. ಶ್ರೀಸುರಪತಿನರಪತಿ

ಶ್ರೀ ಸುರಪತಿ ನರಪತಿ ಪಣಿಪತಿನುತ
ಭಾಸುರಪದಯುಗಲ ಸಾಕೇತ ಪುರಾ
ಧೀಶ ಕರಕಮಲ ಸಾತತ ಭರತೇಶನ ಪರಿಪಾ
ಲ ಸನ್ನುತ ಶಿಲವಾಸವೊರ್ಜ್ಜಿತ ಪದಸರೋಜ ವಿ
ಲಾಸು ಮುಕ್ತಿ ಶ್ರೀ ರಮಾಪತಿ ಸಾಸಿರಾಮಲನಾಮ ಪುರಪರ
ಮೇಶ ಪಾಲಿಸಭಿಷ್ಟ ಸಿದ್ದಿಯ ಲೇಸಿತ್ತು ನಮಗೆ ಕೃಪೆದೋರು || ೧

ವಾಣಿ ವಿಭವಕಟ್ಟಾಣಿ ನಿಶ್ರೇ ಸಂಕ್ಷೋಣಿಗಧಿಕ ಕ
ಲ್ಯಾಣಿಗಿರ್ವಾಂಗ್ವಾಣಿ ಪ್ರಾಣು ಪಂಕಜ
ಪಾಣಿ ಬ್ರಹ್ಮಚಾರಿಣಿ ಕರುಣ ಸೂಮರಿಕ್ಷ
ಪಾಣಿ ಪನ್ನಗ ಮಾನದೆನ್ನಯ ಮನದ ಸಂಚಲ
ಕಾಣಿಸದೆಲ ನವರತ್ನ ಗುಣಮಣಿ ಮಾನ
ಜಾಣೆಮತಿಗಳೊಡನೆ ಬಾರದೆ
ಪಾಲಿಸೆನ್ನನು ವೀಣಾಲೋಚನೆಯೆ ಕೃಪೆದೋರು || ೨

ಪುಂಡವ ಸರ್ಪಿಣಿ ಕಾಲಿದೊಪದಿ ಪುಜ್ಜ
ದಂಡಗಳ ಕೆಡಿಸಿ ಸಧರ್ಮ
ದಂಡದೊಳಗೆ ನಿಡಿಸಿ ಭವ್ಯಜನಂಗ
ಳಿಂಡುಗಳನು ರಕ್ಷಿಸಿ ಲೋಕವನೊಲಿ
ಚಂಡಿಚಾಂಡಿ ಚಾಮುಂಡಿ ಭೈರವಿ
ಲಂಡಿ ಗೃಹ ಶಿರ ಖಂಡ ಮಂಡಿತ
ಚಂಡ ವಿಕ್ರಮ ಭೂತ ಗುಣದೋ
ರ್ದಂಡನೆ ಗ್ರಹ ಜ್ವಾಲಮಾಲಿನಿ
ಪುಂಡಾಕಾಕ್ಷಿ ಕೃಪೆದೋರು || ೩

ಪದ್ಮ ವಿಷ್ಣರೆ ಪಾದಮಂದಿರೆ
ಪದಪದ ಪದ್ಮರಾಗೊಲಿಜಾತೆ
ಸದ್ಗುಣ ಮಹಿತೆ ಸುರಕ್ಷಿರ ಸ
ಮುದ್ರ ಗಾಂಭೀರ್ಯ್ಯಯುತೆ
ಭದ್ರಪೀಠ ಶ್ರೀ ಲೋಕೈಕಮಾತೆ ಶ್ರೀಜಿನವಾಸೆ
ಮುದ್ರಕೀಲಿತ ಶೇಖರಾನ್ವಿತೆ
ಕ್ಷುದ್ರ ಭೂತ ಗಣಾದಿತಾದನ
ಕುದ್ರಕುದ್ರ ಭಯಂಕರಾನ್ವಿತೆ
ಪದ್ಮಾವತಿದೇವಿ ಕೃಪೆದೋರು  || ೪

