ಕನ್ನಡ ಮತ್ತು ಉರ್ದುವಿನ ಸಂಬಂಧ ಮುಸ್ಲಿಂರಾಜರ ಆಡಳಿತದ ಪ್ರಭಾವದಿಂದ ಆರಂಭವಾಯಿತು. ವಿಜಯನಗರದ ಸಾಮ್ರಾಜ್ಯ ಪತನವಾದ ನಂತರ ಕರ್ನಾಟಕದ ಹಲವು ಭಾಗಗಳನ್ನು ಮುಸ್ಲಿಮ್‌ರು ಆಡಳಿತ ಮಾಡಿದರು. ಅವರಲ್ಲಿ ಬಹುಮನಿಗಳು, ಆದಿಲ್‌ಷಾಹಿ ಸುಲ್ತಾನರು, ಹೈದರಾಬಾದಿನ ನಿಜಾಮರು ಮತ್ತು ಹೈದರಾಲಿ ಮತ್ತು ಟಿಪ್ಪುಸುಲ್ತಾನರು ಪ್ರಮುಖರು. ಬಹಮನಿ ಹಾಗೂ ಆದಿಲ್‌ಷಾಹಿ ಸುಲ್ತಾನರ ಕಾಲದಲ್ಲಿ ಪಾರಸಿ, ಅರಬ್ಬಿ, ಮರಾಠಿ ಮತ್ತು ಕನ್ನಡ ಮಿಶ್ರಣ ರೂಪವೇ ‘ರೇಖ್ತಾ’ ಎಂಬ ನೂತನ ಭಾಷೆ ಸೃಷ್ಟಿಯಾಯಿತು. ಇದು ಮುಂದೆ ದಖನಿ ಉರ್ದುಆಗಿ, ಮುಂದೆ ಉರ್ದುಭಾಷೆಯಾಯಿತು ಎಂಬ ಅಭಿಪ್ರಾಯ ಗಳಿವೆ. ವಾಸ್ತವವಾಗಿ ಉರ್ದು ಮತ್ತು ದಖನಿ ಉರ್ದು ಬೇರೆ ಬೇರೆ. ಕಳೆದ ಐವತ್ತು ವರ್ಷಗಳಲ್ಲಿ ಕನ್ನಡ ಮತ್ತು ಉರ್ದುವಿನ ಸಂಬಂಧ ಅಧೀನತೆಯ ಸಂಬಂಧ. ಅಂದರೆ ಕನ್ನಡ ಭಾಷೆಗೆ ಉರ್ದು ಅಧೀನವಾಗಿದೆ. ಎರಡು ಭಾಷೆಗಳ ಸಂಘರ್ಷ ಎಂದರೆ ಎರಡು ಭಾಷಿಕರ ನಡುವಿನ ಸಂಘರ್ಷ ಎಂದೆ ಅರ್ಥ. ಉರ್ದುಭಾಷಿಕರು ಅಖಿಲ ಭಾರತದ ಸಮುದಾಯವಾಗಿದ್ದಾರೆ. ಅಂದರೆ ತಾವು ಯಾವ ಯಾವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೋ ಆಯಾ ನೆಲದ ಭಾಷೆಯನ್ನು ವ್ಯವಹಾರಿಕವಾಗಿ ಕಲಿತು ವ್ಯವಹರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಉರ್ದು ಭಾಷಿಕರು ದ್ವಿಭಾಷಿಕರಾಗಿ ಮಧ್ಯದಲ್ಲಿ ನೆಲಸಿದ್ದಾರೆ. ಕರ್ನಾಟಕದಲ್ಲಿ ಮೂಲ ನಿವಾಸಿಯಾಗಬೇಕಾದರೆ ಕನ್ನಡ ಕಲಿಯಬೇಕಾಗಿದೆ. ಆದರೆ ಕರ್ನಾಟಕದ ಕೆಲವು ಪ್ರದೇಶ ಗಳಲ್ಲಿ ಉರ್ದುಭಾಷಿಕರಾದ ಮಹಿಳೆಯರು ಕನ್ನಡ ಕಲಿಯದೆ ಉಳಿದಿದ್ದಾರೆ. ಏಕೆಂದರೆ ಉರ್ದುಭಾಷಿಕ ಮಹಿಳೆಯರು ಕನ್ನಡ ಸಾಮಾಜಿಕ ಸಂಪರ್ಕ ಕೊರತೆಯಿಂದಾಗಿ ಏಕಭಾಷಿಕ ರಾಗಿ ಉಳಿದಿದ್ದಾರೆ. ಪುರುಷರು ಆರ್ಥಿಕ, ಧಾರ್ಮಿಕ ಮತ್ತು ಸಾಮಾಜಿಕ ಆಯಾಮಗಳ ನಿರ್ವಹಣೆ ಒತ್ತಡದಿಂದ ದ್ವಿಭಾಷಿಕರಾಗಿದ್ದಾರೆ. ಕೆಲವು ಸಂದರ್ಭದಲ್ಲಿ ಬಹುಭಾಷಿಕ ರಾಗಿದ್ದಾರೆ. ಕರ್ನಾಟಕದಲ್ಲಿ ಉರ್ದುಭಾಷಿಕರು ಕೆಲವು ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ನೆಲಸಿದ್ದರೆ ಮತ್ತೆ ಕೆಲವು ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ನೆಲಸಿದ್ದಾರೆ. ಈ ಭಾಷಿಕರು ಕೋಮುಸೌಹರ್ಧತೆ ವಿಚಾರದಲ್ಲಿ ಒಂದೆ ಎಂದು, ಉರ್ದುಭಾಷೆಯ ವಿಚಾರದಲ್ಲಿ ಅನ್ಯರೆಂದು ಗುರುತಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿರುವ ಉರ್ದುಭಾಷಿಕರು ಚಾರಿತ್ರಿಕ ಮತ್ತು ಭಾಷಿಕ ಚಹರೆಯಲ್ಲಿ ತಮ್ಮ ಅನನ್ಯತೆಯನ್ನು ಉಳಿಸಿಕೊಂಡಿದ್ದಾರೆ. ಇದಕ್ಕಿಂತ ಹೊರತಾಗಿ ಉರ್ದುಭಾಷಿಕರು ಭೌತಿಕ ಚಹರೆಯನ್ನು ಮಾತ್ರ ಉಳಿಸಿಕೊಂಡಿದ್ದು, ಭಾಷಿಕ ಚಹರೆಯನ್ನು ಬಿಟ್ಟುಕೊಟ್ಟಿದ್ದಾರೆ. ಧಾರ್ಮಿಕ ವಿಚಾರಗಳಿಗಾಗಿ ಈವೊಂದು ಗುಂಪು ಪರ್ಶಿ ಯನ್ ಮತ್ತು ಅರಾಬಿಕ್ ಭಾಷೆಯನ್ನು ಬಳಕೆ ಮಾಡುತ್ತಿದ್ದಾರೆ. ಇವರಾಡುವ ಭಾಷೆ ಕನ್ನಡ. ಕರ್ನಾಟಕದಲ್ಲಿರುವ ಈ ಭಾಷಿಕ ಸಮುದಾಯ ಬಳಸುವ ಕನ್ನಡ ವಿಶಿಷ್ಟವಾಗಿದೆ. ಕರ್ನಾಟಕದಲ್ಲೆ ಬೀದರ್ ಮತ್ತು ಗುಲ್ಬರ್ಗಾ ಭಾಗಗಳಲ್ಲಿ ಸುಮಾರು ೧೪ನೇ ಶತಮಾನದಿಂದ ೨೦ನೇ ಶತಮಾನದವರೆಗೆ ಬಹುಮನಿ ಸುಲ್ತಾನರ ಆಳ್ವಿಕೆಯ ಪ್ರಭಾವದಿಂದ ಅಲ್ಲಿನ ಭಾಷಿಕ ಪರಿಸ್ಥಿತಿ ಉಳಿದ ಭಾಗದ ಭಾಷಿಕ ಪರಿಸ್ಥಿತಿಗಿಂತ ಬೇರೆಯಾಗಿದೆ. ಆ ಭಾಗದಲ್ಲಿರುವ ಕನ್ನಡಿಗರೆಲ್ಲ ಉರ್ದುಭಾಷೆ ಗೊತ್ತಿದೆ. ಆದರೆ ಅಲ್ಲಿರುವ ಮುಸ್ಲಿಂರೆಲ್ಲರಿಗೂ ಕನ್ನಡ ಗೊತ್ತಿಲ್ಲ. ಈ ಅಭಿಪ್ರಾಯ ಮುಸ್ಲಿಂ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಅನ್ವಯಿ ಸುತ್ತದೆ. ಕರ್ನಾಟಕದಲ್ಲಿರುವ ಉರ್ದುಭಾಷಿಕರು ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿ ಗಾಗಿ ಕನ್ನಡದೊಂದಿಗಿನ ಸಂಬಂಧ ಮೊದಲಿನಷ್ಟು ಇಲ್ಲ ಎಂದು ಹೇಳಬಹುದು.

