ಓದು ಮತ್ತು ಬರವಣಿಗೆಯಲ್ಲಿ ವ್ಯಂಜನಗಳು

*ಪದಾದಿ ಮತ್ತು ಪದಮಧ್ಯ ಪರಿಸರದಲ್ಲಿ ಅಘೋಷ ಸಂಘರ್ಷ ವ್ಯಂಜನ ಧ್ವನಿಯಾದ ‘ಖ’ ಬದಲು ಅಲಿಜಿಹ್ವೀಯ ಅಘೋಷ ಸಂಘರ್ಷ ವ್ಯಂಜನ ಧ್ವನಿ ‘ಖ’ ಓದುತ್ತಾರೆ ಮತ್ತು ಬರೆಯುತ್ತಾರೆ. ಈ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುವರು.

ಖಡಿಬೋಲಿ > ಖಡಿಬೋಲಿ        ನಿಖಾ> ನಿಖಾ
ಖಗ> ಖಗ ಖೂನಿ> ಖೂನಿ ದಾಖಲ್> ದಾಖಲ್
ಖರ್ಚು> ಖರ್ಚು ಖಲೀಫ್> ಖಲೀಪ್ ಪಾಯಖಾನೆ> ಪಾಯಖಾನೆ
ಖಾಲಿ> ಖಾಲಿ    

ಮೇಲಿನ ವ್ಯತ್ಯಾಸಕ್ಕೆ ಉರ್ದುಭಾಷೆಯಲ್ಲಿ ‘ಖ’ ಮತ್ತು ‘ಖ’ ಎರಡು ಧ್ವನಿಗಳಿದ್ದರೂ, ‘ಖ’ ಧ್ವನಿಯನ್ನೇ ಹೆಚ್ಚಿನ ಪ್ರಮಾಣದಲ್ಲಿ ಈ ಎಲ್ಲ ತರಗತಿ ಮಕ್ಕಳು ಓದುವರು ಮತ್ತು ಬರೆಯುವರು.

*ಪದಾದಿ ಮತ್ತು ಪದಮಧ್ಯ ಪರಿಸರದಲ್ಲಿ ಕಂಠ್ಯ ಅಘೋಷ, ಸ್ಪರ್ಶ ವ್ಯಂಜನ ಧ್ವನಿಯಾದ ‘ಕ’ ಬದಲು ಕಂಠ್ಯ ಮಹಾಪ್ರಾಣ ಸಂಘರ್ಷ ವ್ಯಂಜನ ಧ್ವನಿಯಾದ ‘ಖ’ ಧ್ವನಿಯನ್ನೇ ಎಲ್ಲ ತರಗತಿಯ ಮಕ್ಕಳು ಓದುತ್ತಾರೆ.

ಪದಾದಿ ಪರಿಸರ

ಕದನ > ಖದನ ಚಕಿತ > ಚಖಿತ
ಕನಸು > ಖನಸು ಚಕಾರ > ಚಖಾರ
ಕಥೆ > ಖತೆ  
ಕಡಗ > ಖಡಗ  
ಕಣ > ಖಣ  
ಕರಗ > ಖರಗ  
ಕಚೇರಿ > ಖಚೇರಿ  

ಮೇಲಿನ ವ್ಯತ್ಯಾಸಕ್ಕೆ ‘ಕ’ ಮತ್ತು ‘ಖ’ ನಡುವಿನ ಸಾಮ್ಯ ಉಚ್ಚಾರಣೆಯ ಗೊಂದಲದಿಂದ ಈ ತೆರನಾದ ವ್ಯತ್ಯಾಸವಾಗಿ ಓದುವರು ಮತ್ತು ಬರವಣಿಗೆ ಮಾಡುವರು.

*ಪದಾದಿ ಪರಿಸರದಲ್ಲಿ ಕಂಠ್ಯಘೋಷ ಸ್ಪರ್ಶ ವ್ಯಂಜನ ಧ್ವನಿಯಾದ ‘ಗ’ ಬದಲು ಕಂಠ್ಯಅಘೋಷ ಸ್ಪರ್ಶ ವ್ಯಂಜನ ಧ್ವನಿಯಾದ ‘ಕ’ನ್ನು ಓದುತ್ತಾರೆ. ಈ ಧ್ವನಿ ವ್ಯತ್ಯಾಸವನ್ನು ೩ ಮತ್ತು ೪ನೇ ತರಗತಿ ಮಕ್ಕಳು ಮಾತ್ರ ಮಾಡುತ್ತಾರೆ.

ಪದಾದಿ ಪರಿಸರ

ಗಲೀಜ್ > ಕಲೀಜ್.

ಉರ್ದುಭಾಷೆಯಲ್ಲಿ ‘ಕ’ ಹೆಚ್ಚು ಬಳಕೆಯಲ್ಲಿದೆ. ಜತೆಗೆ ಉರ್ದುಭಾಷೆಯಲ್ಲಿ ಈ ಎರಡು ಧ್ವನಿಗಳು ಸ್ವಚ್ಚಂಧ ಪರಿಸರದಲ್ಲಿ ಬಳಕೆಯಲ್ಲಿವೆ.

