೧೧. ಜಿಲ್ಲಾವಾರು (ಕರ್ನಾಟಕ) ಭೌತಿಕ ಜೀವನ ಗುಣಮಟ್ಟ ಸೂಚಿಯ ಒಂದು ವಿಶ್ಲೇಷಣೆ

ಜಿಲ್ಲಾ ಮಟ್ಟದಲ್ಲಿ ಅಂಕಿ ಸಂಖ್ಯೆ ಸೂಕ್ಷ್ಮತೆಯ ವಿಶ್ಲೇಷಣೆ ನೀಡಲು ಇರುವ ಪ್ರಮುಖ ತೊಂದರೆಯೆಂದರೆ ಅಂಕಿ ಸಂಖ್ಯೆಗಳ ಕೊರತೆ. ಎರಡನೆಯ ಮತ್ತು ಬಹು ಗಂಭೀರವಾದ ವಿಷಯವೆಂದರೆ ಜಿಲ್ಲಾ ಮಟ್ಟದಲ್ಲಿ ಏಕರೂಪದ ಹಾಗೂ ನಂಬಲರ್ಹ ಅಂಕಿ ಸಂಖ್ಯೆಗಳ ದೊರಕುವುದು ಖಂಡಿತವಿಲ್ಲ. ನಿಜವೆಂದರೆ, ಮೂರು ಶಿಶುಮರಣ ದರದ ಅಂಕಿ ಅಂಶಗಳು ಕರ್ನಾಟಕದಲ್ಲಿ ದೊರಕಲಿಲ್ಲ. ಕೇವಲ ಸಾಕ್ಷರತಾ ದರ  ಮತ್ತು ತಲಾ ಆದಾಯದ ಮೇಲೆ ಮಾತ್ರ ಜಿಲ್ಲಾವಾರು ಅಂಕಿ ಅಂಶಗಳನ್ನು ಪಡೆಯಲಾಯಿತು. ಈ ಹಿಂದೆ, ತಲಾ ಆದಾಯವನ್ನು ಸಮಾಜ ಕಲ್ಯಾಣದ ಮಾಪನಕ್ಕೆ ಗಣನೆಗೆ ತೆಗೆದುಕೊಳ್ಳಬಾರದು ಎಂದು ವಾದಿಸಿದ್ದರೂ, ಇತರ ಅಂಗಗಳ ಮೇಲೆ ಅಂಕಿ ಅಂಶಗಳ ಕೊರತೆಯಿಂದಾಗಿ ಇದನ್ನು ಸಾಕ್ಷರತಾ ದರದೊಂದಿಗೆ ಇಲ್ಲಿ ಕರ್ನಾಟಕದ ತುಲನೆ ಮಾಡಲಾಗಿದೆ.

ಜಿ‌ಲ್ಲೆಗಳಲ್ಲಿ ಬೆಂಗಳೂರು ನಗರ ೭೮.೮೭%, ಒಟ್ಟಾರೆ, ದಕ್ಷಿಣ ಕನ್ನಡ ಜಿಲ್ಲೆಯ ಸಾಕ್ಷರತಾ ದರದಲ್ಲಿ ೧೯೯೧ರಲ್ಲಿ ೭೫.೮೬% ಅಗ್ರಸ್ಥಾನದಲ್ಲಿದ್ದು, ಕೊಡಗು ೬೮.೩೫% ಅದನ್ನು ಹಿಂಬಾಲಿಸಿದೆ. ಆದರೆ ತಲಾ ಆದಾಯದಲ್ಲಿ (ಪ್ರಸಕ್ತ ದರಗಳಲ್ಲಿ) ಕೊಡಗಿಗೆ ಉನ್ನತ ಸಂಖ್ಯೆಯಿದೆ. (ರೂ. ೧೦, ೪೭೭), ಇತರವು ಹೀಗಿವೆ, ಬೆಂಗಳೂರು ರೂ. ೭, ೧೬೪, ಚಿಕ್ಕಮಗಳೂರು ರೂ. ೬, ೬೫೫ ಮತ್ತು ದಕ್ಷಿಣ ಕನ್ನಡ ರೂ. ೫.೬೮೨ ಹೀಗೆ, ಆರ್ಥಿಕ ಉನ್ನತಿ ಹಾಗೂ ಸಾಕ್ಷರತೆಯ ನಡುವಿನ ಸಂಬಂಧ ಬಹಳ ಅಲ್ಪ ನಿಜವೆನ್ನಬೇಕಾಗಿದೆ. ಈ ರೀತಿಯ ಪರಿಸಮಾಪ್ತಿಯನ್ನು ರಾಯಚೂರು ಜಿಲ್ಲೆಯ ನಿಜ ಸಂಗತಿಯಿಂದಾಗಿ ತೆಗೆದುಕೊಳ್ಳಲಾಗಿದೆ. ಇಲ್ಲಿ ಸಾಕ್ಷರತೆ ದರವು ೩೫.೯೬% ಇದ್ದು ತಲಾ ಆದಾಯದಲ್ಲಿ ರೂ. ೪, ೫೩೮, ಇದು ಏಳನೆಯ ಸ್ಥಾನದಲ್ಲಿ ನಿಲ್ಲುತ್ತದೆ.

