. ಸಿಂಗಾಡಿಯೆಂದದ

ಸಿಂಗಾಡಿಯೆಂದದ ಪುರ್ಬ್ಬಿನ
ಕಂಗಳ ಕುಡಿನೋಟದ ಚೆಲುವಿನ
ಭೃಂಗಕುಂತಳದ ಫಣಿವೇಣಿ ಪದ್ಮಾಂಬ
ಸಿಂಗಾರದ ಹೂವ ಮುಡಿ ಬಾರೇ ||   ೧

ರಾಜೀವ ನೇತ್ರದ ತಿಲಕದ
ತೇಜಮುತ್ತಿನ ಮೂಗುತಿ ಹೊಳೆಯಲು
ರಾಜಿಪನಾಸಿಕದ ವಿಮಲಾಂಗಿ ಪದ್ಮಾಂಬ
ಜಾಜಿಯ ಹೂವ ಮುಡಿಬಾರೇ ||     ೨

ಕೆಂಬಲ್ಮಿನ ಕೊಡುಸೊಬಗಿಯ ಸಾ
ರಂಭದ ತೊಳ್ದುಜಯ ಚೆಲುವಿಕೆ
ಕಂಬು ಕಂದರದ ಸುಖವಾಣಿ ಪ
ದ್ಮಾಂಬ ಹೊಂಗೇದಗೆ ಹೂವ ಮುಡಿ ಬಾರೇ || ೩

ಕೆಂಪು ಮೊದಲಾದ ರತ್ನದ
ಸಂಪೂರ್ಣದಿ ಕೆತ್ತಿಸಿದ ಕಡಗವು
ಸಂಪಿಂದೆಸವ ಸಲೆ ಜಾಣೆ ಪದ್ಮಾಂಬ
ಸಂಪಿಗೆಯ ಹೂವ ಮುಡಿಬಾರೇ ||   ೪

ಅಸಿನಡುವಿಗೆ ವೇಶಿಯೆಸೆವತಾಗಿಯೂ
ಹೊಸಮಿಸುನಿಯ ಬಣ್ಣದ ಹೊಂಬಳೆದೊ
ಡಿಸಲು ಅತಿ ಕುಶಲದ ಮಂದಗಜಗಮನೆ ಪದ್ಮಾಂಬೆ
ಯೆಸಳ ಮಲ್ಲಿಗೆಯ ಮುಡಿಬಾರೇ ||  ೫

ಪಂಕಜ ಮುಗುಳಂದದಿ ರಾಜಿಪ
ಲೆಂಕಿತ ಕುಚಯುಗಳದಿ ಮಗಮಗಿಸುವ
ಕುಂಕುಮ ಲೇಪನದ ಸಲೆ ಜಾಣೆ ಪದ್ಮಾಂಬೆ
ಪಂಕಜದ ಪೂವ ಮುಡಿಬಾರೇ ||     ೬

ನಗೆಮೊಗಕತಿ ಸೊಗಯಿಸುತಿಹ ಕದ
ಪುಗಳೊಳುಡಾಗಿಪ ಕರ್ಣದ ವಾಲೆಯು
ಸೊಗಸಿಂದ ಲೇಸವಾಸಲೇ ಜಾನೆ ಪದ್ಮಾಂಬೆ
ಮೊಗ್ಗುಮಲ್ಲಿಗೆಯ ಮುಡಿಬಾರೇ ||    ೭

ವರಹೊಂಬುಚ ಪುರದೊಳು ನೆಲಸಿದ
ವರ ನಿರ್ಗುಡಿಯ ಚರಣವ
ನೆರೆ ಸ್ಮರಿಸುವ ಜನರಿಗೆ
ವರಮುತ್ತು ಜಗದಿ ಸುಖದೇವ ಪದ್ಮಾಂಬೆ
ಸುರಗಿಯ ಹೂವ ಮುಡಿಬಾರೇ ||    ೮

ಹೊಂಬುಚ್ಚಪುರದೊಳು ನೆಲಸಿದ
ರಂಬೆ ಪದ್ಮಾವತಿಯಮ್ಮಗೆ ಸುವರ್ಣದ
ಪ್ರತುಮೆಯೆಸೆಯಲು ಪದ್ಮಾಂಬೆ
ದುಂಡು ಮಲ್ಲಿಗೆಯ ಮುಡಿಬಾರೇ ||  ೯

