ಗದ್ಯ ಪಾಠ ೯ – ಗಡಿಯಾರ

ತಂದೆಯವರು …. ರಾಮು! ಏಳು ಗಂಟೆಯಾಯಿತು. ಪಾಠಶಾಲೆಗೆ ಹೋಗುವುದಿಲ್ಲವೆ?

ರಾ …. ಅಪ್ಪಾ! ಎಷ್ಟು ಗಂಟೆಯಾಯಿತೆಂಬುದು ನನಗೆ ತಿಳಿಯುವುದೇ ಇಲ್ಲವಲ್ಲ.

ತಂ …. ನೋಡು. ಈ ಗಡಿಯಾರ ಗಂಟೆಯನ್ನು ತೋರಿಸುತ್ತದೆ. ಇದರ ಮುಖದಲ್ಲಿ ಒಂದು ಸಣ್ಣ ಮುಳ್ಳು, ಇನ್ನೊಂದು ದೊಡ್ಡ ಮುಳ್ಳು ಇದೆ. ಸಣ್ಣ ಮುಳ್ಳು ಗಂಟೆಯನ್ನು ತೋರಿಸುತ್ತದೆ. ದೊಡ್ಡ ಮುಳ್ಳು ನಿಮಿಷಗಳನ್ನು ತೋರಿಸುತ್ತದೆ.

ರಾ …. ಗುಂಡುಬಿಲ್ಲೆಯ ಮೇಲೆ ಗುರುತಿಸಿರುವುದೇನು?

ತಂ …. ಅದರ ಮೇಲೆ ಒಂದು, ಎರಡು ಮುಂತಾಗಿ ಹನ್ನೆರಡರವರೆಗೆ ಅಂಕಗಳನ್ನು ಗುರುತಿಸಿದೆ. ಒಂದು ಅಂಕದಿಂದ ಇನ್ನೊಂದು ಅಂಕದವರೆಗಿನ ಸ್ಥಳವನ್ನು ಐದು ಸಮಭಾಗಗಳಾಗಿ ಮಾಡಿದೆ. ಗುಂಡು ಬಿಲ್ಲೆಯ ಮೇಲೆ ಸಣ್ಣ ಗೆರೆಗಳು ಎಷ್ಟಿವೆ?

ರಾ …. ಅರುವತ್ತು ಇವೆ.

ತಂ …. ಅಹುದು. ದೊಡ್ಡ ಮುಳ್ಳು ಒಂದು ಸಣ್ಣ ಗೆರೆಯಿಂದ ಇನ್ನೊಂದು ಸಣ್ಣಗೆರೆಗೆ ಜರುಗುವ ಕಾಲಕ್ಕೆ ಒಂದು ನಿಮಿಷ. ಈಗ ದೊಡ್ಡ ಮುಳ್ಳು ೧೨ ಎಂಬ ಸ್ಥಳದಿಂದ ಒಂದು ಸುತ್ತು ಬಂದರೆ ಎಷ್ಟು ನಿಮಿಷಗಳಾಗುತ್ತವೆ?

ರಾ …. ಅರವತ್ತು ನಿಮಿಷಗಳಾಗುತ್ತವೆ.

ತಂ …. ಅಹುದು. ಇದಕ್ಕೆ ಒಂದು ಗಂಟೆ ಎಂದು ಹೆಸರು. ಆಗ ಚಿಕ್ಕ ಮುಳ್ಳು ಮುಂದಿನ ಅಂಕಕ್ಕೆ ಸರಿದಿರುತ್ತದೆ.

ರಾ …. ಗಂಟೆಯನ್ನು ಹೇಗೆ ನೋಡುವುದು?

ತಂ …. ಚಿಕ್ಕ ಮುಳ್ಳು ದಾಟಿರುವ ಸಂಖ್ಯೆ ಗಂಟೆಯನ್ನು ತೋರಿಸುತ್ತದೆ. ದೊಡ್ಡ ಮುಳ್ಳು ೧೨ ಎಂಬ ಅಂಕದಿಂದ ಎಷ್ಟು ಸಣ್ಣ ಗೆರೆಗಳನ್ನು ದಾಟಿರುವುದೋ ನೋಡಬೇಕು. ಆ ಸಂಖ್ಯೆ ನಿಮಿಷಗಳನ್ನು ತಿಳಿಸುತ್ತದೆ.

