂತಲೂ ಬಹು ಮೇಲ್ಮಟ್ಟದ  ಭೌತಿಕ ಜೀವನ ಗುಣಮಟ್ಟ ಸೂಚಿಗಳಿವೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳ ರಾಜ್ಯವು ಭಿನ್ನವಾದ ಬೇರೆಯೇ ಮಜಲನ್ನು ಪ್ರವೇಶಿಸಿದೆ. ಈ ರಾಜ್ಯವು ಸ್ಥಿರವಾಗಿ, ಮುಂದುವರಿದ ದೇಶಗಳಿಗೆ ಹೋಲಿಸಬಹುದಾದ ಉನ್ನತ ಭೌತಿಕ ಜೀವನ ಗುಣಮಟ್ಟ ಸೂಚಿಯನ್ನು ದಾಖಲಿಸಿದೆ (ಇದು ಇತರ ರಾಜ್ಯಗಳಿಗೆಲ್ಲ ಉನ್ನತವಾಗಿದೆ). ಇಂತಹ ಪ್ರಮುಖ ಸಾಧನೆಯ ಹಿನ್ನೆಲೆಯಲ್ಲಿನ ಅಂಶಗಳನ್ನು ಅಧ್ಯಯನ ಮಾಡುವುದು ಯೋಗ್ಯವೆನಿಸುವುದು.

ಎಲ್ಲಾ ಮೂರು ವಿಷಯ ಸೂಚಿಗಳಲ್ಲಿ ಕೇರಳದ ಸಾಧನೆಯು ಬೇರೆಲ್ಲ ರಾಜ್ಯಗಳು ಮತ್ತು ನಮ್ಮ ರಾಷ್ಟ್ರದ ಸರಾಸರಿಗಿಂತ ಮುನ್ನಡೆಯಲ್ಲಿದೆ. ಸಾಕ್ಷರತೆಗೆ ಸಂಬಂಧಿಸಿದಂತೆ ೧೯೮೯ರಲ್ಲಿ ಕೇರಳ ರಾಜ್ಯವು ೯೦.೬% (ತಾತ್ಕಾಲಿಕ) ಸಾಕ್ಷರತೆಯನ್ನು ಹೊಂದಿದ್ದು ದೇಶದ ಸಾಕ್ಷರತೆಯು ೫೨.೧% ಆಗಿದ್ದು ಬಳಿಕದ ಉನ್ನತ ದರವು ತಮಿಳುನಾಡಿನದಾಗಿದ್ದು ಇದು ಕೇವಲ ೬೩.೭% ಆಗಿತ್ತು. ೧೯೯೧ರಲ್ಲಿ ಶಿಶುಮರಣ ಸಂಖ್ಯೆ ದರ ಪ್ರತಿ ೧೦೦೦ ಜೀವಂತ ಜನನಕ್ಕೆ ಭಾರತ ದೇಶದ ೯೫ಕ್ಕೆ ಹೋಲಿಸಿದಾಗ ಕೇರಳದಲ್ಲಿ ಕೇವಲ ೨೬ ಆಗಿತ್ತು. ತದನಂತರದ ರಾಜ್ಯ ಇಳಿಕೆಯ ಕ್ರಮದಲ್ಲಿ ಪಂಜಾಬ್ ಆಗಿದ್ದು (ಇಲ್ಲಿ ಶಿಶುಮರಣ ಸಂಖ್ಯೆ ೬೨ರಷ್ಟಿದೆ) ಇದು ಕೇರಳಕ್ಕಿಂತಲೂ ಸಂಪದ್ಭರಿತ ರಾಜ್ಯವಾಗಿರುವುದು, ಒಂದು ಗಮನಿಸಬೇಕಾದ ಕುತೂಹಲಕಾರಿ ಅಂಶವಾಗಿದೆ. ನಿರೀಕ್ಷಿತ ಜೀವನಾವಧಿಯ ಬಗ್ಗೆ ಕೇರಳದ ಸಾಧನೆ ಅತ್ಯಾಕರ್ಷಕವಲ್ಲದಿದ್ದರೂ, ಅತ್ಯುತ್ತಮವಾಗಿರುವುದು. ಭಾರತದ ೫೮ ವರ್ಷಗಳಿಗೆ ಹೋಲಿಸಿದಾಗ ಕೇರಳದ ನಿರೀಕ್ಷಿತ ಜೀವನಾವಧಿ ೭೧ ವರ್ಷಗಳಾಗಿದೆ ಹಾಗೂ ನಂತರದ ಉತ್ತಮ ಸಾಧನೆ ಮತ್ತು ಪಂಜಾಬ್‌ನದಾಗಿದ್ದು ಇಲ್ಲಿ ೬೬ ವರ್ಷಗಳು. ಈ ಮೇಲಿನ ವಿಷಯಗಳಿಂದ ಸ್ಪುಟಗೊಳ್ಳುವುದೇನೆಂದರೆ, ಕೇರಳದ ಉನ್ನತ ಭೌತಿಕ ಜೀವನ ಗುಣಮಟ್ಟ ಸೂಚಿಯು ಅಲ್ಲಿನ ಹೆಚ್ಚಿನ ಸಾಕ್ಷರತೆಯ ದರ ಹಾಗೂ ಕಡಿಮೆ ಶಿಶುಮರಣ ಸಂಖ್ಯೆದರದ ಫಲಿತಾಂಶವಾಗಿರುವುದು. ಹೆಚ್ಚಿನಂಶ, ಸಾಕ್ಷರತೆಯು ಶಿಶುಮರಣ ಸಂಖ್ಯೆಯ ಮೇಲೆ ಬೀರಿರುವ ಪ್ರಭಾವವು ರಾಜ್ಯದ ಭೌತಿಕ ಜೀವನ ಗುಣಮಟ್ಟ ಸೂಚಿಯನ್ನು ಎತ್ತರಿಸಿರಬಹುದು.