 

. ಗಜದೇವನಪಾದ

ಗಜದೇವನ ಪಾದಯುಗಕಭಿನಮಿಸಿ
ಅಜನರಸಿಯು ಶಾರದೆಯನು ಸ್ಮರಿಸಿ
ಭುಜಭೂಷಣನ ಸಲಹೆಂದು
ಭಜಕರಿಗೆಂದು ನಿಜವಾದ ಮತಿಯ ಕರುಣಿಸು ||        ೧

ಪುಂಡರಿಕಾಂಬಿಕೆಯರು ಬಹುವಿಧ
ತಂಡದಿ ನಾಚುತ ನಗುತಲಿ ಇಂದು
ಮಂಡಲದಂತೆ ಹೊಳೆವುತ್ತ ಪದ್ಮಾವತಿಯಮ್ಮನ
ಕೊಂಡಾಡಿ ಹಸೆಗೆ ಕರದಾರು ||      ೨

ಬಡನಡುವಿನ ಭಾವಕಿಯರು ಗಿಳಿ
ನುಡಿಯಿಂದಲಿ ಪಾಡುತ ಹೊಗಳುತ
ಬೆಡಗನು ಬೀರುತ ನಲಿವುತ ಪದ್ಮಾವತಿಯಮ್ಮನ
ಸಡಗರದೊಳು ಹಸೆಗೆ ಕರೆದಾರು ||  ೩

ಮಲಯಜ ಗಂಧಿಯರೊಂದಾಗಿ
ಜಿನೆಯರು ಮುಖಿಯರು ತಲೆವಾಗಿ
ಕಲಕಿರೆ ಶರಧಿ ಅಲೆ ಮುದದಿ ಪದ್ಮಾವತಿಯಮ್ಮನ
ಲಲನೆಯರು ಹಸೆಗೆ ಕರೆದಾರು ||    ೪

ನಳಿತೋಳಿನ ನವಮೋಹಿನಿಯರು
ಕಲಶಕುಚದ ಕೋಮಲೆಯರು
ಕಳಹಂಸ ನಡೆಯ ಚೆದುರೆಯರು ಪದ್ಮಾವತಿಯಮ್ಮನ
ನಸುನಗತ ಹಸೆಗೆ ಕರದಾರು ||      ೫

ಮಾರನ ಮದಕರಿಯನು ಸು
ಟ್ಟು ರಾಜೀವ ಮಣಿಮಯರಾಗ
ಚಾರುವಿಧದಿಂದ ಮುದದಿಂದ ಪದ್ಮಾವತಿಯಮ್ಮನ
ನೀರೆಯರು ಹಸೆಗೆ ಕರೆದಾರು ||      ೬

ದೀಮಾಂಧಲಿ ಧರೆಯನು ಹೊರೆವ
ಕಾಮಿತವನು ಸಂತತ ವೀವ
ಭಾಮಿನಿ ದಯ ಶ್ರೇಣಿಸುವಾಣಿ ಕಲ್ಯಾಣಿ ಪದ್ಮಾವತಿಯಮ್ಮಗೆ
ಹೇಮದಾರತಿಯ ಬೆಳಗಿರೇ ||       ೭

 

. ಜಯಜಯನೂತನ

ಜಯಜಯ ನೂತನ ಪರುಷದ ಖಣಿಯೇ
ಜಯ ಪದ್ಮಾವತಿ ಭಕ್ತ ಜಿನಜಿನ ಚಿಂತಾಮಣಿಯೇ ||    ಪಲ್ಲವಿ

ದಿನಕೆ ನೂರೆಂಟು ಬಂಡಿ ಕಂಬಿನ ಚಿನ್ನ
ಅನುಮಾಡಿ ಕೊಡು ಜಿನದತ್ತ ಕೊಡು ಸಂಪನ್ನ
ಕನಕಾದ್ರಿ ಕೊಳವೆ ಅಂಡಿಗೆ ತುಂಬಿ ಹೊನ್ನ
ಎನುತ ಓಕುಳಿಯಾಡಿದರಂತೆ ಮುನ್ನ ||       ೧

