TALKING ABOUT WHAT WILL BE HAPPENING

ರೈತ:  ನೀರಿಲ್ಲದೆ ಬೆಳೆಯೆಲ್ಲಾ ಒಣಗ್ತಾ ಇದೆ.
Farmer: Crops are drying up for want of water.

ಮಂತ್ರಿ: ಈ ಅಣೆಕಟ್ಟು ಆಗ್ಬಿಟ್ರೆ ಮುಂದಿನ ವರ್ಷ ಈ ಹೊತ್ತಿಗೆ ನಿಮ್ಮ ಹೊಲಗಳಿಗೆ ನೀರು ಹರೀತಾ ಇರ್ತದೆ. ಐವತ್ತು ಸಾವಿರ ಬಂಜರು ಭೂಮಿ ಕೃಷಿ ಭೂಮಿ ಆಗ್ತದೆ. ನೀವೆಲ್ಲ ವರ್ಷದಲ್ಲಿ ಮೂರು ಬೆಳೆ ತೇಗೀತಾ ಇರ್ತೀರಿ.
Minister: Once the dam is complete water will be flowing into your filelds at this time next year.

ರೈತ: ಅದು ಮುಂದಿನ ವರ್ಷದ್ವಿಚಾರ ಆತು. ಈಗೇನು ಮಾಡೋದು?
Farmer: That’s next year.  What can we do for now?

ಮಂತ್ರಿ: ದೇವರನ್ನ ನಂಬಿ. ಬೇಗ್ನೆ ಮಳೆ ಬರ್ಬಹುದು.
Minister: Trust in God. It may rain soon.

ರೈತ: ಕಾಲುವೆ ಬಂತು ಅಂತ ಕೆರೆಗಳನ್ನ ಮುಚ್ಚಿದ್ದು ಭಾರೀ ತಪ್ಪಾತು.
Farmer: It was great mistake to fill up the tanks.

ಮಂತ್ರಿ: ಕೆರೆಗಳನ್ನ ಮುಚ್ಚಿ ಅಂತ ಸರ್ಕಾರ ಹೇಳ್ತಾ?
Minister: Did the government tell you to fill up the tanks.

ರೈತ: ಇಲ್ಲ.
Farmer: No.

ಮಂತ್ರಿ: ಹಂಗಾರೆ ಎಲ್ರೂ ಸೇರಿ ಕೆರೆ ಮಣ್ಣು ಎತ್ತಿ.
Minister:  Then all of you join together and lift the soil.

ರೈತ: ಕೆರೆ ಮಣ್ಣು ಎತ್ತಿದ್ರೆ ಅದರ ತಳದಲ್ಲಿ ಈಗ್ಲೂ ನೀರು ಇರ‌್ಬೌದಾ?
Farmer: Will there still be water at the bottom?

ಮಂತ್ರಿ: ದೇವರಿಗೇ ಗೊತ್ತು.
Minister: Only God knows.

* * *

ವಿಜ್ಞಾನಿ: ಅಣೆಕಟ್ಟೇನೋ ಸಿದ್ಧವಾಗಿದೆ. ಆದ್ರೆ ನದೀಲಿ ನೀರೇ ಇಲ್ವಲ್ಲ?
Scientist: Dam is ready, but there is no water in the river.

ಮಂತ್ರಿ: ಅದ್ಕೆ ನಾನೇನು ಮಾಡ್ಲಿ?
Minister: What can I do for it?

ವಿಜ್ಞಾನಿ: ಮಳೇನೇ ಇಲ್ಲ!
Scientist: There’s no rain at alll!

ಮಂತ್ರಿ: ದೇವರನ್ನ ನಂಬಿ ಇನ್ನೇನು ಮಳೆ ಬರ‌್ಬಹುದು.
Minister: Trust in God. It may rain soon.

