TALKING ABOUT WHAT IS HAPPENING

 

ರಾಹುಲ್: ಈ ಇನ್ನಿಂಗ್ಸ್‌ನಲ್ಲಿ ನಾವೇ ಗೆಲ್ಲೋದು.
Rahul: I’m sure this innings is ours.

ಸಚಿನ್: ಅಷ್ಟು ಖಂಡಿತವಾಗಿರ್ಬೇಡ.
Sachin: Don’t be so sure.

ರಾಹುಲ್: ಯಾಕೆ?
Rahul: Why?

ಸಚಿನ್: ಅಕಾಶ ನೋಡು.
Sachin: Look at the sky.

ರಾಹುಲ್: ಯಾಕೆ? ಅಕಾಶ ನೋಡೋದು ನಾವು ಶತಕ ಅಥವಾ ಅರ್ಧ ಶತಕ ಬಾರಿಸಿದಾಗ.
Rahul: Why? That we do when we hit a century or half.

ಸಚಿನ್: ಅದು ನಿಜ. ಪಿಚ್ ಮೇಲೆ ಮೋಡಗಳು ಸೇರ್ತಾ ಇರೋದನ್ನು ನೋಡು. ಮಳೆ ಬರೋ ಹಾಗಿದೆ.
Sachin: That’s true. Look. Clouds are gathering right above the court.

It seems it’s going to rain.

ರಾಹುಲ್: ನಮ್ಮ ಅನುಕೂಲಕ್ಕೆ?
Rahul: In our favour?

ಸಚಿನ್: ಹಾಗಂದ್ಕೊಳ್ಬಹುದು. ನಮ್ಮ ಹುಡುಗರು ಚೆನ್ನಾಗಿ ಅಡ್ತಾ ಇಲ್ಲ. ಆಸ್ಟ್ರೇಲಿಯಾದ ಬಳಿ ಭಾರೀ ಲೀಡ್ ಇದೆ.
Sachin: It seems. Our boys are not playing well. Australia are having a huge lead.

* * *

ಕಿರಣ್: ಏನು ಮಾಡ್ತಾ ಇರುವೆ?
Kiran: What are you doing?

ಸೌರವ್: ನನ್ನ ತಮ್ಮನಿಗೆ ಕಾಗದ ಬರೆಯುತ್ತಿದ್ದೇನೆ.
Saurav: I’m writing a letter to my brother.

ಕಿರಣ್: ಎಲ್ಲಿದ್ದಾನೆ ಅವ್ನ?
Kiran: Where is he?

ಸೌರವ್: ಮೈಸೂರ್ನಲ್ಲಿ
Saurav: He is in Mysore.

ಕಿರಣ್: ಏನ್ಮಾಡ್ತಿದಾನೆ ಅವ್ನ ಅಲ್ಲಿ?
Kiran: What is he doing there?

ಸೌರವ್: ಕಂಪ್ಯೂಟರ್ ಸಯನ್ಸ್ ಕಲಿಸ್ತಿದಾನೆ.
Saurav: He is teaching computer science.

ಕಿರಣ್: ಎಲ್ಲಿ?
Kiran: Where?

ಸೌರವ್: ಒಂದು ಕಾಲೇಜಿನಲ್ಲಿ
Saurav: In a college.

ಕಿರಣ್: ಒಂದು ವೆಬ್‌ಸೈಟು ಮಾಡ್ಲಿಕ್ಕೆ ಅವನ ಸಹಾಯ ಸಿಗಬಹುದೆ ಅಂತ ಯೋಚಿಸ್ತಿದ್ದೇನೆ.
Kiran: I wonder if he could help me in designing a website.

ಸೌರವ್: ಮಾಡಬಹುದು ಅಂತನಿಸುತ್ತೆ.
Saurav: I think he can.

ಕಿರಣ್: ನನಗೆ ಅವನ ವಿಳಾಸ ಕೊಡು.
Kiran: Please give me his address.

ಸೌರವ್: ಅವ್ನ ಈ ವಾರದ ಕೊನೆಗೆ ಬರ‌್ತಿದಾನೆ. ನೀನು ಅವನನ್ನು ಭೇಟಿಯಾಗ್ಬಹುದು.
Saurav: He is coming home this weekend. You can meet him.

