ಪುಟ ೩ರಲ್ಲಿದ್ದ ಕೋಷ್ಟಕದಲ್ಲಿ ೧೯೫೬ರಲ್ಲಿ, ಅಂದರೆ ಏಕೀಕರಣದ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಇದ್ದ ರಸ್ತೆಗಳ ಉದ್ದದ ಒಂದು ಚಿತ್ರವನ್ನು ಕಲ್ಲೂರ ಅವರು ನೀಡಿದ್ದಾರೆ. ರಸ್ತೆಗಳ ಸೌಲಭ್ಯಕ್ಕೆ ಸಂಬಂಧಿಸಿದಂತೆ ಅಂದು ಇದ್ದ ಪ್ರದೇಶವಾರು ಅಸಮಾನತೆಯನ್ನು ಅದು ಸ್ಪಷ್ಟವಾಗಿ ತೋರಿಸುತ್ತದೆ. ಪ್ರಾದೇಶಿಕ ಅಸಮಾನತೆಯ ಬಗ್ಗೆ ಕಲ್ಲೂರ ಅವರು ಹೆಚ್ಚು ಮಾತನಾಡುವುದಿಲ್ಲ. ಆದರೆ ಅವರು ಪ್ರಬಂಧದಲ್ಲಿ ಕರ್ನಾಟಕದಲ್ಲಿ ವಿಲೀನಗೊಂಡ, ಅಂದು ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿದ್ದ ಪ್ರದೇಶಗಳ ಅಭಿವೃದ್ಧಿಯ ಅಗತ್ಯವನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ. ಜನರನ್ನು ಒಳಗುಮಾಡಿಕೊಂಡು, ಅಂದರೆ ನಾಡು ಮತ್ತು ನಾಡವರನ್ನು ತೊಡಗಿಸಿಕೊಂಡು ಅಭಿವೃದ್ಧಿಯಾಗಬೇಕು ಎಂದು ಹೇಳುವಾಗ ಕಲ್ಲೂರ ಅವರು ನಾಡಿನ ಎಲ್ಲ ಭಾಗಗಳನ್ನು ತಬ್ಬಿಕೊಂಡಂತಹ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ.

ಬಿಜಾಪುರ ಜಿಲ್ಲೆಯಲ್ಲಿ ೧೯೫೬ರಲ್ಲಿ ಪ್ರತಿ ಚ.ಮೈಲಿಗೆ ಇದ್ದ ರಸ್ತೆಗಳ ಉದ್ದ ೯ ಮೈಲಿ. ಹೈದರಾಬಾದು ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಇದ್ದುದು ಕೇವಲ ೫ ಮೈಲಿ. ಆದರೆ ಮೈಸೂರು ಸಂಸ್ಥಾನದ ಪ್ರದೇಶದಲ್ಲಿ ಇದ್ದುದು ೨೪ ಮೈಲಿ. ಅಂದರೆ ಮೈಸೂರು ಸಂಸ್ಥಾನದ ಜಿಲ್ಲೆಗಳಲ್ಲಿನ ರಸ್ತೆಗಳ ಉದ್ದವು ಹೈದರಾಬಾದು ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿನ ರಸ್ತೆಗಳ ಉದ್ದಕ್ಕಿಂತ ೫ ಪಟ್ಟು ಅಧಿಕವಾಗಿತ್ತು. ಅಂದ ಮೇಲೆ ಯಾವ ಪ್ರದೇಶದ ರಸ್ತೆಗಳ ಅಭಿವೃದ್ಧಿಯಾಗಬೇಕು ಎಂಬುದನ್ನು ಅಪ್ರತ್ಯಕ್ಷವಾಗಿ ಆದರೆ ಸ್ಪಷ್ಟವಾಗಿ ಇದು ಹೇಳುತ್ತಿದೆ.

ಇಂದು ಪರಿಸ್ಥಿತಿ ಹೇಗಿದೆ?

ಇಂದಿನ ರಸ್ತೆಗಳಿಗೆ ಸಂಬಂಧಿಸಿದ ಪರಿಸ್ಥಿತಿಯನ್ನು ೧೯೫೬ಕ್ಕೆ ಹೋಲಿಸಿದರೆ ಅದು ತುಂಬಾ ಬದಲಾಗಿಲ್ಲ ಎಂಬುದು ತಿಳಿಯುತ್ತದೆ. ಇಂದಿನ ರಸ್ತೆಗಳ ಉದ್ದದ ವಿವರವನ್ನು ಕೆಳಗೆ ಪ್ರದೇಶವಾರು ನೀಡಲಾಗಿದೆ. ಅನುಬಂಧ ಕೋಷ್ಟಕ ೧ರಲ್ಲಿ ೧೯೯೬ರಲ್ಲಿ ಇದ್ದ ಜಿಲ್ಲಾವಾರು ರಸ್ತೆಗಳ ಉದ್ದದ ವಿವರವನ್ನು ನೀಡಲಾಗಿದೆ.

