. ಪಾರಿಭಾಷಿಕಪದಕೋಶ

ಅಷ್ಟಾಂಗಯೋಗ : ೧. ತನ್ನ ಸತ್ಯಮಾರ್ಗಾವಲಂಬನೆಯಲ್ಲಿ ಸಂಶಯವಿಲ್ಲದಿರುವುದು ನಿಃಶಂಕಯೋಗ. ೨. ಯಾವ ವಿಧದ ತಾರ್ಕಿಕ ಸುಖದ ಆಶೆಯೂ ಇಲ್ಲದಿರುವುದು ನಿಃಕಾಮಕ್ಷತಯೋಗ. ೩. ಅನ್ಯರಲ್ಲಿ ಹೇಸಿಕೆ ತೋರದಿರುವುದೂ, ಅಪವಿತ್ರತೆಯನ್ನು ಕಾಣದಿರುವುದೂ ನಿರ್ವಿಚಿಕಿತ್ಸಾಯೋಗ. ೪. ಅಸತ್ಯಚರಣೆಯುಳ್ಳವನೊಡನೆ ಸಹಕರಿಸದಿರುವುದು ಅಮೂಢ ದೃಷ್ಟಿಯೋಗ. ೫. ಅಜ್ಞಾನಿಗಳಿಂದ ಆಗುವ ಸನ್ಮಾರ್ಗದ ನಿಂದೆಯನ್ನು ತಪ್ಪಿಸುವುದು ಉಪಗೂಹನಯೋಗ. ೬. ಸನ್ಮಾರ್ಗದಿಂದ ಬೇರೆಯಾಗುವವರಿಗೆ ಯೋಗ್ಯದಾರಿ ತೋರುವುದು ಸ್ಥಿರೀಕರಣಯೋಗ. ೭. ಸತ್ಯರೂಪಾದಿಗಳನ್ನು ಸ್ನೇಹದಿಂದ ಕಾಣುವುದು ವಾತ್ಸಲ್ಯಯೋಗ. ೮. ದೂರಮಾಡಲು ಯತ್ನಿಸುವುದು ಪ್ರಭಾವನಾಯೋಗ.

ಅಸಿಆಉಸ : ಅರಿಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು ಮತ್ತು ಸರ್ವಸಾಧುಗಳೆಂಬ ಪಂಚಪರಮೇಷ್ಠಿಗಳು.

ಅಸ್ತಿಕಾಯಗಳು ಐದು : ಜೀವಾಸ್ತಿಕಾಯ, ಪುದ್ಗಲಾಸ್ತಿಕಾಯ, ಧರ್ಮಾಸ್ತಿಕಾಯ, ಅಧರ್ಮಾಸ್ತಿಕಾಯ ಮತ್ತು ಆಕಾಶಾಸ್ತಿಕಾಯ.

ಆರುದ್ರವ್ಯಗಳು : ಜೀವ, ಪುದ್ಗಲ, ಧರ್ಮ, ಅಧರ್ಮ-ಆಕಾಶ ಮತ್ತು ಕಾಲ.

ಒಂಬತ್ತು ಪದಾರ್ಥಗಳು : ಜೀವ, ಅಜೀವ, ಆಸ್ರವ, ಬಂಧ ಪುಣ್ಯ, ಪಾಪ, ಸಂವರ, ನಿರ್ಜರ, ಮೋಕ್ಷ.

ಚತುಸ್ಸಂಘ : ಶ್ರಾವಕ, ಶ್ರಾವಿಕಾ, ಮುನಿ ಮತ್ತು ಆರ್ಯಿಕಾ ಇದನ್ನೇ ಇಲ್ಲಿ ನಾಲ್ಕು ಸಂಘವೆಂದು ಹೇಳಿದೆ.

ತ್ರಿಗುಪ್ತಿ : ಕಾಯ, ವಚನ ಮತ್ತು ಮನಸ್ಸು.

ತ್ರಿಮೂಢ : ಜೈನನು ರಾಗ ದ್ವೇಷಗಳಿಂದ ಕೂಡಿದ ವ್ಯಕ್ತಿಗಳನ್ನು ದೇವರೆಂದು ಭಾವಿಸುವುದಿಲ್ಲ. ಹಾಗೆ ಭಾವಿಸಿದರೆ ಅದು ದೇವ ಮೂಢಯೆಂದು ತಿಳಿಯುವನು. ಹೀಗೆಯೇ, ಸಂಸಾರದಲ್ಲಿ ಬಿದ್ದವರ, ಒಂದಿಲ್ಲೊಂದು ಪರಿಗ್ರಹದಿಂದ ಪೀಡಿತರಾದ, ಹಿಂಸಾಪ್ರಚೋದಕರಾದ ಜನರನ್ನು ಗುರುವೆನ್ನುವುದಿಲ್ಲ. ಅನ್ನುವುದಾದರೆ ಅದು ಗುರುಮೂಢ ಎನಿಸಿಕೊಳ್ಳುವುದು. ಸೂರ್ಯನಿಗೆ ಅರ್ಘ್ಯಕೊಡುವುದು, ಗ್ರಹಣಸ್ನಾನ, ಸಂಕ್ರಾಂತಿದಾನ, ಸಂಧ್ಯಾಕಾಲದಲ್ಲಿ ಅಗ್ನಿ ಹೋತ್ರ ಮುಂತಾದುವುಗಳು ಜೈನಧರ್ಮದಂತೆ ನಿಷೇಧ. ಅದನ್ನು ಆಚರಿಸಿದರೆ ಆಗ ಅದು ಲೋಕಮೂಢ ಎನಿಸಿಕೊಳ್ಳುತ್ತದೆ.

