TALKING ABOUT WHAT WILL HAPPEN

 

ಪೀಟರ್: ನನ್ನ ಮದುವೆ ಸೂಟು ಯಾವಾಗ ಸಿಗೋದು ನಂಗೆ?
Peter: Tailor, when will I get my wedding suit?

ಟೈಲರ್: ನಿಮ್ಮ ಮದುವೆ ಯಾವಾಗ ಸರ್?
Tailor: Sir, when is your wedding?

ಪೀಟರ್: ಇದೇ ತಿಂಗಳು ಹತ್ತಕ್ಕೆ.
Peter: On the tenth, this month.

ಟೈಲರ್: ಹತ್ತಕ್ಕೆ? ಇನ್ನೂ ಒಂದು ವಾರ ಇದೆ.
Tailor: Tenth? A week to go.

ಪೀಟರ್: ಒಂದು ವಾರ ಭಾರೀ ಉದ್ದವೇನಲ್ಲ.
Peter: A week is not that long.

ಟೈಲರ್: ನಾನೊಪ್ತೀನಿ. ಸರ್, ನಾನು ಕೂಡ ಮದುವೆಯಾಗ್ತಿದ್ದೀನಿ
Tailor: I agree with you. Sir, I’m also getting married.

ಪೀಟರ್: ಹೌದಾ? ಯಾವಾಗ?
Peter: Are you? when?

ಟೈಲರ್: ಅದೇ ದಿನ, ಸರ್. ಎರಡೂ ಸೂಟ್‌ಗಳನ್ನೂ ಒಟ್ಟಿಗೇ ರೆಡಿ ಮಾಡ್ತೀನಿ.
Tailor: Sir, the same day. I’ll make ready both the suits together.

ಪೀಟರ್: ಅದು ಚೆನ್ನಾಗಿದೆ. ಆದ್ರೆ, ನನ್ನದು ಸಿಗೋದು ಯಾವಾಗ?
Peter: That’s nice, but when will I get mine?

ಟೈಲರ್: ಆಗ್ಲೇ ಕೆಲಸ ಶುರು ಮಾಡಿದ್ದೀನಿ ಸರ್.
Tailor: Sir, I’ve already started the work.

ಪೀಟರ್: ಇದೇ ಅಲ್ವ?
Peter: This one, isn’t it?

ಟೈಲರ್: ಅಲ್ಲ ಸರ್. ಇದು ನನ್ನದು
Tailor: No sir, this is mine.

ಪೀಟರ್: ಆದ್ರೆ ನನ್ನದರ ಹಾಗೆ ಕಾಣ್ತಾ ಇದೆ.
Peter: But it looks like mine

ಟೈಲರ್: ನಿಜ. ನಿಮ್ಮ ಆಯ್ಕೆ ನೋಡಿದ್ಮೇಲೆ ನಾನು ಕೂಡ ಆದೇ ಬಟ್ಟೆ ಕೊಂಡ್ಕೊಂಡೆ.
Tailor: True. After seeing your selection, I bought the same material for me too.

ಪೀಟರ್: ಅದು ಸರಿ. ಆದ್ರೆ ನೀನು ನನ್ನ ಸೂಟನ್ನ ಮೊದಲು ಹೊಲೀಬೇಕಾಗಿತ್ತು
Peter: That’s okay. But you should’ve done mine first.

ಟೈಲರ್: ಚಿಂತಿಸ್ಬೇಡಿ ಸರ್. ಸರಿಯಾದ ಸಮಯಕ್ಕೆ ನಿಮ್ಮ ಸೂಟ್ ರೆಡಿ ಮಾಡಿಡ್ತೀನಿ.
Tailor: Don’t worry sir.I will get your suit ready in time.

ಪೀಟರ್: ಆದ್ರೂ ನೀವು ಅದ್ಯತೆಯ ರೀತಿ ನಂಗಿಷ್ಟವಾಗ್ಲಿಲ್ಲ. ನೀವು ಗಿರಾಕಿಯದ್ದನ್ನ ಮೊದಲು ಹೊಲೀಬೇಕಾಗಿತ್ತು.
Peter: Still, I can’t appreciate your preference. The customer’s work should be done first.

ಟೈಲರ್: ನನ್ನನ್ನು ನಂಬಿ ಸರ್. ನಿಮ್ಮ ಮದುವೆಗೆ ಮೊದಲು ನಿಮ್ಮ ಮದುವೆ ಸೂಟಿನ ಕೆಲಸ ಆಗುತ್ತೆ.
Tailor: Trust me sir. Yours will be done before the wedding.

ಪೀಟರ್: ಆ ಮಾತು ಬಹಳ ತಮಾಶೆಯಾಗಿದೆ.
Peter: That sounds very funny.

ಟೈಲರ್: ಒಂದು ವೇಳೆ, ಯಾವುದೇ ಕಾರಣಕ್ಕೆ ಆಗ್ಲಿಲ್ಲ ಅಂತಾದ್ರೆ, ನೀವು ನನ್ನದನ್ನ ತಗೊಳಿ. ನಮ್ಮಿಬ್ರದೂ ಒಂದೇ ಎತ್ತರ.
Tailor: In case it is not done for any reason, you take mine sir, I am the same height as you are.

