ಮುಖ್ಯವಾಗಿ ಉರ್ದುಭಾಷಿಕ ಮಕ್ಕಳು ಶಾಲೆಯ ಆವರಣದಲ್ಲಿ ಕನ್ನಡ ಭಾಷೆಯನ್ನು ಓದುವಾಗ, ಬರೆಯುವಾಗ ಮಾಡುವ ವ್ಯತ್ಯಾಸಗಳನ್ನು ಗುರುತಿಸಿ; ಅವುಗಳಿಗೆ ಕಾರಣಗಳನ್ನು, ಪರಿಹಾರಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನೀಡಲಾಗಿದೆ. ಪ್ರಸ್ತುತ ಅಧ್ಯಯನದಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಆಗುವ ಪ್ರಯೋಜನಗಳು ಏನು ಎಂಬುದನ್ನು ದಾಖಲು ಮಾಡಲಾಗಿದೆ. ಕರ್ನಾಟಕ ದಲ್ಲಿ ಉರ್ದುಭಾಷಿಕ ಮಕ್ಕಳು ಕನ್ನಡ ಭಾಷೆಯನ್ನು ಕಲಿಯುವಾಗ ಮಾಡುವ ವ್ಯತ್ಯಾಸಗಳಿಗೆ ಅವರ ಮನೆ ಮಾತು ಪ್ರಮುಖವಾದ ಕಾರಣವಾಗಿರುವುದು ಮಾತ್ರವಲ್ಲದೆ; ಕೆಲವು ಸಂದರ್ಭ ದಲ್ಲಿ ಬೋಧನೆ ಕ್ರಮ ಮತ್ತು ಭಾಷಿಕೇತರ ಕಾರಣಗಳಿಂದಲೂ ವ್ಯತ್ಯಾಸ ಮಾಡುತ್ತಿದ್ದಾರೆ ಎಂಬುದನ್ನು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ.