೧೬೧. ರಾಜನೀತಿಯಕೇಳಿನಡೆದರೆ

ರಾಜನೀತಿಯ ಕೇಳಿ ನಡೆದರೆ ಸುಲೋಕ ಪೂಜಿತನಾಗುವನು ಆತ್ಮ
ರಾಜ ನೀನು ತಪೋರಾಜ್ಯದೊಳಗೆ ಯೋಗದೋಜೆಯ ಕೇಳಿ ನಡೆ ||       ಪಲ್ಲವಿ

ಪ್ರಾಣಯಾಮವೆಂದೆಂಬ ಪ್ರಧಾನಿಯ ಕ್ಷೀಣವ ಕಾಣದಿರೂ ಸರ್ವ
ತ್ರಾಣಿ ಪ್ರತಾಹಾರವೆಂಬ ಸೇನಾಪತಿ ಹೊಣೆಯ ಮಾಡಿದರೂ
ಮಾಣದೆ ಕರಣೇಂದ್ರಿಯವೆಂಬ ಮಲ್ಲರ ಕೂಡೆ ಹೊಣೆ ಸಾಧನೆಯ ಮಾಡೂ ಮೈ
ರೇಣು ಹೋಹಂತೆ ಸುಜ್ಞಾನ ಜಲದಲ್ಲಿ ನಿರ್ವಾಣ ಮಜ್ಜನವ ಮಾಡೂ ||     ೧

ಚೀನಾಂಬರವ ಹೊದ್ದೆ ಕ್ಷಮೆಯೆಂಬ ವೈರಾಗ್ಯ ದಾನ ಭೂಷಣವಾಗಿ ಬ್ರಹ್ಮ
ಸ್ಥಾನದ ಬಾಗಿಲ ತೆಗೆದು ಚಿನ್ಮಯನ ಬ್ರಹ್ಮಾನಂದದಲಿ ಪೂಜಿಸೂ
ಮೌನವ್ರತಗಳೆಂಬ ಹಿತವರೆಂದೆಂಬಾ ಪ್ರಧ್ಯಾನ್ಯವೆಂಬಮೃತವನೂ ರಮ್ಯ
ಸ್ಥಾನದೊಳಗೆ ಕುಳಿತಾರೋಗಣೆಯ ಮಾಡು ಜ್ಞಾನಿಗಳಂಗವಿದೂ ||        ೨

ಸಾಮಭೇದದಲಿ ದಾನದಾಕಾಂಕ್ಷೆಯಲಿ ಈ ಮೈಯ ಭೇದದಲಿ ಕಷ್ಟ
ನಾಮಕಷಾಯಂಗಳ ದಂಡವಿವ ನಾಲ್ಕ ನೀ ಮನವರಿತು ಮಾತೂ
ಪ್ರೇಮರವುದರೆಂಬ ದುಷ್ಟರಿಬ್ಬರ ನಿನ್ನ ಸೀಮೆಯ ಸೊಗಸದಿರೂ ಆತ್ಮಾ
ರಾಮನಾಗಿರು ಚಿದಂಬರ ಪುರುಷರ ಸಿರಿ ನೇಮದೊಳಗಿಹುದಾತ್ಮನೆ ||    ೩

೧೬೨. ವೀತರಾಗವೀತರಾಗ

ವೀತರಾಗ ವೀತರಾಗ ವೀತರಾಗ ವೀತರಾಗ ||         ಪಲ್ಲವಿ

ಆದಿಜಿನೇಶನಮಿತ ಕರ್ಮ ನಿಶ್ಯೇಷನಮಿತ ಮುನೀಶ ಶರಧಿ ಪೂರ್ಣಚಂದ್ರ
ವೃಷಭ ಜಿನೇಶ ತ್ರಿಜಗಧೀಶ ವಿಜಿತ ಮನೋಹರ ಸದಯಾಮೂಲ ||       ೧

ಪದ್ಮಾಶ್ರಯ ಪಾದ ಪಂಕಜಯುಗಲಕೆ ಸದ್ಭವ್ಯನಮಿಥೆ ಸಾರುಸು ಖೋಷ
ಮೋಕ್ಷಲಕ್ಷ್ಮಿ x x x x ಸ್ತ್ರೂಪರ ಸ ಅಕ್ಷಯ ಸುಖವೀವ ಆದಿಜಿನೇಶ ||       ೨