ದಶಧರ್ಮ : ಕ್ಷಮೆ, ಮಾರ್ದವ, ನಿಷ್ಕಪಟ, ಸತ್ಯ, ನಿರ್ಲೋಭ, ಸಂಯಮ, ತಪ, ತ್ಯಾಗ, ಪರಿಗ್ರಹತ್ಯಾಗ ಮತ್ತು ಬ್ರಹ್ಮಚರ್ಯ.

ದಶಭಕ್ತಿ : ೧. ಸಿದ್ಧಭಕ್ತಿ. ೨. ಚೈತ್ಯಭಕ್ತಿ. ೩. ಪಂಚಗುರುಭಕ್ತಿ. ೪. ಶಾಂತಿಭಕ್ತಿ. ೫. ಸಮಾಧಿಭಕ್ತಿ. ೬. ಶ್ರುತಭಕ್ತಿ. ೭. ಚಾರಿತ್ರಭಕ್ತಿ. ೮. ಆಚಾರ್ಯಭಕ್ತಿ. ೯. ಯೋಗಭಕ್ತಿ. ೧೦. ನಿರ್ವಾಣಭಕ್ತಿ.

ದಶಲಕ್ಷಣ ಶಾಸ್ತ್ರ : ಧರ್ಮ ಹತ್ತು ಲಕ್ಷಣಗಳು : ಉತ್ತಮ ಕ್ಷಮಾ, ಉತ್ತಮ ಮಾರ್ದವ, ಉತ್ತಮ ಆರ್ಜವ, ಉತ್ತಮ ಶೌಚ. ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ ಮತ್ತು ಉತ್ತಮ ಬ್ರಹ್ಮಚರ್ಯ.

ದ್ವಾದಶಾಂಗಶ್ರುತ : ಜೈನಶ್ರುತಕ್ಕೆ ಹನ್ನೆರಡು ಅಂಗಗಳಿವೆ. ೧. ಆಚಾರಾಂಗ, ೨. ಸೂತ್ರಕೃತಾಂಗ, ೩. ಸ್ಥಾನಾಂಗ, ೪. ಸಮ ವಾಯಾಂಗ, ೫. ವ್ಯಾಖ್ಯಾಪ್ರಜ್ಞಪ್ತಿ, ೬. ಜ್ಞಾತ ಧರ್ಮಕಥಾ, ೭. ಉಪಾಸಕಾಧ್ಯಯನ, ೮. ಅಂತಃಕೃದ್ಧಶಾ, ೯. ಅನುತ್ತರ, ೧೦. ಪ್ರಶ್ನ ವ್ಯಾಕರಣ, ೧೧. ವಿಪಾಕ, ೧೨. ಸೂತ್ರಕೃತಾಂಗ. ಮೊದಲ ಹನ್ನೊಂದನ್ನೇ ಇಲ್ಲಿ ಏಕಾ ದಶಶ್ರುತಗಳೆಂದು ಹೇಳುತ್ತಾರೆ.

