ಓದು ಮತ್ತು ಬರವಣಿಗೆಯಲ್ಲಿ ವ್ಯಾಕರಣಾಂಶಗಳು

ಭಾಷಿಕ ರಚನೆಗಳ ವೈಜ್ಞಾನಿಕ ಅಧ್ಯಯನವೇ ವ್ಯಾಕರಣ. ವ್ಯಾಕರಣವನ್ನು ಬಳಕೆಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಬೇಕು ಮತ್ತು ವಿಶ್ಲೇಷಿಸಬೇಕಾಗಿದೆ. ಮಾತು ಮತ್ತು ಬರಹದ ನಡುವೆ ಇರುವ ವ್ಯತ್ಯಾಸವನ್ನು ವ್ಯಾಕರಣದ ರಚನೆಯಿಂದ ತಿಳಿಯಬಹುದು.

ಪದಗಳ ಜೋಡಣೆಯ ಸಂದರ್ಭದಲ್ಲಿ ಆಗುವ ವ್ಯತ್ಯಾಸಗಳನ್ನು ಸಂಧಿ ಸಮಾಸಗಳ ಮೂಲಕ ತಿಳಿಯುವುದು. ಹಾಗೆಯೇ ಭಾಷೆಯಲ್ಲಿ ದೇಶಿ ಮತ್ತು ಅನ್ಯದೇಶಿ ಪದಗಳ ಬಳಕೆಯನ್ನು ತತ್ಸಮ ತದ್ಬವ ಪರಿಕಲ್ಪನೆಗಳ ಮೂಲಕ ವಿಶ್ಲೇಷಿಸುವುದು. ಭಾಷೆಯಲ್ಲಿನ ಲೇಖನ ಚಿಹ್ನೆ ಮತ್ತು ಪದ ಬಳಕೆಯ ಪರಸ್ಪರ ಸಂಬಂಧಗಳನ್ನು ವಿವರಿಸುವುದು.

ಪ್ರಸ್ತುತ ಅಧ್ಯಯನದಲ್ಲಿ ಚರ್ಚೆ ಮಾಡಿರುವ ವ್ಯಾಕರಣಾಂಶಗಳು ೩, ೪ ಮತ್ತು ೫ನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ಅಳವಡಿಸಿರುವಂತಹವು. ಅಲ್ಲಿ ಅಳವಡಿಸಿರುವ ವ್ಯಾಕರಣ ವಿಚಾರಗಳನ್ನು ಉರ್ದು ಭಾಷಿಕರ ಮಕ್ಕಳಿಂದ ಓದಿಸಿ ಮತ್ತು ಬರವಣಿಗೆ ಮಾಡಿಸಲಾಗಿದೆ. ಅಂತಹ ಸಂದರ್ಭದಲ್ಲಿ ಮಾಡುವ ವ್ಯಾಕರಣ ವ್ಯತ್ಯಾಸಗಳನ್ನು ಪಟ್ಟಿ ಮಾಡಲಾಗಿದೆ. ಅಂತಹ ವ್ಯತ್ಯಾಸಕ್ಕೆ ಸಾಧ್ಯವಾದ ಕಡೆಗಳಲ್ಲಿ ಕಾರಣಗಳ ಸಹಿತ ಚರ್ಚಿಸ ಲಾಗಿದೆ. ಕೆಲವು ಕಡೆ ಕಾರಣಗಳನ್ನು ಸಾಧ್ಯತೆ ಕುರಿತು ವಿಶ್ಲೇಷಣೆ ಮಾಡಲಾಗಿದೆ.

*ಸಂಧಿ ವಿಚಾರ

ಕನ್ನಡ ಸಂಧಿಗಳನ್ನು ಲೋಪ ಆಗಮ ಆದೇಶ ಎಂದು ಅವುಗಳ ಬಳಕೆಯ ಹಿನ್ನೆಲೆಯಲ್ಲಿ ವರ್ಗೀಕರಣ ಮಾಡಲಾಗಿದೆ. ಕನ್ನಡ ಪದಕ್ಕೆ ಕನ್ನಡ ಪದ ಸೇರಿದಾಗ ಈ ಸಂಧಿಗಳು ಜರುಗುತ್ತವೆ. ಉತ್ತರ ಪದ ಸ್ವರದಿಂದ ಮೊದಲಾದರೆ ಲೋಪ ಇಲ್ಲವೆ ಆಗಮ ಸಂಧಿ, ವ್ಯಂಜನವಿದ್ದರೆ ಆದೇಶ ಸಂಧಿ, ಈ ಮಾದರಿಯ ಸಂಧಿ ಕಾರ್ಯಗಳನ್ನು ಉರ್ದುಭಾಷಿಕರ ಮಕ್ಕಳು ಕೂಡಿಸುವುದನ್ನು ಮತ್ತು ಬಿಡಿಸುವುದನ್ನು ಪ್ರಸ್ತುತ ಭಾಗದಲ್ಲಿ ವಿಶ್ಲೇಷಣೆ ಮಾಡಲಾಗಿದೆ.

ಕ್ರ.ಸಂ.

