ಗದ್ಯ ಪಾಠ ೫ – ಜೀಮೂತವಾಹನ

ಪರರ ಸಂಕಟ ನಿವಾರಣೆಗಾಗಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಮಹಾತ್ಮನು ಜೀಮೂತವಾಹನನು. ಇವನು ವಿದ್ಯಾಧರ ಚಕ್ರವರ್ತಿಯಾದ ಜೀಮೂತ ಕೇತುವಿನ ಮಗನು. ಮುಪ್ಪಿನ ದೊರೆಯು ಮಗನಿಗೆ ಪಟ್ಟಗಟ್ಟಿ ದೇವರ ಧ್ಯಾನ ಮಾಡಲು ಪತ್ನಿಯೊಡನೆ ಕಾಡಿಗೆ ಹೋದನು. ಅರಣ್ಯದಲ್ಲಿರುವ ವೃದ್ಧ ಮಾತಾಪಿತೃಗಳ ಸೇವೆ ಮಾಡುವುದು ರಾಜ್ಯ ಸುಖಕ್ಕಿಂತ ಹೆಚ್ಚೆಂದು ಜೀಮೂತವಾಹನನು ಬಾವಿಸಿದನು. ಜಾಣರಾದ ಮಂತ್ರಿಗಳಿಗೆ ರಾಜ್ಯಭಾರವನ್ನು ವಹಿಸಿ ತಾನೂ ಹಿರಿಯರಿದ್ದ ಅಡವಿಗೆ ಹೊರಟನು. ಮಿತ್ರನಾದ ಆತ್ರೇಯನೂ ಅವನನ್ನು ಹಿಂಬಾಲಿಸಿದನು.

ತಾಯಿ ತಂದೆಗಳ ಸೇವೆಯಲ್ಲಿದ್ದ ರಾಜಕುಮಾರನಿಗೆ ಅರಸುತನದ ಅರಿವೆ ಆಗಲಿಲ್ಲ. ಒಮ್ಮೆ ಆತ್ರೇಯನು “ಗೆಳೆಯ, ಬಹುದಿನ ಅರಣ್ಯದಲ್ಲಿ ಆಯಾಸ ಪಟ್ಟಿರುವೆ. ಅಲ್ಲದೆ ಪ್ರಜೆಗಳನ್ನು ಪಾಲಿಸುವುದು ನಿನ್ನ ಧರ್ಮವು. ಈಗ ರಾಜ್ಯಕ್ಕೆ ಹಿಂದಿರುಗು” ಎಂದನು. ಜೀಮೂತವಾಹನನು ನಕ್ಕು “ಹಿರಿಯರ ಸೇವೆಗಿಂತ ಸಿಂಹಾಸನ ನನಗೆ ಹಿರಿದಲ್ಲ. ನಿಪುಣರಾದ ಮಂತ್ರಿಗಳಿರುವಾಗ ಪ್ರಜೆಗಳೂ ಸುಖವಾಗಿರುತ್ತಾರೆ” ಎಂದನು. “ಹಗೆಯಾದ ಮತಂಗಾ ನಿನ್ನ ರಾಜ್ಯವನ್ನು ಆಕ್ರಮಿಸಿದರೆ”? ಎಂದನು. ಮಿತ್ರನು ಮತ್ತೆ ಪ್ರಶ್ನೆ ಮಾಡಿದನು. “ನಾನೇ ಅಲ್ಲಿದ್ದರೂ ಯುದ್ಧ ಮಾಡುವವನಲ್ಲ. ಪ್ರಜೆಗಳ ಪ್ರಾಣಹಾನಿಯನ್ನೂ, ನಾಗರಿಕತೆಯ ನಾಶವನ್ನೂ ಮಾಡುವ ಯುದ್ಧವನ್ನು ಯಾವ ಸುಸಂಸ್ಕೃತನೂ ಒಪ್ಪಲಾರನು. ಮತಂಗನು ಬಯಸಿದರೆ ನನ್ನ ರಾಜ್ಯವನ್ನೇ ಏಕೆ, ಪ್ರಾಣವನ್ನೂ ಕೊಡಲು ನಾನಾ ಸಿದ್ಧನಿದ್ದೇನೆ” ಎಂದು ಜೀಮೂತವಾಹನನು ಗೆಳೆಯನಿಗೆ ಹೇಳಿದನು.

