*ದ್ವಿತೀಯ ವಿಭಕ್ತಿ

ಉರ್ದು ಭಾಷಿಕ ಮಕ್ಕಳು ದ್ವಿತೀಯ ವಿಭಕ್ತಿ ಪ್ರತ್ಯಯ ‘ಅನ್ನು’ ಬದಲು ಚತುರ್ಥಿ ವಿಭಕ್ತಿ ಪ್ರತ್ಯಯ ‘ಗೆ’ಯನ್ನು ಓದುತ್ತಾರೆ ಮತ್ತು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹದ ಕನ್ನಡ

ಉರ್ದು ಭಾಷಿಕ ಮಕ್ಕಳು ಉಚ್ಚರಿಸುವ ಮತ್ತು ಬರೆಯುವ ಮಾದರಿ

ರಾಜನನ್ನು ಕರೆ ರಾಜಗೆ ಕರೆ
ಮರವನ್ನು ತರಿ ಮರಗೆ ತರೆ
ರಾಮನು ರಾವಣನನ್ನು ಕೊಂದನು ರಾಮ ರಾವಣಗೆ ಕೊಂದನು
ಅವರನ್ನು ಕರೆ ಅವರ್ಗೆ ಕರೆ
ನಾಯಿಯನ್ನು ಕರೆ ನಾಯಿಗೆ ಕರೆ
ಹಸುವನ್ನು ಹೊಡೆ ಹುಸುಗೆ ಹೊಡೆ

ಮಾನವೇತರ ಜೀವಿಗಳಾದ ನಾಯಿ, ಹಸು, ಎಮ್ಮೆ ಮುಂತಾದ ಪ್ರಾಣಿಗಳನ್ನು ಮಾನವ ಜೀವಿಗಳಂತೆ ಸಂಬೋಧಿಸುವುದು ವಿಶಿಷ್ಟ. ಹಾಗೆಯೇ ಮಾನವ ಜೀವಿಗಳಾದ ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ ಮುಂತಾದ ಬಂದುತ್ವ ಪದಗಳನ್ನು ಮಾನವೇತರ ಜೀವಿಗಳಂತೆ ಸಂಬೋಧಿಸುವುದು ಇವರ ಕನ್ನಡದ ಮತ್ತೊಂದು ವೈಶಿಷ್ಟ್ಯ. ದ್ವಿತೀಯ ವಿಭಕ್ತಿ ಪ್ರತ್ಯಯಕ್ಕೆ ಬದಲಾಗಿ ಚತುರ್ಥಿ ವಿಭಕ್ತಿ ಪ್ರತ್ಯಯ ಬಳಸುವುದು ಇವರ ಬರವಣಿಗೆಯಲ್ಲಿ ಕಂಡುಬರುವುದು ಪ್ರಮುಖ ವೈಶಿಷ್ಟ್ಯ. ಭೀಮನನ್ನು ಕರೆ ಮತ್ತು ಭೀಮನಿಗೆ ಕರೆ ಎರಡೂ ಸನ್ನಿವೇಶದಲ್ಲಿ ಉರ್ದು ಭಾಷೆಯಲ್ಲಿ ‘ಭೀಮಕೋ ಬುಲಾವ್’ ಎಂದೇ ಸಂಬೋಧಿಸುತ್ತಾರೆ. ಹಾಗಾಗಿ ಉರ್ದು ಭಾಷೆಯಲ್ಲಿ ದ್ವಿತೀಯ ವಿಭಕ್ತಿ ಪ್ರತ್ಯಯದ ಕೆಲಸವನ್ನು ಚತುರ್ಥಿ ವಿಭಕ್ತಿ ಪ್ರತ್ಯಯವೇ ಮಾಡುತ್ತದೆ. ಈ ಹಿನ್ನಲೆಯಲ್ಲಿ ಉರ್ದು ಭಾಷಿಕರ ಮಕ್ಕಳ ಕನ್ನಡ ಓದು ಮತ್ತು ಬರವಣಿಗೆಯಲ್ಲಿ ಚತುರ್ಥಿ ವಿಭಕ್ತಿ ಪ್ರತ್ಯಯ ಪ್ರಧಾನವಾಗಿ ಬಳಕೆಯಲ್ಲಿ ರುವುದು ಕಂಡುಬರುವುದು. ಇದು ಅವರ ಮಾತೃಭಾಷೆಯಾದ ಉರ್ದು ಪ್ರಭಾವದಿಂದಲೇ ಹೊರತು ಕನ್ನಡ ಭಾಷೆಯ ಪ್ರಭಾವದಿಂದಲ್ಲ.