ವೀರಸೇನಾನ್ವಯಾಂಬ ಸೂರ್ಯರೆನಿಪ ಶ್ರೀ
ಚಾರು ಸಮಂತಭದ್ರದೇವಸಮೋದ್ದಾರಜ್ವಾಲಿನಿ
ಮುದ್ರ ಷಡ್ತರ್ಕ ವಿಚಾರ ಸದ್ಗುಣ ಸಮುದ್ರ ಶ್ರೀಮುನಿ
ಭದ್ರ ಚಾರು ವಚನ ತುಷಾರ ಗುಣಗಂಭೀರ ಸುಜನೋ
ದ್ಧಾರ ಯತಿಮಂದಾರ ಮುನಿಕುಲಧೀರ ಅಸಮ
ಸಾರ ಶ್ರೀಲಕ್ಷ್ಮಿ ಸೇನ ಮುನಿವರ ಚಾರುಚರಣಕೆ ನಮಿಸುವೆನು || ೫

ನವರತ್ನಖಚಿತ ರಂಜಿತ ಮಂಡಪದೊಳು
ದಿವಿಜತಂನೆಯರೈತಂದು ಪರಿವಾರವೈದು
ತವಕದೊಳು ತರುಣಿಯರು ಸಂದಣಿ
ಕವಿಜನ ಸ್ತುತಿಯಿಂದ ಪಾಡುತ
ಭವನವೊಡೆಯನ ಭರತರಾಜನ
ನವಕಳೆವವರ ಸಾರ್ವಭೌಮನ
ಯುವತಿಯರು ಹಸೆಗೆ || ೬

ಆಯುಧ ಶಾಲೆಯೊಳಗೆ ಸುದರ್ಶನ ಚಕ್ರ
ಅಯುತದೊಳು ಜನಿಸಿ ಸಕಲ ಸುರದಿ
ಕಾಯರೆಲ್ಲರು ಸ್ತುತಿಸಿ ವ್ಯಂತರ ದೇವ
ಕೊಯ್ಯರದೊಳು ಭಜಿಸಿ ಮಂಗಲವೆರಸಿ
ದಾಯದಲಿ ಪದಿನಾಲ್ಕು ರತ್ನ ನಿಕಾಯ ಸಂಜನಿಸಲ್ಕೆ ದೊರೆಗಳ
ಮುತ್ತಿನಹಸೆ ಸಂವಿಧಾನದೊಳು ಗೆಯ್ದುಕಸ್ತೂರಿ ತುಂತು ಮವಸಾರಣೆಗೈದು
ರಾಯನುಮ್ಮಳವೇರಿ ಮನದೊಳು ಪ್ರೇಮದಿಂದಿಗ್ವಿಜಯ ಸಾಧಿಪ ರಾಯನ ಹಸೆಗೆ ಕರದಾರು || ೭

ಧರೆಯೊಳಗುಳ್ಳ ಸೇನೆಯೊಗೂಡಿ ಪೂರ್ವ ಸಾ
ಗರ ಮಗಧನ ಜಯಿಸಿ ಬೇಗದೊಳು ಸಾಗರ
ವರತನ ಬರಿಸಿ ತದ್ವಿಜಯಾರ್ದ್ದಗಿರಿಯ ಗುಹೆ ತೋಡಿಸಿ ವ್ಯಂತ
ರರೊಲಿಸಿ ತ್ವರಿತದಿಂ ಚಿಲಾತ
ವರತನ ಜಯಿಸಿ ಸಿಂಧು ಜಿನೇಂದ್ರನಂಘ್ರಿಯ ಪರಮ ಭಕ್ತಿಯೊ
ಳೆರಗಿ ಪೂಜಿಸಿ ಸುರರು ಹೂಮಳೆಗರಿಯೆ ಹರುಷದಿ
ಭರತ ರಾಜೇಂದ್ರ ಹಸೆಗೇಳು  || ೮

