. ಮಂಗಳಂಮಂಗಳಂಬ್ರಹ್ಮದೇವಿಗೆ
ರಾಗ: ಸುರಟಿ      ಅಷ್ಟ ತಾಳ

ಮಂಗಳಂ ಮಂಗಳಂ ಬ್ರಹ್ಮದೇವಿಗೆ || ಪಲ್ಲವಿ

ಕಂಡಮಾತ್ರದಿ ನೆಲೆಗೊಂಡ ತಮ್ಮ ಪ್ರ
ಚಂಡ ತಾನವನುಳಿದಡಿಗೆರಗಿ
ಕಂಡಕಂಡಗೆ ಪೋಪ ಹಿಂಡು ಭೂತಗಳಿಗೆ
ಗಂಡನದ ದೋರ್ದಂಡ ವಿಕ್ರಮಗೆ || ೧

ಧಾರಣಿಯೊಳು ಕ್ರೂರಮರಿಯರೊಳಗಾನೆ
ಧೀರೆಯಲ್ಲದೆ ಪೆರತಿಲ್ಲೆಂದು
ವಾರೆನೋಟದಿ ಸೂರೆಗೊಂಬೆನೆಂಬ ಮಾಗಿಯ
ದೊರಕಿಸಿದವಗೆ ಜಯಮಂಗಳಂ || ೨

ಚಾರುಸಿರಿಗೆ ತವರೂರಾದ ಬೆಳ್ಗೊಳ
ಧಾರಣಿಧರದ ಮಧ್ಯದಿ ನೆಲಸಿ
ಚಾರುಕೀರ್ತಿಮುನಿ ಪಂಡಿತಾರ್ಯರಿಗುಪ
ಕಾರಿಯಾದ ಬ್ರಹ್ಮದೇವರಿಗೆ ||

. ಪ್ರಥಮಭಿಗರ್ಭವತರಣ

ಪ್ರಥಮಭಿ ಗರ್ಭವತರಣ ಪರಾಕು
ದ್ವಿತೀಯ ಕಲ್ಯಾಣಭಿಷೇಕ ಪರಾಕು
ತೃತೀಯಾದಿ ಪರಿನಿಷ್ಕ್ರಮಣ ಪರಾಕು
ಕರಿಯ ಕಟ್ಟಾಣಿ ಕೇವಲಿಯೇ ಪರಾಕೆಂದು
ಜಿನೇಂದ್ರನಿಗಾರತಿಯ ಬೆಳಗಿದರು || ೧

ಒಂದು ಪೀಠವು ನವರತ್ನ ಪರಾಕು ಮ
ತ್ತೊಂದು ಪೀಠವು ಅಪರಂಜಿ ಪರಾಕು
ಒಂದು ಪೀಠವು ವೈಢೂರ್ಯ್ಯ ಪರಾಕು
ಒಂದು ಕಿಂಕೋರ್ವ ಚಂ ಪರಾ
ಕೆಂದು ರತ್ನದಾರತಿಯ ಬೆಳಗಿದರು || ೨

ಸಮವಸರಣದಧಿನಾಥ ಪರಾಕು
ಕಮಲಪೀಠ ನಿವಾಸ ಪರಾಕು
ಸುಮನಪಾರ್ಚಿತ ಪಾದಕಮಲ ಪರಾಕು
ಸ್ವಾಮಿಚಂದ್ರಭವ ಜಿನಪಾಹಿ ಪರಾಕೆಂದು
ಜಿನೇಂದ್ರನಿಗಾರತಿಯ ಬೆಳಗಿದರು ||

ಬೆಳಗಪ್ಪಜಾವದಲಿ
ಉದಯ ರಾಗ

ಬೆಳಗಪ್ಪ ಜಾವದಲಿ ಕಂಡೆ ನಾ ಸ್ವಪ್ನವನು
ಇಳೆಗಧಿಕ ಲಕ್ಷ್ಮೀಶಯನೈಶ್ವರ್ಯಂಗೆ
ತೊಳತೊಳಗು ಜಪಮಾಲೆ ಬೆರಳಲ್ಲಿರುವುತ್ತ
ಘಳಿಲನೆ ಬರುವದೈ ನಮ್ಮ ಮನೆಗೆ || ಪಲ್ಲವಿ

ಆದಿಶಾಸ್ತ್ರವ ಬಲ್ಲವ ಆಚಾರ್ಯರೈದು ಜನ
ಓದಿಸುವ ಮಕ್ಕಳೀರಾರು ಜನ
ಬೋಧಿಸುವ ಪಂಡಿತರು ನಾಲ್ಕಾರು ಜನ ಸಹಿತ
ಪಾದಮಾರ್ಗದಿ ಬರುವ ನಮ್ಮ ಮನೆಗೆ || ೧

ಕಾಮಕ್ರೋಧವ ಬಿಟ್ಟು ಕರದಿ ಸಿಂಚವ ಪಿಡಿದು
ಸ್ವಾಮಿ ಸರ್ವಜ್ಞರಾ ಸ್ಥಾನದಿಂದ
ಪ್ರೇಮದಿಂದಲಿ ಬರುವ ನಮ್ಮ ಬಾಗಿಲ ಮುಂ
ದೆ ಮಾಲೆಯನಿಟ್ಟು ಬರುವದಾ ಕಂಡೆ || ೨

ಬಂದ ಮುನಿಗಳ ನಾನು ವಂದಿಸಿ ಬಲಗೊಂಡು
ಚೆಂದದಿಂದವರ ಬಾವಲಿಯನಿರಿಸಿ
ವಂದನೆಯ ಮಾಡಿ ಮಂದಿರಕೆ ಕರೆದೊಯ್ದು
ಇಂದು ಮುನಿರಾಯ ಬರುವುದಾ ಕಂಡೆ || ೩

ಅಷ್ಟವಿಧಾರ್ಚನೆಗಳಿಂದ ಪಾದಪೂಜೆಯ ಮಾಡಿ
ಸಾಷ್ಟಾಂಗವೆರಗಿ ತಾವು ಭಕ್ತಿಯಿಂದ
ಕೊಟ್ಟರವುಂಟೆನಾಗೆಂದು ದಿವ್ಯ ಫಲವನು ಹರಸಿ
ಅಷ್ಟಮದೈಶ್ವರ್ಯ ಆಗಲೆಂದು ಬೆಳಗಿಪ್ಪ || ೪

ಅಂಗನೆಯರೈವರು ಮಂಗಳಾರತಿಯವಿಡಿದು
ಶೃಂಗಾರವಾಗಿ ತಾವು ಭಕ್ತಿಯಿಂದ
ರಂಗುಳೇದಾರುತಿಯೆತ್ತುವ ಮಾಗಿ ಕೋಗಿಲೆಯಂತೆ
ರಾಗವನು ಪಾಡುತ್ತಯೋಗಿ ಸಿದ್ಧಾಂತರಿಗೆ || ೫

ಆರತಿಯನೆತ್ತಿ ಆಗಮ ಸಿದ್ಧಾಂತಯೋಗಿಗಳ
ಧರ್ಮೋಪದೇಶವನು ಯೋಗಿಗಳ
ಉಪದೇಶವನು ಮುಗುಳ್ನಗೆಯಿಂದ ಪೇಳಿದ
ಶ್ರಾವಕ ಸೋಮಗಳಿಗೆ || ೬

. ಮಂಗಲಂಮಂಗಲಂಶಾರದಾ

ಮಂಗಲಂ ಮಂಗಲಂ ಶಾರದಾದೇವಿ
ಮಂಗಲಂ ಮಂಗಲಂ ಭವ್ಯರಪ್ರಿಯೆ
ಮಂಗಲಂ ಮಂಗಲಂ ದಯಾನಿಧಿ
ಮಂಗಲಂ ಚಂದ್ರನ ಶಾಂತೆ ಮಂಗಲಂ || ಪಲ್ಲವಿ

ಸುರನರೋರಗವಂದ್ಯೆ ಸುಜ್ಞಾನವಾರುಧಿ
ಸುರುಚಿರತರ ರೂಪೆ ಸರಸಕಲಾಪೆ
ಸಾರಮತಿಯ ಕೊಟ್ಟು ಸಲಹು ಧೀರೆಯೇ
ಸಾರಸುಜ್ಞಾನೆ ಸಂಪನ್ನಗವೆನ್ನಿ || ೧

ವಾಣಿ ವಿಶ್ರುತಗೀರ್ವ್ವಾಣಿ ಸುಪ್ಪಾಣಿಗೆ
ವೀಣೆ ಪುಸ್ತಕ ಕಂಠ ಪಿಡಿದಳಿಗೆ
ಮಾಣದೆ ವರವಿತ್ತು ಪೊರೆವ ಶ್ರೀದೇವಿಗೆ
ತೃಣತ್ರೈಲೋಕ್ಯವಿನುತ ಚಾರಿಣಿಗೆ || ೨

ಮಂದಯಾನೆಗೆ ಮುದುವಾಣಿ ಸುಪ್ಪಾಣಿಗೆ
ಮಂದಾರ ಚಲದಿರೊ ಧಾರುಣಿಗೆ
ವಂದಿಪ ಭವ್ಯರ ಉದಯವ ಪಾಲಿಪ
ಸುಂದರ ಶುಭಕರ ಶಾರದದೇವಿಗೆ || ೩

ಜಿನಮುಖಾಂಬೋಜೆಗೆ ಘನನೀಲವೇಣಿಗೆ
ಮನುಜಲೋಚನೆ ದಿವ್ಯಮೂರುತಿಗೆ
ಮನಸಿಜ ಮರ್ದನೆ ಮನುಕುಲವರ್ಧನೆ
ಘನಮುನಿ ಜನ ವಂದ್ಯೆ ಶ್ರುತ ವಿಶಾರದೆಗೆ || ೪

ಧರೆಯೊಳತ್ಯಧಿಕ ಬೆಳ್ಗುಳಪುರ ಮಠವಾಸೆ
ಸ್ಥಿರದಿ ಭವ್ಯರಿಗತಿ ಗುಣಗಣವಾಸೆ
ಗುರುಪಂಡಿತಾರ್ಯೋಧರಣಿ ವಿಚಕ್ಷಣೆ
ಪರಮ ದಯಾನಿಧಿ ಶ್ರೀ ಶಾರದದೇವಿಗೆ || ೫

. ಜಯಮಂಗಲಂನಿತ್ಯ

ಜಯಮಂಗಲಂ ನಿತ್ಯ ಶುಭಮಂಗಲಂ
ಜಯ ಸರ್ವಾಣೇಕ್ಷ ಕೂಷ್ಮಾಂಡಿಣಿ ದೇವಿಗೆ
ಜಯಮಂಗಲಂ ನಿತ್ಯ ಶುಭಮಂಗಲಂ || ಪಲ್ಲವಿ

ಘನಗತಿಶಯಕೆ ಚರವಿನುತ ಪಾದದ್ವಯಗೆ
ಮುನಿಜನ ಹೃದಯ ಸಜ್ಜನ ಪ್ರಿಯೆಗೆ
ಜನನಿ ಜಿನಪದ ಭಕ್ತೆ ಘನಶೀಲೆ ಸಂಪ್ರೀತೆ
ವನಜಲೋಚನದೇವಿ ಭವ್ಯ ಸಂಜೀವಿಗೆ || ೧

ಸಿಂಹವಾಹನದಿರೆ ಸುಜ್ಞಾನ ಗುಣಾದರೆಗೆ
ಸಿಂಹಮಧ್ಯದ ದೇವಿ ಸುಗುಣ ಗಂಭೀರೆ
ಸಿಂಹಪೀಠಕೆ ಕರ್ತೆ ಸುರಕುಜಕೆ ಸಮದಾತೆ
ಸಾಮಜಾಂತಕದೇವಿ ಭಕ್ತವತ್ಸಲೆಗೆ || ೨

ಧರ್ಮ ಚಕ್ರೋದಾರ ನಿರ್ಮಲ ಸ್ವರೂಪನಿಗೆ
ಧರ್ಮ ಪ್ರಭಾವನೆಯೊಳೆರೆವುತಿಹಗೆ
ದುರ್ಮೋಹವನು ಹರಿಸಿದಮಲ ಜಿನಪನಯಕ್ಷೆ
ನಿರ್ಮೋಹಿ ಗುಣಾದರೆಯ ಸರಸಿಜಾಂತಕಗೆ || ೩

ನಾಮಸಾಸಿರಕೊಡೆಯ ನೇಮಿಜಿನಪನಯಕ್ಷೆ
ಪ್ರೇಮದಿಂ ಭವ್ಯರನು ಸಲಹುತಿಹಳೆ
ಶ್ರೀಮನ್ಮಾಹಾ ಧೀರೆ ಮಮ ಹೃದಯದೊಳು ನಿಂದು
ಪ್ರೇಮದಿ ಸಲಹುತಿಹ ಕೂಷ್ಮಾಂಡಿನೀ ದೇವಿಗೆ || ೪

ಕ್ಷಿತಿಯೊಳಗತಿಶಯದ ಚಂದ್ರಗಿರಿಯೊಳೆಸೆವ
ಅತಿಶಯದ ಕತ್ತಲೆಯ ಬಸದಿಯೊಳು ನೆಲೆಸಿ
ಸತತ ಶ್ರೀಗುರು ಪಂಡಿತಾರ್ಯನು ರಕ್ಷಿಸುತಿರ್ಪ
ಅತಿಶಯದ ಮೂರ್ತಿ ಶ್ರೀಕೂಷ್ಮಾಂಡಿನೀ ದೇವಿಗೆ || ೫

. ಮಂಗಳಾರತಿಯತಂದೆತ್ತಿರೆ

ಮಂಗಳಾರತಿಯ ತಂದೆತ್ತಿರೆ ಜಯ
ಮಂಗಳ ಶುಭಮಂಗಲ ಶ್ರೀ ಬ್ರಹ್ಮದೇವನಿಗೆ
ಮಂಗಳಾರತಿಯ ತಂದೆತ್ತರೆ || ಪಲ್ಲವಿ

