ಶಾಸನದ ಸಿದ್ಧತೆ, ಹೊರರೂಪ, ಒಕ್ಕಣೆ, ಮಾಧ್ಯಮ ಮೊದಲಾದವು ಗಂಭೀರ ಅಧ್ಯಯನದ ವಿಷಯಗಳು.

ವಸ್ತುಮಾಧ್ಯಮ ಅಥವಾ ಭಿತ್ತಿವೈವಿಧ್ಯವನ್ನು ನಿದರ್ಶನಗಳೊಂದಿಗೆ ವಿಶದಪಡಿಸುವುದು: ಶಿಲೆ (ಪ್ರಭೇದಗಳೊಂದಿಗೆ), ಲೋಹ (ತಾಮ್ರ ಇ.) ತಾಳೆಗರಿ ಇ.

ಶಾಸನವಿಷಯಾನುಗುಣವಾಗಿ ಪ್ರಭೇದಗಳು. ಉದಾಹರಣೆಗೆ ದಾನಶಾಸನ (ಬ್ರಹ್ಮದೇಯ, ದೇವದೇಯ), ಪ್ರಶಸ್ತಿಶಾಸನ, ವೀರಗಲ್ಲು ಮಾಸ್ತಿಗಲ್ಲು ಕರುಗಲ್ಲು ನಿಸಿದಿಗಲ್ಲು, ರಾಜಾಜ್ಞೆಗಳು, ಧರ್ಮಲಿಪಿಗಳು (ಆಶೋಕ), ಆತ್ಮಬಲಿ ಸ್ಮಾರಕಶಿಲೆ, ಯಂತ್ರದ ಕಲ್ಲು, ಗಡಿಗಲ್ಲು, ಶಾಸನಸ್ಥ ಬಂಧಚಿತ್ರಶಿಲೆಗಳು, ಜಯಪತ್ರ ಇತ್ಯಾದಿಗಳ ಪ್ರತ್ಯೇಕ ಲಕ್ಷಣ ಸ್ವರೂಪಗಳ ವಿವರಣೆ. ಇವುಗಳಲ್ಲಿ ಒಂದೊಂದರ ಸ್ವರೂಪವನ್ನೂ ನಿದರ್ಶನಗಳೊಂದಿಗೆ ವಿಶದಪಡಿಸುವುದು.

ಶಿಲೆ ಮತ್ತು ಲೋಹಶಾಸನಗಳ ಸಿದ್ಧತೆ: ಸಿದ್ಧತೆಯಲ್ಲಿ ಕವಿ, ಲಿಪಿಕಾರ, ಕೊರೆಕಾರ(ಶಿಲ್ಪಿ) ಇವರ ಪಾತ್ರ. ಇಲ್ಲಿಯ ಕಾರ್ಯವಿಧಾನ ಮತ್ತು ದೌರ್ಬಲ್ಯಗಳು, ಸಂದಿಗ್ಧತೆಗಳು.

ಶಾಸನಗಳ ಸ್ಥಾಪನೆಗೆ ಸ್ಥಳಸನ್ನಿವೇಶಗಳ ಆಯ್ಕೆ. ಅದರ ಉದ್ದೇಶ, ಶಾಸನಗಳ ನಾಶದ ತಡೆಗೆ ಕ್ರಮಗಳು, ನಕಲುಗಳ ನಿರ್ಮಾಣ ಮತ್ತು ಅದಕ್ಕೆ ಕಾರಣಗಳು.

ನೈಜ ಮತ್ತು ಕೃತಕಶಾಸನಗಳ ನಿರ್ಮಿತಿ. ಕೃತಕಶಾಸನಗಳ ನಿರ್ಮಿತಿಗೆ ಕಾರಣಗಳು. ಅವನ್ನು ಗುರುತಿಸುವ ಬಗೆ. ಈ ವಿಷಯದಲ್ಲಿ ಫ್ಲೀಟ್ ಮತ್ತು ರೈಸ್ ಅವರ ನಡುವೆ ವಾದವಿವಾದಗಳು.

ಶಾಸನವಸ್ತುವಿನ ಒಕ್ಕಣೆಯ ಪರಿಕ್ರಮ: ದಾನಶಾಸನ, ಪ್ರಶಸ್ತಿಶಾಸನ, ವೀರಗಲ್ಲು ಇತ್ಯಾದಿ. ಶಾಸನಪ್ರಭೇದಗಳಲ್ಲಿ ಒಕ್ಕಣೆಯ ಸಂಪ್ರದಾಯಬದ್ಧ ಪರಿಕ್ರಮ ಹೇಗೆ? ಪ್ರಶಸ್ತಿ ಶಾಸನಗಳ ಸ್ವರೂಪವೇನು ಮತ್ತು ಕಾಲಾವಧಿಯ ವ್ಯಾಪ್ತಿ ಎಲ್ಲಿಯ ವರೆಗೆ? ವೀರಗಲ್ಲು ಮಾಸ್ತಿಕಲ್ಲುಗಳಲ್ಲಿ ಬರಹ ಮತ್ತು ಶಿಲ್ಪಕೃತಿಗಳ ವಿನ್ಯಾಸ, ಅರ್ಥ ಆಶಯಗಳ ವಿವರಣೆ;ಹಾಗೆಯೇ ಇತರ ಶಾಸನಗಳ ಶಿಲ್ಪಕೃತಿಗಳ ವಿಚಾರ.

ಶಾಸನಗಳಲ್ಲಿ ಕವಿ ಲಿಪಿಕಾರರನ್ನು ಗುರುತಿಸುವಲ್ಲಿಯ ಸಂದಿಗ್ಧತೆ ಮತ್ತು ಪರಿಹಾರ (ಬರೆದಂ, ಪೇಱ್ದಂ ಇ.) ಕೊನೆಯ ಒಪ್ಪ ಅಥವಾ ಅಂಕಿತದ ವಿಶೇಷತೆಗಳೇನು?