*ಪದಾದಿ ಪರಿಸರದಲ್ಲಿ ಕಂಠ್ಯ ಸ್ಪರ್ಶ ವ್ಯಂಜನ ‘ಗ’ ಧ್ವನಿಗೆ ಬದಲು ಅಲಿಜಿಹ್ವೆಯ ಘೋಷ ಸ್ಪರ್ಶ ವ್ಯಂಜನ ಧ್ವನಿಯಾದ ‘ಘ’ನ್ನು ಓದುವರು. ಅದೇ ರೀತಿ ಅಲಿ ಜಿಹ್ವೀಯ ಘೋಷ ಸ್ಪರ್ಶ ವ್ಯಂಜನ ‘ಘ’ ಧ್ವನಿಗೆ ಬದಲಾಗಿ ಕಂಠ್ಯ ಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಓದುತ್ತಾರೆ. ಈ ಕ್ರಮವನ್ನು ಇಂಗ್ಲಿಶ್‌ನಲ್ಲಿ ‘Mirror image Rule’ ಎಂದು ಕರೆಯುವರು. ಈ ಮಾದರಿ ವ್ಯತ್ಯಾಸವನ್ನು ಎಲ್ಲಾ ತರಗತಿಯ ಮಕ್ಕಳು ಮಾಡುವರು.

ಪದಾದಿ ಪರಿಸರ ಪದಮಧ್ಯ ಪರಿಸರ
> ಬಂಗಾರ > ಬಂಘಾರ
ಗಗನ > ಘಘನ ಭಂಗಿ > ಬಂಘಿ
ಗರಗಸ > ಘರಘಸ  
ಗರ್ವ > ಘರ್ವ  
ಗಂಭೀರ > ಘಂಭೀರ  
ಗಾಬರಿ > ಘಬರಿ  
>  
ಘಂಟೆ > ಗಂಟೆ  
ಘಟನೆ > ಗಟನೆ  
ಘಮಘಮ > ಗಮಗಮ  
ಘಳಿಗೆ > ಗಳಿಗೆ  
ಘೋಷಣೆ > ಗೋಷಣೆ  

ಉರ್ದು ಭಾಷೆಯಲ್ಲಿ ಅರಬ್ಬೀ ಭಾಷೆಯ ಪದಗಳು ಹೆಚ್ಚು ಬಳಕೆಯಲ್ಲಿವೆ. ಈ ಹಿನ್ನಲೆ ಯಿಂದ ಉರ್ದುಭಾಷಿಕ ಮಕ್ಕಳು ಕಂಠ್ಯಘೋಷ ಸ್ಪರ್ಶವ್ಯಂಜನ ‘ಗ’ ಬದಲು ಅಲಿಜಿಹ್ವೇಯ ಘೋಷ ಸ್ಪರ್ಶವ್ಯಂಜನ ‘ಘ’ ಧ್ವನಿಯನ್ನು ಓದುತ್ತಾರೆ. ಕೆಲವು ಸಂದರ್ಭದಲ್ಲಿ ಇದಕ್ಕೆ ವಿರುದ್ಧವಾಗಿ ಓದುತ್ತಾರೆ. ಅಂದರೆ ‘ಗ’ ಧ್ವನಿಗೆ ಬದಲು ‘ಘ’ ಧ್ವನಿ ಓದುವ ಮಕ್ಕಳು ತಮ್ಮ ಮನೆ ಮಾತಿನಿಂದ ಪೂರಕವಾಗಿ ಬಿಡುಗಡೆ ಹೊಂದದೆ ಈ ರೀತಿ ವ್ಯತ್ಯಾಸಗಳನ್ನು ಮಾಡಿದರೆ; ನಮ್ಮ ಮನೆಮಾತಿನಿಂದ ಬಿಡುಗಡೆ ಹೊಂದಿರುವ ಉರ್ದು ಮಕ್ಕಳು ‘ಘ’ ಧ್ವನಿಗೆ ಬದಲು ‘ಗ’ ಧ್ವನಿಯನ್ನು ಓದುತ್ತಾರೆ.

*ಪದಾದಿ ಪರಿಸರದಲ್ಲಿ ವರ್ತ್ಸ್ಯಘೋಷ ಸ್ಪರ್ಶ ವ್ಯಂಜನ ಧ್ವನಿಯಾದ ‘ಜ’ ಬದಲು ದಂತ್ಯ ವರ್ತ್ಸ್ಯ ಘರ್ಷಘೋಷ ‘ಜ’ ಧ್ವನಿಯಾಗಿ ಎಲ್ಲ ತರಗತಿಯ ಮಕ್ಕಳು ಓದುತ್ತಾರೆ. ಆದರೆ ಬರವಣಿಗೆಯಲ್ಲಿ ಮಾತ್ರ ‘ಜ’ ಧ್ವನಿಯನ್ನೇ ಬರೆಯುತ್ತಾರೆ.

ಪದಾದಿ ಪರಿಸರ

ಜಪ್ತಿ > ಜಪ್ತಿ ಜಯಂತಿ > ಜಯಂತಿ
ಈಜ್ > ಈಜ್ ಜನಮನ > ಜನಮನ
ಜಮ್‌ಖಾನ್ > ಜಮ್‌ಖಾನ್ ಜಗಳ > ಜಗಳ
ಜಮ > ಜಮ ಜನ > ಜನ
ಜಾಮೀನು > ಜಾಮೀನ್ ಜಠರ > ಜಠರ
ಬಜಾರು > ಬಜಾರ್ ಜಾಣ > ಜಾದ
ಗಲೀಜು > ಕಲೀಜ್ ಜಾತ್ರೆ > ಜಾತ್ರೆ
ಜಮಾಯಿಸು > ಜಮಾಯಿಸು ಜಿಗಿ > ಜಿಗಿ
ಜವಾನ > ಜವಾನ್  

ಉರ್ದುಭಾಷೆಯಲ್ಲಿ ‘ಖ’, ‘ಖ’ ಮತ್ತು ‘ಜ್’, ‘ಜ’ ಎಂಬ ನಾಲ್ಕು ಧ್ವನಿಗಳು ಉಚ್ಚಾರಣೆಯಲ್ಲಿವೆ. ಈ ಹಿನ್ನೆಲೆಯಿಂದ ಉರ್ದುಭಾಷಿಕರಲ್ಲಿ ಖ ಮತ್ತು ಜ ಧ್ವನಿಗಳು ಹೆಚ್ಚು ವ್ಯಾಪಕವಾಗಿ ಬಳಕೆಯಲ್ಲಿರುವುದರಿಂದ ಉರ್ದುಭಾಷಿಕರ ಮಕ್ಕಳು ಈ ಮಾದರಿ ವ್ಯತ್ಯಾಸವನ್ನು ಮಾಡುವರು.

