. ಜಿನರೆಂದೊಡೆಜಿನ

ಜಿನರೆಂದೊಡೆ ಜಿನಶರಣೆಂದೊಡೆ
ಎನ್ನ ಮನದ ಕರ್ಮವನೀಡಾಡವೆನು || ಪಲ್ಲವಿ

ಕಾಮವೈರಿಯೆಂದು ನಿಮ್ಮ ಕೋಮಲ ಪದವನೊಮ್ಮೆ
ಪ್ರೇಮದಿಂದ ವಂದಿಸುವರು ಭೂರಿ ಜನರು ರಾಮಣಿಕ
ಸೋಮಜಾರಿ ಪೀಠಕ್ಕೊಡೆಯನಾದ ಜಿನನೇ || ೧

ಇಕ್ಷುಚಾಪವನು ಗೆಲಿದು ರಕ್ಷಿಸುವ ಧೀರನೆ
ಪ್ರೇಕ್ಷಿಸುವ ಜನರುಗಳಿಗೆ ಆಯುವಿತ್ತನೇ ರಕ್ಷಿಸೆನ್ನನೂ
ಮೋಕ್ಷ ಲಕ್ಷ್ಮಿಲೋಲ ಶ್ರೀವೀತರಾಗನೇ || ೨

ಜನನ ಮರಣವಿಲ್ಲದವನೆ ಘನತರದ ಮೆರುವಿಂ
ದಿನುತ ಪಾಲ್ಗಡಲ ಜಲವ ಮಿಂದ ಮಹಿಮನೇ
ಅನುದಿನ ನಿಮ್ಮ ನೆನೆವ ಮಾನವನಿತ್ತು ಪಾಲಿಸೆನ್ನನು || ೩

ಸರ್ವಜೀವ ದಯಾಪರನೇ ಊರ್ವಿಗಧಿಕನಾದನೇ
ಪರ್ವತಾಗ್ರದಲ್ಲಿ ಯೋಗ್ಯವಿಟ್ಟ ಧೀರನೇ
ಸರ್ವಕಾಲ ಎನ್ನ ಮನವ ನಿಮ್ಮ ಚರಣಕೆರಗಿಸೆನ್ನನು || ೪

ನಗೆಮುಖದ ಚೆಲುವನೆ ಜಗವ ಪಾಲಿಪೊಡೆಯನೆ
ಸುಗುಣ ರನ್ನನೆ ನಿತ್ಯಾನಂದನೆ ಸೊಗಯಿಸುವ
ಮಿಗುವದೊಂದು ಗಿರಿಯಶ್ರೀ ವಿಜಯನಾಥನೇ || ೫

. ಕರೆಕರೆಕರೆಘನ

ಕರೆ ಕರೆ ಕರೆ ಘನ ಹೋ
ಕರೆಯದಿಂದಿರ್ದ್ದರೆ ತಮ್ಮಮ್ಮಗೆ ಹೇಳಾ || ಪಲ್ಲವಿ

ಗಂಡನ ಕಂಡೆಯಿಂದಂಡಲೆ ಘನ ಹೋ
ಕೊಂಡೆಗರೈವರಿಗಾರೆನಾ
ಚಂಡಮೂನೊ ಮಾವನಂಜಿಕೆಯೆನಗುಂಟು
ಕಂಡೆನೈವರು ಸುಮತಿಯ ಗುಣವ || ೧

ಇಬ್ಬರಂತೆಯರೊಳು ಒಬ್ಬಳುಳಿದಳು ಮ
ತ್ತೊಬ್ಬಳ ಕರೆಕರೆದಾರೆ ನಾ
ನಿರ್ಬುದ್ದಿಯಿಂದೈವರು ಮೈದುನರುಂಟು
ವಿಬುಧಿಯಿಲ್ಲೆನ್ನ ಬಾಳುವೆಗೆ || ೨

ಸವತಿಯ ಮಕ್ಕಳೈವರ ಕಾಟದಿಂದ
ಹವಣಿಲ್ಲದ ಭವಬಂದೆನಾ
ನವೆಯಲಾರೆನು ಬಡತನದ ಬಾಳುವೆ
ತವರು ಮನೆಯನೊಮ್ಮೆ ತೋರಯ್ಯ || ೩