ಪೂರ್ವಪಶ್ಚಿಮ ಖಾಂಡದ ಮ್ಲೆಚ್ಚರೊಂದೆಸಿ
ಸರ್ವರತ್ನಗಳೊಪ್ಪಿಸಿ ಹಿಮವಂತ ದೇ
ವೊರ್ವೀಪಗಳೆ ನಮಿಸಿ ಗಂಗಾ ಸಿಂಧುದೇವಿ
ವೆರಸಿ ಮನ್ನಿಸಿ ಚಿತ್ತವನೊಲಿಸಿ
ಟುರ್ವಿಯೊಳು ವೃಷಭಾಚಲಕೆ ತಾ
ಸರ್ವಕಟುತ ಸಮೇತವಾಗಿ
ಪರ್ವತದಿ ತನ್ನಂತ ಮಾಲೆಯ
ಪೂರ್ವದಿಂದಲಿ ಸ್ಥಾಪಿಸಿದ ಶ್ರೀ
ಸಾರ್ವಭೌಮೇಶ ಹಸೆಗೇಳು  || ೯

ಗಗನವಲ್ಲಭ ಪುರದಿಂದವಿನ ನಮಿರಾಜ
ಸುಮತಿ ಸಾಗರ ಸಮೇತ ಸೇನೆಯ
ಕಂಗೊಳಿಪಂತೆ ತಾ ನೋಡುತ ಆಶ್ವರ್ಯದ
ಬಗೆಗೆ ಹೆಚ್ಚಳ ಹಿಗ್ಗುತ ಸಂತೋಷಬಡುತ
ದುಕುಳನಿವಾಳಿಯನೊಪ್ಪಿಸಿ
ಮುಗುಳು ಕರಗಳ ಮುಗಿದು ವಿನಯವ
ನಗುತ ವಿನಯವನಾಡಿ ಹಾಸ್ಯದಿ
ಸುಗುಣಮನ್ನೆಯನಿತ್ತು ಕಳುಹಿದ
ಜಗಿದಗ್ರಗಣ್ಯ ಹೆಸೆಗೇಳು  || ೧೦

ಕಾಳಿಂದಿ ಮದುವಾಣಿಯಾಳಿಯರೈದಿ ಸಮ್ಮೇಳ
ದೊಳಗೆ ಪೇಳಲು ಸುಭದ್ರಿಯ
ಆಳಪದೊಳು ಪಾಡಲು ಸಂತೋಷದಿಂ
ಪೆಳಲಳವೇ ನೋಡಲು ಭಾಷ್ಪಾಂಬು ಬೀಳಲು
ಹೇಳಿಕಳುಹಿ ಸುಬುದ್ಧಿ ಸಾಗರ
ಹೇಳಿಂದಂದದಿ ರಜತ ಗಿರಿಯೊಳು
ಲೀಲೆಯಿಂ ನಮಿನಮಿರಾಜರು
ತಾಳಿ ಬಂದಿ ಮಹೋತ್ಸವೆ
ಸಳಿದ ಬಾಲಾರ್ಕ ತೇಜ ಹಸೆಗೇಳು || ೧೧

ಉಭಯಶ್ರೇಣಿಯೊಳು ದಶೋತ್ತರ ಶತಪುರಿ
ಪ್ರಭುಗಳೆಲ್ಲರುವೆರಸಿ ಸುಭದ್ರೆಯ
ವಿಭವದಿಂ ಶೃಂಗರಿಸಿ ದಿಬ್ಬಣ ಗೂಡಿ
ಶುಭ ಮುಹೂರ್ತವ ಸಾಧಿಸಿ ಪಯಣವ ರಚಿಸಿ
ರಭಸದಿಂದಲೇ ಪಾಗಿ ಕಟಿಕತದ
ಪ್ರಭು ಕುಲೋತ್ತಮ ಸಾರ್ವಭೌಮನ
ಸಭೆ ನಮಿನಮಿರಾಜರ
ಶುಭದಿನದಿ ತಕ್ಕೈಸಿ ಮನ್ನಿಸಿದ ಮಹಿಮ ಹಸೆಗೇಳು || ೧೨