ಉರ್ದುಭಾಷಿಕ ಮಕ್ಕಳು ಬಿಡಿಸುವ ಪದಗಳು

ಬರಹದ ರೂಪ

     
೦೧. ಹಿರಿತ+ನ ಹಿರಿಯ+ತನ=ಹಿರಿತನ
೦೨. ಮನೆತ+ನ ಮನೆ+ತನ=ಮನೆತನ
೦೩. ದೊಡ್ಡತ+ನ ದೊಡ್ಡ+ತನ=ದೊಡ್ಡತನ
೦೪. ಕಳ್ಳತ+ನ ಕಳ್ಳ+ತನ=ಕಳ್ಳತನ
೦೫. ಮನೆ+ಯಲ್ಲಿ ಮನೆ+ಅಲ್ಲಿ=ಮನೆಯಲ್ಲಿ
೦೬. ಮಳೆ+ಗಾಲ ಮಳೆ+ಕಾಲ=ಮಳೆಗಾಲ
೦೭. ಹಣ+ಅಂತ ಹಣ+ವಂತ=ಹಣವಂತ
೦೮. ಗುಣ+ಅಂತ ಗುಣ+ವಂತ=ಗುಣವಂತ
೦೯. ಕೇಶಾಲ+ಅಂಕಾರ ಕೇಶ+ಅಲಂಕಾರ=ಕೇಶಾಲಂಕಾರ
೧೦. ಅರ+ಮನೆ ಅರಸನ+ಮನೆ=ಅರಮನೆ
೧೧. ಹಳ+ಗನ್ನಡ ಹಳ+ಕನ್ನಡ=ಹಳಗನ್ನಡ
೧೨. ಹಿಂ+ಗಾಲು ಹಿಂದಾದ+ಕಾಲು=ಹಿಂಗಾಲು

ಏಕೆ ಮಕ್ಕಳು ಒಂದು ಪದವನ್ನು ಬಿಡಿಸಲು ಕಷ್ಟಪಡುತ್ತವೆ. ಹಾಗಾದರೆ ಮಕ್ಕಳ ಕಲಿಕೆಗೆ ಒಂದು ಪದವನ್ನು ಬಿಡಿಸುವುದರಿಂದ ಲಾಭನೋ, ಅಥವಾ ಎರಡು ಬಿಡಿ ಪದಗಳನ್ನು ಕೂಡಿಸುವುದರಿಂದ ಲಾಭನೋ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಮಕ್ಕಳಿಗೆ ಎರಡು ಪದಗಳನ್ನು ಕೂಡಿಸುವುದನ್ನು ಕಲಿಸಬೇಕಾಗಿದೆ. ಜತೆಗೆ ಈಗ ಬೋಧಿಸುತ್ತಿರುವ ಸಂಧಿಕಾರ್ಯ ದಿಂದ ಮಕ್ಕಳಿಗೆ ಏನು ಪ್ರಯೋಜನವಾಗುತ್ತಿಲ್ಲ. ಹೇಗೆಂದರೆ ನಮ್ಮ ಪಠ್ಯಪುಸ್ತಕಗಳ ಉದಾ ಹರಣೆಗಳನ್ನು ಬಿಟ್ಟಂತೆ ವಿದ್ಯಾರ್ಥಿಗಳು ಬೇರೊಂದು ಉದಾಹರಣೆ ಬಂದರೆ ಅದು ಯಾವ ಸಂಧಿ ನಿಯಮಕ್ಕೆ ಸೇರುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಂದಮೇಲೆ ಈ ಸಮಸ್ಯಗೆ ಕಾರಣವೇನು? ಕಾರಣರಾರು? ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ.

ಇಂದಿನ ಶಾಲೆ ಮಕ್ಕಳಿಗೆ ಸಂಧಿ, ಸಮಾಸಗಳನ್ನು ಬೋಧಿಸುವುದು ಅಗತ್ಯವಿದೆಯೇ? ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಸಂಧಿ ಮತ್ತು ಸಮಾಸಗಳನ್ನು ಕಲಿಯುವುದರಿಂದ ಮಕ್ಕಳಲ್ಲಿ ಯಾವ ಕೌಶಲ ಅಭಿವೃದ್ದಿಯಾಗುತ್ತಿದೆ ಎಂಬುದು ಗಮನಿಸುವಂತಹ ಅಂಶ. ಏಕೆ? ನಮ್ಮ ಮಕ್ಕಳಿಗೆ ಸಂಧಿ ಮತ್ತು ಸಮಾಸ ನಿಯಮಗಳು ನೆನಪಿಗೆ ಬರುತ್ತಿಲ್ಲ. ಅಥವಾ ಯಾವುದಾದರೂ ಒಂದು ಪದವನ್ನು ನೋಡಿದ ತಕ್ಷಣ ಇದು ಈ ಸಂಧಿ ಎಂದು ಹೇಳುವ ಸಾಮಾರ್ಥ್ಯವು ಇಲ್ಲ. ಈ ಹಿನ್ನಲೆಯಿಂದ ವಿದ್ವಾಂಸರುಗಳು ಶಾಲೆಯಲ್ಲಿ ಅಭ್ಯಾಸ ಮಾಡುತ್ತಿ ರುವ ಮಕ್ಕಳಿಗೆ ಎರಡು ಪದಗಳನ್ನು ಬಿಡಿಸುವುದರಿಂದ ಏನು ಪ್ರಯೋಜನವಿಲ್ಲ. ಎರಡು ಪದಗಳನ್ನು ಕೂಡಿಸುವುದನ್ನು ಹೇಳಿ ಕೊಡಬೇಕಾಗಿದೆ. ಮತ್ತು ಸಂಧಿನಿಯಮಗಳ ಕಲಿಕೆ ಯಿಂದ ಉತ್ಪಾದಕ ಸಾಮಾರ್ಥ್ಯವನ್ನು ಹೆಚ್ಚಿಸಿಕೊಡಬೇಕಾಗಿದೆ. ಹಾಗೆಯೇ ನೇರವಾಗಿ ಸಂಧಿ ನಿಯಮವನ್ನು ಹೆಸರಿಸಿದೆ, ಆ ಸಂಧಿ ನಿಯಮದಲ್ಲಿ ಜರುಗಿರುವ ಧ್ವನಿ ನಿಯಮಗಳನ್ನು ಹೇಳಿಕೊಡಬೇಕಾಗಿದೆ. ಈ ಮಾದರಿ ವ್ಯಾಕರಣ ಬೋಧನೆಯನ್ನು ಹೊಸದಾಗಿ ಅಳವಡಿಸಿ ಕೊಳ್ಳಬೇಕಾಗಿದೆ. ಇದು ಕೇವಲ ಕನ್ನಡ ಮನೆಮಾತುಳ್ಳ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಕನ್ನಡೇತರ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕಾಗಿದೆ.

