ಪ್ರಸ್ತುತ ಅಧ್ಯಯನದ ಫಲಿತಗಳಿಂದ ಕಂಡುಕೊಂಡ ಫಲಿತಗಳ ಆಧಾರದ ಮೇಲೆ ಕರ್ನಾಟಕದಲ್ಲಿ ಉರ್ದುಭಾಷಿಕ ಮಕ್ಕಳು ಕನ್ನಡ ಭಾಷೆಯನ್ನು ಕಲಿಯುವಾಗ ಉಂಟಾಗುವ ಏನೆಲ್ಲ ಸಮಸ್ಯೆಗಳನ್ನು ಎದುರುಸುತ್ತಿದ್ದಾರೆ ಎಂಬುದನ್ನು ಸಾಧ್ಯವಾದಷ್ಟು ಮಟ್ಟಿಗೆ ಗುರುತಿಸಲಾಗಿದೆ. ಈ ಅಧ್ಯಯನದ ಸಹಾಯದಿಂದ ಕರ್ನಾಟಕದಲ್ಲಿರುವ ದ್ವಿಭಾಷಿಕ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬಹುದು. ಇದರಿಂದ ಶಿಕ್ಷಣ, ಇಲಾಖೆಗೆ ತುಂಬಾ ಉಪಯುಕ್ತವಾಗಿದೆ. ಈ ಅಧ್ಯಯನವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಲವಾರು ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬಹುದು. ಸಮಸ್ಯೆಗಳು ಎಲ್ಲಿವೆ, ಸಮಸ್ಯೆಗಳಿಗೆ ಕಾರಣಗಳೇನು? ಸಮಸ್ಯೆಗಳಿಗೆ ಕಾರಣರಾರು? ಇದಕ್ಕೆ ಪರಿಹಾರವೇನು? ಎಂಬುದನ್ನು ಗಂಭೀರವಾಗಿ ಪರಿಗಣಿಸಬಹುದಾಗಿದೆ. ಅದನ್ನು ಕಾರ್ಯರೂಪಕ್ಕೆ ತರಬಹುದಾಗಿದೆ.

ಪಟ್ಟಿ :

ಕನ್ನಡ ಅಕ್ಷರ ಸಂಖ್ಯೆ೪೯

ಈಗ ತರಗತಿಯಲ್ಲಿ ಕಲಿಸುತ್ತಿರುವ ವರ್ಣಮಾಲೆ ಹೀಗಿದೆ

ಸ್ವರಗಳು: ಅ, ಆ, ಇ, ಈ, ಉ, ಊ, ಋ, ಎ,ಎ ಏ, ಐ, ಒ, ಓ, ಔ. (೧೩)

ವ್ಯಂಜನಗಳು:
ಕ, ಖ, ಗ, ಘ, ಙ
ಚ, ಛ, ಜ, ಝ, ಞ
ಟ, ಠ, ಡ, ಢ, ಣ
ತ, ಥ, ದ, ಧ, ನ
ಪ, ಫ, ಬ, ಭ ಮ = ೨೫

ಅವರ್ಗೀಯ ವ್ಯಂಜನಗಳು: ಯ, ರ, ಲ, ವ, ಶ, ಷ, ಸ, ಹ, ಳ (೯)

ಯೋಗವಾಹಕಗಳು: ಅನುಸ್ವಾರ ಂ (ಅಂ) ವಿಸರ್ಗಃ (ಅಃ) (೨)

ಕರ್ನಾಟಕ ಸರ್ಕಾರ ಉರ್ದು ಭಾಷಿಕರ ಮಕ್ಕಳಿಗೆ ಪ್ರಾಥಮಿಕ ಶಾಲೆಯಲ್ಲಿ ಕಲಿಸುತ್ತಿರುವ ವರ್ಣಮಾಲೆ ಪಟ್ಟಿ ಕೆಳಕಂಡಂತಿದೆ.

ಪಟ್ಟಿ :

ಉರ್ದುಭಾಷೆಯ ವರ್ಣಮಾಲೆ

ಕನ್ನಡ ಉರ್ದು ಉಚ್ಚಾರಣೆ ಉರ್ದು ಲಿಪಿ
ಆಲೀಫ್
ಆಲೀಪ್ ಮದ್
ಇಜೇಕ್
ಅಲೀಫ್ ಪೇಷ್
_
ಪೇಪ್
_
ವಪ್ ಹೆ
_
_
ಅಂ ಅಲೀಪ್‌ಮೀಮ್
ಅಃ ಅಲೀಪ್‌ಮದ್ ಹೆ
ಕಾಪ್
ಕಾಫ್ ಹೆ
ಗಾಫ್
ಗಾಪ್ ಹೆ
ಸೂಪ್
ಚೀಮ್
ಬೇಮ್ ಹೆ
ಜೀಮ್
ಜೀಮ್ ಹೆ
_ _
ಟಿ
ಟೆಹೆ
ಡಾಲ್
ಮಾನ್
ತಿ
ಥೆಹೆ
ದಾಲ್‌ಹೆ
ಸೂಸ್
ಪೆ
ಪಹೆ
ಬೆ
ಬೆಹೆ
ಮೀಮ್
ಯೆ
ರೆ
ಲಾಮ್
_
ಶೀನ್
_ _
ಸೀನ್
ಹೈ
_ _
ಕ್ಷ _ _