* ಪದಾದಿ ಮತ್ತು ಪದ ಮಧ್ಯ ಪರಿಸರದಲ್ಲಿ ಮೂರ್ಧನ್ಯ ಅಘೋಷ ಸಂಘರ್ಷ ವ್ಯಂಜನ ‘ಠ’ ಧ್ವನಿಗೆ ಬದಲು ಮೂರ್ಧನ್ಯ ಅಘೋಷ ಸ್ಪರ್ಶ ವ್ಯಂಜನ ಧ್ವನಿಯಾ ‘ಟ’ನ್ನು ಓದುತ್ತಾರೆ ಮತ್ತು ಬರೆಯುತ್ತಾರೆ. ಈ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುವರು.

ಪದಾದಿ ಪರಿಸರ ಪದಮಧ್ಯ ಪರಿಸರ
ಠಣ > ಟನ ಪಾಠ > ಪಾಟ
ಠಾವು > ಟಾವು ಜಠರ > ಜಟರ
ಠಸ್ಸೆ > ಟಸ್ಸೆ ಮಿಠಾಯಿ > ಮಿಟಾಯಿ

ಮೇಲಿನ ವ್ಯತ್ಯಾಸಕ್ಕೆ ಕಾರಣ ಈ ಎರಡು ಧ್ವನಿಗಳ ಸಾಮತ್ಯೆಯ ಉಚ್ಚಾರಣೆಯ ಗೊಂದಲದಿಂದ ಉಂಟಾಗುವ ವ್ಯತ್ಯಾಸಗಳಾಗಿವೆ. ಉರ್ದುಭಾಷೆಯಲ್ಲಿ ಈ ಎರಡು ಪ್ರತ್ಯೇಕವಾದ ಧ್ವನಿಗಳಾಗಿವೆ.

*ಪದಾದಿ ಮತ್ತು ಪದಮಧ್ಯ ಪರಿಸರದಲ್ಲಿ ಮೂರ್ಧನ್ಯಸ್ಪರ್ಶ ಘೋಷ ಧ್ವನಿಯಾದ ‘ಡ’ಗೆ ಬದಲಾಗಿ ದಂತ್ಯಸ್ಪರ್ಶ ಘೋಷ ‘ದ’ ಧ್ವನಿಯಾಗಿ ಎಲ್ಲ ತರಗತಿಯ ಮಕ್ಕಳು ಓದುತ್ತಾರೆ.

ಪದಾದಿ ಪರಿಸರ ಪದಮಧ್ಯ ಪರಿಸರ
ಡಬರಿ > ದಬರಿ ಕಡಲೆ > ಕದಲೆ
ಡಮರು > ದಮರು ದಾಂಡಿಗ > ದಾಂದಿಗ
ಡಿಸೆಂಬರ್ > ದಿಸೆಂಬರು  

ಈ ಮೇಲಿನ ವ್ಯತ್ಯಾಸಕ್ಕೆ ಕಾರಣ ಉರ್ದುಭಾಷೆಯಲ್ಲಿ ಪದಮಧ್ಯ ಪರಿಸರದಲ್ಲಿ ಮೂರ್ಧನ್ಯ ಸ್ಪರ್ಶ ಘೋಷ ಧ್ವನಿ ಕಂಡುಬರುವುದಿಲ್ಲ. ಅದರ ಬದಲು ದಂತ್ಯಘೋಷ ಸ್ಪರ್ಶ ಧ್ವನಿಯಾ ‘ದ’ ನಿರ್ವಹಿಸುತ್ತದೆ. ಈ ಹಿನ್ನಲೆಯಿಂದ ಉರ್ದುಭಾಷಿಕ ಮಕ್ಕಳು ‘ದ’ ಧ್ವನಿಯನ್ನು ಓದುತ್ತಾರೆ.

*ಪದಮಧ್ಯ ಪರಿಸರದಲ್ಲಿ ಮೂರ್ಧನ್ಯ ಅನುವಾಸಿಕ ಧ್ವನಿಯಾದ ‘ಣ’ಗೆ ಬದಲು ದಂತ್ಯ ಅನುನಾಸಿಕ ಧ್ವನಿಯಾದ ‘ನ’ವಾಗಿ ಎಲ್ಲ ತರಗತಿಯ ಮಕ್ಕಳು ಓದುತ್ತಾರೆ.

ಪದಮಧ್ಯ ಪರಿಸರ

ಜಾಣೆ > ಜಾನೆ

ಬಣ್ಣ > ಬನ್ನ

ಕಣ > ಕನ

ಕುಣಿ > ಕುನಿ

ಔತಣ > ಅವ್‌ತನ

ಕಣ್ಣು > ಕನ್ನು.

ಏಕೆ ಉರ್ದು ಭಾಷಿಕ ಮಕ್ಕಳು ಈ ಮಾದರಿ ವ್ಯತ್ಯಾಸ ಮಾಡಿ ಓದುತ್ತಾರೆ. ಅಂದರೆ ಉರ್ದುಭಾಷೆಯಲ್ಲಿ ಮೂರ್ಧನ್ಯ ಅನುನಾಸಿಕ ಧ್ವನಿಯಾದ ‘ಣ’ ಕಂಡುಬರುವುದಿಲ್ಲ. ಅದರ ಕೆಲಸವನ್ನು ದಂತ್ಯ ಅನುನಾಸಿಕ ಧ್ವನಿ ‘ನ’ ನಿರ್ವಹಿಸುತ್ತದೆ.