ಪಾತಾಳದೊಳು ನಿಮ್ಮ ಪಟ್ಟಣವುಂಟು
ದೂತಿಯರಿಹರು ಯಕ್ಷಿಗಳು ನೂರೆಂಟು
ಭೂತಳೇಂದ್ರನ ಫಣಿರಾಜನ ನಂಟು ನಿಮ್ಮ
ಸೋತು ಪೂಜಿಸುವರಿಗೆ ಭಾಗ್ಯ ಕೈಗಂಟು ||   ೨

ನೆರೆಶುಕ್ರವಾರ ನಿಮ್ಮಯ ಮೊಕ ಕಲೆಗೆ
ಸರಿಯುಂಟೆ ಪ್ರತ್ಯಕ್ಷದೇವಿ ನಿಮ್ಮೊಳಗೆ
ಪಿರಿದೇಳು ಹೆಡೆಸರ್ಪ ನೆರ ಹುತ್ತದೊಳಗೆ
ಪರುಷವಿಹುದು ನಿಮ್ಮ ಪಾದದ ಕೆಳಗೆ ||       ೩

ಉನ್ನತವಾದ ಲೊಕ್ಕಿಯ ಕುಂಜ್ಯಾರಗಳು ನಿಮ್ಮ
ಬೆನ್ನಹಿಂದಣ ಸೂತ್ರವಜ್ರ ತುಂಬಿಗಳು
ಕನ್ನೆ ನೆರೆ ಸಿಂಹ ತೀರ್ಥ ತುಂಬಿಹುದು
ನಿಮ್ಮ ಸತ್ಯಕೆ ಚಂದ್ರಾರ್ಕ ಸಾಕ್ಷಿಗಳು ||        ೪

ಉತ್ತರ ಮಧುರೆಯಿಂದೊಂದು ಬಂದಳಾ ಮಂಡೋದರಿ
ಮತ್ತೆ ಕಂಬಿನಿ ತಾಂಬೆ ಹಮ್ಮಿಲಿ ನೆಲಸಿದೆ
ನಿಮ್ಮ ನೆನೆ ನಂಬೆ ಹಮೃಸಧಿಕವಾದ
ವಿಬ್ರವಿಲ್ಲಂಬೆ ನಮ್ಮನ್ನು ರಕ್ಷಿಸು ಪರುಷ ಪದ್ಮಾಂಬೆ ||   ೫

 

. ಕಾಯೇಎನ್ನಕಾಯೇ

ಕಾಯೇ ಎನ್ನ ಕಾಯೇ ಸುಜನ
ಪ್ರಿಯೇ ಕರುಣಧಾರೆ ಆಯತಾಕ್ಷಿ ಅಂದವುಳ್ಳ
ಕಾಯೇ ಅಬ್ಬಪಾಣಿ ನೀಯೆನ್ನ ಕಾಯೇ ||       ಪಲ್ಲವಿ

ರಕ್ಷಿಸಲು ಬೇಕು ದಯದಿ ನಿ ರೀಕ್ಷಿಸು ನೀ ಎನ್ನ ಜನನಿ
ವೃಕ್ಷದವನು ನಾನು ನಿನ್ನಯ ಕ್ಷಿತಿಯ ದೈವವಾ
ಅಕ್ಷಮಾಡೆ ರಾಕ್ಷಸರ ಶಿಕ್ಷಿಸಿದೆ ನಿನ್ನ ಮಹಿಮೆ
ಯ ಕ್ಷಿತಿಯೊಳಾಕ್ಷೆಯ ಸುಲಕ್ಷಣ ವಿಚಕ್ಷಣ ||    ೧

ಬಟ್ಟಮುಖದ ಬಾಲೆ ಫಣಿಯೊಳಿಟ್ಟ ಕಸ್ತೂರಿಯ ಲೀಲೆ
ತಟ್ಟಿ ತಾಗಿ ತೂಗಲು ವಿಸ್ತರದ ವೆದೆಯ ಮೇಲೆ
ಗಟ್ಟಿ ಬಂದಿತಲ್ಲಿ ಪದಕ
ಇಟ್ಟ ಚೆಲ್ವ ದೇವಯೆನ್ನ ಅಭಿಷ್ಟವನ್ನಾ ||        ೨

