ಕನ್ನಡ ಶಾಸನಗಳ ವೈಜ್ಞಾನಿಕ ಅಧ್ಯಯನವೂ ಸಂಶೋಧನೆಗೆ ಸಮೃದ್ಧ ಅವಕಾಶ ಕ್ಷೇತ್ರ. ಶಾಸನಗಳಲ್ಲಿ ಪ್ರಾಸಂಗಿಕವಾಗಿ ಬರುವ ವೈಜ್ಞಾನಿಕ ಸಂಗತಿಗಳನ್ನು ಹಾಗೂ ಆ ಕಾಲದ ಕಾವ್ಯ, ಶಾಸ್ತ್ರಗಳ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಒಳಪಡಿಸಬೇಕಾಗುತ್ತದೆ. ಆಧುನಿಕ ಜಗತ್ತಿನ ಇಂದಿನ ಜಾಗತೀಕರಣ ಸಂದರ್ಭದಲ್ಲಿ ನಮ್ಮ ಪೂರ್ವಿಕರು ವಿಜ್ಞಾನ ಗತಿಯನ್ನು ಯಾವ ದೃಷ್ಟಿಕೋನದಿಂದ ಪರಿಭಾವಿಸುತ್ತಿದ್ದರು ಎಂಬುದು ಕುತೂಹಲದ ವಿಚಾರ. ಕಾಲದ ಅಳತೆ, ದೊರದ ಅಳತೆ, ತೂಕ, ಒಡವೆಗಳ ತೂಕ, ದ್ರವ್ಯಗಳ ತುಕ, ದ್ರವ್ಯಗಳ ತೂಕ ಒಡವೆಗಳ ತಯರಿಕೆಯಲ್ಲಿನ ತಂತ್ರಜ್ಞಾನ, ಕೈಮಗ್ಗ ಮತ್ತು ಬಟ್ಟೆ ತಯಾರಿಕೆ, ಕಂಬಳಿ ಇತ್ಯಾದಿ ನೇಕಾರಿಕೆ, ಕುಂಬಾರಿಕೆ, ಇವೆಲ್ಲವೂ ಅಧ್ಯಯನಕ್ಕೆ ಒಳಪಡಬೇಕಾದ ವಿಚಾರಗಳೇ ಆಗಿವೆ.

ಗಣಿತಶಾಸ್ತ್ರ, ಜ್ಯೋತಿರ್ಗಣಿತ, ರಸವಿದ್ಯೆ, ನಗರ ನಿರ್ಮಾಣ, ಗೃಹ ನಿರ್ಮಾಣ, ಕೋಟೆ ಕೊತ್ತಲಗಳ ನಿರ್ಮಾಣ, ಸಿಡಿಮದ್ದುಗಳ ತಯಾರಿಕೆ, ಅರಮನೆಗಳ ನಿರ್ಮಾಣ, ದೇವಾಲಯಗಳ ನಿರ್ಮಾಣ, ವೈದ್ಯ ಪದ್ಧತಿ, ನಾಟಿವೈದ್ಯ, ಗಿಡ ಮೂಲಿಕೆಗಳು, ಬಣ್ಣಗಳ ತಯಾರಿಕೆಗಳ ಬಗ್ಗೆಯೂ ಸಂಶೋಧನೆ ನಡೆಸಬೇಕಾಗಿದೆ. ಅದನ್ನು ಕುರಿತಂತೆ ಶಾಸನಗಳು ಮಂಡಿಸುವ ವಿಚಾರಗಳನ್ನು ಅನ್ಯ, ಶಿಸ್ತುಗಳೊಂದಿಗೆ ವಿವರಿಸಿಕೊಳ್ಳಬೇಕಾಗುತ್ತದೆ.

ಸಸ್ಯಶಾಸ್ತ್ರ, ಜೀವವಿಜ್ಞಾನ, ತಂತ್ರಗಾರಿಕೆ, ಮಾಯ-ಮಂತ್ರ, ಮಾಟ, ಖಗೋಳ ವಿಜ್ಞಾನದ ಬಗ್ಗೆ, ಆಕಾಶಕಾಯಗಳ ಬಗ್ಗೆ, ಭೂಮಿ, ಸೂರ್ಯ, ಚಂದ್ರರ ಬಗ್ಗೆ ಅವರಿಗಿದ್ದ ನಂಬಿಕೆಗಳು, ಚಂದ್ರಗ್ರಹಣ, ಸೂರ್ಯಗ್ರಹಣಗಳ ಬಗ್ಗೆ ಸೂಕ್ಷ್ಮವಾದ ಅಧ್ಯಯನ ಆಗಬೇಕಿದೆ. ಇದಕ್ಕಾಗಿ ಅನ್ಯ ಆಕರಗಳನ್ನು ಬಳಸಿಕೊಂಡು ಸಮರ್ಪಕ ಹಾಗೂ ಸಮಗ್ರವಾದ ಸಂಶೋಧನೆ ನಡೆಸಿದರೆ ಶಾಸನ ಶಾಸ್ತ್ರದ ಮೇಲೆ ಒಂದು ಹೊಸ ಬೆಳಕನ್ನು ಚೆಲ್ಲಿದಂತಾಗುತ್ತದೆ langh�syp,�.size:12.0pt; font-family:”Times New Roman”,”serif”;color:black’> ಅನ್ಯ ಆಕರಗಳೊಂದಿಗೆ ಶೋಧಿಸಬೇಕಾಗಿದೆ. ಹಾಗಾಗಿ ಅವುಗಳ ನಿರ್ಮಾಣದ ಅವಶ್ಯಕತೆ, ಪ್ರಯೋಜನ ಅದರ ಬಳಕೆಯನ್ನು ಕುರಿತು ಸಮಗ್ರ ಅಧ್ಯಯನಕ್ಕೆ ಅವಕಾಶವಿದೆ ಈ ರೀತಿಯ ಅಧ್ಯಯನಗಳು ನಡೆದೇ ಇಲ್ಲ.