TALKING ABOUT WHAT HAS HAPPENED

 

ಡಾಕ್ಟರ್: ಏನಾಗ್ತಿದೆ ಮಿಸ್ಟರ್ ಮೂರ್ತಿ?
Doctor: What’s the problem Doctor Murthy?

ಪೇಶಂಟ್: ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ನಾನು ಏನೂ ತಿಂದಿಲ್ಲ.
Patient: I haven’t eaten anything for the last twenty-four hours.

ಡಾಕ್ಟರ್: ಯಾಕೆ?
Doctor: Why?

ಪೇಶಂಟ್: ನನ್ನ ಹಸಿವು ಮಾಯವಾಗಿದೆ.
Patient: My hunger has disappered.

ಡಾಕ್ಟರ್: ಹಿಂದೆ ಯಾವತ್ತಾದರೂ ಈ ಸಮಸ್ಯೆ ಇತ್ತಾ?
Doctor: Had you ever had this problem before?

ಪೇಶಂಟ್: ಯಾವತ್ತೂ ಇರ್ತಿಲ್ಲ.
Patient: Never.

ಡಾಕ್ಟರ್: ಪೇಶಂಟ್: ನಿನ್ನೆ ಮದ್ಯಾಹ್ನ ಏನು ಊಟ ಮಾಡಿದ್ರಿ?
Doctor: What did you eat for lunch yesterday?

ಪೇಶಂಟ್: ಕೆಲವು ಬ್ರೆಡ್ ಸ್ಲೈಸುಗಳು,. ಸ್ವಲ್ಪ ಫ್ರೈಡ್ ರೈಸ್, ಕೆಲವು ಚಿಕನ್ ಹೋಳುಗಳು, ಸ್ವಲ್ಪ ಮೀನು, ಒಂದು ಕಪ್ ಐಸ್‌ಕ್ರೀಮ್, ಒಂದು ಕಪ್ ಕಾಫಿ………
Patient: I ate a few slices of bread, some fried rice, a few pieces of chicken, some fish, a cup of ice cream, a cup of coffee.

ಡಾಕ್ಟರ್: ಮೆನು ಥರಾ ಕೇಳಿಸುತ್ತೆ ಡಾಕ್ಟರ್ ಮೂರ್ತಿ. ಅಷ್ಟೆಲ್ಲಾ ತಿನ್ನುವ ಅಗತ್ಯ ಏನಿತ್ತು?
Doctor: It sounds like a menu, Murthy. What was the need to eat all that?

ಪೇಶಂಟ್: ನನ್ನ ಮೊಮ್ಮಗಳ ಬರ್ತ್ ಡೇ, ಡಾಕ್ಟರ್. ನನ್ನ ಮಕ್ಕಳು ಒತ್ತಾಯದಿಂದ ತಿನ್ನಿಸಿದ್ರು
Patient: It was my grand-daughter’s first birthday, doctor. My sons and daughters forced me to eat.

ಡಾಕ್ಟರ್: ಇವತ್ತು ಮಧ್ಯಾಹ್ನ ಏನು ತಿಂದ್ರಿ?
Doctor: What have you eaten for lunch today?

 

ಪೇಶಂಟ್: ಏನೂ ಇಲ್ಲ.
Patient: Nothing.

ಡಾಕ್ಟರ್: ನೀರು ಕೂಡ ಕುಡೀಲಿಲ್ವ?
Doctor: Haven’t you even drunk water?

ಪೇಶಂಟ್: ಇಲ್ಲ ಡಾಕ್ಟರ್.
Patient: No, doctor.

ಡಾಕ್ಟರ್: ಆಶ್ಚರ್ಯ! ನಿನ್ನೆ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ರಾ?
Doctor: It’s amazing. Did you sleep well last night?

ಪೇಶಂಟ್: ಹೂಂ. ಮಾಡಿದೆ.
Patient: Yes, I did.

ಡಾಕ್ಟರ್: ಏನಾದ್ರೂ ಔಷಧಿ ತಡೊಂಡಿದೀರಾ?
Doctor: Have you taken any medicine?

ಪೇಶಂಟ್: ಇಲ್ಲ.
Patient: No.

ಡಾಕ್ಟರ್: ಈ ನಿಮ್ಮ ಸಮಸ್ಯೆಯ ವಿಚಾರ ನಿಮ್ಮ ಮಕ್ಕಳಿಗೆ ಹೇಳಿಲ್ವ?
Doctor: Haven’t you told your children about this problem?