ಕಮಲಲೋಚನನಾದ ವಿಮಲಸುಜ್ಞಾನಿಗೆ
ಮಮ ಹೃದಯದೊಳಿದ್ದು ಸಲಹುವವಗೆ
ಮಮತೆಯಿಂ  ಭವ್ಯರ ಸಲಹುವ ದೇವಗೆ
ಸುಮನಬಾಣನ ರೂಪ ಜರಿದವಗೆ || ೧

ಭೂತಭಯಂಕರ ಬೇತಾಳಮರ್ದನ
ವೀತರಾಗನ ಪಾದಭಕ್ತನಿಗೆ
ಭೂತಳದೊಳು ಸತ್ಯಮೂರ್ತಿಯೆಂದೆನಿಸಿದ
ಭೂತಳಪತಿ ಬ್ರಹ್ಮರಾಯನಿಗೆ || ೨

ತುರಗವಾಹನರೂಢ ತುಂಗ ಪರಾಕ್ರಮಿ
ಗುರುಕುಚೆ ಮನುನಿ ಪ್ರಿಯನಿಗೆ
ಸಾರರತ್ನಾಭರಣ ಧೀರಲಂಕೃತ
ವಾರುಧಿಸಮ ಗಂಭೀರನಿಗೆ || ೩

ಶೀತಳ ಜಿನಪನ ಯಕ್ಷನೆಂದೆನಿಸಿ ತಾ
ಭೂತಳದೊಳಗತಿ ಮೆರೆವವಗೆ
ಭೂತಳದೊಳಗಿಂದ್ರಗಿರಿಯ ಕಂಬದೊಳ್ನಿಂದು
ಪ್ರೀತಿಯಿಂ ಭಕ್ತರ ಸಲಹುವಗೆ || ೪

ಧರೆಯೊಳತ್ಯಂತ ಬೆಳ್ಗುಳಗಿರಿ ವರದೊಳು
ಸ್ಥಿರಸುಖದೊಳತಿ ನೆಲಸಿಹಗೆ ವರಭವ್ಯಜನರನು
ಕರುಣದಿ ರಕ್ಷಿಪ ಕರುಣಾಮೂರುತಿ ಬ್ರಹ್ಮದೇವನಿಗೆ
ಮಂಗಲಾರತಿ ತಂದೆತ್ತಿರೆ ಜಯಮಂಗಳಂ ಶುಭಮಂಗಳಂ ||

. ಮಂಗಲಂಮಂಗಲಂಭವಂತುತೆ

ಮಂಗಲಂ ಮಂಗಲಂ ಭವಂತುತೆ
ಮಂಗಲಂ ಮಂಗಲಂ ತೀರ್ಥೇಶ್ವತೆ
ಮಂಗಲಂ ಮಂಗಲಂ ಕರ್ಮವಿನಾಶಗೆ
ಮಂಗಲಂ ಮಂಗಲಂ ಪಾರೀಶ್ವ ಜಿನಪತೆ || ಪಲ್ಲವಿ

ವಾರಣಾಸಿಯ ಪುರವರಕಧಿದೇವಗೆ
ಸುರನರೋರಗ ವಂದ್ಯ ಸುಜ್ಞಾನಧರೆಗೆ
ಉರಗಲೋಕದ ಪತಿಧರಣೇಂದ್ರನೊಡೆಯಗೆ
ವರಪದ್ಮಾವತಿಯಿಂದ ಸೇವೆಗೊಂಬವಗೆ || ೧

ಪಚ್ಚವರ್ಣದ ರೂಪ ಫಣಿಯ ಲಾಂಛನನಿಗೆ
ಪಂಚಬಾಣನ ಹಮ್ಮ ಮುರಿದವಗೆ
ಚಂಚಲವಿಲ್ಲದೆ ಕಮಠನ ಜಯಿಸಿ ತಾ
ಪಂಚ ಪಾತಕಗಳ ಗೆಲಿದವಗೆ || ೨

ನವಕೋಟಿ ಮುನಿವಂದ್ಯ ಪಾರಿಶ್ವ ಜಿನಪಗೆ
ನವಪದಾರ್ಥದ ಬೇಧವ ಪೇಳ್ದವಗೆ
ನವರಸಭರಿತೆ ಬ್ರಹ್ಮದೇವಪುತ್ರಗೆ
ನವರತ್ನ ಪ್ರಮಣದುಸ್ಸ್ಯಧನಿಗೆ || ೩

ವಿಶ್ವಸೇನನಪುತ್ರ ಶಾಶ್ವತಕಾಯಿಗೆ
ಶಾಶ್ವತ ಸುಖದೊಳಗಿರುವವಗೆ
ಶಾಶ್ವತ ಮತಿಯಿತ್ತು ಭವ್ಯರ ಪಾಲಿಪ
ವಿಶ್ವಸ್ವರೂಪ ಪಾರಿಶ್ವನಾಥನಿಗೆ || ೪

ಕ್ಷಿತಿಯೊಳತ್ಯಧಿಕ ಬೆಳ್ಗೊಳದೊಳಗಿರುತಿಹ
ಅತಿಶಯದೊಳು ಚಂದ್ರಗಿರಿಯೊಳಿಪ್ಪವಗೆ
ಯತಿ ಪಂಡಿತಾರ್ಯರ ಕರುಣದಿ ರಕ್ಷಿಪ
ಅತಿಶಯ ಮೂರ್ತಿ ಪಾರೀಶ್ವದೇವನಿಗೆ || ೫

. ಆದಿಯೊಳಗೆಚಟ್ಟರಪಡೆಯ

ಆದಿಯೊಳಗೆ ಚಟ್ಟರಪಡೆಯ ಗೆಲ್ದು
ಸಾಧಿಸಿ ಮುಕ್ತಿ ಪದವ ಪಡೆದ
ವಿಧವಿಧ ರತ್ನತ್ರಯಗಳ ಪೇಳ್ದ
ಆದಿ ಜಿನೇಶಗಾರತಿಯೆತ್ತಿರೇ || ೧

ಅಜಹರಿ ಪೂಜಿತ ಸುಜನನಾರ್ಚಿತ ಪಾದ
ತ್ರಿಜಗವಂದಿತ ಪಾದ ಪದ್ಮನಿಗೆ
ಗಜರಿಪು ಪೀಠ ನಿವಾಸ ಸರ್ವೇಶಗೆ
ಅಜಿತ ಜಿನೇಶಗಾರತಿಯೆತ್ತಿರೇ || ೨

ಶಂಬರಾರಿಯ ಕರದಂಬೃದ ಮುರಿದು ಬಾ
ವಾಂಬುಧಿಯನು ದಾಂಟಿ ಮುಕ್ತಿ
ಯೆಂಬ ಕುಂಭಿನಿಯೊಳಗಿಹ ಕುಶಲಯನೆರೆದ ಶ್ರೀ
ಶಂಬವ ಜಿನಪಗಾರತಿಯೆತ್ತಿರೇ || ೩