*ಚತುರ್ಥಿ ವಿಭಕ್ತಿ ಪ್ರತ್ಯಯ

ಬರಹದ ಕನ್ನಡ

ಉರ್ದು ಭಾಷಿಕ ಮಕ್ಕಳು ಉಚ್ಚರಿಸುವ ಮತ್ತು ಬರೆಯುವ ಮಾದರಿ

ಕೂಲಿಯವನಿಗೆ ಕೂಲಿಗೆ
ಮಗುವಿಗೆ ಮಗಿಗೆ
ಮರಕ್ಕೆ ಮರಗೆ
ನನಗೆ ನಂಗೆ
ಕಾಲುಗೆ ಕಾಲಿಗೆ\ಕಾಲ್ಗೆ

 

ಸರ್ವನಾಮ ವಿಚಾರ ಬರಹದ ಕನ್ನಡ ಉರ್ದು ಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ರೂಪ
ಇವನು ಹುಡುಗ ಇದು ಹುಡುಗ ಇದೆ
ಇವಳು ಹುಡುಗಿ ಇದು ಹುಡುಗಿ ಇದೆ

ಕನ್ನಡ ಭಾಷೆಯಲ್ಲಿ ಸರ್ವನಾಮ ಮತ್ತು ನಿರ್ದೇಶಕ ಸರ್ವನಾಮ ಎಂಬುವು ಬೇರೆ ಬೇರೆಯಾಗಿ ಬರವಣಿಗೆಯಲ್ಲಿ ಬಳಕೆ ಆಗುತ್ತದೆ. ಆದರೆ ಉರ್ದು ಭಾಷಿಕರ ಎಲ್ಲ ತರಗತಿ ಮಕ್ಕಳು ಕನ್ನಡ ಪದ ಮತ್ತು ವಾಕ್ಯಗಳನ್ನು ಓದುವಾಗ ಮತ್ತು ಬರೆಯುವಾಗ ‘ಇವನು’ ಎಂಬುದರ ಬದಲು ‘ಇದು’ ಎಂದು ಬರೆಯುವುದನ್ನು ಕಾಣುತ್ತೇವೆ. ಈ ಒಂದು ವ್ಯತ್ಯಾಸ ಮಾಡಲು ಕಾರಣ ಅವರ ಮಾತೃಭಾಷೆಯಾದ ಉರ್ದುವಿನಲ್ಲಿ ಸರ್ವನಾಮ ಮತ್ತು ನಿರ್ದೇಶಕ ಸರ್ವನಾಮ ಎರಡು ಒಂದೇ ಪರಿಸರದಲ್ಲಿ ಬಳಸುವುದನ್ನು ಕಾಣುತ್ತೇವೆ. ಈ ಹಿನ್ನಲೆಯಲ್ಲಿ ಈ ಮಾದರಿಯ ವ್ಯತ್ಯಾಸ ಮಾಡಿ ಓದುವರು ಮತ್ತು ಬರೆಯುವರು.

ವಿಶೇಷಣಗಳ ವಿಚಾರ

ಉರ್ದು ಭಾಷಿಕ ಮಕ್ಕಳು ವಿಶೇಷಣದ ಬದಲಾಗಿ ವಿಶೇಷಣದ ಕಾರಕ ರೂಪವನ್ನು ಬಳಸುವರು. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುವರು.