ಪ್ರತಿ ೧೦೦ ಚ.ಕಿ.ಮೀ. ಪ್ರದೇಶದಲ್ಲಿ ರಸ್ತೆಗಳ ಉದ್ದ ೧೯೯೬

ಪ್ರದೇಶ ರಸ್ತೆಗಳ ಉದ್ದ
ಬೆಂಗಳೂರು ವಿಭಾಗದ ಜಿಲ್ಲೆಗಳು ೭೩ ಕಿ.ಮೀ ರಸ್ತೆಗಳು
ಮೈಸೂರು ವಿಭಾಗದ ಜಿಲ್ಲೆಗಳು ೮೮ ಕಿ.ಮೀ ರಸ್ತೆಗಳು
ದಕ್ಷಿಣ ಕರ್ನಾಟಕದ ಜಿಲ್ಲೆಗಳು ೮೦ ಕಿ.ಮೀ ರಸ್ತೆಗಳು
ಬೆಳಗಾವಿ ವಿಭಾಗದ ಜಿಲ್ಲೆಗಳು ೫೬ ಕಿ.ಮೀ ರಸ್ತೆಗಳು
ಗುಲಬರ್ಗಾ ವಿಭಾಗದ ಜಿಲ್ಲೆಗಳು ೪೫ ಕಿ.ಮೀ ರಸ್ತೆಗಳು
ಉತ್ತರ ಕರ್ನಾಟಕದ ಜಿಲ್ಲೆಗಳು ೫೧ ಕಿ.ಮೀ ರಸ್ತೆಗಳು
ಕರ್ನಾಟಕ ರಾಜ್ಯ ೬೫ ಕಿ.ಮೀ ರಸ್ತೆಗಳು

ಮೂಲ : ಕರ್ನಾಟಕ ಅಭಿವೃದ್ಧಿ ಮಾಹಿತಿ ಕೋಶ. ೧೯೯೯, ಪು. ೭೮, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ರಾಜ್ಯದ ಸರಾಸರಿಗಿಂತ ಬೆಳಗಾವಿ – ಗುಲಬರ್ಗಾ ವಿಭಾಗಗಳ ಜಿಲ್ಲೆಗಳಲ್ಲಿನ ರಸ್ತೆಗಳ ಉದ್ದವು ಕಡಿಮೆಯಿದ್ದರೆ ಮೈಸೂರು ಬೆಂಗಳೂರು ವಿಭಾಗಗಳ ಜಿಲ್ಲೆಗಳ ರಸ್ತೆಗಳ ಉದ್ದವು ಅಧಿಕವಾಗಿದೆ.

ಕೋಷ್ಟಕ ೧: ಪ್ರತಿ ೧೦೦ ಚ.ಕಿ.ಮೀ ಪ್ರದೇಶದಲ್ಲಿ ರಸ್ತೆಗಳ ಉದ್ದ : ಜಿಲ್ಲಾವಾರು (೧೯೯೬)

ಜಿಲ್ಲೆಗಳು ಪ್ರತಿ ೧೦೦ ಚ.ಕಿ.ಮೀಗಳಲ್ಲಿ ರಸ್ತೆಗಳ ಉದ್ದ
ಬೆಂಗಳೂರು ೧೨೨
ಬೆಂಗಳೂರು ಗ್ರಾಂ ೮೨
ಚಿತ್ರದುರ್ಗ ೫೪
ದಾವಣಗೆರೆ ೭೪
ಕೋಲಾರ ೭೪
ಶಿವಮೊಗ್ಗ ೭೩
ತುಮಕೂರು ೭೨
ಮೈಸೂರು ೯೭
ಚಾಮರಾಜನಗರ ೫೩
ಚಿಕ್ಕಮಗಳೂರು ೮೫
ದಕ್ಷಿಣ ಕನ್ನಡ ೧೦೦
ಉಡುಲಿ ೫೮
ಹಾಸನ ೭೪
ಕೊಡಗು ೭೪
ಮಂಡ್ಯ ೧೬೧
ಬೆಳಗಾವಿ ೫೪
ಬಿಜಾಪುರ ೩೮
ಬಾಗಲಕೋಟೆ ೫೫
ಧಾರವಾಡ ೫೫
ಗದಗ ೫೬
ಹಾವೇರಿ ೯೪
ಉತ್ತರ ಕನ್ನಡ ೫೭
ಗುಲಬರ್ಗಾ ೪೧
ಬೀದರ ೫೩
ಬಳ್ಳಾರಿ ೫೨
ರಾಯಚೂರು ೩೭
ಕೊಪ್ಪಳ ೪೮