ಪರಮ ಸಂಭ್ರಮದೊಳಗಿರದೆ ಗಂಗಾಸಿಂಧು
ಸುರದೇವಿಯರವತರಿಸಿ ಸುಭದ್ರೆ ನೊ
ಡ್ವರುಷದಿಂ ಮನದೊಳಾಸೆ ಅಗ್ರಜನಗುಣ
ನರಿದು ಅಪ್ಪಣೆ ಪಾಲಿಸಿ ಹರ್ಮ್ಯಕೆ ಗಮಿಸಿ
ತರಳೆಯೊಳು ಹಾಸ್ಯದೊಳು ಕರದೊಳಗಿರುವ
ಬೆರಳ ಮುದ್ರಿಕೆಯ ತೆಗೆಯಲು
ಭರದಿಯಿರ್ವರ ಕರವಿಡಿದು ಮನ
ಹರುಷದೊಳಗುಂಗುರವೆಸಳದ ಶ್ರೀ
ಭರತೇಶನ ರಾಣಿ ಹಸೆಗೇಳು || ೧೩

ಸಕಲ ದಿಗ್ದೇಶದ ಕಿನ್ನರಿಯರು
ಪ್ರಕಟಿಸಿ ಮಂಗಲವ ಸುಭದ್ರೆಗೆ
ವಿಕಸಿತ ಕಂಕಣವ ತೊಂಡಿಲು ಗಟ್ಟಿ
ಸುಖಿಯರಿರುವೆ ಮರೆವ ಸಂಭ್ರಮದೊಳಿರುವ
ಸಖಿಮುಖೋದ್ಗತ ವಾಣಿಯನು ಶ್ರೀ
ನಿಕರ ಢವಳಾರವ ಗಮಕ ಪಾಡುತ
ಅಖಿಲ ಮರಕರ್ತ ಕಿಲಿತದ ಪ
ಲ್ಲಕ್ಕಿಯೊಳಗೆ ಬಿಜಯಂಗೈಸಿ ಗಮಿಸಿದ
ಮುಕುರ ವದನೆಯೇ ಹಸೆಗೇಳು || ೧೪

ಇಂದುವಿನಂದದಿ ಸಾಂದರವಡದಿಹರ
ವಿಂದ ವದನೆ ಕಾಂತೆಯ ಕುಂದರದನ
ಬಿಂದುಗೆ ಬಾಯ್ದೆರೆಯ ಸಾಂದರತರವೆತ್ತ
ಸಿಂಧುರ ಗತಿ ನಡೆಯ ಸುಭದ್ರದೇವಿಯ
ತಂದೆ ಮೆಟ್ಟಿಕ್ಕಿಯೊಳು ನಿಲ್ಲಿಸಿ
ದಂದವನು ಸಾರ್ವಭೌಮನ ಕಂಡು ಮನದೊಳು ಜುಮ್ಮುದಟ್ಟಿಲು
ಇಂದ್ರ ವೈಭವದಿಂದ ಗಮಿಸಿದ
ಕಂದರ್ಪರೂಪೆ ಹಸೆಗೇಳು || ೧೫

ಸರಸಿಜ ಗಂಧಿಯರ್ವೆರಸಿ ಚಾಮರಗಳ
ತರತರದೊಳು ಬೀಸುತ ದೇಹದ ಕಾಂತಿ
ಪರಿಪರಿಯೊಳು ಸೂಸುತ ಪಾವುಗೆ ಮೆಟ್ಟು
ಸ್ಮರನ ಮೋಡಿಯ ತೋರುತ ನಲ್ಲಳ
ಸ್ಮರಿಸುತ ಪರಮ ಹರುಷವ ತಾಳಿ ಮನದೊಳ
ಗಿಂದೆ ಮಹಾಮೃತವ ಮೀಯಲು
ಭರದಿ ಮಂಟಪಕ್ಕೆ ತಾನಿರದೆ ಮೆಟ್ಟಿಕ್ಕಿಯೊಳು ನಿಂದ ಶ್ರೀ
ಭರತ ರಾಜೇಂದ್ರ ಹಸೆಗೇಳು || ೧೬