ತಂದೆಯ ಬಯಕೆಯಂತೆ ಆಶ್ರಮಕ್ಕೆ ಪ್ರಶಾಂತವಾದ ಸ್ಥಳವನ್ನು ಹುಡುಕಲು ಜೀತಮೂತವಾಹನನು ಗೆಳೆಯನೊಂದಿಗೆ ಮಲಯ ಪರ್ವತಕ್ಕೆ ಹೋದನು. ಅಲ್ಲಿ ಮಧುರ ವೀಣಾಗಾನವೊಂದು ಅಲೆಯಲೆಯಾಗಿ ತೇಲಿ ಬಂತು. ಹತ್ತಿರದ ದೇವಾಲಯದಿಂದ ಬರುವ ಆ ಗಾನವನ್ನು ಕೇಳಿ ಪರವಶನಾದನು.

ಗೌರಿಯ ಗುಡಿಯಲ್ಲಿ ಸಿದ್ಧರಾಜನ ಮಗಳಾದ ಮಲಯವತಿಯು ವೀಣೆಯೊಂದಿಗೆ ಹಾಡುತ್ತ ದೇವಿಯನ್ನು ಪ್ರಾರ್ಥಿಸುತ್ತಿದ್ದಳು. ತಟ್ಟನೆ ಸಂಗೀತ ನಿಂತು ಮಾತನಾಡುವ ಶಬ್ಧ ಕೇಳಿಸಿತು.

ಒಂದನೆಯ ಧ್ವನಿ : ಇಷ್ಟು ಪ್ರಾರ್ಥಿಸಿದರೂ ದೇವಿಯು ನಿನಗೆ ಕರುಣೆ ತೋರಿಸಲಿಲ್ಲ!

ಮತ್ತೊಂದು ಧ್ವನಿ : ಹಾಗೆನ್ನಬೇಡ, ಚತುರಿಕೆ, ಬೆಳಗಿನ ಜಾವ ಕನಸಿನಲ್ಲಿ ಗೌರಿ ಪ್ರತ್ಯಕ್ಷಳಾಗಿ ವಿದ್ಯಾಧರ ಚಕ್ರವರ್ತಿಯು ನಿನಗೆ ತಕ್ಕವನೆಂದು ಇಂದೇ ವರವನ್ನು ಕೊಟ್ಟಿರುವಳು.

ಈ ಸಂಬಾಷಣೆಯನ್ನು ಕೇಳಿ ಆತ್ರೇಯನು ಗೆಳೆಯನನ್ನು ಬಲತ್ಕಾರವಾಗಿ ಒಳಕ್ಕೆ ಕರೆದುಕೊಂಡು ಹೋಗಿ “ಹೌದು! ಇದೋ ದೇವಿಯು ಕೊಟ್ಟ ವರ ಎಂದನು. ಈ ಸುಂದರನೇ ವಿದ್ಯಾಧರ ಚಕ್ರವರ್ತಿಯೆಂದು ತಿಳಿದು ಮಲಯವತಿ ನಾಚಿದಳು. ಅದೇ ಸಮಯದಲ್ಲಿ ಆಶ್ರಮದ ಗುರುಗಳು ಮಧ್ಯಾಹ್ನದ ವೇಳೆಗೆ ಪೂಜೆಗೆ ಮಲಯವತಿಯನ್ನು ಕರೆಯಲು ಶಿಷ್ಯನನ್ನು ಕಳಿಸಿದರು. ಎಲ್ಲರೂ ಗುಡಿಯಿಂದ ಹೊರಟುಹೋದರು.

