೩. ಭಿನ್ನರೂಪದ ಒತ್ತಕ್ಷರಗಳು
*ನ್ನ> ನ
ಪದಮಧ್ಯ ಪರಿಸರದಲ್ಲಿ “ನ್ನ” ದ್ವಿತ್ವ ಧ್ವನಿ ಬದಲು “ನ” ಅನುನಾಸಿಕ ವ್ಯಂಜನ ಧ್ವನಿಯನ್ನು ಓದುತ್ತಾರೆ ಮತ್ತು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ಅನ್ನ > | ಅನ |
ಅನ್ನದಾನ > | ಅನದಾನ |
ಗುನ್ನ > | ಗುನ |
ಅನ್ನು > | ಅನು |
ಚೆನ್ನಾಗಿ > | ಚೆನಾಗಿ |
*ಮ್ಮ> ಮ
ಪದಮಧ್ಯ ಪರಿಸರದಲ್ಲಿ “ಮ್ಮ” ದ್ವಿತ್ವ ಧ್ವನಿ ಬದಲು “ಮ” ಧ್ವಯೋಷ್ಠ್ಯ ಅನುನಾಸಿಕ ವ್ಯಂಜನ ಧ್ವನಿಯನ್ನು ಓದುತ್ತಾರೆ ಮತ್ತು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ಗುಮ್ಮನೆ > | ಗುಮನೆ |
ಗುಮ್ಮಾ > | ಗುಮಾ |
ಗುಮ್ಮಟ > | ಗುಮಟ |
*ಯ್ಯ> ಯ
ಪದಮಧ್ಯ ಪರಿಸರದಲ್ಲಿ “ಯ್ಯ” ದ್ವಿತ್ವ ಧ್ವನಿ ಬದಲು “ಯ” ತಾಲವ್ಯ ಸ್ವರ ಧ್ವನಿಯನ್ನು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ಗುಯ್ಯಲ್ | ಗುಯಲ್ |
ಅಯ್ಯಾ | ಅಯಾ |
ಅಯ್ಯೊ | ಅಯೊ |
*೯> ರ
ಪದಮಧ್ಯ ಪರಿಸರದಲ್ಲಿ “” ಸಂಯುಕ್ತಾಕ್ಷರ (ಒತ್ತಕ್ಷರ) ಬದಲು “ರ” ವರ್ತ್ಸ್ಯ ಕಂಪಿತ ವ್ಯಂಜನ ಧ್ವನಿಯನ್ನು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ದರ್ಪಣ | ದರಪಣ |
ಪರ್ವ | ಪರವ |
ತರ್ಕ | ತರಕ |
ೃ* >
ಪದಮಧ್ಯ ಪರಿಸರದಲ್ಲಿ “ೃ” ವಟರ ಸುಳಿಗೆ ಬದಲು “͜ ” ಅರ್ಧ ಚಂದ್ರಾಕೃತಿ ಚಿಹ್ನೆಯನ್ನು ಓದುತ್ತಾರೆ ಮತ್ತು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ಗೃಹ > | ಗ್ರಹ |
ಕೃಪೆ > | ಕ್ರಪೆ |
ತೃತೀಯ > | ತ್ರಿತಿಯ |
ಬೃಹತ್ > | ಬ್ರಹತ್ |
ಶೃತಿ > | ಶ್ರತಿ |
*͜ >ರ
ಪದಮಧ್ಯ ಪರಿಸರದಲ್ಲಿ ಸ್ಪರ್ಷ “͜ ” ಅರ್ಧಚಂದ್ರಾಕೃತಿಗೆ ಬದಲು “ರ” ವರ್ತ್ಸ್ಯ ಕಂಪಿತ ವ್ಯಂಜನ ಧ್ವನಿಯನ್ನು ಓದುತ್ತಾರೆ ಮತ್ತು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ತ್ರಾಣ > | ತರಣ |
ತ್ರಿಗುಣ > | ತಿರಗುಣ |
ಪ್ರಾಣ > | ಪರಣ |
ದ್ರವ > | ದರವ |
ಪದಾದಿ ಪರಿಸರದಲ್ಲಿ ಸ್ಪರ್ಷ “͜ ” ಅರ್ಧಚಂದ್ರಾಕೃತಿ ಬದಲು “ರ” ವರ್ತ್ಸ್ಯ ಕಂಪಿತ ವ್ಯಂಜನ ಧ್ವನಿಯನ್ನು ಉಚ್ಚರಿಸಲು ಕಾರಣ ಸಂಯುಕ್ತ ವ್ಯಂಜನಗಳ ಉಚ್ಚಾರಣೆ ಮಾಡಲು ಪದಾದಿ ಪರಿಸರದಲ್ಲಿ ತೊಂದರೆಯಿಂದ ಈ ತೆರನಾಗಿ ವ್ಯತ್ಯಾಸ ಮಾಡುತ್ತಿರುವುದು ಕಂಡುಬರುವುದು.
