೧೧೧. ಏಥರವನಾನಿಂತು

ಏಥರವ ನಾನಿಂತು ಉಸುರಲಿ ಜಗ
ನ್ನಾಥ ಮಾಡಿದ ನಮ್ಮ ನರರೂಪಾ ||          ಪಲ್ಲವಿ

ಇಂದ್ರಿಯ ಸೂತತ ದುರ್ಗಂಧ ಮಲಮೂತ್ರ
ನಿಂದನಿಂದ ಠಾವಿನಲಿ ನಿಜವ ನಾನರಿಯೆ
ಒಂದೆ ಬಚ್ಚಲ ಕುಳಿಯೊಳು ತಿಂದೆ ಮೊಲೆಮಾಂಸವ ಇಂತಾ
ಅಂಧಕ ಹೊಲೆಯರಿಗೆ ತಮಗೆಲ್ಲಿಯ ಕುಲವೋ ||       ೧

ಒಂಭತ್ತು ವೆಜ್ಜದೊಳು ನಾರುವ ಹೊಲಸಿನೊಳು
ತುಂಬಿ ತುಂಬಿ ನೋಡು ತುಳುಕುತಿದೆ
ಇಂಬಿಲ್ಲ ಇದರ ಪುಳಕದಂದವ ನೋಡು ತಾ ಇಂಥಾ
ಡಂಬಕ ಹೊಲೆಯರಿಗೆ ತಮಗೆಲ್ಲಿಯ ಕುಲವೊ ||         ೨

ಕರುಳ ಖಂx x x ನರರೊಹಿತ ಪಂಜರ
ಹುರುಳಿಲ್ಲವೋ ಎನ್ನ ಕುಲವ ಕೇಳಾ
ಎಲುಚರ್ಮ ಮಾಂಸದ ಪೊಡ್ಡು ತಿರುಗುವ ಮನುಜರ ಇಂಥಾ
ಕುಲಗೆಟ್ಟ ಹೊಲೆಯರಿಗೆ ತಮಗೆಲ್ಲಿಯ ಕುಲವೋ ||      ೩

ಮೆಟ್ಟಿ ಮುಟ್ಟುವ ಬಾರವಾಗಿx x x xಡ್ಡಿಯೊಳು
ಕಟ್ಟಿ ಕಾಪಾಲ ಬೊಕ್ಕಣದ
ಇಷ್ಟರೊಳಗೆ ಇದ್ದು ಇರುವ ತಾವರಿಯರಾ ಇಂಥಾ
ಭೃಷ್ಠ ಹೊಲೆಯರಿಗೆ ತಮಗೆಲ್ಲಿಯ ಕುಲವೊ ||  ೪

ಹಚ್ಚಡವ ಹೊದ್ದ ಮೇಲೆ ಲಕ್ಷಣವಿಟ್ಟಂತಾಯಿತು
ಹೆಚ್ಚು ಕಡಿಮೆಯೆಂದು ಹೆಣಗುತಿದೆ
ನಿಶ್ಚಿಂತನಾಗಿ ನಿರ್ಮಲ ನಿರಂಜನ ಸಿದ್ಧನಿಗಲ್ಲದೆ
ಹುಚ್ಚು ಹೊಲೆಯರಿಗೆ ತಮಗೆಲ್ಲಿಯ ಕುಲವೋ ||         ೫

೧೧೨. ಏದೂರವಲ್ಲಮುಕ್ತಿಸಾರಾತ್ಮ

ಏದೂರವಲ್ಲ ಮುಕ್ತಿಸಾರಾತ್ಮ ಜ್ಞಾನಿಗೆ ||       ಪಲ್ಲವಿ

ಆವ ಲೋಹವು ಕೂಡಿದರೆ ಚಿನ್ನ ಕೀಳಾಗುವದು
ತವೆ ಪುಟವಿಟ್ಟಾಗ ಅಪರಂಜಿಯಹುದು
ಭವದ ಬಾಳಿಕೆಯಂತಿಹುದೂ ಕೆಟ್ಟರೆ ಶಿವವಹುದೂ ||    ೧