ನಿತ್ಯಾನಂದ ನಿರ್ಮಲ ಕಾರ್ಯ ಅತ್ಯಂತ ಬೋಧಸ್ತ್ರೀ ಮುನಿಜನವಂದ್ಯ
ಮುಕ್ತಿನಿವಾಸ ಮನ್ಮಥ ನಾಶ ಸ್ತ್ರೀಕಾಂತ ವಾಣಿ ಸತ್ಪ್ರಥಮ ಜಿನೇಶ ||      ೩

ದೇವದೇವೇಶ ತಮುನೀಶ ಭಜಿತ ಸಕಲ ಜನ ಕುವಲಯಚಂದ್ರ
ಕ್ರಮ ಕಲ್ಯಾಣಿ ಪಂಚಕರಾಜ ಸದ್ಧರ್ಮ ಪ್ರತಿಪಾಲಕ ತೇಜ
ರಂಗಪುರೀಶ ದೊಷ ವಿನಾಶ ಪಲ್ಯಂಕಾಸನ ಅಪರಾಜಿತೇಶ ||   ೪

೧೬೩. ಶರಣಾಗುನಿಜಪರಮಾತ್ಮ

ಶರಣಾಗು ನಿಜ ಪರಮಾತ್ಮ ಎನ್ನೊಳಿಹ
ಕರ್ಮವಿಷಕೆ ನಿಜಾತ್ಮಾ ||  ಪಲ್ಲವಿ

ಧ್ಯಾನವೆಂಬುದೆ ನೀತಿ ತನ್ನ
ತಾನರಿಯದುದಾವ ರೀತಿ
ಹೀನವಾಯಿತೆನ್ನ ಪ್ರೀತಿ ಎನ್ನ
ಧ್ಯಾನದೊಳಿರು ಪರಂಜ್ಯೋತಿ ||     ೧

ತನಗೆ ತನ್ಮಾತ್ಮಚಾರ್ಯ ತನ್ನ
ಘನವರಿವುದೆ ದೊಡ್ಡ ಕಾರ್ಯ
ನಿನಗೊಲಿದವ ಜಿತವೀರ್ಯ ಎನ್ನ
ಮನವ ಬೆಳಗು ಜ್ಞಾನಸೂರ್ಯ ||    ೨

ನುಡಿವಾಗ ತಾ ಕರ್ಮಬದ್ದವ ಮನ
ವಿಡಿದು ಧ್ಯಾನಿಸುವಾಗ ಶುದ್ಧ
ಕೊಡಲೇಸು ಎನಗೆ ಸುಬದ್ಧ ಭವ್ಯ
ರೊಡೆಯ ನಿರಂಜನ ಸಿದ್ಧ || ೩

೧೬೪. ಶುದ್ಧನಾಗಿಬದುಕೆಂದು

ಶುದ್ಧನಾಗಿ ಬದುಕೆಂದು ಹೇಳಿದೆ ನಾನು ಅಪ್ರ
ಬುದ್ಧನಾಗಿ ಕೆಡದಿರು ಆತ್ಮ ನೀನು ||  ಪಲ್ಲವಿ

ದಾನದರ್ಮವೆಂಬ ಕಟ್ಟಾಂಗಾರವನಿಟ್ಟು ಸು
ಜ್ಞಾನವೆಂಬ ವಜ್ರದಾ ಪಂಜರವ ತೊಟ್ಟು
ಹೀನಮಾನವೆಂಬ ನೀಚಾಂಗನೆಯನು ಬಿಟ್ಟು ಆತ್ಮ
ಧ್ಯಾನಿಯಾಗಿ ದುಷ್ಟ ಕರ್ಮಾರಣ್ಯವ ಸುಟ್ಟು ||  ೧

ಸತ್ಯವೆಂಬ ತಾಯಿ ಮಾತ ಮೀರದಿರಯ್ಯ ಜಿನ
ಸ್ತುತ್ಯವೆಂಬ ತಂದೆಯೊಡನೆ ಕೂಡಿ ಬಾಳಯ್ಯ
ನಿತ್ಯ ಶಾಂತಿಯೆಂಬ ಸುದತಿಯೊಡನೆ ಸರಸವಾಡಯ್ಯ ಪ್ರೌಢ
ಪ್ರತ್ಯಕ್ಷ ಸುತನ ಪಡೆದು ಸುಖದಿ ನಿತ್ಯ ಬಾಳಯ್ಯ ||     ೨