ಎಂಟು ಮಂದತ್ತಿಗೆಯರು ತಮತಮಗೆ
ಎಂಟು ಕೆಲಸಗಳ ಹೇಳುವರು
ತುಂಟನೊಬ್ಬನು ನಾಲ್ವರ ಘೋರ ಮಾಡುವಾ
ಬಂಟನೊಬ್ಬನ ಮೊರೆಯಿಡುತಿಹನು || ೪

ಅರ್ಹನಲ್ಲದೆ ಪರದೈವಕೆರಗೆನು
ಕೊರಟಗೆರೆಯ ಬ್ರಹ್ಮಸ್ವಾಮಿಯನು
ಸ್ಥಿರದಿಂದ ಬಲ್ಲಿದರೈವರ ಒಡಗೊಂಡು
ಬರುತಲವರು ತವರೂರಿಗೆ || ೫

. ಭಾಗಬಿಳಿದುಭಾಗಕರಿದು

ಭಾಗ ಬಿಳಿದು ಭಾಗಕರಿದು ಇದ
ರಾಗಮ ಸಿದ್ದಾಂತವನೆಲ್ಲ ತಿಳಿದು || ಪಲ್ಲವಿ

ಎಂಟುಕಮಲದೊಳಗಿಹುದು ನಡು
ದಂಟಿನೊಳಗೆ ಬಿಂದು ಸುಳಿದಾಡುತಿಹುದು
ಉಂಟು ಮಾಡು ತೋರುತಿಹುದು ಇದ
ನೀಂಟಿಸಿ ನೋಡಲು ಶರಕೆ ಬಂದಿಹುದು || ೧

ಎರಡರ ಮದ್ಯದೊಳಿಹುದು ಅದು
ಹೊರಡ ಬಿಟ್ಟೊಂದತ ಹುರೂಟಿಸುತ್ತಿಹುದು
ಬರಡ ಹಯನ ಮಾಡುತಿಹುದು ಇದು
ಎರಡು ಕಣ್ಣವರಿಗೆ ಕಾಣದಿಹುದು || ೨

ನೆತ್ತಿಯೊಳಗೆ ಬಾಯಾಗಿಹುದು ಅದು
ಉತ್ತರದೇಶಕೆ ಎಡೆಯಾಡುತಿಹುದು
ಮತ್ತಾರಿಗೂ ಅಳವಡದು ಇದ
ರರ್ಥ ನಿರ್ವಾಣಯೋಗಿ ತಾ ತಿಳಿದು || ೩

. ತೀರ್ಥಯಾತ್ರೆಯಕೇಳಿಬುಧ

ತೀರ್ಥಯಾತ್ರೆಯ ಕೇಳಿ ಬುಧ ಸಮಿತಿ ಹರುಷದೊಳು
ಸ್ವಾರ್ಥವಾಯ್ತಿನೊಂದು ಪೇಳಿದ ವಚನಯಮನಲ್ಲಿ
ಪ್ರಾರ್ಥಿಸಲು ಸಮ್ಯಕ್ರಮಣಸಿಂಧು ಚದುರ ಲೋ
ಕಾರ್ಥವಾಗಿದನುಸುರುವೆ || ಪಲ್ಲವಿ

ಪೇಳಿಲಳವಲ್ಲ ಮುಕ್ತಗಿರಿಯ ಮಹಿಮೆಯನು
ಶೀಲಭೂಷಣರಲ್ಲಿ ಮೂರೂವರೆ ಕೋಟಿ ಮುನಿ
ಜಾಲಿಕರ್ಮವನು ಕೆಡಿಸಿ ಸಿದ್ಧ ಪದವಿಯ ಪಡದು
ಲೀಲೆಯಿಂದಿರುತಿರ್ಪರೈ || ೧

ಮೇಲೆನಿಪ ಧುರಗಗಿರಿಯಗ್ರದೊಳು
ನೆಲೆನಿಂದು ಮುಲಿಗುಣಗಳ
ತಳದು ತೊಂಬತ್ತೊಂಬತ್ತು ಕೋಟಿ ಮುನಿ
ವಾಲಿ ಸುಗ್ರೀವ ಹನುಮಂತ ರಾಮಾದಿಗಳು
ಆಳಿದರು ಮುಕ್ತಿವೆಣ್ಣ || ೨

