ಪದ್ಯ ಪಾಠ ೭ – ಬಿಡುವು
ಬಾರೋ ನಾವಾಡುವ ಬಾರೋ,
ಸಾರಿತು ಸುಗ್ಗಿಯ ತಿಂಗಳಿದೋ,
ಸಾರುವ ನಾವಿಂದಿನ ದಿನದಿ,
ದೂರದ ಬೆಟ್ಟದ ಮೇಗಡೆಗೆ. ||೧||
ಭಲರೇ ಬಿಡುವಾಗಿಹುದಿಂದು,
ತೊಳಲುತ ವನದಲಿ ತಪ್ಪಲಲಿ,
ನೆಳಲಲಿ ಬಿಸಿಲಲಿ ನಲಿದಾಡಿ,
ಸುಳಿದೆವು ದೂರದ ಬೆಟ್ಟದಲಿ. ||೨||
ಹೂಗಿಡದಲಿ ಹೂವರಳಿಹುದು,
ಆಗಸತೊಳೆದಂತೆಸೆದಿಹುದು,
ಕೂಗುವುವೆತ್ತಲು ಹಕ್ಕಿಗಳು,
ಸಾಗುವೆವಾ ಬೆಟ್ಟದ ಬಳಿಗೆ. ||೩||
ಯಾರೊಬ್ಬರು ಹಿಂದುಳಿಯದಿರಿ,
ಸೇರಿಸಿಕೊಳ್ಳಿರಿ ಹಸುಳೆಗಳ,
ಸಾರುವೆವೆಳಗಾಳಿಗಳಲೆವ,
ದೂರದ ಬೆಟ್ಟದ ಮೇಗಡೆಗೆ. ||೪||
ಕೃಪೆ : ೧೯೪೫ರಲ್ಲಿ ಪ್ರಕಟವಾಗಿರುವ ಕನ್ನಡ ಎರಡನೆಯ ಪುಸ್ತಕದಿಂದ ಆರಿಸಿದೆ.
೧. ಕೊಟ್ಟಿರುವ ಪದಗಳನ್ನು ಓದಿ Reading practice
ಸುಗ್ಗಿ, ದೂರ, ತೊಳಲುತ, ವನ, ಬೆಟ್ಟ, ನಲಿದಾಡಿ, ಆಗಸ, ತಪ್ಪಲಲಿ, ಹಸುಳೆ, ಬಿಸಿಲಲಿ, ನೆಳಲಲಿ
Drills
I Repetitions drills
Model : ಅಧ್ಯಾಪಕ : ಬಾರೋ ನಾವಾಡುವ ಬಾರೋ,
ವಿದ್ಯಾರ್ಥಿ : ಬಾರೋ ನಾವಾಡುವ ಬಾರೋ
ಅಧ್ಯಾಪಕ : ನೆಳಲಲಿ ಬಿಸಿಲಲಿ ನಲಿದಾಡಿ
ವಿದ್ಯಾರ್ಥಿ :
ಅಧ್ಯಾಪಕ : ಸಾಗುವೆವಾ ಬೆಟ್ಟದ ಬಳಿಗೆ
ವಿದ್ಯಾರ್ಥಿ :
II Substitution Drill – Single subtitution
Model : ನೆಳಲಲಿ ಬಿಸಿಲಲಿ ಕುಣಿದಾಡಿ
ನೆಳಲಲಿ ಬಿಸಿಲಲಿ ನಲಿದಾಡಿ
೧. ಸಾರಿತು ಸುಗ್ಗಿಯ ವರ್ಷಗಳಿದೋ
…………………….. (ತಿಂಗಳಿದೋ)
೨. ಹೂಗಿಡದಲಿ ಪುಷ್ಪರಳಿಹುದು
…………………….. (ಹೂವರಳಿಹುದು)
೩. ಸಾಗುವೆಯಾ ಬೆಟ್ಟದ ಹತ್ತಿರಕ್ಕೆ
…………………….. (ಬಳಿಗೆ)
III Transformation drill
Model : ಹೂಗಿಡದಲ್ಲಿ ಹೂವರಳಿಹುದು (ಏನು)
ಹೂಗಿಡದಲ್ಲಿ ಏನು ಅರಳಿಹುದು?