ಮಂಗಲ ವಾದ್ಯಗಳು ಮೊಳಗಲು ದಿಕ್ತಟ
ದಂಗನೆಯರು ಬರಲು ಭೂಸುರರು ಶ್ರೀ
ಮಂಗಲಾಷ್ಟಕ ಪಾಡಲು ಮುತ್ತಿನ ತಂಡು
ರಂಗುಡಾಳಿ ಪರಾಯರಾಜನ
ಅಂಗಕ್ಕಿಕ್ಕಲು ಪುಷ್ಪಮಾಲೆಯ
ಅಂಗನಾಮಣಿಗಿಡಲು ತಿಲಕವ
ಸಂಗಡದಿ ಕೈದಾರೆಯೆರೆಯುತ
ಅಂಗನೆಯರು ಹಸೆಗೆ ಕರೆದಾರು || ೧೭

ಹರುಷದಿಂ ದಂಪತಿಗಳು ಹೋಮವ ಬಲ
ವೆರಸಿ ವಂದನೆಗೈಯ್ವುತ ದೇವಿ
ಯರು ಕಳ್ಳರಿಸಿ ಗಾನವ ಕೇಳುತ
ಸೌರಭದ ಪರಿಮಳ ವರ್ದಕೆ ತೀಡು
ತಾ ರಸಹಾಸ್ಯವದೋರುತ ತರುಣಿಯರು ಮೌಕ್ತಿಕ
ದ ರನ್ನದ ಹರಿನಿಲದಾರಿ ಯುಕುಲಿಶದ
ವರವೈಢೂರ್ಯಟ ಪವಳ ನಿಲದ
ಪರಿಪರಿಯ ರತ್ನದಲಿ ರಚಿಸಿದ
ಮರುತದಾರತಿಯ ಬೆಳಗೀರೆ || ೧೮

ಮಾಗಿಯ ನೀಗಿದ ಕೋಗಿಲೆಯಂದದಿ
ರಾಗರಾಸದಿ ಪಡುತ ನಾಗಿಣಿಯರು
ಸೋಗೆಯೊಳು ನರ್ತಿಸುತ ಆಗಮದೊಳು
ನಾಗಪಾಲಿಯ ಮಾಡುತ ದಾವನು ಕೊಡುತ
ಮೇಘೇಶ ಜಯನಿಂದೆ ಪೇಳಲು
ತ್ಯಾಗದೊಳು ಕಟಿಕವನು ಮನ್ನಿಸಿ
ರಾಗಭೂಸುರರೆಲ್ಲ ಜಯವೆನೆ
ರಾಗದೊಳು ಕಿನ್ನರು ಪಾಡಲು
ನಾಗಿಣಿಯರು ಹಸೆಗೆ ಕರೆದಾರು || ೧೯

ಸರಿಗಮಪದನಿಯೆಂಬೇಳು ಸ್ವರಗಳಿಂದ
ಸುರವರ ನಾರಿಯರು ನರ್ತಿಸುತ ಶ್ರೀ
ಭರತರಾಜನ ಪಾಡಲು ಪಾಟಕ ಜನ
ರಿರದೆ ಹೊಗಳುತಿರಲು ಗಾನವ ಹೇಳಲು
ತರಿಕುತಂ ಝೇಂಕರಿಕುತಾಹತ
ತಾರಿಕಿಟ ತಝ್ಜೆಂತಝ್ಜೆಂತರಿ
ಗಾರಿಗಮ ಪದಮಪನಿಪ ಸಪಸನಿ
ಸಾರಿಗಗಮನಮಪಮಪ
ಗರಿಸದೋರಿ ನರ್ತದೊಳೆಸೆದಾರು || ೨೦