ತನುಕೋವೆ ತಪಸುಳಿಗಳ ಹೋಲಿಕೆ
ಇನಿತು ಧ್ಯಾನಾಗ್ನಿ ಮೂರು ನನ್ನ ಮೂಲಿಕೆ
ಕುನಯ ಕಮ್ಮದ ಕಾಳಿಕೆ ಕೆಟ್ಟರೆ ಭವದ ಬಾಳಿಕೆ ||       ೨

ಬೇಸರದೆ ನಿಚ್ಚ ಧ್ಯಾನಿಸುವದು ಯುಕ್ತಿ
ಲೇಸೆಂದು ಚಿದಂಬರ ಪುರುಷನ ಭಕ್ತಿ
ಭಾಸುರದ ಮುಕ್ತಿ ಜಿನ ಶಾಸನದ ಸೂಕ್ತಿ ||     ೩

 

೧೧೩. ಏನಯ್ಯಗುರುವೆನಿಮಗಿಷ್ಟು

ಏನಯ್ಯ ಗುರುವೆ ನಿಮಗಿಷ್ಟು ಪರಾಕೂ
ನಾನಿನ್ನು ಬಹಳ ಬೇಡಿ ಕರಕರಿಸಿದೆನೆ ||       ಪಲ್ಲವಿ

ನಿನ್ನಲಿ ನಾನೈಕ್ಯವಾಗಬೇಕೆಂದೆನಲ್ಲದೆ ಬೇರೆ
ಹೊನ್ನು ಹೆಣ್ಣು ಮಣ್ಣು ನಿಲಿಸಿಕೊಡೆಂದೆನೈಸೆ
ಪನ್ನಗ ನರಾಸುರರ ಪದವ ಬೇಡಿದೆನೆ ||       ೧

ಮೂರಂಗವೈದಂಗ ಹಲವಂಗವಾದ ಮೈಯ ಸೋ
ಲಾರೆನೆಂದೆನೈಸೆ ದೇಹ ಬೇಕೆಂದೆಂದೆನೆ
ಮೂರು ರನ್ನವಾದಾತ್ಮ ಸುಖವು ಬೇಕೆಂದೆನೈಸೆ
ಬೇರೊಂದು ಸುಖವ ಬೇಡಿ ಬೇಸರ ಮಾಡಿದೆನೆ ||       ೨

ನೀನೆ ನಾನು ನಾನೇ ನೀನು ನೀನೆಂದರು ನಾನೆಂದರು
ತಾನೊಂದು ಮಾತು ಎನಿಸೆ ಸಾಕೈಸೆ ಬೇರೆ
ಏನು ಬೇಡ ಗುರುವೆ ಚಿದಂಬರ ಪುರುಷ ನನ್ನ
ಧ್ಯಾನದೊಳಗಿರು ಕೈಮುಗಿದು ಬೇಡಿಕೊಂಬೆನು ||      ೩

೧೧೪. ಏನಿಂತುಮದದಿಮೈಮರದೆ

ಏನಿಂತು ಮದದಿ ಮೈಮರದೆ ನಿಜಾತ್ಮ
ನೀನಾರು ಸಂಸಾರವಾರು ನಿಜಾತ್ಮ ||        ಪಲ್ಲವಿ

ಗಳದಾರವಂದು ಕಿಕ್ಕಿರಿಪೂರ್ಣನೆಂಬಾ
ಕಲೆ ನಾಲ್ಕರಲ್ಲಿ ಮೂಜಗವನೊಳಕೊಂಬ
ಬಲಿಮೆಯುಳ್ಳವನಿಬವುಡದೇಹವೆಂಬ
ನೆಲೆಗೊಂಡು ನಲಿವರೆ ವಿಶ್ಚಕದಂಬ ||         ೧

ಜಗದೊಳಗು ಹೊರಗನೆಲ್ಲವನು ಕಾಲ
ಜಗುಳವರಿವುದು ಕಾಬುದು ನಿನ್ನ ಶೀಲಾ
ಜಗವನೆತ್ತುವ ಶಕ್ತಿ ಸುಖವು ವಿಶಾಲಾ
ಬಗೆಯದೆ ಬಡವಂತಿಹರೆ ನಿರಾಳಾ || ೨

