TALKING ABOUT WHAT ALWAYS HAPPENS

 

ರವಿ: ಪ್ರಿನ್ಸಿಪಾಲರಿಗೆ ನಿನ್ನನ್ನ ಕಾಣ್ಬೇಕಂತೆ.
Ravi: The principal wants to see you.

ರಾಜು: ಬಹಳ ಒಳ್ಳೇದು
Raju: Oh, that’s good.

ರವಿ: ಅದ್ರಲ್ಲಿ ಒಳ್ಳೇದು ಏನು? ಅವ್ರ ಹೇಳಿರೊದು ನೀನು ಅವ್ರನ್ನ ಕಾಣ್ಬೇಕು ಅಂತ.
Ravi: What’s good about it? He wants you to see him.

ರಾಜು: ಒಹ್, ಅದು ಖಂಡಿತ ಕೆಟ್ಟದು. ಯಾಕೆ ಅಂತ ಏನಾದರೂ ಐಡಿಯ ಇದ್ಯಾ?
Raju: Oh, that’s pretty bad. Do you have any idea why?

ರವಿ: ನಿಂಗೇ ಗೊತ್ತು. ತಿಂಗಳಿಗೆ ಕನಿಷ್ಠ ಒಂದು ಬಾರಿ ನಿನ್ನನ್ನ ಕರೆಸ್ತಾರೆ.
Ravi: You know better. He calls you at least once every month.

ರಾಜು: ಯಾಕಂತ ಗೊತ್ತಾ ನಿಂಗೆ?
Raju: Do you know why?

ರವಿ: ನಂಗೊತ್ತಿಲ. ಅವ್ರ ನಿಂಗೆ ದೂರದ ಸಂಬಂಧ ಅಂತ ಗೊತ್ತು. ಅವ್ರಿಗೆ ಒಬ್ಳು ಮಗಳು ಕೂಡ ಇದಾಳೆ.
Ravi: I don’t know. I know he is a distant relation of yours. He has a daughter, too.

ರಾಜು: ವಿಷಯ ಅದಲ್ಲ. ಅದು ನನ್ನ ಅಪ್ಪ ಸ್ಟಡಿಯಲ್ಲಿ ನನ್ನ ಪ್ರೊಗ್ರೆಸನ್ನ ದುಬೈಯಿಂದ ಮಾನಿಟರ್ ಮಾಡ್ತಿರೋದು.
Raju: That’s not the issue. It’s my daddy monitoring my progress in studies from Dubai.

ರವಿ: ಯಾವತ್ತಿನಿಂದ ಇದನ್ನವರು ಶುರುಮಾಡಿದ್ದು?
Ravi: Since when has he started it?

ರಾಜು: ಕಳೆದ್ಸಲ ಮನೆಗೆ ಬಂದುಹೋದ ನಂತರ.
Raju: Since he visited home last month.

ರವಿ: ಅದು ಬಹಳ ಒಳ್ಳೆಯದು. ನಂಗೂ ಇನ್ಸೆಂಟಿವ್ ಕೊಟ್ಟು ಸ್ಟಡೀಸನ್ನ ಮಾನಿಟರ್ ಮಾಡೋ ಅಪ್ಪ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.
Ravi: That’s nice indeed. I wish I had a father to monitor my studies with an incentive.

 

ರಾಜು: ನಂಗೆ ಅಪ್ಪ ರಾಶೀ ರಾಶಿ ಹಣ ಕಳಿಸ್ತಾರೆ ಹಣ ಕಳಿಸ್ತಾರೆ ಅನ್ನೋ ಅರ್ಥದಲ್ಲಿ ಮಾತಾಡ್ಬೇಡ.
Raju: Don’t assume that he sends me plenty of money.

ರವಿ: ಆದ್ರೆ ಅದು ನಿಜ ತಾನೆ?
Ravi: But it’s a fact, isn’t it?