ಅಭಿಮತ ಸಿದ್ದಿಯ ಆಗಮ ವೃದ್ಧಿಯ
ಸುಭಮತಿಗಳ ನಿತ್ಯ ಸಲಹುವಗೆ
ಉಭಯಲಕ್ಷ್ಮಿಯ ರಮಣಗೆ
ಅಭಿನಂದನ ತ್ರಿಭುವನಪತಿಗಾರತಿಯೆತ್ತಿರೇ || ೪

ಸಮವಸರಣ ಮಧ್ಯ ವಿಮಲ ಪೀಠಾಗ್ರದಿ
ಕಮಲ ನಾಲ್ಬೆರಳ ಸೋಂಕದೆ
ಸುಮನ ಬಾಣನ ಗೆಲ್ದ ಸುಮತಿ ಜಿನೇಶಗೆ
ರಮಣಿಯರೊಲಿದಾರತಿಯೆತ್ತಿರೇ || ೫

ಪದ್ಮಲಾಂಛನಯುತ ಪದಪದ್ಮಯುಗಲಗೆ
ಪದ್ಮಶಾಖೇಂದು ಪ್ರಕಾಶನಿಗೆ
ಪದ್ಮಪೀಠದಿ ನೆಲಸಿದ ಪದ್ಮಪ್ರಭನಿಗೆ
ಪದ್ಮನಿಯರೊಲಿದಾರತಿಯೆತ್ತಿರೇ || ೬

ಅಪವರ್ಗಮಾರ್ಗವ ಕೃಪೆಯಿಂದ ಸಾಧಿಸಿ
ಮಿಮಲ ಸಿದ್ದಿಯನಾಂತ ಶ್ರೀಕಾಂತಗೆ
ಉಪಮೆಗೊಲಿದ ಶ್ರೀ ಸುಪಾರೀಶ್ವನಾಥಗೆ
ಚಪಲ ನೇತ್ರಿಯರಾರತಿಯೆತ್ತಿರೇ || ೭

ಚಂದ್ರಲಾಂಛನ ಚಂದ್ರಪುರವರಾಧೀಶ್ವರ
ಚಂದ್ರಕೋಟಿ ಪ್ರಕಾಶನಿಗೆ
ಚಂದ್ರಪ್ರಭ ಜಿನರಾಜಗೆ ಮುದದಿಂದ
ಚಂದ್ರವದನೆಯರಾರತಿಯೆತ್ತಿರೇ || ೯

ಜಾತಿ ಜರಾಮರನಾತೂರ ದೂರಗೆ
ನೀತಿ ನಿರ್ಮನಿರಪೇಕ್ಷನಿಗೆ
ಶಾತ ಕುಂಭೋಪಮ ನೂತನ ವರನಿಗೆ
ಶೀತಳ ಜಿನಪತಿಗಾರತಿಯೆತ್ತಿರೇ || ೧೦

ಕಾಯ ಜಸಾಯಕ ಮಾಯಾ ವಿರಹಿತಗೆ
ನಾಯ ತ್ರೈಲೋಕ್ಯದಾಯಕಗೆ
ಶ್ರೇಯೊವೃದ್ಧಿ ಸಹಾಯನೆಂದೆನಿಸಿದ
ಶ್ರೇಯಾಂಸ ಜಿನಪಗಾರತಿಯೆತ್ತಿರೇ || ೧೧

ದೋಷ ವಿನಾಶಗೆ ಸಾಸಿರನಾಮಗೆ
ಕೇಶವರ್ಜಿತ ಪಾದ ಪದ್ಮನಿಗೆ
ಭಾಸುರ ವಿಕೋಟಿ ತೇಜ ಪ್ರಕಾಶಗೆ
ವಾಸುಪೂಜ್ಯೇಶಗಾರತಿಯೆತ್ತಿರೇ || ೧೨

ದ್ಯುಮಣೀಂದು ಕೋಟಿವಿರಾಜಿತ ತೇಜಗೆ
ಕಮಲ ಪೀಠದಿ ನಿಂತ ಕಾರುಣ್ಯಗೆ
ವಿಮಲಬೋಧಗೆ ವಿಮಲಾಂಗ ಶುಭಾಂಗಗೆ
ವಿಮಲನಾಥನಿಗಾರತಿಯೆತ್ತಿರೇ || ೧೩

ಮನಸಿಜ ಮರ್ಧನ ಮನುಕುಲ ವರ್ಧನ
ಘನಕರ್ಮಾರಣ್ಯದಾವಾನಲಗೆ
ಮುನಿಜನವಂದ್ಯಗನಂತಜಿನೇಶಗೆ
ಚಿನುಮಯ ರೂಪಗಾರತಿಯೆತ್ತಿರೇ || ೧೪

ಕರ್ಮಕಾಂತರದವರ್ಮೊದಲೊಳೆದು ಕಡಿದು
ಧರ್ಮೋಧರ್ಮೋಪದೇಶದಿಂದ
ಸಮ್ಮೋಕ್ಷಪದವ ತೋರಿದ ಧರ್ಮನಾಥಗೆ
ನಿರ್ಮಲಮನದೊಳಾರತಿಯೆತ್ತಿರೇ || ೧೫

ಅಂತರಂಗದಿ ನಿಂತು ಚಿಂತಿಸಿದವರ್ಗೆ
ಸಂತೋಷ ಸುಖವಿತ್ತು ಸಲಹುವಗೆ
ಶಾಂತಸ್ವರೂಪಗೆ ಶಾಂತಿ ಜಿನೇಶಗೆ
ಕಾಂತೆಯರೊಲಿದಾರತಿಯೆತ್ತಿರೇ || ೧೬

ಅಂತಕಪಂಥದ ಸಂತತಿಯನು ಮೆಟ್ಟಿ
ಚಿಂತಿತಮುಕ್ತಿ ಕಾಂತೆಯ ನೆರೆದು
ಸಂತತ ಸೌಖ್ಯ ನಿರಂತರದೊಳಗಿಹ
ಕುಂಥುನಾಥನಿಗಾರತಿಯೆತ್ತಿರೇ || ೧೭

ಪರಮ ಪಾವನಿಗೆ ಪಾಪವಿನಾಶಗೆ
ಸುರುಚಿರ ಸುಜ್ಞಾನಕೋಶಗೆ
ಸುರಪತಿವಂದ್ಯೆಗೆ ವರಮುನಿ ಚಂದ್ರಗೆ
ಅರಜಿನಪತಿಗಾರತಿಯೆತ್ತಿರೇ || ೧೮

ಪುಲ್ಲಬಾಣನ ಸರಳೆಲ್ಲವ ಮುರಿದಿಕ್ಕಿ
ನಿಲ್ಲದೆ ಮುಕ್ತಿನಲ್ಲಳ ನೆರೆದು
ಉಲ್ಲಾಸದೊಳು ಕೊಲ್ಲದ ಧರ್ಮವ ಪೇಳ್ವ
ಮಲ್ಲಿಜಿನೇಶಗಾರತಿಯೆತ್ತಿರೇ || ೧೯

