. ಅಕ್ಷರಗಳು ಹಾಗೂ ಅಂತ್ಯಕ್ಷರಗಳು

ಕ್ರಿಯಾಧಾತುಗಳನ್ನು ಅಕ್ಷರಗಳ ಸಂಖ್ಯೆಗೆ ಅನುಗುಣವಾಗಿ ಒಂದಕ್ಷರ, ಎರಡಕ್ಷರ, ಮೂರಕ್ಷರ ಧಾತುಗಳೆಂದು ವಿಂಗಡಿಸಬಹುದು. ಅಲ್ಲದೆ ಅಂತ್ಯದಲ್ಲಿ ಬರುವ ಸ್ವರಗಳ ಆಧಾರದ ಮೇಲೂ ವಿಂಗಡಿಸಬಹುದು. ಕನ್ನಡದಲ್ಲಿ ಎಕಾರಾಂತ, ಇಕಾರಾಂತ ಮತ್ತು ಉಕಾರಾಂತ ಧಾತುಗಳಿವೆ. ಎಕಾರಾಂತ ಮತ್ತು ಇಕಾರಾಂತ ಧಾತುಗಳು ಎರಡಕ್ಷರದವುಗಳೇ ಆಗಿದ್ದು ಎರಡೂ ಅಕ್ಷರಗಳು ಹ್ರಸ್ವವೇ ಆಗಿರುತ್ತವೆ.

ಏಕಾಕ್ಷರ ಧಾತುಗಳು : ಈ. ಬಾ. ತಾ ಎಂಬುವು ಮಾತ್ರ ಏಕಾಕ್ಷರ ಧಾತುಗಳು.

ಎರಡಕ್ಷರದ ಧಾತುಗಳು : ಇವುಗಳನ್ನು ಅಂತ್ಯ ಸ್ವರವನ್ನು ಆಧರಿಸಿ ಹಲವು ರೀತಿಯಲ್ಲಿ ವರ್ಗೀಕರಿಸಬಹುದು.

. ಕಾರಾಂತ ಧಾತುಗಳು.

ಅಗಿ ಇಳಿ ಉಗಿ ಉರಿ ಉಲಿ ಉಳಿ ಕಡಿ ಕದಿ ಕರಿ ಕವಿ ಕಸಿ ಕಿರಿ ಕಿಸಿ ಕುಡಿ ಕುಣಿ ಕುದಿ ಚಿಗಿ, ಜಿಗಿ ಜಗಿ ಜಡಿ ತಣಿ ತಿವಿ ತಿಳಿ ತುಡಿ, ತುಳಿ ದಣಿ ದುಡಿ ನಲಿ, ನುರಿ ನುಲಿ ಪುಟಿ ಬಡಿ ಬಸಿ ಬಳಿ ಬಿರಿ ಮಡಿ, ಮಣಿ ಮಿಡಿ ಮುಗಿ ಮುಡಿ ಮುರಿ ಮುಳಿ ಸರಿ ಸವಿ ಸಿಗಿ ಸಿಡಿ ಸುರಿ ಸುಲಿ ಸುಳಿ ಹನಿ ಹರಿ ಹಳಿ ಹಿಡಿ ಹಿರಿ ಹುಗಿ ಹುರಿ ಹೆಣಿ ಹೊಲಿ

. ಎಕಾರಾಂತ ಧಾತುಗಳು

ಅಗೆ ಅಲೆ ಅರೆ ಎಡೆ ಎರೆ ಎಳೆ ಒಗೆ ಒಡೆ ಒದೆ ಒರೆ ಕಡೆ ಕರೆ ಕಲೆ, ಕಳೆ, ಕೆಡೆ ಕೆನೆ ಕೆರೆ ಕೊರೆ ತಡೆ ತೆಗೆ ತೆರೆ ತೊಡೆ ತೊನೆ ದೊರೆ ನಡೆ ನವೆ ನೆಗೆ ನೆರೆ ನೊಣೆ ಪಡೆ ಪೊರೆ ಬರೆ ಬೆರೆ ಬೆಳೆ ಮರೆ ಮಲೆ ಮಸೆ ಮೆರೆ ಮೊಗೆ ಮೊರೆ ಮೊಳೆ ಸವೆ ಸೆಟೆ ಸೆಣೆ ಸೆಳೆ ಹಡೆ ಹೊಡೆ ಹೊರೆ ಹೊಸೆ

. ಉಕಾರಾಂತ ಧಾತುಗಳು ಇದನ್ನು ನಾಲ್ಕು ಬೇರೆ ಬೇರೆ ರೀತಿಯಲ್ಲಿ ವಿಂಗಡಿಸಬಹುದು

. ಹ್ರಸ್ವ ಸ್ವರಾದಿಧಾತುಗಳು

ಅಳು ಉಡು ಉಳು ಕೆಡು ಕೊಡು ತರು ತೆರು ತೊಡು ನಗು ನೆಡು ಪಡು ಬರು ಬಿಡು ಮಿಗು, ಸುಡು, ಹಡು, ಹೆರು ಹೊರು, ಇರು, ಸಿಗು

. ದೀರ್ಘಸ್ವರಾದಿ ಧಾತುಗಳು

ಆಗು ಆಡು ಆನು ಆರು ಆಳು ಈಸು ಊಡು ಊದು ಊರು ಏಗು ಏರು ಏಳು ಓಡು ಓತು ಕಾಡು ಕಾಣು, ಕಾದು ಕಾಯು, ಕಾರು ಕಾಸು ಕೀಳು ಕೂಗು, ಕೂಡು ಕೂರು, ಕೇಯು, ಕೇರು ಕೇಳು ಗೋರು ಚೀಪು ಚೀರು ಜೀಕು ತಾಗು ತಾಳು ತೀರು ತೀಡು ತೂಗು ತೂರು ತೇಗು ತೇಯು ತೋಚು ತೋಡು ತೋರು ದಾಟು ದೂರು ನಾಟು ನಾಡು ನಾರು ನೀಗು ನೀಡು ನೀವು ನೀಸು ನೂಕು ನೂಲು ನೋಡು ನೋಯು ಪೀಕು ಬಾಗು ಬಾಚು ಬಾಡು ಬಾಳು ಬೀಗು ಬೀರು ಬೀಸು ಬೀಳು ಬೇಡು ಬೇಯು ಮಾಗು ಮಾಡು ಮಾಯು ಮಾರು ಮಾಸು ಮೀಯು, ಮೀಟು ಮೀರು ಮೂಸು ಮೇಯು ರೇಗು ರೋಸು ಸಾಕು ಸಾಗು ಸಾಯು ಸೀನು ಸೀಯು ಸೀಳು ಸೂಸು ಸೇದು ಸೇಯು ಸೇರು ಸೋಕು ಸೋರು ಸೋಲು ಹಾಕು ಹಾಡು ಹಾಯು ಹಾರು ಹಾಸು ಹೀಜು ಹೀರು ಹೂಳು ಹೂಸು ಹೇರು ಹೇಲು ಹೋಲು