ಅಲ್ಲಿಂದ ತೆಂಕಗಜ ಪಂಥ ಪರ್ವತದಲ್ಲಿ
ಬಲ್ಲಿದರು ವ್ಯಾಲಮಹಾ ಮುಂತಾದವರು
ಸಲ್ಲೀಲೆಯಿಂದೆಂಟು ಕೋಟಿ ಮುನಿಶಿವವದು
ಗೊಲ್ಲವಿತರು ತಾವಾದರೈ || ೩

ಸೊಲ್ಲಿಸುವರಳವಲ್ಲ ಬಡಿಗ ಚೂಳಾಚಳದಿ
ನಿಲ್ಲದೆ ಇಂದ್ರಜಿತು ಕುಂಭಕರ್ಣಾದಿಗಳು
ಚೆಲ್ವನಪ್ಪಂತಿವರು ಮೂರುವರೆ ಕೋಟಿ ಮುನಿಗ
ಳಲ್ಲಿ ಸಿದ್ಧಾತ್ಪವಾದರೈ || ೪

ಆ ಗಿರಿಯ ತಳದೊಳೈವತ್ತೆರಡು ಗಜದಿಂದ
ಮಾಗಿ ರಚಿಸಿದ ಪ್ರಥಮ ಜಿನರ ಬಿಂಬಾಚಾರ್ಯ
ಭೂಗಧಿಕ ಶತ್ರುಂಜಯ ಗಿರಿಯ ಮಧ್ಯದೊಳು
ಭೋಗಿಗಳು ಪಾಂಡವತ್ರಯರು || ೫

ಬೇಗಯಿವರಾಗಿಯಾ ಗೆಂಟುವರೆ ಕೋಟಿ ಮುನಿ
ಸಾಗಿದರು ಮುಕ್ತಿಕನ್ನಿಕೆಗೆ ಮನವಿಟ್ಟಂದು
ಶ್ರೀಗೆ ನೆಲೆಯಾಗಿ ಉಜ್ಜಂತಗಿರಿಯಗ್ರದೊಳು ವೈ
ರಾಗ್ಯ ನೇಮಿಶನೈ || ೬

ವರದತ್ತ ಮುನಿ ಮುಖ್ಯದೊಳ್ನೊರೆಪ್ಪ
ತ್ತೆರಡು ಕೋಟಿಗಳಂದು ಸಲುವಲ್ಲಿ ಮುನಿ ವ್ರಂ
ದಾರ ಕರ ಚೆಲುವೆ ಮುಕ್ತಿಕನ್ನಿಕೆಗೊಲಿದು ಸುಖದೊಳಗೆ
ಹರುಷದಿಂದಿರುತಿರ್ಪರೈ || ೭

ನಿರುತ ಪಾವಾಪುರಿಯೊಳುದೆಂಟು ಕೋಟಿ ಮುನಿ
ವರ ಶ್ರವಣಗಿರಿಯೊಳಂದೈದೂವರೆಕೋಟಿ ಮುನಿ
ಮೆರೆವರೆ ದಿವಾನದಿಯ ದಕ್ಷಿಣ ದಿಶಾತಳದಿ
ಇರುತಿರ್ದ ಕರ್ಮಹರರು || ೮

ಮೂರುವರೆಕೋಟಿ ಮುನಿ ಮುಕ್ತಿ ಪುರಕೆ ಇದ್ದರು
ಮಾರಹರ ಶ್ರೀ ವಾಸುಪೂಜ್ಯ ಚಂಪಾಪುರದಿ
ಸಾರಿದನು ಮುಕ್ತಿಯನು ಸಿದ್ಧಾರ್ಥವರ ಪುತ್ರ
ಶೂರ ಭವಪಾಪ ದೂರ || ೯

ಭೂರಿ ವೈಭವದಿಂದ ಮೆರೆವ ಪಾವಾಪುರದಿ
ಸೆರೆವೊಲು ಉದ್ಯಾನ ಕಮಲಗಿರಿ ಮಧ್ಯದೊಳು
ವೀರಶ್ರೀ ವೀರಸನ್ಮತಿ ಮಹತಿ ಮಹಾವೀರ
ಧೀರಶ್ರೀ ವರ್ಧಮಾನ || ೧೦