ನುಡಿಯ ಬೇಡ ನೀ ನಡೆಯ ನಡೆವ ನುಡಿದ ಝಡಿವ ಪೆಂಡೆಗಳ
ಗಡಣದಿಂದಲೇ ಸದನ ಬಡಿವ ಜೆಡೆಯ ಎಡೆಯಗೊಂಡೆಯಾದ
ಮಡದಿ ಮಣಿಯೇ ನಿನ್ನ ನೋಡಿ ಯಡಿಯಡಿಗೆ ನುಡಿವ ಮತಿಯ
ಕೂಡಿಸು ಬಿಡದೆ ನಿನ್ನ ನುಡಿಗೆ ಪಡಿಯ ಕಾಣೆ ಪದ್ಮಿನಿ ||  ೩

ಹಿಂಡು ದೈವಗಳಾ ತಂಡ ತಾಂಡವನು ಕಂಡು ಭರದಿ
ಗಂಡು ಸಿಂಹ ಖಳವ ಹಿಂಡ ಕಂಡು ಬೆರಸುವಂದದಿ
ಚೆಂಡೆ ಮಾಡಿ ಹಿಡಿದು ಬಡಿದು ದುಂಡು ತೋಳ ಬಿಗಿದು ಅವರ
ಕಂಡಕಡೆಗೆ ಆದ ಪ್ರ ಚಂಡಯೆನ್ನ ರಕ್ಷಿಸೆ ||     ೪

ಕುಂಭಕುಚದ ಬಾಲೆಮರಿ ದುಂಬೆ ದುರುಳ ಮಾಲೆ ಮುಡಿದ
ಅಂಬುಜ ಬಿಂಬದ ಅರಳೆ ನಂಬಿದೆನೆ
ಅಂಬಿಕೆ ಕಂಬುಕಂಟೆಯನ್ನು ಮನಕೆ ತುಂಬುಮತಿಯ ನಂಬೆನಮ್ಮ
ಹಂಬಲ ಬಿಡೆ ಸಲಹೆ ಪೊಂಬುಚ್ಚಪುರದ ಪದ್ಮಿನಿ ||      ೫

 

. ತಾಯೇಪಾಲಿಸುಮತಿಯ

ತಾಯೇ ಪಾಲಿಸು ಮತಿಯ
ಪ್ರಿಯದಿ ಒಲಿದಿಗಾರಾಯ ಪಣಿಫನ ರಾಣಿ
ಕಾಯೆ ಕಲ್ಯಾಣಿ || ಪಲ್ಲವಿ

ಅಳಿಗುರುಳ ಅಬಲೆ ಆಯತದಿ ಎನ್ನನ್ನು ಕಾಯೇ
ಹಲವಿಧದೊಳು ಲೋಚನೆ ಶರಣು ಜನರನು ಪೊರೆದೆ
ಶರಧಿಗುಣ ಗಂಭೀರೆ ಶರಣು ಹೋದೆನು ನಿನ್ನ
ಸಲಹೆ ನೀ ಎನ್ನ ಕಾಯೇ || ೧

ಸಾಕ ನುಡಿಯ ಮೃದುವಾಣಿ ಮುಖಶಶಿಯ ವೈಯಾರಿ
ಮುಕರ ಕಪೋಲಕಾರಿ ಅರೆಳಾಂಕಗ ಉರಿ ನಿನೀರೆಳ
ಲೋಕ ನಿಹಾರಿ ಸಕಲ ಶಾಸ್ತ್ರ ಉದ್ಧಾರಿ
ಮುಕುತಿಯನು ತೋರಿ ||  ೨

ಚಲದಿಯೆಂತರರ ಓಡಿಸಿದೆ ಸುಜನರ ಪೊರೆವೆ
ಕೆಡುತ ತಂದೆಯು ಮಗನ ಕಡಿಯಲೆನಿಸಿದೆ
ಕಡೆಯಿಸಿಯೂ ತಂದು ಪೊಡವಿಗತಿಶಯವೆಂದು
ನುಡಿದೆ ಸೂಕ್ಷ್ಮದಿ ಅಂದು ಕೊಡು ಮತಿಯ ನೀನಿಂದು || ೩