೧೨. ಉಪಸಂಹಾರ  ಹಾಗೂ ಶಿಫಾರಸುಗಳು

ಈವರೆಗಿನ ವಾದಗಳಿಂದ ಈ ಕೆಳಗಿನ ಮುಖ್ಯ ತೀರ್ಮಾನಗಳು ಉದ್ಭವಿಸುತ್ತವೆ:

೧. ಭಾರತದ ರಾಜ್ಯಗಳ ಪೈಕಿ ಕೇರಳದ ಭೌತಿಕ ಜೀವನ ಗುಣಮಟ್ಟ ಸೂಚಿಯು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಬಹುದಾಗಿದೆ, ಇಂತಹ ಅಪೂರ್ವ ಸಾಧನೆಗೆ ಕಾರಣಗಳನ್ನು ಆ ರಾಜ್ಯದ ಅದ್ವಿತೀಯ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಥಿಕ ಗುಣಲಕ್ಷಣಗಳಿಂದ ಎಂದು ಭಾವಿಸಲಾಗಿದೆ.

೨. ಪೌಷ್ಠಿಕತೆಯ ಮೇಲಿನ ಅಂದಾಜು ಯೋಜನಾ ವೆಚ್ಚ ಹಾಗೂ ಭೌತಿಕ ಜೀವನ ಗುಣಮಟ್ಟ ಸೂಚಿಯು ನಡುವಿನ ಸಂಬಂಧವು ಬಹಳಷ್ಟು ದುರ್ಬಲವಾಗಿರುವುದು ಹಾಗೂ ಶಿಕ್ಷಣದಿ ಮೇಲಿನ ಅಂದಾಜು ವೆಚ್ಚ ಹಾಗೂ ಭೌತಿಕ ಜೀವನ ಗುಣಮಟ್ಟ ಸೂಚಿಯ ನಡುವಿನ ಸಂಬಂಧವು ಬಹಳಷ್ಟು ಪ್ರಬಲವಾಗಿರುವುದು ಕಾಣುತ್ತದೆ. ಹೀಗಾಗಿ ಶಿಕ್ಷಣದ ಮೇಲಿನ ಯೋಜನಾ ಯತ್ನಗಳು ವಿಶೇಷತಃ ಪ್ರಾಥಮಿಕ ಹಂತದಲ್ಲಿ ಪೌಷ್ಠಿಕತೆ ಕಾರ್ಯಕ್ರಮಗಳ ಮೇಲಿನ ಯೋಜನಾ ಅಂದಾಜು ವೆಚ್ಚಕ್ಕೆ ಹೋಲಿಸಿದಾಗ, ಜೀವನ ಗುಣಮಟ್ಟದಲ್ಲಿ ಹೆಚ್ಚಿನ ಸುಧಾರಣೆಗಳಿಗೆ ಎಡೆ ಮಾಡುವುದು.

೩. ಬಹುವ್ಯಾಪಿಯಾಗಿ ನಂಬಿರುವ ತೀರ್ಮಾನ ಏನೆಂದರೆ ಆರ್ಥಿಕ ಉನ್ನತಿ ಅಥವಾ ಬಡತನವು ಜೀವನ ಗುಣಮಟ್ಟವನ್ನು ನಿರ್ಧರಿಸುತ್ತದೆ ಎಂಬ ಮಾತಿಗೆ ಈ ವ್ಯತಿರಿಕ್ತವಾಗಿ ತಲಾ ಆದಾಯ ಹಾಗೂ ಬಡತನದ ದರವು ಭೌತಿಕ ಜೀವನ ಗುಣಮಟ್ಟ ಸೂಚಿಯೊಂದಿಗೆ ಬಹು ದುರ್ಬಲವಾಗಿ ಸಂಬಂಧಿಸಿದೆ.