ಸಿದ್ಧರ ಚಕ್ರವರ್ತಿ ವಿಶ್ವಾವಸುವು ಮಲಯ ಪರ್ವತಕ್ಕೆ ಬಂದಿದ್ದ. ವಿದ್ಯಾಧರ ಚಕ್ರವರ್ತಿಯ ವಿಷಯವನ್ನು ತಿಳಿದಿದ್ದನು. ಸದ್ಗುಣವಂತನೂ, ಸುಸಂಸ್ಕೃತನೂ ಸುಂದರನೂ ಆದ ಜೀಮೂತವಾಹನನೇ ತನ್ನ ಮಗಳಾದ ಮಲಯವತಿಗೆ ‘ತಕ್ಕ ವರ’ ಎಂದು ಯೋಚಿಸಿದನು. ಅದರಂತೆ ವಿಶ್ವಾವಸವು ತನ್ನ ಮಗನಾದ ಮಿತ್ರಾವಸುವನ್ನು ಜೀಮೂತವಾಹನನ ತಂದೆ ತಾಯಿಯರ ಬಳಿಗೆ ಮದುವೆಯ ಮಾತನಾಡಲು ಕಳಿಸಿದನು. ಹಿರಿಯರು ಸಂತೋಷದಿಂದ ಒಪ್ಪಿಗೆಯನ್ನು ಕೊಟ್ಟರು. ಮಲಯವತಿ ಜೀಮೂತವಾಹನ ಇವರ ವಿವಾಹವು ಸಿದ್ಧರಾಜನ ಅರಮನೆಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಒಂದು ದಿನ ಜೀಮೂತವಾಹನನು ಮಲಯವತಿಯ ಅಣ್ಣ ವಿಶ್ವಾವಸುವಿನೊಡನೆ ಸಮುದ್ರ ತೀರಕ್ಕೆ ಹೋಗಿದ್ದನು. “ಹತ್ತಿರದ ಗಿರಿಶಿಖರದಲ್ಲಿ ಕಾಣುವುದು ಹಿಮರಾಶಿಯೇ”? ಎಂದು ಕೇಳಿದನು. ಅದು ಸತ್ತ ನಾಗಗಳ ಎಲಬು ರಾಶಿ. ಗರುಡನು ನಾಗಲೋಕಕ್ಕೆ ನುಗ್ಗಿ ನೂರಾರು ನಾಗಗಳನ್ನು ಕೊಲ್ಲುತ್ತಿದ್ದ. ದಿನಕ್ಕೊಂದು ನಾಗವನ್ನು ಆಹಾರಕ್ಕಾಗಿ ಕಳಿಸುತ್ತೇನೆಂದು ನಾಗರಾಜ ಗರುಡನೊಡನೆ ಒಪ್ಪಂದ ಮಾಡಿಕೊಂಡ. ಈಗಲೂ ಗರುಡನು ಪ್ರತಿದಿನ ತಿನ್ನುತ್ತಾನೆ” ಎಂದು ಮಿತ್ರಾವಸು ಹೇಳಿದನು. ಜೀಮೂತವಾಹನ ಎದೆ ಕರಗಿ ಕಣ್ಣಿರಾಗಿ ಹರಿಯಿತು. ಅಷ್ಟರಲ್ಲಿ ಅವರನ್ನು ಕರೆಯಲು ಬಂದವರೊಂದಿಗೆ ಮಿತ್ರಾವಸುವನ್ನು ಕಳಿಸಿ ತಾನೊಬ್ಬನೇ ಅಲ್ಲಿ ಉಳಿದನು.

“ಮಗು ಶಂಖಚೂಡ, ನಿನ್ನ ಕೊಲೆಯನ್ನು ಕಂಡು ಹೇಗೆ ಸಹಿಸಲಿ”? ಎಂಬ ಸಂಕಟದ ಕೂಗನ್ನು ಕೇಳಿ ಜೀತಮೂತವಾಹನ ಅತ್ತ ಹೋದನು. ಅಲ್ಲಿ ಒಬ್ಬ ನಾಗನೆ ಜೊತೆಗೆ ಆಳುತ್ತಿರುವ ಮುದುಕಿ, ಕೆಂಪು ಬಟ್ಟೆಯನ್ನು ತರುವ ಸೇವಕ, ಇಷ್ಟು ಜನರಿದ್ದರು. ಸೇವಕನು ಶಂಖಚೂಡ, ಆರಸನ ಅಪ್ಪಣೆಯಾಗಿದೆ. ಗುರುತಿನ ಈ ಕೆಂಪು ಬಟ್ಟೆಯನ್ನುಟ್ಟುಕೋ. ಬೇಗ ನಡೆ, ಗರುಡ ಬರುವ ಹೊತ್ತಾಯಿತು” ಎಂದು ಹೆದರಿ ಓಡಿಹೋದನು.