ಪದಗಳು

ಸರಿಯಾದ ವಿಂಗಡಣೆಯ ಕ್ರಮ

ಉರ್ದುಭಾಷಿಕ ಮಕ್ಕಳು ಬಿಡಿಸುವ ಮತ್ತು ಉಚ್ಚರಿಸುವ ಸಂಧಿರೂಪ

ಉರ್ದುಭಾಷಿಕರ ಮಕ್ಕಳು ಹೆಸರಿಸುವ ಸಂಧಿ

ಸರಿಯಾದ ಸಂಧಿ ಹೆಸರು

ನಮ್ಮೂರು ನಮ್ಮ+ಊರು ನಮ್ಮದು+ಊರು ಲೋಪ ಲೋಪ
ಅಲ್ಲೊಬ್ಬ ಅಲ್ಲಿ+ಒಬ್ಬ ಅಲ್ಲಿ+ಒಬ್ಬ ಲೋಪ ಲೋಪ
ನಾವೆಲ್ಲ ನಾವು+ಎಲ್ಲ ನಾ+ವೆಲ್ಲ ಲೋಪ ವಕಾರಾಗಮ
ಆಯಿರ್ದ ಆ+ಇರ್ದ ಆ+ಯಿರ್ದ ಲೋಪ ಯಕಾರಾಗಮ
ಹಿಡಿಯೆಂದು ಹಿಡಿ+ಎಂದು ಹಿಡಿದು+ಯೆಂದು ಲೋಪ ಯಕಾರಾಗಮ
ಬೇಯಿಸು ಬೇ+ಇಸು ಬೇ+ಯಿಸು ಲೋಪ ಯಕಾರಾಗಮ
ಮೈಯನ್ನು ಮೈ+ಅನ್ನು ಮೈಯ+ಯನ್ನು ಲೋಪ ಯಕಾರಾಗಮ
ಹಸುವಿನ ಹಸು+ಇನ ಹಸು+ವಿನ ಲೋಪ ವಕಾರಾಗಮ
ಹೂವೆಲ್ಲ ಹೂ+ಎಲ್ಲ ಹೂ+ವೆಲ್ಲ ಲೋಪ ವಕಾರಾಗಮ
ಬೇರೊಂದು ಬೇರೆ+ಒಂದು ಬೇರು+ವೊಂದು ಲೋಪ ವಕಾರಾಗಮ

ಉರ್ದುಭಾಷಿಕ ಮಕ್ಕಳಿಗೆ ಪದಗಳನ್ನು ಸ್ಪಷ್ಟವಾಗಿ ವಿಂಗಡಿಸಿ ಅಂದರೆ ಪ್ರಕೃತಿ ಮತ್ತು ಪ್ರತ್ಯಯಗಳ ಬಗೆಗೆ ಸ್ಪಷ್ಟವಾಗಿ ತಿಳಿಯದೆ ಇರುವುದರಿಂದ ಈ ತೆರನಾದ ವ್ಯತ್ಯಾಸದಿಂದ ಸಂಧಿ ಪದಗಳನ್ನು ಬಿಡಿಸಿ ಓದಲು ಮತ್ತು ಬರೆಯಲು ಕಾರಣವಿರಬಹುದು.

*ಸಮಾಸ ವಿಚಾರ

ಅಕ್ಷರಗಳು ಸೇರುವುದರಿಂದ ಸಂಧಿಯಾದರೆ, ಪದಗಳ ಸೇರುವಿಕೆಯಿಂದ ಸಮಾಸವಾಗುತ್ತದೆ. ಉರ್ದು ಭಾಷಿಕ ಮಕ್ಕಳಿಗೆ ಸಮಾಸ ಪದಗಳನ್ನು ವರ್ಗೀಕರಿಸುವುದು ಮತ್ತು ಹೆಸರಿಸುವುದು ಕಷ್ಟವೆನಿಸಿದೆ.