. ಅನುಸ್ವಾರಯುಕ್ತ ಧಾತುಗಳು

ಅಂಜು ಅಂಟು ಇಂಗು ಈಂಟು ಕಂತು ಕುಂದು, ಕುಂಟು ಕೆಂದು ತುಂಬು ನಂದು ನಂಬು ನುಂಗು ಮಿಂಚು ಸುಂಡು ಹಂಚು ಹಿಂಜು ಹಿಂಡು ಹೊಂಗು ಹೊಂದು ಹೊಂಚು.

. ಒತ್ತಕ್ಷರವುಳ್ಳ ಧಾತುಗಳು.

ಅಟ್ಟು ಇಕ್ಕು ಉಕ್ಕು ಉಜ್ಜು ಒಪ್ಪು ಕಕ್ಕು ಕಚ್ಚು ಕಟ್ಟು ಕುಕ್ಕು ಕುಗ್ಗು ಕುಟ್ಟು ಕೊಲ್ಲು ಕೊಳ್ಳು ಗುಮ್ಮು ಗುದ್ದು ಚಚ್ಚು ಚಿಮ್ಮು ಚುಚ್ಚು ಚೆಲ್ಲು ಜಗ್ಗು ಜಬ್ಬು ತಟ್ಟು ತಪ್ಪು ತಬ್ಬು ತಳ್ಳು ತಿನ್ನು ತಿಕ್ಕು ತಿದ್ದು ತುಯ್ಯು ದಬ್ಬು ನಿಲ್ಲು ನುಗ್ಗು ನೆಚ್ಚು ಪೆಟ್ಟು ಬಗ್ಗು ಬತ್ತು ಬಯ್ಯು, ಬಿಕ್ಕು ಬಿಚ್ಚು ಬಿತ್ತು ಬೆಚ್ಚು ಮಗ್ಗು ಮುಕ್ಕು ಮುಚ್ಚು, ಮುಟ್ಟು ಮುತ್ತು, ಮೆಚ್ಚು, ಮೆಟ್ಟು, ಮೆತ್ತು ಮೆಲ್ಲು ಸಲ್ಲು ಸುತ್ತು ಸೊಕ್ಕು ಹಚ್ಚು ಹತ್ತು ಹಬ್ಬು ಹಿಗ್ಗು ಹುಟ್ಟು ಹೆಕ್ಕು

. ಮೂರಕ್ಷರದ ಧಾತುಗಳು ಉಕಾರಾಂತವೇ ಆಗಿರುತ್ತವೆ.

ಅಡಗು ಅಮುಕು ಅರಳು ಅರಗು ಅಲುಗು ಅಳುಕು ಉಗುಳು ಉಡುಗು ಉರುಬು ಉರುಳು ಉಸಿರು ಎಗರು ಎಟಕು ಎಡವು ಎರಚು ಏಮಾರು ಒಣಗು ಒದಗು ಒದರು ಒರಗು ಒಸರು ಕುಟುಕು ಕದಡು ಕದರು ಕದಲು ಕಮರು ಕರಗು ಕ್ರುಬು ಕಲಕು, ಕಲಸು ಕವರು ಕಿರುಚು ಕುಟುಕು ಕುದುರು ಕುಲುಕು ಕುಸುರು ಕೆಡಹು ಕೆದಕು ಕೆದರು ಕೆರಳು ಕೊದಹು ಕೊನರು ಕೊರಗು ಕೊಸರು ಗತುಕು ಗದರು ಗಳಹು ಚದುರು ಚಿಗುರು ಚಿವುಟು ಜರುಗು ಜಿನುಗು ತಡಕು ತದಕು ತರಚು ತರುಬು ತಲುಪು ತಿಣಿಕು ತಿರುಗು ತಿರುಚು ಕುರುಕು ತುಳುಕು ತೆಗಳು ತೆವಳು ತೆರಳು ತೊಡಗು ತೊದಲು ತೊಲಗು ತೊಳಲು ತೊಳಸು ದುಡುಕುದೊರಕು ನಡುಗು ನರಳು ನಲುಗು ನಿಗರು ನಿಮಿರು ನುಣುಚು ನುರುಕು ನುಸುಳು ಪರಚು ಪಳಗು ಬದುಕು ಬಳಲು ಬಳುಕು ಬಿಸುಡು ಬೆದಕು ಬೆದರು ಬೆವರು ಬೆಳಕು ಬೊಗಳು ಮುಗುಚು ಮಡಗು ಮಡಚು ಮರಳು ಮರುಗು ಮಲಗು ಮಸುಳು ಮಿಡುಕು ಮಿಸುಕು ಮುದುಡು ಮುದುರಿ ಮುರುಟು ಮುಳುಗು ಮೊಟಕು ಮೊಳಗು ಸವರು ಮಿಡುಕು ಸುರುಟು ಸೆಣಸು ಸೊರಗು ಹಣಿಕು ಹರಟು ಹರಡು ಹರಸು ಹಿಚುಕು ಹಿಸುಕು ಹುಡುಕು ಹುದುಗು ಹೆದರು ಹೊಗಳು ಹೊರಡು ಹೊರಳು.

. ಸಹಜ, ಸಾಧಿತ, ಸಂಯುಕ್ತ ಧಾತುರೂಪಗಳು

ಕ್ರಿಯಾಧಾತುಗಳನ್ನು ಮೂಲಧಾತು ಮತ್ತು ಸಾಧಿತ ಧಾತುಗಳೆಂದು ವಿಂಗಡಿಸಬಹುದು. ಮೂಲಧಾತುಗಳನ್ನು ಸಹಜಧಾತುಗಳೆಂದೂ ಕರೆಯುವರು. ಸಹಜಧಾತುಗಳ ರಚನೆಯನ್ನು ಗಮನಿಸಿದಾಗ ಅವು ಯಾವ ಪ್ರತ್ಯಯವನ್ನೂ ಹೊಂದದೇ ಇರುತ್ತವೆ. ಸಾಧಿತ ಧಾತುಗಳಲ್ಲಿ ಯಾವುದಾದರೂ ಕ್ರಿಯಾಸಾಧಕ ಪ್ರತ್ಯಯವಾಗಲೀ (ಇಸು) ಅಥವಾ ನಾಮಪ್ರಕೃತಿಯಿಂದಾದ ಧಾತುವಾಗಲೀ (ಪಡು) ಸೇರಿರುತ್ತವೆ. ಸಹಜ ಧಾತುಗಳನ್ನು ಆಂತರಿಕ ರಚನೆಯಿರದ ಧಾತುಗಳೆಂದೂ ಸಾಧಿತಧಾತುಗಳನ್ನು ಆಂತರಿಕ ರಚನೆಯಿರುವ ಧಾತುಗಳೆಂದು ಡಿ.ಎನ್. ಶಂಕರಭಟ್ಟರು ವಿಂಗಡಿಸುತ್ತಾರೆ. (ಕನ್ನಡ ಶಬ್ದ ರಚನೆ ಪು. ೧೩೪)

... ಸಹಜ ಧಾತುಗಳು (ಮೂಲಭೂತಗಳು)


