. ಸಂಯುಕ್ತಾಕ್ಷರಗಳು (ದ್ವಿತ್ವಕ್ಷರಗಳು)

ಎರಡು ಅಥವಾ ಮೂರು ಧ್ವನಿಗಳನ್ನು ಒಟ್ಟಾಗಿ ಉಚ್ಚರಿಸುವುದು ಮತ್ತು ಬರೆಯುವುದನ್ನು ಸಂಯುಕ್ತಾಕ್ಷರ ಅಥವಾ ಒತ್ತಕ್ಷರವೆನ್ನುತ್ತೇವೆ. ಇಲ್ಲಿ ಒಂದೇ ಜಾತಿಯ ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರವು (ಧ್ವನಿ) ಸಜಾತೀಯ ಸಂಯುಕ್ತಾಕ್ಷರ ವೆನಿಸುವುದು. ಇದಕ್ಕೆ ದ್ವಿತ್ವವೆಂದೂ ಹೆಸರು. ಬೇರೆ ಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಸೇರಿ ಆಗುವ ಅಕ್ಷರಕ್ಕೆ ವಿಜಾತೀಯ ಸಂಯುಕ್ತಾಕ್ಷರ ಎನ್ನುತ್ತೇವೆ. ಆದರೆ ಒತ್ತಕ್ಷರಗಳನ್ನು ಅವುಗಳ ರಚನೆಯನ್ನು ಆಧರಿಸಿ ಮೂರು ವಿಭಾಗಗಳನ್ನಾಗಿ ವರ್ಗೀಕರಿಸಬಹುದು. ಅವು ಇಂತಿವೆ. ಒತ್ತಕ್ಷರಗಳನ್ನು ಬರೆಯುವಾಗ ಅದು ಸಜಾತೀಯ ಒತ್ತಕ್ಷರ ಇರಬಹುದು. ಇಲ್ಲವೆ  ವಿಜಾತೀಯ ಒತ್ತಕ್ಷರವಿದ್ದಿರಬಹುದು. ಒಂದರ ಪಕ್ಕದಲ್ಲಿ ಒಂದನ್ನು ಇಟ್ಟು ಬರೆಯಲಾಗುವುದು. ಉದಾ: ಅಜ್ಜ ಎಂಬುದನ್ನು ಅಜಜ ಎಂದೂ, ಅವ್ವ ಒತ್ತಕ್ಷರವನ್ನು ಅವವ ಎಂದು ಬರವಣಿಗೆ ಮಾಡುತ್ತಾರೆ. ಇದಕ್ಕೆ ಕಾರಣ ಉರ್ದುವಿನಲ್ಲಿ ಒತ್ತಕ್ಷರಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ಇಟ್ಟು ಬರೆಯಲಾಗುತ್ತಿದೆ.

ಈ ಹಿನ್ನಲೆಯಿಂದ ಈ ಮಾದರಿ ವ್ಯತ್ಯಾಸವನ್ನು ಮಾಡಲಾಗುತ್ತಿದ್ದಾರೆ. ಭಿನ್ನ ರೂಪದ ಒತ್ತಕ್ಷರಗಳನ್ನು ಉಲ್ಟ ಬರೆಯುತ್ತಾರೆ. ಉದಾ: ಶಿಲ್ಪ>ಶಿಲ್ಲ, ಇದಕ್ಕೆ ಕಾರಣ …. ಮತ್ತು  ….. ಈ ಎರಡು, ಒತ್ತಕ್ಷರಗಳ ನಡುವೆ ಇರುವ ರಚನೆ ಸಾಮ್ಯತೆ

. ನೇರ ಮೂಲ ಅಕ್ಷರಗಳೆ ಒತ್ತಕ್ಷರ (ಸಣ್ಣ ಗಾತ್ರದ ಪೂರ್ಣರೂಪ)
, , , , ,

. ಮೂಲಾಕ್ಷರಗಳನ್ನು ಹೋಲುವ ಒತ್ತಕ್ಷರ (ಅಕ್ಷರದ ತಲೆಕಟ್ಟಿಲ್ಲದ ರೂಪ)
ಕಿ, ಗಿ, ಚಿ, ಠಿ, ಡಿ, ಢಿ, ಫಿ, ಛಿ, ಥಿ, ದಿ, ಧಿ

. ಭಿನ್ನರೂಪದ ಒತ್ತಕ್ಷರಗಳು

 ಈ ಒತ್ತಕ್ಷರಗಳನ್ನು ಉರ್ದು ಭಾಷಿಕ ಮಕ್ಕಳು ಓದುವಾಗ ಮತ್ತು ಬರೆಯುವಾಗ ಯಾವ ತೆರನಾಗಿ ವ್ಯತ್ಯಾಸಗಳನ್ನು ಮಾಡುತ್ತಾರೆ ಎಂಬುದು ಗಮನಿಸುವಂತಹ ಅಂಶ.