*ಪದಾದಿ ಪರಿಸರದಲ್ಲಿ ಮೂರ್ಧನ್ಯ ಮಹಾಪ್ರಾಣ ಧ್ವನಿಯಾದ ‘ಢ’ಗೆ ಬದಲಾಗಿ ಮೂರ್ಧನ್ಯ ಘೋಷ ಧ್ವನಿಯಾದ ‘ಡ’ಯಾಗಿ ಎಲ್ಲಾ ತರಗತಿಯ ಮಕ್ಕಳು ಓದುತ್ತಾರೆ.

ಪದಾದಿ ಪರಿಸರ

ಢಣಢಣ > ಡನಡನ

ಈ ವ್ಯತ್ಯಾಸಕ್ಕೆ ಪ್ರಮುಖವಾದ ಕಾರಣ ಈ ಎರಡು ಧ್ವನಿಗಳ ನಡುವೆ ಇರುವ ಅಲ್ಪ ಸಾಮ್ಯತೆ ಎಂದು ಊಹಿಸಬಹುದಾಗಿದೆ.

* >

ಪದಮಧ್ಯ ಪರಿಸರದಲ್ಲಿ ಮೂರ್ಧನ್ಯ ಅನುನಾಸಿಕ ‘ಣ’ ಧ್ವನಿ ಬದಲು ದಂತ್ಯ ಪಾರ್ಶ್ವಿಕ ವ್ಯಂಜನ ‘ಲ’ ಧ್ವನಿಯನ್ನು ಓದುತ್ತಾರೆ.

ಗಿಣೆ > ಗಿಲಿ
ಕಣೆ > ಕಲಿ
ಸರಪಣಿ >ಸರಪಲಿ

ಈ ವ್ಯತ್ಯಾಸಕ್ಕೆ ಪ್ರಮುಖವಾದ ಕಾರಣ ಉರ್ದುಭಾಷೆಯಲ್ಲಿ ಮೂರ್ಧನ್ಯ ಅನುನಾಸಿಕ ಧ್ವನಿಯಾದ ‘ಣ’ ಇಲ್ಲದೆ ಇರುವುದರಿಂದ ಅದರ ಕೆಲಸವನ್ನು ದಂತ್ಯ ಅನುನಾಸಿಕ ‘ನ’ ಮತ್ತು ದಂತ್ಯ ಪಾರ್ಶ್ವಿಕ ಧ್ವನಿಯಾದ ‘ಲ’ ಧ್ವನಿಗಳೆರಡು ನಿರ್ವಹಿಸುತ್ತವೆ.

*ಪದಾದಿ ಪರಿಸರದಲ್ಲಿ ತಾಲವ್ಯ ಘೋಷ ಅನುಘರ್ಷ ವ್ಯಂಜನ ‘ಜ’ ಧ್ವನಿ ಬದಲಾಗಿ ವರ್ತ್ಸ್ಯ ಅಘೋಷ ಸಂಘರ್ಷ ವ್ಯಂಜನ ಧ್ವನಿಯಾದ ‘ಝ’ ಧ್ವನಿಯನ್ನು ಓದುತ್ತಾರೆ. ಈ ವ್ಯತ್ಯಾಸವನ್ನು ಎಲ್ಲಾ ತರಗತಿಯ ಮಕ್ಕಳು ಮಾಡುತ್ತಾರೆ.

ಜಗಳ > ಝಗಲ

ಜಲ > ಝಲ

ಜನರು > ಝನರು

ಏಕೆ ಈ ಮಾದರಿ ವ್ಯತ್ಯಾಸವನ್ನು ಮಾಡುತ್ತಿದ್ದಾರೆ ಎಂದರೆ ಉರ್ದು ಭಾಷೆಯಲ್ಲಿ ಮೂರ್ಧನ್ಯ ಘೋಷ ಸಂಘರ್ಷ ವ್ಯಂಜನ ‘ಜ’ ಎಂದು ಭಾವಿಸಿಕೊಂಡು ತಾಲವ್ಯ ಘೋಷ ಅನುಘರ್ಷ ವ್ಯಂಜನ ಧ್ವನಿ ‘ಜ’ ಧ್ವನಿ ಬದಲು ವರ್ತ್ಸ್ಯ ಅಘೋಷ ಸಂಘರ್ಷ ವ್ಯಂಜನ ಧ್ವನಿಯಾದ ‘ಝ’ ಎಂದು ಓದುತ್ತಾರೆ.

*ಪದಾದಿ ಪರಿಸರದಲ್ಲಿ ತಾಲವ್ಯ ಅಘೋಷ ಸಂಘರ್ಷ ವ್ಯಂಜನ ‘ಛ’ ಧ್ವನಿಗೆ ಬದಲು ತಾಲವ್ಯ ಅಘೋಷ ಸ್ಪರ್ಶ ವ್ಯಂಜನ ‘ಚ’ ಧ್ವನಿಯಾಗಿ ಓದುತ್ತಾರೆ.

