ಶಾಸನಗಳು ಹಾಗೂ ಅನ್ಯ ಆಕರಗಳನ್ನು ಬಳಸಿಕೊಂಡು ಸಾಹಿತ್ಯ ಮತ್ತು ಪ್ರಭುತ್ವ, ಕವಿಗಳು, ಸಾಹಿತ್ಯ ಮತ್ತು ರಾಜಾಶ್ರಯ, ಕಲಾವಿದರು, ವಿದ್ವಾಂಸರು ಮತ್ತು ರಾಜಾಶ್ರಯ ಶಾಸನಗಳಲ್ಲಿ ಪ್ರಭುತ್ವ ಮತ್ತು ಜನತೆ ಹೀಗೆ ಹತ್ತಾರು ದೃಷ್ಟಿಯಲ್ಲಿ ಅಧ್ಯಯನ ಮಾಡುವುದಕ್ಕೆ ಅವಕಾಶವಿದೆ. ಉದಾ: ಮೈಸೂರು ರಾಜರ ಕಾಲದ ಸಾಹಿತ್ಯ, ಕೃಷ್ಣದೇವರಾಯನ ಕಾಲದ ಸಾಹಿತ್ಯ ಈ ರೀತಿ ಇನ್ನೂ ಮುಂತಾದ ವಿಷಯಗಳನ್ನೂ ಕುರಿತು ಅಧ್ಯಯನ ಮಾಡಲು ಬೇಕಾದಷ್ಟು ಅವಕಾಶಗಳು ಇದರ ಜೊತೆಗೆ ಪ್ರಾಚೀನ ಕಾವ್ಯಗಳನ್ನೂ ಬಳಸಿಕೊಂಡು ಅಧ್ಯಯನ ಮಾಡಲು ಅನೇಕ ವಿದ್ವಾಂಸರಿಗೆ ಅವಕಾಶವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.