ಉರ್ದು ಭಾಷಿಕರ ಕನ್ನಡದ ಸ್ವರೂಪವನ್ನು ತಿಳಿಯಲು ಕನ್ನಡದ ಕತೆಗಳು ಸಹಾಯಕ್ಕೆ ಬರುತ್ತವೆ. ಆ ಹಿನ್ನಲೆಯಿಂದ ಶಾಲೆಯ ಆವರಣದಲ್ಲಿರುವ ಉರ್ದುಭಾಷಿಕರ ಮಕ್ಕಳಿಂದ ಕನ್ನಡದ ಕತೆಗಳನ್ನು ಹೇಳಿಸಿ ದಾಖಲಿಸಲಾಗಿದೆ.
ಮಾದರಿ : ೧
ಒಂದು ಮನ್ಚ ಕೋಲಿ ಸಾಕಿರ್ತಾನೆ. ದಿನಾಲು ಚಿನ್ನದ ಮೊಟ್ಟಿ ಆಕ್ತೆ. ತಕ್ಕೊಂಡೋಗಿ ಮಾರ್ತಾನೆ. ಒಂದು ಉಡ್ಗ ಬರ್ತಾನೆ. ಇಷ್ಟು ಮೊಟ್ಟೆ ಆಕ್ತಲ್ಲ ನೀನು ಒಂದ್ ದಿನ ಕೊಯ್ದು ನೋಡು ಅಂತಾನೆ. ಆಗ್ಲಿ ಅಂತ ಕೊಯ್ತುರೆ. ಕೂಯ್ದು ನೋಡ್ತಾರೆ. ಒಂದು ಮೊಟ್ಟೆನೂ ಇರಲ್ಲ. ಆಗ ರೈತನಿಗೆ ಮಾಯಿಸಿ ಆಗ್ತೆ. ಆಗ ರೈತ ಅಲ್ತ ಕೂತಿರ್ತಾನೆ. ಆಗ ಉಡ್ಗ ಬಂದಿ ಯಾಕೆ ಆಲ್ತಿಯಲ್ಲ ಅಂತಾರೆ. ನೀನು ಯೆಲ್ದೀಯಲ್ಲ ಅದ್ಕೆ ಕೋಲಿಕೊಯ್ದೆ ನೋಡು ಈಗ ಆಯ್ತು ಅಂತ ಯೆಲ್ತನೆ.
ಮಾದರಿ : ೨
ನಾವ್ ಬೆಲಿಗೆ ಎದ್ದಿ ನಮಾಜಗೆ ಒಯಿತ್ತೀವಿ. ಸನ ಮಾಡ್ತೀವಿ. ನಮಾಜ್ ಮಾಡ್ತೀವಿ. ನಮ್ ದೇವ್ರು ತವ ನಾವ್ ಕೇಲ್ತಿವಿ. ನಮಾಜ್ ಮಾಡಿ. ಆಮೇಲಿಂದ ನಮಾಜ್ಗೆ ಓಗಿ ತಿರ್ಗ ಪುನ ಬರ್ತೀವಿ. ತಿರ್ಗ ಪುನ ಬಂದಿಬುಟ್ಟಿ ಅಲ್ ಉಜ್ಜುತಿವಿ. ಆಮೇಲಿಂದ ಜಡೆ ಆಕ್ತಿವಿ. ನಾಸ್ಟ್ ಮಾಡ್ತೀವಿ. ತಿಂಡಿ ತಿನ್ತಿವಿ. ಆಮೇಲಿಂದ ಒಸ ಬಟ್ಟೆ ಆಕ್ಲೊತ್ತಿವಿ. ನಮ್ ತಂದೆಯೆಲ್ಲ ನಮಾಜ್ ಒಗ್ತಿವಿ. ನಮಾಜ್ ಮಾಡ್ಬಿಟ್ಟಿ ಉಟ ಮಾಡ್ತಿವಿ.