ಮುನಿಜನ ಮುಖ್ಯ ಮೂಲೋಕ ವಂದಿತಸೌಖ್ಯ
ಚಿನುಮಯ ರೂಪಗೆ ಚಿದಾನಂದಗೆ
ಜಿನನಜಿರಾಪುರನಾದಿ ಸಂಹರಗೆ
ಮುನಿ ಸುವ್ರತೇಶಗಾರತಿಯೆತ್ತಿರೇ || ೨೦

ಯಮನಿಯಮವನಾಂತು ಕ್ರಮದಿ ತಪವಮಾಡಿ
ಯಮನಬಾಧೆಯನಾಂತು ಜೈಸಿದ ದೇವಗೆ
ಸಮತೆಯಿಂದಲಿ ಮೋಕ್ಷರಮೆಯನಾಳಿದ
ನಮಿಜಿನಪತಿಗಾರತಿಯೆತ್ತಿರೇ || ೨೧

ರಾಮಕೇಶವನಾಥ ಸುರನರವಂದಿತ
ಕಾಮವಿಜಯ ಕಾಮಿತಾರ್ಥನಿಗೆ
ಸೋಮಾರ್ಕಕೋಟಿ ಕಿರಣರಂಜಿತಪಾದ
ನೇಮಿಜಿನೇಶಗಾರತಿಯೆತ್ತಿರೇ || ೨೨

ಸಾರಸಾರ ವಿಚಾರ ಪರಾಯಣ
ಕಾರುಣಿಕಾತ್ಮ ಮಹಾತ್ಮನಿಗೆ
ಘೋರೋಪ ಸ್ವರ್ಗಪಜಯ ಪಾರೀಶ್ವೇಶಗೆ
ನಾರಿಯರೊಲಿದಾರತಿಯೆತ್ತಿರೇ || ೨೩

ಧಾರುಣಿಗಧಿಕವಾಗಿಹ ವೇಣುಪುರದ ಶ್ರೀ
ಚಾರು ನಿರ್ಮಲ ಚಾರುತಿರ್ಥಂಕರ
ಕಾರುಣ್ಯದಿಂ ಸಲಹುವ ವೀರನಾಥಗೆ
ವಾರಿಜಾಕ್ಷಿಯರಾರತಿಯೆತ್ತಿರೇ || ೨೪

ವಾಣಿಗೆ ವರದ ಕಲ್ಯಾಣಿಗೆ ಪನ್ನಗ
ವೇಣಿಗೆ ವೀಣಾವರ ಪಾಣಿ
ಜಾಣೆಗೆ ಜಗಕಾರಿತ್ರಣಿಗೆ ಪ್ರಾಣಿಗೆ
ಮಾಣಿಕಮಯದಾರತಿಯೆತ್ತಿರೇ || ೨೫

ವೃಷಭಸೇನಾಧಿಗವಿತ ಉತ್ತಮ ಗಣಧರರೆಂಬರೇ
ನವ ಮೂಷರು ಗುಂದಿನವ ಕೋಟಿಯು
ವ ಸುಧೆಯಿಂದಲಿ ಮುಕ್ತಿಗೆ ವೇಶಿಗಳಿಗೆಲ್ಲ
ಶಶಿಮುಖಿಯರುಗಳಾರತಿಯೆತ್ತಿರೇ || ೨೬

ಪದ್ಮವದನೆ ಪದ್ಮಸದನೆ ಪದ್ಮನಯನೆ
ಪದ್ಮಗಂಭಿನಿಪಾಶ ವರಪಾಣಿಗೆ
ಪದ್ಮಸನ್ನಿಭ ಪಾದಯುಗಳಿಗೆ ಪದ್ಮಾಂಬೆಗೆ
ಪದ್ಮಿಣಿಯರುಗಳಾರತಿಯೆತ್ತಿರೇ || ೨೭

. ಜಾತರೂಪವನುಕಳೆದು

ಜಾತರೂಪವನು ಕಳೆದು ಎಂಟು ಕರ್ಮವ
ಬಾತಿಯಿಂಕೆರಿಸಿ ಸಮವಸರಣಾದಿ
ನೀತಿಯೊಳಗೆ ನಡೆಯೆಂದು ಧರ್ಮವ ಪೇಳ್ದ ಶ್ರೀ
ವೀತರಾಗನಿಗಾರತಿಯೆತ್ತಿರೇ || ೧

ಬುದ್ದಿಯಿಂದಷ್ಟಕರ್ಮವ ಗೆಲಿದಾತಗೆ
ಸಿದ್ಧಾಷ್ಟಗುಣ ಸಂಪೂರ್ಣನಿಗೆ
ಶುದ್ದಾಷ್ಟ ಸೃಷ್ಟಿಕದ ಮೋಕ್ಷ ಲಕ್ಷ್ಮೀಶಗೆ
ಸಿದ್ಧಾರಿಗೊಲಿದಾರತಿಯತ್ತಿರೇ || ೨

ಆಚಾರವನು ಬಿಟ್ಟು ನಡೆವ ಜೀವಗಳಿಗೆ
ಆಚರಣೆಯ ಪೇಳಿ ಬೋಧಿಸುವ
ಖೇಚರನರಸುರವಂದ್ಯರೆಂದೆನಿಸುವ
ಆಚಾರ್ಯರತಿಗಾರತಿಯೆತ್ತಿರೇ || ೩

ಶಬ್ದತರ್ಕಾಗಮ ಸಿದ್ಧಾಂತ ಶಾಸ್ತ್ರವ
ಬುದ್ದಿಯಿಂ ತಿಳಿದುಪದೇಶಿಸುವ
ಮರ್ದಿಸಿ ಕರ್ಮ ಗೆಲಿದ ಪಾಠಕರಿಗೆ
ಶುದ್ಧಮನದೊಳಾರತಿಯೆತ್ತಿರೇ || ೪

ಭೇದಿಸಿದಾತ್ಮನ ಚಲಿಸದಂದದಿ ನಿಜ
ಸಾಧನದಿಂದ ಸಾಧಿಸುತಿರುವ
ಮೇದಿನಿಯೊಳು ಸರ್ವಸಾಧುಗಳಾಂಘ್ರಿಗೆ
ಓದಿನೀಪದನಾರತಿಯೆತ್ತಿರೇ || ೫

ಅರಹಂತ ಸಿದ್ಧಾರಾಚಾರ್ಯ್ಯರುಪಾಧ್ಯಾಯ
ವರಸರ್ವಸಾಧುಗಳೆನಿಸುವ
ಗುರುಗಳೈವರ ಮಂತ್ರಧ್ಯಾನ ಪಿಡಿದು ಪಂಚ
ಗುರುಗಳಿಗೊಲಿದಾರತಿಯೆತ್ತಿರೇ || ೬