ದ್ವಾದಶಾನುಪ್ರೇಕ್ಷೆ : ಧ್ಯಾನದಲ್ಲಿ ಮನವನ್ನು ಕೇಂದ್ರೀಕರಿಸಲಿಕ್ಕಾಗಿ ಆಗಿಂದಾಗ್ಗೆ ಕೆಲವು ಚಿಂತೆಗಳನ್ನು ಮಾಡಬೇಕು. ಇವಕ್ಕೆ ಅನುಪ್ರೇಕ್ಷೆಗಳೆಂದು ಹೆಸರು. ೧. ಸಂಸಾರ ಸ್ಥಿರವಲ್ಲವೆಂದು ಚಿಂತಿಸುವ ಅನಿತ್ಯಾನುಪ್ರೇಕ್ಷೆ. ೨. ಧರ್ಮವನ್ನು ಬಿಟ್ಟರೆ ಆತ್ಮರಕ್ಷಣೆಯಾಗದೆಂದು ಭಾವಿಸುವ ಅಶರಣಾನುಪ್ರೇಕ್ಷೆ. ೩. ಲೋಕದ ನಿಜಸ್ವರೂಪವರಿವುದು ಸಂಸಾರಾನುಪ್ರೇಕ್ಷೆ. ೪. ಕರ್ಮಕ್ಕೆ ತನ್ನಾತ್ಮನೊಬ್ಬನೇ ಹೊಣೆಯಂದು ಯೋಚಿಸುವುದು ಏಕತ್ವಾನುಪ್ರೇಕ್ಷೆ. ೫. ದೇಹ, ಪತ್ನೀಪುತ್ರರೂ ನನ್ನವರಲ್ಲವೆನ್ನುವುದು ಅನ್ಯತ್ವಾನುಪ್ರೇಕ್ಷೆ. ೬. ದೇಹವು ಮಲಿನಮಯವೆನ್ನುವುದು ಅಶುಚಿತ್ವಾನುಪ್ರೇಕ್ಷೆ. ೭. ಯಾವುದರಿಮದ ಕರ್ಮಬಂಧವಾಗುವುದೋ ಅದು ಆಸ್ರವಾನುಪ್ರೇಕ್ಷೆ. ೮. ಆಸ್ರವ ನಿರೋಧ ಚಿಂತಿಸುವುದು ಸಂವರಾನುಪ್ರೇಕ್ಷೆ. ೯. ಕರ್ಮಕ್ಷಾಲನ ಮಾಡುವ ಭಾವನೆಯ ನಿರ್ಜರಾನುಪ್ರೇಕ್ಷೆ. ೧೦. ಜಗತ್ತಿನ ಅರಿವಾಗುವುದು ಲೋಕಾನುಭವಾನುಪ್ರೇಕ್ಷೆ. ೧೧. ಸಮ್ಯಕ್ತ್ವವು ಸುಲಭ ಸಾಧ್ಯವಲ್ಲವೆಂಬ ಸಾಧನೆ ಬೋಧಿದುರ್ಲಭಾನುಪ್ರೇಕ್ಷೆ. ೧೨. ಧರ್ಮವೇ ಆತ್ಮನ ನಿಜಸ್ವರೂಪವೆಂಬ ಭಾವನೆ ಧರ್ಮಾನುಪ್ರೇಕ್ಷೆ.

ನಾಲ್ಕುದಾನ : ಆಹಾರ, ಅಭಯ, ಔಷಧ ಮತ್ತು ಶಾಸ್ತ್ರದಾನ.
ಪಂಚಕಲ್ಯಾಣ : ತೀರ್ಥಂಕರನಾಗುವಂಥ ಭವ್ಯ ಜೀವವು ತನ್ನ ಕೊನೆಯ ಜನ್ಮಕ್ಕೆ ತಾಯಿಯ ಗರ್ಭಕ್ಕೆ ಅವತರಿಸುವಂದಿನಿಂದ ನಡೆಯುವ ಐದು ಮಹಾಮಂಗಳಗಳೇ ಪಂಚಕಲ್ಯಾಣಗಳು. ಗಭಾಂವತರಣ ಕಲ್ಯಾಣ, ಜನ್ಮಾಭಿಷೇಕ ಕಲ್ಯಾಣ, ಪರಿನಿಷ್ಕೃಮಣ ಕಲ್ಯಾಣ, ಕೇವಲಜ್ಞಾನ ಕಲ್ಯಾಣ ಮತ್ತು ಮೋಕ್ಷ ಕಲ್ಯಾಣಗಳೇ ಈ ಐದು ಕಲ್ಯಾಣಗಳು.

ಪಂಚಮಹಾವ್ರತ : ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ, ಪರಿಗ್ರಹ ಪರಿಮಾಣ. ಪಂಚಾಣುವ್ರತಗಳೆಂದರೂ ಇವೇ.

ಪಂಚಾಚಾರ : ದರ್ಶನ, ಜ್ಞಾನ, ಚಾರಿತ್ರ, ತಪ ಮತ್ತು ವೀರ್ಯ.

ಭವ್ಯ : ಸಿದ್ಧ ಸ್ಥಿತಿಯನ್ನು ಹೊಂದುವ ಯೋಗ್ಯತೆ ಇರುವ ಜೀವಕ್ಕೆ ಭವ್ಯವೆಂದು ಹೆಸರು. ಇಂಥಾ ಯೋಗ್ಯತೆಯುಳ್ಳವರೆಲ್ಲರೂ ಭವ್ಯರೇ.

ಪ್ರೋಷಧೋಪವಾಸ : ಪ್ರತಿ ಅಷ್ಟಮೀ ಚತುದರ್ಶಿ ತಿಥಿಗಳಲ್ಲಿ ಉಪವಾಸವನ್ನು ಆಚರಿಸುವುದು.

