ಪದ್ಯ ಪಾಠ ೨ – ಸ್ವಾತಂತ್ರ್ಯದ ದಿನ

ಶಂಕರ …. ಅಮ್ಮಾ, ನಾನು ಮತ್ತು ಗಂಗೆ ನಾಳೆ ನಸುಕಿನಲ್ಲಿಯೇ ಶಾಲೆಗೆ ಹೋಗಬೇಕು.
ತಾಯಿ …. ಏಕೆ?
ಶಂಕರ …. ನಾಳೆ ನಮ್ಮ ದೇಶಕ್ಕೆ ದೊಡ್ಡ ಹಬ್ಬ. ಅದು ಸ್ವಾತಂತ್ರ್ಯದ ಹಬ್ಬ.
ತಾಯಿ …. ಹೌದು. ಆದರೆ ನೀವು ಅಷ್ಟು ನಸುಕಿನಲ್ಲಿ ಏಕೆ ಹೋಗಬೇಕು?
ಶಂಕರ …. ನಾವು ಬೇಗನೆ ಹೋಗಿ ಧ್ವಜದ ಕಟ್ಟೆಯನ್ನು ಸಿಂಗರಿಸಬೇಕು. ಅದಕ್ಕಾಗಿ ನಮ್ಮ ತೋಟದ ಹೂ ಒಯ್ಯಬೇಕು.
ತಾಯಿ …. ಈ ಕೆಲಸ ಮಾಡಲು ನಿಮ್ಮ ಶಾಲೆಯಲ್ಲಿ ದೊಡ್ಡ ಹುಡುಗರಿಲ್ಲವೆ?
ಶಂಕರ …. ಇದ್ದಾರೆ. ಅವರಿಗೂ ಬೇರೆ ಬೇರೆ ಕೆಲಸಗಳಿವೆ. ಮೂರನೆಯ ವರ್ಗದವರು ಶಾಲೆಯ ಬಯಲನ್ನು ಸ್ವಚ್ಛ ಮಾಡುವರು. ನಾಲ್ಕನೆಯ ವರ್ಗದವರು ತಳಿರು ತೋರಣ ಕಟ್ಟಿ ಸಿಂಗರಿಸಿಸುವರು. ಧ್ವಜ ಏರಿಸುವ ಏರ್ಪಾಟು ಮಾಡುವರು. ನಾವು ಎರಡನೆಯ ವರ್ಗದವರು ಧ್ವಜದ ಕಟ್ಟೆಯ ಸುತ್ತಲು ಗೆರೆ ಹಾಕುವೆವು. ಅದರಲ್ಲಿ ಶಾಲೆಯ ಮಕ್ಕಳು ನಿಲ್ಲುವರು. ಧ್ವಜದ ಕಂಬದ ಸುತ್ತಲು ಗಂಗೆ ಮತ್ತು ಅವಳ ಗೆಳತಿಯರು ರಂಗವಲ್ಲಿ ಹಾಕಿ ಸಿಂಗರಿಸುವರು. ಹೂಗಳನ್ನು ಇಟ್ಟು “ಜೈ ಹಿಂದ್‌” ಬೆರೆಯುವರು.
ತಾಯಿ …. ಈ ಎಲ್ಲ ಕೆಲಸಗಳನ್ನು ನಿಮಗೆ ಯಾರು ಹಂಚಿಕೊಟ್ಟರು?
ಶಂಕರ …. ನಾವೇ ಹಂಚಿಕೊಂಡೆವು
ತಾಯಿ …. ನೀವೇ ಹಂಚಿಕೊಂಡಿರಾ? ಅದು ಹೇಗೆ?
ಶಂಕರ …. ಹೌದಮ್ಮ , ನಾವೇ ಹಂಚಿಕೊಂಡೆವು. ನಮ್ಮ ಎಲ್ಲ ಗುರುಗಳು ಮತ್ತು ವರ್ಗದ ಹಿರೇಮಣಿಗಳು ಒಂದು ಕಡೆ ಸೇರಿದೆವು. ಕೆಲಸ ಹಂಚಿಕೊಂಡೆವು.
ತಾಯಿ …. ಬಹಳ ಸಂತೋಷ ನಾಳೆ ದಿನ ಮತ್ತೆ ಏನೇನು ಮಾಡುವಿರಿ?
ಶಂಕರ …. ಈ ಎಲ್ಲ ಕೆಲಸಗಳಾದ ಮೇಲೆ ಕೈಕಾಲು ತೊಳೆದುಕೊಳ್ಳುವೆವು. ನಮ್ಮ ಗುರುಗಳು ಧ್ವಜ ಏರಿಸುವರು. ನಾವು ಧ್ವಜಕ್ಕೆ ವಂದಿಸುವೆವು. ಆ ಮೇಲೆ ರಾಷ್ಟ್ರಗೀತೆ ಹಾಡುವೆವು.
ತಾಯಿ….. ಬಹಳ ಸಂತೋಷ ನಾಳೆ ನಿಮ್ಮನ್ನು ನಸುಕಿನಲಿಯೇ ಎಬ್ಬಿಸುವೆ. ನಿಮ್ಮ ಶಾಲೆ ಬಲು ಚೆನ್ನಾಗಿದೆ. ಸ್ವಾತಂತ್ರ್ಯದ ಹಬ್ಬವನ್ನು ಸಡಗರದಿಂದ ಆಚರಿಸಿ.