ಕೇರಳ ರಾಜ್ಯದ ಇಂತಹ ಗಮನಾರ್ಹ ಸಾಧನೆಗೆ ಮೂಲ ಆ ರಾಜ್ಯದ ಅನುಪಮ ಸಾಮಾಜಿಕ ಮತ್ತು ಆರ್ಥಿಕ ಒಲವು ಹಾಗೂ ಸಾಮಾಜಿಕ ವೈಶಿಷ್ಟ್ಯತೆ. ಮೊದಲನೆಯದಾಗಿ, ಈ ರಾಜ್ಯದ ಜನರಲ್ಲಿ ವೈಯಕ್ತಿಕ ಹಾಗೂ ಪರಿಸರದ ಸ್ವಚ್ಛತೆಯ ಮೇಲಿನ ಸಾಮಾನ್ಯ ತಿಳುವಳಿಕೆಯು ಬಹಳವಾಗಿದೆ. ಲೇಖಕರ ಈ ಭಾವನೆಯನ್ನು ಕೇರಳದಲ್ಲಿ ಜೀವಿಸಿದ ಹಾಗೂ ದೇಶದ ಇತರ ಭಾಗದಲ್ಲಿ ಜೀವಿಸಿದ ಹಲವರು ಸಮರ್ಥಿಸಿಕೊಂಡಿದ್ದಾರೆ. ಎರಡನೆಯದಾಗಿ, ಕೇರಳದಲ್ಲಿ ಕಂಡು ಬರುವ ಅದ್ವಿತೀಯ ಸಾಮಾಜಿಕ ರಚನೆಯಲ್ಲಿ, ಮಾತೃಪ್ರಧಾನ ವ್ಯವಸ್ಥೆಯಿದ್ದು ಇಲ್ಲಿ, ಮಗಳು ತಾಯಿಯಿಂದ ಆಸ್ತಿಯ ಪರಭಾರೆ ಪಡೆಯುವಳು. ಪ್ರಾಯಶಃ ಇದರಿಂದಾಗಿಯೇ ಇಲ್ಲಿ ಮಹಿಳೆಯರಿಗೆ ಹೆಚ್ಚಿನ ಸಾಮಾಜಿಕ ಸ್ಥಾನಮಾನ ಹಾಗೂ ಗೌರವವಿದ್ದು ಇದುವೆ ಮಹಿಳೆಯರ ಬಹು ವ್ಯಾಪ್ತಿ ಸಾಕ್ಷರತೆಗೆ ಕಾರಣವಾಗಿರಬಹುದು (ಜನಸಂಖ್ಯೆಯಲ್ಲಿ ಹೆಣ್ಣು ಮತ್ತು ಗಂಡಿನ ಅನುಪಾತಕ್ಕೆ ಸಂಬಂಧಿಸಿ, ಇಲ್ಲಿ ಗಮನಕ್ಕೆ ತರುವುದು ಉಚಿತವಾಗುವುದು. ಏನೆಂದರೆ, ಕೇರಳ ಒಂದು ರಾಜ್ಯದಲ್ಲಿ ಮಾತ್ರ ಹೆಣ್ಣಿನ ಸಂಖ್ಯೆ ಜಾಸ್ತಿಯಿರುವುದು). ವಿದ್ಯಾವಂತ ಮಹಿಳೆಯಿದ್ದು ಅವರಿಗೆ ಆರೋಗ್ಯ ಅಭ್ಯಾಸಗಳು ಮತ್ತು ಸವಲತ್ತುಗಳ ಬಗ್ಗೆ ತಿಳುವಳಿಕೆಯಿದ್ದರೆ ಸಂಪೂರ್ಣ ಕುಟುಂಬವೇ ಬಹುವಾಗಿ ಸುಧಾರಿಸುವುದು.

ಚಿತ್ರಣದ ಇನ್ನೊಂದು ತುದಿಯಲ್ಲಿರುವ, ಉತ್ತರ ಪ್ರದೇಶಕ್ಕೆ ಸಂಬಂಧಿಸಿ ಭೌತಿಕ ಜೀವನ ಗುಣಮಟ್ಟ ಸೂಚಿಯು ಮೂರು ಜನಗಣತಿ ವರ್ಷಗಳಲ್ಲಿ ಅತೀ ಕಡಿಮೆಯಿದ್ದು ಈ ರಾಜ್ಯದಲ್ಲಿ ಶಿಶುಮರಣ ಸಂಖ್ಯೆ ಮಾತ್ರ ಹೆಚ್ಚಿರುವುದು (ಈ ನಿಟ್ಟಿನಲ್ಲಾದ ವೈಶಿಷ್ಟ್ಯವನ್ನು ಉತ್ತರಪ್ರದೇಶದೊಂದಿಗೆ ೧೯೯೧ರಲ್ಲಿ ಒರಿಸ್ಸಾನೂ ಹಂಚಿಕೊಂಡಿದೆ).

ನಿರೀಕ್ಷಿತ ಜೀವನಾವಧಿಗೆ ಸಂಬಂಧಿಸಿದಂತೆಯೂ ಕೂಡ ಉತ್ತರಪ್ರದೇಶವು ಇತರ ರಾಜ್ಯಗಳಿಗಿಂತ ಅತ್ಯಂತ ಅನಾನುಕೂಲಕರ ಸ್ಥಿತಿಯಲ್ಲಿದೆ. ಸಾಕ್ಷರತೆಗೆ ಸಂಬಂಧಿಸಿದಂತೆ ಕನಿಷ್ಠ ಸಾಕ್ಷರತೆಯ ರಾಜ್ಯ ರಾಜಸ್ಥಾನಕ್ಕೆ ಹೋಲಿಸಿದಾಗ, ಉತ್ತರಪ್ರದೇಶವು ಸ್ವಲ್ಪಮಟ್ಟಿನ ಉತ್ತಮ ಸಾಧನೆಯನ್ನು ತೋರಿಸಿದರೂ, ನಾವು ರಾಷ್ಟ್ರದ ಮತ್ತು ಉತ್ತರಪ್ರದೇಶದ ಸಾಕ್ಷರತಾ ಸಾಧನೆಯಲ್ಲಿ ಅಗಾಧಗೊಳ್ಳುತ್ತಿರುವ ವ್ಯತ್ಯಾಸವನ್ನು ತುಲನೆ ಮಾಡಿದಾಗ, ರಾಷ್ಟ್ರ ಮಟ್ಟದಲ್ಲಿ ಉತ್ತರಪ್ರದೇಶದ ಸ್ಥಾನವು ಕುಸಿಯುತ್ತದೆ.

ವ್ಯತ್ಯಾಸವು ೧೯೭೧, ೧೯೮೧ ಮತ್ತು ೧೯೮೭ರಲ್ಲಿ ಅನುಕ್ರಮವಾಗಿ ೭.೬೯, ೯.೦೭ ಮತ್ತು ೧೦.೪೦ ಆಗಿದೆ. ಇಂತಹ ಒಂದು ಸ್ಥಿತಿಯನ್ನು ಪಡೆಯಲು ದೊಡ್ಡ ಪ್ರಮಾಣದ ವಯಸ್ಕರ ಸಾಕ್ಷರತೆಯಂತಹ ಕಾರ್ಯಕ್ರಮವನ್ನು ಹಾಕಿಕೊಳ್ಳದಿದ್ದರೆ ಬಹುಶಹ ಸಾಕ್ಷರತೆಯ ದಿಸೆಯಲ್ಲಿಯೂ ಸಹ ಈ ರಾಜ್ಯವು ಕೆಳಗಿನ ಹಂತಕ್ಕೆ ಹೋಗುವುದು.