೪. ಕರ್ನಾಟಕದಲ್ಲಿ ೧೯೮೧ಕ್ಕೆ ಹೋಲಿಸಿದಾಗ ೧೯೯೧ರಲ್ಲಿ ಶಿಶುಮರಣ ದರವು ಏರಿರುವುದು ದಾಖಲೆಗೊಂಡಿದೆ. ಅದರೊಂದಿಗೆ, ವರ್ಷದಿಂದ ವರ್ಷಕ್ಕೆ ಇದು ಗ್ರಾಮೀಣ ಹಾಗೂ ನಗರ ಪ್ರದೇಶಗಳು  ಹೀಗೆ ಎರಡೂ ಕಡೆಗಳಲ್ಲು ಬಹಳಷ್ಟು ವ್ಯಾಪಕವಾಗಿ ಏರಿಳಿತಗೊಂಡಿರುವುದು.

೫. ಸಾಕ್ಷರತೆಯ ರಂಗದಲ್ಲಿ ಮಹಿಳಾಸಾಕ್ಷರತೆಗೆ ವಿಶೇಷ ಒತ್ತು ನೀಡಬೇಕು. ಇದು ಸಾಮನ್ಯವಾಗಿ ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ಹಾಗೂ ನಿರ್ಧಿಷ್ಟವಾಗಿ ಶಿಶುಮರಣ ದರದ ಮೇಲೆ ಲಾಭದಾಯಕ ಪ್ರಭಾವ ಬೀರುತ್ತದೆ.

೬. ಕರ್ನಾಟಕದ ಜಿಲ್ಲೆಗಳಲ್ಲಿ, ತಲಾ ಆದಾಯ ಹಾಗೂ ಸಾಕ್ಷರತೆಯ ನಡುವಿನ ಸಂಬಂಧವು ಬಹಳ ದುರ್ಬಲವಾಗಿದೆ. ಇದರಿಂದ ಆರ್ಥಿಕ ಉನ್ನತಿಯು ಸಾಕ್ಷರತೆಯ ಮಟ್ಟದ ಮೇಲೆ ಬಹಳಷ್ಟು ಕಡಿಮೆ ಪ್ರಭಾವ ಬೀರುತ್ತದೆ ಎಂಬ ತೀರ್ಮಾನಕ್ಕೆ ಒಯ್ಯುತ್ತದೆ.

೭. ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ, ಜನಸಂಖ್ಯೆಗೆ ಸಂಬಂಧಿಸಿ ಪುರುಷರ ಹಾಗೂ ಮಹಿಳೆಯರ ವಿಭಾಗಗಳಿಗೆ, ರಾಜ್ಯದೊಳಗಿನ ಅಥವಾ ದೇಶದ ವಿಭಿನ್ನ ಆದಾಯ ಹಾಗೂ ಸಾಮಾಜಿಕ ಗುಂಪುಗಳ ವ್ಯತ್ಯಾಸದ ಬೆಳವಣಿಗೆಗಳು ಹಾಗೂ ಕಲ್ಯಾಣ ರೀತಿಗಳನ್ನು ಅಭ್ಯಾಸಿಸಲು ಸೂಕ್ತ ಗುಣಮಟ್ಟದ ಅಂಕಿ ಅಂಶಗಳ ದೊರಕುವಿಕೆಯ ಆಧಾರದಲ್ಲಿ ಸಮಾನ ರೂಪದ ಸೂಚಿಯನ್ನು ರಚಿಸಬಹುದು.