ಕೃಪೆ : ೧೯೫೦ರ ಕನ್ನಡ ಎರಡನೆಯ ಪುಸ್ತಕದಿಂದ ಆರಿಸಿದೆ.

. ಕೊಟ್ಟಿರುವ ಪದಗಳನ್ನು ಓದಿ Readind practice

ಸ್ವಾತಂತ್ರ್ಯ, ರಂಗವಲ್ಲಿ, ಧ್ವಜ, ಸಗಣಿ, ರಾಷ್ಟ್ರ, ಕಿರೀಟ, ನಸುಕು, ನಾಳೆ, ತೋರಣ, ಗುರುಗಳು

Drills

I Repetitions drills

Model : ಅಧ್ಯಾಪಕ : ಎಲ್ಲರೂ ರಾಷ್ಟ್ರಗೀತೆ ಕಲಿಯಿರಿ?

ವಿದ್ಯಾರ್ಥಿ :
ಅಧ್ಯಾಪಕ : ಹೆಣ್ಣು ಮಕ್ಕಳು ರಂಗವಲ್ಲಿ ಹಾಕಿ ಸಿಂಗರಿಸುವರು
ವಿದ್ಯಾರ್ಥಿ :
ಅಧ್ಯಾಪಕ : ನಿಮ್ಮ ಊರಿನ ಶಾಲೆ ಬಹಳ ಚೆನ್ನಾಗಿದೆ.
ವಿದ್ಯಾರ್ಥಿ :
ಅಧ್ಯಾಪಕ : ನಾವು ಧ್ವಜಕ್ಕೆ ವಂದಿಸುವೆವು.
ವಿದ್ಯಾರ್ಥಿ :

II Substitution Drill – Single subtitution

Model : ನಾಳೆ ನಮ್ಮ ದೇಶಕ್ಕೆ ದೊಡ್ಡ ಮದುವೆ
ನಾಳೆ ನಮ್ಮ ದೇಶಕ್ಕೆ ದೊಡ್ಡ ಹಬ್ಬ

೧. ನಾನು ಮತ್ತು ಗಂಗೆ ನಾಳೆ ನಸುಕಿನಲ್ಲಿಯೇ ಶಾಲೆಗೆ ಕೂರಬೇಕು
………………………………..(ಹೋಗಬೇಕು)
೨. ನಾವು ಬೇಗನೆ ಹೋಗಿ ಧ್ವಜದ ಕಟ್ಟೆಯನ್ನು ಕಟ್ಟಬೇಕು
………………………………..(ಸಿಂಗರಿಸಬೇಕು)
೩. ಹೂವುಗಳನ್ನು ಇಟ್ಟು ‘ಜೈ ಹಿಂದ್‌’ ಎಂದು ಕೂಗುವರು
………………………………..(ಬರೆಯುವರು)
೪. ಗಡಿಯಾರದಲ್ಲಿ ಒಂದು ಚಕ್ರ ಸುತ್ತ ತಿರುಗುತಿದೆ
………………………………..(ಇತ್ತ ಅತ್ತ)

III Transformation drill

Model : ಧ್ವಜದ ಕಂಬದ ಸುತ್ತಲು ಗಂಗೆ ಮತ್ತು ಅವಳ ಗೆಳೆತಿಯರು ರಂಗವಲ್ಲಿ ಹಾಕಿ ಸಿಂಗರಿಸುವರು. (ಯಾರು)
ಧ್ವಜದ ಕಂಬದ ಸುತ್ತಲು ಯಾರು ರಂಗವಲ್ಲಿ ಹಾಕಿ ಸಿಂಗರಿಸುವರು.

೧. ಗುರುಗಳು ಧ್ವಜ ಏರಿಸುವರು
………………………………..(ಏನನ್ನು)
೨. ಗಂಗೆ ನಾಳೆ ನಸುಕಿನಲ್ಲಿಯೇ ಶಾಲೆಗೆ ಹೋಗಬೇಕು.
…………………………………(ಎಲ್ಲಿಗೆ)
೩. ನಾಲ್ಕನೆಯ ವರ್ಗದವರು ತಳಿರು ತೋರಣ ಕಟ್ಟಿ ಸಿಂಗರಿಸುವರು.
………………………………(ಯಾವ)

IV Response drill

೧. ಗುರುಗಳು ಏನನ್ನು ಏರಿಸುವರು
……………………………………..
೨. ಗಂಗೆ ನಾಳೆ ನಸುಕಿನಲ್ಲಿಯೇ ಶಾಲೆಗೆ ಹೋಗಬೇಕು.
………………………………….
೩. ಯಾವ ವರ್ಗದವರು ತಳಿರು ತೋರಣ ಕಟ್ಟಿ ಸಿಂಗರಿಸುವರು.
………………………………………

 

EXERCISES

1. Fill ni the following blanks using the English

Model : ………..ಲೆ   (School)      ಶಾಲೆ
೧. ………. ಬ್ಬ    (Festival)        ……….
೨. ಸ್ವ………       (Clean)           ………
೩. ……..ಜ         (Flag)              ………
೪. ರಾ………       (Nation)          ……….
೫. ಗು……..        (Teacher)       ……….