೬. ಭೌತಿಕ ಜೀವನ ಗುಣಮಟ್ಟ ಸೂಚಿ  ಮತ್ತು ಯೋಜನಾ ಯತ್ನಗಳ ನಡುವೆ ಸಂಬಂಧ

ಭೌತಿಕ ಜೀವನ ಗುಣಮಟ್ಟ ಸೂಚಿ ನಡುವಳಿಕೆಯನ್ನು ಯೋಜನಾ ವೆಚ್ಚಗಳ ಕೋನದಿಂದ ವಿವರಿಸಲು ಒಂದು ಯತ್ನ ಮಾಡಿದ್ದು, ವಿಶೇಷವಾಗಿ ಸಾಮಾಜಿಕ ಸೇವೆಗಳಾದ ಶಿಕ್ಷಣ, ಪೌಷ್ಠಿಕತೆ ಇತ್ಯಾದಿಗಳಿಗೆ ಯೋಜನಾ ಖರ್ಚಿನ ಬಗ್ಗೆ ಪರೀಕ್ಷಿಸಲಾಗಿತ್ತು ಇಂತಹ ಖರ್ಚುಗಳು ಹಾಗೂ ಸಮಾಜದ ಮೇಲಿನ ಅದರ  ಪ್ರಭಾವದ ನಡುವೆ ಸ್ವಲ್ಪ ಮಟ್ಟಿನ ಹಿನ್ನಡಿಗೆಯಿದ್ದು, ರಾಜ್ಯಗಳಿಗೆ ಸಂಬಂಧಿಸಿದ ೧೯೮೮-೮೯ರಲ್ಲಿ ಯೋಜನಾ ವೆಚ್ಚಗಳನ್ನು ಮತ್ತು ೧೯೯೧ರ ಭೌತಿಕ ಜೀವನ ಗುಣಮಟ್ಟ ಸೂಚಿಯನ್ನು ನಾವು ತುಲನೆ ಮಾಡದ್ದೆವು. ಶಿಕ್ಷಣ, ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಹಾಗೂ ಪೌಷ್ಠಿಕತೆ ಮತ್ತು ಸಮಾಜ ಕಲ್ಯಾಣದ ವಲಯ ಸಂಬಂಧಿತ ಯೋಜನಾ ಖರ್ಚುಗಳನ್ನು ತುಲನೆ ಮಾಡಲಾಯಿತು. (ಕೋಷ್ಟಕ ೩). ಇತರೆಲ್ಲ ರಾ‌ಜ್ಯಗಳಿಗೆ ಹೋಲಿಸಿದಾಗ ಕೇರಳ ರಾಜ್ಯವು ಶಿಕ್ಷಣಕ್ಕೆ ಯೋಜನೆಯಲ್ಲಿ ಹೆಚ್ಚಿನ ಪಾಲು ಅಂದರೆ ೨೮% ರಷ್ಟು ಇರಿಸಿದ್ದು, ಇದು ಭಾರತದ ಸರಾಸರಿ ೨೦%, ಇದಕ್ಕಿಂತ ಜಾಸ್ತಿಯಿರುವುದು. ಇದು ನಿರೀಕ್ಷಿತ ಸಾಲಿನಲ್ಲಿ ನಡೆದರೆ ಅತೀ ಹೆಚ್ಚಿನ ಯೋಜನಾ ನಿಗದಿಯಲ್ಲಿ ಎರಡನೆಯದು ಬಿಹಾರ, ಈ ರಾಜ್ಯವು ಶಿಕ್ಷಣಕ್ಕೆ ೨೬.೩%ವನ್ನು ತೆಗೆದಿರಿಸಿರುವುದು ಅನಿರೀಕ್ಷಿತ ವಿಷಯವಾಗಿದೆ. ಆದರೆ ಕೇರಳವು ಗರಿಷ್ಠ ಸಾಕ್ಷರತೆಯನ್ನು ಸಾಧಿಸಿದ್ದರೆ ಬಿಹಾರದಲ್ಲಿ ಸಾಕ್ಷರತಾ ಪ್ರಮಾಣವು ೧೯೯೧ರಲ್ಲಿ ಅತೀ ಕನಿಷ್ಠದಲ್ಲಿದೆ (ಕೋಷ್ಟಕ ೧). ತಮಿಳುನಾಡಿನಲ್ಲಿ ಶಿಕ್ಷಣ ಯೋಜನಾ ನಿಗದಿಯು ಭಾರತದ ಸರಾಸರಿಯಷ್ಟೆ ಇದ್ದರೂ ಸಾಕ್ಷರತೆಯ ಪ್ರಮಾಣ ಮಾತ್ರ ಬಹಳಷ್ಟು ಹೆಚ್ಚಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಶಿಕ್ಷಣಕ್ಕೆ ಯೋಜನಾ ನಿಗದಿಯು ೨೧.೩% ಆಗಿದ್ದು ಇದು ಇತರ ಹಲವು ರಾಜ್ಯಗಳಿಗಿಂತ ಹೆಚ್ಚಾಗಿರುವುದು, ಆದರೆ ಮಹಾರಾಷ್ಟ್ರ, ಪಂಜಾಬ್ ಮತ್ತು ತಮಿಳುನಾಡಿನಲ್ಲಿ ಸಾಕ್ಷರತೆಯು ಇಲ್ಲಿಗಿಂತ ಹೆಚ್ಚಿರುವುದು. ಇದರಿಂದ ತಿಳಿಯುವುದೇನೆಂದರೆ ಎಲ್ಲಿ ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ಪ್ರಾಥಮಿಕ ಶಿಕ್ಷಣಕ್ಕಿಂತಲೂ ಹೆಚ್ಚಿನ ಯೋಜನಾ ನಿಗದಿಯಾಗುವುದೋ ಅಲ್ಲಿ ಇಂತಹ ಗೋಜಲಾಗುವುದು. ನಿಖರ ಅಂಕಿ ಅಂಶಗಳು ದೊರೆಯದ ಕಾರಣ ಇದನ್ನು ಪರೀಕ್ಷಿಸಲಾಗಿಲ್ಲ.

ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿ, ತುಲನಾತ್ಮಕವಾಗಿ ಕೇರಳದ ಪಾಲು ಗರಿಷ್ಠವಿರುವುದು (೭.೩%) ಅದೇ, ಭಾರತದ ಸರಾಸರಿ ೬.೩% ಇದ್ದು, ಇದು ಪಶ್ಚಿಮ ಬಂಗಾಳ ಮತ್ತು ಉತ್ತರಪ್ರದೇಶ ರಾಜ್ಯಗಳ ಪಾಲಿಗಿಂತಲೂ ಕಡಿಮೆಯಾಗಿರುವುದು. ವೈದ್ಯಕೀಯ ಸವಲತ್ತಿಗೆ ತೆಗೆದಿರಿಸಿದ ಪ್ರತಿ ಶತವು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಮನಾಗಿರುವುದು. ವೈದ್ಯಕೀಯ ವೆಚ್ಚಗಳ ಮೇಲೆಯೇ ಶಿಶುಮರಣ ಸಂಖ್ಯೆಯು ಅಲವಂಬಿತವಾಗಿದ್ದು, ಇದು ಕರ್ನಾಟಕದಲ್ಲಿ ೬೯ರಿಂದ ೭೫ಕ್ಕೆ ಏರಿದ್ದು, ತಮಿಳುನಾಡಿನಲ್ಲಿ ೯೧ರಿಂದ ೭೬ಕ್ಕೆ ಇಳಿದಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಬಹುಶಃ ವೈದ್ಯಕೀಯ ಮತ್ತು ಪೌಷ್ಠಿಕತೆಯ ಹೆಚ್ಚಿನ ಯೋಜನಾ ನಿಗದಿಯ ಜಂಟಿ ಪ್ರಭಾವವು ತಮಿಳುನಾಡಿನಲ್ಲಿ ಇಂತಹ ವ್ಯತ್ಯಾಸವನ್ನು ತಂದಿರಬಹುದು.

ಪೌಷ್ಠಿಕತೆಗೆ ಸಂಬಂಧಿಸಿ ಎಲ್ಲಾ ರಾಜ್ಯಗಳು, ತಮಿಳುನಾಡು ೨.೧%, ಗುಜರಾತ್ ೨.೦%, ಮತ್ತು ಕರ್ನಾಟಕ ೧.೮%ವನ್ನು ಹೊರತುಪಡಿಸಿ ಒಟ್ಟಾರೆ ಯೋಜನಾ ನಿಗದಿಯಲ್ಲಿ ೧%ಕ್ಕಿಂತನೂ ಕಡಿಮೆ ವೆಚ್ಚ ಮಾಡಿರುವುದು. ನಿರ್ದಿಷ್ಟವಾಗಿ ಕೇರಳ ರಾಜ್ಯವನ್ನು ಗಮನಿಸಿದಾಗ ೨% ವೆಚ್ಚದೊಂದಿಗೆ. ಶಿಶುಮರಣ ಸಂಖ್ಯೆ ಮತ್ತು ನಿರೀಕ್ಷಿತ ಜೀವನಾವಧಿಯ ಬಗ್ಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿರುವುದು. ಬಿಹಾರ ಮತ್ತು ಉತ್ತರಪ್ರದೇಶಗಳು ಪೌಷ್ಠಿಕತೆಯ ಬಗ್ಗೆ ಏನು ಖರ್ಚು ಮಾಡದ ರಾಜ್ಯಗಳಾಗಿ ನಿಲ್ಲುತ್ತದೆ. ಸಾಮಾಜಿಕ ರಕ್ಷಣೆ ಮತ್ತು ಕಲ್ಯಾಣದ ಪಾಲಿನ ವೆಚ್ಚದ ಬಗ್ಗೆ ಹರಿಯಾಣ ರಾಜ್ಯವು ೭.೨ದೊಂದಿಗೆ ಮೊದಲನೆಯದಾಗಿ ನಿಲ್ಲುತ್ತದೆ. ಅದೇ ಒಟ್ಟಾರೆ ಭಾರತದ ಅಂಕೆಯು ೧.೮% ಆಗಿದ್ದು, ಇತರ ರಾಜ್ಯಗಳಲ್ಲಿ ತಮಿಳುನಾಡು ೪.೨%ದೊಂದಿಗೆ ಎರಡನೆಯ ಗರಿಷ್ಠ ಪಾಲಿನದಾಗಿ ನಿಲ್ಲುತ್ತದೆ.