ಬಾಳುವಾಗ ಸರ್ವಜನರು ಬರುತಲಿಹರಲ್ಲ ಕೆಳ
ಗಿಳಿದು ಹರಿಯುವಾಗ ಮಾತನಾಡುವರಿಲ್ಲ
ಗೋಳು ತುಂಬಿದ ಈ ಸಂಸಾರ ಮುಂದೆ ಸ್ಥಿರವಲ್ಲ ಮುಕ್ತಿ
ಯಾಳುವಾ ನಿರಂಜನ ಜಿನ ಸಿದ್ಧನೆ ಬಲ್ಲ ||     ೩

೧೬೫. ಸದರವೆಂದಿರಬೇಡಾ

ಸದರವೆಂದಿರಬೇಡಾ ಪಂಚ ನಮಸ್ಕಾರಾ
ಅದು ಮಹಾಮಂತ್ರ ಕಂಡಾ
ಅದರಿಂದ ಹಲಬರು ಸುಖಿಯಾದವರುಂಟೆ
ಅದರ ಮಹಿಮೆಯ ಲಾಲಿಸು ||       ಪಲ್ಲವಿ

ಕೇಳಿ ಅಂಜನ ಚೋರ ದೊರೆಯ ಕೂಡುಂಡು ಸೂಲಕ್ಕೆ ಗುರಿಯಾದನು
ಮೂಲ ಮಂತ್ರವ ಜಿನದತ್ತ ಪಾಲಿಸಲಾಗ ಸ್ವರ್ಗಕ್ಕೆ ಸಂದನು
ಕೇಳುತದಕೆ ರಾಯ ಜಿನದತ್ತ ಶೆಟ್ಟಿಯ ಮೇಲೆ ಮುನಿದನಾಗಳ ಸ್ವರ್ಗ
ಪಾಲ ತಾನೆ ಬಂದು ಜಪದ ಫಲವ ತೋರಿ ಆ ಲೋಕಕ್ಕೆದಿದನು ||         ೧

ಆಡುವ ಮಕ್ಕಳಟ್ಟಿದರೊಂದು ಶ್ವಾನ ಕೆಟ್ಟೋಡಿ ಬಾವಿಯ ಬೀಳದ
ನೋಡಿ ಜೀವಂಧರ ತೆಗೆಸಿ ಮಂತ್ರವ ಕೃಪೆಮಾಡಿ ಹೇಳಿದನದಕೆ
ಕೂಡಿ ದೇಹವ ಬಿಟ್ಟು ಸುರನಾಯಿತು ಸುರರು ಕೊಂಡಾಡೆ ಜೀವಂಧರನಾ ತನ್ನ
ಬೀಡಿಗೆ ಕರೆದೊಯಿದು ಹಲವು ವಿದ್ಯವ ಮಯ್ಯಮಾಡಿ ತಾ ಕಳುಹಿದನು ||  ೨

ಕ್ರೂರ ದಂಡಕ ಭೂಪ ಮಡಿದು ಹಾವಾಗಿ ಭಂಡಾರವ ಕಾಯ್ದಿರ್ದನೂ ಆದ
ಚಾರಣರಲಿ ಕೇಳಿ ಬಂದು ಮತ್ತವನ ಕುಮಾರನರ್ಚಿಸಿ
ಸಾರಮಂತ್ರವ ಹೇಳಿದರೆ ಕೇಳಿ ಸ್ವರ್ಗವ ಸಾರಿದಂದದೊಳು ಬಂದು ಉಪ
ಕಾರವ ಮರೆಯದೆ ಬಂದಾಗಳೆ ಮಗನ ಕೈಯಾರೆ ಪೂಜಿಸಿ ಪೋದನು ||   ೩

ಪಂಚಾಗ್ನಿ ಮಧ್ಯದ ತಪಸಿ ಹೊಯಿದರೆ ಹರಿಹಂಚಾದ ಪಾವೆರಡೂ ಕೂಡೆ
ಪಂಚ ಮಂತ್ರವ ಕೇಳಿ ಧರಣೇಂದ್ರ ಪದದೊಳು ಸಂಚಲಿಸದೆ ನಿಂದವೂ
ಮುಂಚೆ ವಿಜಯಯೋಗಿಗುಪಸರ್ಗ ಬಂದಾಗ ಮಿಂಚಿನಂದದಲಿ ಬಂದು
ವಂಚಿಸಿ ಬಾಧೆಯ ತೊಲಗಿಸಿ ತಾವಲ್ಲಿ ಸಂಚಿತಾರ್ತಿಗಳಾದೆವು ||          ೪