ರತ್ನತ್ರಯ : ಸಮ್ಯಗ್ದರ್ಶನ, ಸಮ್ಯಗ್ ಜ್ಞಾನ ಮತ್ತು ಸಮ್ಯಕ್ಚಾರಿತ್ರ. ಒಂದು ಜೀವವು ಮುಕ್ತಿ ಹೊಂದಬೇಕಾದಾಗ ಆ ಸಾಧನೆಗೆ ತನ್ನ ಅತ್ಮವನ್ನು ಸಿದ್ಧಗೊಳಿಸಬೇಕಾಗುತ್ತದೆ. ಈ ಸಿದ್ಧತೆಗೆ ತತ್ವಜ್ಞಾನ ಅವಶ್ಯಬೇಕು. ಏಕೆಂದರೆ ಇದರಿಂದ ಆತ್ಮ ಅನಂತ ಶಕ್ತಿಯುತವಾದುದೆಂದೂ, ದೇಹವು ಕೇವಲ ಕರ್ಮಕಟ್ಟುವಿಕೆಯಿಂದಾಗಿರುವ ಪರಿಣಾಮವೆಂದೂ ನಿಶ್ಚಯವಾದ ತಿಳಿವನ್ನು ಪಡೆಯಬಹುದು. ಇಂಥಾ ತತ್ವವನ್ನು ಬೋಧಿಸಿರುವ ಜಿನೇಶ್ವರನ, ಅವನಂತೆ ಆಚರಣೆ ಯುಳ್ಳವರಲ್ಲಿ ಮತ್ತು ಅವರ ಬೋಧನೆಯಲ್ಲಿ ಇರುವ ಜ್ಞಾನ ಸಮ್ಯಗ್ ಜ್ಞಾನ. ಅರಿತಮೇಲೆ ಅದರಂತೆ ನಡೆವುದು ಸಮ್ಯಕ್ಚಾರಿತ್ರ. ಇವುಗಳನ್ನೆ ಇಲ್ಲಿ ಮೂರು ರನ್ನವೆಂದೂ ಹೇಳಲಾಗಿದೆ.

ವಿದೇಹ ಕ್ಷೇತ್ರ : ಶುದ್ಧ ಧರ್ಮಾಚರಣೆಯಿಮದ ಜೀವನಿಗೆ ಮೋಕ್ಷ ಪ್ರಾಪ್ತಿಯಾಗುವ ಕ್ಷೇತ್ರ. ಸೀತಾ, ಸಿತೋದಾ ನದಿಗಳೂ ನೂರಹನ್ನೆರಡು ಸಾವಿರ ಉಪನದಿಗಳು ಇಲ್ಲಿ ಪ್ರವಹಿಸುತ್ತವೆ. ಗೋಲಾಕಾರದ ಸುಮೇರು ಪರ್ವತವಿಲ್ಲಿದೆ. ಇದಕ್ಕೆ ಉತ್ತರ ದಕ್ಷಿಣ ಭಾಗಗಳಲ್ಲಿ ಉತ್ತಮ ಭೋಗಭೂಮಿಗಳೂ, ಪೂರ್ವ, ಪಶ್ಚಿಮಗಳಲ್ಲಿ ಕರ್ಮ ಭೂಮಿಗಳೂ ಉಂಟು. ಒಂದೊಂದರಲ್ಲೂ ಒಂದೊಂದು ವಿಜಯಾರ್ಧ ಪರ್ವತ, ಉಪನದಿಗಳೂ ಉಂಟು. ಹೀಗಾಗಿ ಪ್ರತಿಯೊಂದೂ ಆರು ಖಂಡಗಳಾಗಿ ವಿಭಾಗಿಗೊಂಡಿವೆ.

ಶಲಾಕಾಪುರುಷರು : ೨೪ ತೀಥಂಕಕರು, ೧೨ ಚಕ್ರವರ್ತಿಗಳು, ೯ ನಾರಾಯಣರು, ೯ ಪ್ರತಿನಾರಾಯಣರು ಮತ್ತು ೯ ಬಲಭದ್ರರೂ ಸೇರಿ ೬೩ ಜನ ಶಲಾಕ ಪುರುಷರೆನಿಸುತ್ತಾರೆ.

ಶುಕ್ಲಧ್ಯಾನ : ಶುಭಧ್ಯಾನ.

ಷೋಡಶಭಾವನೆ : ದರ್ಶನವಿಶುದ್ಧಿ, ವಿನಯಸಂಪನ್ನತೆ, ಶೀಲವ್ರತೇಷ್ವನತಿಚಾರ, ಅಭೀಕ್ಷ್ಣ ಜ್ಞಾನೋಪಯೋಗ, ಸಂವೇಗ, ಶಕ್ತಿತಸ್ತ್ಯಾಗ, ತಪ, ಸಾಧುಸಮಾಧಿ, ವೈಯಾವೃತ್ಯ, ಅರ್ಹದ್ಭಕ್ತಿ, ಆಚಾರ್ಯಭಕ್ತಿ, ಬಹುಶ್ರುತಭಕ್ತಿ, ಪ್ರವಚನಭಕ್ತಿ, ಆವಶ್ಯಕಾ ಪರಿಹಾಣಿ,  ಮಾರ್ಗಪ್ರಭಾವನಾ ಮತ್ತು ಪ್ರವಚನವಾತ್ಸಲ್ಯ.