ಸುಮ್ಮನೇತಕೆ ಕಷ್ಟ ಸಂಸಾರದೊಳು ತೊಳಲುವೈ
ಸಮ್ಮೇದ ಶಿಖರದೊಳಿಪ್ಪತ್ತು ಜಿನರಂದು
ಗಮ್ಮನೆ ಮುಕ್ತಿಯನು ಪಡೆದರಂಬುದ ಕೇಳಿ ದಿನ
ಕೊಮ್ಮೆಯಾದರೂ ನೆನೆಯಹೋ || ೧೧

ಅಮ್ಮಮ್ಮಮ್ಮ ಶಂಕೆಯಿಲ್ಲದೆ ಕೋಟಿ ಮುನಿಯು ಪರ
ಬೊಮ್ಮನೊಬ್ಬನ ನಂಬಿ ಕರ್ಮಗಳ ಕೆಡಿಸಿದರು
ಹೆಮ್ಮೆಯಾಕೆ ನಿಮಗೆ ಜಿನರ ಪಾದಂಗಳನು
ಘಮ್ಮನೆ ಸ್ಮರಿಸಿ ಸುಖಿಸು || ೧೨

ಎಸೆವ ವೈಭಾರ ವಿಪುಳಾದ್ರ ಗಿರಿ ಉದಯಗಿರಿ
ಹೊಸತೆನಿಪ ರತ್ನಗಿರಿ ಸುವರ್ಣಗಿರಿಯೊಳು ನಿಂದು
ಮಸಕಾದಿ ಪರಿಷಹಂಗಳನೆ ಗೆಲ್ವ ಪನ್ನೊಂದ
ಜಸವಾಂತ ಗಣಧರರ ಹೋ || ೧೩

ವಸವಾದರೆಂದರಿಯ ಶಿವನಾರಿಗವರಂದು
ಪೆಸರ್ವೆತ್ತ ಉತ್ತರಾ ಮಧುರೆಯುಧ್ಯಾನದೊಳು
ಹಸಗೆಡಿಸಿ ಕರ್ಮವನು ಜಂಬುನಾಥ ಸ್ವಾಮಿ
ಹಸನಾದನೆಂದರಿಯಯೈ || ೧೪

ಪಾಟಲಿಪುರದ ನಂದನವನದಿ ಸುದರುಶನ
ಶ್ರೇಷ್ಠಿಸಾಧಿಸಿದ ಶಿವಪುರವ ಮತ್ತಿತ್ತಲುಂ
ಸಾಟಿ ಇಲ್ಲೆಂಬ ಮಂದಾರಗಿರಿ ವಿಂದ್ಯಗಿರಿ
ಮಿಟೆನಿಪ ಸ್ವರ್ಣಭದ್ರಿ || ೧೫

ನೋಟದಿಂ ಸೊಗಯಿಸುವ ನದಿಗಂಗೆಯಮುನೆಗಳಲ್ಲಿ
ಕೋಟಿಗಣನೆಗಳಲ್ಲಿ ಕರ್ಮಲಯ ಭೂಮಿಗಳು
ಕೋಟಿಗಳಿಂದೆಸೆವಯೋದ್ಯ ಹಸ್ತಿನಾಪುರವ
ದಾಟಿ ಕೌಸಂಬಿ ನಗರಿ || ೧೬

ಕುಂಡಲಾಪುರಿರತ್ನಪುರಿ ಚಂದ್ರಪುರಿ ಕಾಶಿ ಭೂ
ಮಂಡಲದೊಳಿವು ತೀರ್ಥಂಕರ ಜಲ್ಮಭೂಮಿಯನು
ಕಂಡು ಬಂದೆನು ಭವ್ಯಬೇಗದಿಂ ಮನಮೊಸೆದೊ
ಡಂಬಡಿಸು ತೀರ್ಥಗಳನು || ೧೭

