ಪ್ರಸ್ತುತ ಅಧ್ಯಯನಕ್ಕೆ ಹಲವಾರು ಕಾರಣಗಳಿಂದ ಕೆಲವು ಮಿತಿಗಳಿವೆ. ಅಧ್ಯಯನದಲ್ಲಿ ದಾಖಲಿಸಿರುವ ಭಾಷಿಕ ಮಾಹಿತಿಯಿಂದ ಪ್ರಸ್ತುತ ಅಧ್ಯಯನದ ಫಲಿತಗಳನ್ನು ತಿಳಿಯ ಬೇಕಾಗಿದೆ. ಪ್ರಸ್ತುತ ಅಧ್ಯಯನವನ್ನು ೩ ರಿಂದ ೫ನೇ ತರಗತಿಯ ೨೦೦೪-೦೮ನೇ ಸಾಲಿನಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳನ್ನು ಮಾತ್ರ ಪರಿಗಣಿಸಿದೆ. ಆ ಮಕ್ಕಳಿಂದ ಮಾತ್ರ ಮಾಹಿತಿ ಸಂಗ್ರಹಿಸಲಾಗಿದೆ. ಕೆಲವು ಸಂದರ್ಭದಲ್ಲಿ ವಿವರಣಾತ್ಮಕ ವಿಶ್ಲೇಷಣೆ ಎನಿಸಬಹುದು. ಅದು ಅನಿವಾರ್ಯವು ಕೂಡ. ಕನ್ನಡದಲ್ಲಿ ಭಾಷೆಯ ಕಲಿಕೆ ಮತ್ತು ಬೋಧನೆ ಕುರಿತು ವಿವರಣಾತ್ಮಕ ಅಧ್ಯಯನಗಳು ಕೂಡ ಆಗಿಲ್ಲ. ಅಂದರೆ ವ್ಯತ್ಯಾಸಗಳಿಗೆ ಖಚಿತವಾಗಿ ಕಾರಣಗಳು ತಿಳಿಯದಿ ದ್ದಲ್ಲಿ ಹಾಗೆಯೇ ವಿವರಿಸಿ ಬಿಡಲಾಗಿದೆ. ಮುಂದೆ ಅಂತಹ ಸಮಸ್ಯೆಗಳನ್ನು ಕುರಿತು ಹೆಚ್ಚಿನ ಸಂಶೋಧನೆ ನಡೆಸಬಹುದಾಗಿದೆ. ನೇರವಾಗಿ ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸ ಲಾಗಿದೆ. ಇಲ್ಲಿ ಚರ್ಚೆಗೆ ಒಳಪಡಿಸಿರುವ ಕನ್ನಡ ಕಲಿಕೆಯ ಸಮಸ್ಯೆಗಳು ಕೇವಲ ಹಳೆ ಮೈಸೂರು ಪ್ರಾಂತ್ಯಕ್ಕೆ ಸಮೀತವಾಗಿರದೆ ಅದು ಸಮಗ್ರ ಕರ್ನಾಟಕದ ಉರ್ದುಭಾಷಿಕ ಮಕ್ಕಳ ಕನ್ನಡ ಕಲಿಕೆ ಸಮಸ್ಯೆ ಎಂದು ಭಾವಿಸಿದ್ದೇನೆ. ಇದು ವಾಸ್ತವೂ ಕೂಡ. ಈ ಸಮಸ್ಯೆ ಗಳನ್ನು ಯಾರಾದರೂ ಪರೀಕ್ಷಿಸಿ ನೋಡಬಹುದು. ಸಮಸ್ಯೆಗಳ ಪ್ರಮಾಣ ಹೆಚ್ಚು ಕಡಿಮೆ ಇರಬಹುದು. ಸಮಸ್ಯೆಗಳೆ ಇಲ್ಲವೆಂದು ಹೇಳುವಂತಿಲ್ಲ. ಜತೆಗೆ ಅಧ್ಯಯನದ ವ್ಯಾಪ್ತಿ ಕೂಡ ಅಧ್ಯಯನದ ಮಿತಿಯಾಗಿದೆ.