ಛಲ > ಚಲ

ಛತ್ರ > ಚತ್ರ

ಕಾರಣ ಈ ಎರಡು ಧ್ವನಿಗಳ ನಡುವೆ ಇರುವ ಉಚ್ಚಾರಣೆಯ ಸಾಮ್ಯತೆಯಿಂದ ಈ ಮಾದರಿ ವ್ಯತ್ಯಾಸವನ್ನು ಮಾಡುತ್ತಾರೆ. ಆದರೆ ಉರ್ದುಭಾಷೆಯಲ್ಲಿ ಮಹಾಪ್ರಾಣ ಧ್ವನಿ ಯಾದ ‘ಛ’ ಹೆಚ್ಚಾಗಿ ಬಳಕೆಯಲ್ಲಿದೆ. ವಾಸ್ತವವಾಗಿ ಉರ್ದುಭಾಷಿಕ ಮಕ್ಕಳು ‘ಚ’ ಧ್ವನಿ ಬದಲಾಗಿ ‘ಛ’ ಧ್ವನಿ ಓದಬೇಕಾಗಿತ್ತು. ಮೇಲಿನ ವ್ಯತ್ಯಾಸ ಉಂಟಾಗಿರುವುದು ಕನ್ನಡಿಗರ ಉಚ್ಚಾರಣೆಯ ಪ್ರಭಾವದಿಂದ ಎಂದು ಊಹಿಸಬಹುದು.

*ಪದಾದಿ ಮತ್ತು ಪದಮಧ್ಯ ಪರಿಸರದಲ್ಲಿ ತಾಲವ್ಯ ಅಘೋಷ ಸ್ಪರ್ಶವ್ಯಂಜನ ‘ಚ’ ಧ್ವನಿ ಬದಲು ವರ್ತ್ಸ್ಯ ಅಘೋಷ ಸಂಘರ್ಷ ವ್ಯಂಜನ ‘ಸ’ ಧ್ವನಿಯನ್ನು ಓದುತ್ತಾರೆ. ಈ ವ್ಯತ್ಯಾಸವನ್ನು ಎಲ್ಲಾ ತರಗತಿಯ ಮಕ್ಕಳು ಮಾಡುತ್ತಾರೆ. ಉರ್ದುಭಾಷಿಕ ಮಕ್ಕಳು ‘ಚ’ ಕಾರಕ್ಕೆ ‘ಸ’ ಕಾರವಾಗಿ ಓದುವುದು ಮೂಲ ಅಕ್ಷರದಲ್ಲಿ ಅಲ್ಲ ಗುಣಿತಾಕ್ಷರ ಮತ್ತು ಒತ್ತಕ್ಷರದಲ್ಲಿ.

ಪದಾದಿ ಪರಿಸರ ಪದಮಧ್ಯ ಪರಿಸರ
ಚೀಲ > ಸೀಲ ಕುರ್ಚಿ > ಕುರ್ಸಿ
ಚಿಲಕ > ಸಿಲಕ ಪರ್ಚು > ಪರ್ಸು
  ಕಿರ್ಚು > ಕಿರ್ಸು

ಉರ್ದುಭಾಷೆ ಹಿಂದಿ ಭಾಷೆಯಿಂದ ಪದಗಳನ್ನು ಸ್ವೀಕರಣ ಮಾಡಿಕೊಂಡಿರುವುದರಿಂದ ‘ಚ’ ದ್ವಿತ್ವದಿಂದ ಕೂಡಿರುವ ಪದಗಳನ್ನು ‘ಸ’ಕಾರವಾಗಿ ಉಚ್ಚಾರಣೆ ಮಾಡುವುದು ವಿಶಿಷ್ಟ. ಕನ್ನಡದಲ್ಲಿ ‘ಚ’ಕಾರಕ್ಕೆ ‘ಸ’ಕಾರ ಬಳಕೆ ಮಾಡುವುದು ಸ್ವಚ್ಛಂದ ಪರಿಸರದಲ್ಲಿ ಮಾತ್ರ. ಜತೆಗೆ ‘ಚ’ಕಾರಕ್ಕೆ ‘ಸ’ಕಾರ ಬಳಕೆ ದ್ರಾವಿಡ ಭಾಷೆಗಳ ವೈಶಿಷ್ಟ್ಯಗಳಲ್ಲಿ ಇದು ಒಂದು. ಈ ಹಿನ್ನಲೆಯಿಂದ ಓದುವಾಗ ಈ ಮಾದರಿ ವ್ಯತ್ಯಾಸವನ್ನು ಮಾಡುತ್ತಾರೆ.

*ಪದಾದಿ ಪರಿಸರದಲ್ಲಿ ದ್ವೆಯೋಷ್ಠ್ಯ ಅಘೋಷ ಸ್ಪರ್ಶ ವ್ಯಂಜನ ‘ಪ’ ಮತ್ತು ಮಹಾಪ್ರಾಣ ಧ್ವನಿಯಾದ ‘ಫ’ ಧ್ವನಿಗೆ ಬದಲು ಅಲಿಜಿಹ್ವೀಯ ಅಘೋಷ ಸ್ಪರ್ಶ ವ್ಯಂಜನ ‘ಫ’ ಧ್ವನಿಯಾಗಿ ಓದುವರು.

ಪಾಠ > ಫಾಟ

ಪದ್ಯ > ಫದ್ಯ

ಪದಕ > ಫದಕ

ಫಲ > ಫಲ

ಫಲಕ > ಫಲಕ

ಫಸಲು > ಫಸಲು

ಏಕೆ ಈ ವ್ಯತ್ಯಾಸ ಮಾಡಿ ಓದುತ್ತಾರೆ ಎಂದರೆ ಉರ್ದುಭಾಷೆಯಲ್ಲಿ ಅಲಿಜಿಹ್ವೀಯ ಅಘೋಷ ಸ್ಪರ್ಶ ವ್ಯಂಜನ ‘ಫ’ ಧ್ವನಿ ಇರುವುದರಿಂದ ಇದರ ಪ್ರಭಾವದಿಂದ ‘ಪ’ ಮತ್ತು ‘ಫ’ ಧ್ವನಿಗಳಿಗೆ ಬದಲು ‘ಫ’ ಧ್ವನಿಯನ್ನು ಓದುತ್ತಾರೆ.