ಕೋಷ್ಟಕ – ೧
ಸಾಕ್ಷರತೆ
, ಮರಣ ಮತ್ತು ನಿರೀಕ್ಷಿತ ಜೀವನಾವಧಿ

ರಾಜ್ಯ ಸಾಕ್ಷರತ ದರ (ಅಶೇ) ಶಿಶು ಮರಣ ಸಂಖ್ಯೆ ನಿರೀಕ್ಷಿತ
(ವರ್ಷಗಳಲ್ಲಿ)
1971 1981 1991 1971 1981 1991 1971 1981 1991
೧. ಆಂಧ್ರಪ್ರದೇಶ 24.6 29.9 45.1 106 566 79 44.1 53.1 58.6
      (56.0) (56.6) (47) (26.4) (48.9) (63.1)
೨. ಬಿಹಾರ 19.9 26.2 38.5     102 40.4    
          (24.0)      
೩. ಗುಜರಾತ 35.8 43.7 50.9 144 116 97 48.7 524 57.9
      (21.1) (30.1) (29) (44.1) (51.9) (64.4)
೪. ಹರಿಯಾಣ 26.9 36.1 55.3 72 101 87 47.0 54.8 60.3
      (87.2) (43.4) (39) (29.7) (56.2) (69.3)
೫. ಕರ್ನಾಟಕ 31.5 38.5 56.0 95 69 75 46.5 56.8 61.8
      (66.1) (71.7) (51) (31.8) (56.4) (71.3)
೬. ಕೇರಳ 60.4 70.4 90.6 58 37 26 60.2 65.5 71.0
      (100.0) (100.0) (100.00) (63.8) (74.4) (66.3)
೭. ಮಧ್ಯಪ್ರದೇಶ 22.1 27.9 43.5 135 142 119 9 49.0 54.5
      (29.4) (7.1) (7.0) (35.9) (46.4) (56.6)
೮. ಮಹಾರಾಷ್ಟ್ರ 39.2 47.2 63.1 105 79 66 49.0 56.3 61.8
      (56.9) (62.8) (60.0) (40.3) (56.7) (69.6)
೯. ಒರಿಸ್ಸಾ 26.2 34.2 48.6 127 135 126 44.8 49.1 54.6
      (36.7) (13.3) (0.0) (31.5) (45.4) (60.1)
೧೦. ಪಂಜಾಬ್ 33.7 40.9 57.1 102 81 62 49.4 60.5 66.0
      (59.6) (61.1) (64.0) (41.0) (68.7) (80.4)
೧೧. ರಾಜಸ್ಥಾನ್ 19.1 24.4 38.8 121 108 103 50.5 51.9 57.4
      (42.2) (37.2) (23.0) (47.2) (49.2) (64.0)
೧೨. ತಮಿಳುನಾಡು 39.5
  1. 8
63.7 113 91 76 43.4 53.4 58.9
      (49.5) (52.2) (50.0) (25.4) (50.5) (63.4)
೬೩. ಉತ್ತರ ಪ್ರದೇಶ 21.8 27.2 41.7 167 150 126 39.3 46.2 51.7
      (0.0) (0.0) (0.0) (20.8) (36.2) (51.6)
೧೪. ಪಶ್ಚಿಮ ಬಂಗಾಳ 33.2 40.9 57.7 72 47.1
    (54)            
ಭಾರತದ ಒಟ್ಟು 29.5 36.2 52.1 129 110 95 45.6 52.3 57.8
      (34.9) (35.4) (31) (34.1) (50.3) (63.7)

ಸೂಚನೆ : ಆವರಣದೊಳಗೆ ಕೊಟ್ಟಿರುವ ಸಂಖ್ಯೆಗಳು ಮೂಲ ಪಠ್ಯದಲ್ಲಿ ನೀಡಿದ ಲೆಕ್ಕಾಚಾರ ವಿವರಣೆ ಸೂಚನೆಯಂತೆ.