ಮಾದರಿ : ೩
ಒಂದ್ ಮುದ್ಕಿ ಇತ್ತು. ಅವ್ಲು ರೊಟ್ಟಿ ಮಾಡ್ತ ಇದ್ದಲು. ರೊಟ್ಟಿ ಮಾಡುವಾಗ ಒಂದು ಕಾಗೆ ಅಲ್ಲಿಗೆ ಬಂದಿತು. ಆಮುದ್ಕಿ ತಿಂತಿರುವಾಗ ಒಂದು ಕಾಗೆ ಒಂದು ರೊಟ್ಟಿಯನ್ನು ಎತ್ಕೊಂಡು ಒಂದು ಮರಕ್ಕೆ ಓಡು ಒಯ್ತು. ಒಂದು ಮರ್ದಲ್ಲಿ ಕುಲಿತು ತಿನ್ನುತಿತ್ತು. ಒಂದು ನರಿ ಬಂತು. ಆ ಒಂದು ನರಿ ನಿನ್ನ ರೂಪ ಬಾಲ ಚಂದ, ನಿನ್ನ ಧ್ವನಿ ಬಾಲ ಚಂದ, ನಿನ್ನ ರಾಗ ಬಾಲ ಚಂದ. ಒಂದು ರಾಗ ಆಡು ಎಂದು ಯೇಲಿತು. ಕಾಗೆ ತುಂಬ ಜಾನ ಇತ್ತು. ಬಾಯಲಿ ಇದ್ದರೂಟ್ಟಿಯನ್ನು ಕೈಯಲ್ಲಿ ಇಡಿದು ಆಡು ಯೇಲಿತು. ನರಿ ಸಪ್ಪೆಗಾಗಿ ಒಯಿತು.
ಮಾದರಿ : ೪
ನಾನ್ ಮುಸ್ಲಲ್ಮಾನಿ ಇದ್ದೀನಿ. ನಾನ್ ರಂಜಾನ್ ಅಬ್ಬ ಆಚರಸ್ತ ಇದ್ದೀನಿ. ನಾನ್ ರಂಜಾನ್ ಅಬ್ಬದಲ್ಲಿ ಎದ್ದೋಲ್ತಿನಿ. ನಮಾಜ್ ಎಲ್ಲ ಮಾಡ್ಕೊಂಡಿ. ನಮ್ ತಂದೆ ಮತ್ತು ನಾವ್ ಅಲ್ಲು ಉಜ್ಜಿ ಮುಕ ತೊಲ್ದು ನಾಸ್ಟ್ ಮಾಡ್ತೀವಿ. ನಾಸ್ಟ್ ಮಾಡ್ದ ಆಮೇಲೆ ತಿರ್ಗ ನಮಾಜ್ಗೆ ಒಯ್ತಿವಿ. ನಮಾಜ್ಗೆ ಒಸ ಬಟೆದು ಆಕ್ಕೊಂಡಿ. ದೇವ್ರ ಅತ್ರ ಪರ್ತಾನೆ ಮಾಡ್ತಿವಿ. ಆಮೇಲೆ ಇಸ್ಕೊಲ್ಗೆ ರೆಡಿ ಆಗ್ ಬುಡ್ತೀವಿ. ಆದ್ಮೇಲೆ ಒಂದ್ಸ್ವಲ್ಪ ರಸ್ಟ್ತಕ್ಕೊತ್ತಿವಿ. ರಸ್ಟ್ ತಕ್ಕೊಂಡು ಆದ್ಮೇಲೆ ನಮಾಜ್ ಮಾಡಿಕೊಂಡಿ ರೋಜ್ ಎಲ್ಲ ಉಪಾಸಯೆಲ್ಲ ಮಾಡ್ಬುಟ್ಟಿ ಉಟಮಾಡಿ ನಮಾಜ್ ಮಾಡಿ ಮಲಿಕತಿವಿ.
ಮಾದರಿ : ೫
ಒಂದು ಉಡ್ಗ ಇರ್ತಾರೆ. ಅ ಉಡ್ಗ ಜಾಸ್ತಿ ಮಾತಾಡ್ತಾರೆ. ಉಡ್ಗಿ ಜಾಸ್ತಿ ಮಾತಾಡ್ಬೇಡಿ ಅಂತಾರೆ. ಜಾಸ್ತಿ ಮಾತಾಡ್ದರೆ ನಾನ್ ಸತ್ತೋಯ್ತಿನಿ ಅಂತಾರೆ. ಅದ್ಕೆ ಇವ್ನು ಜಾಸ್ತಿ ಮಾತೆ ಆಡಲ್ಲ. ಸತ್ತೋಗ್ ಬುಡ್ತಾರಲ್ವ, ಅದ್ಕೆ ಜಾಸ್ತಿ ಮಾತೆ ಆಡಲ್ಲ. ಆ ಉಡ್ಗ ರಾಜ್ದು ಮಗ ಇರ್ತಾರೆ. ಅದ್ಕೆ ಒಂದು ಅಜ್ಜಿ ನಿಮ್ದು ಯೇಸ್ರು ಏನು ಅಂತಾರೆ. ಅ ಉಡ್ಗ ಯೆಸ್ರೇ ಯೇಲಲ್ಲ. ಅದ್ಕೆ ಅಜ್ಜಿ ಉಡ್ಗಗೆ ಕೇಲ್ತಾರೆ. ಯಾಕೆ ಮಾತನಾಡಲ್ಲ ಅಂತ. ಅದ್ಕೆ ಉಡ್ಗ ನದಿ ಇರ್ತಾರಲ್ಲ ಅಲ್ಲೆ ಯೆಲ್ತಿನಿ ಬನ್ನಿ ಅಂತಾರೆ. ಆಗ ನದಿಗೆ ಒಗ್ತಾರೆ. ಅಲ್ಲೆ ಕೇಡಿ ಇರ್ತಾರೆ. ಅವ್ರುದು ಕೇಡಿ ಉಡ್ಗಿದು ಕಡೆಯವ್ರು. ಕೇಡಿ ಯಾರು ಅಂದ್ರೆ ಉದ್ಗಿದ್ದು ಅಪ್ಪ. ನಿಮ್ದುಯಾಕ್ ಮಾತಾಡಲ್ಲ ಅಂತಾರೆ. ನಮ್ದು ಪಿರುತಿ ಮಾqತಿಕೊ ಉದ್ಗಿದ್ದು ಮಾತಾಡ್ಬೇಡದ್ದು ಅಂತ ಯೇಲ್ತಾರೆ.