*ಪದಾದಿ ಪರಿಸರದಲ್ಲಿ ದ್ವೆಯೋಷ್ಠ್ಯ ಘೋಷ್ ಸ್ಪರ್ಶಧ್ವನಿ ‘ಬ’ಗೆ ಬದಲು ದಂತೋಷ್ಠ್ಯ ಅರ್ಧಸ್ವರ ವ್ಯಂಜನ ‘ವ’ ಧ್ವನಿಯಾಗಿ ಓದುವರು. ಹಾಗೆಯೇ ಹೆಚ್ಚಿನ ಪ್ರಮಾಣದಲ್ಲಿ ‘ವ’ ಧ್ವನಿಗೆ ಬದಲು ‘ಬ’ ಧ್ವನಿಯಾಗಿ ಓದುವರು. ಕಾರಣ ಈ ಎರಡು ಧ್ವನಿಗಳು ಅಲ್ಪ ರಚನೆಯ ಸಾಮ್ಯತೆಯ ಗೊಂದಲದಿಂದ ಈ ವ್ಯತ್ಯಾಸವನ್ನು ಮಾಡುತ್ತಾರೆ.

ವನ > ಬನ

ವರ > ಬರ

ವಚನ > ಬಚನ

*ಪದಮಧ್ಯ ಪರಿಸರದಲ್ಲಿ ಮೂರ್ಧನ್ಯ ಪಾರ್ಶ್ವಿಕ ವ್ಯಂಜನ ಧ್ವನಿ ‘ಳ’ ಧ್ವನಿಗೆ ಬದಲು ದಂತ್ಯ ಪಾರ್ಶ್ವಿಕ ವ್ಯಂಜನ ‘ಲ’ ಧ್ವನಿಯನ್ನು ಓದುತ್ತಾರೆ.

ಜಗಳ > ಜಗಲ

ಬಹಳ > ಬಅಲ

ಹವಳ > ಅವಲ

ಮೇಲಿನ ಉದಾಹರಣೆಗಳನ್ನು ಗಮನಿಸಿದಾಗ ಉರ್ದುಭಾಷೆಯಲ್ಲಿ ಮೂರ್ಧನ್ಯ ಪಾರ್ಶ್ವಿಕ ವ್ಯಂಜನ ‘ಳ’ ಧ್ವನಿ ಬಳಕೆಯಲ್ಲಿ ಇಲ್ಲ. ಇದರ ಕೆಲಸವನ್ನು ದಂತ್ಯ ಪಾರ್ಶ್ವಿಕ ವ್ಯಂಜನ ‘ಲ’ ಧ್ವನಿ ನಿರ್ವಹಿಸುತ್ತದೆ. ಈ ಹಿನ್ನಲೆಯಿಂದ ಬಂದ ಉರ್ದುಭಾಷಿಕ ಮಕ್ಕಳು ‘ಳ’ ಧ್ವನಿಗೆ ಬದಲು ‘ಲ’ ಧ್ವನಿಯನ್ನು ಓದುವರು.

*ಪದಾದಿ ಮತ್ತು ಪದಮಧ್ಯ ಪರಿಸರದಲ್ಲಿ ಕಾಕಲ್ಯ ಘೋಷ ಸಂಘರ್ಷ ವ್ಯಂಜನ ‘ಹ’ ಧ್ವನಿಗೆ ಬದಲಾಗಿ ನಿಮ್ನಕೇಂದ್ರ ಅಗೋಳ ಹ್ರಸ್ವ ಸ್ವರವಾದ ‘ಅ’ ಧ್ವನಿಯನ್ನು ಓದುತ್ತಾರೆ. ಈ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುವರು. ಕಾರಣ ಈ ಎರಡು ಧ್ವನಿಗಳ ನಡುವೆ ಇರುವ ಅಲ್ಪ ಧ್ವನಿ ಸಾಮ್ಯತೆಯ ಗೊಂದಲದಿಂದ ಈ ಮಾದರಿ ವ್ಯತ್ಯಾಸ ಮಾಡುವರು.

ಪದಾದಿ ಪರಿಸರ ಪದಮಧ್ಯ ಪರಿಸರ
ಹಣ > ಅನ ಕಲಹ > ಕಲಅ.
ಹರ > ಅರ ತರಹ > ತರಅ.
ಹಠ > ಅಠ ಮಹಾ > ಮಅ
ಹಾಕು > ಆಕು ಚಹ > ಚಅ
ಹಾರು > ಆರು  
ಹಾಲು > ಆಲು  

*ಪದಾದಿ ಮತ್ತು ಪದ ಮಧ್ಯ ಪರಿಸರದಲ್ಲಿ ಮೂರ್ಧನ್ಯ ಅಘೋಷ ಸಂಘರ್ಷ ವ್ಯಂಜನ ‘ಷ’ ಧ್ವನಿಗೆ ಬದಲು ವರ್ತ್ಸ್ಯಅಘೋಷ ವ್ಯಂಜನ ‘ಸ’ ಧ್ವನಿಯನ್ನು ಓದುತ್ತಾರೆ. ಈವೊಂದು ವ್ಯತ್ಯಾಸವನ್ನು ಎಲ್ಲಾ ತರಗತಿಯ ಮಕ್ಕಳು ಮಾಡುತ್ತಾರೆ.

