WRITING
20.1. Read the following sentences bearing the intention in mind that you are going to write them afterwards. You may also note that these are not isolated sentences. They grow into a small essay.
ಆ ಮರದ ಗೆಲ್ಲಿನಲ್ಲಿ ಒಂದು ಹಕ್ಕಿ ಕುಳಿತಿದೆ. |
of the tree on the branch a bird is perching |
A bird is sitting on the branch of the tree. |
ಅದು ಒಂದು ಬಣ್ಣ ಬಣ್ಣದ ಹಕ್ಕಿ. |
it a colourful bird |
It is a colourful bird. |
ಅದರ ಹೆಸರು ನಿಮಗೆ ಗೊತ್ತಾ? |
its name to you know? |
Do you know its name? |
.
ಅದರ ಹೆಸರು ಮಿಂಚುಳ್ಳಿ. / ಅದು ಮಿಂಚುಳ್ಳಿ |
its name Kingfisher / It kingfisher (is) |
It is called kingfisher. / It is kingfisher. |
ಅದು ಕೆರೆಗಳಿಂದ, ನದಿಗಳಿಂದ ಮೀನು ಹಿಡಿಯುತ್ತದೆ. |
it from lakes rivers fish catches |
It catches fish from lakes and rivers. |
.
ಮಿಂಚುಳ್ಳಿ ಇತರ ಹಕ್ಕಿಗಳಂತೆ ಮರದಲ್ಲಿ ಗೂಡು ಕಟ್ಟುವುದಿಲ್ಲ. |
kingfisher other birds+like tree+on nest build+no |
Kingfisher does not build a nest like other birds. |
ಸಾಮಾನ್ಯವಾಗಿ, ಮನುಷ್ಯನಿಗೆ ನಿಲುಕದ ಮಣ್ಣಿನ |
normally/generally for man not reaching/unreachable earthen+of |
ಗೋಡೆಯಲ್ಲಿ ಪೊಟರೆಯನ್ನು ನಿರ್ಮಿಸುತ್ತದೆ. |
wall hole makes |
Normally, makes a hole in an earthen wall unreachable for man. |
ಹಗಲು ಮೀನಿನ ಬೇಟೆ, ರಾತ್ರಿ ಹೊತ್ತು ಪೊಟರೆಯೊಳಗೆ ವಿಶ್ರಾಂತಿ |
day of fish hunting night in the hole rest |
Hunting fish by night and rest at night. |
ಪೊಟರೆಯಲ್ಲಿ ಮೊಟ್ಟೆಯಿಟ್ಟು ಮರಿ ಮಾಡುತ್ತದೆ. |
in the hole eggs+laying young one makes |
It lays eggs and breeds its young in the nest. |
ಮಿಂಚುಳ್ಳಿ ಒಂದು ವಿಶಿಷ್ಟವಾದ ಪಕ್ಷಿ. |
kingfisher a strange/peculiar bird |
Kingfisher is a strange bird. |
ಅದು ಮನುಷ್ಯನನ್ನು ಕಂಡ ಕೂಡಲೇ ದೂರ ಹಾರುವುದು ಯಾಕೆ ಎಂದು ನನಗೆ ಅರ್ಥವಾಗುವುದಿಲ್ಲ. |
it man seeing at once away flying why that to me understand+not |
I don’t understand why it flies away as soon as it sees man. |
ಮನುಷ್ಯ ಅದನ್ನು ಬೇಟೆಯಾಡುವುದಿಲ್ಲ. |
man it hunt+not |
Man does not hunt it |
ಅದು ತೀರಾ ನಿರುಪದ್ರವಿ ಪಕ್ಷಿ. |
it quite harmless bird |
t is quite a harmless bird |
ಮಿಂಚುಳ್ಳಿ ತನ್ನ ಪಾಡಿಗೆ ತಾನು ಸ್ವತಂತ್ರವಾಗಿ ಜೀವಿಸುತ್ತದೆ. |
kingfisher by itself it independently lives |
It lives independently by itself. |
ಆದರೂ ಅದು ಮನುಷ್ಯನಿಗೆ ಬಹಳ ಹೆದರುತ್ತದೆ. |
still/yet/even though it man+to very fears |
Yet, it is afraid of man. |
ಅದರ ಹೃದಯದಲ್ಲಿ ಮನುಷ್ಯನ ಬಗ್ಗೆ ಭಯ ಹುಟ್ಟಿದ್ದು ಹೇಗೆ? |
its heart+in man+of about/concerning born how |
What has created so much of fear in its heart? |
ಕಾಗೆಯ ಹಾಗೆ ಮಿಂಚುಳ್ಳಿ ಮನುಷ್ಯನನ್ನು ಪೀಡಿಸುವುದಿಲ್ಲ. |
crow like kingfisher man disturb+not |
Kingfisher does not disturb man as a crow does. |
ಕಾಗೆಗೆ ಪಟ್ಟಣ ಬೇಕು. ಮಿಂಚುಳ್ಳಿಗೆ ನದಿ ಸರೋವರಗಳು ಸಾಕು. |
crow+to town needs kingfisher+to lakes+streams enough |
A crow needs a town. Rivers and lakes are enough for the kingfisher. |
ಕಾಗೆ ಎಲ್ಲಿ ಬೇಕೆಂದರಲ್ಲಿ ತಟ್ಟನೆ ಕೂರುವಂಥ ನಿರ್ಭೀತ ಪಕ್ಷಿ. |
crow where want+there at once/suddenly of+perching fearless bird |
A crow is a fearless bird that perches all of a sudden wherever it wants. |
.