ರಾ …. ತಿಳಿಯಿತು. ಈಗ ಏಳು ಗಂಟೆ, ಹದಿಮೂರು ನಿಮಿಷ.

ತಂ …. ಅಹುದು. ದೊಡ್ಡ ಮುಳ್ಳು ಸರಿಯುತ್ತ ಬಂದ ಹಾಗೆಲ್ಲ ಗಂಟೆ ಹೆಚ್ಚುತ್ತದೆ. ಹದಿನೈದು ನಿಮಿಷಗಳಿಗೆ ಬಂದರೆ ಏಳುಕಾಲು ಗಂಟೆ. ಮೂವತ್ತು ನಿಮಿಷಗಳಿಗೆ ಬಂದರೆ ಏಳೂವರೆ ಗಂಟೆ. ನಲವತ್ತೈದು ನಿಮಿಷಗಳಿಗೆ ಬಂದರೆ ಏಳೂಮುಕ್ಕಾಲು ಗಂಟೆ. ದೊಡ್ಡ ಮುಳ್ಳು ಸುತ್ತಿಕೊಂಡು ಪುನಃ ೧೨ರ ಮೇಲೆ ನಿಂತಾಗ ಚಿಕ್ಕ ಮುಳ್ಳು ಎಲ್ಲಿರುತ್ತದೆ?

ರಾ …. ಎಂಟರ ಮೇಲಿರುತ್ತದೆ. ಆಗ ಎಂಟು ಗಂಟೆ.

ತಂ …. ಅಹುದು. ಹೀಗೆ ಚಿಕ್ಕ ಮುಳ್ಳು ಒಂದು ಸಲ ಸುತ್ತಿ ಪುನಃ ಏಳರ ಮೇಲೆ ನಿಂತಾಗ ರಾತ್ರಿ ಏಳು ಗಂಟೆ. ರಾತ್ರಿಯೆಲ್ಲ ಸುತ್ತಿ ಏಳರಮೇಲೆ ನಿಂತಾಗ ಹಗಲು ಏಳು ಗಂಟೆ. ಹೀಗೆ ಒಂದು ದಿವಸಕ್ಕೆ ಚಿಕ್ಕ ಮುಳ್ಳು ಇಪ್ಪತ್ತುನಾಲ್ಕು ಗಂಟೆಗಳನ್ನು ತೋರಿಸುತ್ತದೆ.

ರಾ …. ಕೆಳಗಡೆ ಒಂದು ಬಹಳ ಚಿಕ್ಕ ಮುಳ್ಳು ಬೇಗ ಬೇಗ ಸುತ್ತುತ್ತ ಇದೆಯಲ್ಲ? ಇದು ಏನು?

ತಂ …. ಇದು ಕ್ಷಣಗಳನ್ನು ತಿಳಿಸುತ್ತದೆ. ಇಂಗ್ಲೀಷಿನಲ್ಲಿ ಕ್ಷಣವನ್ನು ಸೆಕೆಂಡ್‌ ಎಂದು ಹೇಳುತ್ತಾರೆ. ಈ ಚಿಕ್ಕ ಮುಳ್ಳು ಒಂದು ಬಾರಿ ಸುತ್ತುವ ಹೊತ್ತಿಗೆ ಅರುವತ್ತು ಸೆಕೆಂಡುಗಳಾಗಿರುತ್ತವೆ. ಆಗ ಗಡಿಯಾರದ ದೊಡ್ಡ ಮುಳ್ಳು ಒಂದು ನಿಮಿಷ ಮುಂದುವರಿಯುತ್ತದೆ. ಅರವತ್ತು ಸೆಕೆಂಡುಗಳಿಗೆ ಒಂದು ನಿಮಿಷ. ಅರವತ್ತು ನಿಮಿಷಗಳಿಗೆ ಒಂದು ಗಂಟೆ.

ರಾ …. ಈ ಗಡಿಯಾರ ‘ಟಿಕ್ ಟಿಕ್’ ಎಂದು ಏತಕ್ಕೆ ಅನ್ನುತ್ತದೆ.