“ಅಯ್ಯೋ ಮಗನೆ, ರಾಜನೇ ನಿನ್ನನ್ನು ಕೈಬಿಟ್ಟ ಮೇಲೆ ಯಾರು ಕಾಪಾಡುತ್ತಾರೆ. ಎಂದು ಗೋಳಿಟ್ಟಳು. “ಹೆದರಬೇಡ ತಾಯಿ ನಾನು ಕಾಪಾಡುತ್ತೇನೆ” ಎನ್ನುತ್ತ ಜೀಮೂತವಾಹನ ಎದುರಿಗೆ ಬಂದನು. ಕಂಗೆಟ್ಟ ಮುದುಕಿ ಗರುಡನೇ ಬಂದನೆಂದು ಭ್ರಮಿಸಿ ಸೀರೆಯ ಸೆರಗಿನಿಂದ ಮಗನನ್ನು ಮುಚ್ಚಿಕೊಂಡು “ಗರುಡದೇವ, ನಾನು ನಿನ್ನ ಆಹಾರ. ನನ್ನನ್ನೇ ತಿನ್ನು” ಎಂದು ಕಿರಿಚಿಕೊಂಡಳು. “ತಾಯಿ ಹೆದರಬೇಡ. ನಿನ್ನ ಮಗನನ್ನು ಉಳಿಸುತ್ತೇನೆ. ಆ ಕೆಂಪು ಬಟ್ಟೆಯನ್ನು ಕೊಡು. ಹೊದ್ದುಕೊಂಡು ವಧ್ಯಸ್ಥಾನಕ್ಕೆ ಹೋಗುತ್ತೇನೆ. ಎಂದು ಜೀಮೂತವಾಹನ ಕೇಳಿದನು. “ಅಲ್ಪನಿಗಾಗಿ ಮಹಾತ್ಮನನ್ನು ಬಲಿಕೊಟ್ಟು ವಂಶಕ್ಕೆ ಕಳಂಕ ತರಬೇಕೆ? ಖಂಡಿತ ಸಾಧ್ಯವಿಲ್ಲ” ಎಂದು ಶಂಖಚೂಡನು ಏನು ಮಾಡಿದರೂ ಒಪ್ಪಲಿಲ್ಲ. ಶಂಖಚೂಡ ತಾಯಿಯೊಂದಿಗೆ ಸಮೀಪದ ಗೋಕರ್ಣದ ದೇವಾಲಯಕ್ಕೆ ಹೋದನು.

“ಗರುಡ ಈಗಲೇ ಬರಬಾರದೆ. ಕೆಂಪು ಬಟ್ಟೆಯಿಲ್ಲವಲ್ಲ” ಎಂದು ಜೀಮೂತವಾಹನ ಚಡಪಡಿಸಿದನು. ಅದೇ ಸಮಯಕ್ಕೆ ಮಾವನು ಕಳಿಸಿದ್ದ ಮದುವೆಯ ಉಡುಗೊರೆ ಕೆಂಪು ಬಟ್ಟೆಯನ್ನು ಸೇವಕನು ತಂದುಕೊಟ್ಟನು. ಬಟ್ಟೆಯನ್ನು ಹೊದ್ದುಕೊಂಡು ಜೀಮೂತವಾಹನ ವಧ್ಯಶಿಲೆಯನ್ನೇರಿದನು. ಗರುಡ ರಭಸದಿಂದ ಎರಗಿ ಜೀಮೂತವಾಹನನ್ನು ಕಚ್ಚಿಕೊಂಡು ಹಾರಿ ಪರ್ವತ ಶಿಖರದ ಕೋಡುಗಲ್ಲಿನ ಮೇಲೆ ಕುಳಿತನು. ಒಂದು ಜೀವವನ್ನುಳಿಸಿದೆನೆಂದು ಜೀಮೂತವಾಹನ ಆನಂದವೇ ಆನಂದ ಗಗನನದಿಂದ ಹೂಮಳೆ ಸುರಿಯಿತು.

ಅತ್ತ ಜೀಮೂತವಾಹನ ಆಶ್ರಮದ ಬಳಿ ರಕ್ತಮಯವಾದ ಒಂದು ರತ್ನ ಬಿದ್ದಿತು. ಅದು ಮಗನ ಚೂಡಾಮಣಿಯೆಂದು ಮುದುಕಿ ಚೀರಿದಳು. ಆಗ ಶಂಕಚೂಡನು ಅಳುತ್ತ ಅಲ್ಲಿಗೆ ಬಂದನು. ಅವನು ದೇವಾಲಯಕ್ಕೆ ಹೋಗಿ ಬುವುದರೊಳಗೆ ಗರುಡ ಬಂದು ಜೀಮೂತವಾಹನನ್ನು ಕಚ್ಚಿಕೊಂಡು ಹೋಗುತ್ತಿದ್ದನು. ಗರಡನ ಬಳಿಗೆ ತಾನು ಹೋಗಬೇಕೆಂದು ಶಂಖಚೂಡ ಆಶ್ರಮದ ಮಾರ್ಗವಾಗಿ ಅಳುತ್ತ ಬಂದನು. ಇವನಿಂದ ನಿಜಸ್ಥಿತಿಯನ್ನರಿತ ವೃದ್ಧರು ಪರರಿಗಾಗಿ ಪ್ರಾಣವನ್ನರ್ಪಿಸುವವನು ತಮ್ಮ ಮಗನೇಂದೇ ತಿಳಿದು ದುಃಖದಲ್ಲಿ ಮುಳುಗಿದರು.