೭. ತಲಾ ಯೋಜನಾ ಅಂದಾಜು ವೆಚ್ಚ

ಜನಸಂಖ್ಯೆಗೆ ಸರಿಯಾದ ಒತ್ತುಕೊಡದ ಒಟ್ಟಾರೆ ಖರ್ಚು ಕೆಲವೊಮ್ಮೆ ಹಾದಿ ತಪ್ಪಿಸುತ್ತದೆ. ಉತ್ತರಪ್ರದೇಶದ ಪಾಲಿಗಂತೂ ಇದು ನಿಜ ಸಂಗತಿಯಾಗಿದೆ. ಒಟ್ಟು ಹಾಗೂ ವಲಯ ಸಂಬಂಧಿತ, ತಲಾ ಯೋಜನಾ ಅಂದಾಜು ವೆಚ್ಚ ಒಂದು ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಶಿಕ್ಷಣಕ್ಕೆ ಪಂಜಾಬ ತಲಾ ಅತಿ ಹೆಚ್ಚಿನ (ರೂ. ೨೦೦) ಖರ್ಚು ಮಾಡುತ್ತಿದ್ದು, ಕೇರಳವು ಸ್ವಲ್ಪದರಲ್ಲೇ ಕಡಿಮೆ ಸಂಖ್ಯೆಯೊಂದಿಗೆ (ರೂ. ೧೯೮) ಅನುಸರಿಸುತ್ತಿದೆ, ಹಾಗೇ ಇತರ ರಾಜ್ಯಗಳಿಗೆ ಹೋಲಿಸಿದಾಗ ಹರಿಯಾಣವು ಅತಿ ಹೆಚ್ಚಿನ ತಲಾ (ರೂ.೬೭) ಸಾಮಾಜಿಕ ರಕ್ಷಣೆ ಮತ್ತು ಕಲ್ಯಾಣಕ್ಕೆ ಖರ್ಚು ಮಾಡುತ್ತಿದೆ (ಕೋಷ್ಟಕ ೪ನ್ನು ಉಲ್ಲೇಖಿಸಿ). ಸಾಮಾಜಿಕ ರಕ್ಷಣೆಯ ಮೇಲೆ ಎರಡನೆಯ ಅತೀ ಹೆಚ್ಚಿನ ಖರ್ಚು ಮಾಡುವವರಲ್ಲಿ ತಮಿಳುನಾಡು ಇದ್ದರೂ ಇದು ಮಾಡುವ ಖರ್ಚು ಬಹಳಷ್ಟು ಕಡಿಮೆ ಅಂದರೆ ರೂ. ೨೮ ಆಗಿರುತ್ತದೆ. ಅದೇ ರಾಷ್ಟ್ರೀಯ ಸರಾಸರಿ ರೂ.೧೨/- ಆಗಿರುತ್ತದೆ. ಅಂತಹ ಅತೀ ಹೆಚ್ಚಿನ ಖರ್ಚನ್ನು ಸಾಮಾಜಿಕ ರಕ್ಷಣೆ ಹಾಗೂ ಕಲ್ಯಾಣದ ಮೇಲೆ ಮಾಡಿದ್ದರೂ, ಭೌತಿಕ ಜೀವನ ಗುಣಮಟ್ಟ ಸೂಚಿಯಲ್ಲಿ ಹರಿಯಾಣದ ಸ್ಥಾನವು ೧೯೭೧ರಲ್ಲಿ ಎರಡನೇ ಸ್ಥಾನದಲ್ಲಿರುವುದು, ೧೯೯೧ರಲ್ಲಿ ಆರನೇ ಸ್ಥಾನಕ್ಕೆ ಇಳಿದಿದೆ. ಸಮಾಜ ಕಲ್ಯಾಣದ ಮೇಲೆ ಅತೀ ಕಡಿಮೆ ಖರ್ಚು ಮಾಡುತ್ತಿರುವ ರಾಜ್ಯಗಳಾದ ಕೇರಳ, ಪಂಜಾಬ್ ಮತ್ತು ಮಹಾರಾಷ್ಟ್ರಗಳು, ೧೯೯೧ರಲ್ಲಿ ಭೌತಿಕ ಜೀವನ ಗುಣಮಟ್ಟ ಸೂಚಿಯಲ್ಲಿ ಮೊದಲನೇ, ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಗಳಿಸಿವೆ. ಸೂಕ್ತ ವಿವರಣೆಗಳು ದೊರಕಿದಲ್ಲಿ ಸಮಾಜ ಕಲ್ಯಾಣಕ್ಕೆ ಹರಿಯಾಣವು ಖರ್ಚು ಮಾಡಿರುವ ರೀತಿಯನ್ನು ವಿಶ್ಲೇಷಿಸುವುದು ಕುತೂಹಲಕಾರಿಯಾಗಬಹುದು.

ಜೀವನ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರಬಹುದು ಎಂದು ಭಾವಿಸಿದರೂ, ಸಮಾಜ ಕಲ್ಯಾಣದ ಮೇಲಾದ ಖರ್ಚುಗಳಿಗೆ ಹೋಲಿಸಿದಾಗ, ಶಿಕ್ಷಣ ವಲಯದ ಮೇಲೆ ನಡೆದ ಯೋಜಿತ ಯತ್ನಗಳು ಜೀವನ ಗುಣಮಟ್ಟದಲ್ಲಿ ಗಣನೀಯ ಬದಲಾವಣೆಗೆ ಪ್ರಭಾವ ಬೀರುವಂತೆ ಕಾಣುತ್ತದೆ.

ಕರ್ನಾಟಕಕ್ಕೆ ಸಂಬಂಧಿಸಿದಂತೆ, ಪೌಷ್ಠಿಕತೆ ಮತ್ತು ಸಮಾಜಕಲ್ಯಾಣ ಅತೀ ಹೆಚ್ಚು ಅಂದಾಜು ತಲಾ ವೆಚ್ಚವು, ಮೊಲದನೆಯದಕ್ಕೆ ಸಂಬಂಧಿಸಿ ಗುಜರಾತ್ ಮತ್ತು ತಮಿಳುನಾಡಿನ ಬಳಿಕ  ಹಾಗೂ ಎರಡನೆಯದಕ್ಕೆ ಸಂಬಂಧಿಸಿ ಹರಿಯಾಣ ಮತ್ತು ತಮಿಳುನಾಡಿನ ಬಳಿಕ ಮೂರನೇ ಸ್ಥಾನದಲ್ಲಿದೆ.

ಭೌತಿಕ ಜೀವನ ಗುಣಮಟ್ಟ ಸೂಚಿ ಸ್ಥಾನಗಳ ಬಗ್ಗೆ ಅತೀ ಸಮೀಪದ ಪೈಪೋಟಿಯಲ್ಲಿರುವ ಕರ್ನಾಟಕ ಮತ್ತು ತಮಿಳುನಾಡಿನ ಸಾಧನೆಗಳನ್ನು ಹೋಲಿಸಿದಾಗ ಒಂದು ಕುತೂಹಲಕಾರಿ ಪ್ರಶ್ನೆ ಉದ್ಭವಿಸುತ್ತದೆ. ಒಟ್ಟಾರೆ ತಲಾ ಅಂದಾಜು ವೆಚ್ಚ ಹಾಗೂ ವಲಯಗಳ ತಲಾ ಅಂದಾಜು ವೆಚ್ಚಗಳಿಗೆ ಸಂಬಂಧಿಸಿ ತಮಿಳುನಾಡು ಅತೀ ಹೆಚ್ಚು ಅಂದಾಜು ವೆಚ್ಚ ಹಾಕಿದೆ. ಆದರೆ, ಕರ್ನಾಟಕ ಭೌತಿಕ ಜೀನವ ಗುಣಮಟ್ಟ ಸೂಚಿಯು, ತಮಿಳುನಾಡಿಗಿಂತ ಉತ್ತಮ (ಸ್ವಲ್ಪ ಮಟ್ಟಿನ) ಸಾಧನೆಯನ್ನು ತೋರಿಸಿದೆ. ೧೯೯೧ರಲ್ಲಿ ನಿರೀಕ್ಷಿತ ಜೀವನಾವಧಿಯು ಕರ್ನಾಟಕಕ್ಕೆ ಅನುಕೂಲಕರವಾಗಿದ್ದರೆ, ಸಾಕ್ಷರತೆಯು ತಮಿಳುನಾಡಿನಲ್ಲಿ ಹೆಚ್ಚು ಇರುವುದು ಹಾಗೂ ಶಿಶುಮರಣ ಸಂಖ್ಯೆಯ ದರವು ಎರಡು ರಾಜ್ಯಗಳಲ್ಲಿ ಸಮನಾಗಿರುವುದರ ಬಗ್ಗೆ  ನಾವು ಈ ಹಿಂದೆನೇ ನೋಡಿರುತ್ತೇವೆ. ಅನುಬಂಧ ೧ರ ಕೋಷ್ಟಕ ೧ನ್ನು ವೀಕ್ಷಿಸಿದಾಗ ಭೌತಿಕ ಜೀವನ ಗುಣಮಟ್ಟ ಸೂಚಿ ಹಾಗೂ ಸಾಕ್ಷರತೆಗಿಂತ, ಭೌತಿಕ ಜೀವನ ಗುಣಮಟ್ಟ ಸೂಚಿ ಮತ್ತು ನಿರೀಕ್ಷಿತ ಜೀವನಾವಧಿಯ ಸಹಶಕ್ತಿಯ ಸಹಸಂಬಂಧವು ಯಾವಾಗಲೂ ಜಾಸ್ತಿಯಿರುವುದು, ಇದು ಮೇಲಿನ ಸ್ಥಿತಿಯನ್ನು ವಿವರಿಸುವುದು.