ತುರುವ ಕಾಯ್ದವನೊಬ್ಬ ಚಾರಣ ಮುನಿತನಗರುಹಿದ ರೀತಿಯಲಿ
x x x x x x x x x x x x x x x x x x x x
ಎರಗಿ ನಮೋ ಅರಹಂತಾಣಯೆಂಬಷ್ಟ ಮೆರೆದು ಮುಕ್ತಿಗೆ ಸಂದನು
ಮರೆಯದೆ ಜಪಿಸಿರೋ ಶ್ರೀಮಂದರೇಶನು ನೆರೆ ಮುಕ್ತಿ ಪದವೀವನು ||     ೫

೧೬೬. ಸಲ್ಲದು ನುಡಿ ನಿಮಗೆ
ಸಲ್ಲದು ನುಡಿ ನಿಮಗೆ ಜಿನಾಭವ ವಲ್ಲಭರಿಗೆ || ಪಲ್ಲವಿ

ಅಲ್ಲದ ರೋಗ ಜನಿಸಿದಲ್ಲಿ ತಾನೊಂದಲ್ಲದನು
ಮಾಡಿದನೆಂದು ಆಡಿದರೆಂದು ನುಡಿದರೆಂದು ||         ೧

ಸಿದ್ಧಾಂತವನು ದೂಷಿಸಿದನೆಂದೂ ಇಲ್ಲದ್ದು
ಬದ್ಧವಾಡಿದನುಸುರಿದರಾರು ಬಿಸುಡಿದನಾರು ಆಡಿದನಾರೋ ||  ೨

ಉಪಗುಹ ಸ್ಥಿತಿ ಕರಣಗಳನೂ ಮಾಡಲಪವರ್ಗವಹುದಾವ ಕರುಣಿಗಳು
ಭಾವಿಸಿ ರತ್ನಾಕರನು ಹೇಳಿದನು ಓದುವದಿದನು ||     ೩

೧೬೭. ಸಸ್ಸಾರಾನಿಸ್ಸಾರಾ

ಸಸ್ಸಾರಾ ನಿಸ್ಸಾರಾ ಸಸ್ಸಾರಾ ನಿಸ್ಸಾರಾ
ನಿನಗೂ ನನಗೂ ಅದಾವ ಸಂಬಂಧ ತನುವೇ ಸಾರತ್ತ ನೀ
ಎನ್ನ ಜತೆ ನೀನಿಹುದು ಏನು ಚಂದಾ ಅ
ದೇನು ಚಂದಾ ಸಸ್ಸಾರಾ ನಿಸ್ಸಾರಾ ||         ಪಲ್ಲವಿ

ಅರಿವ ಗುಣ ಕಾಣ್ಬಗುಣ ನನ್ನ ಸೊಮ್ಮು ತನುವೇ
ಮರೆತು ಮುಂಗಾಣದಿಹುದು ನಿನ್ನ ಸೊಮ್ಮು
ಉರುಶಕ್ತಿ ನಿತ್ಯಾನಂದ ನನ್ನ ಸೊಮ್ಮು ತನುವೇ
ನೆರೆ ನಿಃಶಕ್ತಿ ದುಃಖಗಳು ನಿನ್ನೆ ಸೊಮ್ಮು ನಿನಗೂ ನನಗೂ ||      ೧

ಸುಪವಿತ್ರ ಸುಪ್ರಕಾಶ ನನ್ನ ಸೊಮ್ಮು | ತನುವೇ
ಅಪವಿತ್ರ ಕಲ್ಮಷಗಳು ನಿನ್ನ ಸೊಮ್ಮು
ಸ್ವಪರಘಾತವಾದ ಗುಣ ನನ್ನ ಪಕ್ಷ ನಿನಗೂ ನನಗೂ ||  ೨

ಮುಪ್ಪು ಸಾಷು ಹುಟ್ಟು ಜಾತಿ ಇಲ್ಲ ಎನಗೆ ತನುವೇ
ಮಪ್ಪು ಸಾವು ಹುಟ್ಟು ಜಾತಿ ಉಂಟು ನಿನಗೆ
ಅಪ್ಪಾಜಿ ಶ್ರೀಮಂದರೇಶನೊಬ್ಬ ಎನಗೆ ತನುವೆ
ಅಪ್ಪಂದಿರೆಂಭತ್ತನಾಲ್ಕು ಲಕ್ಷ ನಿನಗೆ ನಿನಗೂ ನನಗೂ ||          ೩