ರಾಜು: ಕಳಿಸ್ತಾರೆ. ನೀನಂದ್ಕೊಳ್ಳೋ ಹಾಗೆ ರಾಶಿ ರಾಶಿ ಅಲ್ಲ. ಅದರ ಜೊತೆ ಬೇರೆ ರಾಶಿ ರಾಶಿ ಕಳಿಸ್ತಾರೆ ನಂಗೆ ನೇರವಾಗಿ ಮತ್ತು ಪ್ರಿನ್ಸಿ ಮೂಲಕವೂ.
Raju: Yes, he sends, but not a bounty. He sends a lot something else straight to me as well as through the princy.

ರವಿ: ಏನು?
Ravi: What?

ರಾಜು: ಉಪದೇಶ.
Raju: Advice.

ರವಿ: ಅದರಿಂದ ಕೆಟ್ಟದೇನೂ ಆಗಲ್ಲ. ಬರೀ ಉಪದೇಶ ಯಾರಿಗಿಷ್ಟ ಅಗುತ್ತೆ? ಹಣ ಕೊಟ್ಟು ಉಪದೇಶ ಮಾಡ್ಬೇಕು ನೋಡು.
Ravi: It doesn’t do any harm. Who likes bare advice? Give advice with money.

ರಾಜು: ಆದ್ರೆ ಪ್ರಿನ್ಸಿ ಒಂದಷ್ಟು ಬರೀ ಉಪದೇಶ ಮಾಡ್ತಾರೆ. ಅದೇ ಬೋರು.
Raju: But the princy pours out plenty of blank advice.

ರವಿ: ಅವ್ರಿಂದ್ಲೂ ಹಣ ನಿರೀಕ್ಷಿಸ್ಬೇಡ. ಅವರು ಕೂಡ ಕೊಡ್ತಾರಲ್ಲಾ ನಿಂಗೆ ಹೆಚ್ಚು ಬೆಲೆ ಬಾಳುವಂಥದು?
Ravi: Don’t expect money from him, too. He’ll give you something elese more valuable.

ರಾಜು: ಏನು?
Raju:. What?

ರವಿ: ಮಗಳನ್ನ. ಅವರಿಗೆ ಗೊತ್ತು ಮಾವ ಆದ್ಮೇಲೆ ನೀನು ಅವರ ಉಪದೇಶ ಕೇಳಲ್ಲ ಅಂತ.
Ravi: His daughter. He knows you won’t listen to you after he becomes your father-in-law.

ರಾಜು: ಅವರ ಮಗಳು ನಂಗ್ಯಾಕೆ? ಅವಳು ಪ್ರತಿ ಪರೀಕ್ಷೆಯಲ್ಲಿ ಮೂರು ಸಬ್ಜೆಕ್ಟಿನಲ್ಲಿ ಪಾಸಾಗ್ತಾಳೆ, ಮೂರಲ್ಲಿ ಫೈಲಾಗ್ತಾಳೆ.
Raju: I don’t want her. In every exam she passes in three subjects and fails in three.

ರವಿ: ನೀನು ಕೂಡ ಹಾಗಾಗ್ಬಾರ‌್ದು ಅನ್ನೋದು ಅವರ ಉದ್ದೇಶ. ಗಂಡ ಹೆಂಡತಿ ಇಬ್ರೂ ಫೇಲಾಗೋ ಟೈಪು ಆಗಿದ್ರೆ ಹೇಗೆ? ಒಬ್ರು ಪಾಸು ಒಬ್ರು ಫೇಲು ಆದರೆ ಹೇಗಾದ್ರೂ ಸುಧಾರಿಸಿಕೊಂಡು ಹೋಗ್ಬಹುದು, ಏನಂತೀಯಾ?
Ravi: Princy’s intention is that you also shouldn’t be like that. If both wife and husband are the failing sort, how does the marriage work? If one is the passing sort and the other is the failing one, they can manage somehow. what do you say?