ಕೋಷ್ಟಕ ೨: ಕರ್ನಾಟಕದಲ್ಲಿ ವಿವಿಧ ಬಗೆಯ ರಸ್ತೆಗಳ ಉದ್ದ ೧೯೫೬ – ೧೯೯೬

ರಸ್ತೆಗಳ ವಿಧಗಳು ರಸ್ತೆಗಳ ಉದ್ದ (ಕಿ.ಮೀ)
೧೯೫೬ ೧೯೯೬
೦೧. ರಾಷ್ಟ್ರೀಯ ಹೆದ್ದಾರಿಗಳು ೮೬೪ ೧೯೯೭
೦೨. ರಾಜ್ಯ ಹೆದ್ದಾರಿಗಳು ೫೭೮೩ ೧೧೩೯೫
೦೩. ಮುಖ್ಯ ಜಿಲ್ಲಾ ರಸ್ತೆಗಳು ೭೦೦೬ ೨೮೩೧೧
೦೪. ಇತರ ಜಿಲ್ಲಾ ರಸ್ತೆಗಳು ೫೯೫೧ ೨೦೭೦
೦೫. ಹಳ್ಳಿ ರಸ್ತೆಗಳು ೨೩೭೩ ೩೮೬೭೭
೦೬. ತಾಲ್ಲೂಕು ಅಭಿವೃದ್ಧಿ ಮಂಡಳಿ ರಸ್ತೆಗಳು ೧೯೨೨೨ ೩೦೦೨೦
೦೭. ಅರಣ್ಯ ಇಲಾಖೆ ರಸ್ತೆಗಳು ೧೭೮೩ ೨೫೮೨
೦೮. ನೀರಾವರಿ ಇಲಾಖೆ ರಸ್ತೆಗಳು   ೯೪೧೭
೦೯. ಒಟ್ಟು ರಸ್ತೆಗಳ ಉದ್ದ ೪೩೧೮೨ ೧೨೪೪೮೯
೧೦. ಪ್ರತಿ ೧೦೦ ಚ.ಕಿ.ಮೀ. ಪ್ರದೇಶದಲ್ಲಿ ರಸ್ತೆಗಳ ಉದ್ದ ೨೩ ೬೫
೧೧. ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ರಸ್ತೆಗಳ ೨೨೩ ೨೭೭

ಕೋಷ್ಟಕ ೩: ಕರ್ನಾಟಕದಲ್ಲಿ ರೈಲು ದಾರಿಯ ಉದ್ದ : ಜಿಲ್ಲಾವಾರು ೧೯೯೬

ಜಿಲ್ಲೆಗಳು

ರೈಲುದಾರಿಯ ಉದ್ದ ಪ್ರತಿ ೧೦೦ ಚ.ಕಿ.ಮೀ. ರೈಲುದಾರಿ
ಬ್ರಾಡ್ಗೇಜ್ ಮೀಟರ್ ಗೇಜ್ ನ್ಯಾರೋ ಗೇಜ್ ಒಟ್ಟು
ಬೆಂಗಳೂರು ೩೨೭  – ೩೩೩  
ಬೆಂಗಳೂರು (ಗ್ರಾ)          
ಚಿತ್ರದುರ್ಗ ೨೧೯  –  – ೩೧೯  
ಕೋಲಾರ ೧೦೨  – ೯೬ ೧೯೮  
ಶಿವಮೊಗ್ಗ ೨೪ ೧೦೦  – ೧೨೪  
ತುಮಕೂರು ೯೭  –  – ೯೭  
ಬೆಂಗಳೂರು ವಿಭಾಗ ೭೬೯ ೧೦೦ ೧೦೨ ೯೭೧  
ಚಿಕ್ಕಮಗಳೂರು ೯೧  –  – ೯೧  
ದಕ್ಷಿಣ ಕನ್ನಡ ೧೦೨ ೧೧೪  – ೨೧೬  
ಹಾಸನ ೩೩ ೧೬೫  – ೧೯೮  
ಕೊಡಗು  –  –  –  –  
ಮಂಡ್ಯ ೬೧ ೨೨  – ೮೩  
ಮೈಸೂರು ೧೧೨  – ೧೨೦  
ಮೈಸೂರು ವಿಭಾಗ ೨೯೫ ೪೧೩  – ೭೦೮  
ಬೆಳಗಾವಿ ೨೨೦  –  – ೨೨೦  
ಬಿಜಾಪುರ  – ೨೦೮  – ೨೦೮  
ಧಾರವಾಡ ೨೭೧ ೫೦  – ೩೨೧  
ಉತ್ತರ ಕನ್ನದ ೪೦  – ೪೧  
ಬೆಳಗಾವಿ ವಿಭಾಗ ೫೩೧ ೨೫೯  – ೭೯೦  
ಬೀದರ ೭೯  –  – ೭೯  
ಗುಲಬರ್ಗಾ ೨೦೭  –  – ೨೦೭  
ಬಳ್ಳಾರಿ ೧೮೬ ೧೪೫  – ೩೩೧  
ರಾಯಚೂರು ೧೦೬  –  – ೧೦೬  
ಗುಲಬರ್ಗಾ ವಿಭಾಗ ೫೭೮ ೧೪೫  – ೭೨೩  
ಕರ್ನಾಟಕ ರಾಜ್ಯ ೨೧೭೩ ೯೧೭ ೧೦೨ ೩೧೯೨  

 

– ಟಿ.ಆರ್. ಚಂದ್ರಶೇಖರ