* * *

ವೃಂದ: ಅದೇನು ಕರ್ಕಶ ಶಬ್ದ ಕೆಳಗಡೆ?
Vrinda: What’s that racket downstairs?

ಸುಚಿತ್ರ: ಒಬ್ಬ ಆಚಾರಿ.
Suchitra: It’s the carpenter.

ವೃಂದ: ಏನ್ಮಾಡ್ತಿದಾನೆ?
Vrinda: What is he doing?

ಸುಚಿತ್ರ: ಹಳೆಯ ಫರ್ನಿಚರ್ ರಿಪೇರಿ ಮಾಡ್ತಿದಾನೆ.
Suchitra: He is repairing some old furniture.

ವೃಂದ: ನಿಜ. ಯಾವುದೇ ಹಳೆಯ ವಸ್ತುವನ್ನು ರಿಪೇರಿ ಮಾಡುವಾಗ ವಿಪರೀತ ಸದ್ದಾಗುತ್ತೆ.
Vrinda: Yea, repairing anything old makes a lot of noise.

ಸುಚಿತ್ರ: ಇವ್ನ ತುಂಬಾ ಸ್ಪೆಶಲ್. ಇವ್ನ ಕೆಲಸ ಮಾಡದಿರುವಾಗ್ಲೂ ಶಬ್ದ ಮಾಡ್ತಾನೆ.
Suchitra: This carpenter is very special. He makes noise even when he is not working

ಸುಚಿತ್ರ: ಹೇಗೆ?
Suchitra: How?

ವೃಂದ: ತಾರಕ ಸ್ವರದಲ್ಲಿ ಹಾಡ್ತಾ ಇರ್ತಾನೆ.
Vrinda: He keeps singing at the top of his vioice.

ಸುಚಿತ್ರ: ನೋಡು ಈಗ ಶಬ್ದ ನಿಂತಿತು.
Suchitra: See. Now the racket stopped.

ವೃಂದ: ಈಗ ನೀನು ಅವ್ನ ಹಾಡುವುದನ್ನು ಕೇಳಬಹುದು
Vrinda: Now you can hear him singing.

ಸುಚಿತ್ರ: ಹೌದು ಅರಂಭಿಸಿದ. ಆ ಮನೆಯಲ್ಲಿ ಬೇರೆ ಯಾರು ಇಲ್ವ?
Suchitra: Yea, he started. Isn’t there anybody else?

ವೃಂದ: ಮನೆಯವರು ದೀರ್ಘ ಪ್ರವಾಸ ಹೋಗಿದ್ದಾರೆ.
Vrinda: The inmates have gone on a long tour.

ಸುಚಿತ್ರ: ಅದು ಒಳ್ಳೆಯ ಐಡಿಯ
Suchitra: That’s a good idea.

ವೃಂದ: ಏನು?
Vrinda: What?

ಸುಚಿತ್ರ: ಮನೆಯವ್ರ ಪ್ರವಾಸ ಹೋಗಿದಾರೆ. ಅಚಾರಿ ಮನೆಯನ್ನು ನೋಡಿಕೊಳ್ತಿದಾನೆ. ಹಳೇ ಫರ್ನಿಚರ್ ಕೂಡ ರಿಪೇರಿ ಮಾಡ್ತಿದಾನೆ. ಇಡೀ ದಿನ ಬಿಜಿಯಾಗಿರ್ತಾನೆ. ಮರ ಕೊಯ್ತ, ಗೀಸುಳಿ ಹಾಕ್ತಾ, ಬಡೀತಾ …
Suchitra: Yea, the inmates are on a tour. The carpenter is taking care of the house. He is also fixing all old furniture. He is busy all the time, sawing, filing, hitting and…

ವೃಂದ: ಹಾಡ್ತಾ…
Vrinda: Singing.

ಸುಚಿತ್ರ: ಹೌದು ಹಾಡ್ತಾ. ಎಲ್ಲಿಗಾದ್ರೂ ಟೂರ್ ಹೋಗೋದಿದ್ರೆ ಮನೆಯನ್ನ ಒಬ್ಬ ಹಾಡುವ ಆಚಾರಿಯ ವಶ ಬಿಟ್ಹೋಗೋದು. ಕಳ್ಳರು ಬಳಿ ಸುಳಿಯೋಲ್ಲ.
Suchitra: Leave the house to a singing carpenter when you go on tour so that burglers keep away.