ಪ್ರಸ್ತುತ ಅಧ್ಯಯನವೂ ರ‍್ಯಾಡಂ ಮಾದರಿಯ ಅಧ್ಯಯನವಾಗಿದೆ. ಸೂಕ್ತವಾದ ಪ್ರಶ್ನಾವಳಿ ತಯಾರಿಸಿ ಅದರ ಮೂಲಕ ಮಾಹಿತಿ ಸಂಗ್ರಹಿಸಿದೆ. ಅದರ ಸಹಾಯದಿಂದ ಕರ್ನಾಟಕದಲ್ಲಿ ಉರ್ದುಭಾಷಿಕ ಮಕ್ಕಳ ಕನ್ನಡ ಭಾಷೆಯ ಸ್ಥಿರವಾದ ಭಾಷಿಕ ವ್ಯತ್ಯಾಸಗಳು ಎಂಬ ನಿರ್ಧಾರಕ್ಕೆ ಬರಲಾಗಿದೆ. ಇದನ್ನು ಅಧ್ಯಯನಕಾರರು ಪ್ರಯೋಗಮಾಡಿ ಪರೀಕ್ಷಿಸ ಬಹುದು. ನಮ್ಮ ಉದ್ದೇಶಕ್ಕೆ ತಕ್ಕಂತೆ ಬೇರೆ ಬೇರೆ ಉರ್ದುಮಾಧ್ಯಮದ ಶಾಲೆಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಶಾಲೆಯ ಉಪಾಧ್ಯಾಯರು ಮತ್ತು ಪೋಷಕರಿಂದಲೂ ವ್ಯತ್ಯಾಸಗಳಿಗೆ ಕಾರಣಗಳೇನು? ಎಂಬುದಕ್ಕೆ ಅವರಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸ ಲಾಗಿದೆ. ಅಂದರೆ ವಿದ್ಯಾರ್ಥಿಗಳನ್ನು ಉಪಾಧ್ಯಾಯರನ್ನು ಮತ್ತು ಪೋಷಕರನ್ನು ನೇರವಾಗಿ ಭೇಟಿಯಾಗಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅವಶ್ಯವೆನಿಸಿದ್ದಲ್ಲಿ ರೇಕಾರ್ಡಿಂಗ್ ಮಾಡಿ ಕೊಳ್ಳಲಾಗಿದೆ. ಸಂಶಯ ಬಂದ ಕಡೆ ಸಂಗ್ರಹಿಸಿದ ಮಾಹಿತಿ ಮತ್ತು ರೇಕಾರ್ಡಿಂಗ್ ಆಗಿರುವ ಮಾಹಿತಿಯನ್ನು ತುಲನೆ ಮಾಡಿ ಪರೀಕ್ಷಿಸಲಾಗಿದೆ.

ಮಾಹಿತಿದಾರರ ಆಯ್ಕೆ

ಉರ್ದು ಮಾಧ್ಯಮದಲ್ಲಿ ಓದುತ್ತಿರುವ ಉರ್ದುಭಾಷಿಕ ಮಕ್ಕಳನ್ನು ಮಾಹಿತಿದಾರರಾಗಿ ಆಯ್ಕೆಮಾಡಿಕೊಳ್ಳಲಾಗಿದೆ. ಅದರಲ್ಲೂ ೩ನೇ ತರಗತಿಯಿಂದ ೫ನೇ ತರಗತಿ ಮಕ್ಕಳನ್ನು ಮಾತ್ರ ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ೨೦೦೪-೦೮ನೇ ಸಾಲಿನಲ್ಲಿ ಅಭ್ಯಾಸ ಮಾಡುತ್ತಿದ್ದ ಮಕ್ಕಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರತಿಯೊಂದು ತರಗತಿ ಯಿಂದಲೂ ಲಿಂಗತಾರತಮ್ಯವಿಲ್ಲದೆ ಆಯ್ಕೆಮಾಡಿಕೊಳ್ಳಲಾಗಿದೆ. ತರಗತಿವಾರು ಹೆಣ್ಣು ಮತ್ತು ಗಂಡು ಮಕ್ಕಳನ್ನು ಮೂರು ಮೂರು ಜನರಂತೆ ಆಯ್ಕೆ ಮಾಡಿಕೊಳ್ಳಲಾಗಿದೆ. ತರಗತಿಯ ಆಯ್ಕೆಯ ಪಟ್ಟಿಯನ್ನು ಕೆಳಗಿನಂತೆ ವರ್ಗೀಕರಿಸಬಹುದು.

ಉರ್ದು ಮಕ್ಕಳು

೩ನೇ ತರಗತಿ

೪ನೇ ತರಗತಿ

೫ನೇತರಗತಿ

 

ಹೆ

ಗಂ

ಹೆ

ಗಂ

ಹೆ

ಗಂ

ಮಾಹಿತಿ ಸಂಗ್ರಹಿಸುವ ವಿಧಾನ

ಓದುವಿನ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸುವ ವಿಧಾನ:

ಅ. ಉರ್ದುಭಾಷಿಕ ಮಕ್ಕಳಿಗೆ ವಿವಿಧ ವಲಯಗಳನ್ನೊಳಗೊಂಡ ಕನ್ನಡ ಪದ ಪಟ್ಟಿ ತಯಾರಿಸಲಾಗಿದೆ. ಆ ಪಟ್ಟಿಯಲ್ಲಿ ಸುಮಾರು ೧೨೦೦ ಪದಗಳಿವೆ. ಅವುಗಳನ್ನು ಓದಿಸಿ ಧ್ವನಿ ಮುದ್ರಿಸಿಕೊಳ್ಳಲಾಗಿದೆ. ನಂತರ ಬರಹಕ್ಕೆ ಇಳಿಸಲಾಗಿದೆ.