ಹಿಂಡುಕರ್ಮವ ಕೆಡಿಸುತಿಹ ತೆರೆದಾರ ಸಿಂಹ
ಚಂದ್ರ ವಿಕ್ರಮ ಶಂಖ ಜಿನ ಮಾಣಿಕಸ್ವಾಮಿ
ಮಂಡಲಕೆ ಏಳ್ನೂರಾಚಾರ್ಯ ಜಿನಚಂದ್ರ ಜಿನಸು ಪ್ರ
ಚಂಡ ಬೆಳ್ಗೊಳದೊಡೆಯನೈ || ೧೮

ಮಾನಿಯೆಂಬೂರ ನೆಲಮಾಳಿಗೆಯ ಬಸದಿಯೊಳು
ಭಾನು ಸಮಪಾರೀಶ್ವ ಜಿನರಂಗದೊಳು ದಿನಕೊಮ್ಮ
ದಾನವೀವಂತೆ ಜಲಘಟ ನಾಲ್ಕು ಕರೆವುತಿರ
ಲೇನೆಂಬೆನಾಶ್ಚರ್ಯವಾ || ೧೯

ಜ್ಞಾನಿಗಳು ಪೂಜಿಸುವ ಕೋಪವನೆ ಕಂಡು ಬೇ
ಗೆನೆಂದು ವಾಕ್ಯಹ ಕೇಳಿ ಜಿನರುಂಟೆನಲು
ಭಾನುದಯ ಸತ್ವವ ಸುರಿವಂತೆ ವೇಶಗಳಿಂದ
ನೀರು ಸೂಸುತ್ತಿರೆ ಕಂಡು || ೨೦

ಬಿಡುಬಂಜ್ಯನ ಪಾಶ ಜಿನರೆಂದು ಪೆಸರಿಟ್ಟು
ಕೂಡೊಂದು ಗೆಣಂತರಾಳದೊಳು ಪ್ರತ್ಯಕ್ಷ
ರೂಢಿಗತಿಶಯವಾದ ಪಾಶಜಿನ ಅಜಿತ ಜಿನ
ನೋಡೆ ಚಿಂತಾಮಣೀಶಾ || ೨೧

ಪಾಥಲಿಳಿವಂತತಿಶಯ ನೇಮಿಗಿರಿ ಮಾಡಿ
ದತಿಶಯವಲ್ಲ ವೃಷಭನಾಥ ಸ್ವಾಮಿ ಕಾ
ಡುತಿಯ ಕರ್ಮಗಳ ಕೆಡಿಸಿ
ಮುಕ್ತಿಯೊಳೆಮ್ಮ ಕೂಡಿ ನೆಲೆ ಪಾರ್ಶ್ವ ಜಿನರೇ || ೨೨

ಪೊಂಬುಚ್ಚಪುರದೊಳು ಶ್ರೀ ಚಂಡೇರಿ ಮಾಗಿದ ಶ್ರೀ ಜ್ವಾಲೇರಿ
ವೊಂಬತ್ತು ಬಿಲ್ವಿಡಿಯ ಪುರುಜಿನರುಂಟು
ನಂಬು ತವನಿಧಿ ನವಖಂಡ ಪಾರೀಶ್ವ ಜಿನ
ಹಂಬಲಿಪೆ ಕೈಲಾಸವ || ೨೩

ಇಂಬಿನಿಂದೆಸೆವ ಬ್ರವಿಷ್ಣುಹರ ಪಾರ್ಶ್ವ ಜಿನ
ತುಂಬಿದ ತ್ರಿಸಯ ತೀರ್ಥ ಇವು ಮೊದಲ್ಗೊಂಡು ನವೊ
ಎಂಬೆ ಗುರು ಸಂತತಿಯ ಚೆನ್ನಾಗಿ ಕೇಳಿರೈ
ಶಂಭರಾರಿಯ ಜೈಸಿದ || ೨೪

ಸ್ವಾಮಿ ವಿದ್ಯಾರನಂದ ಮಲ್ಲಿಭೂಷಣವ
ಕಾಮಿತವನೀವ ಲಕ್ಷ್ಮೀಚಂದ್ರಗಿರಿದೈಯ
ಪ್ರೇಮದಿಂದ ಪೆಸರ್ವೆತ್ತ ವೀರಚಂದ್ರಾಚಾರ್ಯ
ಕಾಮನದಾಟವ ಮುರಿದನೈ || ೨೫