ಮನುಮೇಶಾಂಬುಧಿವರ್ಧನ ಚಂದ್ರಗೆ
ಇನಶಶಿಕೋಟಿ ಪ್ರಕಾಶನಿಗೆ
ಘನತರ ಸೌಖ್ಯಪ್ರದಾಯಕ ಪುರುಜಿನ
ಜಿನರಾಜಗೊಲಿದಾರತಿಯೆತ್ತಿರೇ || ೭

ಗಜಲಾಂಛನಯುತಲಿ ಜಿತಜಿನೇಶಗೆ
ವಿಜಿತಮಾದನ ಶಂಭವನಾತಗೇ
ಗಝರಿಹುವಿಷ್ಟರ ಅಭಿನಂದನಿಗೆ
ಶ್ರೀ ಜಗವಂದಿತ ಸುಮತೀಶನಿಗೆ || ೮

ಮಾರಮರ್ದನಪಟ್ಟು ವಾರಿಜ ಪ್ರಭುವಿಗೆ
ಕಾರುಣ್ಯನಿಧಿ ಸುಪಾರೀಶ್ವೇಶಗೆ
ತಾರದಿಪನಾಥ ಚಂದ್ರಪ್ರಭೇಶಗೆ
ಭೂರಿ ಪೃಭವ ಪುಷ್ಟದಂತನಿಗೆ || ೯

ಭೂತಳಪತಿನುತ ಶೀತಳನಾಥಗೆ
ಜಾತರೂಪಾನ್ವಿತ ಶ್ರೇಯಾಂಶಗೆ ಪರಿಹಾರ್ಯ್ಯ
ಯುತ ವಾಸುಪೂಜೇಶಗೆ
ವೀತರಾಗಗೆ ವಿಮಲೇಶಗೆ || ೧೦

ಅಂತಕ ವಿಜಯನನಂತ ಜಿನೇಶಗೆ
ಗ್ರಂಥವರ್ಜಿತ ಧರ್ಮನಾಥನಿಗೆ
ಚಿಂತಿತಾರ್ಥವನೀವ ಶಾಂತಿಜಿನೇಶಗೆ
ಕುಂತುವಿಜಯ ಕುಂಥುನಾಥನಿಗೆ || ೧೧

ವರಮುಕ್ತಿರಮಣ ಶ್ರೀ ಅರಜಿನನಾಥಗೆ
ದುರಿತ ವಿಜಯ ಮಲ್ಲಿನಾಥನಿಗೆ
ಸುರನರೋರಗ ವಂದ್ಯ ಮುನಿ ಸುವೃತೇಶಗೆ
ಪರಮ ಪಾವನ ನಮಿನಾಥಗೆ || ೧೨

ರಾಮಷಕೇಶವನಾಥ ನೇಮಿ ಜಿನೇಶಗೆ
ಸ್ವಾಮಿ ಪಾರಿಶ್ವನಾಥನಿಗೆ
ಸೋಮಾರ್ಕ ಕೋಟಿ ಪ್ರಕಾಶ ಸಾಸಿರದಷ್ಟ
ನಾಮದೊಡೆಯ ವೀರನಾಥನಿಗೆ || ೧೩

ಕ್ಷಿತಿಗತಿಶಯ ವೇಣುಪುರ ಭವ್ಯಜನರ್ಗೆ
ಯತಿಕುಲ ರನ್ನ ಪಂಡಿತಾಚಾರ್ಯ
ರತಿಸೌಖ್ಯದಿಂದ ರಕ್ಷಿಪ ಚಂದ್ರ
ನಾಥಗೆ ಮಂಗಲಾರತಿಯತ್ತಿರೇ || ೧೪