ಅಗೆ

ಅಲೆ

ಅರಗು

ಅಗಿ

ಅಟ್ಟು

ಅಡಗು

ಅಂಜು

ಅಂಟು

ಅಮುಕು

ಅದರು

ಅಕಳು

ಅರೆ

ಅಲುಗು

ಅಳು

ಅಳುಕು

ಆಗು

ಆಡು

ಆಮ

ಆಮೆ

ಆರು

ಆಳು

ಇಂಗು

ಇಕ್ಕು

ಇಡಿ

ಇಡು

ಇರಿ

ಈಂಟು

ಈಸು

ಉಕ್ಕು

ಉಜ್ಜು

ಉಡು

ಉಡುಗು

ಉನಿ

ಉಟ್ಟು

ಉರಿ

ಉರುಬು

ಉರುಳು

ಉಲಿ

ಉಸಿರು

ಉಳು

ಊಡು

ಊದು

ಊರು

ಎಗರು

ಎಟಕು

ಎಡವು

ಎಡೆ

ಎರಗು

ಎರಚು

ಎರೆ

ಎಳೆ

ಏಗು

ಏಮಾರು

ಏರು

ಏಳು

ಒಗೆ

ಒಗ್ಗು

ದಬ್ಬು

ಒಟ್ಟು

ಒಡೆ

ಒಡ್ಡು

ಒತ್ತು

ಒರಗು

ಒರೆ

ಒದರು

ಒದೆ

ಒಪ್ಪು

ಒರಗು

ಒರೆ

ಒರಸು

ಓಂಡು

ಓದು

ಓತು

ಕಂತು

ಕಂದು

ಕಕ್ಕು

ಕಚ್ಚು

ಕುಟುಕು

ಕಟ್ಟು

ಕಡಿ

ಕಡಿ

ಕಡೆ

ಕದಡು

ಕದರು

ಕದಲು

ನೊಣೆ

ನೋಡು

ಕದಿ

ಕಮರು

ಕರಗು

ಕರೆ

ಕುರುಬು

ಕಲಕು

ಕಲಸು

ಕರಿ

ಕಲೆ

ಕವರು

ಕದಿ

ಕಸಿ

ಕಳೆ

ಕಾಡು

ಕಾಣು

ಕಾದು

ಕಾಯು

ಕಾರು

ಕಾಸು

ಕಿರಚು

ಕಿರಿ

ಕಿಸಿ

ಕೀಳು

ಕುಂಟು

ಕುಂದು

ಕುಕ್ಕು

ಕುಗ್ಗು

ಕುಟ್ಟು

ಕುಡಿ

ಕುಣಿ

ಕುದುರು

ಕುಲುಕು

ಕುಸುಕು

ಕೂಗು

ಕೂಡು

ಕೂರು

ಕೂರು

ಕೆಂದು

ಕೆಡಹು

ಕೆಡು

ಕೆಡೆ

ಕೆತ್ತು

ಕೆದಕು

ಕೆದರು

ಕೆನೆ

ಕೆಮ್ಮು

ಕೆರಳು

ಕೆರೆ

ಕೇಯು

ಕೇರು

ಕೇಳು

ಕೂಚ್ಚು

ಕೊಡಹು

ಕೊಡು

ಕೊನರು

ಕೊಬ್ಬು

ಕೊರಗು

ಉಗಿ

ಉಗುಳು

ತೀಡು

ತೀರು

ತುಂಬು

ತುಡಿ

ತುಯ್ಯು

ತುರಿ

ತುರುಕು

ತುಳಿ

ತುಳುಕು

ತೂಗು

ಕೂರು

ತೆಗಳು

ತೆಗೆ

ತೆತ್ತು

ತೆವಳು

ತೆರಳು

ಕೆರು

ತೆರೆ

ತೇಗು

ತೇಯು

ತೇಲು

ತೊಡಗು

ತೊಡು

ತೊಡೆ

ತೊದಲು

ತೊನೆ

ತೊಯ್ಯು

ತೊರೆ

ತೊಲಗು

ದಾಟು

ದುಡಿ

ದುಡುಕು

ದೂರು

ದೊರಕು

ದೊರೆ

ನಂದು

ನಂಬು

ನಗು

ನಡುಗು

ನಡೆ

ನರಳು

ನಲಿ

ನವೆ

ನಾಟು

ನಾದು

ನಾರು

ನಿಗರು

ನಿಮಿರು

ನಿಲ್ಲು

ನೀಗು

ನೀಡು

ನೀವು

ನೀಸು

ನುಂಗು

ನುಗ್ಗು

ನುಣುಚು

ನುರಿ

ನುಲಿ

ನುಸುಳು

ನೂಕು

ಪಡು

ಪಡೆ

ಪರಚು

ಪಳಗು

ಪೀಕು

ಪುಟಿ

ಪೆಟ್ಟು

ಪೊರೆ

ಬಗ್ಗು

ಬಡಿ

ಬತ್ತು

ಬದುಕು

ಬಯ್ಯು

ಬರೆ

ಬಸಿ

ಬಳಕು

ಬಳಲು

ಬಳಿ

ಬಾ

ಬಾಗು

ಬಾಚು

ಬಾಡು

ಬಾಳು

ಬಿಕ್ಕು

ಬಿಚ್ಚು

ಬಿಡು

ಬಿತ್ತು

ಬಿರಿ

ಬಿಸುಡು

ಬೀಗು

ಬೀರು

ಕುಣಿ

ಬೆದರು

ಬೆವರು

ಬೆರೆ

ಬೆಸೆ

ಬೇಯು

ಬೇಡು

ಬೇರ್ಪಡು

ಬೊಗಳು

ಮಗುಚು

ಮಗ್ಗು

ಮಡಗು

ಮಡಚು

ಮಡಿ

ಮಣಿ

ಮರುಗು

ಮರೆ

ಮಲಗು

ಮಲೆ

ಮಸುಳು

ಮಸೆ

ಮಾಗು

ಮಾಡು

ಮಾಯು

ಮಾರು

ಮಾಸು

ಮಿಂಚು

ಮಿಗು

ಮಿಡಿ

ಮಿಡುಕು

ಕೊರೆ

ಮುತ್ತು

ಮುದುಡು

ಮುದುರು

ಮುರಿ

ಮುಳುಗು

ಮೂಡು

ಮೂಸು

ಮೆಚ್ಚು

ಮೆಟ್ಟು

ಮೆಡರು

ಮೆತ್ತು

ಮೆರೆ

ಮೆಲ್ಲು

ಮೇಯು

ಮರಳು

ಮೊಟಕು

ಮೊರೆ

ಮೊಳಗು

ಮೊಳೆ

ರುಬ್ಬು

ರೇಗು

ರೋಸು

ವಾಲು

ಸಿರಿ

ಸಲ್ಲು

ಸವರು

ಸವಿ

ಸವೆ

ಸಾಕು

ಸಾಗು

ಸಾಯು

ಸಿಗಿ

ಸಿಡಿ

ಸಿಡುಕು

ಸೀನು

ಸೀಯು

ಸೀಳು

ಸುಂಡು

ಸುಡು

ಸುತ್ತು

ಸುಯ್ಯು

ಸುರಿ

ಸುರುಟು

ಸುಲಿ

ಸುಳಿ

ಸೂಸು

ಸೆಟೆ

ಸೆಣಸು

ಸೆಣೆ

ಸೆಳೆ

ಸೇದು

ಸೇಯು

ಸೇರು

ಸೊರಗು

ಸೊಕ್ಕು

ಸೋಕು

ಸೋರು

ಸೋಲು

ಹಚ್ಚು

ಹಡೆ

ಹಣಿಕು

ಹತ್ತು

ಹಬ್ಬು

ಹನಿ

ಹರಟು

ಹರಳು

ಹರಸು

ಹರಿ

ಹಳಿ

ಹಾಕು

ಹಾಡು

ಹಾಯು

ಹಾರು

ಹಾಸು

ಹಿಂಜು

ಹಿಂಡು

ಹಿಗ್ಗು

ಹಿಚುಕು

ಹಿಡಿ

ಹಿರಿ

ಹಿಸುಕು

ಹೀಜು

ಹೀರು

ಹುಗಿ

ಹುಟ್ಟು

ಹುಡುಕು

ಹುದುಗು

ಹುಯ್ಯು

ಹುರಿ

ಹೂಳು

ಹೂಸು

ಹೆಕ್ಕು

ಹೆಚ್ಚು

ಹೆದರು

ಹೆಣೆ

ಹೆರು

ಹೇರು

ಹೇಲು

ಹೊಂಗು

ಹೊಂಚು

ಹೊಂದು

ಹೊಗಳು

ಹೊಡೆ

ಹೊರಡು

ಹೊರಳು

ಹೊರು

ಹೊರೆ

ಹೊಲಿ

ಹೊಸೆ

ಹೋಲು


... ಸಾಧಿತ ಧಾತುಗಳು

ಸಾಧಿತ ಧಾತುಗಳು ‘ಇಸು’ ವನ್ನಾಗಲೀ, ನಾಮ ಪ್ರಕೃತಿಯಿಂದಾದ ಧಾತುವನ್ನಾಗಲೀ ಹೊಂದಿರುತ್ತವೆ. ‘ಇಸು’ ಪ್ರತ್ಯಯ ಸೇರಿದ ಧಾತುಗಳನ್ನು ‘ಪ್ರತ್ಯಯಾಂತ’ ಧಾತುಗಳ ಎಂದೂ ಕರೆಯಲಾಗುತ್ತಿದೆ. ಈ ಧಾತುಗಳು ಸ್ವಯಂಕರ್ತೃಕಾರ್ಥ ಮತ್ತು ಭಿನ್ನಕರ್ತೃಕಾರ್ಥ (ಅಕ್ಕುಳಿಸು, ಅನಿಸು, ಹನಿಸು ಇತ್ಯಾದಿ ಕನ್ನಡ ಧಾತುಗಳು,) ಭಿನ್ನಕರ್ತೃಕಾರ್ಥದಲಿ (ಆಡಿಸು ಪಾಡಿಸು, ಮಾಡಿಸು ಇತ್ಯಾದಿ ಕನ್ನಡ ಧಾತುಗಳು) ಬಳಕೆಯಾಗುತ್ತವೆ. ಅಲ್ಲದೆ ಸಾಮಾನ್ಯವಾಗಿ ಕನ್ನಡದ ಎಲ್ಲ ಧಾತುಗಳಿಗೂ ‘ಇಸು’ ಪ್ರತ್ಯಯ ಸೇರುತ್ತವೆ. ಆದರೆ ಇದಕ್ಕೆ ಕೆಲವು ಮಾತ್ರ ಅಪವಾದಗಳಾಗಿ ಕಾಣಿಸಿಕೊಳ್ಳುತ್ತವೆ. ಎಂದು ಡಿ.ಎನ್. ಶಂಕರಭಟ್ಟರು ಅಭಿಪ್ರಾಯ ಪಡುತ್ತಾರೆ. (ಕನ್ನಡವಾಕ್ಯಗಳು ಪು. ೧೧೨ – ೧೧೩) ಅವುಗಳು ನೈಸರ್ಗಿಕ ಘಟನೆಗಳನ್ನು ಸೂಚಿಸುವ ಕ್ರಿಯಾಪದಗಳಾದ ಮಿಂಚು, ಗುಡುಗು ಜಿನುಗು, ಕಂದು ಇತ್ಯಾದಿ ಅನೈಚ್ಛಿಕ ಕ್ರಿಯೆಗಳನ್ನು ಸೂಚಿಸುವ ಉಳುಕು ಕೆಮ್ಮು, ಸೀನು, ತೇಗು ಇತ್ಯಾದಿ; ಮಾನಸಿಕ ಅವಸ್ಥೆಗಳನ್ನು ಸೂಚಿಸುವ ರೋಸು, ಮರುಗು, ಒಗ್ಗು, ಇತ್ಯಾದಿ; ಇವುಗಳನ್ನು ಎರಡು ಅರ್ಥಗಳಲ್ಲಿ ಬಳಸಲಾಗುತ್ತದೆ. ೧. ಪ್ರೇರಣಾರ್ಥ, ೨. ಸಾಮಾನ್ಯ ಅರ್ಥ. ಸಹಜಧಾತುಗಳಿಗೆ ‘ಇಸು’ ಪ್ರತ್ಯಯ ಸೇರಿ ಪ್ರೇರಣಾರ್ಥದಲ್ಲಿ ಬಳಕೆಯಾದರೆ ನಾಮಪ್ರಕೃತಿಗಳ ಮೇಲೆ ಬಂಗಾದ ‘ಮಾಡು’ ‘ಪಡು’ ಎಂಬರ್ಥದಲ್ಲಿ ಬರುತ್ತದೆ. ಪ್ರೇರಣಾರ್ಥದಲ್ಲಿ ಎಲ್ಲ ಧಾತುಗಳ ಮೇಲೂ ಸಾಮಾನ್ಯವಾಗಿ ‘ಇಸು’ ಪ್ರತ್ಯಯವು ಬರುತ್ತದೆ. ಸಾಂತಧಾತುಗಳಲ್ಲಿ ಮತ್ತೊಮ್ಮೆ ‘ಇಸು; ಹತ್ತಿಸಬೇಕಾಗಿಲ್ಲ.