ಈ ಅಭಿಪ್ರಾಯ ಶೈಕ್ಷಣಿಕ ವಲಯದಲ್ಲಿ ಹೆಚ್ಚು ಜಾರಿಯಲ್ಲಿದೆ. ಕರ್ನಾಟಕದಲ್ಲಿರುವ ಶಿಕ್ಷಣ ನೀತಿಯಲ್ಲಿ ಎರಡು ಅಭಿಪ್ರಾಯಗಳಿವೆ. ಒಂದು.. ಶಿಕ್ಷಣದಲ್ಲಿ ಕನ್ನಡ ಕಡ್ಡಾಯ. ಎರಡು: ಕನ್ನಡದಲ್ಲಿ ಶಿಕ್ಷಣ. ಈ ಎರಡು ಅಭಿಪ್ರಾಯಗಳಲ್ಲಿ ಮೊದಲಿನ ಅಭಿಪ್ರಾಯದಲ್ಲಿ ಕನ್ನಡ ಭಾಷೆಯ ಆಯ್ಕೆ ಐಚ್ಛಿಕವಾಗುತ್ತದೆ. ಎರಡನೆ ಅಭಿಪ್ರಾಯದಲ್ಲಿ ಕನ್ನಡ ಕಡ್ಡಾಯ ವಾಗುತ್ತದೆ. ನಮ್ಮ ಕರ್ನಾಟಕದಲ್ಲಿರುವ ಭಾಷಾನೀತಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಜಾರಿಯಲ್ಲಿರುವುದರಿಂದ ಅವರವರ ಮನೆಮಾತಿನಲ್ಲಿ ಶಿಕ್ಷಣ ನೀಡುವುದಕ್ಕೆ ಅವಕಾಶವಿದೆ. ಕನ್ನಡೇತರ ಮಕ್ಕಳು ಕನ್ನಡದಲ್ಲಿ ಶಿಕ್ಷಣವನ್ನು ಪಿ.ಯು.ಸಿ. ಮತ್ತು ನಾಲ್ಕನೆ ತರಗತಿಯ ನಡುವೆ ಪಡೆಯುತ್ತಿದ್ದಾರೆ. ಈ ಹಿನ್ನಲೆಯಿಂದ ಕನ್ನಡ ಭಾಷೆಯೊಂದಿಗೆ ಉರ್ದುಭಾಷಿಕರ ಮಕ್ಕಳು ಸಂಬಂಧವನ್ನು ಅನಿವಾರ್ಯವಾಗಿ ಇಟ್ಟುಕೊಳ್ಳದೆ, ಒತ್ತಡದಿಂದ ಇಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಅಂದರೆ ಔಪಚಾರಿಕ ನೆಲೆಯಲ್ಲಿರುವ ಒತ್ತಡ ಅನೌಪಚಾರಿಕ ನೆಲೆಯಲ್ಲಿ ಇಲ್ಲ.

ಕನ್ನಡ ಮತ್ತು ಉರ್ದು ಲಿಪಿಗಳು ದೇವರನಾಗರಿಯ ಲಿಪಿಯಲ್ಲಿವೆ. ಹಾಗಾಗಿ ಉರ್ದುವನ್ನು ದೇವನಾಗರಿ ಲಿಪಿಯಲ್ಲಿ ಓದಲು ಮತ್ತು ಬರೆಯಲು ಸಾಧ್ಯ. ಧ್ವನಿ ಅನುಕರಣೆ ಯಲ್ಲಿ ಅತ್ಯಂತ ಸಮೀಪ ಇರುವ ಕನ್ನಡ ಉರ್ದು ಭಾಷೆಯ ಬರವಣಿಗೆಗೆ ಅನುಕೂಲವಾಗ ಬಹುದು ಎಂದು ಡಾ.ಕೆ.ವಿ.ನಾರಾಯಣ ಅವರು ಒಂದು ಪ್ರಮೇಯವನ್ನು ಮಂಡಿಸಿದ್ದಾರೆ. ಈ ಪ್ರಮೇಯ ನಿಜವಾದರೆ ಈಗಿರುವ ಕನ್ನಡಕ್ಕೆ ಉರ್ದು ಪರಕೀಯ ಎಂಬ ಮನೋಭಾವ ದೂರವಾಗುತ್ತದೆ. ಭಾವನಾತ್ಮಕ ನೆಲೆಯಲ್ಲಿ ಒಪ್ಪಿಕೊಂಡರೆ ಇದು ಸಾಧ್ಯ. ಇಲ್ಲವಾದಲ್ಲಿ ಒಂದು ಪ್ರಮೇಯವಾಗಿಯೇ ಉಳಿಯುತ್ತದೆ.