. ಪುರಪರಮೇಶ್ವರಸುರನುತ

ಪುರಪರಮೇಶ್ವರ ಸುರನುತ ಜಯ ಜಯ
ಪರಮಾನಂದ ಸುಖಾಸ್ಪದ ಜಯ ಜಯ || ೧

ಅಜಿತ ಜಿನಾಧಿಪ ಅಚಲಿತ ಜಯ ಜಯ
ವಿಜಿತ ಮನೋಹರ ಭುಜಬಲಿ ಜಯ ಜಯ || ೨

ಶಂಭವ ಗಂಭೀರಾಂಬುಧಿ ಜಯ ಜಯ
ಶುಂಬಿತನು ತೀರ್ಥೇಶ್ವರ ಜಯ ಜಯ || ೩

ಅಭಿನಂದನ ಜಿನವಲ್ಲಭ ಜಯ ಜಯ
ಇಭರಿಪ ಪೀಠದಿಷ್ಟಿತ ಜಯ ಜಯ || ೪

ಸುಮತಿ ಜಿನಾಧಿಪ ಸುರನುತ ಜಯ ಜಯ ||
ಕುಮತಾಂಬುಧಿ ಬಡವಾನಲ ಜಯ ಜಯ || ೫

ಪದ್ಮಪ್ರಭ ಪರಮೇಶ್ವರ ಜಯ ಜಯ ||
ಪದ್ಮಶ್ರೀಯ ಪಾದ ಪಂಕಜ ಜಯ ಜಯ || ೬

ವರ ಸುಪಾರೀಶ್ವ ಜಿನಾಧಿಪ ಜಯ ಜಯ
ನಿರುಪಮ ಗಣಗಣನಿಲಯೆನ್ನ ಜಯ ಜಯ || ೭

ಚಂದ್ರಪ್ರಭ ಪರಮೇಶ್ವರ ಜಯ ಜಯ ||
ವೃಂದ ಮುನೀಶ್ವರ ವಂದಿತ ಜಯ ಜಯ || ೮

ಪುಷ್ಪದಂತ ಜಿನವಲ್ಲಭ ಜಯ ಜಯ
ಪುಷ್ಪಪರಿಷ್ಠ ಸೋಮಿರನ್ನ ಜಯ ಜಯ || ೯

ಶೀತಳ ಜಿನಪರಮೇಶ್ವರ ಜಯ ಜಯ
ಭೂತಳ ಪತಿನುತ ವಂದಿತ ಜಯ ಜಯ || ೧೦

ಶ್ರೇಯಾಂಶ ಪರಮೇಶ್ವರ ಜಯ ಜಯ
ಆಯತ ಮುಕ್ತಿ ಶ್ರೀಯುತ ಜಯ ಜಯ || ೧೧

ವಾಸುಪೂಜ್ಯ ಜಿನವಲ್ಲಭ ಜಯ ಜಯ
ಭಾಸುರ ಭವ್ಯನಿವಾಸಂಗ ಜಯ ಜಯ || ೧೨

ವಿಮಲ ಶ್ರೀ ರಮಣೀಪತಿ ಜಯ ಜಯ
ದ್ಯುಮಣಿತ ಹಸ್ತದ್ವಿತಿಯುತ ಜಯ ಜಯ  || ೧೩

ಅನಘನನಂತ ಜಿನೇಶ್ವರ ಜಯ ಜಯ
ಘನಕರ್ಮಠವಿ ಪಾವಕ ಜಯ ಜಯ || ೧೪

ಧರ್ಮ ಜಿನೇಶ್ವರ ನಿರ್ಮಲ ಜಯ ಜಯ ||
ಧರ್ಮಶತಲ ನಿಭನಿಚತಲ ಜಯ ಜಯ || ೧೫

ಶಾಂತಿಜಿನೇಶ್ವರ ಶಾಶ್ವತ ಜಯ ಜಯ
ಸಂತತ ಬೋಧನಿವಾರಕ ಜಯ ಜಯ || ೧೬

ಸುಲಲಿತಕುಂಥು ಜಿನೇಶ್ವರ ಜಯ ಜಯ
ಜಲಜನಾಭಸುತಂಜಿತ ಜಯ ಜಯ || ೧೭

ಅರಜಿನ ಸದ್ಗುಣದಾರಕ ಜಯ ಜಯ
ಪರಮ ಶ್ರೀಕುಚಕುಂಕುಮ ಜಯ ಜಯ || ೧೮

ಮಲ್ಲಿ ಜಿನೇಶ್ವರ ವಲ್ಲಭ ಜಯ ಜಯ
ಸಲ್ಲಲಿತುನ್ನತವಂದಿತ ಜಯ ಜಯ ||  ೧೯

ಮುನಿ ಸುವ್ರತ ಜಿನಕುಂಜರ ಜಯ ಜಯ
ಮುನಿ ವೃಂದಾರಕವಂದಿತ ಜಯ ಜಯ || ೨೦

ನಮಿತ ಜಿನೇಶ್ವರ ನಮಿಜಿನ ಜಯ ಜಯ
ಕ್ರಮಕಲ್ಯಾಣಸುಪಂಚಕ ಜಯ ಜಯ || ೨೧

ಸುರವಿರಚಿತ ನೇಮೀಶ್ವರ ಜಯ ಜಯ
ಹರಿವಂಶಾಂಬುಧಿ ಹಿಮಕರ ಜಯ ಜಯ || ೨೨

ಶ್ರೀಮತ್ಪಾರೀಶ್ವ ಜಿನಾಧಿಪ ಜಯ ಜಯ
ಕಾಮದೇವಮದ ಭಂಜನ ಜಯ ಜಯ || ೨೩

ಶ್ರೀ ವರ್ಧಮಾನವಲ್ಲಭ ಜಯ ಜಯ
ಸಧರ್ಮ ಪ್ರತಿಪಾದಕ ಜಯ ಜಯ || ೨೪

ಜಯನಾಥ ಜಯ ಜಿನೇಶ್ವರ ಕಂದರ್ಪದರ್ಪರಿಪು
ಕುಲಮತನ ಜಯ ನಷ್ಟಹತಿ ಕರ್ಮ ಜಯ
ಜಯ ದೇವೇಂದ್ರ ವೃಂದ ವಂದಿತ ಚರಣ || ೨೫

೧೦. ಮಂಗಳಂಗರ್ಭಾವತರಣನಿಗೆ
ರಾಗ : ಸತುಕ್ತಳಾ

ಮಂಗಳಂ ಗರ್ಭಾವತರಣನಿಗೆ
ಮಂಗಳಂ ಜನ್ಮಾಭಿ ಶ್ರವಣನಿಗೆ
ಮಂಗಳಂ ಪರಿನಿಷ್ಕ್ರಮಣ ಸುಬೋಧಗೆ
ಮಂಗಳಂ ನಿರ್ವಾಣೇಶಗೆ || ಪಲ್ಲವಿ

ಜಯ ಜಯ ಪುರಪರಮೇಶನಿಗೆ
ಜಯ ಜಯ ಪರಮಾತ್ಮರೂಪನಿಗೆ
ಜಯ ಕರುಣಾರ್ಕ ಕೋಟಿ ಪ್ರಕಾಶಗೆ
ವರಲಕುಮಿ ರಮಣಶ್ರೀ ಪರಮೇಶನಿಗೆ || ೧

ಗಜರಿಪು ವಿಷ್ಠುರ ಸುಜನ ಮನೋರಥ
ಅಜನುತ ಪಾದಪಯೋಜನಿಗೆ
ಗಜಲಾಂಛನಧರ ಶಿವದಾತಗೆ
ಅಜಿತ ಜಿನೇಶ್ವರ ಪರಮೇಶನಿಗೆ || ೨

ಶಂಭವ ಸುಖ ಭಕ್ತರ್ಗಿತ್ತು ರಕ್ಷಿಪಗೆ
ಶಂಬರಾರಿಯ ಮದಗೆಲಿದವಗೆ
ಅಂಬುಜನಾಭ ಶ್ರೀರಂಭೆಯ ರಮಣನಿಗೆ
ಕುಂಭಿನಿತ್ರಯನುತ ಶಂಭವಗೆ || ೩

ಅಭಿಮತ ಫಲಸಿದ್ಧಿದಾಯಕಗೆ
ಇಭರಿಪು ಪೀಠದೀ ನೆಲಸಿದಗೆ
ಶುಭಮತಿಯಮಗಿತ್ತು ಸಲಹುವ ದೇವಗೆ
ಅಭಿನಂದನ ಜಿನಸರ್ವಜ್ಞನಿಗೆ || ೪

ಸುಮತಿಯ ಭಕ್ತರಿನಿವನಿಗೆ
ಕ್ರಮಕಲ್ಯಾಣ ಸುಪಂಚಕಗೆ
ಕಮಲವ ಸೋಂಕದೆ ರಾಜಿಪದೇವಗೆ
ಸುಮಶರರಿಪು ಶ್ರೀ ಸುಮತೇಶನಿಗೆ || ೫

ಪದ್ಮ ಪೀಠಾಂಚಿತ ಪದ್ಮಜಿನುತಗೆ
ಪದ್ಮಸಿತಾವ ನಿವಾಸನಿಗೆ
ಪದ್ಮಪ್ರಾದಿವೃಸು ಅರುಣಭ ದೇವಗೆ
ಪದ್ಮಪ್ರಭ ಜಿನದೇವನಿಗೆ || ೬

ಕಪಾಲಧರ ನುತ ಶಂಕರಗೆ
ಸುಪಾಲ ಮರುತವರ್ಣನಿಗೆ
ಅಪರಮಿತ ಗುಣನಂತ ಚಕೋಷ್ಟಗೆ
ಸುಪಾರೀಶ್ವ ಜಿನಪಗೆ ನಿರುಪಮಗೆ || ೭

ಚಂದಿರಶಾಂತಗೆ ಚಂದ್ರಲಾಂಛನಗೆ
ಸಾಂದ್ರಸುಕೋಜ್ವಲ ಮೂರ್ತಿಗೆ
ಚಂದ್ರಪುರಾಧಿಪ ಮಹೇಶನಭವನಿಗೆ
ಇಂದ್ರವಂದಿತ ಚಂದ್ರಪ್ರಭದೇವಂಗೆ || ೮