.... ಇಸು ಪ್ರತ್ಯಯ ಬಳಕೆ

. ಪ್ರೇರಣಾರ್ಥಕ ಧಾತು

ಮಾಡಿಸು ಅಳೆಯಿಸು ಕಡಿಯಿಸು ಮುಟ್ಟಿಸು
ತಿನ್ನಿಸು ಎಳೆಸು ಕರೆಯಿಸು ಸೋಲಿಸು
ಓಡಿಸು ಒಗೆಯಿಸು ಕರೆಯಿಸು ಬರೆಸು
ಒಡೆಯಿಸು ಕೀಳಿಸು ಕಲಿಸು ಕಕ್ಕಿಸು
ಕುಕ್ಕಿಸು ಎತ್ತಿಸು ಕಚ್ಚಿಸು ಬತ್ತಿಸು
ಅಗೆಯಿಸು ಕಟ್ಟಿಸು ಬಳೆಯಿಸು ಮಾರಿಸು ಇತ್ಯಾದಿ

. ಸಾಮಾನ್ಯಾರ್ಥಕ ಧಾತುಗಳು

ಈ ಮಾದರಿಯಲ್ಲಿ ಕೆಲವು ಕನ್ನಡ ನಾಮಪ್ರಕೃತಿಗಳ ಮೇಲೆ, ಅನುಕರಣ ಶಬ್ದಗಳ ಮೇಲೆ, ಸಂಸ್ಕೃತ ನಾಮಪ್ರಕೃತಿಗಳ ಮೇಲೆ ಕನ್ನಡದ ‘ಇಸು’ ಪ್ರತ್ಯಯ ಬಳಕೆಯಾಗಿ ಸಾಧಿತ ಧಾತುಗಳಾಗುತ್ತವೆ. ಆದರೆ ಇವು ಪ್ರೇರಣಾರ್ಥಕಗಳಲ್ಲ.

. ಕನ್ನಡ ನಾಮಪ್ರಕೃತಿಗಳ ಮೇಲೆ ಇಸು ಬಂದು ಕ್ರಿಯಾಧಾತುಗಳಾಗುವುದು.

ಕನ್ನಡಿಸು ಹಂಬಲಿಸು ಹಂಗಿಸು
ಓಲಗಿಸು ಬೇಸರಿಸು ಹೆಸರಿಸು
ಅಬ್ಬರಿಸು ಒತ್ತಾಯಿಸು ಮುದ್ದಿಸು
ಉತ್ತರಿಸು ನೆಲೆಸು ಇದಿರಿಸು
ಎತ್ತರಿಸು ಮುದ್ದಿಸು ಬೋಳಿಸು
ಆಕಳಿಸು ಬೆದರಿಸು ಮೂದಲಿಸು
ಕತ್ತರಿಸು ಕೇಕರಿಸು ಓಲೈಸು
ಮುಗ್ಗರಿಸು ಕುಪ್ಪಳಿಸು ಕೋರಯಿಸು
ಅಪ್ಪಳಿಸು

. ಅನುಕರಣ ವಾಚಿಗಳ ಮೇಲೆ ಇಸು ಬಂದು ಕ್ರಿಯಾಧಾತುಗಳಾಗುವುದು.

ಥಳಥಳಿಸು ಬಡಬಡಿಸು ಗಹಗಹಿಸು
ಗಮಗಮಿಸು ಧಗಧಗಿಸು ಗಮಗಮಿಸು

. ವಿಶೇಷಣಗಳಿಂದ ಸಾಧಿಸುವ ಕ್ರಿಯಾಪದಗಳು

ಎತ್ತರಿಸು ತಂಪಿಸು ಬೋಳಿಸು ಇದಿರಿಸು ಇತ್ಯಾದಿ

. ಸಂಸ್ಕೃತ ನಾಮ ಪ್ರಕೃತಿಗಳ ಮೇಲೆ ಇಸು ಬಂದು ಕ್ರಿಯಾಧಾತುಗಳಾಗುವುದು.