ಗರುಡ ತನ್ನ ಭೋಜನವನ್ನು ನಿಲ್ಲಿಸಿ “ಅಯ್ಯಾ ಮಹಾತ್ಮ, ಮರಣ ಹಿಂಸೆಯನ್ನು ಸಹಿಸಿಕೊಂಡು ಸಂತೋಷದಿಂದಿರುವ ನೀನು ಯಾರು? ಎಂದು ಆಶ್ಚರ್ಯದಿಂದ ಕೇಳಿದನು. ಆಗ ನಿಲ್ಲುಸು ಗರುಡ ನಾನು ನಿನ್ನ ಆಹಾರ” ಎಂದು ಕೂಗುತ್ತ ಶಂಖಚೂಡ ಓಡಿಬಂದನು. ಸತ್ಯ ಸಂಗತಿಯನ್ನರಿತು ಗರುಡನಿಗೆ ದುಃಖವಾಯಿತು. ಅಯ್ಯೋ ಪೂಜ್ಯನಾದ, ಕೀರ್ತಿಶಾಲಿಯಾದ ವಿಧ್ಯಾಧರ ಚಕ್ರವರ್ತಿಯನ್ನು ಕೊಲ್ಲುತ್ತಿರುವೆನೆ! ಈ ಪಾಪಕ್ಕೆ ಅಗ್ನಿಪ್ರವೇಶವೇ ಪ್ರಾಯಶ್ಚಿತ್ತ” ಎಂದು ಯೋಚಿಸಿ ಸಮೀಪದಲ್ಲಿ ಬರುತ್ತಿರುವವರನ್ನು ಅಗ್ನಿಗಾಗಿ ಬೇಡಿದನು. ಬರುತ್ತಿರುವವರು ತನ್ನ ತಾಯಿತಂದೆಗಳೆಂದು ಜೀತಮೂತವಾಹನ ತಿಳಿದನು. ತನ್ನ ಸ್ಥಿತಿಯನ್ನು ಕಂಡು ಅವರ ಎದೆ ಒಡೆದೀತೆಂದು ಶಂಖಚೂಡನಲ್ಲಿ ಕೆಂಪು ಬಟ್ಟೆಯಿಂದ ತನ್ನ ಮೈ ಮುಚ್ಚಿಕೊಂಡನು.

ವೃದ್ಧರ ಅಳಲನ್ನು ಕಂಡು ಗರುಡನ ಕರುಳು ಕಿವಿಚಿದಂತಾಗಿ ಕಣ್ಣೀರಿಟ್ಟನು. ಕ್ಷಮೆ ಬೇಡಿದನು. ಇನ್ನು ಮುಂದೆ ಹಿಂಸೆ ಮಾಡುವುದಿಲ್ಲವೆಂದು ಪ್ರತಿಜ್ಞೆಯನ್ನು ಕೇಳಿ ಜೀಮೂತವಾಹನನು ಸಂತೋಷದಿಂದ ಪ್ರಾಣಬಿಟ್ಟನು. “ದೇವರೇ, ಅಮೃತವನ್ನಾದರೂ ಚೆಲ್ಲಿ ನನ್ನ ಮಗನನ್ನು ಬದುಕಿಸು” ಎಂದು ಮುದುಕಿ ಅತ್ತು ಬೇಡಿದಳು. ಅಂಮೃತವೆಂಬ ಶಬ್ಧ ಕಿವಿಗೆ ಬಿದ್ದೊಡನೆ ಗರುಡನು ಅದನ್ನು ತರಲು ಆಕಾಶಕ್ಕೆ ಚಿಮ್ಮಿ ಹಾರಿದನು.