ಮೂಲ : ೧. ಭಾರತದ ಜನಗಣತಿ

೨. ಸ್ಯಾಂಪಲ್ ರಿಜಸ್ಟ್ರೇಷನ್ ಬುಲಿಟನ್, ಡಿಸೆಂಬರ್ ೧೯೮೮, ವಾಲ್ಯೂಮ್ ೨೨

೩. ಸಿ.ಎಂ.ಐ.ಇ. ವಾಲ್ಯೂಮ್ ೨, ಸೆಂಪ್ಟೆಂಬರ್ ೧೯೮೮

೪. ತಾತ್ಕಾಲಿಕ ಜನಸಂಖ್ಯಾ ಪಟ್ಟಿ – ೧೯೯೧ರ ೧ನೇ ಪೇಪರ್

ಕೋಷ್ಟಕ ೨ – ಭೌತಿಕ ಜೀವನ ಗುಣಮಟ್ಟ ಸೂಚಿ

  ರಾಜ್ಯಗಳು ೧೯೭೧ ಸ್ಥಾನ ೧೯೮೧ ಸ್ಥಾನ ೧೯೯೧ ಸ್ಥಾನ
೧. ಆಂಧ್ರಪ್ರದೇಶ 35.66 8 37.65 8 51.70 7
೨. ಬಿಹಾರ್
೩. ಗುಜರಾತ 33.66 9 41.90 7 51.40 8
೪. ಹರಿಯಾಣ 47.93 2 45.25 6 54.50 6
೫. ಕರ್ನಾಟಕ 43.14 5 55.52 4 59.40 4
೫. ಕರ್ನಾಟಕ 43.14 5 55.52 4 59.40 4
೬. ಕೇರಳ 74.74 1 81.61 1 92.50 1
೭. ಮಧ್ಯಪ್ರದೇಶ 29.15 11 27.12 11 36.40 10
೮. ಮಹಾರಾಷ್ಟ್ರ 45.46 3 55.56 3 64.20 3
೯. ಒರಿಸ್ಸಾ 31.46 10 30.98 10 36.20 11
೧೦. ಪಂಜಾಬ್ 44.76 4 56.89 9 41.90 9
೧೧. ರಾಜಸ್ಥಾನ 36.16 7 36.93 9 41.90 9
೧೨. ತಮಿಳುನಾಡು 38.12 6 49.82 5 59.00 5
೧೩. ಉತ್ತರಪ್ರದೇಶ 14.19 12 25.97 12 13.10 12
೧೪. ಪಶ್ಚಿಮ ಬಂಗಾಳ
  ಒಟ್ಟು 32.82   40.71   48.90  

 

ಕೋಷ್ಟಕ ೩ – ೧೯೮೬-೮೯ರ ರಾಜ್ಯಾವಾರು ಯೋಜನಾ ಅಂದಾಜು ವೆಚ್ಚ

  ರಾಜ್ಯ ಶಿಕ್ಷಣ ವೈದ್ಯಕೀಯ ಪೌಷ್ಠಿಕ ಸಮಾಜ ರಕ್ಷಣೆ ಮತ್ತು ಕಲ್ಯಾಣ ಒಟ್ಟು ಒಟ್ಟು
೧. ಆಂಧ್ರಪ್ರದೇಶ 77937 27751 1014 5954 6968 424572
(18.4) (6.5) (0.2) (1.4) (1.6)  
೨. ಬಿಹಾರ್ 84404 19557 6402 6402 321064
(26.3) (6.1)   (2.0) (2.0)  
೩. ಗುಜರಾಜ 68947 20796 6769 1678 8447 336240
(20.5) (60.2) (2.0) (0.5) (2.5)  
೪. ಹರಿಯಾಣ 26621 7016 835 10352 11187 144294
(18.4) (4.9) (0.6) (7.2) (7.8)  
೫. ಕರ್ನಾಟಕ 63937 20724 5540 10373 15913 300229
(21.3) (6.9) (1.8) (3.5) (5.3)  
೬. ಕೇರಳ 57944 15087 499 6111 6610 200100
(28.1) (7.3) (0.2) (3.0) (3.2)  
೭. ಮಧ್ಯಪ್ರದೇಶ 63941 23807 1376 4093 5469 361762
(17.7) (6.6) (0.4) (1.1) (1.5)  
೮. ಮಹಾರಾಷ್ಟ್ರ 128265 37798 3318 8483 11801 654065
(19.6) (5.8) (0.5) (1.3) (1.8)  
೯. ಒರಿಸ್ಸಾ 33927 10982 1019 1979 2998 165872
(20.5) (6.6) (0.6) (1.2) (1.8)  
೧೦. ಪಂಜಾಬ್ 38801 12308 270 2948 3218 186748
(20.8) (6.6) (0.7) (1.6) (1.7)  
೧೧. ರಾಜಸ್ಥಾನ 64422 17890 1934 1508 3442 257072
(21.2) (7.0) (0.7) (0.6) (1.3)  
೧೨. ತಮಿಳುನಾಡು 78632 26068 9058 15627 24685 376304
(20.9) (6.9) (2.4) (4.2) (6.6)  
೧೩. ಉತ್ತರಪ್ರದೇಶ 127070 46595 7459 7459 625676
(20.3) (7.4)   (1.2) (1.2)  
೧೪. ಪಶ್ಚಿಮ ಬಂಗಾಳ 85037 27933 151 4146 4297 347463
(24.5) (8.0) (0.04) (1.2) 1.2)  
ಎಲ್ಲಾ ರಾಜ್ಯಗಳು 1094259 347741 34883 96990 131873 5522783
(19.8) (6.3) (0.6) (1.8) (2.4)  