ಸಮಾಸ ಪದಗಳು

ಸರಿಯಾಗಿ ವಿಂಗಡಿಸಿದ ಸಮಾಸ

ಉರ್ದುಭಾಷಿಕ ಮಕ್ಕಳು ಉಚ್ಚರಿಸುವ ಮತ್ತು ಬರೆಯುವ

ಉರ್ದುಭಾಷಿ ಕರ ಮಕ್ಕಳು ಹೆಸರಿಸುವ  ಸಮಾಸಗಳು

ಕೈಬಳೆ ಕೈಗೆ+ಬಳೆ ಕೈ+ಬಲೆ, ಕೈದು+ಬಲೆ ಕರ್ಮಧಾರೆ
ಬೆಟ್ಟದಾವರೆ ಬೆಟ್ಟದ+ತಾವರೆ ಬೆಟ್ಟದು+ತಾವರೆ ಕರ್ಮಧಾರೆ
ಹಗಲುಗನಸು ಹಗಲಿನಲ್ಲಿ+ಕನಸು ಹಗಲು+ಕನಸು ಕರ್ಮಧಾರೆ
ಚಿಕ್ಕಮಗು ಚಿಕ್ಕದಾದ+ಮಗು ಚಿಕ್ಕದು+ಮಗು ಗಮಕ
ತಣ್ಣೀರು ತಣ್ಣನೆಯ+ನೀರು ತಣ್+ನೀರು ದ್ವಂದ್ವ
ಹೆಬ್ಬಾವು ಹಿರಿದು+ಹಾವು ಹೆಬ್+ಹಾವು ದ್ವಿಗು

*ಲಿಂಗ ವಿಚಾರ

ಉರ್ದು ಭಾಷಿಕ ಮಕ್ಕಳು ಉಚ್ಚರಿಸುವ ಮತ್ತು ಬರೆಯುವ ರೂಪಗಳು

ಸ್ತ್ರೀಲಿಂಗ ಪುಲ್ಲಿಂಗ ನಪುಂಸಕಲಿಂಗ
ಟೀಚರ್ ಶಿಕ್ಷಕ  
ಮೇಡಂ ಮಗು  
ಎಮ್ಮೆ ಎತ್ತು  
ಬುಟ್ಟಿ ಕೋಣ  
ರಾಧ ರಾಮ    
ಸೀತೆ    
ಕವಿ    
ತಂದೆ    
ನಾಯಿದ    
ಅಗಸ    
ಮೋಚಿ    
ದೋಬಿ    
ದರ್ಜಿ    

೩,೪,೫ನೇ ತರಗತಿಯ ಉರ್ದು ಮಾತೃಭಾಷಿಕರ ಮಕ್ಕಳಿಗೆ ಪದಗಳ ಪಟ್ಟಿ ಕೊಟ್ಟು ಅವುಗಳನ್ನು ಸ್ತ್ರೀಲಿಂಗ, ಪುಲ್ಲಿಂಗ ಮತ್ತು ನಪುಂಸಕಲಿಂಗ ಪದಗಳನ್ನಾಗಿ ವಿಂಗಡಿಸಿ ಓದಲು ಮತ್ತು ಬರೆಯಲು ಕೇಳಿದಾಗ ಮೇಲಿನಂತೆ ವ್ಯತ್ಯಾಸ ಮಾಡುತ್ತಾರೆ. ಅದಕ್ಕೆ ಕಾರಣಗಳನ್ನು  ಈ ರೀತಿ ಊಹಿಸಬಹುದು.

೧. ಕನ್ನಡದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂಬ ಮೂರು ಲಿಂಗ ಭೇದ ಕ್ರಮವಿದೆ. ಉರ್ದುವಿನಲ್ಲಿ ನಪುಂಸಕ ಲಿಂಗವಿಲ್ಲ. ಕನ್ನಡದಲ್ಲಿ ನಿರ್ಜೀವ ವಸ್ತುಗಳಿಗೆ ಸಾಮಾನ್ಯವಾಗಿ ನಪುಂಸಕಲಿಂಗವೆಂದು ಹೇಳುತ್ತೇವೆ. ಆದರೆ ಉರ್ದು ಭಾಷೆಯಲ್ಲಿ ನಿರ್ಜೀವ ವಸ್ತುಗಳ ಗಾತ್ರಕ್ಕನುಸಾರವಾಗಿ ಲಿಂಗ ವಿಂಗಡನೆ ಮಾಡುವರು. ಮತ್ತು ಬೇರೆ ಭಾಷೆಯಂತೆ ಉರ್ದು ಭಾಷೆ ವಿವಿಧ ಭಾಷೆಯಿಂದ ಪದಗಳನ್ನು ಸ್ವೀಕರಿಸಿದೆ. ಸ್ವೀಕರಣ ಪದಗಳನ್ನು ಅನುಸರಿಸಿ ಲಿಂಗಭೇದ ಮಾಡುತ್ತಾರೆ.