೮. ಭೌತಿಕ ಜೀವನ ಗುಣಮಟ್ಟ ಸೂಚಿ, ತಲಾ ಆದಾಯ ಮತ್ತು ಬಡತನದ ನಡುವಿನ ಸಂಬಂಧ

ತಲಾ ಆದಾಯ ಹಾಗೂ ಬಡತನದ, ಭೌತಿಕ ಜೀವನ ಗುಣಮಟ್ಟ ಸೂಚಿಯೊಂದಿಗಿನ ಸಂಬಂಧವನ್ನು ಪರೀಕ್ಷಿಸಲು ರಾಜ್ಯವಾರು ಅಂಕಿ ಸಂಖ್ಯೆಗಳನ್ನು ತೆಗೆದುಕೊಳ್ಳಲಾಯಿತು (ಕೋಷ್ಟಕ ೫). ಸಹಸಶಕ್ತದ ಸಹಸಬಂಧವು ನಿರೀಕ್ಷಿತ ಧನಾತ್ಮಕ ದಿಕ್ಕಿನಲ್ಲಿದ್ದರೂ, ಪರಿಮಾಣದಲ್ಲಿ ಅವು ಬಹು ಕಡಿಮೆಯಿದ್ದವು. ಉದಾಹರಣೆಗೆ, ಭೌತಿಕ ಜೀವನ ಗುಣಮಟ್ಟ ಸೂಚಿ ಹಾಗೂ ತಲಾ ಆದಾಯದ ಸಹ ಸಶಕ್ತ ಸಹಸಂಬಂಧವು ೧೯೭೧, ೧೯೮೧ ಮತ್ತು ೧೯೯೧ರಲ್ಲಿ ಅನುಕ್ರಮವಾಗಿ ೦.೩೨೪, ೦.೩೨೨ ಮತ್ತು ೦.೪೧೬ ಆಗಿರುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡಾ, ಭೌತಿಕ ಜೀವನ ಗುಣಮಟ್ಟ ಸೂಚಿ ಮತ್ತು ತಲಾ ಆದಾಯದ ಸಹಸಂಬಂಧವು ಕಡಿಮೆಯಿದೆ. ಅಂದರೆ ಅವೆರಡರ ನಡುವೆ ಸಹ ಸಂಬಂಧವಿಲ್ಲ ಎಂಬ ಸ್ಪಷ್ಟ ವಿಷಯ ಗಮನಿಸಲು ಕುತೂಹಲ ಪೂರ್ಣ. ಸಾಮಾಜಿಕ ಮತ್ತು ಆರ್ಥಿಕ ನೀತಿಯ ಒಟ್ಟಾರೆ ಪರಿಣಾಮವನ್ನು ಭೌತಿಕ ಜೀವನ ಗುಣಮಟ್ಟ ಸೂಚಿಯು ಹಿಡಿದಿರುತ್ತದೆ ಎಂದು ವಾದಿಸಬಹುದು ಹಾಗೂ ಅದರೊಂದಿಗೆ ಖಾಸಗಿ ಆದಾಯ ಯಾವ ರೀತಿ ಖರ್ಚಾಯಿತು ಎನ್ನುವುದು ಕೂಡಾ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಕಲ್ಯಾಣ ಪ್ರಭಾವಗಳನ್ನು ಕೇವಲ ಆದಾಯದ ಅಂಕಿ ಸಂಖ್ಯೆಗಳಿಂದ ಅಳಿಯುವುದು ಅಸಾಧ್ಯ.

ಭೌತಿಕ ಜೀವನ ಗುಣಮಟ್ಟ ಸೂಚಿ ಹಾಗೂ ಬಡತನದ ದೂರ ನಡುವಿನ ಸಹಸಂಬಂಧವು ಮೇಲಿನ ತೀರ್ಪನ್ನು ಪ್ರತಿಪಾದಿಸುತ್ತದೆ. ನಮ್ಮಲ್ಲಿ ೧೯೭೨-೭೮ ಮತ್ತು ೧೯೮೩-೮೪ನೇ ವರ್ಷದ ಬಡತನದ ದರದ ಮೇಲಿನ ಅಂಕಿ ಸಂಖ್ಯೆಗಳಿವೆ. ಮೊದಲನೇ ಮತ್ತು ಮೂರನೇ ಸರಣಿಯನ್ನು ೧೯೭೧ ಮತ್ತು ೧೯೮೧ನೇ ಭೌತಿಕ ಗುಣಮಟ್ಟ ಸೂಚಿಗೆ ಅನುಕ್ರಮವಾಗಿ ಹೋಲಿಸಿದಾಗ ಮತ್ತು ಸಹಸಂಬಂಧ ಸಹಸಶಕ್ತಗಳು ೦.೧೯೫ ಮತ್ತು ೦.೨೧೪ ಎಂದು ಕಂಡುಬಂದಿವೆ. ಇಲ್ಲಿ ಮತ್ತೆ ಸಹಸಶಕ್ತಗಳ ಚಿಹ್ನೆಯು ನಿರೀಕ್ಷಿಸಿದಂತೆ ಇದ್ದರೂ ಪರಿಮಾಣ ಮಾತ್ರ ಬಹಳ ಚಿಕ್ಕದು. ಆರ್ಥಿಕ ಉನ್ನತಿ ಅಥವಾ ಬಡತನ ಭೌತಿಕ ಜೀವನ ಗುಣಮಟ್ಟದ ಮೇಲೆ ಹಿಡಿದಿಟ್ಟ ಭೌತಿಕ ಜೀವನ ಗುಣಮಟ್ಟ ಸೂಚಿಗೆ ಹೆಚ್ಚೇನೂ ಪ್ರಭಾವ ಬೀರಿರುವಂತೆ ಕಾಣುವುದಿಲ್ಲ.