ಮೂಲ : ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಕಟಣೆ : ೧೯೯೧ ಏಪ್ರಿಲ್ ಮತ್ತು ಮೂಲ ಅಂಕಿ ಸಂಖ್ಯೆಗಳು. ಭಾರತೀಯ ಆರ್ಥಿಕತೆ ಪ್ರಕಟಣೆ ೧೧ (ರಾಜ್ಯಗಳಿಗೆ ಸಂಬಂಧಿಸಿ, ಆವರಣದ ಒಳಗೆ ನೀಡಿರುವ ಸಂಖ್ಯೆಗಳು ಒಟ್ಟು ಯೋಜನಾ ವೆಚ್ಚದ ಶೇಕಡಾವಾರು ಅನುಕ್ರಮವಾಗಿ).

ಕೋಷ್ಟಕ – ೪
ತಲಾ ಯೋಜನಾ ವೆಚ್ಚ – ವಾರ್ಷಿಕ ಯೋಜನೆ (೧೯೮೮-೮೯)

ರಾಜ್ಯ ಒಟ್ಟು ಯೋಜನೆ (ವಾರ್ಷಿಕ ಯೋಜನೆ ೮೮-೮೯) ಶಿಕ್ಷಣ ಆರೋಗ್ಯ ಪೌಷ್ಠಿಕ ಮತ್ತು ಸಮಾಜ ಪೌಷ್ಠಿಕ ಕಲ್ಯಾಣ ಸ.ಕ. ಒಟ್ಟು
೧. ಆಂಧ್ರಪ್ರದೇಶ 683.69 125.50 44.69 1.63 9.59 11.22
೨. ಬಿಹಾರ್ 387.29 101.81 23.59 7.72 7.72
೩. ಗುಜರಾತ 846.95 176.67 52.38 17.05 40.23 21.26
೪. ಹರಿಯಾಣ 913.25 168.49 44.41 5.28 66.66 71.94
೫. ಕರ್ನಾಟಕ 670.15 142.72 46.26 12.37 23.15 35.53
೬. ಕೇರಳ 703.41 197.76 51.49 1.70 20.86 22.56
೭. ಮಧ್ಯಪ್ರದೇಶ 585.38 103.46 38.52 2.23 6.62 8.85
೮. ಮಹಾರಾಷ್ಟ್ರ 893.52 175.23 51.64 4.53 11.59 16.12
೯. ಒರಿಸ್ಸಾ 545.63 111.60 36.13 3.35 6.51 9.86
೧೦. ಪಂಜಾಬ್ 962.62 200.01 63.44 1.39 15.20 16.59
೧೧. ರಾಜಸ್ಥಾನ 606.30 128.35 42.19 4.56 3.57 8.12
೧೨. ತಮಿಳುನಾಡು 685.44 143.23 47.48 16.50 28.48 44.96
೧೩. ಉತ್ತರಪ್ರದೇಶ 477.98 97.07 95.70 5.70 5.70
೧೪. ಪಶ್ಚಿಮ ಬಂಗಾಳ 545.47 133.50 43.85 0.24 6.51 6.75
  ಒಟ್ಟು 684.53 135.63 43.10 4.32 12.02 16.35

 