ಸೋಮಶಾಂತನು ಜ್ಞಾನಸುಪ್ರಭಾಚಾರ್ಯ ತಪೊ
ಭೂಮಿಗೆ ಕಣ್ಣಿಟ್ಟು ಸುಪ್ರಭೆಂದು ಮುನಿ
ಕೋಮಲಾಂಗರು ಪ್ರಿಯದಿಂದ ಮಹಿಚಂದ್ರರಾ
ಪ್ರೇಮದ ಶಿಷ್ಯ ನಾನೈ || ೨೬

. ಲಕ್ಷ್ಮಿಸೇನಮುನಿಜ್ವಾಲಿನಿ

ಲಕ್ಷ್ಮಿಸೇನ ಮುನಿ ಜ್ವಾಲಿನಿ ವರದ ಭಟ್ಟಾರಕ ಸ್ವಾಮಿ
ತೋಚಿ ಶಿಷ್ಯ ಸನ್ಮತಿ ಸಾಗರಲಿಹಿತ್ಪರಾಕ್ರಮಿ || ಪಲ್ಲವಿ

ಚಾರುಗಣ ಮಧ್ಯ ತೋರ್ಪ ಭೃತ್ಯ ಝಾಲಾ ಬಹುಧೀರಾ
ಮೊರ್ಕ್ಕ ಜನಾಸಿ ಬೋಧನಕಾರಿತ ಸದ್ಗುಣ ಸಂಪೂರಾ
ಮದನ್ಮನಮಹರ ಜಿನಚರಣಾಂಬುಜ ವಂದಿತ ಸತ್ಪರಾ
ತ್ರಿಸಂದಿನಾಧ್ಯಾಯನಕರು ನಿಜಪತಿ ನವಕಾರಾ || ೧

ಶಲ್ಯತ್ರ ಶೋಡು ನಿಜಮನಾಸದರಲಿ ಸುವಿಚಾರ
ಸಂಸಾರಾಂಬುದಿ ಕಾರಣ ಕರಿತಾರರ ತೀರ್ಥ ಪಥೋರ
ಶೀಲಸಾಗರ ಗುಣಗಂಭೀರ ಭವ್ಯಾಬುಧಿ ಶೂರ
ಮನುಷ್ಯತ್ಯಾಚಸ್ತವನಾಕರತಿರ ಅನುದಿನ ಗುಣಸಾರ || ೨

ಸುರಪುರ ಪಕ್ಷಿತ ಶೋಭಿತಪುರ ಗೋಕಾಕನಾಮ
ಯಥರಾಹುನಿ ಕೀರ್ತಿ ಕೀಲರಘುಸುತ ಗುಣಧಾಮ
ಜೋಜೋ ಸ್ತವನಾ ಪಠನಾಕರತಿ ಪುರತಿ ಮನಕಾಮ
ಕಾಯವನಾ ವಿಚಾರ ಪಟ್ಟಸ್ವಾಮೀಜಿ ಮಹಿಮಾ || ೩

. ಜಿನನಿನಗಂತವುಂಟೆನಲು

ಜಿನನಿನಗಂತವುಂಟೆನಲು ಅಂತಿಂತೆಂದು ಹೊಗಳ್ವ
ದನಂತಗರಿದು ನಿನ್ನ ಅನಂತ ಚತುಷ್ಟಯವು || ಪಲ್ಲವಿ

ಸುರಗಿರಿಯುನ್ನತೀಶರಧಿಗಾಧವಂ
ಬರದಗಲ ಕೋಟಿ ಜಗದೊಳೆಲ್ಲ
ಸುರಗಿರಿ ಶರಧಿಯಂಬರಗಳ ಮಹಿಮೆ ನಿ
ನ್ನೂರು ಬೋಧಕಣುವಾದುದು || ೧

ಕ್ರಮ ಕರುಣ ವ್ಯವಧಾನರಹಿತನಾದ ಪ
ರಮ ಕೇವಲ ಬೋಧರುದಯದಿಂದ
ಅಮರ ಲೋಕಾಲೋಕವನೊಮ್ಮೆ ಅರಿ
ವ ಮಹಿಮೆ ನಿನಗಲ್ಲದುಂಟೆ || ೨