ಶಕ್ತಿಯೊಳಗೆ ಸರ್ವಗುಣದೊಳುತ್ಕರುಷಣ
ವ್ಯಕ್ತಿಗುಪಾಯಮುಂಟಾನಂದ ವರುಷಾ
ವ್ಯಕ್ತಿದಿ ನಿನ್ನ ನೋಡು ಜಿತರೋಷ ಹರುಷಾ
ಮುಕ್ತಿಗೇಳೇಳು ಚಿದಂಬರ ಪುರುಷಾ ||        ೩

೧೧೫. ಏನುಸವಿಮತ್ತಿನ್ನೇನು

ಏನು ಸವಿ ಮತ್ತಿನ್ನೇನು ಸವಿ
ತಾನೆ ತನ್ನಾತ್ಮನ ಕಂಡು ಮೇಲವಗಿ
ನ್ನೇನು ಸವಿ ಮತ್ತಿನ್ನೇನು ಸವಿ ||     ಪಲ್ಲವಿ

ಪಂಚೇಂದ್ರಿಯ ಸುಖ ಪರವಶವದರಿಂದ
ಕಿಂಚಿತ ಪ್ರೀತಿಯು ತನಗಾಗದು
ಸಂಚಲಚಿತ್ತವ ಕಳೆದಾತ್ಮನೊಳು ಪ
ಳಂಚದಿರ್ದವಗಾತ್ಮ ಸುಖವೆ ಸವಿ || ೧

ಸುರಲೋಕ ನರಲೋಕದ ದುಃಖ
ತಿರುಗಿ ಹಲವುಬಾರಿ ಕಂಡುಂಡದು
ಸರಿ ತನಗದರಿಂದ ಸುಖವೆಲ್ಲವು ತ
ನ್ನಿರವ ಕಂಡವಗಾತ್ಮ ಸುಖವೆ ಸವಿ ||          ೩

೧೧೬. ಏನುಹೋಗದುಹೊತ್ತು

ಏನು ಹೋಗದು ಹೊತ್ತು ನಿಮಗೆ ನಮಗೆ
ಹೋ ನಿಲ್ಲಿ ಮುಟ್ಟದಿರಿ ಕರ್ಮಿಗಳಿರಾ ||        ಪಲ್ಲವಿ

ನೀವಾರು ನಾವಾರು ನಿಮ್ಮ ಗುಣವಂದನೂ
ನಾವು ಸೆಳಕೊಳ್ಳಲಿಲ್ಲಾ ನಮ್ಮ ಗುಣವಾ
ನೀವು ಸೆಳಕೊಳ್ಳಲರಿದೂ ಬರಿದೆ ಸೂರ್ಯಗೆ ಕವಿದು
ಹಾವು ಕಡಿವಂತೆ ಕಾಣಿರೊ ||        ೧

ರಸರೂಪುಗಂಧ ಮೊದಲಾದವೆಮ್ಮವಲ್ಲಾ
ಸುಸೂತಸುಜ್ಞಾನ ಮೊದಲಾದ ಗುಣ ನಮ್ಮವಿದೂ
ಸುಸುತ ಮೊದಲಾದ ಗುಣ ನಿಮ್ಮವಲ್ಲಾ ||     ೨

ಅಂಬರಕ್ಕೆ ಸರಿ ನಾವು ಭೂಮಿಗೆಣೆ ನೀವು ನೋ
ಡಂಬರಕ್ಕೆ ಭೂಮಿಗೊಡ ಗೂಟವುಂಟೆ
ಡೊಂಬಿ ಬೇಡಯಿತ್ತ ಬರದಿರಿ ನಿಲ್ಲಿ ಹೋಗಿ ಚಿ
ದಂಬರ ಪುರುಷನಾಣೆ ಕೆಡುವಿರಿನ್ನು ||         ೩

