ಪ್ರಸ್ತುತ ಅಧ್ಯಯನಕ್ಕೆ ಹಳೆ ಮೈಸೂರು, ಹೈದ್ರಾಬಾದ್ ಕರ್ನಾಟಕ, ಮಡಿಕೇರಿ, ಮಂಗಳೂರು ಪ್ರಾಂತ್ಯಗಳನ್ನು ಕೇಂದ್ರಗಳನ್ನಾಗಿ ಆರಿಸಿಕೊಳ್ಳಲಾಗಿದೆ. ಮೈಸೂರು ನಗರದಲ್ಲಿ ಮುಸ್ಲಿಂರು ಹೆಚ್ಚಾಗಿ ಮಂಡಿಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಫ್ರೆಮರಿ ಮತ್ತು ಹೈಯರ್ ಫ್ರೆಮರಿ ಶಾಲೆಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಅಲ್ಲದೆ ಲಷ್ಕರ್ ಮೊಲ್ಲಾ, ನರಸಿಂಹರಾಜಮೊಹಲ್ಲಾ, ನಜ್ಜರ್‌ಬಾದ್ ಮತ್ತು ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕುಗಳಲ್ಲಿ ಉರ್ದುಶಾಲೆಗಳಿಂದ ಅಧ್ಯಯನಕ್ಕೆ ಮಾಹಿತಿಯನ್ನು ಸಂಗ್ರಹಿಸಿದೆ. ಬಳ್ಳಾರಿ, ರಾಯಚೂರು, ಗುಲ್ಬರ್ಗ, ಮಂಗಳೂರು, ಮಡಿಕೇರಿ ಮುಂತಾದ ಪ್ರದೇಶಗಳಲ್ಲಿ ಮಾಹಿತಿ ಸಂಗ್ರಹಿಸಿರುವುದಲ್ಲದೆ; ಸಂಗ್ರಹಿಸಿರುವ ಮಾಹಿತಿ ಏಕ ಪ್ರಕಾರ ವಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ಒಂದು ತೀರ್ಮಾನಕ್ಕೆ ಬರಲಾಗಿದೆ. ಅಲ್ಲದೆ ಹೊರ ರಾಜ್ಯವಾದ ಗೋವದಲ್ಲಿರುವ ಕನ್ನಡಿಗರ ಶಿಕ್ಷಕರಿಂದ ಮಾಹಿತಿಯನ್ನು ಪರೀಕ್ಷಿಸ ಲಾಗಿದೆ. ಅಂದರೆ ಉರ್ದು ಭಾಷಿಕರ ಮಕ್ಕಳ ಕನ್ನಡ ಕಲಿಕೆಯ ಸಮಸ್ಯೆಗಳು ಏಕಪ್ರಕಾರ ವಾಗಿದೆ.