ಪದಾದಿ ಪರಿಸರ ಪದಮಧ್ಯ ಪರಿಸರ
ಷಷ್ಠಿ > ಸಸ್ಟಿ ವಿಷಯ > ಇಸಯ
  ಕಷಾಯ > ಕಸಾಯ
  ಔಷಧ > ಅವ್‌ಸದ

ಉರ್ದುಭಾಷೆಯಲ್ಲಿ ಮೂರ್ಧನ್ಯ ಅಘೋಷ ಸಂಘರ್ಷ ವ್ಯಂಜನ ‘ಷ’ ಧ್ವನಿ ಬಳಕೆಯಲ್ಲಿ ಇಲ್ಲ. ಅದಕ್ಕೆ ಬದಲಾಗಿ ವರ್ತ್ಸ್ಯ ಅಘೋಷ ಸಂಘರ್ಷ ವ್ಯಂಜನ ‘ಸ’ ವನ್ನು ಓದುತ್ತಾರೆ. ಈ ಹಿನ್ನಲೆಯಿಂದ ಈ ಮಾದರಿ ವ್ಯತ್ಯಾಸಕ್ಕೆ ಅವರ ಮನೆಮಾತೆ ಕಾರಣ.

*ಪದಾದಿ ಪರಿಸರದಲ್ಲಿ ದಂತೋಷ್ಠ ಅರ್ಧಸ್ವರ ಧ್ವನಿಯಾದ ‘ವ’ ಕಾರಕ್ಕೆ ಬದಲಾಗಿ ಮಧ್ಯ ಪಶ್ಚ ಅಗೋಳ ದೀರ್ಘ ಸ್ವರ ‘ಓ’ ಧ್ವನಿಯನ್ನು ಓದುತ್ತಾರೆ. ಈ ವ್ಯತ್ಯಾಸವನ್ನು ಎಲ್ಲಾ ತರಗತಿಯ ಮಕ್ಕಳು ಮಾಡುವರು.

ಪದಾದಿ ಪರಿಸರ

ವನ > ಓನ

ವಚನ > ಓಚನ

ವಹಿಸು > ಓಇಸು

ಮೇಲಿನ ಉದಾಹರಣೆಗಳನ್ನು ಗಮನಿಸಿದಾಗ ಒಂದು ವ್ಯಂಜನಕ್ಕೆ ಬದಲು ಮತ್ತೊಂದು ಸ್ವರವನ್ನು ಓದುತ್ತಾರೆ. ಕಾರಣ ಇವುಗಳ ನಡುವೆ ಇರುವ ಅಲ್ಪ ಧ್ವನಿ ಸಾಮ್ಯತೆ. ಮಧ್ಯ ಪಶ್ಚ ಅಗೋಳ ಹ್ರಸ್ವಸ್ವರ ಧ್ವನಿ ಬಳಕೆಯಲ್ಲಿ ಇಲ್ಲ ಎನ್ನುವುದನ್ನು ಸ್ವರಗಳ ನೆಲೆಯಲ್ಲಿ ಚರ್ಚಿಸಲಾಗಿದೆ. ವಿಶೇಷವಾಗಿ ಒಂದು ವ್ಯಂಜನಕ್ಕೆ ಬದಲಾಗಿ ಸ್ವರವನ್ನು ಓದುತ್ತಿರುವುದು ಗಮನಿಸುವಂತಹ ಅಂಶವಾಗಿದೆ.

ಪದಾದಿ ಪರಿಸರದಲ್ಲಿ ಎರಡು ಧ್ವನಿಗಳ ನಡುವೆ ಇರುವ ಅಲ್ಪ ಸಾಮ್ಯತೆಯ ಗೊಂದಲದಿಂದ ಒಂದು ಧ್ವನಿಗೆ ಬದಲು ಮತ್ತೊಂದು ಧ್ವನಿಯನ್ನು ಓದುತ್ತಾರೆ. ‘ಮ’ ಧ್ವನಿಗೆ ಬದಲು ‘ವ’ ಧ್ವನಿಯನ್ನು ‘ವ’ ಧ್ವನಿಗೆ ಬದಲು ‘ಮ’ ಧ್ವನಿಯನ್ನು ಓದುವರು. ಹಾಗೆಯೇ ‘ಮ’ ಧ್ವನಿಗೆ ಬದಲು ‘ಯ’ ಧ್ವನಿಯನ್ನು ‘ಯ’ ಧ್ವನಿಗೆ ಬದಲು ‘ಮ’ ಧ್ವನಿಯನ್ನು ಓದುತ್ತಾರೆ. ‘ಢ’ ಧ್ವನಿಗೆ ಬದಲು ‘ಡ’ ಧ್ವನಿಗೆ ಬದಲು ‘ಟ’ ಧ್ವನಿಯನ್ನು,, ‘ಟ’ ಧ್ವನಿಗೆ ಬದಲು ‘ಠ’ ಧ್ವನಿಯನ್ನು ‘ಧ’ ಧ್ವನಿಗೆ ಬದಲು ‘ದ’ ಧ್ವನಿಯನ್ನು ಓದುತ್ತಾರೆ. ಈ ಮಾದರಿ ವ್ಯತ್ಯಾಸಗಳನ್ನು ಲಿಪಿಸಾಮ್ಯತೆಯ ಗೊಂದಲದಿಂದ ಮಾಡುತ್ತಿದ್ದಾರೆ. ಹಾಗೆಯೇ ‘ವು’ ಕಾರಕ್ಕೆ ‘ವ’ಕಾರವಾಗಿ ಓದುವರು ಹಾಗೆಯೇ ‘ಭ’ ಧ್ವನಿಗೆ ಬದಲು ‘ಬ’ ಧ್ವನಿಯನ್ನು ಓದುವರು.