ಒಮ್ಮೊಮ್ಮೆ ಮನುಷ್ಯನ ತಲೆಯ ಮೇಲೆ ಕೂಡ. |
sometimes man+of hed+of too/also |
Sometimes on a man’s head, too. |
ಮಿಂಚುಳ್ಳಿ ಒಂದು ಬಾಣದಂತೆ ನೀರಿನಲ್ಲಿ ಮುಳುಗಿ ಕೊಕ್ಕಿನಲ್ಲಿ ಮೀನನ್ನು |
kingfisher a arrow+like water+in dipping beak+in fish |
ಹಿಡಿದುಕೊಂಡು ಹಾರಿ ಮರದ ಮೇಲೆ ಕುಳಿತುಕೊಳ್ಳುತ್ತದೆ. |
catching fluing tree+of on sits (perches) |
Kingfisher dips in water like an arrow and catchin the fish in its beak flies off on to a tree. |
ಮಿಂಚುಳ್ಳಿಯ ಅಂದವನ್ನು ಮರದ ಜೊತೆಗೇ ಕಾಣಬೇಕು. |
Kingfisher+of beauty tree+of together see+can |
You can see a kingfisher’s beauty only together with the tree. |
.
ಮಿಂಚುಳ್ಳಿ ನಮ್ಮ ಮನೆಯ ಮಾಡಿನ ಮೇಲೆ ಕೂಡ ಕುಳಿತುಕೊಳ್ಳುವುದಿಲ್ಲ. |
kingfisher our house+of roof+of even sit+not |
Kingfisher does not perch even on the roof of our house. |
ಕಾಗೆ ಪಾರಿವಾಳಗಳಂತೆ ಕಟ್ಟಡಗಳ ಮಾಡಿನ ಮೇಲೆಯೂ ಕುಳಿತುಕೊಳ್ಳುವುದಿಲ್ಲ. |
crow pigeons+like buildings+of roof+of
on+even sit+not |
It does not perch even on the roofs of buildings like crows and pigeons. |
ಮಿಂಚುಳ್ಳಿಗೆ ಮನುಷ್ಯನ ಕುರಿತು ಮಾತ್ರವಲ್ಲ, ಅವನು ನಿರ್ಮಿಸಿದ ಎಲ್ಲದರ ಕುರಿತೂ ಭಯ. |
kingfisher+to man+of about only_not he made all+of about+too fear |
It fears not only man but also all that is created by him. |
ಅದಕ್ಕೆ ಮನುಷ್ಯನ ಬಗ್ಗೆ ಯಾಕೆ ಇಷ್ಟು ಭಯ? |
it+to mam+of about why so much fear |
Why does it fear man so much? |
.
ಇದರ ಹಿಂದೆ ಏನೋ ಒಂದು ರಹಸ್ಯ ಇದೆ ಎಂದು ನನಗನಿಸುತ್ತದೆ. |
this+of behind some a mystery is that me+to+feel/imagine |
I imagine there is some mystery behind that fear. |
20.2. By this time almost all the letters of the Kannada alphabet have got planted in your mind. Try to read the following and write it. After this exercise, try to write a sentence or two of your own on a subject of your choice.
ಮಿಂಚುಳ್ಳಿ
ಆ ಮರದ ಕೊಂಬೆಯಲ್ಲಿ ಒಂದು ಹಕ್ಕಿ ಕುಳಿತಿದೆ. ಅದು ಒಂದು ಬಣ್ಣ ಬಣ್ಣದ ಹಕ್ಕಿ. ಅದರ ಹೆಸರು ನಿಮಗೆ ಗೊತ್ತಾ? ಅದರ ಹೆಸರು ಮಿಂಚುಳ್ಳಿ. ಅದು ಕೆರೆಗಳಿಂದ, ನದಿಗಳಿಂದ ಮೀನು ಹಿಡಿಯುತ್ತದೆ. ಮಿಂಚುಳ್ಳಿ ಇತರ ಹಕ್ಕಿಗಳಂತೆ ಮರದಲ್ಲಿ ಗೂಡು ಕಟ್ಟುವುದಿಲ್ಲ. ಸಾಮಾನ್ಯವಾಗಿ, ಮನುಷ್ಯನಿಗೆ ನಿಲುಕದ ಮಣ್ಣಿನ ಗೋಡೆಯಲ್ಲಿ ಪೊಟರೆಯನ್ನು ನಿರ್ಮಿಸುತ್ತದೆ. ಹಗಲು ಮೀನಿನ ಬೇಟೆ, ರಾತ್ರಿ ಹೊತ್ತು ಪೊಟರೆಯೊಳಗೆ ವಿಶ್ರಾಂತಿ. ಪೊಟರೆಯಲ್ಲಿ ಮೊಟ್ಟೆಯಿಟ್ಟು ಮರಿ ಮಾಡುತ್ತದೆ.