ಆದಿಕಾಲದೊಳು ನಿನ್ನಾಧರಣಿ ಫಲದಿಂದ ಈ ಭು
ವದಿ ಜನಿಸಿತು ಈ ಧರೆಯೊಳು
ನಿಧಿಯಾಂಬುಧಿಯೆಂದು ನಾ ಬೇಡಿದೆನು ಬಂದು
ನಿದನರಿತವನಿಂದು ನೋಡು ದಯಾ ಬಂಧು ||          ೪

ಮುಕ್ತಿದಾಯಕನೆ ಕ್ಷೇಮದಿ ಹೊಂಬಚ್ಚ ಪುರದ ಸು
ಕ್ಷೇತ್ರದೊಳು ನೆಲಸಿದೆ ದಿಟ್ಟ ಜಿನ
ದತ್ತನಿಗೆ ಕೊಟ್ಟೆ ಮನದಭಿಷ್ಟವನು
ಮನಮುಟ್ಟಿ ರಕ್ಷಿಸುಯೆನ್ನ ಪರುಷ ಪದ್ಮಾಂಬೆ ||         ೫

 

. ರಕ್ಷಿಸೆನ್ನನುಪುಣ್ಯ

ರಕ್ಷಿಸೆನ್ನನು ಪುಣ್ಯಜೀವಿ ಹಂಸ
ಪಕ್ಷಿಯ ನಡೆಯೆ ಪದ್ಮಾವತಿ
ಪಕ್ಷಿಯ ನಡೆಯೆ ಪದ್ಮಾವತಿ ತಾಯೇ ರಕ್ಷಿಸೆನ್ನನು ||     ಪಲ್ಲವಿ

ನಾಗರಾಜನ ಪಟ್ಟದರಸಿ ಭವ
ರೋಗರಹಿತ ಪಾರೀಶ್ವೇಶನ ಯಕ್ಷೆ
ಕೋಗಿಲಿಂಚರರ ಮೃಜಾಕ್ಷಿ ನಿನ್ನ
ಚಾರಕ್ಕೆ ಸರಿತಾರು ಸರಿಯಿಲ್ಲದೆ ||   ೧
ಪೆರಿನೆಸಳಲಿ ಗುರುಳ ಅಬಲೆ ಪಂಚ
ಸ್ಮರನರಸಿಯ ಕೈಯ ಮಂದಾರ ಮಾಲೆ
ಸುರುಚಿರಕೀರ್ತಿ ವಿಶಾಲೆ ನಿನ್ನ
ಕರುಣವಸಿ ಇರಲಿ ಎನ್ನ ಮೇಲೆ||               ೨

ಸಚ್ಚುಗ ಸುರನರ ನಿನ್ನಿಯೆ ನಿನ್ನ
ಸಜ್ಜನಸುತ ಪದ್ಮರಾಜನ ತಾಯೆ
ಊರ್ಜಿತ ವರಗಳ ನೀಯೆ ತಾಯೆ
ಹೆಜ್ಜಾಜಿಯರಸಿ ಪದ್ಮಾವತಿ ತಾಯೆ||          ೩

 

. ಪಾಲಿಸೊಪದ್ಮಾಂಬ

ಪಾಲಿಸೊ ಪದ್ಮಾಂಬ ಪರಮ ಪಾವನ ಜಗದಾಂಬೆ
ನೀಲಕುಂಡಲೆ ನಿಗಮ ಶರೀರೆ
ಬಾಲ ಚಂದಿರೆ ಭವ್ಯಜಿನ ಪ್ರಿಯೆ||               ಪಲ್ಲವಿ

ಉತ್ತರ ಮಧುರೆಯೊಳು ಪದ್ಮಿನಿ ಜಿನ
ದತ್ತನ ಸಲಹುವಳು
ವೃತ್ತಕುಚದ ಮದನಾಂಕನ ಧೀರೆಯ
ಬೆತ್ತ ಜಿನನೊಲಿದತ್ತೆನು ಅನುದಿನ||            ೧

