ತುಮಕೂರಿನಲ್ಲಿ ನಡೆಯುತ್ತಿರುವ ೬೯ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಪುಸ್ತಕ ಪ್ರಕಟವಾಗುತ್ತಿದೆ. ನನ್ನ ಹಿಂದಿನ ಎಲ್ಲ ಪುಸ್ತಕಗಳಿಂದ ಕನ್ನಡ ಭಾಷೆಯ ಬಗ್ಗೆ, ಸಾಹಿತ್ಯದ ಬಗ್ಗೆ ಇಂದಿಗೂ ಪ್ರಸ್ತುತವೆನ್ನಿಸುವ ಲೇಖನಗಳನ್ನು ಈ ಪುಸ್ತಕದಲ್ಲಿ ಸೇರಿಸಲಾಗಿದೆ. ಹೀಗೆ ಆಯಲು ಅನುಮತಿ ಕೊಟ್ಟ ಅಕ್ಷರ ಪ್ರಕಾಶನದವರಿಗೆ ಕೃತಜ್ಞ,

ಈ ಆಯ್ಕೆಯನ್ನು ಬಯಸಿದವರು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಗೆಳೆಯ ಪ್ರೊಫೆಸರ್ ವೀರಣ್ಣನವರು. ಈ ಆಯ್ಕೆಯನ್ನು ಪ್ರೀತಿಯಿಂದಲೂ ಉತ್ಸಾಹದಿಂದಲೂ ಮಾಡಿದವರು ಶ್ರೀ ಎಸ್. ರಾಮಲಿಂಗೇಶ್ವರ (ಸಿಸಿರಾ).

ಸಾಹಿತ್ಯ ಪರಿಷತ್ತು ಈ ಸಂಕಲನವನ್ನು ಹೊರ ತರುತ್ತಿರುವುದರಿಂದ ನನಗೆ ಸಂತೋಷವಾಗಿದೆ.

ಅನಂತಮೂರ್ತಿ
ಜನವರಿ ೨೦೦೨