ಸಂತೋಷಿಸು ಪ್ರತಿಫಲಿಸು ಲೇಪಿಸು
ಸುಖಿಸು ಲೇಪಿಸು ವಿಚಾರಿಸು
ಆಕರ್ಷಿಸು ಆರೋಪಿಸು ವಿವರಿಸು
ವಿಕಸಿಸು ಆವರ್ತಿಸು ವಿಧಿಸು
ಆಶೀರ್ವದಿಸು ಆಗ್ರಹಿಸು ವಿನಂತಿಸು
ವಿಶ್ಲೇಷಿಸು ರೂಪಿಸು ಪರಿಭಾವಿಸು
ಸಂಬಂಧಿಸು ವಾದಿಸು ಪ್ರಕಟಿಸು
ಅಧ್ಯಯನಿಸು ಲಭಿಸು ಪ್ರತಿಕ್ರಿಯಿಸು ಇತ್ಯಾದಿ

ಕ್ರಿಯಾಪದದಿಂದ ರೂಪುಗೊಂಡು ಮತ್ತಷ್ಟು ಉದಾಹರಣೆಗಳು

 

ಅಂಜಿಸು

ಅಂಟಿಸು

ಅಗಲಿಸು

ಅಟ್ಟಿಸು

ಅಡಗಿಸು

ಅಣಕಿಸು

ಅದುರಿಸು

ಅಮರಿಸು

ಅರಗಿಸು

ಅಲ್ಲಾಡಿಸು

ಅಲೆಯಿಸು

ಅಳೆಯಿಸು

ಅರಚಿಸು

ಆಡಿಸು

ಆರಿಸು

ಅಳಿಸು

ಇಂಗಿಸು

ಇರಿಸು

ಉಕ್ಕಿಸು

ಉಗಿಸು

ಉಗುಳಿಸು

ಉಜ್ಜಿಸು

ಉಡಿಸು

ಉಣ್ಣಿಸು

ಉಬ್ಬಿಸು

ಉರಿಸು

ಉಳಿಸು

ಉಳಿಸು

ಊಡಿಸು

ಊದಿಸು

ಎಗರಿಸು

ಎಟುಕಿಸು

ಎಬ್ಬಿಸು

ಎರಚಿಸು

ಏಮಾರಿಸು

ಏರಿಸು

ಏಳಿಸು

ಒಡೆಯಿಸು

ಒತ್ತಿಸು

ಒದರಿಸು

ಒರೆಸು

ಒಲಿಸು

ಒರಗಿಸು

ಓದಿಸು

ಕಂದಿಸು

ಕಕ್ಕಿಸು

ಕಚ್ಚಿಸು

ಕುಟುಕಿಸು

ಕಟ್ಟಿಸು

ಕಡಿಯಿಸು

ಕಡೆಯಿಸು

ಕದಲಿಸು

ಕರಗಿಸು

ಕರೆಯಿಸು

ಕಾಡಿಸು

ಕಾಣಿಸು

ಕಿರುಚಿಸು

ಕೀಳಿಸು

ಕುಂದಿಸು

ಕುಡಿಸು

ಕುಣಿಸು

ಕುದಿಸು

ಕುದುರಿಸು

ಕುಪ್ಪಳಿಸು

ಕುಲುಕಿಸು

ಕೂಗಿಸು

ಕೂಡಿಸು

ಕೂರಿಸು

ಕೆಡಿಸು

ಕೆತ್ತಿಸು

ಕೆದಕಿಸು

ಕೆದರಿಸು

ಕೆಮ್ಮಿಸು

ಕೆರಳಿಸು

ಕೆರೆಯಿಸು

ಕೇಯಿಸು

ಕೇರಿಸು

ಕೇಳಿಸು

ಕೊಂಕಿಸು

ಕೊಚ್ಚಿಸು

ಕೊಡಿಸು

ಕೊಬ್ಬಿಸು

ಕೊಯ್ಯಿಸು

ಕೊರೆಯಿಸು

ಕೊಲ್ಲಿಸು

ಗದರಿಸು

ಗರ್ಜಿಸು

ಗೀಚಿಸು

ಗುದ್ವಿಸು

ಗುಬ್ಬಳಿಸು

ಗೆಲ್ಲಿಸು

ಗೋಜಿಸು

ಗೋರಿಸು

ಚಚ್ಚಿಸು

ಚಲ್ಲಿಸು

ಚಾಚಿಸು

ಚಾಳಿಸು

ಜಿಗಾರಿಸು

ಚಿಮಕಿಸು

ಚಿಮ್ಮಿಸು

ಚೀಪಿಸು

ಚೀರಿಸು

ಚುಚ್ಚಿಸು

ಚೆಕ್ಕಿಸು

ಜಜ್ಜಿಸು

ಜಾಡಿಸು

ಜಾರಿಸು

ತಂಪಿಸು

ತುಂಬಿಸು

ತಗುಲಿಸು

ತಟ್ಟಿಸು

ಕಡವರಿಸು

ತಣಿಸು

ತಬ್ಬಿಸು

ತಬ್ಬರಿಸು

ತರಿಸು

ತರಚಿಸು

ತಾಗಿಸು

ತದ್ದಿಸು

ತಿನ್ನಿಸು

ತಿರುಗಿಸು

ತಿಳಿಸು

ತೀಡಿಸು

ತೀರಿಸು

ತುಟ್ಟಿಸು

ತುರಿಸು

ತುಳಿಸು

ತುಳುಕಿಸು

ತೂಗಿಸು

ತೆಗೆಯಿಸು

ತೇಲಿಸು

ತೊಡಗಿಸು

ತೊದಲಿಸು

ತೊರೆಯಿಸು

ತೊಳೆಯಿಸು

ದಕ್ಕಿಸು

ದಣಿಸು

ದಬ್ಬಿಸು

ದಾಟಿಸು

ದುಡಿಸು

ದೊರಕಿಸು

ನಂಬಿಸು

ನಗಿಸು

ನಡುಗಿಸು

ನಡೆಯಿಸು

ನರಳಿಸು

ನಲಿಸು

ನಿಕ್ಕುಳಿಸು

ನಿಗುರಿಸು

ನಿಟ್ಟಿಸು

ನಿಲ್ಲಿಸು

ನೀಗಿಸು

ನೀರಜಿಸು

ನೀವಿಸು

ನುಂಗಿಸು

ನುಗ್ಗಿಸು

ನುಡಿಸು

ನುಲಿಸು

ನೂಕಿಸು

ನೆಕ್ಕಿಸು

ನೆಗೆಯಿಸು

ನೆಡಿಸು

ನೆನೆಯಿಸು

ನೇಯಿಸು

ನೋಡಿಸು

ನೋಯಿಸು

ಪರಚಿಸು

ಪವಣಿಸು

ಪಾಡಿಸು

ಪಿಳಕಿಸು

ಬಗ್ಗಿಸು