ಜಗದೊಡತಿಯು ನೀನು ನಿನ್ನಯ
ಪೊಗಳುವರೆನಗಳವೇ
ಅಗಣಿತ ಮಹಿಮೆಯ ಅರುಹನ್ನಯಕ್ಷಿಯ
ಸುಗಣೆನಿಸಿದಾಗಿ ನೀ ಸದ್ಗುಣ ಚರಿತೆಯ||      ೨

ಧರೆಯೊಳಧಿಕವಾದ ಚಲುವಿಕೆ
ಸುಪುರದರಮನೆಯ
ಕರುಣವಿತ್ತು ಮಾಲಿಂಗರಸರ
ದುರಿತ ವಿಘ್ನಗಳ ಪರಿಹರಿಸು ಮಹಾದೇವಿಯ ||         ೩

 

. ಅಂಬಾಪರಾಕು

ಅಂಬಾ ಪರಾಕು ದೇವಿ ಪರಾಕು
ಅಂಬಾ ಪರಾಕು ಪದ್ಮಾಂಬ ಪರಾಕು||         ಪಲ್ಲವಿ

ಪಣಿ ಪರಾಕು ಪದ್ಮಿಣಿ ಪರಾಕು
ಪಾರಿಶ್ಚಜಿನಪನ ಯಕ್ಷೆ ಪರಾಕು||              ೧

ನಾಗಲೋಕಕೆ ಕರ್ತೆ ದೇವಿ ಪರಾಕು
ನಾಗಿಣಿಯಂತರಿಗಧಿನಾಥೆ ಪರಾಕು||          ೨      

ಪಾಪಹರನ ಭಕ್ತಿ ಪಾಹಿ ಪರಾಕು
ಪವನ ಆ ಚಂದ್ರಶಾಂತಿ ಪರಾಕು||             ೩      
    
ಧಾರಿಣಿ ಗೆಲಿದ ನಾಥೆ ದೇವಿ ಪರಾಕು
ಧಾರಿಣಿ ರಾಜನ ರಾಣಿ ಪಾಹಿ ಪರಾಕು||        ೪

ಕುಕ್ಕುಷ್ಠವಾಹನೆ ಕುಮುದೆ ಪರಾಕು
ಕಮಲನಯನೆ ಪದ್ಮಾಂಬ ಪರಾಕು||           ೫

ಪರಮ ದಯಾನಿಧಿ ಪರಶು ಪರಾಕು
ಪರಮ ಪದ್ಮಾಸನ ರೂಢೆ ಪರಾಕು|| ೬

ಭಕ್ತರ ಪರಿಪಾಲೆ ಧೀರೆ ಪರಾಕು
ಭವಹರನ ಯಕ್ಷೆ ಜಗದಾಂಬೆ ಪರಾಕು||        ೭

ಸಮ್ಯಕ್ತ್ವಕದಿ ಧೀರೆ ಸುಜ್ಞಾನೆ ಪರಾಕು
ಸುಜನರ ಸಲಹುವ ಸಜ್ಜನೆ ಪರಾಕು||          ೮

ಪಾಶಾಂಕುಶ ಫಲ ಅಭಯ ಹಸ್ತೆ ಪರಾಕು
ಪಾಪಕ್ಕೆ ಅತಿಭೀತೆ ಮಹಿಮೆ ಪರಾಕು||         ೯

ನಿರ್ಗ್ಗುಡಿತರುವಾಸೆ ನಿಗಮ ಪರಾಕು
ನಿರ್ಧಯ ಮಾಡದೆ ಸಲಹು ಪರಾಕು||          ೧೦

ಬೆಳ್ಗುಳ ಪುರವಾಸೆ ಭವ್ಯ ಪರಾಕು
ಬಾಲಕನನು ಕಾಯೆ ಜಗದಾಂಬೆ ಪರಾಕು||    ೧೧

 