೨. ಉರ್ದು ಭಾಷೆಯಲ್ಲಿ ‘ಇ’ಕಾರಾಂತದಿಂದ ಪದ ಅಂತ್ಯವಾದರೆ ಅಂತಹ ಪದಗಳಿಗೆ ಸ್ತ್ರೀಲಿಂಗವೆಂದು, ಕನ್ನಡದಲ್ಲಿ ‘ಟೀಚರ್’ ಪದ ಸ್ತ್ರೀಲಿಂಗ ಮತ್ತು ಪುಲ್ಲಿಂಗ ಎರಡು ಹೌದು. ಆದರೆ ಉರ್ದು ಭಾಷಿಕರ ಮಕ್ಕಳು ಅದು ಸ್ತ್ರೀಲಿಂಗ ಎಂದು ತಿಳಿದು ಈ ಮಾದರಿ ವ್ಯತ್ಯಾಸ ಮಾಡುತ್ತಾರೆ. ಕನ್ನಡ ಭಾಷೆಯಲ್ಲಿನ ಪದಗಳನ್ನು ಓದುವಾಗ ಮತ್ತು ಬರೆಯುವಾಗ ಉರ್ದು ಭಾಷಿಕರ ಮಕ್ಕಳು ಗೊಂದಲದಲ್ಲಿ ಇದ್ದಾರೆ. ಮತ್ತು ಅವರ ಮಾತೃಭಾಷೆಯ ಪ್ರಭಾವದಿಂದ ಹಾಗೂ ಕನ್ನಡ ಭಾಷೆಯ ರಚನೆಯಲ್ಲಿನ ಗೊಂದಲದಿಂದ ಈ ಮಾದರಿಯ ವ್ಯತ್ಯಾಸ ಮಾಡುವರು.

*ಉರ್ದು ಭಾಷಿಕ ಮಕ್ಕಳ ವಾಕ್ಯಗಳ ಮಾದರಿ

ಬರಹದ ರೂಪ

ಮೇಡಂ ಬರುತ್ತೆ ಮೇಡಂ ಬರುತ್ತಾರೆ
ಶಿಕ್ಷಕ್ ಬರುತ್ತೆ ಶಿಕ್ಷಕರು ಬರುತ್ತಾರೆ

ಉರ್ದು ಭಾಷಿಕ ಮಕ್ಕಳು ಕನ್ನಡದ ಲಿಂಗ ವ್ಯವಸ್ಥೆಯನ್ನು ವಿಶಿಷ್ಟವಾಗಿ ಓದುವರು ಮತ್ತು ಬರೆಯುವರು. ಯಾಕೆಂದರೆ, ಉರ್ದು ಮತ್ತು ಕನ್ನಡ ಭಾಷೆಯ ಲಿಂಗದ ವಿಚಾರ ವಿಭಿನ್ನವಾಗಿರುವುದರಿಂದ ಈ ಮಾದರಿಯ ವ್ಯತ್ಯಾಸ ಮಾಡುವರು. ಮೂಲತಃ ಉರ್ದುಭಾಷೆ ಯಲ್ಲಿ ನಪುಂಸಕಲಿಂಗವಿಲ್ಲ. ಅದರ ಕೆಲಸವನ್ನು ಪುಲ್ಲಿಂಗ ಮತ್ತು ಸ್ತ್ರೀಲಿಂಗ ಸಾಂದರ್ಭಿಕ ವಾಗಿ ನಿರ್ವಹಿಸುವವು. ಈ ಹಿನ್ನಲೆಯಿಂದ ಉರ್ದುಭಾಷಿಕರು ಮಾನವ ಜೀವಿಗಳಿಗೆ ಮಾನವೇತರ ಲಿಂಗ ಪ್ರತ್ಯಯಗಳನ್ನು ಹಚ್ಚಿ ಬಳಕೆ ಮಾಡಿದರೆ; ಮಾನವೇತರ ಜೀವಿಗಳಿಗೆ ಮಾನವಜೀವಿಗಳ ಲಿಂಗಪ್ರತ್ಯಯಗಳನ್ನು ಅನ್ವಯಿಸಿ ಬರೆಯುವರು ಮತ್ತು ಓದುವರು.

ಲಿಂಗಕ್ಕನುಸಾರವಾಗಿ ಬಹುವಚನದ ಕ್ರಿಯಾಪದ ಬಳಕೆಯಾಗುವ ಕಡೆ ಏಕವಚನದ ಕ್ರಿಯಾಪದ ಬಳಕೆ ಮಾಡವರು. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುವರು. ಉದಾ:

*ಉರ್ದು ಭಾಷಿಕ ಮಕ್ಕಳ ವಾಕ್ಯಗಳ ಮಾದರಿ

ಬರಹದ ರೂಪ

ನಮ್ಮ ಶಾಲೆಯಲ್ಲಿ ಸರ್ ಬಹಳ ಚೆನ್ನಾಗಿದೆ ನಮ್ಮ ಶಾಲೆಯಲ್ಲಿ ಸರ್ ಬಹಳ ಚೆನ್ನಾಗಿದ್ದಾರೆ
ನಮ್ಮ ಊರಿನಲ್ಲಿ ಬಾವಿಗಳು ಬಹಳ ಇದೆ ನಮ್ಮ ಊರಿನಲ್ಲಿ ಬಾವಿಗಳು ಬಹಳ ಇವೆ.