ಕನ್ನಡದಲ್ಲಿ ಉರ್ದುಪದಗಳನ್ನು ಕನ್ನಡದ ಉಚ್ಚಾರಣೆಗನುಗುಣವಾಗಿ ಬಳಕೆ ಮಾಡಲಾಗುತ್ತದೆ. ಆದರೆ ಸಂಸ್ಕೃತ ಭಾಷೆಯ ಪದಗಳನ್ನು ಮಾತ್ರ  ಸಂಸ್ಕೃತ ಭಾಷೆಯ ಉಚ್ಚಾರಣೆಗನುಗುಣವಾಗಿ ಬಳಕೆ ಮಾಡಬೇಕು ಎಂಬ ಒತ್ತಾಯ ಕನ್ನಡದ ಮೇಲಿದೆ. ಉರ್ದು ಪದಗಳು ಕನ್ನಡ ಪರಿಸರದಲ್ಲಿ ಬಳಕೆ ನೆಲೆಯಲ್ಲಿದೆ ಹೊರತು, ಬರಹದ ನೆಲೆಯಲ್ಲಿ ಇಲ್ಲ. ಉದಾಹರಣೆಗೆ ‘ತಾರೀಖು’ ಪದ ಬಳಕೆಯಲ್ಲಿ ಮಾತ್ರ ಉಳಿದಿದ್ದು ಬರಹದಲ್ಲಿ ‘ದಿನಾಂಕ’ ಪದ ಉಳಿದಿದೆ. ಕೆಲವು ಸಂದರ್ಭದಲ್ಲಿ ಉರ್ದು ಪದಗಳಿಗ ಬದಲಾಗಿ ಕನ್ನಡ ಪದಗಳನ್ನು ಬಳಸಲಾಗುತ್ತಿದೆ. ಕನ್ನಡದಲ್ಲಿ ಸಂಸ್ಕೃತ ಭಾಷೆಗೆ ನೀಡಿರುವ ಸ್ಥಾನಮಾನವನ್ನು ಉರ್ದುವಿಗೆ ಅಥವಾ ಇತರ ಭಾರತೀಯ ಭಾಷೆಗಳಿಗೆ ನೀಡಿಲ್ಲ. ಉದಾಹರಣೆಗೆ ‘ಅಹವಾಲು’ ಪದಕ್ಕೆ ‘ಮನವಿ’ ಪದವನ್ನು ಬಳಕೆ ಮಾಡಲಾಗುತ್ತಿದೆ. ಈ ಅಂಶವನ್ನು ಗಮನಿಸಿದಾಗ ಉರ್ದು ಭಾಷೆ ಮತ್ತು ಕನ್ನಡ ಭಾಷೆ ಸಂಬಂಧ ಅಧೀನತೆಯ ಸಂಬಂಧ. ಉರ್ದುಭಾಷಿಕರಿಗೆ ಕನ್ನಡ ಉದ್ಯೋಗದ ಭಾಷೆಯಾಗಿದೆ. ಕನ್ನಡಿಗರಿಗೆ ಇಂಗ್ಲಿಶ್ ಉದ್ಯೋಗದ ಭಾಷೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಉರ್ದು ಭಾಷಿಕರು ೧೦ನೇ ತರಗತಿ ನಂತರ ಉರ್ದು ಇಲ್ಲವೆ ಇಂಗ್ಲಿಶ್ ಭಾಷೆಗೆ ಪಲ್ಲಟವಾಗುತ್ತಿದ್ದಾರೆ. ಅಂದರೆ ಕನ್ನಡ ಭಾಷೆಯನ್ನು ವ್ಯವಹರಿಕವಾಗಿ ಮಾತ್ರ ಇಟ್ಟುಕೊಂಡು, ಶೈಕ್ಷಣಿಕವಾಗಿ ಕನ್ನಡವನ್ನು ಐಚ್ಛಿಕವಾಗಿ ಸ್ವೀಕರಿಸಿದ್ದಾರೆ ಎಂದರೆ ತಪ್ಪಾಗಲಾರದು. ಭಾಷಾ ಪರಿವಾರದ ಹಿನ್ನಲೆಯಲ್ಲಿ ನೋಡುವುದಾದರೆ ಕನ್ನಡ ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದರೆ, ಉರ್ದು ಇಂಡೋ-ಆರ‍್ಯಾನ್ ಭಾಷಾ ಪರಿವಾರಕ್ಕೆ ಸೇರಿದ ಭಾಷೆ. ಹಾಗಾಗಿ ಬರವಣಿಗೆಯ ಕ್ರಮದಲ್ಲೂ ಈ ಎರಡು ಭಾಷೆಗಳ ನಡುವೆ ವ್ಯತ್ಯಾಸವಿದೆ.

ಕನ್ನಡ ಮತ್ತು ಉರ್ದುವಿನ ಬಳಕೆಯ ನೆಲೆಗಳು

ಕರ್ನಾಟಕದಲ್ಲಿರುವ ಉರ್ದುಭಾಷಿಕರು ಬೇರೆ ಬೇರೆ ಭಾಷಾ ಅಲ್ಪಂಸಖ್ಯಾತರಿಗೆ ಹೋಲಿಸಿದರೆ, ಉರ್ದುಭಾಷಿಕರು ಬಹುಸಂಖ್ಯಾತರಾಗಿದ್ದಾರೆ. ಅಕ್ಷರಸ್ಥ ಉರ್ದುಭಾಷಿಕರು ಉರ್ದುವಿನಿಂದ ಇಂಗ್ಲಿಶ್‌ಗೆ ನುಡಿಪಲ್ಲಟ ಮಾಡಿದರೆ, ಅನಕ್ಷರಸ್ಥ ಉರ್ದುವಿನಿಂದ ಕನ್ನಡಕ್ಕೆ ಕನ್ನಡದಿಂದ ಉರ್ದುವಿಗೆ ನುಡಿಪಲ್ಲಟ ಮಾಡುತ್ತಾರೆ. ಮನೆಯ ಆವರಣದಲ್ಲಿ ಹೆಚ್ಚು ಉರ್ದುಭಾಷೆಯನ್ನೇ ಬಳಕೆಮಾಡುವರು. ಹಾಗೆಯೇ ಸ್ನೇಹಿತರು, ಸಂಬಂಧಿಗಳು, ಶಾಲೆಯ ಆವರಣದಲ್ಲಿ ಉಪಾಧ್ಯಾಯರ ಸಂಗಡ ಉರ್ದುವಿನಲ್ಲೆ ಮಾತನಾಡುತ್ತಾರೆ. ಕನ್ನಡ ಕಲಿಸುವ ಅಧ್ಯಾಪಕರು ಕನ್ನಡ ಮನೆಮಾತುಳ್ಳವರು ಆದರೂ ಸಹ ಉರ್ದುವಿನ ಮೂಲಕ ಕನ್ನಡ ಕಲಿಸುವ ಪರಿಪಾಠವಿದೆ. ತುಂಬ ಕಡಿಮೆ ಸಮಯದಲ್ಲಿ ಪ್ರತಿದಿನ ಕನ್ನಡ ಭಾಷೆಯನ್ನು ಬಳಸುವರು. ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಭಾಷೆಗೆ ತೆರೆದುಕೊಳ್ಳುವ ಸಂದರ್ಭ ಶಾಲೆಯ ಆವರಣ ಎಂದು ಅಭಿಪ್ರಾಯಪಡುತ್ತಾರೆ. ಹಾಗೆಯೆ ಪ್ರತಿದಿನ ದಿನಪತ್ರಿಕೆಯನ್ನು ಉರ್ದು ಭಾಷೆ ಮಾಧ್ಯಮದ ಪತ್ರಿಕೆಗಳನ್ನು ಇಷ್ಟಪಡುತ್ತಾರೆ. ಶಾಲೆ ಮತ್ತು ಮನೆಯ ಆವರಣದಲ್ಲಿ ಉರ್ದುಭಾಷೆಯಲ್ಲಿ ವ್ಯವಹಾರವನ್ನು ಇಟ್ಟುಕೊಂಡಿದ್ದಾರೆ. ಪತ್ರವ್ಯವಹಾರವನ್ನು ಉರ್ದು ಮತ್ತು ಕನ್ನಡ ಎರಡೂ ಭಾಷೆಯಲ್ಲೂ ನಿರ್ವಹಿಸುತ್ತಿದ್ದಾರೆ. ನರ್ಸರಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಉರ್ದುವಿನಲ್ಲೇ ಕಲಿಯುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ತುಂಬ ಬಡತನದಿಂದಿರುವ ಕುಟುಂಬದವರ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತಿದ್ದಾರೆ. ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳು ತುಂಬ ಬಡತನದಲ್ಲಿರುವವರು ಮಾತ್ರ.

ತರಗತಿಯಲ್ಲಿ ಉಪಾಧ್ಯಾಯರೊಂದಿಗೆ ಉರ್ದುವಿನಲ್ಲಿ ಹೆಚ್ಚು ವ್ಯವಹರಿಸುತ್ತಾರೆ. ಹಾಗೆಯೇ ಉರ್ದುಭಾಷಿಕ ಮಕ್ಕಳು ವಾಸಿಸುವ ಮಕ್ಕಳ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚು ಉರ್ದು ಭಾಷೆಯ ಜನರು ಇರುವುದರಿಂದ ಅವರು ಉರ್ದು ಭಾಷೆಯಲ್ಲೇ ವ್ಯವಹರಿಸುವರು. ಈ ಭಾಷಿಕ ಪರಿಸರ ನಗರ ಪ್ರದೇಶದಲ್ಲಿ ಮಾತ್ರ ಇದೆ. ಗ್ರಾಮೀಣ ಪ್ರದೇಶದಲ್ಲಿ ಕನ್ನಡಿಗರೆ ಹೆಚ್ಚು ಇರುವುದರಿಂದ ಅನಿವಾರ್ಯವಾಗಿ ಉರ್ದು ಭಾಷಿಕರು ಅನಿವಾರ್ಯವಾಗಿ ಕನ್ನಡವನ್ನು ಬಳಸಬೇಕಾಗುತ್ತದೆ.