. ನೇರ ಮೂಲ ಅಕ್ಷರಗಳ ಒತ್ತಕ್ಷರ (ಸಣ್ಣ ಗಾತ್ರದ ಪೂರ್ಣರೂಪ)
, , , , ,

*ಜ್ಜ>

ಪದಮಧ್ಯ ಪರಿಸರದಲ್ಲಿ ‘ಜ್ಜ’ ದ್ವಿತ್ವ ಧ್ವನಿ ಬದಲು ‘ಜ’ ತಾಲವ್ಯಘೋಷ ಅನುಘರ್ಷ ವ್ಯಂಜನ ಧ್ವನಿಯನ್ನು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ. ಆದರೆ ಒತ್ತಕ್ಷರಗಳನ್ನು ತೇಲಿಸಿ ಓದುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಅಜ್ಜ > ಅಜಜ
ಗೆಜ್ಜೆ > ಗೆಜೆಜ
ಗಜ್ಜರಿ > ಗಜಜರಿ

*ಜ್ಜ>

ಪದಮಧ್ಯ ಪರಿಸರದಲ್ಲಿ “ಜ್ಜ” ದ್ವಿತ್ವ ಧ್ವನಿ ಬದಲು “ಜ” ಮೂರ್ಧನ್ಯ ಅಘೋರ್ಷ ಸಂಘರ್ಷ ವ್ಯಂಜನ ಧ್ವನಿಯನ್ನು ಬರೆಯುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಕಜ್ಜಿ > ಕಜಿಜ
ಗೊಜ್ಜು > ಗುಜುಜ

*ಟ್ಟ>

ಪದಮಧ್ಯ ಪರಿಸರದಲ್ಲಿ “ಟ್ಟ” ದ್ವಿತ್ವ ಧ್ವನಿ “ಟಿ” ಮೂರ್ಧನ್ಯ ಅಘೋಷ ಸ್ಪರ್ಷ ವ್ಯಂಜನ ಧ್ವನಿಯನ್ನು ಬರೆಯುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಅಟ್ಟಡವಿ > ಅಟಟಡವಿ
ಇಟ್ಟಿಗೆ > ಇಟಿಟಗೆ
ಕಟ್ಟು > ಕಟುಟ
ಗಟ್ಟಿ > ಗಟಿಟ

*ವ್ವ>

ಪದಮಧ್ಯ ಪರಿಸರದಲ್ಲಿ ‘ವ್ವ’ ದ್ವಿತ್ವ ಧ್ವನಿ ಬದಲು ‘ವ’ ಅರ್ಧಸ್ವರ ಅಘೋಷ ವ್ಯಂಜನ ಧ್ವನಿಯನ್ನು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಅವ್ವ > ಅವವ
ದೆವ್ವ > ದೆವವ

*ಣ್ಣ>

ಪದಮಧ್ಯ ಪರಿಸರದಲ್ಲಿ ‘ಣ್ಣ’ ದ್ವಿತ್ವ ಧ್ವನಿ ಬದಲು ‘ನ’ ದಂತ್ಯ ಅನುನಾಸಿಕ ವ್ಯಂಜನ ಧ್ವನಿಯನ್ನು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಅಣ್ಣ > ಅನ್ನ್ನ
ತಣ್ಣನೆ > ತನ್ನ್ನನೆ
ಅಣ್ಣಲೆ > ಅನ್ನಲೆ
ತಣ್ಣಗೆ > ತನಗೆ
ತಣ್ಣಗಾಗು > ತನಗಾಗು

*ಬ್ಬ >

ಪದಮಧ್ಯ ಪರಿಸರದಲ್ಲಿ “ಬ್ಬ” ದ್ವಿತ್ವ ಬದಲು “ಬ” ಧ್ವಯೋಷ್ಠ್ಯ ಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಬರೆಯುವ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಗಬ್ಬ > ಗಬಬ
ತಬ್ಬಲಿ > ತಬಬಲಿ
ಗುಬ್ಬಿ > ಗುಬಿಬ
ಗೊಬ್ಬರ > ಗೊಬಬರ

*೨. ಮೂಲಾಕ್ಷರಗಳನ್ನು ಹೋಲುವ ಒತ್ತಕ್ಷರ (ಅಕ್ಷರದ ತಲೆ ಕಟ್ಟಿಲ್ಲದ ರೂಪ)
ಕಿ, ಗಿ, ಚಿ, ಠಿ, ಡಿ, ಢಿ, ಫಿ, ಛಿ, ಥಿ, ದಿ, ಧಿ.

*ಕ್ಕ >

ಪದಮಧ್ಯ ಪರಿಸರದಲ್ಲಿ “ಕ್ಕ” ಸಂಯುಕ್ತಾಕ್ಷರ ಧ್ವನಿ ಬದಲು “ಕ” ಕಂಠ್ಯ ಅಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಬರೆಯುವ ವ್ಯತ್ಯಾಸವನ್ನು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಅಕ್ಕ > ಅಕಕ
ಕಕ್ಕಡ > ಕಕಡ

*ಕ್ಕ >

ಪದಮಧ್ಯ ಪರಿಸರದಲ್ಲಿ “ಕ್ಕ” ಸಂಯುಕ್ತಾಕ್ಷರ ಧ್ವನಿ ಬದಲು “ಖ” ಕಂಠ್ಯ ಅಘೋಷ ಸಂಘರ್ಷ ವ್ಯಂಜನ ಧ್ವನಿಯನ್ನು ಬರೆಯುವ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಚಕ್ಕಡಿ > ಚಖಡಿ 