ತಂ …. ಗಡಿಯಾರದ ಹಿಂಭಾಗವನ್ನು ತೆರೆದಿದ್ದೇನೆ. ನೋಡು. ಒಂದು ಚಕ್ರ ಇತ್ತ ಅತ್ತ ತಿರುಗುತ್ತಿದೆ. ಹೀಗೆ ಇದು ತಿರುಗುವಾಗ ಒಳಗಿರುವ ಒಳಗಿರುವ ಮುಳ್ಳಿನ ಚಕ್ರವೊಂದು ‘ಟಿಕ್ ಟಿಕ್’ ಎಂದು ಸದ್ದು ಮಾಡುತ್ತ ಮುಂದಕ್ಕೆ ಹೋಗುತ್ತದೆ. ಅದರಿಂದ ಇತರ ಚಕ್ರಗಳು ನಡೆಯುತ್ತವೆ. ಗಡಿಯಾರ ಸರಿಯಾಗಿ ನಡೆಯಬೇಕಾದರೆ ಆಗಾಗ ಅದರ ಕೀಲು ತಿರುಗಿಸಿ ಶಕ್ತಿ ತುಂಬಬೇಕು.

ರಾ …. ನನಗೆ ಗಡಿಯಾರದ ವಿಚಾರವೆಲ್ಲ ಈಗ ತಿಳಿಯಿತು. ಇನ್ನು ಮೇಲೆ ನಾನೆ ಗಂಟೆ ನೋಡಿಕೊಂಡು, ಸರಿಯಾದ ಹೊತ್ತಿಗೆ ಪಾಠಶಾಲೆಗೆ ಹೋಗುತ್ತೇನೆ.

ಕೃಪೆ : ೧೯೬೨ರ ಕನ್ನಡ ಏಳನೆಯ ಪುಸ್ತಕದಿಂದ ಆರಿಸಿದೆ

. ಕೊಟ್ಟಿರುವ ಪದಗಳನ್ನು ಓದಿ Reading practice

ಪಾಠಶಾಲೆ, ಮುಳ್ಳು, ಗಡಿಯಾರ, ದೊಡ್ಡಮುಳ್ಳು, ಗಂಟೆ, ಚಿಕ್ಕಮುಳ್ಳು, ನಿಮಿಷ, ಸಣ್ಣಗೆರೆ, ಸೆಕೆಂಡು, ದಪ್ಪಗೆರೆ

Drills

I Repetitions drills

Model : ಅಧ್ಯಾಪಕ : ರಾಮು ಪಾಠಶಾಲೆಗೆ ಹೋಗುವುದಿಲ್ಲವೆ?
ವಿದ್ಯಾರ್ಥಿ : ರಾಮು ಪಾಠಶಾಲೆಗೆ ಹೋಗುವುದಿಲ್ಲವೆ?

ಅಧ್ಯಾಪಕ : ಈ ಗಡಿಯಾರ ಗಂಟೆಯನ್ನು ತೋರಿಸುತ್ತದೆ.
ವಿದ್ಯಾರ್ಥಿ :
ಅಧ್ಯಾಪಕ : ಒಂದು ಗಂಟೆಗೆ ಅರವತ್ತು ನಿಮಿಷಗಳಾಗುತ್ತವೆ.
ವಿದ್ಯಾರ್ಥಿ :
ಅಧ್ಯಾಪಕ : ಗಂಟೆಯನ್ನು ಹೇಗೆ ನೋಡುವುದು.
ವಿದ್ಯಾರ್ಥಿ :

II Substitution Drill – Single subtitution

Model : ಒಂದು ಗಂಟೆಗೆ ಅರವತ್ತು ಸೆಕೆಂಡುಗಳಾಗುತ್ತವೆ.
ಒಂದು ಗಂಟೆಗೆ ಅರವತ್ತು ನಿಮಿಷಗಳು

೧. ದೊಡ್ಡ ಮುಳ್ಳು ಗಂಟಗಳನ್ನು ತೋರಿಸುತ್ತದೆ.
…………………….. (ನಿಮಿಷಗಳನ್ನು)
೨. ದೊಡ್ಡ ಮುಳ್ಳು ಒಂದು ಸಣ್ಣ ಗೆರೆಯಿಂದ ಇನ್ನೊಂದು ಸಣ್ಣ ಗೆರೆಗೆ ಜರುಗುವ ಕಾಲಕ್ಕೆ ಒಂದು ಗಂಟೆ
…………………….. (ನಿಮಿಷ)
೩. ಅರವತ್ತು ಸೆಕೆಂಡುಗಳಿಗೆ ಒಂದು ಗಂಟೆ
…………………….. (ನಿಮಿಷ)
೪. ಗಡಿಯಾರದಲ್ಲಿ ಒಂದು ಚಕ್ರ ಸುತ್ತ ತಿರುಗುತ್ತದೆ.
…………………….. (ಇತ್ತಆತ್ತ)