ಬರಹದ ಕನ್ನಡ

ಉರ್ದು ಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ರೂಪ

ದೊಡ್ಡ ಹುಡುಗ ದೊಡ್ಡದು ಹುಡುಗ
ದೊಡ್ಡ ಹುಡುಗಿ ದೊಡ್ಡದು ಹುಡುಗಿ
ದೊಡ್ಡ ಹುಡುಗರು ದೊಡ್ಡದು ಹುಡುಗರು
ಈ ದೊಡ್ಡ ಮನೆ ನಿಮ್ಮದು? ಆ ದೊಡ್ಡದು ಮನೆ ನಿಮ್ಮದಾ
ಆ ಚಿಕ್ಕ ಪುಸ್ತಕ ತನ್ನಿ ಆ ಚಿಕ್ಕದು ಪುಸ್ತಕ ತನ್ನಿ
ಈ ದಪ್ಪ ಪೆನ್ನ ಯಾರದು ಈ ದಪ್ಪದು ಪೆನ್ನ ಯಾರದು?

ಈ ಮೇಲಿನ ಉದಾಹರಣೆಗಳನ್ನು ಗಮನಿಸಿದಾಗ ವಾಕ್ಯದಲ್ಲಿ ವಿಶೇಷಣದ ಬದಲಾಗಿ ವಿಶೇಷಣ ಕಾರಕ ರೂಪವನ್ನು ಬಳಸುತ್ತಾರೆ. ಈ ಒಂದು ವ್ಯತ್ಯಾಸಕ್ಕೆ ಕಾರಣ “ದು” ಧ್ವನಿ ಕನ್ನಡ ಭಾಷೆಯದೆ ಅಥವಾ ಉರ್ದು ಭಾಷೆಯದೆ ಎಂಬುವುದು ಗಮನಿಸುವಂತಹ ಅಂಶ. ಇದರ ಸ್ಪಷ್ಟತೆಗಾಗಿ ಕನ್ನಡ ಪರಿಸರದ “ದು”ಧ್ವನಿ ಬಳಕೆ ನೋಡಬಹುದು. “ನಿನ್ನದು ಆ ತೀರ ಮತ್ತು ನನ್ನದು ಈ ತೀರ ಈ ಎರಡು ಸರಳ ವಾಕ್ಯಗಳಲ್ಲಿ ಬಳಕೆಯಾಗಿರುವ ‘ದು’ ಧ್ವನಿ ಬಳಕೆ ವಿಶಿಷ್ಟವಾಗಿದೆ. ಆದ್ದರಿಂದ ‘ದು’ ಧ್ವನಿಯನ್ನು ಉರ್ದು ಭಾಷಿಕರ ಮಕ್ಕಳು ಕನ್ನಡ ಭಾಷೆಯಿಂದ ಸ್ವೀಕರಿಸಿದ್ದಾರೆ ಹೊರತು ಉರ್ದು ಭಾಷೆಯಿಂದಲ್ಲ. ಅಂದರೆ ಇಲ್ಲಿ ಸೌಲಭ್ಯಕಾಂಕ್ಷೆಯಿಂದ ಅಥವಾ ಗೊಂದಲದಿಂದ ಈ ತರಹದ ವಾಕ್ಯಗಳನ್ನು ಬಳಕೆ ಮಾಡು ವುದು ಕಂಡುಬರುವುದೆಂದು ಹೇಳಬಹುದು.

*ವಿಶೇಷ ಮತ್ತು ವಿಶೇಷ್ಯ ಇವೆರಡು ಒಟ್ಟಿಗೆ ಬಾರದೆ ಹಿಂದೆಯೂ ಮುಂದೆಯೂ  ಅಂದರೆ ವಿಶೇಷ್ಯದ ನಂತರ ವಿಶೇಷಣ ಬಳಕೆ ಮಾಡುವರು. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುವರು.