ಕೋಷ್ಟಕ – ೫
ತಲಾ ಆದಾಯ (ಪ್ರಸಕ್ತ ದರಗಳಲ್ಲಿ) ಮತ್ತು ಬಡತನದ ಅನುಪಾತ

ರಾಜ್ಯ ತಲಾ ಆದಾಯ (ರೂ.) ಬಡತನದ ಅನುಪಾತ (ಶೇಕಡಾ)
೧೯೭೧ ೧೯೮೧ ೧೯೯೧ (೮೬-೮೭) ೧೯೭೨- ೭೩ ೧೯೭೭- ೭೮ ೧೯೮೩- ೮೪
೧. ಆಂಧ್ರಪ್ರದೇಶ 585 1358 2333 54.9 43.6 36.4
೨. ಗುಜರಾತ 829 1960 3223 41.1 38.9 24.3
೩. ಹರಿಯಾಣ 877 2351 3925 23.1 25.2 16.6
೪. ಕರ್ನಾಟಕ 641 1454 2486 50.5 50.8 35.0
೫. ಕೇರಳ 594 1377 2371 56.9 48.4 26.8
೬. ಮಧ್ಯಪ್ರದೇಶ 484 1183 2020 58.6 58.9 46.2
೭. ಮಹಾರಾಷ್ಟ್ರ 783 2233 3793 47.7 50.6 34.9
೮. ಒರಿಸ್ಸಾ 478 1101 1957 68.6 65.1 42.8
೯. ಪಂಜಾಬ್ 1070 2671 4719 21.5 16.4 13.8
೧೦. ತಮಿಳುನಾಡು 581 1324 2888 59.7 52.8 39.8
೧೨. ಉತ್ತರಪ್ರದೇಶ 486 1272 2146 52.8 49.7 45.3
  ಒಟ್ಟು 672 1627 2970 51.5 48.3 37.4

ಮೂಲ : ೧. ೧೯೫೦-೫೧ರಿಂದ ತಮಿಳುನಾಡಿನ ಅಭಿವೃದ್ಧಿ ಸೂಚಿಗಳು (ಕೈ ಬರಹದ ಪ್ರತಿ)

೨. ಆರ್ಥಿಕ ನಿಷ್ಕರ್ಷೆ, ತಮಿಳುನಾಡು ಸರ್ಕಾರ, ೧೯೮೮

ಕೋಷ್ಟಕ – ೬
ತಲಾ ಅಂದಾಜು ವೆಚ್ಚಗಳ ಪ್ರಕಾರದ ಸ್ಥಾನಗಳು ( ೧೯೮೮-೮೯) ಮತ್ತು ಭೌ.ಜೀ.ಗು.ಸೂ.

ರಾಜ್ಯ ಒಟ್ಟು ಯೋಜನೆ ಶಿಕ್ಷಣ ಆರೋಗ್ಯ ಪೌಷ್ಠಿಕ ಸಮಾಜ ಕಲ್ಯಾಣ ಭಾಜೀ ಗುಸು ೧೯೯೧
೧. ಆಂಧ್ರಪ್ರದೇಶ 7 10 7 10 7 7
೨. ಬಿಹಾರ್ 14 13 14 8
೩. ಗುಜರಾತ 4 3 2 1 12 8
೪. ಹರಿಯಾಣ 2 5 8 4 1 6
೫. ಕರ್ನಾಟಕ 8 7 6 3 3 4
೬. ಕೇರಳ 5 2 4 9 4 1
೭. ಮಧ್ಯಪ್ರದೇಶ 10 12 11 8 9 10
೮. ಮಹಾರಾಷ್ಟ್ರ 3 4 3 6 6 3
೯. ಒರಿಸ್ಸಾ 11 11 12 7 10 11
೧೦. ಪಂಜಾಬ್ 1 1 1 11 5 2
೧೧. ರಾಜಸ್ಥಾನ 9 8 10 5 13 9
೧೨. ತಮಿಳುನಾಡು 6 6 5 2 2 5
೧೩. ಉತ್ತರಪ್ರದೇಶ 13 14 13 12 11 12
೧೪. ಪಶ್ಚಿಮ ಬಂಗಾಳ 13 14 13 12 11 12

 