*͜ >
ಪದಮಧ್ಯ ಪರಿಸರದಲ್ಲಿ ಸ್ಪರ್ಷ “͜ ” ಅರ್ಧಚಂದ್ರಾಕೃತಿಯನ್ನು ಲೋಪ ಮಾಡಿ ಓದುತ್ತಾರೆ ಮತ್ತು ಬರೆಯುತ್ತಾರೆ.
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ವ್ರತ > | ವತ |
ಶ್ರುತಿ > | ಸುತಿ |
ಶ್ರೀಮುಖ > | ಸಿಮುಖ |
ಶ್ರವಣ > | ಸವಣ |
ಸ್ಪರ್ಷ ವ್ಯಂಜನಾಕ್ಷರಗಳನ್ನು ಪದಾದಿ ಪರಿಸರದಲ್ಲಿ ಓದುವಾಗ ತೊಂದರೆ ಮತ್ತು ಸ್ಪಷ್ಟ ಉಚ್ಚಾರಣ ಕೌಶಲ್ಯ ಕಲಿಸದೆ ಇರುವುದರಿಂದ ಈ ತೆರನಾಗಿ ಮಗು ವ್ಯತ್ಯಾಸ ಮಾಡಲು ಕಾರಣವಿರಬಹುದು.
* ೢ >
ಪದಮಧ್ಯ ಪರಿಸರದಲ್ಲಿ ಸ್ಪರ್ಷ “ಲ್ಲ” ಸ್ಪರ್ಷ ಸಂಯುಕ್ತ ವ್ಯಂಜನವನ್ನು ಲೋಪ ಮಾಡಿ ಓದುತ್ತಾರೆ ಮತ್ತು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ಶ್ಲೇಷ > | ಸೇಷ |
ಶ್ಲೋಕ > | ಸೋಕ |
ಶ್ಲಾಘನೀಯ > | ಸಾಗನೀಯ |
ಪ್ಲೇಗು > | ಪೆಗು |
ಪದಾದಿ ಪರಿಸರದಲ್ಲಿ ಉರ್ದು ಭಾಷಿಕ ಮಕ್ಕಳಿಗೆ ಸಂಯುಕ್ತ ವ್ಯಂಜನ ಉಚ್ಛರಿಸಲು ತೊಂದರೆಯಾಗುತ್ತಿರುವುದು ಕಂಡುಬರುವುದು. ಕಾರಣ ಕನ್ನಡದ ಉಚ್ಚಾರಣೆ ಬಗ್ಗೆ ಸ್ಪಷ್ಟವಾಗಿ ತಿಳಿಯದೆ ಇರುವುದು ಹಾಗೂ ಅವರ ಮಾತೃಭಾಷೆಯಲ್ಲಿ ಸಂಯುಕ್ತ ವ್ಯಂಜನ ಗಳು ಇರದೆ ಇರುವುದರಿಂದ ಉರ್ದು ಭಾಷೆಯನ್ನು ಮಾತನಾಡುವವರೆಲ್ಲ ಈ ರೀತಿಯ ವ್ಯತ್ಯಾಸವನ್ನು ಮಾಡುತ್ತಾರೆ.