. ಎಚ್ಚರಿಕೆಎಚ್ಚರಿಕೆಪದ್ಮಾಂಬೆ

ಎಚ್ಚರಿಕೆ ಎಚ್ಚರಿಕೆ ಪದ್ಮಾಂಬೆ ಎಚ್ಚರಿಕೆ
ಭಕ್ತರ ಪರಿಪಾಲೆ ಎಚ್ಚರಿಕೆ ಎಚ್ಚರಿಕೆ ||          ಪಲ್ಲವಿ

ನಾಗಲೋಕಕೆ  ಕರ್ತೆ ನಾಗರಾಜನ ರಾಣಿ
ನಾಗಭೂಷಣಧೀರೆ ಜಗತಿಗಧಿ ಧೀರೆ||         ೧

ಪಾರಿಶ್ವಜಿನ ಯಕ್ಷೆ ಪರಮ ಪಾವನ ಗಾತ್ರೆ
ಪರಮಮಂಗಲಕಾರೆ ಪರಮಗುಣಶೀಲೆ||      ೨

ಪದ್ಮ ಮುಖದಾ ಧೀರೆ ಪದ್ಮನಯನೆ ಬಾರೆ
ಪದ್ಮ ಹಸ್ತದಾ ದೇವಿ ಪದ್ಮಾಸನ ರೂಢೆ||       ೩

ಪಾಪಹರನ ಭಕ್ತೆ ಪಾಪಕೆ ಅತಿ ಭೀತೆ
ಪಾಲಿಸು ದಯದಿಂದ ಪಾಪಿ ಗುಣರನ್ನೆ||       ೪

ನಿರ್ಗ್ಗುಂಡಿತರುಪಾಸೆ ನಿಗಮ ಹರನೆ ಯಕ್ಷೆ
ನಿರ್ಗುನ್ವಿತ ಧೀರೆ ನಿಗಮ ಗಂಭೀರೆ||           ೫

ಭವ್ಯ ಜನರ ಪಾಲೆ ಭಕ್ತರ ಮಂದಾರೆ
ಭವ ವಿನಾಶನ ಯಕ್ಷೆ ಭಕ್ತನ ಸಲಹೆ||           ೬

ಬೆಳ್ಗುಳ ಪುರವಾಸೆ ಚಂದ್ರಗಿರಿ ನಿವಾಸೆ
ಚಂದದಿಂದಲಿ ಬಂದು ನಿನ್ನ ಬಾಲಸ ಸಲಹೆ|| ೭

 

೧೦. ಯಾಕಿನ್ನುಕೋಪ

ಯಾಕಿನ್ನು ಕೋಪ ತಾಯೇ
ಲೋಕಾಂಬೆ ರಕ್ಷಿಸು ತಾಯೇ||       ಪಲ್ಲವಿ

ಮಂದಾರಧೀರೆ ಇಂದು
ಕಂದನ ಸಲಹಿದಳೆಂದು
ಬಂದೇನು ನಾ ಶರಣೆಂದು
ಕುಂದೇನು ಎನ್ನೊಳಗಿಂದು||         ೧

ಬಳಲದಿರು ಸಿರಿವಂತೆ
ಇಳೆಯೊಳು ಮಹಿಮೆನಾಂತೆ
ತಡ ಮಾಡಬೇಡ ಹಿಮವಂತೆ
ತಾಳಲಾರೆ ನಾ ನಿನಗಿಂತ||          ೨

ಧ್ಯಾನಿಸುತಿರುವೆನು ನಿನ್ನ
ಆನಂದಮೂರುತಿ ಎನ್ನ
ಮಾನದಿ ಮನ್ನಿಸೊ ಎನ್ನ
ದೀನದಯದೊಳು ಚೆನ್ನ ||            ೩

ಕಾವುದು ತವನಿಜ ಬಿರಿದು
ಸೇವಾಕರನು ದಯವೆರೆದು
ದೇವಿದುಗುಡವನು ತೊರೆದು
ನಿಜಗುಣವನು ತೊರೆದು||            ೪

ಕತ್ತಲ ಬಸದಿಯೊಳಗಿರುವೆ
ಅರ್ತಿಯಿಂಬುದರನು ಪೊರೆವೆ
ಭೃತ್ಯಾನು ಮರೆವುದುಚಿತವೇ
ಸತ್ಯಾಂಬೆ ಪದ್ಮನಿಗರುಹೆ||           ೫