ಬರಹದ ಕನ್ನಡ

ಉರ್ದು ಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ರೂಪ

ಚಿಕ್ಕಮನೆ ಮನೆ ಚಿಕ್ಕದು
ದೊಡ್ಡಗುಟ್ಟು ಗುಟ್ಟು ದೊಡ್ಡದು

ಈ ರೀತಿಯ ಗೊಂದಲದಿಂದ ಹಾಗೂ ಆಡುಮಾತಿನ ಪ್ರಭಾವದಿಂದ ಬರೆಯಲು ಕಾರಣವಿರಬಹುದು. ಉರ್ದುಭಾಷೆಯಲ್ಲಿ ನಾಮಪದಗಳ ಲಿಂಗ ವಚನಕ್ಕೆ ತಕ್ಕಂತೆ ರೂಪ ಬದಲಾವಣೆಯನ್ನು ಹೊಂದುವುದಿಲ್ಲ. ಆದರೆ ಉರ್ದುವಿನಲ್ಲಿ ವಿಶೇಷಣಗಳು ತನ್ನ ಮುಂದಿನ ನಾಮಪದದ ಲಿಂಗ ವಚನಕ್ಕೆ ತಕ್ಕಂತೆ ರೂಪ ಬದಲಾವಣೆ ಹೊಂದುವುದನ್ನು ಕಾಣುತ್ತೇವೆ.

*ಸಂಖ್ಯಾವಾಚಕಗಳ ವಿಚಾರ

ಉರ್ದು ಭಾಷಿಕ ಮಕ್ಕಳು ಕನ್ನಡ ಭಾಷೆಯಲ್ಲಿ ಸಂಖ್ಯಾವಾಚಕ ಮತ್ತು ಮಾನವಸೂಚಿತ ಸಂಖ್ಯಾವಾಚಕ ಎರಡು ಪರಿಸರಕ್ಕೂ ಒಂದೇ ತೆರನಾದ ಸಂಖ್ಯಾವಾಚಿ ಸೂಚಕ ಪ್ರತ್ಯಯವನ್ನು ಬಳಸುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹದ ಕನ್ನಡ

ಉರ್ದು ಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ರೂಪ

ಒಂದು ಊರಿನಲ್ಲಿ ಒಬ್ಬ ಮುದುಕನಿದ್ದ ಒಂದು ಊರಿನಲ್ಲಿ ಮುದುಕನಿದ್ದ
ಒಬ್ಬ ಮನುಷ್ಯ ಒಂದು ಊರಿನಲ್ಲಿ ಇರುವುದಿಲ್ಲ ಒಂದು ಮನುಷ್ಯ ಒಂದೇ ಊರಿನಲ್ಲಿ ಇರುವುದಿಲ್ಲ.

ಉರ್ದುಭಾಷಿಕ ಮಕ್ಕಳು ಸಂಖ್ಯಾಸೂಚಕ ಮತ್ತು ಮಾನವಸೂಚಿತ ಸಂಖ್ಯಾವಾಚಕ ಎರಡೂ ಪರಿಸರಕ್ಕೂ ಒಂದೇ ತೆರನಾದ ಸಂಖ್ಯಾಸೂಚಕ ಬಳಕೆ ಮಾಡವರು. ಇದಕ್ಕೆ ಕಾರಣ ಉರ್ದು ಭಾಷೆಯಲ್ಲಿ ಸಂಖ್ಯಾವಾಚಕ ಮತ್ತು ಮಾನವಸೂಚಿತ ಸಂಖ್ಯಾವಾಚಕ ಎರಡು ಪರಿಸರಕ್ಕೂ ಒಂದೇ ಪ್ರತ್ಯಯ ಬಳಸುತ್ತಾರೆ. ಅದು “ಏಕ್”. ಉದಾಹರಣೆಗೆ ‘ಏಕ್ ಗಾಂವ್ ಮೇ ಏಕ್ ಬುಡಾ ತಾ’ ಎನ್ನುವಲ್ಲಿ ಸಂಖ್ಯಾವಾಚಕ ಮತ್ತು ಮಾನವಸೂಚಿತ ಸಂಖ್ಯಾವಾಚಕ ಎರಡು ಪರಿಸರಕ್ಕೂ ‘ಏಕ್’ ಎಂಬ ಒಂದೇ ರೂಪ ಬಳಕೆಯಲ್ಲಿದೆ. ಹಾಗಾಗಿ ಅವರು ಕನ್ನಡದಲ್ಲಿ ಕಥೆ ಹೇಳುವ ಸಂದರ್ಭದಲ್ಲಿ ಮಾನವಸೂಚಿತ ಸಂಖ್ಯಾವಾಚಕಕ್ಕೂ “ಒಂದು” ಎಂದೇ ಸಂಬೋಧಿಸುತ್ತಾರೆ. ಈ ಪ್ರಕ್ರಿಯೆ ಅವರ ಮಾತೃಭಾಷೆ ಪ್ರಭಾವದಿಂದುಂಟಾದುದೆ ಹೊರತು, ವ್ಯವಹಾರಿಕ ಭಾಷೆಯಾದ ಕನ್ನಡದಿಂದ ಆದದ್ದಲ್ಲ ಎಂದು ಹೇಳಬಹುದು.