೧೧೭. ಏನೆನ್ನಬಹುದುನಿಜಾತ್ಮನ

ಏನೆನ್ನಬಹುದು ನಿಜಾತ್ಮನ ಮಹಿಮೆಯ ಚಂದಮಾಮಾ | ಪರ
ಮಾನಂದ ಯೋಗಿಯ ನಡೆ ಚಂದ ನುಡಿ ಚಂದ ಚಂದಮಾಮ || ಪಲ್ಲವಿ

ಕಣ್ಣ ಮುಚ್ಚಿಯು ಸೂಕ್ಷ್ಮಾರ್ಥವ ಕಾಣುತಿಹನಾರು ಚಂದಮಾಮ | ಐದು
ಬಣ್ಣವಳಿದು ಹೊಸ ಬಣ್ಣವಾಗಿಹನಾರು ಚಂದಮಾಮ | ದೇಹ
ಮಣ್ಣೊಳಡಗಿಯು ಮಾಸದಿಹನಾರು ಚಂದಮಾಮ
ಉಣ್ಣದೆ ಉಂಡು ತೃಪ್ತನಾಗಿಹನಾರು ಚಂದಮಾಮ ||   ೧

ಗಾಳಿಯಿಂದಾನೆಯ ಕಟ್ಟಿ ಪಿಡವನಾರು ಚಂದಮಾಮ | ಹತ್ತು
ಗಾಳಿಯ ಧೂಳಿಯ ಗ್ರಹಿಸಿಕೊಂಡಿಹನಾರು ಚಂದಮಾಮ
ಗಾಳಿಯನೇರಿಸಿ ಬೆಳಗು ಕಾಣುತಿಹನಾರು ಚಂದಮಾಮ | ಇದು
ಕೇಳುವರಿಗೆ ಚಿತ್ರ ಮುನಿಗಣುಮಾತ್ರ ಚಂದಮಾಮ ||   ೨

ಅಕ್ಷರದಿಂದ ಸಿಂಗರಿಸಿಕೊಂಡಿಹನಾರು ಚಂದಮಾಮ
ಪಕ್ಷವಿಲ್ಲದೆ ಅಂಬರದೊಳಾಡುತಿಹನಾರು ಚಂದಮಾಮ
ಮೋಕ್ಷ ಸಂಜರೆಯ ನಿರ್ಜರೆವಡೆದಿಹನಾರು ಚಂದಮಾಮ | ಯೋಗ
ಲಕ್ಷಣವಿದು ಚಿದಂಬರ ಪುರುಷನೆ ಬಲ್ಲ ಚಂದಮಾಮ || ೩

೧೧೮. ಏನಮ್ಮಹೆಸರೇನೆಂದೈಯ

ಏನಮ್ಮ ಹೆಸರೇನೆಂದೈಯ ದೇವಾ
ಧ್ಯಾನದಲಿ ಕಂಡೆ ನೀನಾರು ಸ್ವಾಮಿ ||         ಪಲ್ಲವಿ

ಕರಿದು ಕೆಂಪು ಹಳದಿ ಪಚ್ಚೆ ಬಿಳುಪು ವರ್ಣಗಳೆಂದು
ಕರೆವೆನೆ ಆ ವರ್ಣವೊಂದು ನಿಮ್ಮಲ್ಲಿ ಕಾಣೆ ಸ್ವಾಮಿ
ಹರಿಹ x x x x x x x x x x x x x
ಸಿರ ನಾಲ್ಕು ನಾಲ್ಕು ಭುಜಗಳೈದು ಮೊಗ ನಾಲ್ಕು ನಿಮಗಿಲ್ಲ ಸ್ವಾಮಿ ||    ೧

ರಾಗವಂತ ಮೋಹಿ ಕೋಪಿಯೆಂದು ಕರೆವೆ ನಿಮ್ಮ
ಆ ಗುಣವಂತನು ನಿಮ್ಮಲ್ಲಿ ಕಾಣೆ ಸ್ವಾಮಿ
ನಾಗ ನರ ಸುರರೂ x x x x x x x
ರೋಗ ಮರಣಾದಿ ಚಿಹ್ನ ನಿಮಗಿಲ್ಲ ಸ್ವಾಮಿ ||   ೨