ಬಡಿಸು

ಬದುಕಿಸು

ಬಯ್ಯಿಸು

ಬರಿಸು

ಬಳಲಿಸು

ಬಾಗಿಸು

ಬಳೆಯಿಸು

ಬಾರಿಸು

ಬಾಚಿಸು

ಬಾಜಿಸು

ಬಾಳಿಸು

ಬಿಚ್ಚಿಸು

ಬಿಡಿಸು

ಬಿತ್ತರಿಸು

ಬಿತ್ತಿಸು

ಬೀರಿಸು

ಬೀಳಿಸು

ಬೆಚ್ಚಿಸು

ಬೆದರಿಸು

ಬೆಸೆಯಿಸು

ಬೆಳಗಿಸು

ಬೆಳೆಯಿಸು

ಬೇಡಿಸು

ಬೇರ್ಪಡಿಸು

ಬೇಸರಿಸು

ಮಣಿಸು

ಮರಳಿಸು

ಮಲಗಿಸು

ಮುಸುಳಿಸು

ಮಿಗಿಸು

ಮಿಟುಕಿಸು

ಮುಕ್ಕಿಸು

ಮುಗ್ಗಿಸು

ಮುರಿಸು

ಮುಳುಗಿಸು

ಮೂಡಿಸು

ಮೇಯಿಸು

ಮೊಳಗಿಸು

ರುಬ್ಬಿಸು

ರೇಗಿಸು

ಲಭಿಸು

ಸಡಿಲಿಸು

ಸರಿಸು

ಸಲ್ಲಿಸು

ಸವೆಯಿಸು

ಸಾಗಿಸು

ಸಾಯಿಸು

ಸಾರಿಸು

ಸಿಕ್ಕಿಸು

ಸಿಡಿಸು

ಸೀಳಿಸು

ಸುಡಿಸು

ಸುರಿಸು

ಸುಲಿಸು

ಸೆಳೆಯಿಸು

ಸೇದಿಸು

ಸೇರಿಸು

ಸೋಕಿಸು

ಸೋಲಿಸು

ಹಚ್ಚಿಸು

ಹಬ್ಬಿಸು

ಹತ್ತಿಸು

ಹರಿಸು

ಹರಿಯಿಸು

ಹಾಕಿಸು

ಹಾಡಿಸು

ಹಾರಿಸು

ಹಿಗ್ಗಿಸು

ಹಿಡಿಸು

ಹುಗಿಸು

ಹುಯ್ಯಿಸು

 

‘ಇಸು’ ಪ್ರತ್ಯಯ ಕನ್ನಡದ ಕ್ರಿಯಾಪದ ರಚನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದರಿಂದ ರಚಿತವಾದ ಕ್ರಿಯಾರೂಪಗಳನ್ನು ಸಾಧಿತ ಹಾಗೂ ಪ್ರೇರಣಾರ್ಥಕ ಎಂದು ಕರೆಯಲಾಗಿದೆ. ನಾಮಪದಗಳೊಡನೆ ಬಂದು ಕ್ರಿಯಾಪದವಾದಾಗ ‘ಸಾಧಿತ; ಎಂದೂ, ಕ್ರಿಯಾ ಪದಗಳೊಡನೆ ಬಂದಾಗ ಪ್ರೇರಣಾರ್ಥಕ ಎಂದೂ ಹೇಳಲಾಗಿದೆ. ಇದು ದೇಶೀಯ ಹಾಗೂ ಅನ್ಯ ದೇಶೀಯ ಪದಗಳೊಡನೆ ಬರಬಹುದು.

ಇತ್ತೀಚಿನ ದಿನಗಳಲ್ಲಿ ಇದರ ಬಳಕೆ ಹೆಚ್ಚುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿ ಇಂಗ್ಲೀಷ್ ಪದಗಳೊಡನೆಯೂ ಇದರ ಬಳಕೆಯನ್ನು ಕಾಣಬಹುದು. ಉದಾ. ಪೋನ್ + ಇಸು = ಪೋನಿಸು, ಅದೇ ರೀತಿ ರಿಂಗಿಸು (ರಿಂಗ್ ಮಾಡು) ಇತ್ಯಾದಿ. ಅಲ್ಲದೆ ಲಘುಲೇಖನಗಳಲ್ಲಿ ‘ಇಸು’ ಬಳಸಿ ಹೊಸಪದಗಳನ್ನು ಸೃಷ್ಟಿಸುತ್ತಿರುವುದನ್ನು ಕಾಣಬಹುದು.

‘ಇಸು’ ಪ್ರತ್ಯಯ ಬಳಸಿ ಕ್ರಿಯಾರೂಪಗಲನ್ನು ಕನ್ನಡದ ನಾಮಪದಗಳಿಂದ, ಗುಣವಾಚಕಗಳಿಂದ, ಅನುಕರಣ ವಾಚಕಗಳಿಂದ ಸಾಧಿಸಲಾಗುತ್ತದೆ. ಕನ್ನಡದ ನಾಮಪದಗಳಾದ ಹಂಬಲ, ಕನ್ನಡ, ಒತ್ತಾಯ, ಹೆಸರುಗಳಿಗೆ ‘ಇಸು’ ಸೇರಿರುವುದರ ಮೂಲಕ ಹಂಬಲಿಸು, ಕನ್ನಡಿಸು, ಒತ್ತಾಯಿಸು, ಹೆಸರಿಸು ಎಂದು ಕ್ರಿಯಾರೂಪಗಳನ್ನು ಸಾಧಿಸಬಹುದು. ಅಂತೆಯೇ ಕೆಲವೊಂದು ಗುಣ ವಾಚಕಗಳಿಗೆ, ಎತ್ತರ, ಬೋಳು, ಎದುರು, ತಂಪುಗಳಿಗೆ ಇಸು ಸೇರಿದಾಗ ಎತ್ತರಿಸು, ಬೋಳಿಸು, ಎದುರಿಸು, ತಂಪಿಸು ಎಂದು ಸಾಧಿತವಾಗುತ್ತದೆ. ಅನುಕರಣವಾಚಕ ಗಳೊಡನೆಯೂ ಇಸು ಬಂದು ಗಹಗಹಿಸು (ಗಹಗಹ + ಇಸು), ಬಡಬಡಿಸು (ಬಡಬಡ + ಇಸು) ಎಂದಾಗಿ ಕ್ರಿಯಾರೂಪ ಸಾಧಿತವಾಗುತ್ತದೆ.

ಇನ್ನು ಕೆಲವು ಪದಗಳಲ್ಲಿ ಮೂಲಸ್ವರೂಪವೇ ‘ಇಸು’ ವಿನೊಂದಿಗೆ ಬರಬಹುದು. ಉದಾ. ಅಪ್ಪಳಿಸು, ಚಪ್ಪರಿಸು.