ಉರ್ದು ಭಾಷಿಕ ಮಕ್ಕಳು ಕರ್ನಾಟಕದಲ್ಲಿ ಕನ್ನಡವನ್ನು ಕಲಿಯುವುದು ಶಾಲೆಯ ಆವರಣದಲ್ಲಿ ಮಾತ್ರ. ಉಳಿದಂತೆ ಅಶಿಕ್ಷಿತ ಉರ್ದುಭಾಷಿಕ ಮಕ್ಕಳು ಗ್ಯಾರೆಜ್‌ಗಳಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡುವ ಅನಿವಾರ್ಯತೆ ಇದೆ. ಪರೀಕ್ಷೆಯನ್ನು ಉರ್ದುವಿನಲ್ಲೆ ಎದಿರುಸುತ್ತಿದ್ದಾರೆ. ರೇಡಿಯೋ ಮತ್ತು ದೂರದರ್ಶನದಲ್ಲಿ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉರ್ದು ಮತ್ತು ಹಿಂದಿಯಲ್ಲಿ ಇಷ್ಟಪಡುತ್ತಾರೆ. ಕನ್ನಡ ಭಾಷೆಯನ್ನು ಕೆಲವರು ಸ್ನೇಹಿತರೊಂದಿಗೆ ಮಾತನಾಡುವುದರೊಂದಿಗೆ ಕಲಿತರೆ, ಕೆಲವರು ಅಕ್ಕಪಕ್ಕದ ಮನೆಯವರೊಂದಿಗೆ ಮಾತನಾಡುವುದರ ಮೂಲಕ ಕಲಿಯುತ್ತಿದ್ದಾರೆ. ಇನ್ನೂ ಕೆಲವರು ಕನ್ನಡ ದಿನಪತ್ರಿಕೆಗಳನ್ನು ಗಮನಿಸುವುದರ ಮೂಲಕ ಕಲಿಯುವ ಪ್ರಯತ್ನದಲ್ಲಿದ್ದಾರೆ. ಮತ್ತೆ ಕೆಲವರು ವಿಶೇಷ ತರಬೇತಿ ಮಾಡುವುದರೊಂದಿಗೆ, ಕನ್ನಡವನ್ನು ಬಳಸಬೇಕಾದ ಸಂದರ್ಭವಿದೆ.

ಉರ್ದು ಭಾಷಿಕರ ಕೆಲವು ಮಕ್ಕಳು ಕನ್ನಡ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತಾರೆ ಆದರೆ ಮಾತನಾಡಲು ಬರುವುದಿಲ್ಲ. ಕೆಲವರು ಅರ್ಥಮಾಡಿಕೊಂಡು ಮಾತನಾಡುತ್ತಾರೆ. ಆದರೆ ಓದುವುದು ಮತ್ತು ಬರೆಯುವುದಿಲ್ಲ. ಇನ್ನು ಕೆಲವರು ಓದುವುದು, ಬರೆಯುವುದು ಮತ್ತು ಮಾತನಾಡುತ್ತಾರೆ. ಸಾರ್ವಜನಿಕ ಸ್ಥಳವಾದ ಮಸೀದಿ ಮುಂತಾದ ಆಪ್ತ ಸ್ಥಳಗಳಲ್ಲಿ ಉರ್ದು ಭಾಷೆ ಮೂಲಕ ವ್ಯವಹರಿಸುತ್ತಾರೆ. ಹೆಚ್ಚಿನ ಮಕ್ಕಳು ಸ್ನೇಹಿತರ ಜತೆಯಲ್ಲಿ ಉರ್ದುವಿನಲ್ಲೆ ಸಂಭಾಷಣೆ ನಡೆಸುವ ಪರಿಪಾಠವಿದೆ. ಕನ್ನಡ ಸ್ನೇಹಿತರೊಂದಿಗೆ, ಕನ್ನಡ ಭಾಷೆಯ ಮೂಲಕ ವ್ಯವಹರಿಸುತ್ತಾರೆ. ಉರ್ದು ಭಾಷಿಕರ ಮನೆ ಆವರಣದಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಬಳಕೆ ಮಾಡುವರು ಗಂಡಸರು. ಏಕೆಂದರೆ ದಿನನಿತ್ಯ ವ್ಯವಹಾರವನ್ನು ಕನ್ನಡಿಗರ ಜತೆ ವ್ಯವಹರಿಸಬೇಕಾಗಿರುವುದರಿಂದ ಅವರು ಅನಿವಾರ್ಯವಾಗಿ ಕನ್ನಡ ಬಳಸಬೇಕಾಗಿದೆ. ಉರ್ದುಭಾಷಿಕ ಮಕ್ಕಳು ಹೆಚ್ಚು ಉರ್ದು ಮಾಧ್ಯಮದ ಶಾಲೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಮಕ್ಕಳು ಕಥೆ ಮತ್ತು ಹಾಡುಗಳನ್ನು ಉರ್ದುವಿನ ಮೂಲಕವೆ ಹೇಳುತ್ತಾರೆ. ಮನೆಯ ಆವರಣದಲ್ಲಿ ಮಕ್ಕಳು ತಂದೆಯ ಜತೆಯಲ್ಲಿ ಕನ್ನಡ ಮತ್ತು ಉರ್ದುವಿನ ಮೂಲಕ ವ್ಯವಹರಿಸಿದ, ತಾಯ ಜತೆಯಲ್ಲಿ ಉರ್ದು ಮಾತ್ರ ಬಳಸುವ ಸಂದರ್ಭವಿದೆ. ಅದೆ ರೀತಿ ಅಜ್ಜ, ತಾತ, ಸಂಬಂಧಿಕರು, ಶಿಕ್ಷಕರು ಮತ್ತು ಅಕ್ಕಪಕ್ಕದ ಮನೆಯವರ ಜತೆಯಲ್ಲಿ ಉರ್ದುವಿನ ಮೂಲಕ ಮಾತ್ರ ವ್ಯವಹರಿಸುವ ಸಂದರ್ಭವಿದೆ. ಅದೆ ರೀತಿ ಪಾಠದ ಮನೆಯಲ್ಲಿ, ಆಟದ ಮನೆಯಲ್ಲಿ, ಸಿನಿಮಾದ ಕಥೆಗಳನ್ನು ಹೇಳುವಾಗ ಮತ್ತು ಯಾವುದೇ ಸಂದರ್ಭವೊಂದಕ್ಕೆ ಉದಾಹರಣೆ ನೀಡುವಾಗ ಉರ್ದುವಿನ ಮೂಲಕ ವ್ಯವಹರಿಸುವ ಸಂದರ್ಭಗಳಿವೆ. ಮನೆಯ ಆವರಣದಲ್ಲಿ ಉರ್ದುಭಾಷಿಕರು ಕನ್ನಡ ಭಾಷೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾತನಾಡಬಲ್ಲರು. ಓದುವುದು ಮತ್ತು ಬರೆಯುವುದು ತಿಳಿದಿರುವುದಿಲ್ಲ.