ವಿಕಸಿತ ಕಮಲರಾಕೆಂದು ವದನೆಯರು ತ
ರಿಕು ಝೇಂಕೃತವೆನ್ನುತ
ತೋಘದಿರಾಗಸಿಕಿಯರಿರದೆ ಪಾಡುತ
ನಾಕಿನಿಯರ ನಿಕರಟಮವೇರುತ
ಅಭಿನಯವದೋರುತ
ತಕ್ಕಿಟದಿಮಿತ್ತತ್ತೊಗಿಣಾಗಿಣಾ
ದಿಕಿಟ ಧಾನು ಧಣಾಂತರಿಕ್ಕಿಣ
ತಕೃತ ಝಣಜಣ ಝಂತರಿಕ್ಕಿಣ
ನಿಕರನಿಗಗಮಗಮಪವೆನಿಸುವ
ಸಕಲ ನರ್ತನ ಹೊಳೆಸೆದಾರು || ೨೧

ಇಂತು ಮದುವೆಯಾಗಲೊಡನೆ ಖೇಚರಸ್ವಾಮಿ
ಸಂತಾನದೊಳು ಪುಟ್ಟಿದ ಕುವರಿಯರ
ಸಂತೋಷದೊಳು ನೋಡಿದ ಸುತರಿನೆ ತಾ
ನೊಂತು ಮದುವೆ ಮಾಡಿದ ಅಂಬಿಕೆಯ ನೋಡಿದ
ಕಂತುರಾಜನ ಬರಿಸಿ ಬರದಿ ಕಾ
ಲಾಂತರಂಗವ ತಿಳಿದು ಯುದ್ದಕೆ
ನಿಂತು ವೈರಾಗ್ಯವನು ಪುಟ್ಟಿಸಿ
ಕಂತು ವಿಜಯರ ಕಂಡು ತೆರಳಿದ
ನಂತವೈಭವದಿ ಪುರಕ್ಕಾಗಿ || ೨೨

ಸಾಕೇತಪುರದೊಳನೇಕ ಚೈತ್ಯಾಲಯ
ನಾಕೇಶದಿಂ ರಚಿಸಿ ಜಿನಧರ್ಮವ
ಲೋಕದೊಳಗೆ ಹರ್ಬ್ಬಿಸಿ ಕೈಲಾಸಕೆ
ನಾಕರೆಲ್ಲರ ಬರಿಸಿ ಅಭಿಷೇಕಗೈಸಿ
ಲೋಕನಾಥನೆಂದೆನಿಸಿ ಸಕಲ ವಿ
ವೇಕದೊಳು ಜನಗಳು ಪಾಲಿಸ
ನೇಕ ಕಾಲದಿ ರಾಜ್ಯ ರಕ್ಷಿಸಿ
ಕಾಕುಂಕರ್ಮವ ಕೆಡಿಸಿ
ಶ್ರೀಕಾಂತೆಯೊಳು ಕೂಡಿ ಸುಖದಿಂದ || ೨೩

ಧರೆಯುಳ್ಳತನಕವೀ ಶೋಭಾನ
ಸ್ಥಿರವಾಗಿರಲಿ ಸಕಲ ಜನರು ನಿರುತ ಪಾಡಿ
ಪರಮ ಸಂಭ್ರಮವೇರಲು
ಬಾರಲು ಮನ ಹರುಷದೊಳೊಲಾಡಲು ಆನಂದ
ದೋರಲು ಧರೆಯ ಚಕ್ರ ನರೇಂದ್ರನಂದದಿ
ಸ್ಥಿರ ಸುಖದೊಳೊಲಾಡಿ
ಹರುಷದೊಳಿರದೆ ಮುಕ್ತಿ ಕಾಂತೆಗೆ ತಾ
ನಿರತರಾಗುವರೆಂದು ಪೇಳಿದ
ಭರತಕಲ್ಯಾಣ ಢವಳಾರ || ೨೪