ಅಂಬರದಂತೆ ಚಿನ್ಮಯ ಪುರುಷಾಕಾರ
ಯೆಂಬ ಮೂರು ತಲೆಯ ನಿಮ್ಮಲ್ಲಿ ಕಂಡು ಸ್ವಾಮಿ
ನಂಬಿದೆ ನೀ ಹೇಳಿದೊಡೆ x x x x x x x ಚಿ
ದಂಬರ ಪುರುಷನೆಂದು ಬಲ್ಲೆನಯ್ಯ ಸ್ವಾಮಿ || ೩

೧೧೯. ಕಂಡುಕಾಣಲಿಲ್ಲಅಕಟ

ಕಂಡು ಕಾಣಲಿಲ್ಲ ಅಕಟ ತಾನದ
ನುಂಡು ದಣಿಯಲಿಲ್ಲ ||     ಪಲ್ಲವಿ

ನಾಡು ಬೀಡು ಪರ್ವತ ಪಟ್ಟಣಂಗಳ ನೋಡು
ನೋಡಿ ಹೊತ್ತುಗಳದೆಯಲ್ಲಾ
ಕೇಡಿನೊಳಗಣ ತನುವಿನೊಳಿಹ ನಿನ್ನ
ಗಡಿಯೆಂತುಟೆಂದು ಬಲ್ಲೆಯಾ ||      ೧

ಪುಷ್ಟಿಯಾಗುವೆನೆಂದಾಸೆಯಿಂದುಂಡುಂಡು
ನಷ್ಟವನಿತಂ ಇಷ್ಟೆಡೆಯಲ್ಲದೆ
ಸಾಕೆಂದು ಹವಣಿಸಿಕೊಂಡು ವಿ
ಶಿಷ್ಠ ವ್ರತಗಳ ನೀನಾಂತೆಯಾ ||     ೨

ಹೋದ ಹೋದ ಹರಟೆಗಳನಾಡುವೆಯಲ್ಲದೆ
ಮಾದೇವನ ದಿವ್ಯ ಸುಚರಿತ್ರಂಗಳಾ
ಓದಿಯು ಶೃಂಗಾರ ಕವಿಯ ಪಾಲಿಪ ಸಮು
ದ್ರಾಧೀಶನ ಕಾಣದಾದೆಯಲ್ಲಾ ||     ೩

೧೨೦. ಕರುಣದೋರೋಕಡಲಾದಿ

ಕರುಣದೋರೋ ಕಡಲಾದಿ ಶಿವನೆ ನಿಜ
ಶರಣ ರಕ್ಷಕ ಮೂಲೋಕ ಬಾಂಧವನೆ ||       ಪಲ್ಲವಿ

ಹೆಂಗಳ ಮೋಹಕೆ ಮರುಳಾಗಿ ಕಡೆ
ಗಂಗಳ ನೋಟಕೆ ಮಾರುವೋಗಿ ನಸು
ಹಿಂಗಿರಲಾರದಂತಿಂತಾಗಿ ನೊಂದೆ
ನಂಗಜ ಬಾನವೆನ್ನ ತಾಗಿ ||

ಕಂಡರೆ ಕೂಡುವೆನೆಂಬಾ ಚಿಂತೆ ಸವಿ
ಗಂಡರೊಲಿಸುವೆನೆಂಬಾ ಭ್ರಾಂತೆ ಸರಿ
ಮಿಂಡಿ ಸೋತರೂವಿದಕಾವ ಚಿಂತೆ ನಿನ್ನ
ಕಂಡುದಿಲ್ಲ ಸುಜ್ಞಾನಿಗಳಂತೆ ||       ೨

ಸಾಯದ ಸವಿದು ಮಾಯದ ವೆಷ ಹೀಗೆ
ಕಾಯದ ಹಿಸುತಲಿದೇಕೊ ಮೋಹಪಾಕಾಯೇನು
ದಾಯವಿದಕಿನ್ನು ಜಗದೀಶಾ ಎನ್ನ
ಕಾಯ ಸಮುದ್ರಾಧಿ ಪರಮೇಶ ||     ೩