ಉರ್ದು ಭಾಷಿಕ ಮಕ್ಕಳು ಬಹುಭಾಷಿಕರು

ಉರ್ದು ಭಾಷಿಕರ ಮಕ್ಕಳು ಬಿಡುವಿನ ವೇಳೆಯಲ್ಲಿ ಅರಾಬಿಕ್ ಮತ್ತು ಉರ್ದು ಟ್ಯೂಷನ್‌ಗೆ ಹೋಗುತ್ತಾರೆ. ೫ ವರ್ಷದಿಂದ ೧೪ ವರ್ಷದವರೆಗೆ ಪ್ರತಿದಿನ ಸಾಯಂಕಾಲ ೭ಗಂಟೆಯಿಂದ ಮಸೀದಿಯಲ್ಲಿ ಕುರಾನ್ ಅಭ್ಯಾಸ ಮಾಡಿಸುತ್ತಾರೆ. ಹಾಗೆಯೇ ಮಸೀದಿಯಲ್ಲಿ ಅರಬ್ಬಿ ಭಾಷೆಯನ್ನು ಕಲಿಸುತ್ತಾರೆ. ಏಕ ಕಾಲದಲ್ಲಿ ಈ ಮಕ್ಕಳು ಮಸೀದಿ, ಆವರಣದಲ್ಲಿ ಉರ್ದು ಮತ್ತು ಅರಬ್ಬಿ ಭಾಷೆಯನ್ನು ಮನೆಯ ಆವರಣದಲ್ಲಿ ಉರ್ದು ಭಾಷೆಯನ್ನು, ಶಾಲೆಯ ಆವರಣದಲ್ಲಿ ಉರ್ದು ಮತ್ತು ಅರಬ್ಬಿ ಭಾಷೆಯನ್ನು ಮನೆಯ ಆವರಣದಲ್ಲಿ ಉರ್ದುಭಾಷೆಯನ್ನು, ಶಾಲೆಯ ಆವರಣದಲ್ಲಿ ಉರ್ದು ಕನ್ನಡ ಮತ್ತು ಇಂಗ್ಲಿಶ್ ಭಾಷೆಯನ್ನು ಅಭ್ಯಾಸ ಮಾಡಬೇಕಾದ ಸಂದರ್ಭವಿದೆ. ಪ್ರೌಢಶಾಲೆಯಲ್ಲಿ ಇಂಗ್ಲಿಶ್ ಮಾಧ್ಯಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕನ್ನಡ ಮಾಧ್ಯಮದಲ್ಲಿ ಆರ್ಥಿಕವಾಗಿ ಕೆಳಮಟ್ಟದಲ್ಲಿರುವವರು ಓದುತ್ತಾರೆ. ಶಾಲೆಯ ಆವರಣದಲ್ಲಿ ಕನ್ನಡ ಭಾಷೆಯನ್ನು ಕೇವಲ ೪೫ ನಿಮಿಷಗಳು ಮಾತ್ರ ಓದುತ್ತಿದ್ದಾರೆ. ಒಂದು ವೇಳೆ ಕನ್ನಡ ಬೋಧಿಸುವ ಅಧ್ಯಾಪಕ ರಜೆ ಇದ್ದರೆ ಆ ದಿನ ಶಾಲೆಯ ಆವರಣದಲ್ಲಿ ಸಹ ಆ ಮಕ್ಕಳ ಕಿವಿಯ ಮೇಲೆ ಕನ್ನಡ ಬೀಳುವ ಸಂದರ್ಭವೇ ಇಲ್ಲ. ಈ ಹಿನ್ನಲೆಯಿಂದ ಕನಿಷ್ಟ ದಿನಕ್ಕೆ ಎರಡು ಅವಧಿಯಾದರೂ ಕನ್ನಡ ಬೋಧಿಸುವ ಅಗತ್ಯವಿದೆ ಎಂದು ಅಧ್ಯಾಪಕರು ಅಭಿಪ್ರಾಯಪಡುತ್ತಾರೆ. ಈ ಮಕ್ಕಳು ಕನ್ನಡ ಉಪಾಧ್ಯಾಯರ ಜತೆಯಲ್ಲಿ ಉರ್ದು ಮತ್ತು ಕನ್ನಡ ಎರಡು ಭಾಷೆಯಲ್ಲೂ ವ್ಯವಹರಿಸುತ್ತಾರೆ. ವಿಶೇಷ ಎಂದರೆ ಉರ್ದುಮಕ್ಕಳಿಗೆ ಕನ್ನಡ ಕಲಿಸುವ ಅಧ್ಯಾಪಕರಿಗೆ ಉರ್ದು ತಿಳಿದಿದೆ. ಇಲ್ಲಿ ಗಮನಿಸಬೇಕಾದ ಭಾಷಿಕ ಸಂಗತಿಯೆಂದರೆ ಅಧ್ಯಾಪಕರು ಸಹ ಉರ್ದುವಿನ ಮೂಲಕ ಕನ್ನಡ ಕಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಅವರು ಪ್ರದೇಶವಾರು ನೆಲೆಸಿರುವ ಕ್ರಮ. ಅದರ ವಿವರ ಇಂತಿದೆ.

೧೯೯೧ ಭಾರತೀಯ ಜನಗಣತಿಯ ಪ್ರಕಾರ ಜಿಲ್ಲಾವಾರು ಉರ್ದುಭಾಷಿಕರ ಸಂಖ್ಯೆ ಕೆಳಗಿನಂತಿದೆ.

ಜಿಲ್ಲೆಗಳು ಭಾಷಿಕರ ಸಂಖ್ಯೆ
ಕರ್ನಾಟಕ ,೪೮೦.೦೩೮
ಬೆಂಗಳೂರು ೬೧೨.೨೩೭
ಬೆಂಗಳೂರು (ಗ್ರಾಮಾಂತರ) ೧೩೯.೬೫೩
ಬೆಳಗಾವಿ ೩೧೩.೧೮೩
ಬಳ್ಳಾರಿ ೧೯೧.೨೮೮
ಬೀದರ್ ೬೨.೧೬೩
ಬಿಜಾಪುರ ೧೫.೨೦೨
ಚಿಕ್ಕಮಗಳೂರು ೩೦.೨೨೩
ಚಿತ್ರದುರ್ಗ ೨೦೩.೧೯೧
ದಕ್ಷಿಣ ಕನ್ನಡ ೭೦.೫೬೫
ಧಾರವಾಡ ೪೮೩.೩೬೪
ಗುಲ್ಬರ್ಗಾ ೪೩೭.೦೨೩
ಹಾಸನ ೮೧.೦೮೩
ಕೊಡಗು ೧೩.೮೬೮
ಕೋಲಾರ ೨೪೯.೮೨೫
ಮಂಡ್ಯ ೬೪.೦೪೮
ಮೈಸೂರು ೨೧೯.೦೪೪
ರಾಯಚೂರು ೨೪೪.೨೭೦
ಶಿವಮೊಗ್ಗ ೧೯೯.೯೦೫
ತುಮಕೂರು ೧೭೩.೦೯೭
ಉತ್ತರ ಕನ್ನಡ ೧೨೫.೬೧೫

೧೯೯೧ ಭಾರತೀಯ ಜನಗಣತಿಯ ಪ್ರಕಾರ ಉರ್ದುಭಾಷಿಕರು ಕರ್ನಾಟಕದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಳಕಂಡಂತೆ ಮಾತನಾಡುತ್ತಿದ್ದಾರೆ.

ಕರ್ನಾಟಕ

ನಗರ ಗ್ರಾಮೀಣ
೨,೭೦೦.೬೫೯೯ ೧,೭೭೯.೩೭೯

ಸಂಖ್ಯೆಯಲ್ಲಿ ಮಾತನಾಡುತ್ತಿದ್ದು, ಗ್ರಾಮೀಣ ಪ್ರದೆಶದಲ್ಲಿ ೩೯.೭೨, ಸಂಖ್ಯೆ ಯಲ್ಲಿಯೂ, ನಗರ ಪ್ರದೇಶಗಳಲ್ಲಿ ೬೦.೨೮ರ ಸಂಖ್ಯೆಯಲ್ಲಿಯೂ ಮಾತನಾಡುತ್ತಿದ್ದಾರೆ.

೧೯೯೧ ಭಾರತೀಯ ಜನಗಣತಿಯ ಜಿಲ್ಲಾವಾರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕನ್ನಡ ಭಾಷಿಕರ ಸಂಖ್ಯೆ ಕೆಳಗಿನಂತಿದೆ.