೯. ಸಹಸಂಬಂಧ ಸಹಸಶಕ್ತತೆಯ ಸ್ಥಾನ

ಯೋಜನಾ ತಲಾ ಅಂದಾಜು ವೆಚ್ಚಗಳಿಗೆ ಅನುಗುಣವಾಗಿ ರಾಜ್ಯಗಳ ಸ್ಥಾನ ಪಟ್ಟಿ ಮಾಡಿದರೆ, ಒಟ್ಟಾರೆ ಹಾಗೂ ಆಯ್ದ ವಲಯಕ್ಕನುಗುಣವಾಗಿ ೧೯೯೧ರಲ್ಲಿ ಭೌತಿಕ ಜೀವನ ಗುಣಮಟ್ಟ ಸೂಚಿ ಲೆಕ್ಕಾಚಾರದಲ್ಲಿ ಅವುಗಳ ಸ್ಥಾನಗಳು, ಹೆಚ್ಚಾಗಿ ಶಿಕ್ಷಣ ಮತ್ತು ಆರೋಗ್ಯದ ಖರ್ಚಿನ ಮೇಲೆ ಸ್ಥಾನಗಳನ್ನು ಲೆಕ್ಕ ಹಾಕಿದರೆ ಅದು ಭೌತಿಕ ಜೀವನ ಗುಣಮಟ್ಟ ಸೂಚಿ ಸ್ಥಾನಗಳ (ಕೋಷ್ಟಕ ೬) ಕೊನೆಯ ಅಂಕಣಕ್ಕೆ ಬಹು ಸಮೀಪದಿಂದ ಸಂಬಂಧಿಸಿದೆ. ಪೌಷ್ಠಿಕತೆಗೆ ಸಂಬಂಧಿಸಿ ಸ್ಥಾನಗಳ ಸಹ ಸಂಬಂಧ ಸಹಸಶಕ್ತತೆಯು ಆಶ್ಚರ್ಯಕರವಾಗಿ ಬಹಳ ಕೆಳಮಟ್ಟದಲ್ಲಿದೆ. (ಕೆಳಗಿನ ಕೋಷ್ಟಕ ನೋಡಿರಿ).

ಸಹಸಂಬಂಧ ಸಹಶಕ್ತತೆಯ ಸ್ಥಾನ:

ಒಟ್ಟು ಯೋಜನೆ vs ಭೌತಿಕ ಜೀವನ ಗುಣಮಟ್ಟ ಸೂಚಿ : ೦.೭೬೯
ಶಿಕ್ಷಣ vs ಭೌತಿಕ ಜೀವನ ಗುಣಮಟ್ಟ ಸೂಚಿ : ೦.೮೭೪
ಆರೋಗ್ಯ vs ಭೌತಿಕ ಜೀವನ ಗುಣಮಟ್ಟ ಸೂಚಿ : ೦.೮೧೧
ಪೌಷ್ಠಿಕತೆ vs ಭೌತಿಕ ಜೀವನ ಗುಣಮಟ್ಟ ಸೂಚಿ : ೦.೦೮೪
ಸಮಾಜಕಲ್ಯಾಣ vs ಭೌತಿಕ ಜೀವನ ಗುಣಮಟ್ಟ ಸೂಚಿ : ೦.೬೭೮

ಪೌಷ್ಠಿಕತೆಯ ಮೇಲಿನ ಯೋಜನಾ ಅಂದಾಜು ವೆಚ್ಚವನ್ನು ಹೆಚ್ಚಿಸುವುದರಿಂದ ಜೀವನದ ಗುಣಮಟ್ಟ ಸುಧಾರಿಸುವುದಿಲ್ಲ ಎಂದು ಇದರಿಂದ ವಿಧಿತವಾಗುವುದು. ನಿಜವೆಂದರೆ, ಪೌಷ್ಠಿಕತೆಯ ಅಂದಾಜು ವೆಚ್ಚಕ್ಕೆ ಸಂಬಂಧಿಸಿ ಮೊದಲಿನ ನಾಲ್ಕು ರಾಜ್ಯಗಳು, ಗುಜರಾತ್, ತಮಿಳುನಾಡು, ಕರ್ನಾಟಕ ಮತ್ತು ಹರಿಯಾಣ, ಭೌತಿಕ ಜೀವನ ಗುಣಮಟ್ಟ ಸೂಚಿಯಲ್ಲಿ ಕೆಳಗಿನ ಸ್ಥಾನಗಳನ್ನು ದಾಖಲಿಸಿವೆ, ಅವುಗಳು ಕ್ರಮವಾಗಿ ೮ನೇ, ೫ನೇ, ೪ನೇ ಮತ್ತು ೬ನೇಯದು.

ಸಮಾಜ ಕಲ್ಯಾಣದ ಅಂದಾಜು ವೆಚ್ಚ ಸ್ಥಾನಗಳಿಗೆ ಸಂಬಂಧಿಸಿ, ಭೌತಿಕ ಜೀವನ ಗುಣಮಟ್ಟ ಸೂಚಿಯ ಸ್ಥಾನದೊಂದಿಗಿನ ಅದರ ಸಹಸಂಬಂಧ ಪೌಷ್ಠಿಕತೆಗಿಂತ ಉತ್ತಮವಾಗಿರುವುದು. ಆದರೆ ಶಿಕ್ಷಣ ಮತ್ತು ಆರೋಗ್ಯದ ಸಹಸಂಬಂಧದ ಸಹಸಶಕ್ತಕ್ಕಿಂತ ಕಡಿಮೆಯಾಗಿರುವುದು.