ಒಪ್ಪುವ ಮಹಾಂಕಾಳಿ ಸೇವಿತಗೆ
ಪುಷ್ಪಸ್ಮರಾರಿ ತ್ರಿಣೇತ್ರನಿಗೆ
ಕರ್ಪೂರಲೋಚನೆ ಕಮನಿಯ ರೂಪಗೆ
ಪುಷ್ಪದಂತೇಶ ನಿಷ್ಪನ್ನನಿಗೆ || ೯

ಘಾತಿಚತುಷ್ಟಯ ನಾಶಗೆ ಪ್ರತಿ
ಹಾರ್ಯಷ್ಟಕನಾಥನಿಗೆ
ಜಾತರೂಪಾನ್ವಿತ ತ್ರಿಭುವನ ತಿಲಕಗೆ
ಶೀತಳ ಜಿನ ವೀತರಾಗನಿಗೆ || ೧೦

ಕಾಯವಳಿದ ನಿರ್ಮಲಾತ್ಮನಿಗೆ
ಕಾಯಜ ಮದಕರಿ ಪಂಚಾಸ್ಯನಿಗೆ
ಕಾಯಜನಾಭಗೆ ಮಾಧವ ಮಹಿಮಗೆ
ಪಾವನಮೂರ್ತಿ ಶ್ರೇಯಾಂಸನಿಗೆ || ೧೧

ವಸುಪೂಜ್ಯ ವಿಜಾಯವತ್ತಿ ಭಾವಗೆ
ವಸುಮತಿ ತ್ರಿಯಮತಿ ಪೂಜಿತಗೆ
ಮಿಸುಪ ಸಿಂಧುವರ್ಣ ಬಿಸರುಹ ನಾಭಗೆ
ವಸುಪೂಜ್ಯೇಶ ನಿರಂಜನಗೆ || ೧೨

ವಿಮಲಹಿಗ್ರವೀತರಾಗನಿಗೆ
ಕಮಲವ ಸೋಂಕದೆ ನಿಂದನಿಗೆ
ಸಮವಸರಣೇಶಗೆ ಸಾಸಿರ ನಾಮಗೆ
ಸುಮತಿ ಜಿನಪತಿ ಶುಭದಾತನಿಗೆ || ೧೩

ಚಿನುಮಯಕಾರ ಚಿದಾನಂದಗೆ
ಅನುಪಮ ಗುಣನಿಧಿ ಹೇಮಾಭನಿಗೆ
ಅನಘನಂತ ಚತುಷ್ಟಯ ರೂಪಗೆ
ಅನವದ್ಯಚರಿತಾನಂತ ಸ್ವಾಮಿಗೆ || ೧೪

ಕರ್ಮಾಂತಕ ಶ್ರೀ ದಶರಥ ಚರಗೆ
ನಿರ್ಮಲ ಭಾನುರೋಜೋದ್ಭವಗೆ
ಧರ್ಮಾಮೃತವನು ಕರೆದ ಮಹಾತ್ಮಗೆ
ಸಮೋಕ್ಷ ಪತಿಧರ್ಮನಾಥನಿಗೆ || ೧೫

ಶಾಂತಸ್ವರೂಪ ಚಕ್ರಧರಗೆ
ಕಾಂತಿತ ಉಧರ ಕಾಮದೇವಗೆ
ಚಿಂತಿತ ಸತ್ಫಲದಾಯಕಗೆ
ಶಾಂತಿಜಿನೇಶ್ವರ ಶಾಶ್ವತಗೆ || ೧೬

ಕಂತು ಸದೃಶ ಹರಿ ಚರಣದ್ವಯಗೆ
ಕಾಂತಿ ಶ್ರೀಮತಿ ಭವಚಕ್ರಗೆ
ಗ್ರಂಥವರ್ಜಿತಲಿಪ್ಪ ಗುಣಸಮೇತಗೆ
ಕುಂಥ ಜಿನಾಷ್ಟಮ ಪ್ರಕ್ಷೇಶನಿಗೆ || ೧೭

ಹರಿಹರವಿನುತಗೆ ಶ್ರೀಪುರಾಂತಕಗೆ
ಉರುತರ ಬಲುಮೆಗೆ ಹರಿವಿಷ್ಟರಗೆ
ವರದನ ಪತಿ ಚರನಹಮಿಂದ್ರನಿಗೆ
ಪರಮ ಪುರುಷ ಹರಜಿನನಾತನಿಗೆ || ೧೮

ಪುಲ್ಲಲೋಚನೆ ಪ್ರಭಾವತಿಯ ಗರ್ಭಾದಗೆ
ಪುಲ್ಲಶರಾಂತಕ ಭವಹರಗೆ
ಚೆಲ್ವ ಅಪರಾಜಿತೆ ಯಕ್ಷೆ ಸುಸೇವೆಗೆ
ಮಲ್ಲಿಜಿನೇಶ ಶ್ರೀ ವಲ್ಲಭಗೆ || ೧೯

ಮುನಿಗಣ್ಯಧ್ಯಾನ ಓಂಕಾರನಿಗೆ
ಜಿನಿತ ದಿವ್ಯಧ್ವನಿದ್ವ ದಶಾಂಗಣಗೆ
ಘನಮೇಘಶ್ಯಾಮ ಚತುರ್ಮುಖ ಬ್ರಹ್ಮಗೆ
ಮುನಿ ಸುವ್ರತೇಶಗೆ ಅರಹಂತನಿಗೆ || ೨೦

ನಮಿತ ಸುರೇಶ್ವರ ಕ್ರಮಯುಗವ ಪದಗೆ
ಅಮರ ಸಿದ್ಧಾಂತ ಚರನಹಮಿಂದ್ರನಿಗೆ
ಅಮಲ ಮಹಿಳೆ ಜಯವರ್ಮನ ತನುಜಗೆ
ನಮಿಜಿನ ಬಾಸುರೋಜ್ವಲ ಮೂರ್ತನಿಗೆ || ೨೧

ಸೋಮವದನೆ ಶಿವದೇವಿ ಗರ್ಭಜಗೆ
ರಾಮಕೇಶವನುತ ಪಾದನಿಗೆ
ಸೋಮಹಾ ಪರಮ ಉದ್ಧಾರಿತ ದೇಹಗೆ
ನೇಮಿಜಿನಪದ ಶುಭಕರನಿಗೆ || ೨೨

ವಾರಣಾಸಿಯ ವಿಶ್ವೇಶ್ವನೋದ್ಭವಗೆ
ನಾರಿ ಪದ್ಮಾವತಿ ಸೇವ್ಯನಿಗೆ
ಸಾರಸಾರ ವಿಚಾರ ಪರಾಯಣ
ಪಾರೀಶ್ವಜಿನ ಪರಮಾತ್ಮನಿಗೆ || ೨೩

ಶ್ರೀವಧುವರನಿಗೆ ವೀರೇಶನಿಗೆ
ಪಾವನಚರಿತದಿನೋದ್ವರಗೆ
ದೇವರದೇವಗೆ ದೇವೇಂದ್ರಪೂಜ್ಯಗೆ
ಜೀವದಯಾಪರ ಮೂರುತಿಗೆ || ೨೪