ಜಿಲ್ಲೆಗಳು

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
ಬೆಂಗಳೂರು  ಜಿಲ್ಲೆ ೧,೪೯೨,೪೩೬ ೫೭೯,೩೫೯ ೩೬೪.೮೮೪ ೩೨,೮೭೮

ಬೆಂಗಳೂರು ಜಿಲ್ಲೆಯಲ್ಲಿ ಒಟ್ಟು ಉರ್ದುಭಾಷಿಕರು ೬೧೨.೨೩೭ ಪ್ರಮಾಣದಲ್ಲಿ ಮಾತನಾಡುತ್ತಾರೆ. ಅದರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉರ್ದು ಭಾಷೆಯನ್ನು ೫.೩೭ರಷ್ಟು ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾರೆ. ೯೪.೬೩ರಷ್ಟು ಪ್ರಮಾಣದಲ್ಲಿ ನಗರ ಪ್ರದೇಶದಲ್ಲಿ ಮಾತನಾಡುವರು. ಬೆಂಗಳೂರು ಪ್ರದೇಶದಲ್ಲಿ ಉರ್ದುಭಾಷಿಕರು ನಾಲ್ಕನೆ ಸ್ಥಾನದಲ್ಲಿ ನೆಲೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೧೬೦.೭೬೧ ೭೭.೭೭೫ ೧.೧೪೫.೩೬೫ ೬೧.೮೭೮

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉರ್ದುಭಾಷೆಯನ್ನು ೧೩೯.೮೫೩ರಷ್ಟು ಬಳಕೆ ಮಾಡುತ್ತಿದ್ದಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ೪೪.೩೧ರಷ್ಟು ಬಳಸಿದರೆ, ೫೫.೬೯ ರಷ್ಟು ನಗರ ಪ್ರದೇಶದಲ್ಲಿ ಬಳಕೆ ಮಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಪ್ರದೇಶ ಗಳಲ್ಲಿ ಉರ್ದುಭಾಷಿಕರು ಮೂರನೆ ಸ್ಥಾನದಲ್ಲಿ ನೆಲೆಸಿದ್ದಾರೆ.

ಬೆಳಗಾವಿ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೩೯೧.೫೧೮ ೧೬೩.೧೬೯ ೨,೦೫೩.೮೨೦ ೧೫೦.೦೧೪

ಒಟ್ಟು ೨,೪೪೫,೩೩೮, ಸಂಖ್ಯೆಯಲ್ಲಿ ಕನ್ನಡ ಮಾತನಾಡುತ್ತಾರೆ, ಉರ್ದು ಭಾಷೆಯನ್ನು ೩೧೩,೧೮೩ರಷ್ಟು ಮಾತನಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ೪೭.೯೦ರಷ್ಟು ಬಳಕೆ ಮಾಡಿದ್ದರೆ, ೫೨.೧೦ರಷ್ಟು ನಗರ ಪ್ರದೇಶದಲ್ಲಿ ಬಳಕೆ ಮಾಡುತ್ತಿದ್ದಾರೆ. ಪ್ರಸ್ತುತ ಜಿಲ್ಲೆ ಯಲ್ಲಿ ಉರ್ದುಭಾಷಿಕರು ಮೂರನೆ ಸ್ಥಾನದಲ್ಲಿ ನೆಲೆಸಿದ್ದಾರೆ.

ಬಳ್ಳಾರಿ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೨೭೬.೪೩೩ ೧೩೩.೩೬೯ ೧.೧೦೮.೦೧೨ ೬೯.೦೯೪

ಒಟ್ಟು ಕನ್ನಡಿಗರು ಜಿಲ್ಲೆಯಲ್ಲಿ ೧,೩೮೪.೪೪೫ರಷ್ಟು ವಾಸವಾಗಿದ್ದಾರೆ. ಅದರಲ್ಲಿ ೨೦೨, ೪೬೩ರಷ್ಟು ಉರ್ದುಭಾಷಿಕರು ವಾಸಿಸುತ್ತಿದ್ದಾರೆ. ಅಂದರೆ ೩೪.೧೩ರಷ್ಟು ಉರ್ದು ಭಾಷಿಕರು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದಾರೆ. ೬೫.೮೭ರಷ್ಟು ಜನರು ನಗರದಲ್ಲಿದ್ದಾರೆ. ಈ ಜಿಲ್ಲೆಯಲ್ಲಿಯೂ ಸಹ ಉರ್ದುಭಾಷಿಕರು ಎರಡನೆ ಸ್ಥಾನದಲ್ಲಿ ನೆಲೆಸಿದ್ದಾರೆ.

ಬೀದರ್ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೧೦೪.೪೬೮ ೯೬.೪೫೦ ೫೫೩.೩೨೯ ೧೩೮.೬೦೫

ಒಟ್ಟು ಕನ್ನಡ ಭಾಷೆಯನ್ನು ೬೫೭.೭೯೭ ಜನರು ಬಳಕೆ ಮಾಡಿದರೆ, ೨೩೫.೦೫೫ ಜನರು ಉರ್ದುಭಾಷೆಯನ್ನು ಮಾತನಾಡುತ್ತಿದ್ದಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ೫೮.೯೭ ರಷ್ಟು ಮಂದಿ ಉರ್ದು ಭಾಷೆಯನ್ನು ಬಳಸಿದರೆ, ನಗರ ಪ್ರದೇಶದಲ್ಲಿ ೪೧.೦೩ರಷ್ಟು ಮಂದಿ ಬಳಸುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಉರ್ದುಭಾಷಿಕರು ಮೂರನೆ ಸ್ಥಾನದಲ್ಲಿದ್ದಾರೆ.

ಬಿಜಾಪುರ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೪೪೯.೪೦೧ ೧೭೧.೯೭೪ ೧,೯೫೮.೩೧೭ ೧೭೨,೩೫೧

ಒಟ್ಟು ಕನ್ನಡ ಭಾಷೆಯನ್ನು ೨,೪೦೭,೭೧೮ ಜನರು ಬಳಸುತ್ತಿದ್ದಾರೆ. ೩೪೪.೩೨೫ ಮಂದಿ ಉರ್ದುಭಾಷೆಯನ್ನು ಬಳಕೆ ಮಾಡುತ್ತಿದ್ದಾರೆ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ೫೦,೦೫ರಷ್ಟು ಮಂದಿ ಬಳಕೆ ಮಾಡಿದ್ದರೆ, ೪೯.೯೫ರಷ್ಟು ಮಂದಿ ನಗರ ಪ್ರದೇಶದಲ್ಲಿ ಬಳಸುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಉರ್ದು ಭಾಷಿಕರು ಎರಡನೆ ಸ್ಥಾನದಲ್ಲಿ ನೆಲೆಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೧೦೪.೬೫೦ ೨೯.೫೪೭ ೬೨೭.೬೧೩ ೩೮.೧೭೭

ಒಟ್ಟು ಜಿಲ್ಲೆಯಲ್ಲಿ ಕನ್ನಡಿಗರು ೭೩೨.೨೬೩ ಮಂದಿ ನೆಲೆಸಿದ್ದಾರೆ. ಉರ್ದು ಭಾಷಿಕರು ೬೭.೭೨೪ ಮಂದಿ ಇದ್ದಾರೆ. ಗ್ರಾಮೀಣ ಪರಿಸರzಲ್ಲಿ ೫೬.೩೭ರಷ್ಟು ಇದ್ದರೆ, ನಗರ ಪ್ರದೇಶದಲ್ಲಿ ೪೩.೬೩ರಷ್ಟು ಇದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿಯೂ ಉರ್ದುಭಾಷಿಕರು ಎರಡನೆ ಸ್ಥಾನದಲ್ಲಿ ನೆಲೆಸಿದ್ದಾರೆ.