ಜೀಮೂತವಾಹನ ಕಳೇಬರವನ್ನು ಚಿತೆಯ ಮೇಲಿಟ್ಟು ಜೊತೆಗೆ ಬೀಳಲು ಮೂವರು ಸಿದ್ಧರಾದರು. “ಸರ್ವಮಂಗಳೆ, ನಿನ್ನ ವರ ಸುಳ್ಳಾಯಿತೆ” ಎಂದು ಮಲಯವತಿ ಗೋಳಿಟ್ಟಳು. ಗೌರಿ ಪ್ರತ್ಯಕ್ಷಳಾದಳು. ಜೀಮೂತವಾಹನ ಎದ್ದು ಶಿರಬಾಗಿ ಗೌರಿಗೆ ನಮಸ್ಕರಿಸಿದ್ದಾನೆ. ಗೌರಿಯ ವರದ ಹಸ್ತ ಕುಮಾರನ ಶಿರದ ಮೇಲಿದೆ. ಎಲ್ಲರ ಕಣ್ಣಲ್ಲಿ ಕೃತಜ್ಞತೆಯ ಕಣ್ಣೀರು ಸುರಿಯುತ್ತಿದೆ. ಆಕಾಶದಿಂದ ಅಮೃತದ ಮಳೆ ಸುರಿಯಿತು. ಮೂಳೆಗಳೆಲ್ಲಾ ಸಜೀವ ನಾಗರಾಗಿ ಅಮೃತವನ್ನು ನೆಕ್ಕುತ್ತ ಹೊಳೆಯಂತೆ ಹರಿದು ಸಮುದ್ರ ಸೇರಿದವು. ಗೌರಿಯು ರಾಜಕುಮಾರನಿಗೆ ವಿದ್ಯಾಧರ ಚಕ್ರವರ್ತಿಯಾಗಿ ಪಟ್ಟಾಭಿಷೇಕ ಮಾಡಿದಳು. “ನಿನಗೆ ಬೇಕಾದವರವನ್ನು ಬೇಡು” ಅಂದಳು. ಜೀಮೂತವಾಹನ “ಜಗತ್ತಿನ ಜನರೆಲ್ಲ ಸಹೋದರರಂತೆ ಸುಖವಾಗಿ ಬಾಳಲಿ” ಎಂದು ಬೇಡಿದನು. ” ತಥಾಸ್ತು” ಎಂದು ಗೌರಿ ಅದೃಶ್ಯಳಾದಳು.

ಕೃಪೆ : ೧೯೬೨ ಕನ್ನಡ ಏಳನೆಯ ಪಠ್ಯಪುಸ್ತಕದಿಂದ ಆರಿಸಿದೆ.
ಕರ್ನಾಟಕ ವಿದ್ಯಾವದರ್ಥಕ ಸಂಘ, ಧಾರವಾಡ

. ಕೊಟ್ಟಿರುವ ಪದಗಳನ್ನು ಓದಿ Reding practice

ಮಹಾತ್ಮ, ಪ್ರಾರ್ಥಿಸು, ರಾಜ್ಯಬಾರ, ಪ್ರತ್ಯಕ್ಷ, ವೃದ್ಧ, ಪ್ರಶಾಂತ, ಮಾತಾಪಿತೃ, ಅದೃಶ್ಯ, ಸುಸಂಕೃತ, ಕೃತಜ್ಞತೆ

Drills

I Repetitions drills

Model ಅಧ್ಯಾಪಕ : ಇವನು ವಿದ್ಯಾಧರ ಚಕ್ರವರ್ತಿಯಾದ ಜೀಮೂತಕೇತುವಿನ ಮಗನು
ವಿದ್ಯಾರ್ಥಿ : ಇವನು ವಿದ್ಯಾಧರ ಚಕ್ರವರ್ತಿಯಾದ ಜೀಮೂತಕೇತುವಿನ ಮಗನು

ಅಧ್ಯಾಪಕ : ಬಟ್ಟೆಯನ್ನು ಹೊದ್ದುಕೊಂಡು ಜೀಮೂತವಾಹನ ಮಧ್ಯಶಿಲೆಯನ್ನೇರಿದನು
ವಿದ್ಯಾರ್ಥಿ :
ಅಧ್ಯಾಪಕ : ಅದು ಮಗನ ಚೂಡಾಮಣಿಯೆಂದು ಮುದುಕಿ ಚೀರಿದಳು
ವಿದ್ಯಾರ್ಥಿ :

II Substitution Drill – Single subtitution

Model : ಸದ್ಗುಣವಂತನೂ, ಸುಸಂಸ್ಕೃತನೂ ಸುಂದರನೂ ಆದ ಜೀತಮೂತವಾಹನನೇ ತನ್ನ ಮಗಳಾದ ಮಲಯವತಿಗೆ ತಕ್ಕವರ ಎಂದು ಚಿಂತಿಸಿದನು.
ಸದ್ಗುಣವಂತನೂ, ಸುಸಂಸ್ಕೃತನೂ ಸುಂದರನೂ ಆದ ಜೀತಮೂತವಾಹನನೇ ತನ್ನ ಮಗಳಾದ ಮಲಯವತಿಗೆ ತಕ್ಕ ವರ ಎಂದು ಯೋಚಿಸಿದನು.