*ಗ್ಗ >

ಪದಮಧ್ಯ ಪರಿಸರದಲ್ಲಿ “ಗ್ಗ” ಸಂಯುಕ್ತಾಕ್ಷರ ಧ್ವನಿ ಬದಲು “ಗ” ಕಂಠ್ಯ ಸ್ಪರ್ಶ ವ್ಯಂಜನ ಧ್ವನಿಯನ್ನು ಬರೆಯುವ ವ್ಯತ್ಯಾಸವನ್ನು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಅಗ್ಗ > ಅಗಗ
ಅಗ್ಗಿ > ಅಗಿಗ
ಒಗ್ಗಟ್ಟು > ಒಗಗಟು
ಗಗ್ಗರ > ಗಗರ

*ಚ್ಚ >

ಪದಮಧ್ಯ ಪರಿಸರದಲ್ಲಿ “ಚ್ಚ” ದ್ವಿತ್ವ ಧ್ವನಿ ಬದಲು “ಚ” ಅಲಿಜಿಹ್ವೀಯ ಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಬರೆಯುವ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಕಚ್ಚು > ಕಚುಚ
ನಿಚ್ಚಲ > ನಿಚಚಲ
ಉಚ್ಚರಿಸುವ > ಉಚಚರಿಸು

*ಠ್ಠ >

ಪದಮಧ್ಯ ಪರಿಸರದಲ್ಲಿ “ಠ್ಠ” ಒತ್ತಕ್ಷರ ಧ್ವನಿ ಬದಲು “ಟ”ಒತ್ತಕ್ಷರ ಧ್ವನಿಯನ್ನು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಗೋಷ್ಠಿ > ಗೊಟ
ಷೆಷ್ಟಿ > ಸಟ
ಕೋಷ್ಠ > ಕೊಟ
ಕೋಷ್ಠಗಾರ > ಕೊಟಗಾರ

*ಡ್ಡ >

ಪದಮಧ್ಯ ಪರಿಸರದಲ್ಲಿ “ಡ್ಡ” ದ್ವಿತ್ವ ಧ್ವನಿ ಬದಲು “ಡ”ಮೂರ್ಧನ್ಯ ಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಬರೆಯುವ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಗೋಷ್ಠಿ > ಅಡಡ
ಅಡ್ಡದಾರಿ > ಅಡಡದಾರಿ
ಕಡ್ಡಿ > ಕಡಿಡ
ಗೊಡ್ಡಿ > ಗೊಡಿಡ

*ತ್ತ>

ಪದಮಧ್ಯ ಪರಿಸರದಲ್ಲಿ “ತ್ತ” ದ್ವಿತ್ವ ಧ್ವನಿ ಬದಲು “ತ” ಅಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಬರೆಯುತ್ತಾರೆ. ಈಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಗೋಷ್ಠಿ > ಅತ
ಚಿತ್ತ > ಚಿತ
ಕತ್ತರೆ > ಕತರೆ

*ತ್ತ >

ಪದಮಧ್ಯ ಪರಿಸರದಲ್ಲಿ “ತ್ತ” ದ್ವಿತ್ವ ಧ್ವನಿ ಬದಲು “ಥ” ವರ್ತ್ಸ್ಯ ಅಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಕತ್ತೆ > ಕಥ
ಗುತ್ತಿಗೆ > ಗುಥಿಗೆ

*ದ್ದ >

ಪದಮಧ್ಯ ಪರಿಸರದಲ್ಲಿ “ದ್ದ” ದ್ವಿತ್ವ ಧ್ವನಿ ಬದಲು “ದ” ದಂತ್ಯ ಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಇದ್ದಲು > ಇದದಲಿ
ಉದ್ದ > ಉದದ

*ದ್ದ >

ಪದಮಧ್ಯ ಪರಿಸರದಲ್ಲಿ “ದ್ದ” ದ್ವಿತ್ವ ಧ್ವನಿ ಬದಲು “ದ” ದಂತ್ಯ ಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಗುದ್ದಲಿ > ಗುದದಲಿ
ಮದ್ದು > ಮದುದ
ಬುದ್ದಿ > ಬುದಿದ

*ಪ್ಪ >

ಪದಮಧ್ಯ ಪರಿಸರದಲ್ಲಿ “ಪ್ಪ” ದ್ವಿತ್ವ ಧ್ವನಿ ಬದಲು “ಪ” ಧ್ವಯೋಷ್ಠ್ಯ ಸ್ಪರ್ಶ ವ್ಯಂಜನ ಧ್ವನಿಯನ್ನು ಓದುತ್ತಾರೆ ಮತ್ತು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹ ರೂಪ

ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ

ಅಪ್ಪಟ > ಅಪಪಟ
ಅಪ್ಪಣೆ > ಅಪಪಣೆ
ಅಪ್ಪು > ಅಪುಪ
ಚಪ್ಪಲಿ > ಚಪಪಲಿ
ಚಪ್ಪರ > ಚಪಪರ