ಈ ವ್ಯತ್ಯಾಸಕ್ಕೆ ಪ್ರಮುಖವಾದ ಕಾರಣ ಲಿಂಗ ವಚನಕ್ಕನುಸಾರವಾಗಿ ಕ್ರಿಯಾಪದ ಬದಲಾವಣೆ ಮಾಡಬೇಕೆಂದು ತಿಳುವಳಿಕೆ ಇಲ್ಲದ ಇರುವುದರಿಂದ ಈ ತೆರನಾದ ವ್ಯತ್ಯಾಸದಿಂದ ಓದುವುದು ಮತ್ತು ಬರೆಯುವುದನ್ನು ಮಾಡುತ್ತಿದ್ದಾರೆ.

ಪುಲ್ಲಿಂಗ ಮತ್ತು ಸ್ತ್ರೀಲಿಂಗಕ್ಕನುಸಾರವಾಗಿ ಲಿಂಗ ಬದಲಾವಣೆ ಮಾಡದೆ ನಪುಂಸಕ ಲಿಂಗದಲ್ಲಿ ಕ್ರಿಯಾಪದ ಬಳಸುವರು. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ. ಉದಾ:

*ಉರ್ದುಭಾಷಿಕರ ಮಕ್ಕಳ ವಾಕ್ಯಗಳ ಮಾದರಿ ಬರಹದ ರೂಪ
ನಮ್ಮ ಶಾಲೆಯಲ್ಲಿ ಒಂದು ಲೇಡಿಸ್ ಟೀಚರ್ ಇದೆ ನಮ್ಮ ಶಾಲೆಯಲ್ಲಿ ಒಬ್ಬ ಲೇಡಿಸ್ ಟೀಚರ್ ಇದ್ದಾರೆ.
ನಮ್ಮ ಶಾಲೆಯಲ್ಲಿ ಒಂದು ಜವಾನ ಇದೆ ನಮ್ಮ ಶಾಲೆಯಲ್ಲಿ ಒಬ್ಬ ಜವಾನ ಇದ್ದಾನೆ.

ಪುಲ್ಲಿಂಗ ಮತ್ತು ಸ್ತ್ರೀಲಿಂಗಕ್ಕನುಸಾರವಾಗಿ ಲಿಂಗ ಬದಲಾವಣೆ ಮಾಡದೆ ನಪುಸಂಕ ಲಿಂಗದಲ್ಲಿ ಬಳಸುವ ಕ್ರಿಯಾಪದವನ್ನು ಉರ್ದು ಭಾಷಿಕ ಮಕ್ಕಳು ಸ್ತ್ರೀಲಿಂಗ ಮತ್ತು ಪುಲ್ಲಿಂಗಕ್ಕೆ ಒಂದೆ ತೆರನಾದ ಕ್ರಿಯಾಪದ ಬಳಸುವರು. ಇದಕ್ಕೆ ಕಾರಣ ಲಿಂಗ ವಚನಕ್ಕನುಸಾರ ವಾಗಿ ಕ್ರಿಯಾಪದ ಬಳಸಬೇಕೆಂಬ ಸ್ಪಷ್ಟವಾದ ತಿಳುವಳಿಕೆ ಇಲ್ಲದೆ ಇರುವುದರಿಂದ ಈ ತರಹದ ವ್ಯತ್ಯಾಸ ಮಾಡಲು ಕಾರಣವಿರಬಹುದು. ಲಿಂಗಕ್ಕನುಸಾರವಾಗಿ ಬಹುವಚನದ ಕ್ರಿಯಾಪದ ಉಪಯೋಗವಾಗುವ ಕಡೆ ಏಕ ವಚನದ ಕ್ರಿಯಾಪದ ಬಳಕೆ ಮಾಡುವ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುವರು. ಉದಾ:

*ಉರ್ದು ಭಾಷಿಕ ಮಕ್ಕಳ ವಾಕ್ಯಗಳ ಮಾದರಿ

ಬರಹದ ರೂಪ

ನಮ್ಮ ಶಾಲೆಯಲ್ಲಿ ಸರ್ ಬಹಳ ಚೆನ್ನಾಗಿದೆ ನಮ್ಮ ಶಾಲೆಯಲ್ಲಿ ಸರ್ ಬಹಳ ಚೆನ್ನಾಗಿದ್ದಾರೆ
ನಮ್ಮ ಊರಿನಲ್ಲಿ ಬಾವಿಗಳು ಬಹಳ ಇದೆ ನಮ್ಮ ಊರಿನಲ್ಲಿ ಬಾವಿಗಳು ಬಹಳ ಇವೆ.

ಲಿಂಗಕ್ಕನುಸಾರವಾಗಿ ಬಹುವಚನದ ಕ್ರಿಯಾಪದ ಉಪಯೋಗವಾಗುವ ಕಡೆ ಏಕ ವಚನದ ಕ್ರಿಯಾಪದ ಬಳಕೆ ಮಾಡಲು ಕಾರಣ ಉರ್ದುವಿನಲ್ಲಿ ಪ್ರತಿ ವಾಕ್ಯದ ಕೊನೆಯಲ್ಲಿ ಕ್ರಿಯಾಪದ ಬಳಸುವರು. ಅವರ ಮಾತೃಭಾಷೆಯ ಪ್ರಭಾವದಿಂದ ಈ ತರಹದ ವ್ಯತ್ಯಾಸ ಮಾಡುತ್ತಿರುವುದು ಕಂಡುಬರುವುದು.