ಉರ್ದು ಭಾಷಿಕ ಮಕ್ಕಳು ಸಂಖ್ಯಾವಾಚಕಗಳ ಒಬ್ಬ ರೂಪದ ಬದಲಾಗಿ ನೇರವಾಗಿ ಸಂಖ್ಯಾವಾಚಕಗಳ ಬಳಕೆಯನ್ನೇ ಮಾಡುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹದ ಕನ್ನಡ

ಉರ್ದು ಭಾಷಕ ಮಕ್ಕಳು ಓದುವ ಮತ್ತು ಬರಯುವ ರೂಪ

ಒಬ್ಬ ಮುಲ್ಲಾ ಒಂದು ಮುಲ್ಲಾ
ಒಬ್ಬ ಹುಡುಗಿ ಒಂದು ಹುಡುಗಿ
ಇಬ್ಬರು ಮನುಷ್ಯರು ಎರಡು ಮನುಷ್ಯರು

ಈ ಮೇಲಿನ ಉದಾಹರಣೆಗಳನ್ನು ಗಮನಿಸಿದಾಗ ಸಂಖ್ಯಾವಾಚಕಗಳ ಷಷ್ಟಿರೂಪಗಳ ಬದಲಾಗಿ ನೇರವಾಗಿ ಸಂಖ್ಯಾವಾಚಕಗಳ ಬಳಕಯನ್ನೇ ಮಾಡುವುದನ್ನು ಕಾಣುತ್ತೇವೆ. ಈ ಒಂದು ವ್ಯತ್ಯಾಸ ಮಾಡಲು ಕಾರಣ ಅವರ ಮಾತೃಭಾಷೆ ಎಂದು ಹೇಳಬಹುದು.

*ಕ್ರಿಯಾಪದ ವಿಚಾರ

ಉರ್ದು ಭಾಷಿಕ ಮಕ್ಕಳು ಕನ್ನಡ ಭಾಷೆಯಲ್ಲಿನ ವಾಕ್ಯಗಳನ್ನು ಬಳಸುವಾಗ ಕ್ರಿಯಾಪದ ದಿಂದ ಕೊನೆಯಾಗುವ ವಾಕ್ಯಗಳಲ್ಲಿ ‘ಇದೆ’ ಎಂಬ ರೂಪವನ್ನು ಬಳಕೆ ಮಾಡುವರು. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿ ಮಕ್ಕಳು ಮಾಡುತ್ತಾರೆ.

ಬರಹದ ಕನ್ನಡ

ಉರ್ದು ಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ರೂಪ

ಇವನು ಹುಡುಗ ಇವನು ಹುಡುಗ ಇದೆ
ಇವಳು ಹುಡುಗಿ ಇವಳು ಹುಡುಗಿ ಇದೆ
ಇದು ಪುಸ್ತಕ ಇದು ಪುಸ್ತಕ ಇದೆ
ಅವರು ಅದ್ಯಾಪಕಿ ಅವರು ಅಧ್ಯಾಪಕಿ ಇದ್ದಾರೆ