ಸಪ್ತತತ್ವ : ಜೀವ, ಅಜೀವ, ಅಸ್ರವ ಬಂಧ, ಸಂವರ, ನಿರ್ಜರ ಮತ್ತು ಮೋಕ್ಷ. ಜೀವಕ್ಕೆ ಕಟ್ಟುವ ಕರ್ಮವು ಅಜೀವ ತತ್ವದ ಅಂಶ. ಇದು ಕಟ್ಟಲಿಕ್ಕೆ ಕಾರಣವಾಗುವ ದೇಹ, ಮನಸ್ಸು ಮಾತು ಅಸ್ರವಗಳು. ಹೀಗೆ ಕಟ್ಟಿಕೊಳ್ಳುವ ಕ್ರಿಯೆಯೇ ಬಂಧ. ಕಟ್ಟಿದ ಕರ್ಮಗಳನ್ನು ಕಳೆಯುವುದೇ ನಿರ್ಜರೆ. ಬೇರೆ ಕರ್ಮಗಳು ಕಟ್ಟದಂತೆ ತಡೆಗಟ್ಟುವುದೇ ಸಂವರೆ. ಜೀವಕ್ಕೆ ಕರ್ಮವು ಪೂರ್ಣವಾಗಿ ನಾಶವಾದಾಗ ಉಂಟಾಗುವ ಶಾಂತಿ ಸ್ಥಿತಿಯೇ ಮೋಕ್ಷ.

ಸಪ್ತವ್ಯಸನ : ಜೂಜು, ಮಾಂಸಾಹಾರ, ಮದ್ಯಸೇವನೆ, ಬೇಟೆ, ವೇಶ್ಯಾಗಮನ, ಕದಿಯುವಿಕೆ ಮತ್ತು ಪರಸ್ತ್ರೀಚಿಂತೆ.

ಸಮ್ಯಕ್ವ : ದ್ರವ್ಯಗಳಾರು, ಅಸ್ತಿಕಾಯಗಳೈದು, ಪದಾರ್ಥಗಳು ಒಂಬತ್ತು. ಇವುಗಳ ಬಗ್ಗೆ ಜಿನೇಂದ್ರರ ಸತ್ಯಸ್ವರೂಪದ ಹೇಳಿಕೆಯಂತೆ ತಿಳುವಳಿಕೆ ಇಟ್ಟುಕೊಳ್ಳುವುದಕ್ಕೆ ಸಮ್ಯಕ್ತ್ವವೆಂದು ಹೆಸರು.

ಸಾಮಾಯಿಕ : ಸಂಧ್ಯಾಕಾಲಗಳಲ್ಲಿ ಏಕಾಂತದಲ್ಲಿ ಆತ್ಮಧ್ಯಾನ ಮಾಡುವುದು.

ಹತ್ತು ಅತಿಶಯಗಳು : ಕೇವಲ ಜ್ಞಾನವು ಪ್ರಾಪ್ತವಾದ ನಂತರ ಜಿನನಿರುವ ಸ್ಥಳದಿಂದ ನಾಲ್ಕು ದಿಕ್ಕುಗಳಲ್ಲೂ ನಾಲ್ಕುನೂರು ಹರಿದಾರಿಗಳ ತನಕ ಸುಭಿಕ್ಷ, ಆಕಾಶಗಮನ, ಅಹಿಂಸೆ, ನಿರಾಹಾರ, ನಿರುಪದ್ರವ, ನೋಡಲು ನಾಲ್ಕು ಮುಖಗಳು, ಸರ್ವಜ್ಞತ್ವ, ದೇಹದ ನೆರಳಿಲ್ಲದಿರುವಿಕೆ, ಕಣ್ಣು ರೆಪ್ಪೆಗಳ ಚಲನೆ ಇಲ್ಲದಿರುವುದು, ಉಗುರು ಕೂದಲುಗಳು ಬೆಳೆಯದಿರುವುದು ಇವುಗಳೇ ಹತ್ತು ಅತಿಶಯಗಳು.

ಹದಿನೆಂಟು ದೋಷಗಳು : ಕ್ಷುಧೆ, ತೃಷೆ, ಭಯ, ದ್ವೇಷ, ರಾಗ, ಮೋಹ, ಚಿಂತೆ, ಜರೆ, ರೋಗ, ಮೃತ್ಯ, ಖೇದ, ಕ್ರೋಧ, ಮದ, ಆರತಿ, ವಿಸ್ಮಯ, ಜನ್ಮ, ನಿದ್ದೆ ಮತ್ತು ವಿಷಾದ.