ಭಂಗಾರ > ಬಗಾರ ಲಾಭ > ಲಾಬ
ಭಗಿನಿ > ಬಗಿನಿ ಗರ್ಭ > ಗರಬ
ಭೀತಿ > ಬಿತಿ ಅಭಯ > ಅಬಿಯ

ಮೇಲಿನ ಉದಾಹರಣೆಗಳನ್ನು ಗಮನಿಸಿದಾಗ ಉರ್ದುಭಾಷೆಯಲ್ಲಿ ಧ್ವಯೋಷ್ಠ್ಯ ಅಘೋಷ ಸ್ಪರ್ಶ ವ್ಯಂಜನ ‘ಭ’ ಧ್ವನಿ ಇಲ್ಲದೆ ಇರುವುದರಿಂದ ಅದರ ಕೆಲಸವನ್ನು ‘ಬ’ ಧ್ವನಿ ನಿರ್ವಹಿಸುತ್ತಿದೆ. ಹಾಗಾಗಿ ಈ ಮಾದರಿ ವ್ಯತ್ಯಾಸಕ್ಕೆ ಅವರ ಮನೆಮಾತು ಕಾರಣ ವಾಗಿದೆ. ಜತೆಗೆ ಈ ಎರಡು ಧ್ವನಿಗಳ ನಡುವೆ ಇರುವ ಅಲ್ಪ ಸಾಮ್ಯತೆಯಿಂದ ಈ ಮಾದರಿ ವ್ಯತ್ಯಾಸ ಕಂಡುಬರುತ್ತದೆ.

* >

ಪದಾದಿ ಮತ್ತು ಪದಮಧ್ಯ ಪರಿಸರದಲ್ಲಿ ವರ್ತ್ಸ್ಯ ಅಘೋಷ ಸ್ಪರ್ಶ ವ್ಯಂಜನ ‘ಥ’ ಧ್ವನಿಯ ಬದಲು ದಂತ್ಯ ಅಘೋಷ ಸ್ಪರ್ಶ ವ್ಯಂಜನ ‘ತ’ ಧ್ವನಿಯನ್ನು ಓದುತ್ತಾರೆ.

ತಳಕು> ತಲಕು ಸಾರಥಿ> ಸಾರತಿ
ಥಟ್ಟನೆ> ತಟ್ಟನೆ ಕಥನ> ಕತನ

ಈ ಮೇಲಿನ ವ್ಯತ್ಯಾಸಕ್ಕೆ ಕಾರಣ ಉರ್ದುವಿನಲ್ಲಿ ವರ್ತ್ಸ್ಯ ಅಘೋಷ ಸ್ಪರ್ಶವ್ಯಂಜನ ಧ್ವನಿಯಾದ ‘ಥ’ ಇಲ್ಲದೆ ಇರುವುದರಿಂದ ಅದರ ಕೆಲಸವನ್ನು ದಂತ್ಯಅಘೋಷ ಸ್ಪರ್ಶ ವ್ಯಂಜನ ‘ತ’ ನಿರ್ವಹಿಸುತ್ತಿದೆ.

*ಎರಡು ಅಕ್ಷರ ರಚನೆಯನ್ನು ಉರ್ದುಭಾಷಿಕರ ಮಕ್ಕಳು ಅನುಸ್ವರವನ್ನು ಲೋಪ ಮಾಡಿ ಓದುತ್ತಾರೆ ಮತ್ತು ಬರೆಯುತ್ತಾರೆ.

ಡೊಂಕು > ಡೂಕ
ತುಂಟ > ತುಟ
ತಿಂಡಿ > ತಿಡಿ
ಮಂಚ > ಮಚ

*ಉರ್ದುಭಾಷಿಕರ ಮಕ್ಕಳು ಮೂರು ರಚನೆಯ ಮೂಲಕ್ಷರಗಳನ್ನು ಅಕ್ಷರ ಸಾಮ್ಯತೆಯ ಗೊಂದಲದಿಂದ ವ್ಯತ್ಯಾಸ ಮಾಡಿ ಓದುವರು ಮತ್ತು ಬರೆಯುವರು. ಈ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹದ ರೂಪ

ಉರ್ದುಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ರೂಪ

ಅಭಯ > ಅಬಯ
ಆಲಯ > ಅಲಯ
ಈಚಲ > ಇಚಲ
ಊಷರ > ಉಸರ
ಓಗರ > ಒಗರ
ಕಳಸ > ಕಲಸ
ಘಟಕ > ಪಟಕ
ಜಠರ > ಜಟರ
ಫಲಕ > ಪಲಕ
ಬಹಳ > ಬಅಲ
ಮಥನ > ಮತನ
ಷಹರ > ಸಅರ
ಸರಳ > ಸರಲ
ಹವಳ > ಅವಲ

*ಉರ್ದುಭಾಷಿಕ ಮಕ್ಕಳು ನಾಲ್ಕು ಅಕ್ಷರ ರಚನೆಯ ಮೂಲಕ್ಷರಗಳನ್ನು ಅಕ್ಷರಗಳ ಸಾಮ್ಯತೆಯ ಗೊಂದಲದಿಂದ ವ್ಯತ್ಯಾಸ ಮಾಡಿ ಓದುವರು ಮತ್ತು ಬರೆಯುವರು. ಈ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುವರು.

ಆಭರಣ > ಆಬರನ
ಏಕದಳ > ಏಕದಲ
ಒಣಮರ > ಒನಮರ
ಘನರವ > ಪನರವ
ಝಣಝಣ > ಜನಜನ
ಝಳಝಳ > ಜಲಜಲ
ಠಣಠಣ > ಟನಟನ
ಹಗರಣ > ಅಗರನ

*ಐದು ಅಕ್ಷರ ರಚನೆಯನ್ನು ಉರ್ದುಭಾಷಿಕ ಮಕ್ಕಳು ಅನುಸ್ವರವನ್ನು ಲೋಪಮಾಡಿ ಓದುತ್ತಾರೆ ಮತ್ತು ಬರೆಯುತ್ತಾರೆ. ಈ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಆಲಂಕರಿಸು > ಅಲಕರಿಸು
ಪರಂಗಿಹಣ್ಣು > ಪರಗಿಅನು