ಕೋಷ್ಟಕ – ೭
ಜಿಲ್ಲಾವಾರು ಸಾಕ್ಷರತಾ ದರ (ಶೇಕಡಾವಾರು) ಕರ್ನಾಟಕ

ಕ್ರ.ಸಂ ಜಿಲ್ಲೆಯ ಹೆಸರು 1971 1981 1991
೧. ಬೆಂಗಳೂರು (ಗ್ರಾಮೀಣ) 47.72 51.32 50.17
೨. ಬೆಂಗಳೂರು     76.27
೩. ಬೆಳಗಾಂ 30.73 36.64 53.00
೪. ಬಳ್ಳಾರಿ 25.12 30.64 45.57
೫. ಬೀದರ್ 20.02 26.44 45.11
೬. ಬಿಜಾಪುರ 27.48 31.96 55.13
೭. ಚಿಕ್ಕಮಗಳೂರು 34.93 43.50 61.05
೮. ಚಿತ್ರದುರ್ಗ 31.45 38.25 55.48
೯. ದಕ್ಷಿಣ ಕನ್ನಡ 43.45 53.47 75.86
೧೦. ಧಾರವಾಡ 38.51 42.36 58.68
೧೧. ಗುಲ್ಬರ್ಗ 18.74 24.94 38.54
೧೨. ಹಾಸನ 30.56 37.49 56.85
೧೩. ಕೊಡಗು 44.30 50.15 68.35
೧೪. ಕೋಲಾರ 27.06 33.57 50.45
೧೫. ಮಂಡ್ಯ 22.51 30.40 48.15
೧೬. ಮೈಸೂರು 25.62 31.34 47.32
೧೭. ಮೈಸೂರು 25.62 31.34 47.32
೧೮. ಶಿವಮೊಗ್ಗ 36.61 44.44 61.53
೧೯. ತುಮಕೂರು 29.36 36.92 54.48
೨೦. ಉತ್ತರ ಕನ್ನಡ 40.65 48.35 66.73
ಕರ್ನಾಟಕ ರಾಜ್ಯ 31.52 38.46 56.04

(೦-೬)ವಯೋಗುಂಪಿನ ಜನಸಂಖ್ಯೆ ಹೊರತುಪಡಿಸಿ

ಕೋಷ್ಟಕ – ೮
ಜಿಲ್ಲಾವಾರು ತಲಾ ಆದಾಯ (ಪ್ರಸಕ್ತ ದರಗಳಲ್ಲಿ) ಕರ್ನಾಟಕ

ಕ್ರ.ಸಂ. ಜಿಲ್ಲೆಯ ಹೆಸರು (ರೂಪಾಯಿಗಳು)
1970-71 1980-81 1990-91
೧. ಬೆಂಗಳೂರು 699 2114 7164
೨. ಬೆಳಗಾಂ 559 1407 4575
೩. ಬಳ್ಳಾರಿ 797 1586 4478
೪. ಬೀದರ್ 503 1335 3197
೫. ಬಿಜಾಪುರ 479 977 3765
೬. ಚಿಕ್ಕಮಗಳೂರು 1176 1865 6655
೭. ಚಿತ್ರದುರ್ಗ 674 1628 4088
೮. ದಕ್ಷಿಣ ಕನ್ನಡ 786 1704 5682
೯. ಧಾರವಾಡ 586 1289 3705
೧೦. ಗುಲ್ಬರ್ಗ 622 1386 4038
೧೧. ಹಾಸನ 674 1385 3884
೧೨. ಕೊಡಗು 1851 3079 10447
೧೩. ಕೋಲಾರ 481 862 3387
೧೪. ಮಂಡ್ಯ 607 1599 3924
೧೫. ಮೈಸೂರು 742 1466 4305
೧೬. ರಾಯಚೂರು 751 1452 4538
೧೭. ಶಿವಮೊಗ್ಗ 968 1810 4531
೧೮. ತುಮಕೂರು 514 1179 3681
೧೯. ಉತ್ತರ ಕನ್ನಡ 869 1673 4941
  ಕರ್ನಾಟಕ ರಾಜ್ಯ 685 1528 4696

ಕೋಷ್ಟಕ – ೯
ಗ್ರಾಮೀಣ ಮತ್ತು ನಗರ ಪ್ರದೇಶ ಸಂಬಂಧ
ಶಿಶು ಮರಣ ಸಂಖ್ಯೆ (ಕರ್ನಾಟಕ ರಾಜ್ಯ)

ವರ್ಷ ಗ್ರಾಮೀಣ ನಗರ ಜಂಟಿ
1970 101.0 73.2 ಮಾಹಿತಿ ಇಲ್ಲ
1971 105 54 95
1976 99 60 89
1977 89 64 83
1978 90 58 82
1979 94 51 83
1980 79 45 71
1981 77 45 69
1982 71 47 65
1983 80 41 69
1984 84 43 74
1985 80 41 69
1986 82 47 73
1987 86 41 75
1988 83 46 74
1989 89 53 80
1990 80 39 70
1991 87 47 77

ಶಿಶು ಮರಣ ಸಂಖ್ಯೆ : ವಾರ್ಷಿಕ ಜೀವಂತ ಜನನ ಸಂಖ್ಯೆಗೆ ಒಂದು ವರ್ಷದ ಒಳಗಿನ ಮಕ್ಕಳ ಮರಣ ಸಂಖ್ಯೆ