ಪೇಶಂಟ್: ಇಲ್ಲ.
Patient: No, I haven’t.

ಡಾಕ್ಟರ್: ಯಾಕೆ?
Doctor: Why?

ಪೇಶಂಟ್: ಅವರು ನಿನ್ನೆ ಮಧ್ಯಾಹ್ನ ಊಟದ ನಂತರ ಹೋದರು. ನನ್ನ ಹೆಂಡತಿಯ ಬಳಿ ಹೇಳಿದ್ದೆ.
Patient: After lunch yesterday they all left. I’ve just told my wife.

ಡಾಕ್ಟರ್: ಆಕೆ ಯಾಕೆ ನಿಮ್ಮ ಜೊತೆ ಬರ್ಲಿಲ್ಲ?
Doctor: Why hasn’t she come with you?

ಪೇಶಂಟ್: ಅವಳು ತರಕಾರಿ ಕೊಳ್ಳಲು ಮಾರ್ಕೆಟಿಗೆ ಹೋಗಿದ್ದಾಳೆ.
Patient: She’s gone to the market to buy vegetables.

ಡಾಕ್ಟರ್: ಇವತ್ತು ರಾತ್ರಿಯ ಊಟಕ್ಕೆ?
Doctor: For dinner today?

ಪೇಶಂಟ್: ಬಹುಶ: ಹೌದು.
Patient: Yes, perhaps.

ಡಾಕ್ಟರ್: ನಾನು ನಿಮ್ಗೆ ಪ್ರಿಸ್ಕ್‌ರೈಬ್ ಮಾಡೋದು ಮೂರು ಲೀಟರ್ ಬಿಸಿ ನೀರು.
Doctor: I prescribe you three litres of hot water.

ಪೇಶಂಟ್: ಬಿಸಿನೀರು?
Patient: Hotwater?

ಡಾಕ್ಟರ್: ಹೌದು. ಮನೆಗೆ ಹೋಗಿ ಮೂರು ಲೀಟರ್ ನೀರು ಕುದಿಸಿ. ಇನ್ನು ಎಂಟು ಗಂಟೆಗಳ ಕಾಲ ಏನೂ ತಿನ್ನಬೇಡಿ. ಬಿಸಿ ನೀರು ಕುಡೀತಾ ಇರಿ. ಬಿಸಿನೀರು ಖಾಲಿಯಾದ ಮೇಲೆ ನಂಗೆ ಫೋನ್‌ಮಾಡಿ. ಅಂದ್ಹಾಗೆ, ಏನು ನಿಮ್ಮ ವಯಸ್ಸು?
Doctor: Yes. Go home boil three litres of hot water. Don’t eat anything for another eight hours. Keep on drinking hot water. When you’ve finished it, call me. By the by, how old are you?

ಪೇಶಂಟ್: ಎಪ್ಪತ್ತರ ರೈಟ್ ಸೈಡ್.
Patient: I’m on the right side of seventy.

ಡಾಕ್ಟರ್: ಎಪ್ಪತ್ತು! ರೈಟ್ ಸೈಡ್ ಅಂತ ಇರೋದು ಅರ್ವತ್ರರ ವರೆಗೆ ಮಾತ್ರ. ಅನಂತರ ರಾಂಗ್ ಸೈಡ್ ಮಾತ್ರ. ರೈಟ್ ಸೈಡಿನಲ್ಲಿ ಇರ್ಬೇಕೂಂತಿದ್ರೆ, ತಿನ್ನೋದ್ರಲ್ಲಿ ರೈಟಾಗಿರ್ಬೇಕು.
Doctor: Seventy! Right side is only up to sixty. After that you have only the wrong side. You can choose to be on the right side only if you eat right.

ಪೇಶಂಟ್: ಆಗ್ಲಿ ಡಾಕ್ಟರ್. ನಿಮ್ಮ ಸಲಹೆಗೆ ಥ್ಯಾಂಕ್ಸ್
Patient: Okay doctor. Thank you for the advice.

ಡಾಕ್ಟರ್: ಈಗ ಮನೆಗೆ ಹೋಗಿ ನೀರು ಕುದಿಸಿ.
Doctor: Now go home and boil water.