ವಿಜ್ಞಾನಿ: ಈ ವರ್ಷ ಸಾಕಷ್ಟು ಮಳೆ ಬರ‌್ದೇ ಇದ್ರೆ ಜಲಾಶಯ ಖಾಲಿ ಆಗುತ್ತೆ. ನಗರದ ಜನ ಕೂಡ ನೀರಿಗಾಗಿ ಕೂಗ್ತಿರ್ತಾರೆ.
Scientist: If it doesn’t rain sufficiently this year, even in the city people will be screaming for water.

ಮಂತ್ರಿ: ಕಳೆದ್ವರ್ಷಾನೂ ಹೀಗೇ ಹೇಳಿದ್ರಿ. ಆದ್ರೆ ಮಳೆ ಬಂತು. ನೀವು ವಿಜ್ಞಾನಿಗಳು ಯಾವಾಗಲೂ ನಿರಾಶವಾದದ ಮಾತು ಆಡ್ತಿರ್ತೀರಿ.
Minister: You said the same last year, too. But it rained. You scientists are always pessimistic.

ವಿಜ್ಞಾನಿ: ಕಳೆದ್ವರ್ಷ ಮಳೆ ಬಂತು ನಿಜ. ಆದ್ರೆ ಎಷ್ಟು? ಸರಾಸರಿ ಮಳೆಯ ಮೂರನೇ ಎರಡರಷ್ಟು ಮಾತ್ರ. ಈ ವರ್ಷಾನೂ ಹಾಗಾದ್ರೆ ಮುಂದಿನ ವರ್ಷ ಜನ ಕುಡಿಯಲು ರೈತರು ನೀರಿಗಾಗಿ ದಂಗೆ ಏಳ್ತಾರೆ. ನಗರದ ಜನ ಕುಡಿಯಲು ನೀರಿಲ್ದೆ ಸಾಯ್ತಿರ್ತಾರೆ.
Scientist: True. It rained last year. But how much? Only two third of the average. If the same happens again this year, farmers will riot for water. People in the city will be dying without drinking water.

ಮಂತ್ರಿ: ಹಾಗೇನೂ ಆಗಲ್ಲ. ದೇವರಿದ್ದಾನೆ.
Minister: Nothing of that sirt wll happen. God is there.

ವಿಜ್ಞಾನಿ: ಮುಂದಿನ್ತಿಂಗ್ಳು ಕೂಡ ಮಳೆ ಬರದೇ ಇದ್ರೆ?
Scientist: Suppose it doesn’t rain even next month.

ಮಂತ್ರಿ: ಯಾಕೆ ಈಗ್ಲೇ ಚಿಂತೆ ಮಾಡ್ತೀರಿ? ಇನ್ನೂ ಒಂದು ತಿಂಗಳು ಇದೆಯಲ್ಲ?
Minister:  Why do you fret now? You have still one month?

ವಿಜ್ಞಾನಿ: ಯಾವುದಕ್ಕೆ?
Scientist: For what?

ಮಂತ್ರಿ: ಅದೇ ನೀವು ಹೇಳಿದ್ರಲ್ಲ, ಅದ್ಕೆ.
Minister: For what you’ve said.

ವಿಜ್ಞಾನಿ: ನಾನು ಕೇಳಿದ್ದು ಇನ್ನೂ ಒಂದು ತಿಂಗ್ಳು ಮಳೆ ಬರದೇ ಇದ್ರೆ ಏನು ಮಾಡೋದು ಅಂತ.
Scientist: I asked you what we do if it did not rain for one more month.

ಮಂತ್ರಿ: ಮಳೆ ಬರ್ತದೆ, ಹೋಸದಾಗಿ ಮಾಡಿದ ಕೃಷಿ ಕಾಲುವೆಗಳಲ್ಲಿ ಮಾತ್ರವಲ್ಲ, ಇನ್ನೊಂದು ತಿಂಗ್ಳಲ್ಲಿ ನಮ್ಮ ಮನೆಯ ನಳ್ಳಿಗಳಲ್ಲಿ ಕೂಡ ನೀರು ಹರೀತಾ ಇರ್ತದೆ. ಇದು ನನ್ನ ವಿಶ್ವಾಸ.
Minister: It will rain. In a month water will be flowing not only in the newly made irrigation channels but also in the pipes in the homes in the city. This is my conviction.