ಕರಿಯ ಕೇಸರಿಯ ಚಕ್ರಿಯ ಸಾವಿರದ ಸಾ
ವಿರದ ಸತ್ವಲೊದೋರ್ವ ಇಂದ್ರನಿಗೆ
ಸುರಪತಿಗಳಸಂಖ್ಯಾತದ ಸತ್ವವು
ಪುರುಜಿನ ನರನಂ ಫಣಿಪತಿಕಾಜನಿತ || ೩

ಸುರರು ಪರರಾಶಿಯಿಂಗುಣಿಯಿಸಿದ
ಪರಮಾನಂದವು ನಿನ್ನ ಕ್ಷಣದ ಸುಖ
ವೊರೆದೊರೆಯೆಂದೆನಲು x x x x x
x x x x x x x x x x x x || ೪

ಅಮರಾಧಿಪತಿ ವಿರಚಿತ ಪಂಚಕಲ್ಯಾಣ
ಸಮವಸರಣ ದಿವ್ಯಭೂತಿಯುತ
ಅಮಚವಾಡಿ ಪುರಪತಿ ಪುರು ಜಿನ
ನಿಮ್ಮ ಕರಕಮಲವೇ ಶರಣು || ೫

. ಏನಿರಲೇನುನಿನಗೆ

ಏನಿರಲೇನು ನಿನಗೆ ಧ್ಯಾನ ಹೊರತಾಗಿ
ಮಾನಸದೊಳಗೆ ಹಲವನು ಹಂಬಲಿಸುತ || ಪಲ್ಲವಿ

ಹಲವು ದಿನ ಧೃಡ ಬಹು ಪಾಪಾಸ್ತ್ರಗಳ
ತೊಲಗಿಸಿ ಸಂಹರೆಯನು ಬಲಿದು
ನಲಿದು ನಿಜಾತ್ಮನೋಳೈಕ್ಯವಾಗಿಯೇ ನಿನ್ನ
ನೆಲೆಯ ಭಾವಿಸದಿದು ಧ್ಯಾನದಿಂ ಜೀವನೇ || ೧

ಆರ್ಜ್ಜೊನದಿಂದ ನೀ ನಿಲುವ ಮನದೊಲವಿಂದ
ನಿರ್ಜಾತುಕದುಪ್ಪ ಕ್ಷೇತ್ರದೊಳು
ದುರ್ಜರಿಪು ಕರ್ಮರಾಜನ ಬಲವನಿ
ನಿರ್ಜರಿಸದಿದ್ದು ಧ್ಯಾನದಿಂ ಜೀವನೇ || ೨

ಧ್ಯಾನವೆಡ ಬಿಟ್ಟು ಧರ್ಮ ಶುಕ್ತಗಳೆಂಬ
ಧ್ಯಾನವ ಮನದ ಕೊನೆಯೊಳಿರಿಸಿ
ಜಾನಂತ್ರಿ ಕೊಲ್ಲಿಪಾಕ ಪುರದಿ
ಜಿನೇಶನ ಜೀವ ನನ್ನಂತರಂಗದೊಳಿಟ್ಟು || ೩

. ದೇವದೇವನೆಭಾವಜಾಂತಕ 
ರಾಗ : ಕಾಂಭೋಜಿ ತಾಳ : ರೂಪಕ ತಾಳ

ದೇವದೇವನೇ ಭಾವಜಾಂತಕ ಕಾವುದೆನ್ನನು ನಾಥ
ಕೇವಲಾಮಲಬೋಧಭಾಸುರ ತೇಜೋರಾಶೇ ಪಾವನಮೂರುತಿ || ಪಲ್ಲವಿ

ಘೋರಭವಾಬ್ಧಿಯ ಪಾರವಪೊಂದುತ
ಭೂರಿಭವ್ಯಾಳಿಯ ಪೊರೆದಿರುವೆ
ಸಾರಸನೇತ್ರನೆ ಮಾರವಿದೂರನೆ
ಶೂರಾ-ವೀರಾ-ಧೀರನೆ ಕುರುಣಿಸು || ೧