೧. ಅಯ್ಯೋ ಮಗನೆ, ರಾಜನೇ ನಿನ್ನನ್ನು ಕೈಬಿಟ್ಟ ಮೇಲೆ ಯಾರು ಕಾಪಾಡುತ್ತಾರೆ ಎಂದು ಅತ್ತಳು
……………………………… (ಗೋಳಿಟ್ಟಳು)
೨. ಗಗನದಿಂದ ಹೂಮಳೆ ಉದುರಿತು
……………………………… (ಸುರಿಯಿತು)
೩. ಬರುತ್ತಿರುವವರು ತನ್ನ ತಾಯಿತಂದೆಗಳೇಂದು ಜೀಮೂತವಾಹನ ಅರಿತನು
……………………………… (ತಿಳಿದನು)

III Transformation drill

Model : ಗೌರಿಯ ವರದ ಹಸ್ತ ಕುಮಾರನ ಶಿರದ ಮೇಲಿದೆ (ಯಾರ)
ಗೌರಿಯ ವರದ ಹಸ್ತ ಯಾರ ಶಿರದ ಮೇಲಿದೆ

೧. ಜೀತಮೂತವಾಹನ ಎದ್ದು ಶಿರಬಾಗಿ ಗೌರಿಗೆ ನಮಸ್ಕರಿಸಿದ್ದಾನೆ.
……………………… (ಯಾರಿಗೆ)
೨. ಅಮೃತವೆಂಬ ಶಬ್ಧಕಿವಿಗೆ ಬಿದ್ದೋಡನೆ ಗರುಡನು ಅದನ್ನು ತರಲು ಆಕಾಶಕ್ಕೆ ಚಿಮ್ಮಿ ಹಾರಿದನು
……………………… (ಎಲ್ಲಿಗೆ)
೩. ಒಂದು ದಿನ ಜೀಮೂತವಾಹನನು ಮಲಯವತಿಯ ಅಣ್ಣ ವಿಶ್ವಾವಸುವಿನೊಡನೆ ಸಮುದ್ರತೀರಕ್ಕೆ ಹೋಗಿದ್ದನು?
……………………… (ಎಲ್ಲಿಗೆ)

IV Response drill

೧. ಗೌರಿಯ ವರದ ಹಸ್ತ ಯಾರ ಶಿರದ ಮೇಲಿದೆ
………………………..
೨. ಜೀಮೂತವಾಹನನು ಎದ್ದು ಶಿರಬಾಗಿ ಯಾರಿಗೆ ನಮಸ್ಕರಿಸಿದನು
………………………..
೩. ಅಮೃತವೆಂಬ ಶಬ್ಧಕಿವಿಗೆ ಬಿದ್ದೊಡನೆ ಗರುಡನು ಅದನ್ನು ತರಲು ಎಲ್ಲಿಗೆ ಚಿಮ್ಮಿ ಹಾರಿದನು.
………………………..
೪. ಒಂದುದಿನ ಜೀಮೂತವಾಹನನು ಮಲಯವತಿಯ ಅಣ್ಣ, ವಿಶ್ವಾವಸುವಿನೊಡನೆ ಎಲ್ಲಿಗೆ ಹೋಗಿದ್ದನು.
………………………..

EXERCISES

1.Fill in the following blanks using the English

Model : ಹಿಂ……..ಲಿ.ಸು (followup)         ಹಿಂಬಾಲಿಸು
೧. ……..ದ್ಧಾಪ್ಯ(old age)        ……….
೨. ……..ಪಿತೃ     (father and mather)   ……….
೩. ಪ್ರ……..ಕ್ಷ      (direct)            ……….
೪. ಮೃ……..      (dead)             ……….

2. Choose the appropriate letter from the pairs given and fill up the blanks according to the model

Model : ಮ……..ರ   ದು – ಧು        ಮಧುರ
೧. ಪ್ರಾ……..ಸು   ರ್ತಿ – ರ್ಥಿ            ……..
೨. ವಿದ್ಯಾ……..ರ             ಧ – ದ   ……..
೩. ಪ್ರ……..ಂತ  ಸಾ – ಶಾ……..
೪. ……..ಜನ       ಭೋ – ಬೊ        ……..
೫. ಹಿಂ……..       ಶೆ – ಸೆ    ……..

3. Combine the following words according to the model

Model : ಪಟ್ಟ + ಅಭಿಷೇಕ     ಪಟ್ಟಾಭಿಷೇಕ
೧. ಸದ್ +ಗುಣ    ……..
೨. ವಿದ್ಯ + ಧರ    ……..
೩. ದೇವ+ ಅಲಯ            ……..
೪. ಕಣ್ + ನೀರು  ……..
೫. ಗೋಳ್ + ಇಡು           ……..