*ಸೃ> ಸ್ರು
ಪದಮಧ್ಯ ಪರಿಸರದಲ್ಲಿ “ಸೃ” ಸಂಘರ್ಷ ವ್ಯಂಜನದ ಬದಲು “ಸ್ರು” ಸಂಘರ್ಷ ವ್ಯಂಜನ ಓದುತ್ತಾರೆ ಮತ್ತು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ಸೃಷ್ಠಿ > | ಸ್ರುಷ್ಟಿ |
ಸೃಷ್ಟಿಸು > | ಸ್ರುಷ್ಟಿಸು |
*ವೃ> ರು
ಪದಮಧ್ಯ ಪರಿಸರದಲ್ಲಿ “ವೃ” ಸಂಘರ್ಷ ವ್ಯಂಜನದ ಬದಲು “ರು” ವರ್ತ್ಸ್ಯ ವ್ಯಂಜನ ಗುಣಿತಾಕ್ಷರ ಓದುತ್ತಾರೆ ಮತ್ತು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ವೃತ್ತಿ > | ರುತ್ತಿ |
ವೃಷಭ > | ರುಸಬ |
*ಲ್ಲ> ಲ
ಪದಮಧ್ಯ ಪರಿಸರದಲ್ಲಿ “ಲ್ಲ” ಸಂಯುಕ್ತ ವ್ಯಂಜನ ಬದಲು “ಲ” ದಂತ್ಯ ಪಾರ್ಶ್ವಿಕ ವ್ಯಂಜನವನ್ನು ಓದುತ್ತಾರೆ ಮತ್ತು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ಇಲ್ಲ > | ಇಲ |
ಬೆಲ್ಲ > | ಬೆಲ |
ನೆಲ್ಲು > | ನೆಲು |
ಕಲ್ಲು > | ಕಲು |
ಸೊಲ್ಲು > | ಸೊಲು |
*ಯ್ಯ>
ಪದಮಧ್ಯ ಪರಿಸರದಲ್ಲಿ “ನ್ಯಾ” ಅನುನಾಸಿಕ ಸಂಯುಕ್ತ ವ್ಯಂಜನವನ್ನು ಲೋಪ ಮಾಡಿ ಓದುತ್ತಾರೆ ಮತ್ತು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ನ್ಯಾಯ > | ನಾಯ |
ನ್ಯಾಯಾಲಯ> | ನಾಯಾಲಯ |
ಧ್ಯಾನ > | ದಾನ |
ಧ್ಯೇಯ > | ಧೆಯ |
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ಹೃದಯ | ರುದಯ |
ಶ್ಯಾಮ | ಶಾಮ |
ಸರಸ್ವತಿ | ಸರಸತಿ |
*ಒತ್ತಕ್ಷರಗಳನ್ನು ಸ್ಥಾನ ಬದಲಿಸಿ ಬರೆಯುತ್ತಾರೆ ಮತ್ತು ಒತ್ತಕ್ಷರದ ಚಿಹ್ನೆಯನ್ನು ಉಲ್ಟ ಬರೆಯುತ್ತಾರೆ. ಉದಾಹರಣಗೆ:
ಬರಹ ರೂಪ |
ಉರ್ದುಭಾಷಿಕ ಮಕ್ಕಳು ಬರೆಯುವ ಮತ್ತು ಓದುವ ರೂಪ |
ಸಪ್ತಮಿ | ಸ್ಪಮ್ತಿ |
ಸೂಕ್ತ | ಸ್ತೂಕ |
ಶತ್ರು | ಶ್ತರು |
ತುಪ್ಪ | ತುಪ್ಲ |
Leave A Comment