ಮಂದರಧೀರನೆ ಬಂಧುರಗಾತ್ರನೆ
ಇಂದ್ರನರೇಂದ್ರರಿಂ ವಂದಿತನೇ
ತಂದೆಯೆ ನಿನ್ನನು ವಂದಿಪೆ ನಾನಿಂದು
ಚಂದದಿಂದಾನಂದವ ಪೊಂದುತ || ೨

ಕಾಮಿತದಾತನೆ ಕೋಮಲಗಾತ್ರನೆ
ಪ್ರೆಮದೊಳ್ನಿನ್ನಯ ನಾಮವನೇ
ಹೇಮಮಯಾಂಗನೆ ನೋಮದೊಳ್ ಜಪಿಸುವೆ
ಧಾಮ-ಸೀಮ-ಭೂಮಿಪ-ಕ್ಷೇಮದ || ೩

. ಜ್ಞಾನಿಹೊರಗೊಂದ

ಜ್ಞಾನಿ ಹೊರಗೊಂದ ಚಿಂತಿಸದಿರು ಹೊರಗೊಂದ
ಚಿಂತಿಸಿದರೆರಡು ಕಂಗಳ ಮುಚ್ಚಿ ಮೀರುವೆ ಸು
ಜ್ಞಾನ ದೃಷ್ಟಿಯಲ್ಲಿ ನಿನ್ನಯ ಮೈಯ ಮರೆಯಲಿರ್ದವಲಾ
ತ್ಮನಂ ನೋಡು ಭವಪಾಶ ಪರಿಪಟ್ಟು ಮುಕ್ತಿಯಹುದು || ಪಲ್ಲವಿ

ಉತ್ತಮಾಂಗ ಮಧ್ಯಮಾಂಗ ನಿಜಾಂಗವೆಂ
ದೊತ್ತಿ ಮಂಡೆಯ ನಡುವೆ ಕಾಲ್ಗಳಂ ಪೇಳ್ವರಿಂ
ತುತ್ತಮಂ ಮಧ್ಯಮಂ ನಿಜವೆಂಬಿ ಭೇದ ನಿನಗಿಲ್ಲ
ನೆತ್ತಿಯಿಂದುಂಗಷ್ಟ ತನಕ ಸರ್ವತ್ರ ನೀ
ನುತ್ತಮಾಂಗನೆ ಪ್ರಕಾಶಾಂಗನೆ ಸುಖಾಂಗನೆ
ವೃತ್ತದ್ರಧ್ಯೊಧ ಶಕ್ತಿವಗಹನ ಸೂಕ್ಷ್ಮ ನಿರ್ಲಘುಗುರು ವಿಭದಾಂಗನೇ || ೧

ಉಂಗುಷ್ಟ ಮೊದಲಾಗಿ ನೆತ್ತಿ ಕೆಡೆಯಾಗಿ ಸ
ರ್ವಾಂಗದಲಿ ತಿಳಿದು ಸರ್ವಾಂಗದಲಿ ಸುಖಿಸಿದ್ದು
ನಿಜಾನುಭವಗಮ್ಯ ಚಿತ್ತಾತ್ಮ ಸಾಧನ ರಮ್ಯಂ
ಕಂಗಳೆರಡರ ಬೊಂಬೆಯೊಳಗೆಷ್ಟು ಕಾಣ್ಬ ಹೃದ
ಯಾಂಗ ತಾ ಭುಜದ ಬಡಮನದೊಳಿಷ್ಟಂ ತಿಳಿವೆ
ಆ ಬಗೆಯ ಪದನುಯಿಲ್ಲ || ೨

೧೦. ಇರಬಂದೆನೆನಾನಿರಬಂದೆನೆ

ಇರಬಂದೆನೆ ನಾನಿರಬಂದೆನೆ
ಎರವಿನ ಮನೆಯಲ್ಲಿ ಬಹುಚಿಂತೆ ನಮಗೇಕೆ || ಪಲ್ಲವಿ

ಕೆರೆಯ ಮೇಗಣ ವೃಕ್ಷದ ಪಕ್ಷಿಗೆ
ಮರದ ಕೂಡೊಡೆ ಮರಣವೇ
ಕರಗಿ ಬೀಳುವ ಕಷ್ಟದ ಮೈಯೊಳು
ಪರಮ ನಾ ನಿನ್ನಗಲ್ಪುದು ಬೆರೆದು || ೧