4. Spilt the folling sentences into two according to the model

Model : ಜಾಣರಾದ ಮಂತ್ರಿಗಳಿಗೆ ರಾಜ್ಯಭಾರವನ್ನು ವಹಿಸಿ ತಾನೂ ಹಿರಿಯರಿದ್ದ ಅಡವಿಗೆ ಹೊರಟನು
ಜಾಣರಾದ ಮಂತ್ರಿಗಳಿಗೆ ರಾಜ್ಯಭಾರವನ್ನು ವಹಿಸಿದನು. ತಾನು ಹಿರಿಯರಿದ್ದ ಅಡವಿಗೆ ಹೊರಟನು.

೧. ಗೌರಿಯ ಗುಡಿಯಲ್ಲಿ ಸಿದ್ಧರಾಜನ ಮಗಳಾದ ಮಲಯತಿಯು ವೀಣೆಯೊಂದಿಗೆ ಹಾಡುತ್ತಾ ದೇವಿಯನ್ನು ಪ್ರಾರ್ಥಿಸುತ್ತಿದ್ದಳು
೨. ಬೆಳಗಿನಜಾವ ಕನಸಿನಲ್ಲಿ ಗೌರಿ ಪ್ರತ್ಯಕ್ಷಳಾಗಿ ವಿದ್ಯಾಧರ ಚಕ್ರವರ್ತಿಯು ನಿನಗೆ ತಕ್ಕವನೆಂದು ಇಂದೇ ವರವನ್ನು ಕೊಟ್ಟಿರುವಳು.
೩. ಸಿದ್ಧರ ಚಕ್ರವರ್ತಿ ವಿಶ್ವಾವಸುವು ಮಲಯ ಪರ್ವತಕ್ಕೆ ಬಂದಿದ್ದ ವಿದ್ಯಾಧರ ಚಕ್ರವರ್ತಿಯ ವಿಷಯವನ್ನು ತಿಳಿದಿದ್ದನು.

5. Fill up the blanks using the words given below in the bracket

Model : ಹಿರಿಯರ ಸೇವೆಗಿಂತ ……… ನನಗೆ ಹಿರಿದಲ್ಲ (ಪೀಠ, ಪಟ್ಟ, ಸಿಂಹಾಸನ)

೧. ದೇವರೇ ……….. ವನ್ನಾದರೂ ಚೆಲ್ಲಿ ನನ್ನ ಮಗನನ್ನು ಬದುಕಿಸು ಎಂದು ಬೇಡಿದನು. (ಅಮೃತ, ವಿಷ. ರಕ್ತ)
೨. ಜಗತ್ತಿನ ಜನರೆಲ್ಲಾ ………ರಂತೆ ಸುಖವಾಗಿ ಬಾಳಲಿ ಎಂದು ಬೇಡಿದನು.(ವೀರರ, ಸಹೋದರ, ವೈರಿಯರ)
೩. ……..ಅಳಲನ್ನು ಕಂಡು ಗರುಡನ ಕರುಳು ಕಿವಿಚಿದಂತಾಗಿ ಕಣ್ಣೀರಿಟ್ಟನು. (ವಯಸ್ಕ, ವೃದ್ಧರ, ಮಕ್ಕಳು)

6. Make use of the follwing words in your own sentences

ಹಿಂಬಾಲಿಸು, ಚಡಪಡಿಸು, ನಕ್ಕುನಲಿ

7. write answers to the follwing question

೧. ಜೀಮೂತವಾಹನ ರಾಜ್ಯ ಸುಖವನ್ನು ತೊರೆದು ಕಾಡಿಗೆ ಏಕೆ ಹೋದನು?
೨. ಯುದ್ಧದ ವಿಷಯದಲ್ಲಿ ಜೀಮೂತವಾಹನನ ಅಭಿಪ್ರಾಯವೇನು?
೩. ಶಂಖಚೂಡ ಯಾರು? ಅವನು ವಧ್ಯಸ್ಥಾನಕ್ಕೆ ಏಕೆ ಬಂದನು?
೪. ಗರುಡ ಜೀಮೂತವಾಹನನ್ನು ಏಕೆ ಕಚ್ಚಿಕೊಂಡು ಹೋದನು?
೫. ತಾನು ಜೀಮೂತವಾಹನನ್ನು ಕೊಲ್ಲುತ್ತಿದ್ದೇವೆಂದು ಗರುಡನಿಗೆ ಹೇಗೆ ತಿಳಿಯಿತು.?

8. Match the following

೧. ಜೀಮೂತವಾಹನ ಸಿದ್ಧರಾಜಕುಮಾರ
೨. ಶಂಕಚೂಡ ಜೀಮೂತವಾಹನನ ಗೆಳೆಯ
೩. ಮಿತ್ರಾವಸು ಒಬ್ಬನಾಗ
೪. ಆತ್ರೇಯ ವಿದ್ಯಾಧರ ಚಕ್ರವರ್ತಿ