ಈ ಮೇಲಿನ ವಾಕ್ಯಗಳಲ್ಲಿ ಕನ್ನಡದಲ್ಲಿ ಕ್ರಿಯಾರೂಪವಿಲ್ಲದೆ ಕೇವಲ ನಾಮಪದ ಗಳಿಂದಲೇ ಆದ ಪೂರ್ಣ ವಾಕ್ಯಗಳಿವೆ. ಅಂತಹ ವಾಕ್ಯಗಳು ಅಧ್ಯಾಹಾರದಿಂದ ಕೂಡಿರುತ್ತವೆ. ಉರ್ದು ಭಾಷಿಕ ಮಕ್ಕಳು ಕನ್ನಡದಲ್ಲಿ ವಾಕ್ಯದ ಕೊನೆಗೆ ‘ಇದೆ’ ರೂಪವನ್ನು ಸೇರಿಸಿ ಬಳಕೆ ಮಾಡುವರು. ಇದಕ್ಕೆ ಕಾರಣ ಅವರ ಮನೆಮಾತಿನಲ್ಲಿ ‘ಯಾಹ ಲಡಕಿ ಹೈ’ ಇಲ್ಲಿ “ಹೈ” ಸಹಾಯಕ ಕ್ರಿಯಾರೂಪವಾಗಿರುತ್ತದೆ. ಉರ್ದುವಿನ “ಹೈ” ರೂಪಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ‘ಇದೆ’ ರೂಪವೊಂದನ್ನು ಬಳಸುವುದು ರೂಢಿ. ಈ ಮಾದರಿಯ ವ್ಯತ್ಯಾಸಕ್ಕೆ ಅವರ ಮನೆಮಾತಿನ ಪ್ರಭಾವ ಇದೆ.

*ಉರ್ದು ಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ಕನ್ನಡದಲ್ಲಿ ಪ್ರಶ್ನಾರ್ಥಕ ವಾಕ್ಯಗಳು ವಿಶಿಷ್ಟವಾಗಿವೆ.

ಬರಹದ ಕನ್ನಡ

ಉರ್ದು ಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ರೂಪ

ಅದು ಪುಕ್ತಕಾನಾ? ಅಲ್ಲ ಅದು ಪುಸ್ತಕ ಅಲ್ಲ
ಇಲ್ಲ ಅದು ಪುಸ್ತಕ ಇಲ್ಲ ಅವರು ಬರ್ತಾರಾ?
ಇಲ್ಲ ಅವರು ಬರಲ್ಲ ಅಲ್ಲ ಅವರು ಬರಲ್ಲ

ಕನ್ನಡದ ‘ಇಲ್ಲ’ ಅಥವ ‘ಅಲ್ಲ’ ನಿಷೇಧ ರೂಪಕ್ಕೆ ಉರ್ದುವಿನಲ್ಲಿ ‘ನಹಿ೦’ ಎಂದು ಬಳಕೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಉರ್ದು ಭಾಷಿಕ ಮಕ್ಕಳು ‘ಅಲ್ಲ’ ಎಂಬ ನಿಷೇಧ ರೂಪವನ್ನು ವಾಕ್ಯದ ಮೊದಲು ಮತ್ತು ಕೊನೆಯಲ್ಲಿ ಬಳಸುವರು.

ವಾಕ್ಯ ರಚನೆಯ ವಿಚಾರ ಬರಹದ ಕನ್ನಡ

ಉರ್ದು ಭಾಷಿಕ ಮಕ್ಕಳ ವಾಕ್ಯ ರಚನೆಯ ಮಾದರಿ

ಭೂಮಿಕಾ ಆಟವನ್ನು ಆಡುತ್ತಾಳೆ. ಭೂಮಿಕಾ ಆಟ ಆಡುತ್ತಾಳೆ.
ತೆಜಸ್ ಕ್ರೀಡಾಂಗಣಕ್ಕೆ ಹೋಗುತ್ತಾನೆ ಕ್ರೀಡಾಂಗಣಕ್ಕೆ ತೇಜಸ್ ಹೋಗುತ್ತಾನೆ.
ಆಯೆಷಾ ಕಾಗದವನ್ನು ಬರೆಯುವಳು ಕಾಗದವನ್ನು ಆಯೆಷಾ ಬರೆಯುವಳು
ರಾಬರ್ಟ್ ನಿನ್ನೆ ಊರಿಗೆ ಹೋದನು ನಿನ್ನೆ ರಾಬರ್ಟ್ ಊರಿಗೆ ಹೋದನು
ರೂಪ ಪುಸ್ತಕವನ್ನು ಕೊಟ್ಟಳು ಪುಸ್ತಕವನ್ನು ರೂಪ ಕೊಟ್ಟಳು
ವಿವೇಕ ನಾಳೆ ಬರುತ್ತಾನೆ ನಾಳೆ ವಿವೆಕ ಬಂದಾನು