ಹನ್ನೊಂದು ಶ್ರಾವಕ ಧರ್ಮ : ಶ್ರಾವಕನು ತನ್ನ ಆತ್ಮಕಲ್ಯಾಣ ಸಾಧನೆಗೆ ವ್ರತ ನಿಯಮಗಳ ಕಟ್ಟಿನೊಳಗಿರಬೇಕು. ಅವನು ಆಚರಿಸಬೇಕಾದ ವ್ರತ ನಿಯಮಾದಿಗಳನ್ನು ಒಂದಾದ ಮೇಲೊಂದರಂತೆ ಕಾಲಾನುಕ್ರಮವಾಗಿ ಸಾಧಿಸಬೇಕು. ಇಂಥವು ಹನ್ನೊಂದು ತೆರನಾಗಿವೆ. ಒಂದು ಸಾಧನೆಯಲ್ಲಿ ಸಿದ್ಧಪಡೆದ ನಂತರ ಇನ್ನೊಂದರ ಸಾಧನೆ ಪ್ರಾರಂಭವಾಗುತ್ತದೆ. ಕೊನೆಯದರ ಸಾಧನೆಯಲ್ಲಿರುವಾಗ ಹನ್ನೊಂದು ಧರ್ಮಗಳೂ ಅವನಿಗೆ ಸಿದ್ಧಿಸಿರುತ್ತವೆ. ಈ ಹನ್ನೊಂದೂ ಅವನ ಸಾಧನೆಯ ತರಗತಿಗಳು. ಒಂದೊಂದು ತರಗತಿಯಲ್ಲಿರುವಾಗ ಅವನಿಗೆ ಒಂದೊಂದು ಹೆಸರಿರುತ್ತದೆ. ೧. ಪಂಚಾಣುವ್ರತ, ಎಂಟುಗುಣಗಳಿಂದ ಕೂಡಿ ಅವಶ್ಯವಿದ್ದಷ್ಟು ಭೋಗದಲ್ಲಿರುವವನು ದಾರ್ಶನಿಕ. ೨. ರಾಗದ್ವೇಷಗಳನ್ನು ಗೆದ್ದು ಸಮಭಾವವನ್ನು ಧರಿಸುವುದಕ್ಕಾಗಿ ವಿಹಾರ-ಸಂಚಾರ, ಅಪ್ರಯೋಜನಕ ಕಾರ್ಯ, ಭೋಗೋಪಭೋಗವಸ್ತುಗಳ ಉಪಯೋಗ ಇವುಗಳನ್ನು ಮಿತಿಯಲ್ಲಿಟ್ಟುಕೊಂಡು ಸಂಧ್ಯಾಕಾಲಗಳಲ್ಲಿ ಆತ್ಮಧ್ಯಾನ-ಅಷ್ಟಮೀ ಚತುದರ್ಶಿಗಳಲ್ಲಿ ಉಪವಾಸ, ಸಾಧುಗಳಿಗೆ ಆಹಾರ ದಾನ ಇವುಗಳನ್ನು ಬೆಳೆಸಿಕೊಂಡು ಬರುವವನು ವ್ರತಿಕ. ೩. ಮೂರು ಕಾಲಗಳಲ್ಲೂ ಪ್ರತಿದಿನವೂ ಆತ್ಮಧ್ಯಾನ ಮಾಡುವವನು ಸಾಮಾಯಿಕ. ೪. ಉಪವಾಸಗಳನ್ನು ವ್ರತವಾಗಿ ಹಿಡಿದವನು ಪ್ರೋಷದೋಪವಾಸಿ. ೫. ಕಾಮೋದ್ರೇಕಾದಿಯಾಗಿ ಸಚಿತ್ತ ವನಸ್ಪತಿಗಳನ್ನು ಸೇವಿಸದಿರುವವನು ಸಚಿತ್ತವಿರತ. ೬. ಹಗಲು ಕಾಯಿಕ ಭೋಗವನ್ನು ತಡೆಗಟ್ಟುವವನು ದಿವಾಮೈಥುನವಿರತ. ೭. ಸ್ತ್ರೀ ಸಂಗವನ್ನು ಪೂರ್ಣತ್ಯಾಗ ಮಾಡುವವನು ಬ್ರಹ್ಮಚಾರಿ. ೮. ತನ್ನ ಜೀವನದ ಕಸಬಿನಿಂದ ನಿವೃತ್ತಿಗೊಳ್ಳುವವನು ಆರಂಭವಿರತ. ೯. ಸಂಸಾರವನ್ನೆಲ್ಲಾ ಮಕ್ಕಳಿಗೆ ವಹಿಸಿ ಕೇಳಿದಾಗ ಮಾತ್ರ ಸಲಹೆ ನೀಡಿಕೊಂಡಿರುವವನು ಪರಿಗ್ರಹವಿರತ. ೧೦. ಸಂಸಾರವನ್ನು ಸಂಪೂರ್ಣವಾಗಿ ತ್ಯಾಗಮಾಡುವವನು ಅನುಮತಿವಿರತ. ೧೧. ಮುನಿಸೇವೆ ಶಾಸ್ತ್ರಚಿಂತೆ ಮತ್ತು ಧ್ಯಾನದಲ್ಲಿ ಕಾಲಕಳೆಯುವವನು ಉದ್ದಿಷ್ಟವಿರತ.

 

. ನಾಮಸೂಚಿ
(ಮುಂದಿನ ಅಂಕಿಗಳು ಪುಟಗಳನ್ನು ಸೂಚಿಸುತ್ತವೆ)