ವಿಜ್ಞಾನಿ: ಈ ವಿಶ್ವಾಸಕ್ಕೆ ಆಧಾರ?
Scientist: What warrants this conviction?

ಮಂತ್ರಿ: ದೇವರ ಮೇಲೆ ನಂಬಿಕೆ.
Minister: Trust in God.

* * *

ಪತ್ರಿಕಾ ವರದಿಗಾರ: ಈ ವರ್ಷ ಜಲಾಶಯ ಅರ್ಧ ಕೂಡ ತುಂಬಲಿಲ್ಲ. ಮಳೆಗಾಲ ಮುಗಿದೇ ಹೋಯ್ತು!
Newspaper Reporter:  This year the reservoir did not fill even to half.

ಮಂತ್ರಿ: ಅದ್ಕೆ ನಾನೇನ್ಮಾಡ್ಲಿ?
Minister: What can I do for it?

ಪತ್ರಿಕಾ ವರದಿಗಾರ: ಈ ಅಣೆಕಟ್ಟಿನಿಂದ ಜನಕ್ಕೆ ಪ್ರಯೋಜನ ಆಗ್ಲಿಲ್ಲ. ಇನ್ನೇನು ಜನ ನೀರಿಗಾಗಿ ದಂಗೆ ಏಳ್ತಿರ್ತಾರೆ.
Newspaper Reporter:  This dam is of no use to the people. People will soon be rebelling for water.

ಮಂತ್ರಿ: ಜನ ಯಾಕೆ ದಂಗೆ ಏಳ್ತಾರೆ? ಸರ್ಕಾರ ನೀರನ್ನ ಬಚ್ಚಿಟ್ಟುಕೊಂಡಿದ್ಯಾ?  Minister:  Why should they? The government hasn’t hidden water.

ಪತ್ರಿಕಾ ವರದಿಗಾರ: ಈ ಅಣೆಕಟ್ಟಿಗೆ ಒಂಭೈನೂರು ಕೋಟಿ ಖರ್ಚಾಯ್ತು
Newspaper Reporter:  You spent nine hundred crore for this dam.

ಮಂತ್ರಿ: ನಿಜ. ಅಣೆ ಕಟ್ಟು ಕಟ್ಟದೆ ಮತ್ತೇನು ಮಾಡ್ಬೇಕಾಗಿತ್ತು ನಾವು?
Minister: What could we do without constructing the dam?

ಪತ್ರಿಕಾ ವರದಿಗಾರ: ಒಂಭೈನೂರು ಕೋಟಿಯಲ್ಲಿ ಒಂದು ಬೃಹತ್ ಮಳೆ ಕೊಯ್ಲಿನ ಯೋಜನೆಯನ್ನ ಕಾರ್ಯಗತಗೊಳಿಸಬಹುದಾಗಿತ್ತು.
Newspaper Reporter:  You could take up a huge project for rain water harvesting. Nine hundred crore would be sufficient for it.

ಮಂತ್ರಿ: ಸಾಕಷ್ಟು ಮಳೆ ಬರ್ದೇ ಇದ್ರೆ ಮಳೆಕೊಯ್ಲು ಎಲ್ಲಿಂದ?
Minister: If it did not rain enough where would be the rain harvesting ?