ಚಿತ್ರದುರ್ಗ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೩೬೫.೦೧೩ ೧೩೮.೫೬೨ ೧,೩೨೨,೭೩೬ ೬೪,೬೨೯

ಒಟ್ಟು ಜಿಲ್ಲೆಯಲ್ಲಿ ಕನ್ನಡಿಗರು ೧,೬೮೭,೭೪೯ ಮಂದಿ ನೆಲೆಸಿದ್ದಾರೆ. ಉರ್ದು ಭಾಷಿಕರು ೨೦೩,೧೯೧ ಮಂದಿ ಇದ್ದಾರೆ. ಗ್ರಾಮೀಣ ಪರಿಸರದಲ್ಲಿ ೩೧.೮೧ ಮಂದಿ ಇದ್ದಾರೆ. ೬೮.೧೯ ರಷ್ಟು ಜನರು ವಾಸಿಸುತ್ತಾರೆ. ಈ ಜಿಲ್ಲೆಯಲ್ಲಿ ಉರ್ದು ಭಾಷಿಕರು ಎರಡನೆ ಸ್ಥಾನದಲ್ಲಿ ದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೧೨೫,೪೧೧ ೩೧,೪೮೯ ೪೭೦,೮೮೪ ೩೯.೦೭೬

ಒಟ್ಟು ಜಿಲ್ಲೆಯಲ್ಲಿ ಕನ್ನಡ ಮನೆಮಾತುಳ್ಳವರು ಎರಡನೆ ಸ್ಥಾನದಲ್ಲಿದ್ದಾರೆ. ಉರ್ದು ಭಾಷಿಕರು ಐದನೇ ಸ್ಥಾನದಲ್ಲಿದ್ದಾರೆ. ಒಟ್ಟು ಕನ್ನಡಿಗರು ೫೯೬,೨೩೫ಜನ ಮಾತನಾಡಿದರೆ, ಉರ್ದು ಭಾಷೆಯನ್ನು ೭೦,೫೬೫ ಜನರು ಮಾತನಾಡುವರು. ಪ್ರಸ್ತುತ ಜಿಲ್ಲೆಯಲ್ಲಿ ಉರ್ದುಭಾಷಿಕರು ಐದನೆ ಸ್ಥಾನದಲ್ಲಿದ್ದಾರೆ.

ಧಾರವಾಡ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೭೬೨.೯೨೭ ೨೯೩.೨೯೦ ೨.೦೧೪.೩೮೭ ೧೯೦.೫೭೪

ಒಟ್ಟು ಜಿಲ್ಲೆಯಲ್ಲಿ ಕನ್ನಡಿಗರು ೨,೭೭೭.೩೧೪ ನೆಲೆಸಿದ್ದಾರೆ. ಉರ್ದುಭಾಷಿಕರು ೪೮೩.೮೬೪ ಜನರು ನೆಲೆಸಿದ್ದಾರೆ. ಗ್ರಾಮೀಣ ಪರಿಸರದಲ್ಲಿ ೭೨.೫೩ರಷ್ಟು ಜನರು ನೆಲೆಸಿದ್ದಾರೆ. ೨೭.೪೭ರಷ್ಟು ಜನರು ನೆಲೆಸಿದ್ದಾರೆ. ಈ ಜಿಲ್ಲೆಯಲ್ಲಿಯೂ ಸಹ ಉರ್ದು ಭಾಷಿಕರು ಎರಡನೆ ಸ್ಥಾನದಲ್ಲಿ ನೆಲೆಸಿದ್ದಾರೆ.

ಗುಲ್ಬರ್ಗಾ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೩೦೭.೫೦೬ ೨೦೮.೭೦೮ ೧,೪೪೨,೮೨೮ ೨೨೮,೩೧೫

ಒಟ್ಟು ಜಿಲ್ಲೆಯಲ್ಲಿ ಕನ್ನಡಿಗರು ೧,೭೫೦,೩೩೪, ಜನರು ನೆಲೆಸಿದ್ದಾರೆ. ಉರ್ದು ಭಾಷಿಕರು ೪೩೭,೦೨೩ ಜನರು ನೆಲೆಸಿದ್ದಾರೆ. ಗ್ರಾಮೀಣ ಪರಿಸರದಲ್ಲಿ ೫೨,೨೪ರಷ್ಟು ಜನರು ನೆಲೆಸಿದ್ದಾರೆ. ನಗರ ಪ್ರದೇಶದಲ್ಲಿ ೪೭.೭೬ರಷ್ಟು ಜನರು ನೆಲೆಸಿದ್ದಾರೆ. ಈ ಜಿಲ್ಲೆಯಲ್ಲಿ ಉರ್ದುಭಾಷಿಕರು ಎರಡನೆ ಸ್ಥಾನದಲ್ಲಿದ್ದಾರೆ.

ಹಾಸನ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೧೮೧,೬೫೪ ೫೨,೩೮೮ ೧,೬೬,೪೫೩ ೨೮,೬೯೬

ಒಟ್ಟು ಜಿಲ್ಲೆಯಲ್ಲಿ ಕನ್ನಡಿಗರು ೧,೩೬೮,೧೦೭ ಜನರು ನೆಲೆಸಿದ್ದಾರೆ. ಉರ್ದು ಭಾಷಿಕರು ೮೧,೦೮೩ ಜನರಿದ್ದಾರೆ. ಗ್ರಾಮೀಣ ಪರಿಸರದಲ್ಲಿ ೩೫.೩೯ರಷ್ಟಿದ್ದರೆ, ೬೪,೬೧ರಷ್ಟು ಜನರು ನಗರ ಪ್ರದೇಶದಲ್ಲಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಉರ್ದುಭಾಷಿಕರು ಎರಡನೆ ಸ್ಥಾನದಲ್ಲಿ ದ್ದಾರೆ.

ಕೊಡಗು ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೨೮,೫೪೪ ೯,೨೯೯ ೧೫೬,೨೫೪ ೪,೫೬೯

ಒಟ್ಟು ಜಿಲ್ಲೆಯಲ್ಲಿ ಉರ್ದುಭಾಷಿಕರು ಆರನೆ ಸ್ಥಾನದಲ್ಲಿದ್ದಾರೆ. ಕನ್ನಡಿಗರು ೧೮೪.೭೯೮ ಜನರಿದ್ದಾರೆ. ೧೩,೮೬೮ರಷ್ಟು ಉರ್ದುಭಾಷಿಕರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ೩೨.೯೫ರಷ್ಟಿದ್ದಾರೆ. ನಗರ ಪ್ರದೇಶದಲ್ಲಿ ೬೭.೦೫ರಷ್ಟಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಉರ್ದುಭಾಷಿಕರು ಆರನೆ ಸ್ಥಾನದಲ್ಲಿದ್ದಾರೆ.

ಕೋಲಾರ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೧೦೬,೩೧೭ ೧೩೨,೫೦೯ ೬೦೭,೮೧೪ ೧೧೭,೩೧೬

ಒಟ್ಟು ಜಿಲ್ಲೆಯಲ್ಲಿ ತೆಲುಗು ಮನೆಮಾತುಳ್ಳವರು ಮೊದಲನೆ ಸ್ಥಾನದಲ್ಲಿದ್ದಾರೆ. ಕನ್ನಡ ಮನೆಮಾತುಳ್ಳವರು ಎರಡನೆ ಸ್ಥಾನದಲ್ಲಿದ್ದಾರೆ. ಉರ್ದುಭಾಷಿಕರು ಮೂರನೆ ಸ್ಥಾನದಲ್ಲಿ ದ್ದಾರೆ. ಉರ್ದುಭಾಷಿಕರು ಈ ಜಿಲ್ಲೆಯಲ್ಲಿ ಗ್ರಾಮೀಣ ಪರಿಸರದಲ್ಲಿ ೪೬,೯೬ರಷ್ಟು ಇದ್ದರೆ, ನಗರ ಪ್ರದೇಶದಲ್ಲಿ ೫೩,೦೪ರಷ್ಟು ಜನರಿದ್ದಾರೆ.

ಮಂಡ್ಯ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೧೮೮,೯೨೧ ೪೧,೫೨೫ ೧,೩೦೮,೦೦೬ ೨೨,೫೨೩

ಒಟ್ಟು ಜಿಲ್ಲೆಯಲ್ಲಿ ಕನ್ನಡಿಗರು ೧,೪೯೬,೯೨೭ ಜನರಿದ್ದಾರೆ. ೬೪,೦೪೮ರಷ್ಟು ಉರ್ದು ಭಾಷಿಕರಿದ್ದಾರೆ. ನಗರ ಪ್ರದೇಶದಲ್ಲಿ ೬೪,೮೩ರಷ್ಟು ಉರ್ದು ಭಾಷಿಕರಿದ್ದರೆ, ೩೫,೧೭ರಷ್ಟು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಉರ್ದು ಭಾಷಿಕರು ಎರಡನೇ ಸ್ಥಾನದಲ್ಲಿದ್ದಾರೆ.