೧೬೮. ಸುಜ್ಞಾನಿಸ್ವರೂಪನೀನು

ಸುಜ್ಞಾನಿ ಸ್ವರೂಪ ನೀನು ಅಜ್ಞಾನದೊಳು ಇರುವರೆ
ವಿಜ್ಞಾನಿ ತನ್ನಾತ್ಮನ ಕಂಡೂ ಧ್ಯಾನ
ಯಜ್ಞವ ಮಾಡುವನೀಗ ಕಂಡಸೂಯೊ
ಯಜ್ಞಕಂಜುವ ದುಃಖ ಕರ್ಮದ ಹಿಂಡೂ ||     ಪಲ್ಲವಿ

ಆನೆ ಕೆಸರಲಿ ಬಿದ್ದರೆತ್ತುವರಾರುಂಟೂ ತನ್ನ
ತಾನೇ ಧೈರ್ಯವಿಡಿದೇಳುವಂತೆ ಆತ್ಮ
ಧ್ಯಾನವ ಮಾಡುವರೋರಂತೆ ಕರ್ಮ
ಹಾನಿಯಹುದಿನ್ನೇಕನ್ಯಚಿಂತೆ ||      ೧

ಸಂಸಿದ್ಧಿ ಗುಪಾಯದಷ್ಟ ಪೇಳ್ವೆನೈಸೆ ಗುರು
ಸಂಸಾರವೆ ತಾನೆ ಜಯಿಸಬೇಕು ಇದಕೆ
ಸಂಶಯ ಬಿಟ್ಟವನ ಯೋಗ ಕಾಕು ಗುರು
ಹಂಸನಾಥ ಬರೆದಿಟ್ಟುಕೊ ||          ೨

೧೬೯. ಸುತ್ತಬೇಡಸುತ್ತಮುತ್ತಲು

ಸುತ್ತಬೇಡ ಸುತ್ತಮುತ್ತಲು ಚಲಿಸದೆ ಆತ್ಮಧ್ಯಾನವ ಮಾಡಿ ||     ಪಲ್ಲವಿ

ದೇಹ ದೇಗುಲ ತುಂಬಿ ದೇವರುಂಟಿಲ್ಲ ನಂಬಿ
ಬಾಹಿರ ದಕ್ಷೆಯ ಮುಚ್ಚಿ ಭಾವದಲಿ ನೋಡಿ ಮುಚ್ಚಿ ||    ೧

ಛಾಯಾಪ್ರತುಮೆಯದೊಂದು ಛಾಯಾಭಾವಕೆ ಬಂx x x
ಳಾತ್ಮನ ರೂಪು ಕಣ್ಣೊಪ್ಪುತಿದೆ ಭಾಪೂ ||      ೨

ಸೋಮ ಸೂರ್ಯರ ಕೋಟಿ ಶೋಭಿತಾನವ ದಾಟಿ
ಹಾ ಮಜ್ಜ ಭಾಪುರೆ ಹಂಸನಾಥ ಚಾಣುರೇ ಸುತ್ತಬೇಡಾ ||        ೩

೧೭೦. ಸುಪ್ರಸನ್ನಹಂಸನಾಥ

ಸುಪ್ರಸನ್ನ ಹಂಸನಾಥ ನೀಯೆನ್ನಳೊಳಿರ್ದಡೆ ಸಾಕು ಇನ್ನೇನು ಬೇಕು ನೀನಲ್ಲದೆ
ಸಂಪನ್ನಯೋಗ ಕಾಕೂ ಕಾಯೊ ಎನ್ನೇಕೋ ಪರಾಕೂ ||          ಪಲ್ಲವಿ

ಭಕ್ತರ ಭಾಗ್ಯವೆ ನಿನ್ನ ಭಾವನೆಯೊಳಿರ್ದವಂಗೆ
ಮುಕ್ತಿಪಟ್ಟವಹುದು ಸ್ವರ್ಗದ ದಾರಿ ಸಂಬಳವಲ್ಲವೇ ||   ೧

ಕಲ್ಪವೃಕ್ಷ ಚಿಂತಾಮಣಿಯು ಕಾಮಧೇನುಗಳು ನಿನ್ನ
ಬಲ್ವು ನೋಡುವನ ಮನೆಯ ಬಾಗಿಲ ಕಾಯ್ದು ಇಹವಲ್ಲವೇ ||     ೨

ಅಣಿಮಾಡಿ ಸಂಪದವೆಲ್ಲ ಅಣುಮಾತ್ರ ನಿನ್ನ ಕೂಡುವರಿಗೆ
ಗುಣವೆಂಟು ರೂಪಾದನಂಗ ಗುರುವೇ ಚಿದಂಬರ ಪುರುಷ ||     ೩