ಉರ್ದು ಭಾಷಿಕ ಮಕ್ಕಳು ಕನ್ನಡವನ್ನು ಬರೆಯುವಾಗ ಮಾಡುವ ಸಮಸ್ಯೆಗಳನ್ನು ಕೆಳಗಿನಂತೆ ಊಹಿಸಬಹುದು.
೧. ಹ್ರಸ್ವ ಮತ್ತು ದೀರ್ಘ ಅಕ್ಷರ ನಡುವೆ ಉಚ್ಚಾರಣೆಯ ಭಿನ್ನತೆ ಗೊತ್ತಿಲ್ಲದೆ ಇರುವುದು.
೨. ಗುಣಿತಾಕ್ಷರಗಳಲ್ಲಿನ ಚಿಹ್ನೆಯ ಸ್ಪಷ್ಟಕಲ್ಪನೆ ತಿಳಿಯದೆ ಇರುವುದು.
೩. ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ನಡುವೆ ಉಚ್ಚಾರಣೆಯ ವ್ಯತ್ಯಾಸದಲ್ಲಿ ಸ್ಪಷ್ಟತೆ ಇಲ್ಲದೆ ಇರುವುದು.
೪. ಅಕ್ಷರಗಳು ಹುಟ್ಟುವ ಸ್ಥಾನ ಮತ್ತು ವಿಧಾನ ಕುರಿತು ಸ್ಪಷ್ಟತೆ ಇಲ್ಲದೆ ಇರುವುದು.
೫. ಅನುಸ್ವರ ಬಳಕೆ ಮಾಡಿದಾಗ ಉಚ್ಚಾರಣೆಯಲ್ಲಿ ವ್ಯತ್ಯಾಸವಾಗುವುದರ ಬಗ್ಗೆ ತಿಳುವಳಿಕೆ ಇಲ್ಲದಿರುವುದು.
೬. ಪದಗಳ ಬಗೆಗೆ ನಿರ್ದಿಷ್ಟವಾದ ಖಚಿತತೆ ಇಲ್ಲದಿರುವುದು.
೭. ಪದ ವಿಭಾಗದ ಪರಿಕಲ್ಪನೆ ಇಲ್ಲದಿರುವುದು.
೮. ಬರವಣಿಗೆಯಲ್ಲಿ ನಿರಂತರ ಅಭ್ಯಾಸ ಇಲ್ಲದಿರುವುದು.
೯. ಸರಿಯಾಗಿ ಆಲಿಸದೆ ಇರುವುದು.
೧೦. ತರಗತಿಗೆ ಗೈರುಹಾಜರಿ ಹೆಚ್ಚಾಗಿರುವುದು.
೧೧. ವ್ಯಾಕರಣಾಂಶಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವ್ಯತ್ಯಾಸಕ್ಕೆ ಅವರ ಮನೆ ಮಾತಿನ ಪ್ರಭಾವ ವಿದೆ. ಅದನ್ನು ಪತ್ತೆಹಚ್ಚಿ ಪರಿಹರಿಸುವುದು ಅಧ್ಯಾಪಕರ ಜವಾಬ್ದಾರಿ.
೧೨. ಶಿಕ್ಷಕರಿಗೆ ನಿರ್ದಿಷ್ಟವಾದ ಕಾರಣಗಳು ತಿಳಿಯದೆ ಇರುವುದು.
Leave A Comment