ಪತ್ರಿಕಾ ವರದಿಗಾರ: ಯೋಜನೆ ಮಾಡಿ ನೋಡಿ. ಆಗ ತಿಳಿಯುತ್ತದೆ. ಒಂದು ದೊಡ್ಡ ಜಲಾಶಯದ ಬದಲು ನೂರಾರು ಸಣ್ಣ ಸಣ್ಣ ಕೆರೆಗಳನ್ನು ತೋಡಿಸಿ. ಒಂಬತ್ತು ಕೋಟಿಯನ್ನ ಜನರ ಕೆಲಸಕ್ಕೆ ಮತ್ತು ಮಣ್ಣೆತ್ತುವ ಯಂತ್ರಗಳ ಕೆಲಸಕ್ಕೆ ಹಾಕಿ. ಎಷ್ಟೋ ಕಡೆ ಜನ ಕೇವಲ ಶ್ರಮದಾನದಿಂದ ಕೆರೆ ಮಾಡಿದ್ದಾರೆ. ಸರಕಾರದಿಂದ ಆಗಲಿಕ್ಕಿಲ್ವ?
Newspaper Reporter:  You take up the project, and, only then you know. Dig hundreds of small tanks instead of one enormous reservoir. Spend nine hundred crore on the labour of the people and the earth-movers. In some villages people have dug tanks by sheer voluntary labour. Can’t the government do it?

ಮಂತ್ರಿ: ಅಣೆಕಟ್ಟುಗಳಿಂದ ಪ್ರಯೋಜನವೇ ಇಲ್ಲ ಅಂತ ನಿಮ್ಮ ಆಭಿಪ್ರಾಯವೆ? ಸಣ್ಣ ಸಣ್ಣ ಕೆರೆಗಳಿಂದ ನಮಗೆ ಇಲೆಕ್ಟ್ರಿಸಿಟಿ ಬರಲ್ಲ.
Minister:  Are dams, in your opinion, totally useless?  Small tanks can’t give us electricity.

ಪತ್ರಿಕಾ ವರದಿಗಾರ:  ಇಲೆಕ್ಟ್ರಿಸಿಟಿಗೆ ನಾವು ಪರ್ಯಾಯ ಶಕ್ತಿಮೂಲಗಳನ್ನ ಆಶ್ರಯಿಸಬೇಕು.
Newspaper Reporter:  For electricity it is time we looked for alternative power sources.

ಮಂತ್ರಿ: ಮಳೆಕೊಯ್ಲಿನಲ್ಲಿ ಅಣೆಕಟ್ಟಿನ ಜಲಾಶಯಕ್ಕಿಂತ ಹೆಚ್ಚು ನೀರು ಸಿಗುತ್ತಾ?
Minister: Does rainwater harvesting give more water than a reservoir.

ಪತ್ರಿಕಾ ವರದಿಗಾರ: ಹತ್ತು ಪಾಲು ಹೆಚ್ಚು! ಭೂಮಿಗೆ ಬಿದ್ದ ನೀರಿನ ಒಂದು ಸಣ್ಣ ಪಾಲು ಮಾತ್ರ ನದಿ ಸೇರೋದು. ಮಳೆ ಕೊಯ್ಲಿನಲ್ಲಿ ಕೊಯ್ಲಿಗೆ ಮೊದಲು ಬಿತ್ತನೆಯನ್ನು ಮಳೆಯೇ ಮಾಡುತ್ತದೆ. ಭೂಮಿಗೆ ಬಿದ್ದ ನೀರೆಲ್ಲ ನೆಲದ ಅಡಿಯಲ್ಲಿ ಸಂಗ್ರಹವಾಗುತ್ತಿರುತ್ತದೆ. ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಏರುತ್ತಾ ಇರುತ್ತದೆ. ಮರಗಿಡಗಳಿಗೆ ನೀರು ಸಿಕ್ಕು ಎಲ್ಲಾ ಕಡೆ ಭೂಮಿ ಹಸಿರಾಗುತ್ತೆ. ಹೆಚ್ಚು ಮಳೆ ಬೀಳುತ್ತಿರುತ್ತದೆ. ಅದೆಲ್ಲ ಆದ ಮೇಲೆ ಹೇಳದೆ ಕೇಳದೆ ಬರುವ ಭೂಮಿ ತೂಕದ ಮಳೆಯ ನೀರನ್ನ ತುಂಬಿಸಿ ಇಡುವುದಕ್ಕೆ ಅಣೆಕಟ್ಟು ಕಟ್ಟಿ.  ಸಾಗರ ಮಳೆಯ ತಾಯಿ. ನಾಲ್ಕನೆಯ ಮೂರಂಶ ಮಳೆ  ನೇರವಾಗಿ ಅದರ ಮೇಲೆಯೇ ಬೀಳುತ್ತದೆ. ನೆಲದ ಮೇಲೆ ಬೀಳೋದನ್ನ ನಾವು ಅದಕ್ಕೆ ಸೇರಿಸಬೇಕಾಗಿಲ್ಲ. ನೆಲದ ಮೇಲೆ ಬೀಳುವುದರ ಅರ್ಧಾಂಶವನ್ನ ನಾವು ಉಳಿಸಿಕೊಂಡರೂ ಸಾಕು. ನಾವೇ ಸೃಷ್ಟಿಸಿಕೊಂಡಿರುವ ಸಮಸ್ಯೆ ಪರಿಹಾರವಾಗುತ್ತದೆ.
Newspaper Reporter:  Ten times more! Only a small portion of rain water flows into rivers. In rain water harvesting, sowing is done by drops of rain. All the water that falls on the earth gets collected under the soil. subterranean water level keeps rising year by year. Trees and plants get water. It gets green all over. It will be raining more. When there is a torrential rainfall, let it fill the resrvoir. Ocean is the mother of rain. Three-forth of the rain falls back straight on it. We don’t have to add to it from that falls land. If we conserve half of that falls on land, we have solved the problem that we have created.