೧. ಉರ್ದು ಭಾಷಿಕ ಮಕ್ಕಳಿಗೆ ಸ್ಪಷ್ಟವಾಗಿ ಕನ್ನಡ ವಾಕ್ಯರಚನೆಯಲ್ಲಿ ಬರುವ ಕರ್ತೃ ಕರ್ಮ ಕ್ರಿಯಾಪದಗಳ ಬಗ್ಗೆ ತಿಳುವಳಿಕೆ ಇಲ್ಲದೆ ಇರುವುದು.

*ಸಮನಾರ್ಥಕ ಪದಗಳ ವಿಚಾರ

ಉರ್ದು ಭಾಷಿಕ ಮಕ್ಕಳಿಗೆ ಸಮನಾರ್ಥಕ ಪದಗಳನ್ನು ಓದುವ ಮತ್ತು ಬರೆಯುವ ಪ್ರಕ್ರಿಯೆ ಗೊಂದಲದಿಂದ ಕೂಡಿದೆ.

ಬರಹದ ಕನ್ನಡ

ಉರ್ದು ಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ರೂಪ

ಅರಸ ಅರಸ
ಹೆಂಡತಿ ಹೆಣತಿ
ಹತ್ತಿರ ಹತ್ತಿರ
ಬಂಗಾರ ಬಂಗಾರ

ಉರ್ದು ಭಾಷಿಕ ಮಕ್ಕಳಿಗೆ ವಿರುದ್ಧಾರ್ಥಕ ಪದಗಳ ಕಲ್ಪನೆ ಇಲ್ಲದೆ ಇರುವುದು ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು.

ಬರಹದ ಕನ್ನಡ

ಉರ್ದು ಭಾಷಿಕ ಮಕ್ಕಳ ಬರಹದ ಕನ್ನಡ

ಬಡತನ ಬಡವರು
ಕಷ್ಟ ಕಷ್ಟ
ಕಡಿಮೆ ಸ್ವಲ್ಪ
ಹುಟ್ಟು ಹುಟ್ಟುವುದು

ಉರ್ದು ಭಾಷಿಕ ಮಕ್ಕಳಿಗೆ ಕನ್ನಡ ಪದಗಳನ್ನು ಕೂಡಿಸಿ ಬರೆಯಲು ಕೇಳಿದಾಗ ಪ್ರಕೃತಿ ಮತ್ತು ಪ್ರತ್ಯಯಗಳನ್ನು ಸೇರಿಸಿ ಒಪ್ಪಿತ ಬರವಣಿಗೆಯ ಮಾದರಿಯಲ್ಲಿ ಬರೆಯಲಾರರು.

ಬರಹದ ಕನ್ನಡ

ಉರ್ದು ಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ರೂಪ

ಮಳೆ+ಕಾಲ=ಮಳೆಗಾಲ ಮಳೆಕಾಲ
ಕಿರು+ತೆರೆ=ಕಿರುದೆರೆ ಕಿರುತೆರೆ
ಸಿರಿ+ಕನ್ನಡ=ಸಿರಿಗನ್ನಡ ಸಿರಿ ಕನ್ನಡ
ಹುಲಿ+ತೊಗಲು=ಹುಲಿತೊಗಲು ಹುಲಿತೊಗಲು
ಕಣ್+ಪನಿ=ಕಂಬನಿ ಕಣಪನಿ
ತತಿ+ತೋರು=ತಲೆದೀರು ತಲೆತೋರು
ಪರಿಚಯ+ಅನ್ನು=ಪರಿಚಯದನ್ನು ಪರಿಚಯನ್ನು
ದೂರದರ್ಶನ+ಅನ್ನು=ದೂರದರ್ಶನವನ್ನು ದೂರದರ್ಶನವನ್ನು
ದಬ್ಬ+ಆಗು=ದಟ್ಟವಾಗು ದಟ್ಟಾಗ
ಗುರು+ಇಗೆ=ಗುರುವಿಗೆ ಗುರುಗೆ