ಇವುಗಳಲ್ಲದೆ ಅನ್ಯದೇಶೀಯ ಅಂದರೆ ಸಂಸ್ಕೃತ, ಪರ್ಸೋ ಅರೇಬಿಕ್ ಇತ್ಯಾದಿ ಪದಗಳೊಂದಿಗೂ ‘ಇಸು’ ಬಳಸಿ ಕ್ರಿಯಾರ್ಯ್ಪ ಸಾಧಿಸುವುದು ಉಂಟು. ನಾಮಪದಗಳು ಮಾತ್ರ ಇಲ್ಲಿ ಬಳಕೆಯಾಗುತ್ತವ. ನಾಮಪದಗಳು ಕೆಲವು ಮೂಲರೂಪದ ಅಥವಾ ಕನ್ನಡೀಕರಣ ಗೊಂಡದ್ದಾಗಿರಬಹುದು. ಸಂಸ್ಕೃತದ ಅಂತಹ ಅನೇಕ ನಾಮಪದಗಳು ‘ಇಸು’ ವಿಮೊಂದಿಗೆ ಬಂದು ಕನ್ನಡದ ಕ್ರಿಯಾರೂಪಗಳಾಗಿವೆ.

ಉದಾ.

ಸಂತೋಷ – ಸಂತೋಷಿಸು
ಸೃಷ್ಟಿ – ಸೃಷ್ಟಿಸು
ಆಕರ್ಷಣೆ – ಆಕರ್ಷಿಸು
ಪ್ರಕಟಣೆ – ಪ್ರಕಟಿಸು
ಚುನಾವಣೆ – ಚುನಾಯಿಸು
ಜಮಾವಣೆ – ಜಮಾಯಿಸು
ಬಂಧನ – ಬಂಧಿಸು
ಆಕ್ರಮಣ – ಆಕ್ರಮಿಸು ಇತ್ಯಾದಿ

ಕೆಲವೊಂದು ಪದಗಳ ರಚನೆಯಲ್ಲಿ ನಾಮಪದದ ಕೊನೆಯ ಸ್ವರ ಲೋಪಗೊಂಡು ‘ಇಸು’ ಸೇರಿ ಕ್ರಿಯಾರೂಪವಾಗುತ್ತದೆ. ಉದಾ. ಸಂತೋಷ – ಸಂತೋಷಿಸು, ವಾದ – ವಾದಿಸು, ಹಿಂಸೆ – ಹಿಂಸಿಸು, ಹಂಗು – ಹಂಗಿಸು ಇತ್ಯಾದಿ. ಇನ್ನು ಕೆಲವು ಕಡೆಗಳಲ್ಲಿ ಕೊನೆಯ ಅಕ್ಶರ ಲೋಪಗೊಂಡು ಅದರ ಹಿಂದಿನ ಸ್ವರವೂ ಲೋಪಗೊಂಡು ಇಸು ಸೇರುತ್ತದೆ. ಉದಾ. ಬಂಧನ – ಬಂಧಿಸು, ಚಿತ್ರಣ – ಚಿತ್ರಿಸು, ರಕ್ಷಣೆ – ರಕ್ಷಿಸು ಇತ್ಯಾದಿ.

ಇನ್ನು ಕೆಲವನ್ನು ಗಮನಿಸಿದಾಗ ನಾಮಪದ ಕೊನೆಯ ಹಿಂದಿನ ಅಕ್ಷರದ ಸ್ವರ ದೀರ್ಘವಾಗಿದ್ದರೆ ಅದನ್ನು ಹ್ರಸ್ವವಾಗಿಸಿ ‘ಇಸು’ ಸೇರಿಸಿದಾಗ ಕೊನೆಯ ಸ್ವರ ಲೋಪಗೊಳ್ಳುತ್ತದೆ. ಉದಾ. ಸಾಕ್ಷಾತ್ಕಾರ – ಸಾಕ್ಷಾತ್ಕರಿಸು, ಪರಿಷ್ಕಾರ – ಪರಿಷ್ಕರಿಸು, ಧಿಕಾರ ಧಿಕ್ಕರಿಸು ಇತ್ಯಾದಿ (ಇದಕ್ಕೆ ನಿಘಂಟಿನಲ್ಲಿ ಬೇರೆಯದೇ ಆದ ವಿವರಣೆ ಇದೆ.)

ಮೇಲಿನ ಉದಾಹರಣೆಗಳನ್ನು ನೋದಿದಾಗ ‘ಇಸು’ ಪ್ರತ್ಯಯ ಕನ್ನಡದ ಕ್ರಿಯಾಪದಗಳಾದ ಮಾಡು, ನೀಡು, ಪಡು, ಹೇಳು, ಸಲ್ಲಿಸು ಇತ್ಯಾದಿಗಳಿಗೆ ಪರ್ಯಾಯ ವಾಗಿ ಬಳಕೆಯಾದಂತೆ ತೋರುತ್ತದೆ. ಮೊದಲು ಸಂಸ್ಕೃತ ಅನ್ಯದೇಶೀಯ ನಾಮಪದ ಗಳೊಡನೆ ಮೇಲೆ ಸೂಚಿಸಿದ ಕ್ರಿಯಾಪದಗಳು ಬಳಕೆಯಾಗು ತ್ತಿದ್ದುದು ನಂತರ ‘ಇಸು’ ಬಳಸಿ, ಕ್ರಿಯಾರೂಪ ಸೃಷ್ಟಿಸಿದುದು ಗೊತ್ತಾಗುತ್ತದೆ. ಉದಾ. ಚರ್ಚಿಸು ಎಂಬುದಕ್ಕೆ ಚರ್ಚೆ ಮಾಡು; ಅನುಮೋದಿಸು – ಅನುಮೋದನೆ ನೀಡು; ಸಂತೋಷಿಸು – ಸಂತೋಷಿಸು; ಅಭಿಪ್ರಾಯಿಸು – ಅಭಿಪ್ರಾಯಪಡು; ಅಭಿನಂದಿಸು – ಅಭಿನಂದನೆ ಸಲ್ಲಿಸು ಎಂಬಂತೆ ಹಲವು ಕ್ರಿಯಾಪದಗಳ ಬದಲಾಗಿ ಇಸು ಬಳಕೆಯಾಗುತ್ತಿದೆ. ಇವುಗಳಲ್ಲಿ ಮಾಡು ಎಂಬುದಕ್ಕೆ ಪರ್ಯಾಯವಾಗಿ ಬರುವಂತಹ ಪದಗಳೇ ಅಧಿಕ ಎನ್ನಬಹುದು.