ಮಂತ್ರಿ: ನೀವು ಹೇಳೋದನ್ನ ಕೇಳೋಕೇನೋ ಚೆನ್ನಾಗಿದೆ.
Minister: It is very nice to hear what you say.

ಪತ್ರಿಕಾ ವರದಿಗಾರ: ಮಾಡಲು ಹೊರಟರೆ ಮಾಡಲಿಕ್ಕೆ ಕೂಡ ಚೆನ್ನಾಗಿರುತ್ತದೆ.
Newspaper Reporter: If we start doing, it will be nice doing too.

ಮಂತ್ರಿ: ಆದರೆ ಯಶಸ್ಸಿನ ಬಗ್ಗೆ ಸಂದೇಹ.
Minister: But I doubt about its success.

ಪತ್ರಿಕಾ ವರದಿಗಾರ: ಸಂದೇಹವೇ ಇಲ್ಲದೆ ಅಣೆಕಟ್ಟು ಕಟ್ಟಿಸಲಿಲ್ವೆ?
Newspaper Reporter: Didn’t we build dams without doubt?

ಮಂತ್ರಿ: ಅದು ಸರಕಾರದ ಯೋಜನೆ.
Minister: It was the project of the government.

ಪತ್ರಿಕಾ ವರದಿಗಾರ:  ಸರಕಾರದ ಯೋಜನೆಯಲ್ಲಿ ಜನರ ಸಹಕಾರವನ್ನು ಸೇರಿಸುವ ಮಾತು ಬಂದಾಗ ಸಂದೇಹ ಯಾಕೆ?
Newspaper Reporter:  Why do you have doubts when you have to do something with people’s cooperation?

ಮಂತ್ರಿ: ಆದರೂ ಸಂದೇಹ.
Minister: Still we have dounts.

ಪತ್ರಿಕಾ ವರದಿಗಾರ: ಸಂದೇಹ ಬಿಡಿ. ಅಣೆಕಟ್ಟು ಮಾಡುವಾಗ ನೀವು ದೇವರನ್ನು ನಂಬುತ್ತೀರಲ್ಲ?
Newspaper Reporter: Quit doubts. You Trust in God when you build dams, don’t you?

ಮಂತ್ರಿ: ಹೌದು.
Minister: Yes, we do.

ಪತ್ರಿಕಾ ವರದಿಗಾರ: ಮಳೆನೀರು ಉಳಿಸುವ ಯೋಜನೆ ಮಾಡುವಾಗ ದೇವರನ್ನು ಯಾಕೆ ನಂಬಬಾರದು?.
Newspaper Reporter: Why shouldn’t you Trust in God when you start a water conservation project?