2. Choose the appropriate letter from the pairs given and fill up the blanks according to the model

Model : ರಾ……….  ಸ್ಟ್ರ – ಷ್ಟ್ರ        ರಾಷ್ಟ್ರ

೧. …..ರೀಟ        ಖಿ – ಕಿ    ……..
೨. ….. ಬ್ಬ         ಹ – ಅ   …….
೩. ಸ್ವಾ …… ತ    ಘ – ಗ   ……
೪. …. ಜ            ದ್ವ – ಧ್ವ           ……
೫. ….. ಚರಿಸು     ಅ – ಅ   ……

3. Combine the following words according to the model

Model : ಸ್ವಾತಂತ್ರ್ಯ +ಉತ್ಸವ          ಸ್ವಾತಂತ್ರ್ಯೋತ್ಸವ
೧. ಧ್ವಜ + ಉತ್ಸವ         ……………..
೨. ಗೆಜ್ಜೆ + ಉತ್ಸವ          ……………..

4. Spilt the following sentences into two according to the model

Model : ನಾಳೆ ನಮ್ಮ ದೇಶಕ್ಕೆ ದೊಡ್ಡ ಸ್ವಾತಂತ್ರ್ಯದ ಹಬ್ಬ
ನಾಳೆ ನಮ್ಮ ದೇಶಕ್ಕೆ ದೊಡ್ಡ ಹಬ್ಬ, ಅದು ಸ್ವಾತಂತ್ರ್ಯದ ಹಬ್ಬ

೧. ನಾಲ್ಕನೆಯ ವರ್ಗದವರು ತಳಿರು ತೋರಣ ಕಟ್ಟಿ ಸಿಂಗರಿಸಿ ಧ್ವಜ ಏರಿಸುವ ಏರ್ಪಾಡು ಮಾಡುವರು.
೨. ನಾವು ಎರಡನೆಯ ವರ್ಗದವರು ಧ್ವಜದ ಕಟ್ಟೆಯ ಸುತ್ತಲು ಗೆರೆ ಹಾಕಿ ಅದರಲ್ಲಿ ಶಾಲೆಯ ಮಕ್ಕಳೆಲ್ಲ ನಿಲ್ಲುವರು.

5. Fill up the blanks using the words given below in the bracket

Model : ನಮ್ಮ ಗುರುಗಳು ಆಗಸ್ಟ್ ೧೫ರಂದು……………ಏರಿಸಿವರು.
(ಪಟ, ಧ್ವಜ, ಟೇಪ್
‍)

೧. ನಮ್ಮ ದೇಶದ ಸ್ವಾತಂತ್ರ್ಯದ ದಿನ …………… ಹಬ್ಬ
(ದೊಡ್ಡ, ಸಣ್ಣ, ಚಿಕ್ಕ)
೨. ನಾಲ್ಕನೆಯ ವರ್ಗದವರು ……….. ಏರಿಸುವ ಏರ್ಪಾಡು ಮಾಡುವರು.
(ಧ್ವಜ, ಕೀರಿಟ, ಪಟ)
೩. ಹೆಣ್ಣು ಮಕ್ಕಳು ………… ಹಾಕಿ ಸಿಂಗರಿಸುವರು.
(ರಂಗವಲ್ಲಿ, ಸಗಣಿ, ಚಿತ್ರ)

6. Make use of the follwing words in your own sentences

ಸ್ವಾತಂತ್ರ್ಯ, ಆಚರಿಸು, ವಂದಿಸು, ಹಾಡು, ಸಡಗರ

7. write answers to the follwing question

೧. ಶಂಕರ ಮತ್ತು ಗಂಗೆ ನಸುಕಿನಲ್ಲಿಯೇ ಏಳಬೇಕು ಎಂದು ಏಕೆ ಹೇಳಿದರು?
೨. ಶಾಲೆಯ ಬಯಲನ್ನು ಯಾರು ಸ್ವಚ್ಛ ಮಾಡುವರು?
೩. ತಳಿರು ತೋರಣ ಕಟ್ಟುವವರು ಯಾರು?
೪. ಹಿರೇಮಣಿಗಳು ಎಲ್ಲಿ ಸೇರಿದರು?
೫. ರಂಗವಲ್ಲಿ ಯಾರು ಹಾಕುವರು?
೬. ಯಾರು ಧ್ವಜ ಏರಿಸುವವರು?