ನಪುಂಸಕ ಲಿಂಗದಿಂದ ಕೊನೆಯಾಗುವ ವಾಕ್ಯದಲ್ಲಿ ಬಳಸಬಹುದಾದ ಕ್ರಿಯಾಪದವನ್ನು ಬಳಸದೆ; ಪುಲ್ಲಿಂಗ ಸ್ತ್ರೀಲಿಂಗ ವಾಕ್ಯಗಳಲ್ಲಿ ಬಳಸಬಹುದಾದ ಕ್ರಿಯಾಪದವನ್ನು ಬಳಸುವರು. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುವರು. ಉದಾ:

*ಉರ್ದು ಭಾಷಿಕ ಮಕ್ಕಳ ವಾಕ್ಯಗಳ ಮಾದರಿ ಬರಹದ ರೂಪ
ಎತ್ತು ಬರ್ತಾರೆ ಎತ್ತು ಬರುತ್ತದೆ.
ಎಮ್ಮೆ ಹಾಲು ಕೊಡುತ್ತಾಳೆ ಎಮ್ಮೆ ಹಾಲು ಕೊಡುತ್ತದೆ.

ಈ ಮೇಲಿನ ವಾಕ್ಯದಲ್ಲಿ ಎತ್ತು, ಎಮ್ಮೆ ಎಂಬ ಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಎಂದು ತಿಳಿದು ಬರ್ತಾರೆ, ಕೊಡ್ತಾಳೆ ಎಂದು ಉರ್ದು ಭಾಷಿಕ ಮಕ್ಕಳು ಬಳಸುತ್ತಾರೆ. ಇದಕ್ಕೆ ಕಾರಣ ಉರ್ದು ಭಾಷೆಯಲ್ಲಿ ಲಿಂಗಗಳೆರಡು ಇರುವುದರಿಂದ ಕನ್ನಡ ಭಾಷೆಯಲ್ಲಿನ ವಾಕ್ಯಗಳನ್ನು ಬಳಸುವಾಗ ವಿದ್ಯಾರ್ಥಿಗಳು ಉರ್ದು ಭಾಷೆಯ ಪ್ರಭಾವದಿಂದ ಈ ತೆರನಾದ ವ್ಯತ್ಯಾಸವನ್ನು ಮಾಡುತ್ತಾರೆ.

*ಉರ್ದು ಭಾಷಿಕ ಮಕ್ಕಳು ಕನ್ನಡ ಭಾಷೆಯ ವಾಕ್ಯ(ಪದ)ಗಳನ್ನು ಬಳಸುವಾಗ ವಸ್ತುವಿನ ಗಾತ್ರಕ್ಕೆ ಅನುಸಾರವಾಗಿ ಲಿಂಗ ಬದಲಾವಣೆ ಮಾಡುವ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುವುದನ್ನು ಕಾಣುತ್ತೇವೆ.

*ಉರ್ದು ಭಾಷಿಕ ಮಕ್ಕಳ ವಾಕ್ಯಗಳ ಮಾದರಿ ಬರಹದ ರೂಪ
ಸಣ್ಣ ಬುಟ್ಟಿ (ಪುಲ್ಲಿಂಗ) ಸಣ್ಣ ಬುಟ್ಟಿ (ನಪುಸಂಕ ಲಿಂಗ)
ದೊಡ್ಡ ಬುಟ್ಟಿ (ಸ್ತ್ರೀಲಿಂಗ) ದೊಡ್ಡ ಬುಟ್ಟಿ (ನಪುಂಸಕ ಲಿಂಗ)
ದೊಡ್ಡ ನಕ್ಷತ್ರ (ಸ್ತ್ರೀಲಿಂಗ) ದೊಡ್ಡ ನಕ್ಷತ್ರ (ನಪುಸಕ ಲಿಂಗ)
ಸಣ್ಣ ನಕ್ಷತ್ರ (ಪುಲ್ಲಿಂಗ) ಸಣ್ಣ ನಕ್ಷತ್ರ (ನಪುಂಸಕ ಲಿಂಗ)

ಉರ್ದು ಭಾಷಿಕ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ವಸ್ತುಗಳನ್ನು ಸ್ತ್ರೀಲಿಂಗ ಪುಲ್ಲಿಂಗ ನಪುಂಸಕ ಲಿಂಗಗಳೆಂದು ಗುರುತಿಸಲು ಕೇಳಿದಾಗ ಕನ್ನಡ ಭಾಷೆಯಲ್ಲಿ ನಪುಂಸಕ ಪದಗಳ ಹಿಂದೆ ದೊಡ್ಡ, ಚಿಕ್ಕ, ಸಣ್ಣ ಮುಂತಾದ ಪದಗಳು ವಿಶೇಷಣಗಳು ಎಂದು ತಿಳಿಯದೆ ಅಂದರೆ ವಸ್ತುವಿನ ಗಾತ್ರಕ್ಕನುಸಾರವಾಗಿ ಉರ್ದು ಭಾಷಿಕ ಮಕ್ಕಳು ಚಿಕ್ಕ ವಸ್ತುಗಳಿಗೆಲ್ಲ ಪುಲ್ಲಿಂಗವೆಂದು ದೊಡ್ಡ ವಸ್ತುಗಳಿಗೆಲ್ಲ ಸ್ತ್ರೀಲಿಂಗವೆಂದು ಬಳಕೆ ಮಾಡುವರು. ಈ ತೆರನಾದ ವ್ಯತ್ಯಾಸ ಮಾಡಲು ಅವರ ಮಾತೃಭಾಷೆಯಾದ ಉರ್ದುವೇ ಕಾರಣ. ಏಕೆಂದರೆ ಉರ್ದು ಭಾಷೆಯಲ್ಲಿ ವಸ್ತುವಿನ ಗಾತ್ರಕ್ಕನುಸಾರವಾಗಿ ಲಿಂಗಭೇದ ಮಾಡುವುದನ್ನು ಕಾಣುತ್ತೇವೆ. ಈ ಪ್ರಭಾವದಿಂದ ವ್ಯತ್ಯಾಸ ಮಾಡಲು ಕಾರಣವಿರಬಹುದೆಂದು ಹೇಳಬಹುದು.

