ನೂರಾರು ಶಾಸನಗಳು ಪ್ರಾಚೀನ ಕರ್ನಾಟಕದ ಗುಡಿ ಕೈಗಾರಿಕೆಗಳನ್ನು ಕುರಿತು ಉಲ್ಲೇಖಿಸುತ್ತವೆ. ಅವುಗಳೆಂದರೆ ಕುಂಬಾರಿಕೆ, ನೇಕಾರಿಕೆ, ಚಮ್ಮಾರಿಕೆ, ಕಂಬಳಿ ತಯಾರಿಕೆ, ಬಟ್ಟೆ ತಯಾರಿಕೆ, ಉಪ್ಪಾರಿಕೆ, ಕಂಬಾರಿಕೆ, ಲೋಹಕರ್ಮ ಇತ್ಯಾದಿ ವಿವರಗಳನ್ನೂ ಸಹ ಆ ಕಾಲದ ಇನ್ನಿತರ ಆಕರಗಳಾದ ಕಾವ್ಯ, ಶಾಸ್ತ್ರ, ಮೌಖಿಕ ಕಥನ ಇತ್ಯಾದಿಗಳನ್ನು ಬಳಸಿಕೊಂಡು ಸಮಗ್ರ ಅಧ್ಯಯನ ನಡೆಸಲು ಅವಕಾಶವಿದೆ. ಜೊತೆಗೆ ಹೀಗೆ ತಯಾರಾದ ವಸ್ತುಗಳು ಎಲ್ಲಿ ಮಾರಾಟವಾಗುತ್ತಿದ್ದವು. ಅವುಗಳ ಬೆಲೆ, ವೈವಿಧ್ಯತೆ, ಅವುಗಳನ್ನು ಮಾರುತ್ತಿದ್ದವರ ವಿವರಗಳು ಈ ವಸ್ತುಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ಇತ್ಯಾದಿಗಳನ್ನು ತಿಳಿಯಲು ಅವಕಾಶವಿದೆ