೧. ಸಾಗುವೆಯಾ ಬೆಟ್ಟದ ಅರಳಿಹುದು?
…………………….. (ಯಾವುದರ)
IV Response drill
೧. ಹೂಗಿಡದಲ್ಲಿ ಏನು ಅರಳಿಹುದು?
……………………..
೨. ಸಾಗುವೆಯಾ ಯಾವುದರ ಹತ್ತಿರಕ್ಕೆ?
……………………..
EXERCISES
1. Fill in the following blanks using the English
Model :
ತಿಂ…….ಳು | (month) | ತಿಂಗಳು |
೧. …….ಗ್ಗಿ | (harvest season) | ………. |
೨. ಬೆ……. | (hill) | ………. |
೩. …….ನ | (forest) | ………. |
೪. ಆ…….ಶ | (Sky) | ………. |
೫. ಹಸು……. | (baby) | ………. |
2. Choose the appropriate letter from the pairs given and fill up the blanks according to the model
Model :
ಹ……. | ಖ್ಖಿ – ಕ್ಕಿ | ಹಕ್ಕಿ | |
೧. …….ಸುಳೆ | ಅ – ಹ | ………. | |
೨..ಸು……. | ಗಿ – ಗ್ಗಿ | ………. | |
೩ .ವ……. | ಣ – ನ | ………. | |
೪. …….ನ | ಒ – ವ | ………. | |
೫. …….ರೋ | ಬ – ಬಾ | ………. |
3. Combine the following words according to the model
Model
ನಾವು + ಆಡುವ | ನಾವಾಡುವ |
೧. ನಾವು+ಇಂದಿನ | ………. |
೨. ನಲಿದು+ಆಡಿ | ………. |
೩. ಯಾರು+ಒಬ್ಬರು | ………. |
4. Fill up the blanks using the words given below in the bracket
೧. ಸಾರಿತು ಸುಗ್ಗಿಯ………..(ವರ್ಷಗಳಿದೋ, ದಿನಗಳಿದೋ, ತಿಂಗಳಿದೋ)
೨. ನೆಳಲಲಿ ಬಿಸಿಲಲಿ………..(ಕುಣಿದಾಡಿ, ನಲಿದಾಡಿ, ಓಡಾಡಿ)
೩. ಸುಳಿವೆವು ದೂರದ……..(ಪರ್ವತದಲಿ, ಅರಣ್ಯದಲಿ, ಬೆಟ್ಟದಲಿ)
5. write answers to the follwing questions
೧. ನಿಮ್ಮ ಪಾಠ ಶಲೆಗೆ ಯಾವ ತಿಂಗಳಲ್ಲಿ ಬಿಡುವು ಕೊಡುತ್ತಾರೆ?
೨. ಬಿಡುವು ಬಂದಾಗ ಹುಡುಗರು ಎಲಿಗೆ ಹೋಗಬೇಕೆಂದು ಬಯಸುತ್ತಾರೆ?
೩. ಹುಡುಗರು ಏನು ಆಟ ಆದಬೇಕೆಂದು ಬಯಸುತ್ತಾರೆ?
೪. ಸುಗ್ಗಿಯ ತಿಂಗಳಲ್ಲಿ ಆಕಾಶ ಹೇಗೆ ಕಾಣುತ್ತದೆ?
೫. ಹಕ್ಕಿಗಳು ಏನು ಮಾಡುತ್ತವೆ?
೬. ಬೆಟ್ಟದ ಮೇಲುಗಡೆ ಏನು ಬೀಸುತ್ತದೆ?
Leave A Comment