ಉರ್ದು ಭಾಷಿಕ ಮಕ್ಕಳಿಗೆ ಕನ್ನಡ ಪದಗಳನ್ನು ಕೂಡಿಸಿ ಬರೆಯಲು ಹೇಳಿದಾಗ ಪ್ರಕೃತಿ ಮತ್ತು ಪ್ರತ್ಯಯಗಳನ್ನು ಸೇರಿಸಿ ಬರೆಯದೆ ನಾವು ಕೊಟ್ಟ ಪದಗಳನ್ನು ಕೊಟ್ಟಂತೆ ಅಧಿಕ (+)ಚಿಹ್ನೆ ತೆಗೆದು ಪದಗಳನ್ನು ಬರೆಯುವುದನ್ನು ಕಾಣುತ್ತೇವೆ. ಈ ಒಂದು ವ್ಯತ್ಯಾಸ ಮಾಡಲು ಕಾರಣ ಪ್ರಕೃತಿ ಮತ್ತು ಪ್ರತ್ಯೇಯಗಳ ಕಲ್ಪನೆ ಇರದೆ ಇರುವುದರಿಂದ ಈ ತೆರನಾದ ವ್ಯತ್ಯಾಸ ಮಾಡವರು.

*ಉರ್ದು ಭಾಷಿಕ ಮಕ್ಕಳು ಗುಂಪಿಗೆ ಸೇರದ ಪದಗಳನ್ನು ಸರಿಯಾಗಿ ಓದುತ್ತಾರೆ. ಆದರೆ ಸರಿಯಾಗಿ ಬರೆಯಲಾರರು.

ಬರಹದ ಕನ್ನಡ

ಗುಂಪಿಗೆ ಸೇರದ ಪದಗಳು

ಉರ್ದು ಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ರೂಪ

ಲಾಂಛನ, ಚಿಹ್ನೆ, ಸಂಕೇತ, ನಿಯಮ ನಿಯಮ ಚಿಹ್ನೆ
ಯೋಧ, ವೀರ, ಶೂರ, ಧೀರ ಯೋಧ ವೀರ
ಸಂಗಾತಿ, ಸಹೋದರ, ಸಂಗಡಿಗ, ಜೊತೆಗಾರ ಸಂಗಾತಿ ಸಂಗಡಿಗ
ಅಡಗು, ಅವಿತುಕೊಳ್ಳು, ಓಡಿಹೋಗು    
ಮುಚ್ಚಿಟ್ಟುಕೊ ಓಡಿಹೋಗು ಅಡಗು

*ಉರ್ದು ಭಾಷಿಕ ಮಕ್ಕಳಿಗೆ ಕನ್ನಡ ಕಲಿಕೆಯ ಭಾಷೆಯಾಗಿರುವುದರಿಂದ ಕನ್ನಡ ಪದಕೋಶದ ಕೊರತೆಯಿಂದ ಈ ಕೆಳಗಿನಂತೆ ವ್ಯತ್ಯಾಸ ಮಾಡಿ ಓದುವರು ಮತ್ತು ಬರೆಯವರು.

 

ಬರಹದ ಕನ್ನಡ ಮಾದರಿ

ಉರ್ದು ಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ರೂಪ

ಸರಿಯಾದ ರೂಪ

ದೀನ-ದಲಿತ ದಾನ-ದಾನತ ದಾನವ
ಬಡವ-ಬಲ್ಲಿದ ನೋವು-ನೋವುದ ನಲಿವು
ಪೂರ್ಣ-ಅಪೂರ್ಣ ಗೌರವ-ಗೌರವರ ಅಗೌರವ
ಎಕತೆ-ವಿವಿಧತೆ ನಿರ್ದಿಷ್ಟತೆ-ನಿರ್ದಿಷ್ಟ ಅನಿಷ್ಟತೆ
ಕತೆ-ಕತೆಗಾರ್ತಿ ನೃತ್ಯಗಾರ-ನೃತ್ಯ ನೃತ್ಯಗಾರ್ತಿ