III Transformation drill

Model : ಚಿಕ್ಕಮುಳ್ಳು ಒಂದು ಬಾರಿ ಸುತ್ತುವ ಹೊತ್ತಿಗೆ ಅರವತ್ತು ಸೆಕೆಂಡುಗಳಾಗುತ್ತದೆ (ಎಷ್ಟು)
ಚಿಕ್ಕಮುಳ್ಳು ಒಂದು ಬಾರಿ ಸುತ್ತುವ ಹೊತ್ತಿಗೆ ಎಷ್ಟು ಸೆಕೆಂಡುಗಳಾಗುತ್ತವೆ?

೧. ಗುಂಡು ಬಿಲ್ಲೆಯ ಮೇಲೆ ಅರವತ್ತು ಸಣ್ಣ ಗೆರೆಗಳಿವೆ.
…………………….. (ಎಷ್ಟು)
೨. ದೊಡ್ಡ ಮುಳ್ಳು ೧೨ ಎಂಬ ಸ್ಥಳದಿಂದ ಒಂದು ಸುತ್ತು ಬಂದರೆ ಒಂದು ನಿಮಿಷ
…………………….. (ಎಷ್ಟು )
೩. ಒಂದು ಗಂಟೆಗೆ ಅರವತ್ತು ನಿಮಿಷಗಳಾಗುತ್ತವೆ
…………………….. (ಎಷ್ಟು)

IV Response drill

೧. ಗುಂಡು ಬಿಲ್ಲೆಯ ಮೇಲೆ ಎಷ್ಟು ಗೆರೆಗಳಿವೆ?
……………………..
೨. ದೊಡ್ದ ಮುಳ್ಳು ೧೨ ಎಂಬ ಸ್ಥಳದಿಂದ ಒಂದು ಸುತ್ತು ಬಂದರೆ ಎಷ್ಟು ನಿಮಿಷಗಳಾಗುತ್ತವೆ?
……………………..
೩. ಒಂದು ಗಂಟೆಗೆ ಎಷ್ಟು ನಿಮಿಷಗಳಾಗುತ್ತವೆ?
……………………..

EXERCISES

1. Fill in the following blanks using the English

Model :

 …….ಡಿಯಾರ (Clock) ಗಡಿಯಾರ
೧. ತಂ……. (Father) ……….
೨. …….ರೆ (Line) ……….
೩. …….ದು (Five) ……….
೪. ರಾ……. (Night) ……….
೫. ಕೀ……. (Joint) ……….

2. Choose the appropriate letter from the pairs given and fill up the blanks according to the model

Model :

 …….ಗಡಿಯಾರ – ಗ ಗಡಿಯಾರ
೧. ಪಾ……. ಟ – ಠ ……….
೨. ಮು……. ಲ್ಲು – ಳ್ಳು ……….
೩. …….ದಿ ಮೂರು ಅ – ಹ ……….
೪. …….ಕ್ತಿ ಷ – ಶ ……….
೫. ಕ್ಷ……. ನ – ಣ ……….

3. Combine the following words according to the model

Model :

ಮೇಲೆ + ಕಡೆ ಮೇಲ್ಗಡೆ
೧. ಸ್ಥಾನ+ಅನ್ನು ……….
೨. ಮಹ+ಇಂದ್ರ ……….
೩. ಮಳೆ+ಕಾಲ ……….
೪. ಬಾಯಿ+ತುಂಬ ……….
೫. ಲಂಬಾ+ಅಚಲ ……….

6. Make use of the follwing words in your own sentences

ಏಳು, ನೋಡು, ಟಿಕ್‌ ಟಿಕ್‌, ಮುಳ್ಳು, ಸುತು

7. write answers to the follwing question

೧. ಗಡಿಯಾರದಲ್ಲಿ ಎಷ್ಟು ಮುಳ್ಳುಗಳಿರುತ್ತವೆ?
೨. ಗಡಿಯಾರದಲ್ಲಿ ಮುಳ್ಳುಗಳು ಏನನ್ನು ತೋರಿಸುತ್ತವೆ?
೩. ಒಂದು ಗಂಟೆಗೆ ಎಷ್ಟು ನಿಮಿಷ?
೪. ಗಡಿಯಾರದಿಂದ ಗಂಟೆಯನ್ನು ಹೇಗೆ ಗೊತ್ತು ಮಾಡುತ್ತೀರಿ?