ಮಿಂಚುಳ್ಳಿ ಒಂದು ವಿಶಿಷ್ಟವಾದ ಪಕ್ಷಿ. ಅದು ಮನುಷ್ಯನನ್ನು ಕಂಡ ಕೂಡಲೇ ದೂರ ಹಾರುವುದು ಯಾಕೆ ಎಂದು ನನಗೆ ಅರ್ಥವಾಗುವುದಿಲ್ಲ. ಮನುಷ್ಯ ಅದನ್ನು ಬೇಟೆಯಾಡುವುದಿಲ್ಲ. ಅದು ತೀರಾ ನಿರುಪದ್ರವಿ ಪಕ್ಷಿ. ಮಿಂಚುಳ್ಳಿ ತನ್ನ ಪಾಡಿಗೆ ತಾನು ಸ್ವತಂತ್ರವಾಗಿ ಜೀವಿಸುತ್ತದೆ. ಆದರೂ ಅದು ಮನುಷ್ಯನಿಗೆ ಬಹಳ ಹೆದರುತ್ತದೆ. ಅದರ ಹೃದಯದಲ್ಲಿ ಮನುಷ್ಯನ ಬಗ್ಗೆ ಭಯ ಹುಟ್ಟಿದ್ದು ಹೇಗೆ?
ಕಾಗೆಯ ಹಾಗೆ ಮಿಂಚುಳ್ಳಿ ಮನುಷ್ಯನನ್ನು ಪೀಡಿಸುವುದಿಲ್ಲ. ಕಾಗೆಗೆ ಪಟ್ಟಣ ಬೇಕು. ಮಿಂಚುಳ್ಳಿಗೆ ನದಿ ಸರೋವರಗಳು ಸಾಕು. ಕಾಗೆ ಎಲ್ಲಿ ಬೇಕೆಂದರಲ್ಲಿ ತಟ್ಟನೆ ಕೂರುವಂಥ ನಿರ್ಭೀತ ಪಕ್ಷಿ. ಒಮ್ಮೊಮ್ಮೆ ಮನುಷ್ಯನ ತಲೆಯ ಮೇಲೆ ಕೂಡ. ಮಿಂಚುಳ್ಳಿ ಒಂದು ಬಾಣದಂತೆ ನೀರಿನಲ್ಲಿ ಮುಳುಗಿ ಕೊಕ್ಕಿನಲ್ಲಿ ಮೀನನ್ನು ಹಿಡಿದುಕೊಂಡು ಹಾರಿ ಮರದ ಮೇಲೆ ಕುಳಿತುಕೊಳ್ಳುತ್ತದೆ. ಅದರ ಅಂದವನ್ನು ಮರದ ಜೊತೆಗೇ ಕಾಣಬೇಕು. ಅದು ನಮ್ಮ ಮನೆಯ ಮಾಡಿನ ಮೇಲೆ ಕೂಡ ಕುಳಿತುಕೊಳ್ಳುವುದಿಲ್ಲ. ಕಾಗೆ ಪಾರಿವಾಳಗಳಂತೆ ಕಟ್ಟಡಗಳ ಮಾಡಿನ ಮೇಲೆಯೂ ಕುಳಿತುಕೊಳ್ಳುವುದಿಲ್ಲ.
ಮಿಂಚುಳ್ಳಿಗೆ ಮನುಷ್ಯನ ಕುರಿತು ಮಾತ್ರವಲ್ಲ, ಅವನು ನಿರ್ಮಿಸಿದ ಎಲ್ಲದರ ಕುರಿತೂ ಭಯ. ಅದಕ್ಕೆ ಮನುಷ್ಯನ ಬಗ್ಗೆ ಯಾಕೆ ಇಷ್ಟು ಭಯ? ಈ ಭಯದ ಹಿಂದೆ ಏನೋ ಒಂದು ರಹಸ್ಯ ಇದೆ ಎಂದು ನನಗನಿಸುತ್ತದೆ.
Leave A Comment