*ವಚನ ವಿಚಾರ

ಕೆಳಕಂಡ ಏಕವಚನ ಪದಗಳನ್ನು ಬಹುವಚನ ಪದಗಳಾಗಿ ಬರೆಯಿರಿ ಎಂಬ ಪ್ರಶ್ನೆಗೆ ಉತ್ತರ ಈ ರೀತಿ ಇದೆ.

ಏಕವಚನ ಪದಗಳು

ಉರ್ದು ಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ರೂಪಗಳು

ಬರಹ ರೂಪ

ರಾಜಾ ರಾಜಾ ರಾಜರು
ತಂದೆ ತಂದೆ ತಂದೆಯಂದಿರು
ಚಿಕ್ಕಪ್ಪ ಚಿಕ್ಕಪ್ಪ ಚಿಕ್ಕಪ್ಪಂದಿರು
ಅಜ್ಜ ಅಜ್ಜ ಅಜ್ಜಂದಿರು

ಕನ್ನಡ ಮತ್ತು ಉರ್ದು ಭಾಷೆಗಳಲ್ಲಿ ವಚನ ವಿಚಾರಗಳು ಭಿನ್ನವಾಗಿವೆ. ಈ ಹಿನ್ನಲೆಯಿಂದ ಉರ್ದುಭಾಷಿಕ ಮಕ್ಕಳು ಏಕವಚನದ ಪದಗಳನ್ನು ಬಹುವಚನ ಪದಗಳ ನ್ನಾಗಿ, ಬಹುವಚನದ ಪದಗಳನ್ನು ಏಕವಚನದ ಪದಗಳನ್ನಾಗಿ ಓದುವ ಮತ್ತು ಬರೆಯುವ ಕೆಲಸಗಳನ್ನು ಮಾಡುತ್ತಾರೆ.

*ವಿಭಕ್ತಿ ಪ್ರತ್ಯಯಗಳ ವಿಚಾರ

ಉರ್ದು ಭಾಷಿಕ ಮಕ್ಕಳು ಕನ್ನಡದ ಯಾವ ವಿಭಕ್ತಿ ಪ್ರತ್ಯಯವನ್ನು ವಿಶಿಷ್ಟವಾಗಿ ವ್ಯತ್ಯಾಸ ಮಾಡುತ್ತಾರೋ, ಅಂತಹ ವಿಭಕ್ತಿ ಪ್ರತ್ಯಯಗಳನ್ನು ಮಾತ್ರ ಪ್ರಸ್ತುತ ಅಧ್ಯಯನಕ್ಕೆ ಎತ್ತಿಕೊಳ್ಳಲಾಗಿದೆ.

*ಪ್ರಥಮ ವಿಭಕ್ತಿ ಪ್ರತ್ಯಯ

ಉರ್ದು ಭಾಷಿಕ ಮಕ್ಕಳು ಬರವಣಿಗೆ ಮತ್ತು ಓದಿನಲ್ಲಿ ಪ್ರಥಮ ವಿಭಕ್ತಿಯನ್ನು ಲೋಪಮಾಡುವರು. ಈ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುವರು.

ಬರಹದ ಕನ್ನಡ

ಉರ್ದು ಭಾಷಿಕ ಮಕ್ಕಳು ಉಚ್ಚರಿಸುವ ಮತ್ತು ಬರೆಯುವ ಮಾದರಿ

ಹುಡುಗಿಯು ಕೆಲಸ ಮಾಡುತ್ತಾಳೆ. ಹುಡುಗಿ ಕಲಸ ಮಾಡುತ್ತಾಳೆ
ನಾನು ಪರೋಪಕಾರಿ ನಾ ಪರೋಪಕಾರಿ
ಗೋಪಾಲನು ಬರೆಯುತ್ತಾನೆ. ಗೋಪಾಲ ಬರೆಯುತ್ತಾನೆ.
ರಾಮನು ಈ ಕೆಲಸವನ್ನು ಮಾಡಿದನು ರಾಮ ಈ ಕೆಲಸ ಮಾಡಿದನ್ನು
ರಾಮನು ರಾವಣನನ್ನು ಕೊಂದನು ರಾಮ ರಾವಣನನ್ನು ಕೊಂದನು.