ವ್ಯಕ್ತಿನಾಮ

ಅಚ್ಯುತೇಂದ್ರ ೧೯೯ , ೨೩೨
ಅಜಿತಜಿನ ೧೩೮, ೩೫೭, ೩೬೫
ಅಜಿತವೀರ್ಯ ೧೫೦, ೧೫೪
ಅಜಿತಸೇನ ೨೩೧, ೨೩೨, ೨೪೨
ಅನಂತಜಿನ ೧೪೦, ೧೪೨, ೧೬೦
ಅನಂತಜಿನೇಶ ೧೫೭, ೧೫೮
ಅನಂತಜಿನೇಶ್ವರ ೧೫೬
ಅನಂತಜಿನೇಂದ್ರ ೪೦೦
ಅನಂತನಾಥ ೧೪೮, ೧೭೩
ಅನಂತವೀರ್ಯ್ಯ ೧೫೦, ೧೫೨, ೧೭೧
ಅಭಿನಂದನ ಜಿನ ೧೩೮
ಅರಜಿನ ೧೪೦, ೧೬೦, ೩೦೬, ೩೮೩
ಅರಜಿನನಾಥ ೩೦೫, ೩೩೦
ಅರಜಿನಪತಿ ೩೦೨
ಅಹಮೀಂದ್ರ ೧೮೩, ೧೮೭, ೩೧೮, ೩೦೧, ೩೩೩, ೩೯೬
ಆದಿನಾಥ ೩೧೯
ಕಂಸಲದೇವಿ  ೨೯೦
ಕಲ್ಯಾಣಕೀರ್ತಿ ೧೬೪
ಕುಂದಕುಂದಾಚಾರ್ಯ ೧೯
ಕುಂಥುನಾಥ ೧೬೦, ೩೦೨, ೩೦೫, ೩೩೦
ಕೂಷ್ಮಾಂಡಿನಿ ೨೯೭
ಚಂದ್ರನಾಥ ೨೧೮, ೧೬೮, ೧೬೯, ೧೭೧, ೨೨೧, ೨೨೯, ೨೩೯, ೨೪೦, ೨೫೩, ೩೦೫, ೩೧೨, ೩೨೭, ೩೨೮
ಚಂದ್ರನಾಥಸ್ವಾಮಿ ೧೪೧, ೩೩೭
ಚಂದ್ರಪ್ರಭ ೧೩೯, ೧೫೮, ೧೫೯, ೧೭೦, ೨೪೧, ೨೪೨, ೨೬೧, ೨೬೪, ೨೯೩, ೩೦೦, ೩೦೬, ೩೦೮, ೩೧೫, ೩೨೦, ೩೩೭
ಚಂದ್ರಪ್ರಭೇಶ ೩೨೯
ಚಂದ್ರಪ್ರಭಸ್ವಾಮಿ ೨೨೯
ಚಂದ್ರಮುನಿ ೧೭೩
ಚಂದ್ರಸಾಗರವರ್ಣಿ ೨೪೨, ೩೩೮
ಚಂದಪ್ರಭ ೨೬೦
ಚಾಮುಂಡರಾಯ ೨೧೦
ಚಾರುಕೀರ್ತಿ ೩೫೧
ಚಾರುಕೀರ್ತಿಪಂಡಿತ ೧೫೮
ಚಾರುಕೀರ್ತಿಮುನಿ ೨೯೪
ಚಾರುದತ್ತ  ೨೦೨
ಚೆನ್ನಮ್ಮ ೩೪೩
ಚಿಕ್ಕರಾಯ ೧೫೮
ಚಿದಾನಂದ ೩೦೨, ೩೦೯
ಜಂಭುನಾಥಸ್ವಾಮಿ ೩೬೪
ಜಂಭುಸ್ವಾಮಿ ೪, ೧೪೭
ಜಯನೃಪ ೨೬೦
ಜಯವರ್ಮ ೩೨೬, ೩೩೩
ಜ್ವಾಲಮಾಲಿನಿ ೨೭೯, ೩೩೬, ೩೩೭
ಜ್ವಾಲಿನಿ ೨೫೩, ೨೫೪, ೨೫೫, ೩೫೨
ಜ್ವಾಲಿನೀದೇವಿ ೨೫೫, ೩೧೧, ೩೧೨, ೩೩೬, ೩೩೭, ೩೫೩
ಜ್ವಾಲಿನಿಯಮ್ಮ ೨೫೫
ಜಿನದತ್ತ ೨೪೫, ೨೫೮, ೨೯೨
ತುಂಕಪ್ಪ ೧೪೮
ಸುವ್ರತ ೧೪೧, ೧೫೮, ೧೬೦, ೧೬೩, ೨೬೪, ೩೦೭, ೩೨೧, ೩೫೮
ಸುವ್ರತೇಶ ೩೦೫, ೩೧೦
ಸೂರಿಪ್ರಭುಸ್ವಾಮಿ ೧೫೨
ಸೋಮದತ್ತ ೨೪೧