ಮೈಸೂರು ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೫೯೧,೯೭೨ ೧೬೧,೮೭೧ ೨,೦೧೬,೫೫೭ ೫೭,೧೭೩

ಒಟ್ಟು ಜಿಲ್ಲೆಯಲ್ಲಿ ಕನ್ನಡಿಗರು ೨,೬೦೮,೫೨೯ರಷ್ಟು ಜನರಿದ್ದರೆ, ಉರ್ದುಭಾಷಿಕರು ೨೧೯, ೦೪೪ ರಷ್ಟು ಜನರಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಉರ್ದುಭಾಷಿಕರು ೨೧೯,೦೪೪ರಷ್ಟು ಜನರಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಉರ್ದುಭಾಷಿಕರು ೨೬,೧೦ರಷ್ಟಿದ್ದರೆ ೭೩.೯೦ರಷ್ಟು ನಗರ ಪ್ರದೇಶದಲ್ಲಿದ್ದಾರೆ.

ರಾಯಚೂರು ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೨೫೮,೦೫೧ ೧೩೩,೬೫೯ ೧,೫೨೮,೨೯೭ ೧೧೦,೬೧೧

ಒಟ್ಟು ಜಿಲ್ಲೆಯಲ್ಲಿ ಕನ್ನಡಿಗರು ೧,೭೮೬,೩೪೮ರಷ್ಟು ನೆಲೆಸಿದ್ದಾರೆ. ೨೪೪,೨೭೦ರಷ್ಟು ಉರ್ದು ಭಾಷಿಕರು ನೆಲಸಿದ್ದಾರೆ. ಗ್ರಾಮೀಣ ಪರಿಸರದಲ್ಲಿ ೪೫,೨೮ರಷ್ಟಿದ್ದರೆ, ೫೪,೭೨ರಷ್ಟು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಉರ್ದು ಭಾಷಿಕರು ಎರಡನೆ ಸ್ಥಾನದಲ್ಲಿ ಈ ಜಿಲ್ಲೆಯಲ್ಲಿದ್ದಾರೆ.

ಶಿವಮೊಗ್ಗ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೨೭೭,೬೫೩ ೯೩,೮೦೧ ೧,೧೩೫,೨೩೦ ೧೦೬,೧೦೪

ಒಟ್ಟು ಜಿಲ್ಲೆಯಲ್ಲಿ ಕನ್ನಡಿಗರು ೧,೪೧೨,೮೮೩ರಷ್ಟು ಜನರಿದ್ದಾರೆ. ಉರ್ದುಭಾಷಿಕರು ೧೯೯೦೯೦೫ರಷ್ಟು ಜನರು ನೆಲೆಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ೫೩,೦೮ರಷ್ಟು ಜನರಿದ್ದರೆ, ೪೬,೯೨ರಷ್ಟು ನಗರ ಪ್ರದೇಶದಲ್ಲಿ ನೆಲೆಸಿದ್ದಾರೆ. ಈ ಜಿಲ್ಲೆಯಲ್ಲಿ ಉರ್ದು ಭಾಷಿಕರು ಎರಡನೆ ಸ್ಥಾನದಲ್ಲಿದ್ದಾರೆ.

ತುಮಕೂರು ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೨೪೪,೯೦೪ ೯೦.೨೧೯ ೧,೬೮೦.೦೬೫ ೮೨,೮೭೮

ಒಟ್ಟು ಜಿಲ್ಲೆಯಲ್ಲಿ ಕನ್ನಡಿಗರು ೧,೯೨೪,೯೬೯ರಷ್ಟು ಜನರಿದ್ದರೆ, ಉರ್ದುಭಾಷಿಕರು ೧೭೩.೦೯೭ರಷ್ಟಿದ್ದಾರೆ. ಗ್ರಾಮೀಣ ಪರಿಸರದಲ್ಲಿ ೪೭.೮೮ರಷ್ಟಿದ್ದರೆ, ೫೨,೧೨ರಷ್ಟು ನಗರ ಪ್ರದೇಶದಲ್ಲಿದ್ದಾರೆ. ಉರ್ದುಭಾಷಿಕರು ಎರಡನೆ ಸ್ಥಾನದಲ್ಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆ

ನಗರ

ಗ್ರಾಮೀಣ

ಕನ್ನಡ ಉರ್ದು ಕನ್ನಡ ಉರ್ದು
೧೧೨,೬೮೧ ೬೧,೬೯೬ ೫೭೨,೯೯೨ ೬೩,೯೧೯

ಒಟ್ಟು ಜಿಲ್ಲೆಯಲ್ಲಿ ಕನ್ನಡಿಗರು ೬೮೫,೬೭೩ರಷ್ಟು ಜನರಿದ್ದರೆ, ಉರ್ದುಭಾಷಿಕರು ೧೨೫,೬೧೫ರಷ್ಟು ಜನರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ೫೦.೮೮ರಷ್ಟು ಜನರು ನೆಲೆಸಿದ್ದರೆ, ೪೯.೧೨ ಜನರು ನಗರ ಪ್ರದೇಶದಲ್ಲಿದ್ದಾರೆ. ಈ ಜಿಲ್ಲೆಯಲ್ಲಿ ಉರ್ದುಭಾಷಿಕರು ಮೂರನೆ ಸ್ಥಾನದಲ್ಲಿದ್ದಾರೆ.

ಕರ್ನಾಟಕದಲ್ಲಿ ಮಾಧ್ಯಮವಾರು ಪ್ರಾಥಮಿಕ ಶಾಲೆಗಳ ಸಂಖ್ಯೆ

ಮಾಧ್ಯಮ

ಒಟ್ಟು ಶಾಲೆಗಳು

ಶಿಕ್ಷಣ ಇಲಾಖೆ

ಸಮಾಜ ಕಲ್ಯಾಣ

ಸ್ಥಳೀಯ ಸಂಸ್ಥೆ

ಖಾಸಗಿ ಅನುದಾನ

ಖಾಸಗಿ ಅನುದಾನ  ರಹಿತ

ಇತರೆ

ಕನ್ನಡ ೪೬೯೦೭ ೩೮೭೨೨ ೩೦೭ ೧೦೪ ೨೧೦೧ ೫೬೦೦ ೭೩
ಹಿಂದಿ ೧೯೫ ೭೩ ೦೪ ೦೩ ೩೨ ೭೪ ೦೯
ತಮಿಳು ೧೯೪ ೮೮ ೧೦೨ ೦೪
ತೆಲುಗು ೧೩೩ ೯೦ ೦೧ ೨೨ ೨೨
ಉರ್ದು ೩೯೪೩ ೩೫೭೪ ೦೯ ೦೫ ೧೨೯ ೨೨೫ ೦೧
ಇಂಗ್ಲಿಶ್ ೩೧೦೯ ೧೫೨ ೪೦ ೨೫ ೧೩೧ ೨೬೮೭ ೭೪
ಮರಾಠಿ ೧೦೨೪ ೯೨೬ ೦೧ ೦೬ ೬೨ ೨೮ ೦೨
ಮಲೆಯಾಳಂ ೪೦ ೩೬ ೦೦ ೦೧ ೦೦ ೦೩
ಸಂಸ್ಕೃತ ೦೪ ೦೧ ೦೨ ೦೧

*ಈ ಅಂಕಿ ಅಂಶಗಳನ್ನು ‘ಈಶಾನ್ಯ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಸಮಾಜ’ ಕೃತಿಯಿಂದ ತೆಗೆದುಕೊಳ್ಳಲಾಗಿದೆ. (ಡಾ.ಎಚ್.ಡಿ.ಪ್ರಶಾಂತ್)