ಪೀಟರ್: ಎತ್ತರದ ವಿಚಾರ ಸರಿಯಿರ‌್ಬಹುದು. ಆದರೆ ತೂಕದಲ್ಲಿ ಅಲ್ಲ. ನೀವು ಏನಿಲ್ಲ ಅಂದ್ರೂ ನನಗಿಂತ ಹತ್ತು ಕಿಲೊ ಜಾಸ್ತಿ ಇದ್ದೀರಿ
Peter: Yes, but not the same weight as yours. You weigh at least ten kilograms more.

ಟೈಲರ್: ಅದು ನಿಮ್ಮ ಅನುಕೂಲಕ್ಕೇ ಬರುತ್ತೆ ಸರ್. ನಾನು ನಿಮಗಿಂತ ತೆಳ್ಳಗಿದ್ದಿದ್ರೆ, ನಂಗೆ ಈ ಯೋಚನೆ ಬರ್ತಿರ್ಲಿಲ್ಲ.
Tailor: That’s to your advantage sir. If I were thinner, I wouldn’t imagine that.

ಪೀಟರ್: ಅಂಥ ಯೋಚನೆಯೇನೂ ಬೇಡ. ಇವತ್ತಿನಿಂದ ಮೂರು ದಿನಗಳ ಒಳಗೆ ನನ್ನ ಸೂಟ್ ರೆಡಿಯಾಗ್ಬೇಕು.
Peter: Don’t imagine things. Get my suit ready within three days from today.

ಟೈಲರ್: ಅದು ಅಸಾಧ್ಯ ಸರ್.
Tailor: That’s almost impossible sir.

ಪೀಟರ್: ಹಾಗಿದ್ರೆ ನಾನು ರೆಡಿಮೇಡ್ ಹುಡುಕ್ತೀನಿ.
Peter: Then let me look for some readymade stuff.

ಟೈಲರ್: ಸ್ವಲ್ಪ ತಾಳಿ ಸರ್. ಮುಂದಿನ ಸೋಮವಾರ ನಿಮ್ಗೆ ನಿಮ್ಮ ಸೂಟ್ ಸಿಗುತ್ತೆ.
Tailor: Bear with me sir, you are getting the suit next Monday.

ಪೀಟರ್: ಅಂದ್ರೆ ಮದುವೆಯ ಹಿಂದಿನ ದಿನ.
Peter: Just the day before the wedding.

ಟೈಲರ್: ಹೌದು ಸರ್. ನನ್ನನ್ನು ನಂಬಿ.
Tailor: Sure. Trust me, sir.

ಪೀಟರ್: ಆಗ್ಲಿ ನಂಬ್ತೀನಿ. ಸೋಮವಾರ ಬೆಳಿಗ್ಗೆ ನನ್ನ ಸೂಟ್ ಕೊಡ್ಬೇಕು.
Peter: Okay I shall trust you. You will deliver the suit next Monday morning.

ಟೈಲರ್: ಇಲ್ಲ ಸರ್, ಸಾಯಂಕಾಲ.
Tailor: No sir, evening.

ಪೀಟರ್: ಅದು ಸ್ವಲ್ಪ ಅತಂಕದ ವಿಚಾರ.
Peter: That’s going to be really precarious.

ಟೈಲರ್: ಯಾಕೆ?
Tailor: Why sir?

ಪೀಟರ್: ಅದು ನಿಮ್ಮ ಮದುವೆಯ ಹಿಂದಿನ ದಿನ ಕೂಡ.
Peter: That’s a day before your wedding.

ಟೈಲರ್: ನಿಜ ಸರ್.
Tailor: Yes sir.

ಪೀಟರ್: ಅವತ್ತು ನಿಮ್ಮ ಅಂಗಡಿ ತೆರೆದಿರುತ್ತೆ ಮತ್ತು ನೀವು ಕೂಡ ಇರ್ತೀರಿ ಅಂತ ನಂಬ್ತೇನೆ.
Peter: I hope your joint is open and you are present.

ಟೈಲರ್: ಖಂಡಿತ. ನಾನು ಭರವಸೆ ನೀಡ್ತೀನಿ. ನನ್ನನ್ನು ನಂಬಿ.
Tailor: I assure sir, I will. Trust me

ಪೀಟರ್: ರಾಜಕಾರಣಿಯ ಭರವಸೆಯ ಹಾಗೆ ಆದೀತಾ?
Peter: Will it be like the assurance of a politician?

ಟೈಲರ್: ಇಲ್ಲ ಸರ್. ಪ್ರಾಮಿಸ್ ಮಾಡ್ತೀನಿ
Tailor: No, sir. I promise you, sir

ಪೀಟರ್: ಏನಂತ?
Peter: Promise what?

ಟೈಲರ್: ನಿಮ್ಮ ಮದುವೆಗೆ ಮೊದಲು ನಿಮ್ಮ ಮದುವೆ ಸೂಟ್ ಕೊಡ್ತೀನಿ ಅಂತ.
Tailor: That I shall give you your wedding suit before your wedding.