ಸ್ಥಳನಾಮ
ಅಚಲಾಪುರ ೧೪೭
ಅಮಚವಾಡಿ ೩೬೭
ಅಮ್ಮಿನಬಾವಿ ೮೬
ಅಲಕಪುರ೨೩೧
ಅವನತಾಪುರ ೧೬೩
ಅಕ್ಷಯಪುರ ೩೩೦
ಉಚ್ಚಂಗಿ ೧೪೨
ಉದಯಗಿರಿ ೩೬೪
ಉಜಂತಗಿರಿ ೧೪೬, ೧೯೮, ೩೩೨, ೩೬೩
ಕನಕಗಿರಿ ೧೪೬, ೨೦೦
ಕಾರ್ಕಳ ೩೫೮, ೩೮೨, ೩೯೪
ಕಾನಾಪುರ ೧೭೪
ಕುಂಡಲಾಪುರ ೩೬೪, ೩೮೬
ಕೂಡಲೂರು ೧೪೨
ಕೊಪಣ ೧೭೦, ೧೭೧
ಕೊರಟಗೆರೆ ೩೬೧
ಕೊಲ್ಲಾಪುರ ೨೨೧
ಕೊಲ್ಲಿಪಾಕ ೩೬೭
ಖಾನಾಪುರ ೧೪೮
ಗಗನಗಿರಿ ೧೪೨
ಗುಡಿಬಂಡೆ ೧೪೧
ಗೋಕಾಕ ೩೩೬
ಚಂದ್ರಪುರ ೧೭೨
ಚಂಪಾಪುರ ೧೪೩, ೧೪೬, ೩೬೩
ಚನ್ನಗಿರಿ ೧೪೩
ಚಾರಣಗಿರಿ ೨೦೪
ಚೆನ್ನೆಪುರ ೧೫೪
ಡಿಳ್ಳಿ (ದೆಹಲಿ) ೪೧
ತಿಗಡೊಳ್ಳಿ ೪೦೮, ೪೦೯
ತೋವಿನಕೆರೆ ೨೧೮
ನಂದಪುರ ೩೨೫
ನರಸಿಂಹಪುರ ೩೧೫
ನಾಮಗೊಂಡಲ ೧೪೨
ನಿರ್ಗ್ಗುಂಡಿ ೩೧೬
ನಿಟ್ಟೂರು ೧೪೨
ನಿಡಗಲ್ಲು ೧೪೨
ಪಾವಗಿರಿ ೧೪೭
ಪಾವಾಪುರ ೧೪೬, ೩೬೩, ೩೮೬
ಪುತ್ತಂಗಡಿ ೧೭೧
ಪೆನಗೊಂಡೆ ೧೪೧, ೨೦೪, ೩೧೧
ಪೊಂಬುಚ ೨೪೭, ೩೪೧, ೩೩೮, ೩೩೯, ೩೪೫, ೩೪೬, ೩೪೭, ೩೪೯, ೩೬೫
ಪೌದನಪುರ ೩೭೬
ಬಂಕಾಪುರ ೩೮೯
ಬಿದುರೆ ೪೦೦
ಬಿಸಿರಹಳ್ಳಿ ೮೫
ಬೆಳ್ಗೊಳ ೧೬೩, ೧೬೬, ೧೬೮, ೧೯೯, ೨೦೨, ೨೦೬, ೨೦೭, ೨೦೮, ೨೧೦, ೨೧೨, ೨೧೩, ೨೧೪, ೨೧೭, ೨೨೨, ೨೨೬, ೨೫೦, ೨೫೩, ೨೫೬, ೨೯೦, ೨೯೪, ೨೯೭, ೨೯೮, ೨೯೯, ೩೧೨, ೩೧೩, ೩೧೫, ೩೧೭, ೩೧೯, ೩೨೦, ೩೨೧, ೩೫೮, ೩೫೯, ೩೬೪, ೩೭೫, ೩೭೭, ೩೭೯, ೩೮೩, ೩೮೫
ಬೇಳೂರು ೧೪೨
ಬೈಲಹೊಂಗಲ  ೪೦೯
ಭಂಗವಾಡಿ ೧೭೩, ೨೮೮
ಮಧುಗಿರಿ ೨೨೪
ಮಲ್ಲಪುರ ೧೫೪
ಮೂಡಬಿದರೆ ೩೪೪
ರತ್ನಗಿರಿ ೧೪೨, ೩೬೪
ರಾಂಪುರ ೧೪೨
ವರವಿ ೨೮೬
ವಾರಣಾಸಿ ೨೯೯, ೩೧೦
ವೇಣುಪುರಿ ೧೪೨, ೩೦೨, ೩೦೫, ೩೨೨, ೩೨೩, ೩೨೯, ೩೪೨, ೩೪೯, ೩೫೫, ೩೫೬
ವೇಣ್ಪುರ ೩೪೦, ೩೪೨, ೩೫೧
ಶಿರ್ಯ (ಸಿರಾ) ೧೪೨
ಶಿವಪುರ ೩೬೪
ಶ್ರವಣಬೆಳ್ಗೊಳ ೨೧೦
ಸಾಕೇತಪುರ  ೨೮೫, ೩೮೧, ೩೮೮, ೩೯೫, ೩೯೮
ಸಿಂಹಪುರ ೧೮೨, ೨೪೨, ೨೫೫, ೩೩೭, ೩೩೮
ಸುರಪುರ ೩೬೬
ಸೆಜಾನುಪುರ ೨೬೫
ಹರದ ೧೪೧
ಹರಿಹರ ೩೩೬
ಹಿರಿಯೂರು ೧೪೨
ಹೊಂಬುಚ ೨೪೪, ೨೪೭, ೨೫೨, ೨೯೨, ೩೨೮