ಅಂತಿಮ ವಿಶ್ಲೇಷಣೆಯಲ್ಲಿ ಜೀವನ ಗುಣಮಟ್ಟವನ್ನು ಉತ್ತಮಗೊಳಿಸಲು ಹೆಣಗುವ ರಾಜ್ಯಗಳು, ಮೊದಲನೆಯದಾಗಿ ಶಿಕ್ಷಣ ಹಾಗೂ ಎರಡನೆಯದಾಗಿ ವೈದ್ಯಕೀಯ ಮತ್ತು ಆರೋಗ್ಯ ಸೌಲಭ್ಯಗಳ ಮೇಲಿನ ಯೋಜನಾ ಅಂದಾಜು ವೆಚ್ಚವನ್ನು ಹೆಚ್ಚಿಸಬೇಕು. ಆದ್ಯತೆಯ ಪಟ್ಟಿಯಲ್ಲಿ ಮೂರನೆಯದಾಗಿ ಸಮಾಜ ಕಲ್ಯಾಣ ಹಾಗೂ ಸಾಮಾಜಿಕ ರಕ್ಷಣಾ ಕಾರ್ಯಕ್ರಮದ ವೆಚ್ಚಗಳು ಬರುವುವು. ಪೌಷ್ಠಿಕತೆಯ ಕಾರ್ಯಕ್ರಮಗಳನ್ನು ಹೆಚ್ಚಿನಂಶ ಜೀವನ ಗುಣಮಟ್ಟವನ್ನು ಉತ್ತಮ ಗೊಳಿಸುವ ಗುರಿ ಸಾಧಿಸುವಲ್ಲಿ ಎಂದು ಕರೆಯಬಹುದು.

೧೦. ಕರ್ನಾಟಕ ರಾಜ್ಯದ ಸ್ಥಾನ

ರಾಜ್ಯದ ಭೌತಿಕ ಜೀವನ ಗುಣಮಟ್ಟ ಸೂಚಿ ಮೌಲ್ಯದಲ್ಲಿ ಕೇರಳ ೯೨.೫  ಪಂಜಾಬ್ ೬೭.೨, ಮಹಾರಾಷ್ಟ್ರ ೬೪.೨ ಬಳಿಕ, ಕರ್ನಾಟಕ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ. ಆದಾಗ್ಯೂ ತನ್ನ ಅತೀ ಸಮೀಪದ ಪೂರ್ವಾಧಿಕಾರಿ ಮಹಾರಾಷ್ಟ್ರಕ್ಕಿಂತ ಮೌಲ್ಯವು ಬಹಳಷ್ಟು ಕಡಿಮೆಯಿರುವುದು ಹಾಗೂ ತಮಿಳುನಾಡಿನ ೫೯.೦ ಮೌಲ್ಯದ ಅತೀ ಸಮೀಪದಲ್ಲಿರುವುದು ಹಾಗೂ ತಮಿಳುನಾಡು ಭೌತಿಕ ಜೀವನ ಗುಣಮಟಗಟ ಸೂಚಿ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಹೀಗೆ, ಕರ್ನಾಟಕ ರಾಜ್ಯವು ಈ ಸಾಮಾಜಿಕ ಸೂಚಿಗಳ ಸುಧಾರಣೆಗೆ ತೀವ್ರವಾದ ಹೆಜ್ಜೆಗಳನ್ನು ತೆಗೆದುಕೊಳ್ಳದಿದ್ದರೆ, ಸಮೀಪದ ಭವಿಷ್ಯತ್ತಿನಲ್ಲಿ ತನ್ನ ನಾಲ್ಕನೆಯ ಸ್ಥಾನವನ್ನು ತಮಿಳುನಾಡಿಗೆ ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಅಂಗಗಳಿಗೆ ಬರುವುದಾದರೆ (ಕೋಷ್ಟಕ ೧) ಇತ್ತೀಚಿನ ಜನಗಣತಿ ೧೯೯೧ರಂತೆ, ಕರ್ನಾಟಕವು ಸಾಕ್ಷರತೆ ದರದಲ್ಲಿ ಐದನೇ ಸ್ಥಾನವನ್ನು ಹೊಂದಿದ್ದು, ೧೯೮೧ರಲ್ಲಿ ೩೮.೫%ದಿಂದ ೧೯೯೧ರಲ್ಲಿ ಶೇ. ೫೬ಕ್ಕೆ ದರವನ್ನು ದೊಡ್ಡದಾಗಿ ಸುಧಾರಿಸಿಕೊಂಡಿತ್ತುದೆ. ಆದರೆ ಶಿಶುಮರಣದ ದರದ ಬಗ್ಗೆ ೧೯೮೧ರಲ್ಲಿ ೬೯ರಿಂದ ೧೯೯೧ರಲ್ಲಿ ೭೫ಕ್ಕೆ ಕೆಲವು ಕಾರಣಕ್ಕೆ ಹೆಚ್ಚಳಗೊಂಡಿದ್ದು, ಇದು ಭೌತಿಕ ಜೀವನ ಗುಣಮಟ್ಟ ಸೂಚಿಯ ಮೇಲೆ ಕೆಟ್ಟದಾಗಿ ಪ್ರತಿಫಲಿತಗೊಂಡಿದೆ. ಇಂತಹ ಹೆಚ್ಚಳ ಕಂಡುಬರುವ ಏಕ ಮಾತ್ರ ಇನ್ನೊಂದು ರಾಜ್ಯ ಆಂಧ್ರಪ್ರದೇಶ.

ನಿರೀಕ್ಷಿತ ಜೀವನಾವಧಿಯಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿ ನಿಲ್ಲುತ್ತದೆ. ಕೇರಳ (೭೧ ವರ್ಷಗಳು) ಪಂಜಾಬ್ (೬೬ ವರ್ಷಗಳು)ನ ಬಳಿಕ ಕರ್ನಾಟಕವು ೬೧.೬ ವರ್ಷಕ್ಕೆ ನಿರೀಕ್ಷಿತ ಜೀವನಾವಧಿಯೊಂದಿಗೆ ಮಹಾರಾಷ್ಟ್ರದೊಂದಿಗೆ ಮೂರನೇ ಸ್ಥಾನವನ್ನು ಹಂಚಿಕೊಂಡಿದೆ.

ಮೇಲಿನವುಗಳಿಂದ ನಿಚ್ಚಳವಾಗುವುದೇನೆಂದರೆ, ೧೯೯೧ರಲ್ಲಿ ಹೆಚ್ಚಿನ ಭೌತಿಕ ಜೀವನ ಗುಣಮಟ್ಟ ಸೂಚಿಯನ್ನು ಕರ್ನಾಟಕವು ಸಾಧಿಸಬಹುದಿತ್ತು ಶಿಶು ಮರಣ ದರದ ೧೯೮೧ಕ್ಕೆ ಹೋಲಿಸಿದಾಗ ೧೯೯೧ರಲ್ಲಿ ಆದ ಹೆಚ್ಚಳವೊಂದು ಆಗಿರದಿದ್ದರೆ.