ಇಂತಿ ಶೋಭಾನವನೇಳುವ ಪಾಡುವ ಜನ
ಸಂತತ ಸುಖವಿರಲಿ ಭರತ ಚಕ್ರಿ
ಯಂತೆ ನವನಿಧಿ ಬರಲು ನಿತ್ಯ ಕಲ್ಯಾಣ
ದಂತೆ ಮಂಗಲನಾಗಲಿ ವೈಭವದೊಳಿರಲಿ
ಇಂತು ಮಧುಗಿರಿ ಪುರದ ಬಸದಿಯೊ
ಳ್ದಂತಿ ವೈರಿಯ ಪೀಠಮದ್ಯದಿ
ನಿಂತು ಭವ್ಯರ ಮನದಭಿಷ್ಟವ
ಚಿಂತಿತಾರ್ಥವನಿತ್ತು ರಕ್ಷಿಪ ಶ್ರೀ
ಕಾಂತ ಜಿನೇಶ ಕೃಪೆದೋರು || ೨೫

ತುರಗವಾಹನವೇರಿ ಕರದೊಳು
ಸುರಗಿರಿಯ ಪಿಡಿದ ದುರಿತ ಸಂ
ಹಾರದೇವನೇಕಗೊಡೆಯ ಪುರದಿ
ಸ್ಥಿರವಾಸನೇ ಮೇದಿನಿ ಭವ್ಯ
ರೆರಗಿ ಪೂಜಿಸಿಗೊಂಬನೇ ಉತ್ಸಹದಾತನೇ
ಸ್ಮರಿಸಿ ನಿಮ್ಮಡಿಗಳಕೆ ವಂದಿಸಿ
ಭರತಕಥಸಾವೇರಿ ರಾಗದಿ
ಧರೆ ಜನರುಗಳೊಲಿದು ಪಾಡಲು
ಪರಮ ಸಂಪದವಿತ್ತು ಪಾಲಿಪರ
ವರವಿ ಬ್ರಹ್ಮರಾಯಗೆರಗುವೆನು || ೨೬

. ಪಣಿವೆಣಿಯರತಿ

ಪಣಿವೆಣಿಯರತಿ ಹರುಷದೊಳು ಕಂ
ಕರಣವ ಝಂಝಣರೆಂದುಲಿಯಲು
ಮಗಿಭೂಷಣಗಳ ಪ್ರಭೆ ಮೆರೆಯೇ
ಪ್ರಭೆ ಮೆರೆಯೆ ಢವಳಾರವ ಪಾಡುತ
ಮಣಿಮಯದಾರತಿಯ ಬೆಳಗಿರೇ || ೧

ಅಂಗಜ ಸಮರೂಪನೇ ಹಿಂಗಳ ನೆರೆ
ಕಂಗಳ ನೆರೆ ಭಾಗ್ಯದ ಖಣಿಯೇ
ಸಂಗರ ಭೀಮ ಗುಣಧಾಮಯೆನುತಲಿ ವಜ್ರ
ಜಂಗಣಿಗಾರತಿಯಾ ಬೆಳಗೀರೆ || ೨

ಭಾವೆಯರ ಶಿರೋಮಣಿ ಸದ್ಗುಣ ಧಾಮೇಕ
ಲಾಲಿಪು ನೆನೆದಾಲಿಸಿ ಗಜಗಮನೆ ಶವದೆನ
ಸ್ಥಿರವಾಗೆನುತಲಿ ಶ್ರೀಮತಿಗಾರತಿಯಾ ಬೆಳಗೀರೇ || ೩

ಸುರಗಿರಿ ತಾರಕಿ ಶಶಿರವಿಗಳು
ಸ್ಥಿರದೊಳಗಿರುವಂದದಿ ವಧು
ವರರು ನೀವಖಿಳಸುಖದೊಳಗೆ ಬಾಳಿರೆಂದನು ತಲೆ
ತರುಣಿಯರಾರತಿಯ ಬೆಳಗೀರೇ || ೪

ಜಯಮಂಗಳಂ ಶ್ರೀಮತಿ ಪ್ರಿಯಗೆ
ಜಯಮಂಗಳಂ ಕೋಮಲಕಾಯಗೆ
ಜಯಲಕ್ಷ್ಮಿ ರಮಣನೆನಿಸಿದ ವಜ್ರಜಂಘಗೆ
ಜಯವೆಂದಾರತಿಯ ಬೆಳಗೀರೆ || ೫