ಆ. ೩ನೇ ತರಗತಿಯಿಂದ ೫ನೇ ತರಗತಿವರೆಗೆ ಆಯಾ ತರಗತಿಯ ಕನ್ನಡ ಪಠ್ಯವನ್ನು ಓದಿಸಿ ಮಾಹಿತಿ ಸಂಗ್ರಹಿಸಲಾಗಿದೆ.

ಇ. ಉರ್ದುಭಾಷಿಕರು ಆಚರಿಸುವ ಹಬ್ಬ ಹರಿದಿನಗಳ ಬಗೆಗೆ ಕನ್ನಡದಲ್ಲಿ ಮಾತನಾಡಿಸಿ ಧ್ವನಿ ಮುದ್ರಿಸಿ ಮಾಹಿತಿ ಸಂಗ್ರಹಿಸಲಾಗಿದೆ. ನಂತರ ಲಿಷ್ಠಂತರ ಮಾಡಿಕೊಳ್ಳಲಾಯಿತು.

ಈ. ಆಯಾ ತರಗತಿ ಮಕ್ಕಳ ಸಾಮಾರ್ಥ್ಯವನ್ನು ಗಮನಿಸಿ ಪದಗಳನ್ನು ಆಯ್ಕೆಮಾಡಿ ಕೊಳ್ಳುವಾಗ ಸ್ವರ, ವ್ಯಂಜನ, ಅರ್ಧಸ್ವರ, ಮೂಲಾಕ್ಷರ, ಗುಣಿತಾಕ್ಷರ ಮತ್ತು ಒತ್ತಕ್ಷರ ಮುಂತಾದ ಪದಗಳಿಗೆ ಆದ್ಯತೆ ನೀಡಲಾಗಿದೆ. ಸಂದರ್ಶನ ಮಾಡುವ ಸಂದರ್ಭದಲ್ಲಿ ಅವರು ಎಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ ಎಂಬುದನ್ನು ಗುರುತಿಸಿ ಅದಕ್ಕೆ ಕಾರಣಗಳನ್ನು ಶೋಧಿಸುವ ಕೆಲಸ ಮಾಡಲಾಗಿದೆ.

ಉ. ಆಯಾ ಎಲ್ಲ ತರಗತಿ ಮಕ್ಕಳ ಬಾಯಿಯಲ್ಲಿ ಓದಿಸಲಾಗಿದೆ. ಆ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ವ್ಯತ್ಯಾಸಗಳನ್ನು ಪಟ್ಟಿಮಾಡಿಕೊಳ್ಳಲಾಗಿದೆ.

ಬರವಣಿಗೆ ಮಾಡುವ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸುವ ವಿಧಾನ

ಅ. ೩ನೇ ತರಗತಿಯಿಂದ ೫ನೇ ತರಗತಿವರೆಗೆ ಪಠ್ಯದಲ್ಲಿನ ಗದ್ಯಭಾಗವನ್ನು ಹೇಳಿ ಬರವಣಿಗೆ ಮಾಡಿಸಲಾಗಿದೆ. ಆ ಸಂದರ್ಭದಲ್ಲಾಗುವ ವ್ಯತ್ಯಾಸಗಳನ್ನು ಗುರುತಿಸಲಾಗಿದೆ.

ಆ. ಪದ ಪಟ್ಟಿ ತಯಾರಿಸುವಾಗ ಸ್ವರ, ವ್ಯಂಜನ, ಅರ್ಧಸ್ವರ, ಮೂಲಾಕ್ಷರ, ಗುಣಿತಾಕ್ಷರ ಮತ್ತು ಒತ್ತಕ್ಷರ ಮಾದರಿಯಿರುವ ಗದ್ಯಭಾಗವನ್ನು ಆರಿಸಿ ನಂತರ ಅವರಿಂದ ಬರವಣಿಗೆ ಮಾಡಿಸಿ ಕಂಡುಬರುವ ವ್ಯತ್ಯಾಸಗಳನ್ನು ಪಟ್ಟಿಮಾಡಿಕೊಳ್ಳಲಾಗಿದೆ.

ಇ. ಬರವಣಿಗೆ ಮಾಡುವ ಸಂದರ್ಭದಲ್ಲಿ ಆಯಾ ತರಗತಿ ಮಕ್ಕಳಿಗೆ ಯಾವ ಭಾಷಿಕ ಅಂಶ ಕಷ್ಟವಾಗುತ್ತಿದೆ ಅಂತಹ ಅಂಶಗಳನ್ನು ಗುರುತಿಸಿ ಪಟ್ಟಿಮಾಡಿಕೊಳ್ಳಲಾಗಿದೆ.

ಈ. ಆಯಾ ತರಗತಿಗಳಲ್ಲಿ ನಡೆಯುವ ವಾರ್ಷಿಕ ಮತ್ತು ಅರ್ಧವಾರ್ಷಿಕ, ತ್ರೈಮಾಸಿಕ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿ; ವ್ಯತ್ಯಾಸಗಳನ್ನು ಪಟ್ಟಿಮಾಡಿಕೊಳ್ಳ ಲಾಗಿದೆ.