ಶಾಸನಗಳಲ್ಲಿ ಕಾಲಮಾನ ಅದರ ಬಗೆಗಳು, ಅವುಗಳು ಸೃಷ್ಟಿಗೆ ಕಾರಣಗಳು, ಮುಂದಾವುಗಳ ಸಂಶೋಧನೆ ಆಗಬೇಕಿದೆ. ಉದಾ: ಕ್ರಿ. ಸ್ತಶಕ, ಕ್ರಸ್ತಪೂರ್ವ, ಕಲಿಯುಗ ಸಂವತ್ಸರ, ಶಕ, ಹಿಜಿರಾರಶಕ, ಹಿಲಾಯಿ, ವಿಕ್ರಮಶಕೆ, ಚಕ್ರವರ್ತಿ ಬಿಜ್ಜಳ ದೇವ ವರುಷ ಮುಮತದ ಕಾಲನಿರ್ಣಯಗಳು ಶಾಸನಗಲಲ್ಲಿ ಉಲ್ಲೇಖಗೊಂದಿವೆ. ರಾಜರು ಹುಟ್ಟದ್ದೋ ಅಧಿಕಾರಕ್ಕೆ ಬಂದದ್ದೋ ಅಥವಾ ಸೂರ್ಯ, ಚಂದ್ರರ ಭೂಮಿಗಳ ಚಲನೆಯನ್ನು ಆಧಾರವಾಗಿಟ್ಟುಕೊಂಡು ಈ ಕಾಲನಿರ್ಣಯಗಲು ಹುಟ್ಟಿಕೊಂಡಿವೆ. ಹಾಗಾಗಿ ಅವುಗಳ ಹುಟ್ಟು, ಸ್ವರೂಪ, ಘಟನೆ, ಅವುಗಳ ಬಳಕೆ, ಅಂತ್ಯಕ್ಕೆ ಕಾರಣಗಳನ್ನು ಸಂಶೋಧನೆ ಮಾಡಬೇಕಾಗಿದೆ. ಅದಕ್ಕಾಗಿ ನೂರಾರು ಶಾಸನಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದಾಗ ಮಾತ್ರ ಸಾಧಕ ಬಾಧಕಗಳು ಸಮಗ್ರವಾಗಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ.